ಹೀರೆಕಾಯಿ ಸಿಪ್ಪೆ ಚಟ್ನಿ

ವನಿತಾ

ಹುಟ್ಟಿ ಬೆಳೆದಿದ್ದು ಕಾಸರಗೋಡಿನ ಸಣ್ಣ ಹಳ್ಳಿಯಲ್ಲಿ…..ವಿದ್ಯಾಭ್ಯಾಸ ಮಂಗಳೂರಿನಲ್ಲಿ, ಪ್ರಸ್ತುತ ಅಮೆರಿಕದಲ್ಲಿ ವಾಸ. ಈ ವಿಶಾಲ ಪ್ರಪಂಚದಲ್ಲಿ ನನ್ನದೇ ಆದ ಪುಟ್ಟ ಹೆಜ್ಜೆಯನ್ನಿಡಲು ಪ್ರಯತ್ನಿಸುತ್ತಿದ್ದೇನೆ. ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ… ನಾನು ಮನೆಯಲ್ಲಿ ಮಾಡಿದ ಅಡುಗೆಗಳ ವಿಧಾನಗಳ ಬಗ್ಗೆ ಚಿಕ್ಕ ಮಾಹಿತಿ

ಹೀರೆಕಾಯಿ ಪಲ್ಯ ಅಥವಾ ಸಾಂಬಾರ್ ಮಾಡಿದ ನಂತರ ಅದರ ಸಿಪ್ಪೆಯನ್ನು ಬಿಸಾಡುವುದು ಸಾಮಾನ್ಯ….ಆ ಸಿಪ್ಪೆಯಿಂದ ಒಳ್ಳೆಯ ಚಟ್ನಿ ಮಾಡಬಹುದು.

ಹೀರೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಅದರ ಸಿಪ್ಪೆಯನ್ನು ಚಾಕುವಿನಿಂದ ತೆಗೆಯಿರಿ. ಚಟ್ನಿ ಮಾಡ್ಬೇಕು ಅಂದ್ರೆ ಸ್ವಲ್ಪ ಜಾಸ್ತಿನೆ ತೆಗೆಯಿರಿ, ಪರವಾಗಿಲ್ಲ..ಒಂದೆರಡು ದಿನ ಇದನ್ನು ಒಂದು ಕವರ್ ನಲ್ಲಿ ಹಾಕಿ ಫ್ರಿಜ್ ನಲ್ಲಿಟ್ಟು ನಂತರವೂ ಉಪಯೋಗಿಸಬಹುದು.

ಈ ಸಿಪ್ಪೆಯನ್ನು (ಒಂದು ಹಿಡಿಯಷ್ಟು) ತೊಳೆದುಕೊಂಡು ¼ ಕಪ್ ನೀರಿನಲ್ಲಿ 5-10 ನಿಮಿಷ ಬೇಯಿಸಿ. ನಂತರ ½ ಕಪ್ ನಷ್ಟು ತೆಂಗಿನ ತುರಿ, ಖಾರಕ್ಕೆ ತಕ್ಕಷ್ಟು (2-4) ಹುರಿದ ಬ್ಯಾಡಗಿ ಮೆಣಸು , 10 ಕಾಳು ಹುರಿದ ಉದ್ದಿನ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು ಹಾಗು ಬೇಯಿಸಿದ ಸಿಪ್ಪೆಯನ್ನು ಸೇರಿಸಿಕೊಂಡು ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಸೇರಿಸ್ಕೊಂಡು ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆ ಯಲ್ಲಿ ತೆಗೆದುಕೊಂಡು ಒಗ್ಗರಣೆ ಸೇರಿಸಿದರೆ, ದೋಸೆ, ಚಪಾತಿ ಊಟದೊಂದಿಗೆ ಸವಿಯಲು ಒಳ್ಳೆಯ ಚಟ್ನಿ ಸಿದ್ದ.

ನಿಮಗೆ ಹಸಿಮೆಣಸಿನಿಂದ ಮಾಡಿದ ಚಟ್ನಿ ಇಷ್ಟವಿದ್ದರೆ, ಬೇಯಿಸಿದ ಸಿಪ್ಪೆಗೆ ಹಸಿಮೆಣಸು, ತೆಂಗಿನ ತುರಿ, ಉಪ್ಪು ಸೇರಿಸಿ ರುಬ್ಬಿ ನಂತರ ಒಗ್ಗರಣೆ ಸೇರಿಸಿದರೆ ಚಟ್ನಿ ರೆಡಿಯಾಗುತ್ತದೆ.

2 ಟಿಪ್ಪಣಿಗಳು (+add yours?)

 1. byregowda
  ನವೆಂ 24, 2009 @ 09:00:07

  ಅಮೇರಿಕಾದಲ್ಲಿ ಕನ್ನಡದ ಕಂಪನ್ನು ಹರಡುತ್ತಿರುವ ಪ್ರಿಯ ವನಿತಾ ಅವರೆ,
  ನೀವು ಕಳುಹಿಸಿರುವ ಹೀರೇಕಾಯಿ ಕಾದ್ಯಗಳನ್ನು ಚಿತ್ರದಲ್ಲಿ ನೋಡಿಯೇ ತಿನ್ನಬೇಕೆನಿಸಿದೆ.
  ನಮಗೂ ಒಂದಿಷ್ಟು ಕಳುಹಿಸಿಕೊಡುವಿರಾ?
  ಎಂ. ಬೈರೇಗೌಡ.
  Please see our blog> http/ksmtrust.wordpress

  ಉತ್ತರ

 2. prakash hegde
  ನವೆಂ 24, 2009 @ 08:13:34

  ವನಿತಾರವರ ಬ್ಲಾಗ್ ರುಚಿಯಾಗಿರುತ್ತದೆ..

  ರುಚಿಯಾದ ತಿನಿಸುಗಳ ಬಗೆಗೆ ಸರಳವಾಗಿ ಬರೆಯುತ್ತಾರೆ..
  ಚಂದದ ಫೋಟೊಗಳ ಸಂಗಡ…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: