-ವೈದೇಹಿ
ಭಾಷೆ ತೊಡಕು
ಅಕ್ಕನಿಗೆ ಭಾಷೆ ಇದೆ
ಮಲ್ಲಿಕಾರ್ಜುನನಿಗಿಲ್ಲ
ಮೀರಾ ಭಜನೆ ಇದ್ದರು
ಗಿರಿಧರ ಮೂಕ
ಭಾಷೆ ಮೂಲಕವೇ ಆತ್ಮ ಮಿಲನಕೆ ಹೊರಟ
ಇಂತ ಧೀಮಂತೆಯರ ಅಂತಿಮ
ನೆಲೆಯ ಸುಖ ಸಖರಿಗಿರುವುದಿಲ್ಲಾ
ಭಾಷೆಲಿ ಸಿಲುಕದೆ ಜಾರಿಕೊಳ್ಳುವರು ಅವರು
ಜಾರರೆನ್ನಲು ಭಾಷೆ ತಡೆಯುತಿದೆ
—
ಆಕೆ ಆತ ಭಾಷೆ
ಅವಳೆಂದದ್ದು ಹಸಿವೆ ಮತ್ತು ಬಾಯಾರಿಕೆ
ಆತನೆಂದ ಚೆನ್ನಾಗಿ ಉಣ್ಣು ಕುಡಿ
—
ಆಕೆ ಅತ್ತಳು ಆಗ ಆತ ನಕ್ಕ
ಮೊನ್ನೆ ಅವನೆಂದದ್ದು ಕಿಟಕಿ ಎಂದು
ಅವಳು ತಿಳಕೊಂಡಂತೆ ಬಾಗಿಲು ಅಲ್ಲಾ
—
ಗೋಡೆ ಎಂದರೆ ಆತ ಬಯಲೆಂದುಕೊಂಡಳು
ಗೋಡೆ ಒಡೆದರೆ ಎಲ್ಲಾ ಬಯಲು ಎಂದೆ
—
ಆಕೆ ಮಾಡಿದ್ದು ಅವನಿಗಿಷ್ಟವಾದ ಕಾಯಿ ರಸ
ಅವನು ಉಂಡದ್ದು ಮಜ್ಜಿಗೆ ಹುಳಿ ಎಂತ
ಯಾಕಾಗಿ ಹೀಗೆಲ್ಲ ಉಪರಾಟೆ ಪದಾರ್ಥ
ಗಾಳಿ ಇರಲಿಲ್ಲವೆ ಅವರ ನಡುವೆ ಹಾಗಾಗಿ ಅಲೆಗಳು
—
ಶಬ್ದಕಲೆಯಡಿಯಾಗಿ ಏಕಾಂಗಿ ಕೂಗುತಿದೆ ನಡು ನೀರಿನಲ್ಲಿ
ಅಲ್ಲೆ ಎದ್ದದ್ದು ಆತ್ಮಹತ್ಯೆಯ ಮಾತು
ಏನೆಂದ ಆತ ತಮಾಷೆ ಎಂದೆ
ಹೀಗೇಯೇ ನೋಡುವ ಒಮ್ಮೊಮ್ಮೆ ಏನೇನೊ ಆಗುವುದು
—
ಸಮುದ್ರವೆಂದರೆ ಸಮುದ್ರವಲ್ಲಾ
ದಡ ಎಂದುಕೊಂಡರೆ ನೀನು ಬೆನ್ನು
ಒಂದೆಂದರೆ ಇನ್ನೊಂದೇ ವಾರ್ಗರ್ಥ ಮೋಜು
ನಿನಗು ಗೊತ್ತೆ ಇರುವುದು
—
ಅವಳು ಕೇಳಿದಳು ಹೇಳು ಕೊನೆಗು ಸರಿಯಾಗಿ
ಹೆಚ್ಚು ಹುಚ್ಚರು ಯಾರು ನಮ್ಮಿಬರಲ್ಲಿ
ಆತ ಏನೆಂದೆ ಮೊದಲು ಸಾಯುವ ಆಸೆಯೇ ಹೇಳು಼
ಅವಳು ಸೆಕೆ ಕಿಟಕಿ ತೆರೆಯಲೆ ನಡುವೆ ಗಾಳಿಗೆ
ಆತ ಏನೆಂದೆ ಹಸಿವೆ ಮತ್ತು ಬಾಯಾರಿಕೆ
ಇತ್ತೀಚಿನ ಟಿಪ್ಪಣಿಗಳು