ಬೆಟ್ಟದ ಮೇಲೊಂದು ವಿವಿ ಮಾಡಿ ಚಳಿಗೆ ಅಂಜಿದೊಡೆ ಎಂತಯ್ಯ?

ಜರ್ಮನಿಯಿಂದ ಬಿ ಎ ವಿವೇಕ ರೈ

memorandum

೧೯ರ ಬೆಳಗ್ಗೆ ಎದ್ದು ನೋಡಿದರೆ ದಟ್ಟ್ಟ ಮಂಜಿನ ಮಬ್ಬು ಮುಸುಕಿದ ಮುಂಜಾನೆ ಇಡೀ ವೂರ್ಜಬರ್ಗ್ ನಗರ ಕೋಟಿನ ಮೇಲೆ ಕೋಟಿನ ಮೇಲೆ ಕೋಟು ತೊಟ್ಟುಕೊಂಡು ೭ ಗಂಟೆಗೆ ಮದುವೆಗೆ ಹೊರಟ ಸಡಗರದಲ್ಲಿದೆ. ಮಧ್ಯಾವಧಿ ರಜೆಯ ಬಳಿಕ ವೂರ್ಜಬರ್ಗ್ ವಿವಿ ತೆರೆದುಕೊಂಡ ದಿನ ಅದು.ಸೊನ್ನೆಯಿಂದ ಸೊನ್ನೆಗೆ ಚಳಿಯ ಶೀತಮಾನ ಇಳಿವ ಹೊತ್ತಿನಲ್ಲಿ ಕಚೇರಿಗಳ ಆರಂಭ ,ತರಗತಿಗಳು ಶುರು ೮ ಗಂಟೆಗೆ. ನಮ್ಮಲ್ಲಾದರೆ ಬೆಚ್ಚನೆ ಹೊದ್ದು ಚಳಿಯ ಸಂಕಥನದ ಪರಸಂಗದ ಹೇಳುವ ಹೊತ್ತು ಅದು.

೧.೩೦ ಲಕ್ಷ ಜನಸಂಖ್ಯೆಯ ವೂರ್ಜಬರ್ಗ್ ನಗರದಲ್ಲಿನ ವೂರ್ಜಬರ್ಗ್ ವಿವಿಯ ವಿಧ್ಯಾರ್ಥಿಗಳ ಸಂಖ್ಯೆ ೨೧ ಸಾವಿರ. ವಿವಿಯ ಸಿಬ್ಬಂದಿ ೧೦ ಸಾವಿರ. ಇವರಲ್ಲಿ ೪೦೦ ಪ್ರಾಧ್ಯಾಪಕರ ಸಹಿತ ೩ ಸಾವಿರ ಮಂದಿ ಶೈಕ್ಷಣಿಕ ಸಿಬ್ಬಂದಿ. ಇವರ ಕುಟುಂಬ, ಇವರ ಸೌಕರ್ಯಕ್ಕಾಗಿ ಇರುವ ಬ್ಯಾಂಕ್ ಗಳು, ಅಂಗಡಿಗಳು -ಹೀಗೆ ಎಲ್ಲಾ ಸೇರಿದರೆ ನಗರದ ಅರ್ಧ ಭಾಗ ವಿಶ್ವ ಕುಟುಂಬಿಗಳು.

wuerzburg1ಸಾಂಕೇತಿಕ ಎನ್ನುವಂತೆ ವಿವಿಯ ಮಾನವಿಕ, ಸಾಮಾಜಿಕ ಫ್ಯಾಕಲ್ಟಿಗಳು, ವಿಶಾಲ ಗ್ರಂಥಾಲಯ ಎಲ್ಲ ಬೆಟ್ಟದ ತುದಿಯಲ್ಲಿವೆ. ನಾನೇರುವೆತ್ತರಕೆ ನೀನೇರಬಲ್ಲೆಯಾ? ಎನ್ನುವ ಸವಾಲು. ಇಂಡಾಲಜಿ ವಿಭಾಗಕ್ಕೆ ದಿನಾ ಏರುವಾಗ ನನಗೆ ನೆನಪು ಮಾತ್ರ ಅಲ್ಲ, ಶಾಸ್ತ್ರ ಶ್ರೀ ಗಿರಿಯನ್ನು ಆರೋಹಣ ಮಾಡುವ ಬೌದ್ಧಿಕ ಆಯಾಸವು ಹೌದು. ಬೆಟ್ಟದ ಮೇಲೊಂದು ವಿವಿ ಮಾಡಿ ಚಳಿಗೆ ಅಂಜಿದೊಡೆ ಎಂತಯ್ಯ?

೨೦ರ ಮಂಗಳವಾರ ಬೆಳಗ್ಗೆ ವಿದ್ಯಾರ್ಥಿಗಳು ತಮ್ಮ ಹೊಸ ವರ್ಷದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ‘ಸ್ವಯಂವರ’ದ ಪ್ರಸಂಗ. ಹಾಲಿನಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದರು.ಅಧ್ಯಾಪಕರಿಗೆ ಕುಳಿತುಕೊಳ್ಳಲು ಕುರ್ಚಿಗಳು ಇರಲಿಲ್ಲ. ಕುರ್ಚಿ ಬಿಟ್ಟ ನನಗೆ ನಿಂತುಕೊಳ್ಳುವುದು ಕಷ್ಟವಾಗಲಿಲ್ಲ. ಎಲ್ಲ ಸೇರಿ ೭ ಅಧ್ಯಾಪಕರು ಇದ್ದೆವು. ಎಲ್ಲ ಜರ್ಮನ್ ಭಾಷೆಯಲ್ಲಿ ಮಾತುಕತೆ. ಕನ್ನಡದ ಸರದಿ ಬಂದಾಗ ಇಂಗ್ಲೀಷಿನಲ್ಲಿ ಮಾತಾಡಿದೆವು. ಎಲ್ಲ ಜರ್ಮನ್ ವಿದ್ಯಾರ್ಥಿಗಳು. ಕನ್ನಡಕ್ಕಾಗಿ ಕೆಲವರು ಕೈ ಎತ್ತಿದರು. ಅವರ ಕೈ ಕಲ್ಪವೃಕ್ಷ ಆಗಲಿ ಎಂದು ನಾನು ಅಂದುಕೊಂಡೆ.

ಕನ್ನಡವನ್ನು ಹೊಸತಾಗಿ ಕಲಿಯುವ ತಂಡ ಒಂದನೆಯದು. ಈಗಾಗಲೇ ಕನ್ನಡ ಕಲಿತು ೪ನೆ ಸೆಮಿಸ್ಟರ್ ನಲ್ಲಿ ಕನ್ನಡ ಕಲಿಯುವ ತಂಡ ಎರಡನೆಯದು. ಕನ್ನಡ ಓದಲು ಬರೆಯಲು ಅಭ್ಯಾಸ ಆಗಿ ಕಥೆಯಂತಹ ಸಾಹಿತ್ಯ ಓದಲು ತೊಡಗಿರುವ ತಂಡ ಮೂರನೆಯದು.. ಜೊತೆಗೆ ಹೊಸತಾಗಿ ಇಲ್ಲಿ ಆರಂಭಿಸುತ್ತಿರುವ ವಿಷಯ -‘ಕರ್ನಾಟಕ ಅಧ್ಯಯನ.’

ಕನ್ನಡದ ಮೊದಲ ತಂಡಕ್ಕೆ ಎಂಟು, ಪ್ರೌಢರ ಎರಡನೆಯ ಗುಂಪಿಗೆ ಐದು, ಕನ್ನಡ ಜಾಣರ ಮೂರನೆಯ ಟೀಮಿಗೆ ಐದು ಮಂದಿ ಸೇರಿದ್ದಾರೆ.. ಕರ್ನಾಟಕಅಧ್ಯಯನವನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹೆಚ್ಚು ಜನಪ್ರಿಯಗೊಳಿಸಲು ಮುಂದಿನ ಸೋಮವಾರ ಆಸಕ್ತರ ಸಭೆ ಕರೆದಿದ್ದೇವೆ. ಸಾಕಷ್ಟು ಜರ್ಮನ್ ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ.

ಕನ್ನಡದ ಈ ಎಲ್ಲ ಸಾಹಸಗಳ ಹಿಂದಿನ ಚಾಲಕ ಶಕ್ತಿ ಇಂಡಾಲಜಿ ವಿಭಾಗ. ಇದರ ಪ್ರಾಧ್ಯಾಪಕಿ, ಮುಖ್ಯಸ್ಥೆ ಪ್ರೊ.ಹೈಡ್ರೂನ್ ಬ್ರೂಕ್ನರ್. ನನ್ನಂತಹ ಅತಿಥಿಗಳ ಬೇಕುಬೇಡ ನೋಡುತ್ತಾ, ಸಭೆಗಳಲ್ಲಿ ಭಾಗವಹಿಸುತ್ತಾ, ವೇಳಾಪಟ್ಟಿ ಹೊಂದಿಸಿಕೊಳ್ಳುತ್ತಾ, ನನಗೆ ಅನ್ನ ಮೀನುಸಾರು ಅಡಿಗೆ ಮಾಡಿಕೊಡುತ್ತಾ ಹೀಗೆ ಲೌಕಿಕ-ಶೈಕ್ಷಣಿಕಗಳ ನಡುವೆ ಹೊಂದಾಣಿಕೆ ಮಾಡುತ್ತಾ ಕನ್ನಡವನ್ನು ವಿವಿಯಲ್ಲಿ ಬೆಳೆಸಲು ಮಾಡುತ್ತಿರುವ ಪ್ರಯತ್ನ, ಕನ್ನಡ ರಾಜ್ಯೋತ್ಸವದ ಗದ್ದಲವಿಲ್ಲದೆ ಇಲ್ಲಿ ನಡೆಯುತ್ತಿದೆ.

ನಿನ್ನೆ ದಿನ ,ಶುಕ್ರವಾರ, ಅಕ್ಟೋಬರ ೨೩ ಕನ್ನಡದ ಮೊದಲ ವಿದ್ಯಾರ್ಥಿಗಳಿಗೆ ನನ್ನ ಮೊದಲ ತರಗತಿ. ಏಳು ಜರ್ಮನ್

ವಿದ್ಯಾರ್ಥಿಗಳು -ಆರು ಹುಡುಗಿಯರು :ಮರ್ತಿನಾ, ಲೌರಾ, ನಾದಿಯಾ, ಲೀಸಾ, ಮರಿಯಾ, ಫ್ರಿಡೆರಿಕಾ. ಒಬ್ಬನೇ ಹುಡುಗ-ಸ್ಟೆಫಾನ್. ಇನ್ನೊಬ್ಬಳು ಮುಂದಿನ ವಾರ ಬರುತ್ತೇನೆ ಎಂದಿದ್ದಾಳೆ.

ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಲಿಂಗದೇವರು ಹಳೆಮನೆ ಸಿದ್ಧಪಡಿಸಿದ ‘ಭಾಷಾ ಮಂದಾಕಿನಿ’ ಯೋಜನೆಯ ‘ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ’ ಡಿವಿಡಿ ತೋರಿಸಿದೆ. ಬಳಿಕ ಸರಳ ಸರಸ ಮಾತುಕತೆ ಸುರುಮಾಡಿದೆ.ಒಂದೂವರೆ ಗಂಟೆಯ ಬಳಿಕ ಅವರಿಗೆಲ್ಲ ‘ನಾನು ಯಾರು ‘ನೀನು ಯಾರು’ ‘ಅವನು ಮತ್ತು ಅವಳು ಯಾರು’ ಎಂದು ಗೊತ್ತಾಯಿತು. ಅವರೆಲ್ಲ ಕನ್ನಡದಲ್ಲಿ ನಾಲ್ಕು ಮಾತು ನವಂಬರ್ ಒಂದರ ಮೊದಲೇ ಆಡಿದರು ಮತ್ತು ನವಂಬರ್ ಬಳಿಕವೂ ಆಡುವ ವಿಶ್ವಾಸ ಪಡೆದರು.

ನಾನು ಯಾರು ಮತ್ತು ನೀನು ಯಾರು ಎನ್ನುವ ತತ್ವಜ್ಞಾನದ ಪ್ರಶ್ನೆಗಳಿಗೆಲ್ಲ ಸ್ಪೂರ್ತಿ, ಪರಸ್ಪರ ಒಬ್ಬರು ಇನ್ನೊಬ್ಬರೊಡನೆ ನಗುಮುಖದಿಂದ ಮಾತನಾಡಲು ತೊಡಗುವುದು. ಅದೇ ನಮ್ಮಲ್ಲಿ ಸಾಧ್ಯವಾಗದಿದ್ದರೆ ನಮ್ಮ ಭಾಷೆಗೆ , ನಮ್ಮ ಸಿದ್ಧಾಂತಗಳಿಗೆ , ತತ್ವಜ್ಞಾನಕ್ಕೆ ಏನು ಬೆಲೆ?

new-image

ಕಾರಂತರಿಗೆ ಸಿಕ್ಕ ಗಾಂಧಿ

ಕಾರಂತರಿಗೆ ಗಾಂಧಿ ಬರೆದ ಮೂರು ಪತ್ರಗಳು.

531-mahatma-gandhi-610

ಪತ್ರ-1
ಗಾಂಧೀಜಿ ಈ ಪತ್ರ ಬರೆದಾಗ ಕಾರಂತರಿಗೆ 25 ವರ್ಷ. ಕಾರಂತರು ಆರು ಪ್ರಶ್ನೆಗಳಿಗೆ ಉತ್ತರ ಕೇಳಿ ಗಾಂಧೀಜಿಗೆ ಪತ್ರ ಬರೆದಿದ್ದರು. ಅದಕ್ಕೆ ಗಾಂಧಿ ಸರಳವಾಗಿ ಮತ್ತು ಎರಡು ಪುಟಗಳಷ್ಟು ದೀರ್ಘವಾಗಿ ಉತ್ತರಿಸುತ್ತಾರೆ.ಕಾರಂತರು ವಿಮೆ ಮಾಡಿಸುವುದು, ವಿವಾಹ, ಕೀರ್ತನೆ ಮತ್ತು ರಂಗಭೂಮಿ, ಲೈಂಗಿಕ ಸಂಬಂಧ, ಸ್ವಪ್ನ ಸ್ಖಲನ ಕುರಿತು ಗಾಂಧೀಜಿಗೆ ಪ್ರಶ್ನೆ ಕೇಳಿರುತ್ತಾರೆ.ಈ ಎಲ್ಲ ಪ್ರಶ್ನೆಗಳಿಗೆ ಗಾಂಧೀ ಉತ್ತರಿಸಿದ್ದಾರೆ.

ಪತ್ರ -2
ಕಾರಂತರು ಗಾಂಧಿಯವರಿಗೆ ಯೋಗಾಸನ ಕುರಿತ ಪುಸ್ತಕವೊಂದನ್ನು ಬರೆದಿದ್ದು, ಅದನ್ನು ಪ್ರಕಟಿಸುವ ಕುರಿತು ಗಾಂಧೀಜಿಯವರಲ್ಲಿ ಅಭಿಪ್ರಾಯ ಕೇಳಿ ಬರೆದಿರುತ್ತಾರೆ. ಪತ್ರದ ಜತೆ ಪುಸ್ತಕದ ಹಸ್ತ ಪ್ರತಿಯನ್ನು ರವಾನಿಸುತ್ತಾರೆ. ಇದನ್ನು ನೋಡಿದ ಗಾಂಧೀಜಿ 1927ರ ಡಿಸೆಂಬರ್ 19ರಂದು ಕಾರಂತರಿಗೆ ಉತ್ತರ ಬರೆಯುತ್ತಾರೆ. ಸುಮಾರು ಎರಡು ಪುಟಗಳ ಈ ಪತ್ರದಲ್ಲಿ ಗಾಂಧೀಜಿಯವರು 27 ವರ್ಷದ ಕಾರಂತರಿಗೆ ಬ್ರಹ್ಮಚರ್ಯ ಪಾಲನೆ ಮತ್ತು ವಿಧವಾ ವಿವಾಹ, ರಾಮಕೃಷ್ಣ ಪರಮಹಂಸ, ತಮ್ಮ ಪುಸ್ತಕವೊಂದರ ಅನುವಾದ ಕುರಿತು ಬರೆಯುತ್ತಾರೆ.ಆಸನ ಪ್ರಾಣಾಯಾಮ ಕುರಿತು ಬರೆಯುತ್ತಾ, `ಆಸನ, ಪ್ರಾಣಾಯಾಮಗಳು ನೀವು ಹೇಳುವಂತೆ ಅಷ್ಟೊಂದು ಪ್ರಭಾವಿಯಾಗಿದ್ದರೆ, ನೀವೇ ಸಂಪೂರ್ಣವಾಗಿ ಪ್ರಯತ್ನಿಸಿ ನೋಡಬಾರದೇಕೆ?, ಹಾಗೆ ಮಾಡಬೇಕೆಂದು ನನಗೂ ಅನ್ನಿಸುತ್ತದೆಯಾದರೂ ಪರಿಣತರೇ ಬೇಡವೆನ್ನುತ್ತಿದ್ದಾರೆ’.ಬ್ರಹ್ಮಚರ್ಯ ಮತ್ತು ವಿಧವಾ ವಿವಾಹ ಕುರಿತು; ಬ್ರಹ್ಮಚರ್ಯವನ್ನು ಒತ್ತಾಯ ಪೂರ್ವಕ ಹೇರುವುದಲ್ಲ, ಮತ್ತು ಬಾಲ ವಿಧವೆಯ ಮರುವಿವಾಹ ನಿರಾಕರಿಸುವುದು ಪಾಪ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.ಪತ್ರದ ಕಡೆಗೆ ಅಹಿಂಸೆಯ ಕುರಿತು ಹೇಳುವ ಸಾಲುಗಳು ಅಮೂಲ್ಯ. `ಅಹಿಂಸೆಯನ್ನು ಸಂಪೂರ್ಣವಾಗಿ ಪಾಲಿಸುವ ವ್ಯಕ್ತಿ ಯಾರೂ ಇಲ್ಲ. ಆದರೆ ಹಿಂಸೆಯನ್ನು ಆದಷ್ಟು ಕನಿಷ್ಠಗೊಳಿಸುವುದು ನಮ್ಮ ಪ್ರಯತ್ನವಾಗಬೇಕು’.

s81

ಪತ್ರ-3
ಇದು 1929ರ ಜನವರಿ 2ರಂದು ಗಾಂಧೀಜಿ ಬರೆದ ಪತ್ರ. ಕಾರಂತರು ಮತಾಂತರ ಮತ್ತು ಶುದ್ಧಿ ಹಾಗೂ ವಿವಾಹ ಕುರಿತು ಕೇಳಿದ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸುತ್ತಾರೆ.ಯಾವುದೇ ಧರ್ಮವನ್ನೇ ಒಪ್ಪಿ ಹೋದ ವ್ಯಕ್ತಿ ಅದನ್ನು ಪಾಲಿಸಲಾಗದೆ ಹೋದ ವ್ಯಕ್ತಿಯನ್ನು ಶುದ್ಧಿ ಕರಿಸುವುದು ಮುಖ್ಯವಲ್ಲ. ಮೊದಲಿನಂತೆ ಕಾಣುವುದು ಮುಖ್ಯ ಎಂದು ಬರೆಯುತ್ತಾರೆ.ಹಿಂದಿನ ಪತ್ರದಲ್ಲಿ ಹೇಳಿದೆ ಬಾಲವಿಧವಾ ವಿವಾಹದ ಬಗ್ಗೆ ಸಕಾರಾತ್ಮಕವಾದ ಪ್ರತಿಕ್ರಿಯೆ ನೀಡುತ್ತಾರೆ.
ಕಾರಂತರಿಗೆ ಬರೆದ ಈ ಪತ್ರಗಳಲ್ಲಿ ಸಾಮಾನ್ಯ ಎನಿಸುವ ಸಂಗತಿಗಳು ಚಚರ್ೆಯಾಗಿವೆ. ಹಾಗೆಯೇ ಬಾಲ ವಿಧವಾ ವಿವಾಹದಂಥ ಗಂಭೀರ ವಿಷಯಗಳು ಚಚರ್ೆಯಾಗಿವೆ. ಆದರೆ ಗಾಂಧೀಜಿ ಸಾಮಾನ್ಯ ಸಂಗತಿಗಳಿಗೂ ಪ್ರತಿಕ್ರಿಯಿಸುವಷ್ಟು ಆಸ್ಥೆ ವಹಿಸುತ್ತಿದ್ದರು ಎಂಬುದು ಈ ಪತ್ರಗಳಿಂದ ತಿಳಿಯುತ್ತದೆ. ಹಾಗೆಯೇ ಕಾರಂತರು ತಮ್ಮ ಯುವ ದಿನಗಳಲ್ಲೇ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾಳಜಿಯ ಪ್ರಶ್ನೆಗಳು ಎತ್ತಿದ್ದರು ಎಂಬುದೂ ತಿಳಿಯುತ್ತದೆ. ಗಾಂಧೀಯವರ ಈ ಮಾರ್ಗದರ್ಶನದಿಂದಲೇ ಕಾರಂತರು ಸರಳ ಜೀವನಕ್ಕೆ ಮಾರು ಹೋಗಿದ್ದು. ಹೋರಾಟದ ಗುಣ ಮೈಗೂಡಿಸಿಕೊಂಡಿದ್ದು ಎಂದರೆ ತಪ್ಪಾಗುವುದೆ?


ಕೇಶವ ಕುಲಕರ್ಣಿ ಬರೆಯುತ್ತಾರೆ: ಚಹಾ ಮತ್ತು ಪೇಪರ್

coffee_&_newspaper_1

ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ “ಸಂಯುಕ್ತ ಕರ್ನಾಟಕ” (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ ಹಿಡಿದುಕೊಂಡು ಕೂತಿರುವ ದೃಶ್ಯ ಸಹಜವಾಗಿತ್ತು. ದೊಡ್ಡವನಾದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು, ಕೈಯಲ್ಲಿ ಒಂದು ಚಹಾದ ದೊಡ್ಡ ವಾಟಗಾ (ಲೋಟ) ಹಿಡಿದುಕೊಂಡು, ಸ.ಕ ಓದುತ್ತ ಮಂಜಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದೆ.

ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್

ನೀಗಿಕೊಂಡ ಗೆಳೆಯ

ವೆಂಕಟ್ ಮೋಂಟಡ್ಕ ಇನ್ನಿಲ್ಲ. ಗೆಳತಿ ಹೇಮಾ ಬದುಕಿನ ಭಾಗವಾಗಿದ್ದ, ಸುಳ್ಯದಲ್ಲಿ ಒಂದು ಹೋರಾಟ ಪ್ರಜ್ಞೆಯನ್ನು ಜೀವಂತವಾಗಿಟ್ಟಿದ್ದ ಮೋಂಟಡ್ಕ ನಡು ದಾರಿಯಲ್ಲೇ ಪಯಣ ಮುಗಿಸಿ ಹೊರಟಿದ್ದಾರೆ. ಅವರ ಬದುಕಿನ ಬಗ್ಗೆ ಅವರ ಜೀವದ ಗೆಳೆಯ ಕೆ ಪಿ ಸುರೇಶ ಇಲ್ಲಿ ನೆನೆದಿದ್ದಾರೆ.

-ಕೆ.ಪಿ.ಸುರೇಶ

friends

ಗೆಳೆಯ ವೆಂಕಡ್ ಮೋಂಟಡ್ಕ ತೀರಿಕೊಂಡಿದ್ದಾನೆ..ಚಿಂತೆ, ಸಂಕಷ್ಟ ಮತ್ತು ಕನಸುಗಳು ಒಟ್ಟಿಗೆ ಎದೆಗೆ ಗುದ್ದಿರಬೇಕು.

ಸುಳ್ಯದ ಕಾಲೇಜಿನಲ್ಲಿ, ಅಷ್ಟೇನೂ ಉಪಯೋಗಕ್ಕೆ ಬಾರದ ಡಿಗ್ರಿ ಪಡೆದುಕೊಂಡಿದ್ದ ವೆಂಕಟ್ ನಾವು ಊಹಿಸಿಯೇ ಇರದಂಥಾ ಸೌದೆ ವ್ಯಾಪಾರವನ್ನೂ ಪ್ರಯತ್ನಿಸಿದ್ದ. ಎಂಥಾ ರಗಳೆ ವೃತ್ತಿಯೂ ಸಾಹಸದಂತೆ ಕಾಣುವ ವಯಸ್ಸದು. ಆದರೆಇಂಥಾ ವ್ಯಾಪಾರಕ್ಕಿಳಿದಿದ್ದರೆ, ವೆಂಕಟ್, ಸುಳ್ಯದ ಅನಾಮಿಕ ಸಿರಿವಂತನಾಗಿರುತ್ತಿದ್ದನೋ ಏನೋ.

ಆದರೆ ನಮ್ಮ ಎಲ್ಲ ಸಣ್ಣ ಊರುಗಳ ಪ್ರತಿಭಾವಂತರಂತೆ ತನ್ನ ಆಂಟೆನ್ನಾವನ್ನು ರಾಜ್ಯದ ಚಳುವಳಿ, ಚಿಂತನೆಗಳಿಗೆ ಒಡ್ಡಿಕೊಂಡಿದ್ದ ವೆಂಕಟ್ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ.. ಸುಳ್ಯದ ಅಭಿನಯ ತಂಡದ ಅವಿಭಾಜ್ಯ ಅಂಗವಾಗಿದ್ದ ವೆಂಕಟ್ ಹಿನ್ನೆಲೆಯ ಎಲ್ಲ ಕೆಲಸಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದ.. ಉತ್ತಮ ಕೀಬೋರ್ಡ ವಾದಕನಾಗಿದ್ದ ವೆಂಕಟ್, ಅದ್ಭುತ ಮಿಮಿಕ್ರಿ ಪಟು ಕೂಡಾ.

ಇವೆಲ್ಲಾ ಗರ್ಭಸ್ಥ ಶಿಶು ಇರವು ತೋರಿಸಲು ಒದೆಯುವಂತೆ, ಪ್ರತಿಭೆ ಪ್ರಕಟಗೊಳ್ಳುವ ಬಗೆ. ಅಷ್ಟಕ್ಕೇ ನಿಂತಿದ್ದರೆ ವೆಂಕಟ್ ಸಣ್ಣ ಊರುಗಳಲ್ಲಿ ಕಾಣಸಿಗುವ ಮೀಡಿಯೋಕರ್ ಆಗಿ ಉಳಿಯುತ್ತಿದ್ದ. ಆದರೆ ಅವನೊಳಗೊಬ್ಬ ಆರ್ಟಿಸ್ಟ್ ಇದ್ದ. ಸುಳ್ಯ ಪುತ್ತೂರಿನ ಮಣ್ಣಿನ ಗುಣವೋ, ಅದೆಷ್ಟು ಕಲಾವಿದರು.. ಚಂದ್ರನಾಥ್, ಮನೋಹರ್, ಮೋನಪ್ಪ, ಸೋನಾ, ಅವರೊಂದಿಗೇ ಕುಂಚ ಹಿಡಿದ ವೆಂಕಟ್ ತಾಂತ್ರಿಕ ಕುಶಲತೆಯ ಕಲಾವಿದನಾಗಿ ಬೆಳೆದ. ಮತ್ತೆ, ನಮ್ಮ ಹಳ್ಳಿಗಾಡಿನ ಪ್ರತಿಭೆಗಳ ದುರಂತಕ್ಕೆ ವೆಂಕಟನೇ ರೂಪಕ. ಆ ಕಾಲದಲ್ಲಿ, ಕಲಾಶಿಕ್ಷಣದ ಅವಕಾಶ ದೊರೆತಿದ್ದರೆ ವೆಂಕಟ್ ಅದ್ಭುತ ಕಲಾವಿದನಾಗಿ ಬೆಳೆಯುತ್ತಿದ್ದನೋ ಏನೋ. ‘ಇನ್ನು ಎಂತಾದ್ರೂ ಇಂತಿಷ್ಟೇ..’ ಎಂದು ವೆಂಕಟ್ ಒಮ್ಮೊಮ್ಮೆ ವಿಷಾದದ ನಿಟ್ಟುಸಿರು ಬಿಟ್ಟಿದ್ದಿದೆ.

ಹೊಟ್ಟೆಪಾಡಿನ ಅನಿವಾರ್ಯತೆಗೆ ಏನಾದರೂ ಮಾಡಬೇಕಲ್ಲ.,ಎಂ.ಬಿ.ಸದಾಶಿವ, ‘ಚೇತನ’ ಎನ್ನುವ ಪತ್ರಿಕೆ ಶುರು ಮಾಡಿದಾಗ ಅದರ ಸಾರಥ್ಯ ವಹಿಸಿದ ವೆಂಕಟ್, ಅದನ್ನು ನಮ್ಮ ಗ್ರಾಮಾಂತರದ ಅತ್ಯುತ್ತಮ ಪತ್ರಿಕೆಯಾಗಿ ಬೆಳೆಸಿದ. ಆದರೆ ಇದು ಯಾವುದೂ ವೆಂಕಟ್ ಗೆ ಅನ್ನವೂ ನೀಡಲಿಲ್ಲ.; ತೃಪ್ತಿಯನ್ನೂ ನೀಡಲಿಲ್ಲ. ಆಢ್ಯ ಕುಟುಂಬದಲ್ಲಿ ಹುಟ್ಟಿದರೂ ತೀರಾ ಬಡತನ ಅನುಭವಿಸಿದ್ದ ವೆಂಕಟ್ ಈ ಸಣ್ಣ ತಾಲೂಕುಗಳ ಬಹುತೇಕರಂತೆ, ತಾನೇನು ಮಾಡಬೇಕು ಅನ್ನುವ ಸ್ಪಷ್ಠತೆಯೂ ಇಲ್ಲದೇ, ಕಿತ್ತು ಬೆಂಗಳೂರೋ ಬೊಂಬಾಯಿಯೋ ಸೇರುವ ಮನಸೂ ಮಾಡದೇ ಉಳಿದ. ಆದರೆ ಹೀಗೆ ಉಳಿದ ಎಷ್ಟೋ ಮಂದಿಗಿಂತ ಹೆಚ್ಚು ಕ್ರಿಯಾಶೀಲನಾದ, ಸೃಜನಶೀಲನಾದ..

ನನಗೆ ಪರಿಚಯವಾಗುವ ವೇಳೆಗೆ ವೆಂಕಟ್ ಹೊಸತೇನಾದರೂ ಮಾಡುವ ಹಂಬಲದಲ್ಲಿದ್ದ. ಪೇಟೆ ಬದಿಯ ಪಿತ್ರಾರ್ಜಿತ ತುಂಡು ಭೂಮಿ ಮಾರಿದ ದುಡ್ಡಲ್ಲಿ ಫೈನಾನ್ಸ್ ಒಂದನ್ನು ಶುರು ಮಾಡಿದ್ದ ವೆಂಕಟ್ಗೆ ಕೊನೆಗೆ ಅದೇ ದೊಡ್ಡ ಉರುಳಾಗಿ ಪರಿಣಮಿಸಿತು. ಬೇರೆ ಯಾರೇ ಆಗಿದ್ದರೂ ದುಡ್ಡಿನ ವ್ಯವಹಾರದ ಕಾರಣಕ್ಕೆ ಸ್ಥಳೀಯವಾಗಿ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆಂದು ಚಳವಳಿ, ಸಿದ್ಧಾಂತದ ಉಸಾಬರಿಯೇ ಬೇಡ ಎಂದು ಜಾರಿಕೊಳ್ಳುತ್ತಿದ್ದರು. ಆದರೆ ವೆಂಕಟ್ ಸತತವಾಗಿ ಜನಪರ ಇಶ್ಯೂಗಳೊಂದಿಗೆ ಗುರುತಿಸಿಕೊಳ್ಳತೊಡಗಿದ. ಒಂದು ಸಭೆ, ಪ್ರತಿಭಟನೆ ಏನೇ ಇದ್ದರೂ, ವೆಂಕಟ್ ಸುತ್ತವೇ ಅದು ತಿರುಗುತ್ತಿತ್ತು. ಅದೆಷ್ಟು ದುಡ್ಡು ಇಂಥಾ ಉಸಾಬರಿಯಲ್ಲಿ ಕಳಕೊಂಡನೋ..

ಆ ವೇಳೆಗೆ ಆತ ಹೇಳುತ್ತಿದ್ದ ಊರು ಕತೆಗಳ ಮೋಹಕ್ಕೆ ಬಿದ್ದ ನಾನು ದುಂಬಾಲು ಬಿದ್ದ ಕಾರಣಕ್ಕೆ, ವೆಂಕಟ್ ಬರೆದ ಕಥೆಗಳು ಆತನ ಪ್ರತಿಭೆಯ ಇನ್ನೊಂದು ಆಯಾಮವನ್ನು ಪ್ರಕಟಿಸಿತು. ಆಮೇಲೆ ಸುಳ್ಯದ ‘ಪಯಸ್ವಿನಿ’ ಎಂಬ ಪತ್ರಿಕೆಯ ಕರ್ಣಧಾರತ್ವ ವಹಿಸಿದ ವೆಂಕಟ್ ಅದನ್ನೂ ಗಂಭೀರ ಪತ್ರಿಕೆಯನ್ನಾಗಿಸಿದ.

ಈ ವೇಳೆಗೆ ಫೈನಾನ್ಸ್ ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡದ್ದೇ ವೆಂಕಟ್ ದಿಕ್ಕೆಟ್ಟುಹೋದ.. ಸಾಲದ ಪ್ರಶ್ನೆ ಅಲ್ಲ. ನೆಚ್ಚಿದ ಕಡೆಯಿಂದ ಕಿಂಚಿತ್ತೂ ಸಹಾಯ ಸಿಗದ ದುಗುಡ ಅದು. ಒಂದು ಕಾಲದಲ್ಲಿ ಸಹಾಯ ಪಡೆದವರೆಲ್ಲ ಕಣ್ಣಿಗೇ ಬೀಳದಂತೇ ಓಡಾಡುತ್ತಿದ್ದ ಬಗೆ ನೋಡಿದ ನನ್ನಂಥವನಿಗೇ ಗೊತ್ತು. ಊರು ಸಾಕೆನಿಸಿದ ಕಾರಣಕ್ಕೋ, ಹೊಸ ಅವಕಾಶಗಳ ಸಾಧ್ಯತೆಯ ಹುಡುಕಾಟದ ತೆವಲಿಗೋ ನಾನು ಊರು ಬಿಟ್ಟಾಗ, ‘ನೀವೂ ಊರು ಬಿಡಿ ಮಾರಾಯ್ರೇ, ಕರೆವ ಊರೂ ಅಲ್ಲ, ಪೊರೆವ ಊರೂ ಅಲ್ಲ, ಹೊರಟು ಬಿಡಿ’ ಎಂದು ವೆಂಕಟ್ ಗೆ ಹೇಳುತ್ತಲೇ ಬಂದೆ. ಆದರೆ ಬೆಂಗಳೂರಿನ ‘ಗೋಧೂಳಿ’ ಪ್ರಕಾಶನದ ಬೋರಯ್ಯನಂಥ ಸಹೃದಯರ ಪರಿಚಯವಾದ ಬಳಿಕ ವೆಂಕಟ್ಗೂ ಹೌದೆನ್ನಿಸಿರಬೇಕು. ಕಿತ್ತು ಬೆಂಗಳೂರಿಗೆ ಬಂದಾಗ. ಬೋರಯ್ಯನವರು, ನೆರಳಾಗಿ ನಿಂತು ಸಹಾಯ ಮಾಡಿದರು. ಅರ್ಧ ಆಯುಸ್ಸಿನ ಬಳಿಕ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಸ್ವಭಾವ ಸಹಜ ಸಜ್ಜನಿಕೆ, ದುಡಿಮೆಯ ಶಕ್ತಿ, ಪ್ರತಿಭೆಯ ಬಲದಿಂದಲೇ ವೆಂಕಟ್ ಅವಕಾಶಗಳನ್ನು ಪಡೆದುಕೊಂಡ. ಇನ್ನೇನು, ಬೆಂಗಳೂರಿನಂಥಾ ನಗರಿಯಲ್ಲೂ ಕಲಾವಿದನಾಗಿ ಗುರುತಿಸಲ್ಪಡುವ ಕಾಲಕ್ಕೆ , ಇವನ ಎದೆಗೇಕೆ ವಿಧಿ ಗುದ್ದಿತು?

More

ಒಂದು zen ಕಥೆ

– ಜಯದೇವ ಪ್ರಸಾದ ಮೊಳೆಯಾರ

Shortstory

ಹತ್ತು ವರ್ಷದ ಮಗ ನಂದು ದಿನವಿಡೀ ಕಂಪ್ಯೂಟರ್ ಎದುರು ‘ನೀನೇ ತಾಯಿ-ನೀನೇ ತಂದೆ’ ಎಂದು ಕುಳಿತುಕೊಂಡು ರಜಾ ಪೂರ್ತಿ ಗೇಮ್ಸಿನಲ್ಲಿ ಕಾಲಹರಣ ಮಾಡುತ್ತಿರುವುದು ಕಂಡಾಗ ಮೈ ಎಲ್ಲಾ ಉರಿಯುತ್ತೆ. ಹೇಗಾದ್ರೂ ಮಾಡಿ ಈ ಕೆಟ್ಟ ಅಭ್ಯಾಸ ಬಿಡಿಸಿ ಏನಾದ್ರು ಒಳ್ಳೆ ವಿಷಯದಲ್ಲಿ ತೊಡಗಿಸ್ಕೊಳ್ಳೋ ಹಾಗೆ ಮಾಡ್ಬೇಕು ಅಂತ ಎಷ್ಟು ಬುದ್ದಿ ಹೇಳಿದ್ರೂ ಸೀರಿಯಸ್ ಆಗಿ ತಗಳ್ಳೋದಿಲ್ಲ. ನನ್ನ ಮಾತು ಕಿವಿಗೇ ಹಾಕ್ಕೊಳ್ದೆ ಏನಾದ್ರು ತುಂಟತನ ಮಾಡ್ಕೊಂಡು ನನ್ನನ್ನು ರೇಗಿಸ್ತಾ ಇರ್ತಾನೆ.

ಒಂದು ದಿನ ಮಗನಿಗೆ ಸಾಹಿತ್ಯದ ಗೀಳು ಹಚ್ಚಿಸಿದರೆ ಹೇಗೆ ಎಂಬ ಘನಂದಾರಿ ಐಡಿಯಾ ಹೊಳೆಯಿತು. ಎಷ್ಟಾದರೂ, ಸಾಹಿತ್ಯ, ಕಲೆ, ಸಂಗೀತ ಇತ್ಯಾದಿ ಮನುಷ್ಯನ ಜೀವನಕ್ಕೆ ಭಾವನಾತ್ಮಕವಾಗಿಯೂ, ಮಾನಸಿಕವಾಗಿಯೂ ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ, ಅಲ್ಲವೇ ?

ಆ ದಿನ ನಂದುವನ್ನು ಹತ್ತಿರ ಕರೆದು ಟಿ.ವಿ ಕಂಪ್ಯೂಟರ್ ಗಳು ಮನಸ್ಸಿನ ಮೇಲೆ ಮಾಡುವ ದುಷ್ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಭಾಷಣ ಕೊರೆದೆ. ಬದಲಿಗೆ ಸಾಹಿತ್ಯದ ಅಭ್ಯಾಸ ಯಾಕೆ ಮಾಡಬಾರದು? ಎಂದು ಆಸಕ್ತಿ ಹುಟ್ಟುವಂತೆ ಒಂದು ಪ್ರಶ್ನೆಯನ್ನು ಮುಂದಿಟ್ಟೆ.

ಮಗನ ಎಳೆ ಮುಖದಲ್ಲಿ ಆಸಕ್ತಿ ಮೂಡಿತಾದರೂ ಒಂಥರಾ ಗೊಂದಲವೂ ಇಣುಕುತ್ತಿತ್ತು.

“ಅದು ಸರಿ…, ಆದ್ರೆ ಅಪ್ಪಾ…, ನಂಗೆ ನಿನ್ನ ಹಾಗೆ ಉದ್ದ ಉದ್ದ ಬರಿಲಿಕ್ಕೆ ಆಗುದಿಲ್ಲ ಅಲ್ವ? ನಾನು ಸಣ್ಣ. ಅದಕ್ಕೆ ಏನು ಮಾಡುವುದು?”

‘ಸದ್ಯ, ಮೀನು ಬಲೆಗೆ ಬಿತ್ತಲ್ಲ… ಮುಂದಿನದ್ದು ಮುಂದೆ ನೋಡೋಣ..’ ಎಂಬ ಮನದಲ್ಲೇ ಬೀಗಿ ಖುಶಿಯಿಂದ ಅವನನ್ನು ಬಳಿಗೆ ಸೆಳೆದು ಬೆನ್ನು ನೇವರಿಸಿಕೊಂಡು, “ಉದ್ದ ಕತೆಯೇ ಬರೀಬೇಕಂತ ಇಲ್ಲ. ಚಿಕ್ಕ ಚಿಕ್ಕ ಕತೆ ಬರಿ. ಈಗೀಗ ಚಿಕ್ಕ ಚಿಕ್ಕ ಜೆನ್ ಕತೆ, ಹನಿಕತೆ ಇತ್ಯಾದಿಗಳಿಗೇ ಪ್ರಾಶಸ್ತ್ಯ. ಈಗೆಲ್ಲಾ ಎರಡು ಮೂರು ವಾಕ್ಯಗಳಲ್ಲಿಯೇ ಕತೆ ಬರೀಬೌದು… ಸಣ್ಣದು. ಒಟ್ಟಿನಲ್ಲಿ ಕತೆ, ಫೀಲಿಂಗ್ಸ್ ಮುಖ್ಯ, ಗಾತ್ರವಲ್ಲ” ಅವನಿಗೆ ಅರ್ಥವಾಗುವಂತೆ ವಿವರಿಸಿ ಹೇಳಿದೆ. ಜೆನ್ ಕತೆ, ಮಿನಿಕತೆ, ಹನಿಕತೆ ಅಂತೆಲ್ಲ ಕೊರೆದೆ.

“ತಡಿ ಅಪ್ಪಾ, ನಾನು ಜೆನ್ ಕತೇನೇ ಬರೀತೀನಿ. ಅದನ್ನೇ ಇನ್ನೊಮ್ಮೆ ಸರಿಯಾಗಿ ಹೇಳು….” ಮಗ ಸೀರಿಯಸ್ಸಾದ ಹಾಗೆ ಕಂಡಿತು.

“ನೋಡು ನಂದೂ…… ಜೆನ್ ಕತೆ ಅಂದ್ರೆ ಒಂದು ಮೂರು-ನಾಲ್ಕು ವಾಕ್ಯಗಳಲ್ಲಿ ಬರತ್ತೆ. ಅದರಲ್ಲಿ ಹೆಚ್ಚಾಗಿ ಒಂದು ವಿಚಾರ ಅಥವಾ ಪ್ರಶ್ನೆ ಬರುತ್ತೆ; ಚಿಂತನೆಗೆ. ನಾವು ಅದನ್ನ ತುಂಬಾ ಆಲೋಚನೆ ಮಾಡ್ಬೇಕಾಗತ್ತೆ…, ಅರ್ಥ ಮಾಡಿಕೊಳ್ಳಲು. ಒಂದೆರಡು ಉದಾಹರಣೆ ಕೊಡುತ್ತಾ ಹೋದೆ.

ಮಗನ ಮುಖದಲ್ಲಿ ಆಸಕ್ತಿ ಬೆಳೆಯಿತು.

‘ಅಮೇಜಿಂಗ್.., ಟ್ರೈ ಮಾಡ್ತೇನೆ’ ಅಂದ ಪುತ್ರ.

ಮುಂದಿನ ಎರಡು ದಿನಗಳು ಕಂಪ್ಯೂಟರ್ ಹಾವಳಿ ಇದ್ದರೂ ನಡು ನಡುವೆ ನನ್ನನ್ನು ಕಂಡಾಗಲಾದರೂ ನೋಟ್ ಪುಸ್ತಕ ಇಟ್ಟುಕೊಂಡು ಕತೆ ಬರೆಯುವ ಲಕ್ಷಣಗಳು ಕಾಣುತ್ತಿದ್ದವು. ‘ಪರ್ವಾಗಿಲ್ಲ. ನಾವು ಸುಮ್ಮನೇ ಈ ಜನರೇಷನ್ನನ್ನು ಬೈತೇವೆ. ಸರಿಯಾದ ಮಾರ್ಗದರ್ಶನ ಕೊಟ್ರೆ ಚೆನ್ನಾಗಿ ಮೇಲೆ ಬರ್ತಾರೆ ಹೆತ್ತವರದ್ದೇ ಪ್ರಾಬ್ಲೆಂ.’ ಅಂತ ಮನಸ್ಸಿನಲ್ಲೇ ಖುಶಿ ಪಟ್ಟುಕೊಂಡೆ.

ಮೂರನೇ ದಿನ ‘ಅಪ್ಪ … ಕತೆ ಬರ್ದಿದೀನಿ ನೋಡು” ಅಂತ ತನ್ನ ನೋಟ್ ಬುಕ್ ತಂದು ಕೊಟ್ಟ.

ನನ್ನ ಮನದಲ್ಲಿ ಸಂತೋಷ ಸಂಭ್ರಮಗಳು ಉಕ್ಕಿ ಬರುತ್ತಿತ್ತು. ನನ್ನ ಮಗನ ಮೊದಲ ಕತೆ. ಗಡಿಬಿಡಿಯಿಂದ ಪುಸ್ತಕ ತೆರೆದು ಓದ ತೊಡಗಿದೆ. ಮೊದಲ ಪುಟದಲ್ಲಿ ಬರೆದಿತ್ತು:

More

%d bloggers like this: