ಕಥೆ ಕಟ್ಟುವ ಬಗೆ…
‘ನಾನು ಕಥೆ ಬರೀಲಿಕ್ಕೆ ಪ್ರಾರಂಭಿಸಿ ಆರೇಳು ವರ್ಷ ಆಯಿತಷ್ಟೆ. ಹೀಗಿರುವಾಗ ‘ಕಥೆ ಕಟ್ಟುವುದು ಹೇಗೆ’ ಎಂಬ ವಿಷಯದಲ್ಲಿ ಉಪನ್ಯಾಸ ಕೊಡಿ ಅಂತಂದ್ರೆ ಮುಜುಗರ ಅನ್ಸುತ್ತೆ’ ಅಂತ ವಸುದೇಂಧ್ರ ವಿನೀತಭಾವದಿಂದಲೇ ಪೀಠಿಕೆ ಹಾಕಿದ್ದರು. ಅದರಲ್ಲೂ ನೂಪುರ ಭ್ರಮರಿಯನ್ನು ಪ್ರಾರಂಭಿಸಿದ ಹೊಸತರಲ್ಲಿ, ಕಳಿಸಿಕೊಟ್ಟ ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಓದಿ, ಅವರಾಗಿಯೇ ಬರೆದ ಉತ್ಸಾಹದ ಮಾತುಗಳನ್ನು ಮರೆಯಲಿಕ್ಕಾದೀತೇ? ಹಾಗಾಗಿಯೇ ಅವರ ಪತ್ರ ಎಷ್ಟೋ ಪತ್ರಗಳ ಕಳೆದುಹೋಗುವಿಕೆಯ ನಡುವೆಯೂ ಜೋಪಾನವಾಗಿದೆ. ಅಷ್ಟು ಮಾತ್ರವಲ್ಲ, ಕಂಡಷ್ಟು ಬಾರಿಯೂ, ಮೊನ್ನೆ ಮೊನ್ನೆ ಗೆಳೆಯ ರಾಮುವಿನ ಚೈತ್ರರಶ್ಮಿಯ ನಾಲ್ಕನೇ ವಾರ್ಷಿಕ ಸಂಭ್ರಮಕ್ಕೂ ಬಂದಾಗಲೂ ಪ್ರೀತಿಯಿಂದ ಅವರಾಗಿಯೇ ಗುರುತು ಹಿಡಿದು ಮಾತನಾಡಿಸುವ ಸಹೃದಯತೆಗೆ, ಪತ್ರಿಕೆಯ ಬಗೆಗಿರುವ ಅವರ ಪ್ರೀತಿಗೆ.. ನಿಜಕ್ಕೂ ಒಂದು ಕ್ಷಣಕ್ಕೂ ನನಗೆ ಏನೂ ತೋಚುವುದಿಲ್ಲ.
ಹಾಗಾಗಿಯೇ ಒಂದಾನೊಂದು ಕಾಲದಲ್ಲಿ ಅವರೊಂದಿಗಿನ ಕಥೆಗಳ ಕುರಿತಾದ ಒಂದೂವರೆ ಘಂಟೆಗಳ ಸುದೀರ್ಘ ಸಂವಾದದ ಪುಟ್ಟ ಪುಟ್ಟ ನೆನಪುಗಳನ್ನು ಭ್ರಮರಿಯ ಬ್ಲಾಗ್ ಅಂಗಳದಲ್ಲಿ ನಿಮ್ಮೆದುರಿಗಿರುಸುತ್ತಿದ್ದೇನೆ. (ವಿಶೇಷವೆಂದರೆ, ಈ ಮೌನದೊಳಗಡೆ ಅರಳುವ ಕಥೆಗಳ ಬೆರಗಿನ ಪ್ರಸಂಗವು ಮಾತುಗಳ ಚಮತ್ಕಾರದೊಳಗೆ ಎದುರು ಕುಳಿತ ಕ್ಷಣಗಳ, ಸಂವಾದದ ೧೦ ಪುಟಗಳ ಕಥಾನಕದ ವರದಿ ಪ್ರಕಟವಾಗದೇ ಇದ್ದರೂ, ಇದರ ಪ್ರತಿ ಬಹುಷಃ ಒಂದು ನನ್ನ ಬಳಿಯಲ್ಲೂ, ‘ಮಂಥನ’ದ ವಾದಿರಾಜರಲ್ಲೂ, ಪ್ರೀತಿಯ ಬರಹಗಾರ ವಸುಧೇಂಧ್ರರ ಬಳಿಯಲ್ಲೂ ಇದೆ. ! ಅದರ ಒಂದು ಮಿಂಚು ಓದುಗರಿಗಾಗಿ ಈ ಅಂಚೆಯಲ್ಲಿದೆ.)
‘ಹೇಳಲಾರದ ಕಥೆಗಳೇ ಇಲ್ವೇ !’ ಹಳೆಯ ವಸ್ತುಗಳಿಗೆ ಹೊಸ ರೂಪ ಹೊಸ ಬಣ್ಣ, ಹೊಸ ಕಣ್ಣು. ಅದೊಂದು ಬೆರಗಿನ, ಸಂಭ್ರಮದ ಅನುಭವ. ಆದರೆ ಆ ಕ್ಷಣ ಕ್ಷಣಿಕವಾಗಬಾರದಷ್ಟೇ !
ಕಥೆ ಅವಸರದ ಪ್ರಸವ ಅಲ್ಲ. ಸ್ಪಂದನವಿಲ್ಲದೆ ಕಥೆ ಮಾಡಲು ಹೊರಟರೆ ಆ ಪ್ರಯತ್ನ ನಿರರ್ಥಕ. ಕಥೆಗಿಂತ ಬದುಕು ದೊಡ್ಡದು. ಬದುಕಿನ ಒಂದು ಭಾಗ ಕಥೆಯೇ ಹೊರತು, ಕಥೆಯೇ ಬದುಕಲ್ಲ.
More
ಇತ್ತೀಚಿನ ಟಿಪ್ಪಣಿಗಳು