‘ಕಾಮರೂಪಿ’ ಬರೆದ ಹದಿನೆಂಟು ಹೊಸಿಲುಗಳು

-ಎಂ ಎಸ್ ಪ್ರಭಾಕರ್

ಕಾಮರೂಪಿ

ಎಲ್ಲಾ ಸಸ್ಯಗಳು ಮತ್ತು ಜಂತುಗಳು ಜೀವಂತ ವಸ್ತುಗಳು. ಆದರೆ ನಿರ್ಜೀವಿಯಂತೆ ಕಾಣುವ ಒಂದು ಕಲ್ಲು, ಒಂದು ಮನೆ, ಒಂದು ಕುರ್ಚಿ ಅಥವಾ ಮೇಜು ಇವುಗಳೂ ಜೀವಂತ ವಸ್ತುಗಳು.  ಹುಟ್ಟುತ್ತವೆ, ಅಥವಾ ತಯಾರಿಸಲ್ಪಡುತ್ತವೆ.  ಕೆಲವು ಕಾಲ ಕಾಲ ಕೆಲಸಕ್ಕೆ ಬರುತ್ತವೆ. ಕಾಲ ಕಳೆದಂತೆ ಅವುಗಳ ಶಕ್ತಿ, ಕೆಲಸಕ್ಕೆ ಬರುವ ಸಾಧ್ತ್ಯತೆ ಮತ್ತು ಬಲಿಷ್ಠತೆ ಕಮ್ಮಿ ಆಗುತ್ತೆ.  ಮನೆ ಗೋಡೆಯೊಂದು ಕುಸಿಯುತ್ತೆ, ಕುರ್ಚಿಯ ಕಾಲೊಂದು ಮುರಿಯುತ್ತೆ.  ಸರಿ, ರಿಪೇರಿ ಮಾಡಿಸಿಕೋಬಹುದು. ಆದರೆ ಒಮ್ಮೆ ರಿಪೇರಿಗೆ ಹೋದಮೇಲೆ ಮೊದಲಿನ ಧಾರ್ಡ್ಯ ಇರುವುದಿಲ್ಲ.

3206134461_51c6c8166aಚಿತ್ರ: ಬಾಲು ಮಂದರ್ತಿ

ಕಾಡಿನಲ್ಲೇ ಬೇಟೆಮಾಡಿ ಊಟ ಸಂಪಾದಿಸಿಕೊಳ್ಳುವ ಹುಲಿಚಿರತೆತೋಳಗಳು ಅಥವಾ ಬೇರೊಬ್ಬರಿಂದ ಪೋಷಿಸಿಕೊಂಡ ನಾಯಿ ಬೆಕ್ಕುಗಳು ಮತ್ತು ಇವುಗಳ ಮೇಲೆ ಅಧಿಕಾರ ಚಲಾಯಿಸಬಲ್ಲೆ ಎಂದು ಹೆಮ್ಮೆ ಪಡುವ ಮಾನವರಿಗೂ ಏನಾದರೂ ವ್ಯತ್ಯಾಸ ಇದೆಯೇ?  ಅಪ್ಪ ಕಟ್ಟಿದ ಮನೆಯಲ್ಲಿ ಬೆಳೆದು ಮನೆಯೂಟ ತಿಂದು ಜೋಪಾನವಾಗಿ ದೊಡ್ಡವರಾಗಿ ವಿದ್ಯಾಭ್ಯಾಸ ಮಾಡಿ ಸಂಬಳ ಬರುವ ಕೆಲಸಕ್ಕೆ ಸೇರಿ ಮದುವೆ ಮಾಡಿಕೊಂಡು ಸಂಸಾರ ಮಾಡಿ ಮಕ್ಕಳನ್ನು ದೊಡ್ಡವರಾಗಿಸಿ ಅವರನ್ನೂ ಸಂಸಾರವಂದಿಗರಾಗಿ ಮಾಡಿ ತಕ್ಕಮಟ್ಟಿಗೆ ಆಸ್ತಿ ಮಾಡಿಕೊಳ್ಳದಿದ್ದರೂ ತನ್ನ ಕೊನೆಗಾಲದಲ್ಲಿ ಸ್ವಂತ ಮನೆಯೊಂದನ್ನು ಬೆಂಗಳೂರಿನಲ್ಲಾಗಲೀ ಅಥವಾ ಅಂತಹ ಅರ್ಥಿಕ ಕ್ಷಮತೆ ಇಲ್ಲದಿದ್ದರೆ ಇನ್ನು ಯಾವುದಾದರೂ ಕೊಂಪೆಯಲ್ಲಾಗಲೀ ಮಾಡಿಕೊಂಡು, ಅಥವಾ ಅಂತಹ ಕಳಪೆ ಕ್ಷಮತೆಯೂ ಇಲ್ಲದಿದ್ದರೆ ಅಪ್ಪ ಕಟ್ಟಿದ್ದ ಕುಸಿದುಬೀಳುತ್ತಿರುವ ಪಾಳುಮನೆಯಲ್ಲೇ sit on your arse for fifty years and hang your hat on a pension ಅಂತ ಅಳವಳಿಸಿಕೊಂಡ ಕವಿಯ ಉಕ್ತಿಯಂತೆ ಕೊನೆಯ ಹಂತದ ಜೀವನ ನಡೆಸಿ ಸಾಯುವವರದೂ ಇದೇ ಕತೆ. ವಾಕ್ಯ ಸ್ವಲ್ಪ ಉದ್ದವಾಯ್ತಲ್ವಾ?  ಏನು ಮಾಡ್ಲಿ, ಕನ್ನಡ ಬರೆಯೋದ್ನ ಇನ್ನಷ್ಟು ಲಕ್ಷಣ್ವಾಗಿ ಕಲ್ತುಕೋಬೇಕು.  ಇರಲಿ.

ಉದಾಹರಣೆಗೆ ಕೋಲಾರದ ಕಠಾರಿಪಾಳ್ಯದಲ್ಲಿ ಅಪ್ಪ ಕಟ್ಟಿದ ಹದಿನೆಂಟು ಹೊಸಿಲುಗಳಿರುವ ಈ ಮನೆ, ಮತ್ತು ಈಗ ಇಲ್ಲಿ ವಾಸಮಾಡಿಕೊಂಡು ಕಾಯುತ್ತಿರುವ ಈ ಮನೆಗಿಂತ ಮೂರು ವರುಷ ಮುದಿಯನಾದ ನಾನು, ನನ್ನ ಅಪ್ಪ ಮತ್ತು ಅಮ್ಮನ ಹನ್ನೊಂದನೆಯ ಮತ್ತು ಕೊನೆಯ ಸಂತಾನ. ಈ ಮನೆ ಕಟ್ಟಿ ಮುಗಿಸಿದ್ದು ಸನ್ ಸಾವಿರದೊಂಭೈನೂರಮುವ್ವತ್ತೊಂಭತ್ತರಲ್ಲಿ; ನಾನು ಹುಟ್ಟಿದ್ದು ಸನ್ ಸಾವಿರದೊಂಭೈನೂರಮುವ್ವತ್ತಾರರಲ್ಲಿ. ನನ್ನ ಹದಿನೇಳನೇ ವಯಸ್ಸಿನಲ್ಲಿ ಈ ಮನೆ ಬಿಟ್ಟವನು ಈಗ, ನನ್ನ ಎಪ್ಪತ್ನಾಲ್ಕನೇ ವಯಸ್ಸಿನಲ್ಲಿ, ವಾಪಸಾಗಿದ್ದೇನೆ.

ಏಕೆ ವಾಪಸಾದೆ ನನಗೇ ಸರಿಯಾಗಿ ಗೊತ್ತಾಗಿಲ್ಲ.  ಕೆಲವು ಪರಿಚಯಸ್ಥರ ಪ್ರಕಾರ ಈ ವಾಪಸಾತಿ ಒಂದು ರೀತಿ ಹಳೆಯ ನೆನಪುಗಳನ್ನು ಅರಸಿ ಬಂದ ಒಭ್ಭ ಮುದುಕನ ಯಾತ್ರೆ. Nostalgia trip.  ಇವರುಗಳ ಪ್ರಕಾರ ಈ ಮನೆಯನ್ನು ನಾನು ಬಿಟ್ಟಿರಲಾರೆ. ಏಕೆಂದರೆ ಈ ಮನೆಯ ನೆನಪುಗಳು ನನಗೆ ಬಹಳ, ಬಹಾಳ ಸವಿ.   ಆದರೆ ಈ ಮನೆಯ ನೆನಪುಗಳು ಎಷ್ಟು ಸವಿ, ಎಷ್ಟು ನೋವು, ಕೋಪ, ವಾಕರಿಕೆ ಬರಿಸುತ್ತೆ ಇದು ನನಗೇ ಗೊತ್ತು.

ಇವೆ, ಕೆಲವು ಸವಿ ನೆನಪುಗಳಿವೆ.  ಆದರೆ ಇವುಗಳೆಲ್ಲಾ ಈ ಊರು ಬಿಟ್ಟು ಹೋದಮೇಲೆ ಕೆಲವೊಮ್ಮೆ, ಕೆಲವು ದಿನಗಳಿಗೆ ಮಾತ್ರ ವಾಪಸಾದಾಗ ನನಗೆ ನಾನೇ ಕಲ್ಪಿಸಿದೊಂಡು ಸೃಷ್ಟಿಸಿಕೊಂಡ ನೆನಪುಗಳು. ವಯಸ್ಸಾದಂತೆ ಈ ಕಲ್ಪಿತ ಸವಿ ನೆನಪುಗಳನ್ನು ತಯಾರಿಸಿಕೊಳ್ಳುವ ಚಟ ಬೆಳೆಯುತ್ತೆ.  ಕತೆ ಕಟ್ಟುವಂತೆ ನೆನಪುಗಳನ್ನೂ ಕಟ್ಟಲು ಸಾಧ್ಯ.  ಕಟ್ಟುಕತೆ ಹೇಳುವಷ್ಟೇ ಸಹಜ.

ಆದರೂ ಈ ದಿನಗಳಲ್ಲಿ ಕೆಲಸವಿಲ್ಲದೆ ಕಾಯಲೇಬೇಕಾದ ಘಳಿಗೆಗೆ ಕಾಯುತ್ತಿರುವಾಗ ಈ ಮನೆಯ ಒಳಗಿನ ಪರಿವೇಷದ ಬಗ್ಗೆ ಒಮ್ಮೊಮ್ಮೆ ನನ್ನ ಊಹಾಪೋಹ ತಲೆ ಕೆಡಿಸುತ್ತೆ.  ಉದಾಹರಣೆಗೆ ಈ ಮನೆಗೆ ಏಕೆ ಇಷ್ಟೊಂದು ಹೊಸಿಲುಗಳು? ಮನೆಯ ಮುಂದಿನ ಆಂಗಳಕ್ಕೆ ತೆರೆಯುವ ಮುಂಬಾಗಿಲು, ಹಿತ್ತಿಲಿಗೆ ತೆರೆಯುವ ಹಿಂಬಾಗಿಲು ಮತ್ತು ವರಾಂಡದಲ್ಲಿನ ಎಡಪಕ್ಕದಲ್ಲಿನ ಕೋಣೆಯಿಂದ ಮಾಡಿಯ ಮೆಟ್ಟಲುಗಳನ್ನು ಹೊರಗಿನಿಂದ ಹತ್ತಿ ಹೋಗಲು ಅನುಕೂಲಿಸಿರುವ ಹೊರಬಾಗಿಲು, ಈ ಮೂರು ಬಾಗಿಲುಗಳನ್ನು ಬಿಟ್ಟರೆ ಮಿಕ್ಕೆಲ್ಲ ಬಾಗಿಲುಗಳೂ ಮನೆಯ ಒಳಗಿನ ಕೋಣೆಗಳವು. ಇವುಗಳಿಗೆ ಹೊಸಿಲು ಏಕೆ ಬೇಕು? ಅದಕ್ಕೂ ಮೀರಿ ಇಷ್ಟು ಭಾರವಾದ ತೇಗದಮರದಿಂದ ತಯಾರಿಸಿದ ಬಾಗಿಲುಗಳ ಅಗತ್ಯವೇ ಏನಿತ್ತು? ಅವುಗಳ ಮೇಲಿನ, ಕೆಳಗಿನ, ಮಧ್ಯದ ಗೆಡೆಗಳು, ಚಿಲಕಗಳು, ಮೇಲೆಕೆಳಗಿನ ತಾಪಾಳುಗಳು ಏಕೆ ಇಷ್ಟು ಬಲಿಷ್ಠವಾಗಿರಬೇಕು? ಹೊರಬಾಗಿಲುಗಳೇ ಇಲ್ಲದ ಅಡುಗೆಮನೆ ದೇವರಮನೆ ಮಧ್ಯದಲ್ಲಿನ ಬಾಗಿಲು ಇಷ್ಟು ಮಜಬೂತಾಗಿರಬೇಕೆ?  ಅರ್ಥವಿಲ್ಲದ ಪ್ರಶ್ನೆಗಳು. ಆದರೂ ಇವು ನನ್ನನ್ನು ಒಮ್ಮೊಮ್ಮೆ ಕಾಡುತ್ತವೆ.

More

ಎಷ್ಟು ಸಿಂಪಲ್, ರವಿ ಅಜ್ಜೀಪುರನ ಹಾರೈಕೆ?

deepa (1)

‘ಪುಳ್ಳಿ ಸಂಘ’

ನಾ ಕಾರಂತ ಪೆರಾಜೆ

ಹಸಿರು ಮಾತು

1

ಹಿಡಿಯಗಲದ ಮೊಬೈಲ್ನಲ್ಲಿ ಪ್ರಪಂಚವನ್ನು ಕಾಣುವಷ್ಟು ಮುಂದುವರಿದಿದ್ದೇವೆ! ಈ ಓಟದಲ್ಲಿ ‘ಓಡಲೇಬೇಕಾದ್ದು’ ಅನಿವಾರ್ಯ. ಓಡುವ ವೇಗದಲ್ಲಿ ಸಂಬಂಧಗಳು, ಬಾಂಧವ್ಯಗಳು, ಕುಟುಂಬ ಅನ್ಯೋನ್ಯತೆಗಳು ಮಸುಕಾಗುತ್ತಿವೆ. ದೊಡ್ಡಪ್ಪನ ಮಕ್ಕಳು, ಚಿಕ್ಕಪ್ಪನ ಮಕ್ಕಳು ಯಾರೆಂದೇ ಗೊತ್ತಿರುವುದಿಲ್ಲ. ‘ಗೊತ್ತಿರಬೇಕಾಗಿಲ್ಲ’ ಎಂದು ವಾದಿಸುವವರೂ ಇಲ್ಲದಿಲ್ಲ!

ಕೌಟುಂಬಿಕ ವಾತಾವರಣವೂ ಮುಖ್ಯ ಕಾರಣ. ಉದಾ: ನನ್ನದೇ ಉದಾಹರಣೆ! ಹೊಟ್ಟೆಪಾಡಿಗಾಗಿ ಕೇರಳದ ಆ ತುದಿಯಿಂದ ಈ ತುದಿಗೆ ತಂದೆಯವರು ಬಂದಾಗ – ಬಂಧುಗಳು ಅಪರೂಪವಾದರು. ತಂದೆಯಣ್ಣ ತಿರುವನಂತಪುರದಲ್ಲಿ ವಾಸ. ಅವರ ಮಕ್ಕಳೆಲ್ಲರೂ ಅಲ್ಲೇ ಉದ್ಯೋಗ ಹಿಡಿದು ‘ಸೆಟ್ಲ್’ ಅಗಿದ್ದಾರೆ. ದೊಡ್ಡಪ್ಪನನ್ನು ಒಮ್ಮೆಯೂ ಕಂಡದ್ದಿಲ್ಲ. ಮತ್ತೆ ಅವರ ಮಕ್ಕಳ ಗುರುತು ಸಿಕ್ಕಿತೇ? ಅಪರೂಪಕ್ಕೆ ಭೇಟಿಯಾದಾಗ ಅಪರಿಚಿತರಂತೆ ಇರಬೇಕಾದ ‘ಏಕಾಂತ’! ಮಾತಿಗೆಳೆದರೂ ‘ಮಾತುಸಿಗದಷ್ಟು’ ಅಂತರ. ಭಾಷಾ ಸಮಸ್ಯೆಯೂ ಇತ್ತು. ಅದು ದೊಡ್ಡದಲ್ಲ ಬಿಡಿ. ಭುಜಹಾರಿಸುತ್ತಾ, ಕೈಸನ್ನೆ ಮಾಡುತ್ತಾ, ಮುಖ ಕಿವುಚುತ್ತಾ ಮಾತನಾಡಬಹುದು. ಆದರೆ ವಿಷಯ ಬೇಕಲ್ಲಾ!

‘ಒಲೆಯೊಂದು ಹತ್ತಾದಾಗ ಸಮಸ್ಯೆಯೂ ತಲೆ ಮೇಲೆ ಕೂರುತ್ತೆ’ ಕೊಪ್ಪದ ವಸಂತ್ ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಇದು ವಸಂತರ ಸಮಸ್ಯೆ ಮಾತ್ರವಲ್ಲ. ಮನೆಮನೆಯ ಸಮಸ್ಯೆ. ಎಲ್ಲರ ಸಮಸ್ಯೆ.ಇದರಿಂದ ಬಿಡುಗಡೆ ಹೇಗೆ? ಇದಕ್ಕೊಂದು ಸಂಘಟನೆ ಇದ್ದರೆ? ಒಂದೋ ಎಲ್ಲರೂ ಒಟ್ಟಾಗಲು ಅಥವಾ ದೂರವಿದ್ದೇ ಅರ್ಥಮಾಡಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಕೊನೇ ಪಕ್ಷ ಸಂವಹನವಾದರೂ ನಡೆದೀತು.

ಈ ಆಲೋಚನೆ ಗಿರಿಕಿಯಲ್ಲಿರುವಾಗಲೇ ಕೋಡಪದವಿನ ಕಿನಿಲ ಅಶೋಕರಲ್ಲಿಗೆ ಹೋಗಿದ್ದೆ. ಮಾತಿನ ಮಧ್ಯೆ ತಾನಿರುವ ಹಿರಿಮನೆಯ ‘ಪುಳ್ಳಿ ಸಂಘ’ವನ್ನು ಜ್ಞಾಪಿಸಿಕೊಂಡರು. (ಪುಳ್ಳಿ ಅಂದರೆ ಮೊಮ್ಮಗ, ಮೊಮ್ಮಗಳು) ಅರೇ, ಸಹಕಾರ ಸಂಘವನ್ನು ಕೇಳಿದ್ದೇನೆ. ಇತರ ಕಲಾ ಸಂಘಗಳು ಗೊತ್ತು. ಜಾತಿ ಸಂಘಗಳನ್ನು ದೂರದಿಂದ ನೋಡಿದ್ದೇನೆ. ಆದರೆ ‘ಪುಳ್ಳಿ ಸಂಘ’?

ಈ ಸಂಘಕ್ಕೆ ಕುಟುಂಬದ ‘ದೊಡ್ಡಪುಳ್ಳಿ’ ಅಧ್ಯಕ್ಷ. ಶುಭ ಸಮಾರಂಭಗಳಿಗೆ ಎಲ್ಲಾ ಸದಸ್ಯರು ಸೇರಿದಾಗ ಹಿರಿಯಜ್ಜನ ಉಸ್ತುವಾರಿಕೆಯಲ್ಲಿ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಕೈಬರೆಹದ ‘ಕಾಟಂಕೋಟಿ’ ಎಂಬ ವಾರ್ತಾಪತ್ರ. ಅದಕ್ಕೊಬ್ಬ ಸಂಪಾದಕ. ಎರಡು ದಶಕಗಳ ಹಿಂದಿನವರೆಗೂ ಸುಮಾರು 40-45 ಪುಳ್ಳಿಗಳಿದ್ದ ಸಂಘ ನಮ್ಮ ಮನೆಯಲ್ಲಿತ್ತು – ಅಶೋಕರು ತಮ್ಮ ನೆನಪಿನಾಳದಿಂದ ಒಂದಷ್ಟನ್ನು ಮೊಗೆಯುತ್ತಾರೆ.

ಜತೆಯಲ್ಲಿದ್ದ ಮಂಚಿ ಶ್ರೀನಿವಾಸ ಆಚಾರ್ರಿಗೆ ಪುಳ್ಳಿ ಸಂಘ ಪ್ರೇರಣೆ ನೀಡಿತು. ಮಂಚಿ ಮನೆಯಲ್ಲಿ ತಮ್ಮ ತೀರ್ಥರೂಪರ ನೆನಪಿನಲ್ಲಿ ‘ಮಂಚಿ ನಾರಾಯಣ ಆಚಾರ್ ಪುಳ್ಳಿ ಸಂಘ’ಕ್ಕೆ ಚಾಲನೆ ನೀಡಿದರು. ಮೊದಲ ಕಾರ್ಯ ವಾರ್ತಾಪತ್ರ ಪ್ರಕಟಣೆ. ಕುಟುಂಬದ ಸದಸ್ಯರೊಳಗೆ ಬಾಂಧವ್ಯ ಬೆಳೆಯುವಂತೆ ಹಾಗೂ ಬೇರೆಡೆ ನೆಲೆಸಿರುವವರಲ್ಲಿ ಸಂಪರ್ಕ, ಮಾಹಿತಿ ವಿನಿಮಯ ಹೂರಣ.

ಮಂಚಿ ನಾರಾಯಣ ಆಚಾರ್ರವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಹಲವು ಪ್ರಥಮಗಳ ರೂವಾರಿ. ಹತ್ತು ಮಕ್ಕಳ ತಂದೆ. 24 ಮೊಮ್ಮಕ್ಕಳು, 23 ಮರಿಮಕ್ಕಳು, 15 ಸಂಗಾತಿಗಳು..ಹೀಗೆ ದೊಡ್ಡ ಸಂಸಾರ. ಇವರೆಲ್ಲರೂ ಈಗ ಪುಳ್ಳಿ ಸಂಘದ ಸದಸ್ಯರು!ಪ್ರಕಟಿತ ವಾರ್ತಾಪತ್ರದಲ್ಲಿ ಕುಟುಂಬ ವಂಶಾವಳಿ; ಮೊಮ್ಮಕ್ಕಳು, ಜೀವನಸಂಗಾತಿಗಳು, ಮರಿಮಕ್ಕಳ ವಿವರಗಳು, ಮೊಮ್ಮಕ್ಕಳ ಪ್ರಸ್ತುತ ವಿದ್ಯಾಭ್ಯಾಸ, ಉದ್ಯೋಗದ ವಿವರ, ರಸಪ್ರಶ್ನೆ, ನಿಕಟ ಭವಿಷ್ಯದ ಕೌಟುಂಬಿಕ ಕಾರ್ಯಕ್ರಮ…ಇವಿಷ್ಟು. ಇದು ಅನಿಯತಕಾಲಿಕ ಪ್ರಕಟಣೆ. ಮೊದಲ ಸಂಚಿಕೆಯನ್ನು 80ರ ಅಜ್ಜಿ (ಈಗ ದಿವಂಗತ) ಪದ್ಮಾವತಿಯವರಿಗೆ ಸಮರ್ಪಿಸಿದ್ದಾರೆ.

ಕಳೆದ್ಮೂರು ವರುಷದಲ್ಲಿ ಐದಾರು ವಾರ್ತಾಪತ್ರಗಳು ಪ್ರಕಟಗೊಂಡಿವೆ. ಹಿರಿಮನೆಯ ಆಗುಹೋಗುಗಳ ಕುರಿತು ಮಾಹಿತಿ ನೀಡಬಲ್ಲ ಇಂತಹ ಕೌಟುಂಬಿಕ ವಾರ್ತಾಪತ್ರವು ದೂರದೂರಿನ ಮನೆಬಂಧುಗಳಿಗೆ ಒಂದು ಮಾತನಾಡುವ ವೇದಿಕೆ. ಕುಟುಂಬವನ್ನು ಹತ್ತಿರದಿಂದ ನೋಡುವ ವ್ಯವಸ್ಥೆಯಿದು. ಮಂಚಿ ಶ್ರೀನಿವಾಸ ಆಚಾರ್, ಕಿನಿಲ ಅಶೋಕ….ತಮ್ಮ ಕುಟುಂಬದ ವಂಶಾವಳಿಯನ್ನು ತಯಾರಿಸಿ, ಅದನ್ನು ತಮ್ಮ ಕುಟುಂಬದ ಮಂದಿಗೆ ಹಂಚಿದ್ದಾರೆ. ‘ಮೊದಲು ಕುಟುಂಬವನ್ನು ಅರಿಯೋಣ, ಮತ್ತೆ ಪ್ರಪಂಚವನ್ನು ಅರಿಯೋಣ’ ಎಂಬ ಮಾತನ್ನು ಸಾಕಾರಗೊಳಿಸಿದ್ದಾರೆ.

ಪರಿಸ್ಥಿತಿಯ ಕೈಗೊಂಬೆಯಿಂದಾಗಿ ಚದುರಿದ್ದ ಕೌಟುಂಬಿಕರನ್ನು ಪುಳ್ಳಿಸಂಘವು ಒಟ್ಟು ಮಾಡುತ್ತದೆ. ಮನಸ್ಸು-ಮನಸ್ಸುಗಳನ್ನು ಬೆಸೆಯುತ್ತದೆ. ಅಜ್ಜ, ಮುತ್ತಜ್ಜ, ತಾತ…ಶಬ್ದದ ಉಚ್ಚಾರದ ಮೂಲಕ ಮತ್ತೊಮ್ಮೆ ಕುಟುಂಬ ಸಂತೋಷವನ್ನು ಅನುಭವಿಸುವಂತೆ ಮಾಡುತ್ತದೆ.ಈಚೆಗೆ ‘ವಂಶಾವಳಿ’ಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ದಾಖಲಾತಿ ನಡೆಯುತ್ತಿದೆ. ಹಿರಿಯರನ್ನು ಜ್ಞಾಪಿಸುವ, ಬದುಕನ್ನು ಹಿಂತಿರುಗಿ ನೋಡುವ ಅಭ್ಯಾಸ ಶುರುವಾಗಿದೆ

%d bloggers like this: