ಎಲ್ಲೆಲ್ಲೂ ಸಂಗೀತವೇ…

ನಿನ್ನೆ ವಿಶ್ವ ಸಂಗೀತ ದಿನ.

ಸಂಗೀತವೆಂಬ ದೋಣಿಯ ಏರದವರಾರು?

ಹಾಗಾಗಿ ಸಂಗೀತಕ್ಕೊಂದು ನಮನ.

MusicLegs goldbacknotes 1.3518.1160398920!music scroll music-1 (1)

ಮಣಿಕಾಂತ್ ಕೇಳುತ್ತಾರೆ: ಕಣ್ಣೀರ ಧಾರೆ ಇದೇಕೆ ಇದೇಕೆ?

551

-ಎ ಆರ್ ಮಣಿಕಾಂತ್

ಚಿತ್ರ: ಹೊಸಬೆಳಕು.

ಗೀತೆರಚನೆ: ಚಿ. ಉದಯಶಂಕರ್.

ಸಂಗೀತ: ಎಂ. ರಂಗರಾವ್.

ಗಾಯನ: ಡಾ. ರಾಜ್ ಕುಮಾರ್ .

ಕಣ್ಣೀರ ಧಾರೆ ಇದೇಕೆ ಇದೇಕೆ

ನನ್ನೊಲವಿನಾ ಹೂವೆ ಈ ಶೋಕವೇಕೆ ||ಪ||

ವಿಧಿಯಾಟವನು ಬಲ್ಲವರು ಯಾರು

ಮುಂದೇನು ಎಂದು ಹೇಳುವರು ಯಾರು

ಬರುವುದು ಬರಲೆಂದು ನಗುನಗುತ ಬಾಳದೆ

ನಿರಾಸೆ ವಿಷಾದ ಇದೇಕೆ ಇದೇಕೆ ||1||

ಬಾಳೆಲ್ಲಾ ನನಗೆ ಇರುಳಾದರೇನು?

ಜತೆಯಾಗಿ ಎಂದೆಂದೂ ನೀನಿಲ್ಲವೇನು

ನಾ ನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ

ನಿನ್ನಲ್ಲಿ ನೋವು ಇದೇಕೆ ಇದೇಕೆ ||2||

raj_singingಗಜಲ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವಾತ ಮೆಹದಿ ಹಸನ್. ರಾಜಸ್ಥಾನದ ಪುಟ್ಟ ಹಳ್ಳಿಯಲ್ಲಿ ಜನಿಸಿದ ಹಸನ್ ಅವರ ಕುಟುಂಬ, ನಂತರ ಪಾಕಿಸ್ತಾನಕ್ಕೆ ವಲಸೆ ಹೋಯಿತು. ಗಜಲ್ ಗಾಯನದಲ್ಲಿ ಗೌರಿಶಂಕರದಷ್ಟು ಖ್ಯಾತಿ ಪಡೆದಿರುವ ಮೆಹದಿ ಹಸನ್, ಸರಿಸಾಟಿಯಿಲ್ಲದ ಹಾಡುಗಾರ ಎನಿಸಿಕೊಂಡವರು. ಈ ಕಾರಣಕ್ಕೇ ಅವರಿಗೆ ಗಜಲ್ ಕ್ಷೇತ್ರದ ಷೆಹೆನ್ಶಾ ಎಂಬ ಬಿರುದು ಸಂದಿತು. ಹಸನ್ ಅವರ ಕಟ್ಟಾ ಅಭಿಮಾನಿಗಳ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಇದ್ದಾರೆ. 1978ರಲ್ಲಿ, ವಾಜಪೇಯಿ ಅವರ ನಿವಾಸದಲ್ಲಿ ಹಸನ್ ಅವರ ಗಾಯನ ಕಛೇರಿ ಕೂಡ ನಡೆದಿತ್ತು. ಹಸನ್ ಅವರು `ಮೊಹಬ್ಬತ್ ಕರ್ನೇವಾಲೆ ಕಮ್ ನಾ ಹೋಂಗೆ, ತೇರಿ ಮೆಹಫಿಲ್ ಮೆ ಲೇಕಿನ್ ಹಮ್ ನಾ ಹೋಂಗೆ’ ಎಂದು ಹಾಡಲು ಶುರುಮಾಡಿದರೆ, ಕೂತಲ್ಲೇ ಕಣ್ಣೀರಾಗುತ್ತಿದ್ದವರಿಗೆ ಲೆಕ್ಕವಿಲ್ಲ. `ಜಿಂದಗಿ ಮೆ ತೋ ಸಭೀ ಪ್ಯಾರ್ ಕಿಯಾ ಕರ್ತೆ ಹೈ, ಮೈ ತೋ ಮರ್ ಭಿ ಮೇರಿಜಾನ್ ತುಝೆ ಚಾಹೂಂಗಾ…’ ಎಂಬ ಹಾಡಿಗೆ ಹಸನ್ ಹೊರಳಿಕೊಂಡರಂತೂ ಕೇಳುಗರು ಬಿಕ್ಕಳಿಸಿ ಅಳಲು ಶುರುಮಾಡಿಬಿಡುತ್ತಿದ್ದರು.

ಇದೇನಿದು ವಿಚಿತ್ರ? ಹಾಡು ಹುಟ್ಟಿದ ಸಮಯದ ಬಗ್ಗೆ ಹೇಳಲು ಹೊರಟು ಮೆಹದಿ ಹಸನ್ ಪುರಾಣ ಶುರುಮಾಡಿದ್ದಾದರೂ ಏಕೆ ಎಂಬ ಅನುಮಾನ ಈ ವೇಳೆಗೆ ಹಲವರನ್ನು ಕಾಡಿರಬಹುದು. ಹೋಲ್ಡಾನ್, ಹೋಲ್ಡಾನ್… ಮೆಹದಿ ಹಸನ್ ಅವರ ಗಜಲ್ ಗಳು ವರನಟ ರಾಜ್ ಕುಮಾರ್ ಅವರಿಗೂ ತುಂಬ ಪ್ರಿಯವಾಗಿದ್ದವು. `ಹೊಸಬೆಳಕು’ ಚಿತ್ರದ ಸೂಪರ್ ಹಿಟ್ ಗೀತೆ `ಕಣ್ಣೀರ ಧಾರೆ ಇದೇಕೆ ಇದೇಕೆ…’ಗೆ ಮೆಹದಿ ಹಸನ್ ರ ಗಜಲ್ ಗಳು ಪರೋಕ್ಷವಾಗಿ ಸ್ಫೂರ್ತಿ ನೀಡಿದವು ಎಂದು ಹೇಳಬೇಕಾಗಿ ಬಂದಿದ್ದರಿಂದ, ಅವರ ಬಗ್ಗೆ ಸ್ವಲ್ಪ ವಿವರವಾಗಿ ಬರೆಯಬೇಕಾಯಿತು.

ಅಂದಹಾಗೆ, `ಕಣ್ಣೀರ ಧಾರೆ…’ ಹಾಡಿನ ಹಿಂದೆ ಮೆಹದಿ ಹಸನ್ ಅವರ ಗಾಯನದ ಸ್ಫೂರ್ತಿಯಿದೆ ಎಂಬ ಅಮೂಲ್ಯ ಮಾಹಿತಿ ನೀಡಿದವರು `ಹೊಸ ಬೆಳಕು’ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ಭಗವಾನ್. ಈ ಸಂಬಂಧದ ವಿವರಣೆಯನ್ನು ಭಗವಾನ್ ಅವರ ಮಾತುಗಳಲ್ಲಿಯೇ ಕೇಳಿದರೆ ಚೆಂದ. ಓವರ್ ಟು ಭಗವಾನ್:

`ಮೆಹದಿ ಹಸನ್ ಅವರ ಗಜಲ್ ಎಂದರೆ ಡಾ. ರಾಜ್ ಕುಮಾರ್ ಅವರಿಗೆ ಪಂಚಪ್ರಾಣ. ಹಸನ್ ಹಾಡಿದ ಗಜಲ್ಗಳ 50ಕ್ಕೂ ಹೆಚ್ಚು ಕ್ಯಾಸೆಟ್ ಗಳು ಡಾ. ರಾಜ್ ಅವರ ಬಳಿ ಇದ್ದವು. ಪ್ರಯಾಣದ ಸಂದರ್ಭ ಕಾರಿನಲ್ಲಿ ; ಶೂಟಿಂಗ್ ನಡುವಿನ ವಿರಾಮದ ವೇಳೆಯಲ್ಲಿ ಈ ಗಜಲ್ಗಳನ್ನು ಕೇಳುತ್ತ ರಾಜ್ ಮೈಮರೆಯುತ್ತಿದ್ದರು. ಸ್ವಾರಸ್ಯವೆಂದರೆ, ಡಾ. ರಾಜ್ ಅವರಿಗೆ ಹಿಂದಿಯಾಗಲಿ, ಉರ್ದುವಾಗಲೀ ಸಂಪೂರ್ಣವಾಗಿ ಗೊತ್ತಿರಲಿಲ್ಲ. ಆದರೂ ಮೆಹದಿ ಹಸನ್ ಅವರ ಗಜಲ್ಗಳು ಅವರ ಮನಸ್ಸಿಗೆ, ಹೃದಯದ ಭಾಷೆಗೆ ಅರ್ಥವಾಗುತ್ತಿದ್ದವು. ಗಜಲ್ಗಳನ್ನು ಕೇಳುತ್ತ ಕೇಳುತ್ತ ಭಾವಪರವಶರಾಗುತ್ತಿದ್ದ ರಾಜ್ಕುಮಾರ್- `ಈ ಹಾಡಿನಲ್ಲಿರುವ ಯಾವುದೋ ಆಪ್ತ ಭಾವ ನನ್ನನ್ನು ತುಂಬಾ ಕಾಡ್ತಾ ಇದೆ. ಈ ಹಾಡಿನಲ್ಲಿರೋದು ಹೃದಯದ ಭಾಷೆ. ಹಸನ್ ಸಾಹೇಬರು ಕೇವಲ ನನಗೋಸ್ಕರ ಅಂತಾನೇ ಈ ಹಾಡುಗಳನ್ನು ಹಾಡಿದರೇನೋ ಅನಿಸುತ್ತೆ. ಅವರ ಕೆಲವೊಂದು ಹಾಡುಗಳನ್ನು ಕೇಳ್ತಾ ಇದ್ರೆ ಯಾಕೋ ಖುಷಿಯಾಗುತ್ತೆ. ಯಾಕೋ ಕಣ್ತುಂಬಿ ಬರುತ್ತೆ’ ಅನ್ನುತ್ತಿದ್ದರಂತೆ.

raj_singingಮುಂದೆ ‘ಹೊಸಬೆಳಕು’ ಚಿತ್ರದ ಚಿತ್ರಕಥೆ-ಸಂಭಾಷಣೆಯ ಚರ್ಚೆ ಶುರುವಾದಾಗ ಕೂಡ, ಬಿಡುವಿನ ವೇಳೆಯಲ್ಲಿ ಮೆಹದಿ ಹಸನ್ ರ ಗಜಲ್ಗಳನ್ನು ಕೇಳಿದ ರಾಜ್ ಕುಮಾರ್ ಮತ್ತೆ ಭಾವುಕರಾಗಿ ಮಾತಾಡಿದರಂತೆ. ಜತೆಗಿದ್ದ ಚಿ. ಉದಯಶಂಕರ್ ತಕ್ಷಣವೇ- `ನೀವು ತುಂಬಾ ಸೆಂಟಿಮೆಂಟಲ್ ಆಗಿಬಿಟ್ರಿ’ ಎಂದರಂತೆ. ಆಗ ರಾಜ್- `ಹಾಗಲ್ಲ ಉದಯಶಂಕರ್ ಅವರೇ, ಹಸನ್ ಸಾಹೇಬರ ಹಾಡುಗಳ ಮೋಡಿ ಹಾಗಿದೆ. ಅವರು ವಿಷಾದ ಗೀತೆ ಹಾಡುವುದನ್ನು ಕೇಳಿದ್ರೆ, ಹಾಡಿನ ಭಾವಾರ್ಥ ತಿಳಿಯದಿದ್ರೂ ಕಣ್ಣೀರು ಬರುತ್ತೆ. ನಮ್ಮ ಹೊಸ ಸಿನಿಮಾದಲ್ಲೂ ಅಂಥದೇ ಒಂದು ಹಾಡು ಹಾಕೋಣ. ನೀವೇ ಬರೆದು ಕೊಡಿ. ಚಿತ್ರದಲ್ಲಿ ನಾಯಕ ಕುರುಡ ಆಗಿರ್ತಾನಲ್ಲ? ಅವನ ಅವಸ್ಥೆಯನ್ನು ಕಂಡು ನಾಯಕಿ ಮೌನವಾಗಿ ಅಳುವ ಸೀನ್ ಇದೆಯಲ್ಲ? ಆ ಜಾಗಕ್ಕೆ ಈ ಶೋಕಗೀತೆ ಹಾಕುವಾ. ಹಾಡಿಗೆ ಅದು ಒಳ್ಳೇ ಜಾಗ’ ಎಂದರಂತೆ. ಅಲ್ಲಯೇ ಇದ್ದ ವರದಪ್ಪನವರು ಕೂಡ-`ಹೌದು ಸಾರ್, ವಿಷಾದಗೀತೆಗೆ ಆ ಜಾಗ ಚೆನ್ನಾಗಿದೆ. ಅದು ಶೋಕಗೀತೆಯಂತಿರಲಿ; ಜತೆಗೆ ನೊಂದವರಿಗೆ ಸಮಾಧಾನ ಹೇಳುವ ಧಾಟಿಯಲ್ಲೂ ಇದ್ರೆ ಇನ್ನೂ ಚೆನ್ನಾಗಿರುತ್ತೆ’ ಎಂದರಂತೆ.

More

%d bloggers like this: