ಈ ಹಾಡು ನನ್ನನ್ನು ಬಿಡುತ್ತಿಲ್ಲ…

-ಅಪಾರ

mughal-e-azamಮುಂಗೈವರೆಗೆ ಬಿಳಿಯ ಉಡುಪು ತೊಟ್ಟ ಅನಾರ್ಕಲಿ ತುಂಬಿದ ದರ್ಬಾರಿನಲ್ಲಿ ಸಿಂಗಾರಗೊಂಡು ನಿಂತಿದ್ದಾಳೆ. ಚರ್ಕವರ್ತಿ ಅಕ್ಬರನ ಮಗನನ್ನು ಪ್ರೇಮಿಸಿದ ನರ್ತಕಿ ಅವಳು. ಆ ತಪ್ಪಿಗಾಗಿ ಸಂಕೋಲೆಗಳಲ್ಲಿ ಬಂದಿಯಾಗಿ ‘ಮೊಹಬ್ಬತ್ ಕೀ ಝೂಟಿ ಕಹಾನಿ ಪೆ ರೋಯೆ’ ಎಂದು ಸ್ಪಲ್ಪ ಹೊತ್ತಿನ ಹಿಂದೆ ಕಣ್ಣೀರು ಹಾಕುತ್ತಿದ್ದಾಕೆ ಅವಳೇನೆ? ಈ ನೃತ್ಯದ ನಂತರ ಅವಳು ಮತ್ತೆಲ್ಲೂ ಯಾರಿಗೂ ಕಾಣಿಸಿಕೊಳ್ಳದಂತೆ ಮರೆಯಾಗಬೇಕಿದೆ. ಹಾಗೆಂದು ಒತ್ತಡ ಹೇರಿ ಈಗ ಸಿಂಹಾಸನದ ಮೇಲೆ ನರ್ತನ ಆಸ್ವಾದಿಸುತ್ತಾ ಕೂತಿರುವ ಅಕ್ಬರನ ತುಟಿಯಲ್ಲಿ ಕಿರುನಗೆ. ಅವನಿಗೆ ಗೊತ್ತಿಲ್ಲ, ಆ ಒಂದು ಗಳಿಗೆಯಲ್ಲಿ ಅನಾರ್ಕಲಿ ತನ್ನೆಲ್ಲ ಭಯಗಳನ್ನು ದೂರಗೊಳಿಸಲು ನಿರ್ಧರಿಸಿದ್ದಾಳೆಂದು!

ತುಂಬಿದ ಸಭೆಯಲ್ಲಿ ಚಕ್ರವರ್ತಿಯ ಎದುರು ನಿಂತು ‘ಜಾನ್ ಬಿ ಲೇಲೇ ಚಾಹೆ ಜಮಾನಾ’ ಎನ್ನುವ ಅವಳ ಧೈರ್ಯವೇನು? ಮೌತ್ ವಹೀ ಜೋ ದುನಿಯಾ ದೇಖೆ, ಘುಟ್ ಘುಟ್ ಕೆ ಯೂ ಮರ್‍ನಾ ಕ್ಯಾ’ ಎಂದು ತೀರಾ ಸನಿಹಕ್ಕೆ ಹೋಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳುವ ಉದ್ಧಟತನವೇನು? ಈ ಧೈರ್ಯ, ಉದ್ಧಟತನಗಳನ್ನು ಹಾಡು ಮತ್ತು ನೃತ್ಯದ ಭಂಗಿಗಳಲ್ಲದೆ ಯಾವ ಡೈಲಾಗಿನಲ್ಲಾದರೂ ಅಷ್ಟು ಪರಿಣಾಮಕಾರಿಯಾಗಿ ತೋರಿಸಲಾಗುತ್ತಿತ್ತೆ? ತಾರಸಿಯ ಕನ್ನಡಿಗಳ ಮೇಲೆ ಕಾಣುವ ಅವಳ ಸಾವಿರಾರು ಚೂರುಬಿಂಬಗಳನ್ನು ನೋಡಲು ತಲೆಎತ್ತಿರುವ ಅಕ್ಬರನ ಮುಖವೆಷ್ಟು ಕಪ್ಪಿಟ್ಟಿದೆ! ಇನ್ನೊಂದು ಸಿಂಹಾಸನದ ಮೇಲೆ ಕುಳಿತಿರುವ ಸಲೀಂನ ಪ್ರೀತಿಯೂ ಇದೇ ಅಮೃತ ಗಳಿಗೆಯಲ್ಲಿ ಗಟ್ಟಿಗೊಂಡಿತೆ? ನೃತ್ಯ ಮುಗಿಸಿ ಸ್ತಬ್ಧಗೊಂಡಾಗ ತಿರುಗಿ ಬಿದ್ದು ಸದ್ದು ಮಾಡುವ ಅನಾರ್ಕಲಿಯ ಉಡುಪಿನ ಮಣಿಗಳೂ ಅವಳ ಆವೇಶದ ಒಂದು ಭಾಗವನ್ನು ಪಡೆದುಕೊಂಡಂತಿವೆ. ಮತ್ತೆ ಸೆರೆಮನೆಗೆ ಅಟ್ಟಿದ ಚಕ್ರವರ್ತಿಗೆ ಅವಳು ಬಾಗಿ ನಿಂತು, ಕೇವಲ ತೋಳನ್ನಷ್ಟೇ ಚಲಿಸಿ ಮೂರು ಬಾರಿ ಮಾಡುವ ಸಲಾಂನಲ್ಲೂ ಎಂಥ ಸ್ಪಷ್ಟ ಸಂದೇಶವಿದೆ!

ಹಾಲಿವುಡ್ ಚಿತ್ರಗಳಲ್ಲಿ ಹಾಡು ಕುಣಿತಗಳಿಲ್ಲ ಎಂಬುದನ್ನು ಉದಾಹರಿಸುತ್ತಾ, ನಮ್ಮ ಸಿನಿಮಾಗಳಲ್ಲಿರುವ ಹಾಡಿನ ಸನ್ನಿವೇಶಗಳನ್ನು ಅಗ್ಗದ ಮನರಂಜನೆ ಎಂಬಂತೆ ನಾವು ಭಾವಿಸುತ್ತೇವೆ. ಕತೆಯ ನಡುವಿನ ಅಡ್ಡಿಗಳೆಂದು ತಿಳಿಯುತ್ತೇವೆ. ನಮ್ಮ ಬಹುತೇಕ ನಿರ್ದೇಶಕರು ಹಾಡುಗಳನ್ನು ಬಳಸಿಕೊಳ್ಳುವುದೂ ಹಾಗೆಯೇ. ಆದರೆ ‘ಮೊಘಲ್ ಎ ಆಜಮ್ ’ ಸಿನಿಮಾದ ‘ಪ್ಯಾರ್ ಕಿಯಾ ತೊ ಡರ್‌ನಾ ಕ್ಯಾ’ ಹಾಡು ಆ ಇಡೀ ಕತೆಯನ್ನು ನಿರ್ದೇಶಿಸುವಷ್ಟು ಪ್ರಭಾವಶಾಲಿಯಾಗಿದೆ. ಈ ಹಾಡಿನಲ್ಲಿ ಹೇಳಿದ್ದನ್ನು ಸಂಭಾಷಣೆಯಿರುವ ಒಂದು ದೃಶ್ಯದಲ್ಲಿ ಹೇಳಲು ಆಗುತ್ತಲೇ ಇರಲಿಲ್ಲ ಎನಿಸುತ್ತದೆ. ಎಷ್ಟೋ ದಿನಗಳಾದ ಮೇಲೂ ಈ ಹಾಡು ನನ್ನನ್ನು ಬಿಡುತ್ತಿಲ್ಲ

ನೆರೂಡಾ ಬಗ್ಗೆ ಭಾಗೇಶ್ರೀ

ನೆರೂಡಾನನ್ನು ಅನುಸರಿಸಿ

PF_2315091~Pablo-Neruda-Chilean-Poet-and-Diplomat-Posters

ಈ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಹಿಗ್ಗಾಮಗ್ಗಾ ಹೊಡೆದಾಟ ಟಿವಿಯಲ್ಲಿ ನೋಡಿ ಇದರ ಹದಿನೈದು ವರ್ಷದ ಹಿಸ್ಟರಿ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕು, ಬ್ಲಾಗಲ್ಲಿ ಬರೀಬೇಕು ಅಂತ ಕೂತವಳ ಕಣ್ಣಿಗೆ ನೆರುಡಾ ಪದ್ಯಗಳು ಬಿದ್ದು ಈಗ ಕತೆ ಬೇರೆ ಆಗಿದೆ. ಈ ಸ್ಪಾನಿಶ್ ಕವಿಗಳು ರೆವಲ್ಯುಶನ್ನಿನಿಂದ ಹಿಡಿದು ರೊಮಾನ್ಸಿನವರೆಗೆ ಎಲ್ಲವನ್ನೂ ಇಷ್ಟು ಲಿರಿಕಲ್ಲಾಗಿ ಹೇಗೆ ಬರೀತಾರಪ್ಪ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡೇ ಎರಡು ರೂಪಾಂತರದ ಪ್ರಯತ್ನ. ನಾನು original ಪದ್ಯಗಳ ಜೊತೆ ಸಿಕ್ಕಾಪಟ್ಟೆ ಜಾಸ್ತಿಯೇ liberty ತೆಗೆದುಕೊಂಡಿರುವುದರಿಂದ ರೂಪಾಂತರ ಅಥವಾ ನೆರುಡಾ ಪ್ರೇರಿತ ಅನ್ನುವುದೇ ಲೇಸು. ಮಸೂದೆ ಮತ್ತೊಮ್ಮೆ…

ಸಂಪೂರ್ಣ ಓದಿಗೆ ಭೇಟಿ ಕೊಡಿ: ಭಾಗೇಶ್ರೀ

348px-Firma_Pablo_Neruda.svg

ನಟನ-ವಕ್ರ

vakra

%d bloggers like this: