ಸಂಚಯ-80

‘ಸಂಚಯ’ ತನ್ನ ೮೦ ನೆಯ ಸಂಚಿಕೆಯ ಸಂಭ್ರಮದಲ್ಲಿದೆ.

ಈ ಕಾರಣಕ್ಕಾಗಿಯೇ ಸಂಪಾದಕ ಡಿ ವಿ ಪ್ರಹ್ಲಾದ್ ಬನಶಂಕರಿ ಎರಡನೇ ಸ್ಟೇಜ್ ನಲ್ಲಿರುವ ಸುಚಿತ್ರ ಕಲಾ ಕೇಂದ್ರದಲ್ಲಿ ಬೆಳಗ್ಗೆ ೧೦ ಕ್ಕೆ ಪುಟ್ಟ ಕೂಟ ಇಟ್ಟುಕೊಂಡಿದ್ದಾರೆ. ಸಾಹಿತ್ಯ ಪ್ರಿಯರೆಲ್ಲರೂ ಈ ದಿಢೀರ್ ಕಾರ್ಯಕ್ರಮಕ್ಕೆ ತಪ್ಪದೆ ಬರಬೇಕು.

sanchaya cover page

ಜೋಗಿ ಬರೆದ ಕಥೆ: ಕಾರಣ

images

ನಮ್ಮ ಮನೆಯಲ್ಲಿ ಏನೂ ನಡೀತಿಲ್ಲ.

ತುಂಬ ವರ್ಷದಿಂದ ಹೀಗೇ ಬದುಕ್ತಾ ಇದ್ದೀವಿ. ಅಪ್ಪ ಬೆಳಗ್ಗೆ ಎದ್ದು ಬ್ಯಾಂಕಿಗೆ ಹೋಗ್ತಾರೆ. ಅಮ್ಮ ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ, ಅಡುಗೆ ಮಾಡಿ ಅಪ್ಪನಿಗೆ ಬುತ್ತಿ ಕಟ್ಟಿ ಕೊಡುತ್ತಾರೆ. ತಂಗಿ ಒಂಬತ್ತೂವರೆಗೆ ಸ್ಕೂಲಿಗೆ ಹೋಗುತ್ತಾಳೆ. ನಾನು ಆಫೀಸಿಗೆ ಹೊರಡುತ್ತೇನೆ. ಅಮ್ಮ ಸ್ನಾನ ಮುಗಿಸಿ, ಊಟ ಮಾಡಿ ಅಪ್ಪನ ಬಟ್ಟೆಗಳಿಗೆ ಇಸ್ತ್ರಿ ಮಾಡಿ, ಪಕ್ಕದ ಮನೆಯ ನಿರ್ಮಲಕ್ಕನನ್ನು ಮಾತಾಡಿಸಿ, ಸಣ್ಣಗೆ ನಿದ್ದೆ ಮಾಡಿ, ಮೂರೂವರೆ ಹೊತ್ತಿಗೆ ಮಹಡಿ ಮೇಲೆ ಆರಿಸಿದ ಬಟ್ಟೆಗಳನ್ನೆಲ್ಲ ತಂದು ಮಡಿಚಿ ಕಪಾಟಿನಲ್ಲಿಟ್ಟು, ಮೈದಾ ಹಿಟ್ಟು ಕಲಸಿ ಪೂರಿ ಮಾಡುವುದಕ್ಕೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಂಡು ನಾನೂ ತಂಗಿ ಅಪ್ಪ ಬರುವುದಕ್ಕೆ ಕಾಯುತ್ತಿರುತ್ತಾಳೆ. ನಾನೂ ಆರೂವರೆಗೆ ಮನೆಗೆ ಹೋಗುತ್ತೇನೆ. ತಂಗಿ ಐದೂವರೆಗೆಲ್ಲ ಬಂದಿರುತ್ತಾಳೆ. ಅಪ್ಪ ಏಳು ಗಂಟೆಗೆ ಮನೆಗೆ ಬರುತ್ತಾರೆ. ಒಬ್ಬೊಬ್ಬರು ಬರುತ್ತಿದ್ದ ಹಾಗೆ ಅಮ್ಮ ಬಿಸಿಬಿಸಿಯಾಗಿ ಪೂರಿ ಮಾಡಿ ಕೊಡುತ್ತಾಳೆ. ತಂಗಿ ಅದಕ್ಕೆ ಪೈನಾಪಲ್ ಜಾಮ್ ನೆಂಚಿಕೊಂಡು ತಿನ್ನುತ್ತಾಳೆ. ನಾನು ಆಲೂಗಡ್ಡೆ ಪಲ್ಯ ಹಾಕಿಕೊಳ್ಳುತ್ತೇನೆ. ಅಪ್ಪ ಮಧ್ಯಾಹ್ನದ ಅವರೇಕಾಳು ಹುಳಿಯೋ ಮತ್ತೊಂದೋ ಇದ್ದರೆ ಅದನ್ನೇ ಬೆರೆಸಿಕೊಂಡು ಪೂರಿ ತಿನ್ನುತ್ತಾ ಲೋಕಾಭಿರಾಮದ ಮಾತಾಡುತ್ತಾರೆ. ಆಮೇಲೆ ತಂಗಿ ಟ್ಯೂಷನ್ ಕ್ಲಾಸಿಗೆ ಹೋಗುತ್ತಾಳೆ. ನಾನು ಹೊರಗೆ ಸುತ್ತಾಡಲು ಹೋಗುತ್ತೇನೆ. ಅಪ್ಪ ಮೂಲೆಮನೆಯ ರೆಡ್ಡಿಯ ಜೊತೆ ಅವರ ಮನೆ ಜಗಲಿಯಲ್ಲಿ ಕೂತು ಮಾತಾಡುತ್ತಿರುತ್ತಾರೆ.

ಎಂಟೂವರೆಗೆ ಎಲ್ಲರೂ ಮನೆ ಸೇರುತ್ತೇವೆ. ನಂತರ ಎಲ್ಲರೂ ಕೂತು ಭಗವದ್ಗೀತೆ ಓದುತ್ತೇವೆ. ತುಂಬ ಬೇಸರವಾದ ದಿನ ಚೌಕಾಬಾರಾ ಆಡುತ್ತೇವೆ.. ಹತ್ತೂವರೆಗೆ ಮೊಸರನ್ನ ಊಟ ಮಾಡಿ ಮಲಗುತ್ತೇವೆ. ರಾತ್ರಿ ಎಷ್ಟೋ ಹೊತ್ತಿಗೆ ತಂಗಿ ಎದ್ದು ಫ್ಯಾನ್ ಆಫ್ ಮಾಡಿರುತ್ತಾಳೆ. ನಾನು ಎಚ್ಚರಾದರೆ ಮತ್ತೆ ಫ್ಯಾನ್ ಹಾಕುತ್ತೇನೆ. ಬೆಳಗ್ಗೆ ಏಳುವ ಹೊತ್ತಿಗೆ ತಂಗಿ ಆಗಲೇ ಎದ್ದು ಹಾಲು ತರಲು ಹೋಗಿರುತ್ತಾಳೆ. ಹೀಗೆ ನಾನು ಇಪ್ಪತ್ತಾರು ವರುಷಗಳಿಂದ, ತಂಗಿ ಹದಿನೇಳು ವರ್ಷಗಳಿಂದ, ಅಪ್ಪ ಐವತ್ತೆಂಟು ವರ್ಷದಿಂದ , ಅಮ್ಮ ಐವತ್ತೆರಡು ವರ್ಷಗಳಿಂದ ಬದುಕಿಕೊಂಡು ಬಂದಿದ್ದೇವೆ. ಯಾರಿಗೂ ಸಾಯಬೇಕು ಅನ್ನಿಸಿಲ್ಲ,. ಯಾರೂ ಕಣ್ಣೀರು ಹಾಕಿಲ್ಲ, ಅಪ್ಪ ಅಮ್ಮ ಯಾವತ್ತೂ ಜಗಳ ಆಡಿಲ್ಲ. ನಾನೂ ತಂಗಿ ಕೂಡ ಎಂದೂ ಹೊಡೆದಾಡಿಕೊಂಡಿಲ್ಲ. ಅಪ್ಪ ನನಗೆ ಯಾವತ್ತೂ ಬೈಯಲಿಲ್ಲ. ತಂಗಿ ಹುಡುಗರು ತಿವಿಯೋ ಹಾಗೆ ನೋಡ್ತಾರೆ ಅಂತ
ಎಂದೂ ದೂರಿಲ್ಲ.

E512~Bleu-II-Posters

ನೀವೆಲ್ಲ ಜಾಣರು. ನಿಮ್ಮನೆಯಲ್ಲಿ ಸುಖ ನಲಿದಾಡುತ್ತಿದೆ ಅಂತ ಬಂದುಹೋದವರೆಲ್ಲ ಹೇಳುತ್ತಾರೆ. ನಮ್ಮಪ್ಪ ಯಾರ ಜೊತೆಗೂ ಜಗಳ ಆಡಿದ್ದನ್ನು ಯಾರೂ ನೋಡಿಲ್ಲ. ಸಂಬಳದ ದಿನ ಅಷ್ಟೂ ಸಂಬಳ ತಂದು ಅಮ್ಮನ ಕೈಗೆ ಕೊಡುತ್ತಾರೆ. ಅಮ್ಮ ಅದನ್ನು ಹಾಲಿನವನಿಗೆ, ಪೇಪರಿನವನಿಗೆ, ತರಕಾರಿ ಅಂಗಡಿಗೆ, ದಿನಸಿ ಅಂಗಡಿಗೆ ಹಂಚುತ್ತಾಳೆ. ಉಳಿದ ಹಣವನ್ನು ದೇವರ ಮನೆಯಲ್ಲಿರುವ ಪೆಟ್ಟಿಗೆಯಲ್ಲಿ ಹಾಕಿಡುತ್ತಾಳೆ. ಮುಂದಿನ ತಿಂಗಳ ಸಂಬಳ ಬಂದ ನಂತರ ಅದನ್ನು ಅಮ್ಮನೇ ತೆಗೆದುಕೊಂಡು ಹೋಗಿ ಬ್ಯಾಂಕಿಗೆ ಜಮಾ ಮಾಡಿ ಬರುತ್ತಾಳೆ. ಹೀಗೆ ಕೂಡಿಟ್ಟ ದುಡ್ಡು ಎರಡೋ ಮೂರೋ ಲಕ್ಷ ಇರಬಹುದು. ಅದು ತಂಗಿಯ ಮದುವೆಗೆ ಎಂದು ಅಪ್ಪ ಅಮ್ಮ ಆಗಾಗ ಹೇಳುತ್ತಿರುತ್ತಾರೆ. ತಂಗಿ ಆಗೆಲ್ಲ ಕಿವಿಯನ್ನು ನೆಟ್ಟಗಾಗಿಸಿಕೊಂಡು ಅಮ್ಮನ ಮಾತು ಕೇಳುತ್ತಾ ಕೂತಿರುತ್ತಾಳೆ. ಅದರ ಬಗ್ಗೆ ಅವಳಿಗೆ ಯಾವ ಭಾವನೆಯೂ ಇದ್ದಂತೆ ಅನ್ನಿಸುವುದಿಲ್ಲ.

ವರುಷಕ್ಕೆ ಎರಡು ಬಾರಿ ಅಮ್ಮ ಎಲ್ಲರಿಗೂ ಹೊಸ ಬಟ್ಟೆ ತರುತ್ತಾಳೆ. ಒಮ್ಮೊಮ್ಮೆ ಅವಳೊಂದಿಗೆ ತಂಗಿಯೂ ಹೋಗಿ ಬರುತ್ತಾಳೆ. ಹಾಗೆ ತಂದ ಬಟ್ಟೆಯನ್ನು ನಾವು ದೀಪಾವಳಿಯ ದಿನ ಮತ್ತು ಯುಗಾದಿಯ ದಿನ ಹಾಕಿಕೊಳ್ಳುತ್ತೇವೆ. ಆವತ್ತು ಮನೆಯಲ್ಲಿ ಸಿಹಿತಿಂಡಿ ಮಾಡುತ್ತಾರೆ. ಅಪ್ಪ ಪೂಜೆ ಮಾಡುತ್ತಾರೆ.

ಇನ್ನಷ್ಟು

ಪವರ್ ಫುಲ್ ಯಶೋದಾ

Powerful Lady Coverpgae (1)

ಡಿ ಯಶೋದಾ -ಕನ್ನಡ ಪತ್ರಿಕೋದ್ಯಮಕ್ಕೆ ಚಿರಪರಿಚಿತ ಹೆಸರು. ಕಾಲಕ್ಕೆ ಕಟ್ಟುಬಿದ್ದು ಒದ್ದಾಡುವ ಪತ್ರಕರ್ತರ ಕಥೆಗಳನ್ನೆಲ್ಲಾ ಒಟ್ಟುಗೂಡಿಸಿ ‘ಡೆಡ್ ಲೈನ್ ವೀರರ ಕಥೆಗಳು’ ಎಂಬ ಪುಸ್ತಕ ರೂಪಿಸಿದ ಹುಡುಗಿ. ಆಕೆ ಒಟ್ಟು ಮಾಡಿದ ಪತ್ರಕರ್ತರು, ಪತ್ರಿಕೋದ್ಯಮದ ವಿಭಿನ್ನ ವಿಭಾಗಗಳು, ಒಂದೇ ಏಟಿಗೆ ಓದಿಸಿಕೊಳ್ಳುವ ಗುಣ ಎಲ್ಲವೂ ‘ಎಲಾ ಯಾರೀಕೆ?’ ಎಂದು ಹುಬ್ಬೇರುವಂತೆ ಮಾಡಿತ್ತು.

ಈಗ ಈ ಪುಸ್ತಕ ಪತ್ರಿಕೋದ್ಯಮ ವಿಭಾಗಗಳ ರೆಫರೆನ್ಸ್ ಗ್ರಂಥ. ವೃತ್ತಿನಿರತರಿಗೆ ಮಾರ್ಗದರ್ಶಿ. ಈ ಪುಸ್ತಕದ ಎರಡನೆಯ ಮುದ್ರಣ ಮೈಸೂರು ವಿಶ್ವವಿದ್ಯಾಲದ ಪ್ರಸಾರಾಂಗದಿಂದ ಸಜ್ಜಾಗುತ್ತಿದೆ. ಇರಲಿ ಬಿಡಿ ಇದು ಹಳೆ ಕಥೆ. ನಾಳೆ ಈಕೆಯ ಹೊಸ ಪುಸ್ತಕ ‘ಪವರ್ ಫುಲ್ ಲೇಡಿ’ ಬಿಡುಗಡೆಯಾಗುತ್ತಿದೆ.

ಕನ್ನಡಪ್ರಭದ ಮಹಿಳಾ ಸಂಚಿಕೆಯಲ್ಲಿ ಈಕೆ ನಿರಂತರವಾಗಿ ‘ಧನ-ಕನಕ’ ಅಂಕಣ ಬರೆದರು. ಮನೆಯಲ್ಲಿದ್ದೇ ಹೊಸ ಸಾಹಸದ ಬೆನ್ನಟ್ಟಿ ತಮ್ಮ ಕಾಲ ಮೇಲೆ ತಾವೇ ನಿಂತುಕೊಂಡು ಮಾದರಿಯಾದವರ ಕಥೆ ಇದು. ‘ಈ ಅಂಕಣದಲ್ಲಿ ಬಂದ ಮಹಿಳೆಯರಿಗೆ ಒಂದು ಆತ್ಮವಿಶ್ವಾಸ ಸಿಕ್ಕಿತು. ಅಷ್ಟೇ ಅಲ್ಲ, ಇವರ ಸಾಹಸ ಉಳಿದವರಿಗೆ ಮಾದರಿಯಾಯಿತು. ಅಷ್ಟೇ ಅಲ್ಲವೇ ಅಲ್ಲ, ಇದು ಎಷ್ಟೊಂದು ಮಂದಿಗೆ ಬದುಕುವ ದಾರಿ ಕೊಟ್ಟುಬಿಟ್ಟಿತು’ ಎನ್ನುವಾಗ ಯಶೋದಾ ಮುಖದಲ್ಲಿ ತೃಪ್ತಿಯ ಅಲೆ.

ವಸಂತ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಬೆಂಗಳೂರಿನ ಗಾಂಧೀ ಭವನದಲ್ಲಿ ಭಾನುವಾರ ಬೆಳಗ್ಗೆ ೧೦-೩೦ ಕ್ಕೆ ಬಿಡುಗಡೆ. ಪತ್ರಕರ್ತರ ಬಳಗ ಮಾತ್ರವಲ್ಲ ನೀವೂ ಅಲ್ಲಿರುತ್ತೀರಿ ಎಂಬ ನಂಬಿಕೆ ಯಶೋದ ಅವರದ್ದು. ಹುಸಿಯಾಗದಿರಲಿ.


ಅಪ್ಪ ಎಂಬ…

Father-child ready to blog 13

ಅಪ್ಪನ ದಿನ ನಾಳೆ. ಸದಾ ಭಿನ್ನ ಕಣ್ಣಿನಿಂದ ಜಗತ್ತನ್ನು ನೋಡುವ ಕೆ ಶಿವು ಅಪ್ಪನನ್ನೂ ಭಿನ್ನ ಕಣ್ಣಿಂದ ನೋಡಿದ್ದಾರೆ.

ಭೇಟಿ ಕೊಡಿ –ಛಾಯಾಕನ್ನಡಿ

%d bloggers like this: