ಯಾಕೋ ನೆನಪಾದರು ‘ವ್ಯಾಸ’

New Picture

ಆಕೆ ಮಡಿಕೇರಿಯ ಸಮೀಪದ ಹಳ್ಳಿಯವಳು…

BJB_Title_01ಜೀ ಕನ್ನಡ ಚಾನಲ್ ಪ್ರಸಾರ ಮಾಡುತ್ತಿರುವ ವಿಭಿನ್ನವಾದ ಕಾರ್ಯಕ್ರಮ -ಬದುಕು ಜಟಕಾ ಬಂಡಿ. ಉದಯವಾಣಿಯಲ್ಲಿದ್ದ, ಚಲನಚಿತ್ರಗಳ ಬಗ್ಗೆ ಅಪಾರ ಆಸಕ್ತಿ ಇದ್ದ ಪರಮೇಶ್ವರ ಗುಂಡ್ಕಲ್ ಜೀ ಚಾನಲ್ ನ ಮನರಂಜನಾ ವಿಭಾಗದ ಮುಖ್ಯಸ್ಥರಾದ ನಂತರ ಕಾರ್ಯಕ್ರಮಗಳಲ್ಲಿ ಲವಲವಿಕೆ ಕಾಣಿಸಿಕೊಂಡಿದೆ. ಅಂತಹ ಕಾರ್ಯಕ್ರಮಗಳಲ್ಲೊಂದು ‘ಬದುಕು ಜಟಕಾ ಬಂಡಿ’

ಮಾರ್ಗರೆಟ್ ಆಳ್ವ ಅವರ ಮಕ್ಕಳಾದ ನಿಖಿತ್ ಮತ್ತು ನಿರೇನ್ ಅವರ ಸಂಸ್ಥೆ ‘ಮಿಡಿಟೆಕ್’ ಈ ಸಂಸ್ಥೆ ನಿರ್ಮಿಸಿರುವ ಈ ಕಾರ್ಯಕ್ರಮವನ್ನು ಮಾಳವಿಕಾ ನಡೆಸಿಕೊಡುತ್ತಿದ್ದಾರೆ. ಇನ್ನು ಮುಂದೆ ಆಗಾಗ ಈ ಜಟಕಾ ಬಂಡಿ ನಿಮ್ಮ ಮುಂದೆ ಬಂದು ನಿಲ್ಲಲಿದೆ

‘ಬದುಕು ಜಟಕಾ ಬಂಡಿ’ ತಾಣಕ್ಕಾಗಿ ಇಲ್ಲಿ ಭೇಟಿ ಕೊಡಿ. ಈ ತಾಣದ ಜೊತೆ ನೀವೂ ಮಾತನಾಡಬಹುದು. ಅಭಿಪ್ರಾಯ ಹಂಚಿಕೊಳ್ಳಬಹುದು

ಆಕೆ ಮಡಿಕೇರಿಯ ಸಮೀಪದ ಹಳ್ಳಿಯವಳು. ತುಂಬಾ ಸುಂದರವಾಗಿದ್ದ ಆಕೆ ಹೈಸ್ಕೂಲ್ಗೆ ಹೋಗುತ್ತಿದ್ದಳು. ಆಗಷ್ಟೇ ಹದಿಹರಯಕ್ಕೆ ಕಾಲಿಡುತ್ತಿದ್ದ ಆಕೆ ದಿನವೂ ತನ್ನನ್ನು ಹಿಂಬಾಲಿಸುತ್ತಿದ್ದ ಕಣ್ಣುಗಳಲ್ಲಿಯ ಪ್ರೀತಿಗೆ (?) ಮನಸೋತಳು. ಮರ ಸುತ್ತುವುದು, ಪಾರ್ಕು ಸಿನೆಮಾಗಳಲೆಲ್ಲ ಈ ಪ್ರೀತಿಯ ಜೋಡಿಗಳು ಸುತ್ತಾಡಿದವು. ಮುಂದೆ ಮದುವೆಯಾಯ್ತಾ ? ಎಂದು ಒದುಗರ ಕುತೂಹಲದ ಮನಸ್ಸು ಯೋಚಿಸಬಹುದು ಆದರೆ ಮುಂದೇ ನಡೆದದ್ದೇ ಬೇರೆ !

ಕಳೆದ ಕೆಲ ದಿನಗಳ ಹಿಂದೆ ‘ಬದುಕು ಜಟಕಾ ಬಂಡಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಇವಳ ಬದುಕು ಕುರಿತ ಕಥೆ ಅವಳಿಂದಲೇ ಕೇಳಿ … “ನಾನು ಹೈಸ್ಕೂಲ್ ಓದ್ತಾ ಇರೋವಾಗಲೇ ಪ್ರೀತಿಯ ಮೋಹ ಪಾಶಕ್ಕೆ ಸಿಕ್ಕುಬಿದ್ದೆ. ಮನೆಯಲ್ಲಿ ಬಡತನ ಹದಿಹರೆಯದ ಕನಸುಗಳಿಗೆಲ್ಲ ಕಡಿವಾಣ ಹಾಕಿತ್ತು. ನನ್ನನ್ನು ಪ್ರೀತಿಸುತ್ತಿದ್ದ ಹುಡುಗ ನನ್ನನ್ನು ಪಾರ್ಕು ಹೋಟೆಲ್ ಸಿನೆಮಾಗಳಿಗೆಲ್ಲ ಸುತ್ತಿಸ ತೊಡಗಿದ. ನನಗೂ ಇವೆಲ್ಲ ಖುಷಿ ಕೊಡುವ ವಿಷಯಗಳು. ಜೊತೆಗೆ ಆಗಷ್ಟೇ ಪ್ರಪಂಚ ನೋಡುತ್ತಿದ್ದವಳು ನಾನು. ಇವನ ಎಲ್ಲ ಗುಣಗಳೂ ನನಗೆ ಇಷ್ಟವಾಗತೊಡಗಿದವು. ನಾವು ಆಗ ಮಡಕೇರಿಯ ಆಚೀಚೆ ಸುತ್ತದ ಜಾಗಗಳೇ ಇಲ್ಲ. ನೋಡದ ಸಿನೆಮಾಗಳೇ ಇಲ್ಲ. ಅವನಿಲ್ಲದೇ ಜೀವನವೇ ಇಲ್ಲ ಎಂಬಂತಾಗಿತ್ತು ನನ್ನ ಸ್ಥಿತಿ.

_DSC0676.JPGಹೀಗೆ ಕೆಲವು ದಿನಗಳು ನಡೆದ ನಂತರ ಆತ ಒಂದು ದಿನ ಇಲ್ಲೇ ಹೊರಗಿನ ಊರುಗಳಿಗೆ ಸುತ್ತಾಡೋಣ ಎಂದು ನನ್ನ ಪುಸಲಾಯಿಸಿದ. ನನಗೇನು ಇವನೇ ಜೀವನ ಅಂದುಕೊಂಡವಳು ನಾನು, ಮನೆಯಲ್ಲಿ ಸುಳ್ಳು ಹೇಳಿ ಹೇಗೋ ಇವನೊಂದಿಗೆ ಹೋಗಲು ರೆಡಿಯಾದೆ. ಪ್ರೀತಿಸಿದವನ ಜೊತೆ ಹೊರಗೇ ಸುತ್ತಾಡುವ ಖುಷಿ ಯಾರಿಗೆ ಬೇಡ ಹೇಳಿ.” ಇಷ್ಟು ಹೇಳಿದವಳೇ ಆಕೆ ಕಣ್ಣೀರಾದಳು.

“ಮುಂದಿನ ಕಥೆ ಕೇಳ್ಬೇಡಿ ಅಮ್ಮ, ನನ್ನ ಬದುಕಿನ ದಿಕ್ಕೇ ಬದಲಾಗಿ ಹೋಯ್ತು. ಆತ ಇಲ್ಲೇ ಪಕ್ಕದ ಊರಿಗೆ ಎಂದವನು ನನ್ನನ್ನು ಮುಂಬೈಗೆ ಕರೆದೊಯ್ದ. ಮೊದಲೇ ಯಾಕೆ ಹೇಳ್ಲಿಲ್ಲ ಎಂಬ ನನ್ನ ಮಾತಿಗೆ ಆತ ರಮಿಸಿ ನನ್ನನ್ನು ಸುಮ್ಮನಿರಿಸಿದ. ಇರಲಿ ಬಿಡು ಎಂದು ಸಮಾಧಾನಗೊಂಡ ನನ್ನನ್ನು ಕರೆದುಕೊಂಡು ಹೋಗಿ ನಾನು ನೋಡದೇ ಇರುವ ಮುಂಬೈ ನಗರಿಯ ಕೊಳಕು ಕೆಂಪು ದೀಪದ ತಲೆಹಿಡುಕರಿಗೆ ಮಾರಿಬಿಟ್ಟ.” ಎಂದು ದೊಡ್ಡಕೆ ಅಳ ತೊಡಗಿದಳು. ಅವಳನ್ನು ಸಮಾಧಾನಿಸಬೇಕಾದ ಮಾಳವಿಕಾ ಕೂಡ ಕ್ಷಣ ಏನೂ ತೋಚದವರಂತೆ ಅಳತೊಡಗಿದರು.

“ನನ್ನನ್ನು ಕೆಂಪು ದೀಪದವರಿಗೆ ಮಾರಿ ಆತ ಹೊರಟು ಹೋದ. ಸರಿಯಾಗಿ ಮಡಕೇರಿಯನ್ನೇ ನೋಡದವಳು ನಾನು ಎಲ್ಲಂತ ತಪ್ಪಿಸಿಕೊಳ್ಳಲೀ? ನನ್ನನ್ನು ಯಾವುದೋ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಊಟ ಕೊಡದೇ ಸತಾಯಿಸಿದರು. ಪ್ರತಿ ದಿನ ಸಾವಿರಾರು ಜನ ಬಂದು ನನ್ನನ್ನು ಬಳಸಿಕೊಂಡರು. ಬದುಕೇ ನರಕದಂತಾಗಿ ಹೋಯ್ತು. ಊಟವಿಲ್ಲದೇ, ಸರಿಯಾದ ಸ್ನಾನವಿಲ್ಲದೇ ಅಕ್ಷರಷ: ನರಕದಲ್ಲಿದ್ದ ನನ್ನ ಮೇಲೆ ನಿರಂತರ ಅತ್ಯಾಚಾರವಾಯ್ತು. ಲೈಂಗಿಕ ಸಂಪರ್ಕಕ್ಕೆ ಬರುವವರನ್ನು ಕಾಂಡೋಮ್ ಬಳಸುವಂತೆ ಕೇಳಿಕೊಂಡರೇ ಹೊಡೆಯುತ್ತಿದ್ದರು. ಕಡೆಗೆ ನನಗೆ ಬಂದು ಅಂಟಿಕೊಂಡದ್ದು ಎಚ್.ಐ.ವಿ. ಈಗ ಸಾವಿನ ಸನಿಹದಲ್ಲಿದ್ದೇನೆ.” ನಿರ್ಲಿಪ್ತವಾಗಿ ಹೇಳಿದ ಆಕೆಯ ಕಣ್ಣುಗಳಲ್ಲಿ ಭಾವನೆಗಳು ಸತ್ತು ಹೋಗಿದ್ದವು.

More

%d bloggers like this: