ಆಂಗ್ ಸಾನ್ ಸೂ ಕಿ ಗಾಗಿ….

kannada bharatha yatra 1 (1)

ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ…

-ಅಪಾರ

ನಡುರಾತ್ರಿ ಜತೆಯಾಗಿ ಕೇಳಿದ

ಹಾಡಿನ ವಿಷಾದ ರಾಗ

ಎಲ್ಲಿಂದ ತೇಲಿ ಬಂದು

ನಡುಗಿಸಿತು ಮನವ ಈಗ?

*

ಎಷ್ಟೊಂದು ಸಲೀಸಾಗಿ

ಹೊಳೆದಿತ್ತು ಹೆಸರದು ಅಂದು

ಏನೆಂದು ಕರೆಯುತಿರುವೆಯೊ

ಪುಟ್ಟ ಮಗಳನು ಇಂದು

*

ಅವನ ಜತೆ ಬೆಚ್ಚಗೆ ನೀನು

ಮಲಗಿರುವೆ ಮನೆಯ ಒಳಗೆ

pop_art_kiss

ಮಳೆಯ ರಾತ್ರಿ ನಡುಗುತ್ತಾ

ನಿಂತಿರುವೆ ನಾನು ಹೊರಗೆ

ಮಳೆ ಬರುತ್ತಲೇ ಇರಲಿ ಹೀಗೇ

ನನ್ನ ನಡುಕ ನಿನಗೆ ನಿನ್ನ

ನಡುಕ ನನಗೆ ಕೇಳಿಬರದಿರಲಿ

*

ಎಷ್ಟೋ ಹೊತ್ತು

ಬರೀ ಸೂರ್ಯಕಾಂತಿ ಹೂವನೇ

ನೋಡಿದ ಬಳಿಕ ಕಂಡ

ಹಳದಿ ಚಿಟ್ಟೆ

ಯಾತಕೋ ಸರಕ್ಕನೆ

ನೀನು ತಿರುಗಿದಾಗ

ಕಂಡ ನುಣುಪು ಬಿಳಿ ಹೊಟ್ಟೆ

*

ಮುಸ್ಸಂಜೆ ಹೊತ್ತಲ್ಲಿ

ಕಣ್ಣಿಂದ ಒಳತೂರಿದ

ಚಿಟ್ಟೆ ನೀನು

ಈ ನಡು

ರಾತ್ರಿ ವೇಳೆ ಮೈತುಂಬಿ

ಫಡಫಡಿಸುವೆ ಏನು?

*

blue_landscape

ಮಾತು ಕತೆ ಒಂದೂ ಬೇಡ

ಸುಮ್ಮನೆ ಬಂದು ಕೂಡು

ಮಿಸುಕಾಡದೆ ಮಧುವ

ಹೀರೊ ಚಿಟ್ಟೆಯ

ಒಮ್ಮೆ ನೋಡು

*

ಮಧ್ಯಾಹ್ನವ ಕಳೆಯುತಿದ್ದ

ಉದ್ಯಾನದ ಬೆಂಚು

ಮಳೆಯ ರಾತ್ರಿ ಹೊಳೆಯುತಿದ್ದ

ಒದ್ದೆ ಮುಖದ ಮಿಂಚು

ಒಬ್ಬರಿಗೆ ಇನ್ನೊಬ್ಬರು

ಕಾದು ಕೆಂಪಾದ ತಿರುವು

ಕಾಡಿದರೂ ಇರಲಿ ನೆನಪು

ಬೇಡ ಜಾಣ ಮರೆವು

ನಿನ್ನ ನೆನಪಲೆ ಕೊರಗುತಿರುವೆ

ಎನುವರೆಲ್ಲ ಜನ

ನಿನ್ನ ನೆನೆದೇ ಬದುಕುತಿರುವೆ

ಅರಿಯರೆನ್ನ ಮನ

*

ಶುಭಾಶಯ ಕೋರುವ ಹೆಸರಲ್ಲಿ

ಮೃದು ಅಂಗೈಯ ಮುಟ್ಟಿದೆ

ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ

ಬೆನ್ನನೊಮ್ಮೆ ಮುಟ್ಟಿದೆ

ರಸ್ತೆ ದಾಟುವಾಗ ‘ಎಚ್ಚರ’ ಎಂದು

ತೋಳು ಮುಟ್ಟಿ ಕಂಪಿಸಿದೆ

ಯಾವ ನೆಪವೂ ಇಲ್ಲದೆ ತಬ್ಬಿ

ಮನವ ಮುಟ್ಟುವ ಹಂಬಲ ಮಾತ್ರ

ಉಳಿದೇ ಹೋಯ್ತು

*

love_birds

ನಿನ್ನ ಕರೆಗೆ ಹಾಡುತ್ತಿತ್ತು

ನಿನ್ನ ಕೋಪಕೆ ಕಂಪಿಸುತ್ತಿತ್ತು

ಮುದ್ದು ಮಾಡಿದರೆ ಬಿಸಿಯಾಗುತಿತ್ತು

ಈಗ ಕ್ರೆಡಿಟ್‌ ಕಾರ್ಡಿನವರ ಕಾಟಕ್ಕೆ

ಕಂಗೆಟ್ಟಿದೆ ನನ್ನ ಮೊಬೈಲು

ನಿನ್ನ ನಂಬರು ಚಾಲ್ತಿಯಲ್ಲಿಲ್ಲ

*

ನೀನು ತೊರೆದು ಹೋದ ಮೇಲೆ

ನಾನು ಗಡ್ಡ ಬಿಟ್ಟಿಲ್ಲ, ಕುಡಿವುದ ಕಲಿತಿಲ್ಲ

ಕೆಲಸಕ್ಕೆ ಹೋಗುವುದನ್ನೂ ಬಿಟ್ಟಿಲ್ಲ

ನಿನ್ನ ನೆನಪಲ್ಲಿ ಕಣ್ಣೀರು ಸುರಿಸುತಿಲ್ಲ

ಈ ಪದ್ಯ ಬರೆಯುವಾಗಲೂ ಕಂಪಿಸುತಿಲ್ಲ

ಹೇಳು, ನಿನಗೆ ಖುಷಿಯಾಯಿತೆ?

*

ನಿನ್ನ ಮುದ್ದಿಸಿ ಮರಳುತಿದ್ದೆ

ಜೋರುಮಳೆಗೆ ಸಿಕ್ಕಿಬಿದ್ದೆ

ಒಳಗೂ ಒದ್ದೆ ಹೊರಗೂ ಒದ್ದೆ

ಕಣ್ಣ ತುಂಬ ಸುಖದ ನಿದ್ದೆ

*

joyful_moment

ಬಟನ್‌ಗೆ ಸಿಲುಕಿದ ಕೂದಲು ಇಲ್ಲ

ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ

ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ

ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ

*

ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ

ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ

ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು

ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ

*

ನಾವು ಅಷ್ಟೊಂದು ಮೈ ಮರೆಯಬಾರದಿತ್ತು

ಈಗ ನೋಡು ಮೆಲುಕುಹಾಕಲು ಕೂತರೆ

ಕೂಟದ ಒಂದು ವಿವರವೂ ನೆನಪಾಗುತಿಲ್ಲ

ಈ ತುಟಿಯ ಗಾಯವೂ ಏನೂ ಹೇಳುತಿಲ್ಲ

ಸೃಜನ್ ಎಳೆದ ರೇಖೆ

ಸೃಜನ್ ಎಷ್ಟು ಮೆಲು ಹಾಗೂ ಕಡಿಮೆ ಮಾತಿನವರೆಂದರೆ ಮಾತನಾಡುವ ಕೆಲಸವನ್ನು ತಮ್ಮ ಚಿತ್ರಗಳಿಗೆ ಒಪ್ಪಿಸಿದ್ದಾರೆ.  ಶ್ರೀಕಾಂತ್ ಅಂದರೆ ಯಾರು ಎಂದು ಕೇಳಿಯಾರು. ತಮ್ಮ ನಿಜ ಹೆಸರನ್ನು ಮರೆಸಿ ಹೇಗೆ ಖುಷಿಗೆ ಇಟ್ಟುಕೊಂಡ ಸೃಜನ್ ಹೆಸರೇ ಎಲ್ಲೆಡೆ ಹರಡಿಹೊಗಿದೆಯೋ ಹಾಗೆ ಅವರ ಕೆಲಸವೂ…
ಬಳ್ಳಾರಿಯ ತೋರಣಗಲ್ ನ ಜಿಂದಾಲ್ ನಲ್ಲಿ ಮುಖ್ಯ ಹುದ್ದೆಯಲ್ಲಿರುವ ಶ್ರೀಕಾಂತ್ ಅದು ಮುಖ್ಯವೇ ಅಲ್ಲವೇನೋ ಎಂಬಂತೆ ತಮ್ಮ ಹವ್ಯಾಸಗಳಿಗೆ ಒಡ್ಡಿಕೊಂಡುಬಿಟ್ಟಿದ್ದಾರೆ. ತಮ್ಮ ಕೆಲಸದ ಗಡಿಬಿಡಿಯ ನಡುವೆಯೂ, ಮಗಳೊಡನೆ ಆಟವಾಡುವ ಅವಳಿಗೂ ಕುಂಚದ ಓನಾಮ ಕಲಿಸುವ, ಆರ್ಕಟೆಕ್ಟ್ ಪತ್ನಿಗೆ ರೇಖೆ ಎಳೆದುಕೊಡುವುದರ ನಡುವೆಯೂ ತಮ್ಮ ಹವ್ಯಾಸವನ್ನೆಲ್ಲಾ ಜೀವಂತವಾಗಿಟ್ಟುಕೊಂಡಿದ್ದಾರೆ.
ಅನುವಾದ ಇವರಿಗೆ ಅಚ್ಚುಮೆಚ್ಚು. ಕಥೆ, ಕವಿತೆಯಲ್ಲೂ ಕೈಯಾಡಿಸಿರುವ ಸೃಜನ್ ಸಿನೆಮಾ ಬರಹಗಾರರೂ ಹೌದು ಎಂಬುದು ಅನೇಕರಿಗೆ ಗೊತ್ತಿಲ್ಲ. ಸುಮಾರು ಒಂದು ದಶಕದಿಂದ ರೂಪತಾರಾಗೆ ಬರೆಯುತ್ತಿದ್ದಾರೆ. ಒಂದು ಒಳ್ಳೆಯ ಸಿನೆಮಾ ನೋಡಿಬಿಟ್ಟರೆ ತನ್ನ ಗೆಳೆಯರಿಗೆಲ್ಲಾ ಪುಕ್ಕಟೆ ಸಿ ಡಿ ಕಳಿಸಿ ನೋಡಿಸುವ ಸೃಜನ್ ಎಷ್ಟೋ ಸಾಕ್ಷ್ಯಚಿತ್ರಕ್ಕೂ ಕೈ ಹಾಕಿದ್ದಾರೆ. ಕುಂ ವೀ ಬಗ್ಗೆ ಇವರು ತಯಾರಿಸಿದ ಡಾಕ್ಯುಮೆಂಟರಿ ಸುಮಾರು ಕಡೆ ಪ್ರದರ್ಶನಗೊಂಡಿದೆ.
ಇಂತಿಪ್ಪ ಸೃಜನ್ ಅವರ ಬಣ್ಣದ ಲೋಕದ ಜ್ಹಲಕ್ ಇಲ್ಲಿದೆ-

ಸೃಜನ್ ಎಷ್ಟು ಮೆಲು ಹಾಗೂ ಕಡಿಮೆ ಮಾತಿನವರೆಂದರೆ ಮಾತನಾಡುವ ಕೆಲಸವನ್ನು ತಮ್ಮ ಚಿತ್ರಗಳಿಗೆ ಒಪ್ಪಿಸಿದ್ದಾರೆ. ಶ್ರೀಕಾಂತ್ ಅಂದರೆ ಯಾರು ಎಂದು ಕೇಳಿಯಾರು. ತಮ್ಮ ನಿಜ ಹೆಸರನ್ನು ಮರೆಸಿ ಹೇಗೆ ಖುಷಿಗೆ ಇಟ್ಟುಕೊಂಡ ಸೃಜನ್ ಹೆಸರೇ ಎಲ್ಲೆಡೆ ಹರಡಿಹೊಗಿದೆಯೋ ಹಾಗೆ ಅವರ ಕೆಲಸವೂ…

ಬಳ್ಳಾರಿಯ ತೋರಣಗಲ್ ನ ಜಿಂದಾಲ್ ನಲ್ಲಿ ಮುಖ್ಯ ಹುದ್ದೆಯಲ್ಲಿರುವ ಶ್ರೀಕಾಂತ್ ಅದು ಮುಖ್ಯವೇ ಅಲ್ಲವೇನೋ ಎಂಬಂತೆ ತಮ್ಮ ಹವ್ಯಾಸಗಳಿಗೆ ಒಡ್ಡಿಕೊಂಡುಬಿಟ್ಟಿದ್ದಾರೆ. ತಮ್ಮ ಕೆಲಸದ ಗಡಿಬಿಡಿಯ ನಡುವೆಯೂ, ಮಗಳೊಡನೆ ಆಟವಾಡುವ ಅವಳಿಗೂ ಕುಂಚದ ಓನಾಮ ಕಲಿಸುವ, ಆರ್ಕಟೆಕ್ಟ್ ಪತ್ನಿಗೆ ರೇಖೆ ಎಳೆದುಕೊಡುವುದರ ನಡುವೆಯೂ ತಮ್ಮ ಹವ್ಯಾಸವನ್ನೆಲ್ಲಾ ಜೀವಂತವಾಗಿಟ್ಟುಕೊಂಡಿದ್ದಾರೆ.

ಅನುವಾದ ಇವರಿಗೆ ಅಚ್ಚುಮೆಚ್ಚು. ಕಥೆ, ಕವಿತೆಯಲ್ಲೂ ಕೈಯಾಡಿಸಿರುವ ಸೃಜನ್ ಸಿನೆಮಾ ಬರಹಗಾರರೂ ಹೌದು ಎಂಬುದು ಅನೇಕರಿಗೆ ಗೊತ್ತಿಲ್ಲ. ಸುಮಾರು ಒಂದು ದಶಕದಿಂದ ರೂಪತಾರಾಗೆ ಬರೆಯುತ್ತಿದ್ದಾರೆ. ಒಂದು ಒಳ್ಳೆಯ ಸಿನೆಮಾ ನೋಡಿಬಿಟ್ಟರೆ ತನ್ನ ಗೆಳೆಯರಿಗೆಲ್ಲಾ ಪುಕ್ಕಟೆ ಸಿ ಡಿ ಕಳಿಸಿ ನೋಡಿಸುವ ಸೃಜನ್ ಎಷ್ಟೋ ಸಾಕ್ಷ್ಯಚಿತ್ರಕ್ಕೂ ಕೈ ಹಾಕಿದ್ದಾರೆ. ಕುಂ ವೀ ಬಗ್ಗೆ ಇವರು ತಯಾರಿಸಿದ ಡಾಕ್ಯುಮೆಂಟರಿ ಸುಮಾರು ಕಡೆ ಪ್ರದರ್ಶನಗೊಂಡಿದೆ.

ಇಂತಿಪ್ಪ ಸೃಜನ್ ಅವರ ಬಣ್ಣದ ಲೋಕದ ಜ್ಹಲಕ್ ಇಲ್ಲಿದೆ

Z2(2) Z4(2)
Z5(2) RT

ಅಮಿ, ಕಮಲಾ, ಮಾಧವಿಕುಟ್ಟಿ, ಕಮಲಾದಾಸ್, ಕಮಲಾಸುರೈಯ್ಯ..

ಕನ್ನಡದ ಮುಖ್ಯ ಕಥೆಗಾರ್ತಿ. ಗೆಳತಿ ಪಾರ್ವತಿ ಜಿ ಐತಾಳರೊಂದಿಗೆ ಕಮಲಾದಾಸ್ ಅವರನ್ನು ನೋಡಲು ಕೊಚ್ಚಿನ್ ಗೆ ಹೋದ ಅನುಭವವನ್ನು ಬಣ್ಣಿಸಿದ್ದಾರೆ. ಸುಮಿತ್ರಾ ತೆಗೆದ ಅಪರೂಪದ ಫೋಟೋಗಳು ಇಲ್ಲಿವೆ.

‘ಅವಧಿ’ಗೆ ಈ ಲೇಖನವನ್ನು ಕಳಿಸಿಕೊಟ್ಟ ಸುಮಿತ್ರಾ ಅವರಿಗೆ ಥ್ಯಾಂಕ್ಸ್

ಜೀವನ ಪ್ರೀತಿಯ ಮುಖಗಳು

– ಎಲ್ ಸಿ ಸುಮಿತ್ರ

ambalattil mane.jpg(2)

ಅಂಬಳತ್ತಿಲ್ ಮನೆ

naagabana.jpg(2)

ನಲಪತ್ ಮನೆಯ ಹಿಂಭಾಗದಲ್ಲಿರುವ ನಾಗಬನ.  ನೀರ್ಮಾದಲ ಮರವಿರುವುದು ಇಲ್ಲೇ .

kamaladas malagikodE matanaadidaru.jpg(2)

ಕಮಲಾದಾಸ್ ಕೈ ಮುರಿದು ಸುಸ್ತಾಗಿದ್ದ ಕಾರಣ ಮಲಗಿಕೊಂಡೇ ಮಾತನಾಡಿದರು

kamaladas.jpg(2)

ಕಮಲಾದಾಸ್ ತಮ್ಮ ನೆನಪಿಗಾಗಿ ಸುಮಿತ್ರಾ ಅವರಿಗೆ ಕೊಟ್ಟ ಫೋಟೋ

ಕಮಲದಾಸ್ ಅವರ ಕಥೆ ಕವಿತೆಗಳು ಗಂಡು ಹೆಣ್ಣಿನ ಸುತ್ತಲೇ ಯಾಕೆ ಸುತ್ತುತ್ತವೆ, ಅವರು ಬರೆಯಲು ಆರಿಸಿಕೊಂಡ ವಸ್ತುವಿಗೂ ಬರವಣಿಗೆಯ ರೀತಿಗೂ ಕಮಲಾದಾಸ್ ಬೆಳೆದ ಪರಿಸರಕ್ಕೂ ಇರುವ ಸಂಬಂಧ ಯಾವಬಗೆಯದು .ಎಂಬ ಪ್ರಶ್ನೆಗಳು ಹಲವು ಸಲ ನನ್ನನ್ನು ಕಾಡಿವೆ. ಅವರ ಬರಹಗಳ ಕುರಿತು ಇಷ್ಟಾನಿಷ್ಟಗಳೇನೇ ಇದ್ದರೂ ಸ್ತ್ರೀಲೈಂಗಿಕತೆಯ ಕುರಿತ ಮೌನವನ್ನು ಮುರಿದ ಮೊದಲ ಲೇಖಕಿಯರಲ್ಲಿ ಅವರು ಪ್ರಮುಖರು. ನನಗೆ ಇದಕ್ಕಿಂತ ಮುಖ್ಯವಾಗಿ ಕಮಲಾ ಅವರ ಕಥೆಗಳು, ಆತ್ಮಚರಿತ್ರೆಯ ಮೂರು ಭಾಗಗಳಲ್ಲಿ ಬರುವ ಕೇರಳದ ಸಾಂಪ್ರದಾಯಿಕ ಜೀವನ ಕ್ರಮ, ಕಮಲ ಸೂಕ್ಶ್ಮವಾಗಿ ಅದನ್ನು ಅಭಿವ್ಯಕ್ತಿಸುವ ರೀತಿ ಬಹಳ ಮುಖ್ಯವೆನಿಸಿತ್ತು. ಅವರ ಬಾಲ್ಯದ ನೆನಪುಗಳ ನ್ನು ಬಿಟ್ಟರೆ, ಅವರ ಬರವಣಿಗೆಯ ಪುಟಗಳಲ್ಲಿ ನೋವು ಮತ್ತು ವಿಷಾದ ತೊಟ್ಟಿಕ್ಕುತ್ತದೆ. ಅವರ ‘ಮೈ ಸ್ಟೋರಿ’ ಎಂಬ ಆತ್ಮಕಥೆಯಲ್ಲೂ ಗಾಯಗೊಂಡ ಹಕ್ಕಿಯ ರೆಕ್ಕೆಯ ಫಡಫಡಿಸುವ ಸದ್ದೇ ಕೇಳುತ್ತದೆ.

ಕಮಲಾದಾಸ್ ಬರವಣಿಗೆಯನ್ನು ಪ್ರತಿಭಟನೆಯ ಅಸ್ತ್ರವಾಗಿಯೂ ಬಳಸಿದರು. ಕೇರಳದಲ್ಲಿ ಮಾತೃಪ್ರಧಾನ ಕುಟುಂಬವ್ಯವಸ್ಥೆ ಕಮಲಾದಾಸ್ ಅವರ ವಿವಾಹದ ಸಮಯದಲ್ಲೇ ನಿಧಾನವಾಗಿ ಬದಲಾಗುತ್ತಿತ್ತು. ಅವರ ‘ಬಾಲ್ಯಕಾಲದ ನೆನಪುಗಳಲ್ಲಿ” ಸ್ತ್ರೀಯರ ವ್ಯಕ್ತಿತ್ವದ ಕುರಿತು ಆಗಿನ ಸಂದರ್ಭದ ಸಾಂಪ್ರದಾಯಿಕ ಸಮಾಜದ ನಿರೀಕ್ಷೆಗಳನ್ನು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗಿರುವ ಅವರು ಹುಟ್ಟಿ ಬೆಳೆದ ನಾಲಪ್ಪಟ್ ಮನೆಯನ್ನು, ಕಮಲಾದಾಸ್ ಅವರ ಕೃತಿಗಳಲ್ಲಿ ಚಿತ್ರಿತವಾಗಿರುವ ಪುನ್ನಯೂಕರ್ುಳವೆಂಬ ಊರನ್ನು ನೋಡುವ ಆಸೆಯಿತ್ತು. 2006ನೇ ದೆಸೆಂಬರ್ ನ ಕ್ರಿಸ್ಮಸ್ ದಿನ ನಾವು ಕೊಚ್ಚಿನ್ ನ ಅವರ ಮನೆಯಲ್ಲಿಕಮಲಾದಾಸ್ ಅವರನ್ನು ಭೇಟಿಯಾದೆವು.

ಮಲೆಯಾಳಮ್ ನಲ್ಲಿ ಮಾಧವಿಕುಟ್ಟಿ , ಇಂಗ್ಲಿಷ್ ನಲ್ಲಿ ಕಮಲಾದಾಸ್ ಎಂಬ ಹೆಸರುಗಳಿಂದ ಕತೆ, ಕವಿತೆ ರಚಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಲೇಖಕಿಯನ್ನು ನೋಡಬೇಕೆಂಬ ಕುತೂಹಲದಿಂದ ಫೋನ್ ಮೂಲಕ ಭೇಟಿಯನ್ನು ನಿಗದಿಪಡಿಸಿಕೊಂಡು ನಾನು ಮತ್ತು ಗೆಳತಿ ಪಾರ್ವತಿ ಕೊಚಿನ್ ಗೆ ಹೋದಾಗ ಕಮಲಾದಾಸ್ ಪೂನಾದಲ್ಲಿರುವ ತಮ್ಮ ಕಿರಿಯ ಮಗನ ಹತ್ತಿರದಲ್ಲಿ ವಾಸಿಸುವ ನಿರ್ಧಾರ ಮಾಡಿದ್ದರು. ಕೊಚಿನ್ ನ ‘ಕಡವಂತರ’ದಲ್ಲಿ “ರಾಯಲ್ ಮ್ಯಾನ್ಶನ್” ಅಪಾರ್ತ್ರ್ಮೆಂತ್ ನಲ್ಲಿ ಇಬ್ಬರು ಸೇವಕಿಯರ ಜತೆ ವಾಸಿಸುತ್ತಿದ್ದ ಅವರು ಕೇರಳ ಬಿಟ್ಟು ಪೂನಾಕ್ಕೆ ಹೋದುದನ್ನು ಪತ್ರಿಕೆಗಳು ದೊಡ್ಡ ಸುದ್ದಿ ಮಾಡಿದವು. ನಾವು ಅವರನ್ನು ನೋಡಿದಾಗ ಅವರು ಕೈ ಮೂಳೆ ಮುರಿದಿದ್ದರಿಂದ ಎರಡು ತಿಂಗಳಿಂದ ಹಾಸಿಗೆಯಲ್ಲೇ ವಿಶ್ರಾಂತಿಯಲ್ಲಿದ್ದೇನೆಂದು ಹೇಳಿದರು. ಮಲಗಿದಲ್ಲೇ ಒಂದು ಗಂಟೆ ನಿಧಾನವಾಗಿ ಮಾತನಾಡಿದರು. ‘you have come at the right time. next month I may not be here’ ಎಂದರು.

ಹಾಸಿಗೆಯ ಮೇಲೆ ಅಸಹಾಯಕತೆಯಿಂದ ಮಲಗಿದ್ದ ಕಮಲಾ ಅವರನ್ನು ನೋಡಿದಾಗ ರೆಕ್ಕೆ ಮುರಿದ ಹಕ್ಕಿಯಂತೆನಿಸಿತು. ಮನೆಯ ಹೊರಬಾಗಿಲಲ್ಲಿ ಕಮಲಾದಾಸ್ ಎಂಬ ಬೋರ್ಡ್ ಇದ್ದರೆ ಬೆಡ್ ರೂಮ್ ಬಾಗಿಲಲ್ಲಿ ಕಮಲಾ ಸುರೈಯ್ಯಾ ಎಂಬ ಫಲಕವಿತ್ತು.” ಹೌದು ನಾನು ಹಲವು ಹೆಸರುಗಳನ್ನು ಬಳಸುತ್ತೇನೆ ಮನೆಯಲ್ಲಿ ಅಮಿ, ಕಮಲಾ, ಹೊರಗೆ ಮಾಧವಿಕುಟ್ಟಿ, ಕಮಲಾದಾಸ್, ಕಮಲಾಸುರೈಯ್ಯ ಹೀಗೆ…”

‘ಹೌದು ಕಲ್ಪನೆಗಳು ವಾಸ್ತವಿಕ ಅನುಭವಗಳು ಸೇರಿ ನನ್ನ ಕತೆ ಕವಿತೆಗಳು ಜನಿಸಿವೆ”ಎಂದು ಹೇಳುತ್ತಾ ಮೊಮ್ಮಗಳು ನಯನ ತಾರೆ ಯನ್ನು ನೆನೆಸಿಕೊಂಡರು. ಮೊಮ್ಮಕ್ಕಳು ಪ್ರೀತಿಯಿಂದ ಅಪ್ಪಿಕೊಡಾಗ ಈ ನೋವು ಸ್ವಲ್ಪ ಮರೆಯುತ್ತದೆ. ಕೊಚಿನ್ ನಲ್ಲೇ ಇರುವ ತಂಗಿ ಆಗಾಗ ಬಂದು ಭೇಟಿಯಾಗುತ್ತಾಳೆ, ಡಾಕ್ಟರ್ ಆಗಿರುವ ಇನ್ನೊಬ್ಬ ಸಹೋದರ ತಮ್ಮಂತೆಯೇ ಮೂಳೆ ಮುರಿದುಕೊಂಡು ಮಲಗಿರುವುದಾಗಿ ಹೇಳುತ್ತಾ ‘doctors also fall’ ಅಂದರು.

ತಮ್ಮ ಹಿರಿಯ ಮಗ ಎಂ. ಡಿ. ನಾಲಪತ್ ದೆಹಲಿಯಲ್ಲಿದ್ದು ಅವನು ತಿರುವನಂತಪುರದ ರಾಜಮನೆತನದ ಹುಡುಗಿಯನ್ನು ಮದುವೆಯಾಗಿದ್ದಾನೆ, ಕಿರಿಯಮಗ ಜಯಸೂರ್ಯ ಪೂನಾದಲ್ಲಿ, ಎರಡನೆಯ ಮಗ ಬೆಂಗಳೂರಿನಲ್ಲಿ ಇರುವುದಾಗಿ ಹೇಳಿದರು. ತಮ್ಮ ಸೊಂಪಾದ ತಲೆಗೂದಲ ಬಗ್ಗೆ ಅಭಿಮಾನವಿದ್ದ ಕಮಲಾ ದಾಸ್ ಗೆ ದೆಹಲಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೇಳೆ ತಲೆಗೂದಲು ಕತ್ತರಿಸಿದ ಕುರಿತು ಬೇಸರ. ನಾವು ಪುನ್ನಯೂರ್ ಕುಳಕ್ಕೆ ಹೋಗುತ್ತೇವೆಂದಾಗ “ಅಲ್ಲಿ ನಾಗಬನ ಮತ್ತು ನೀರ್ಮಾದಳ ಮರ ಬಿಟ್ಟು ಇನ್ನೇನೂ ಉಳಿದಿಲ್ಲ” ಎಂದು ನಿಟ್ಟುಸಿರಿಟ್ಟರು.

ತನ್ನ ಪಾಲಿಗೆ ಬಂದಿದ್ದ “ನಲ್ಲಪಾಟ್ “ಮನೆಯನ್ನೂ ನೋಡಿಕೊಳ್ಳಲಾಗುವುದಿಲ್ಲ ಎಂದು ತಾವು ಮಾರಿದಂತೆ ತಂಗಿ ಸಹಾ ತಂದೆ ಕಟ್ಟಿಸಿದ್ದ ಸರ್ವೋದಯ ಹೆಸರಿನ ಮನೆಯನ್ನು ಮಾರಿದಳು. ಕೊಂಡವರು ಆ ಮನೆಗಳನ್ನು ಕೆಡವಿದ್ದರಿಂದ ಈಗಲ್ಲಿ ಏನೂ ಇಲ್ಲ ಎಂದಾಗ ಅವರ ದನಿಯಲ್ಲಿ ವಿಷಾದವಿತ್ತು

ಮನೆಯ ಮೆಟ್ಟಿಲಿಳಿದು ಬರುವಾಗ 1 ಬಿ. ಕಮಲಾದಾಸ್ ಎಂದು ಬರೆದಿದ್ದ ನೇಮ್ ಪ್ಲೇಟ್ ಕಾಣಿಸಿತು. ಈ ನೇಮ್ ಪ್ಲೇಟ್ ಇನ್ನು ಕೆಲವೇದಿನಗಳ ನಂತರ ಇಲ್ಲಿರುವುದಿಲ್ಲ ಎಂದು ಹೊಳೆದಾಗ ವಿಷಾದವೆನಿಸಿತು.

More

ಕಮಲಾದಾಸ್ ಸಿಕ್ಕಿದರು, ಆದರೆ ವಾರಿಜ ಟೀಚರ್ ಸಿಕ್ಕಲಿಲ್ಲ.

ಇದು ಪಾನಿಪೂರಿ ಬರಹ. ಇದೇನಪ್ಪ ಪಾನಿಪೂರಿ ಎಂದು ಹುಬ್ಬೇರಿಸಬೇಡಿ. ‘ಸಾಹಿತ್ಯ- ಪತ್ರಿಕೋದ್ಯಮಗಳ ನಡುವೆ ತುಯ್ದಾಟ. ಮಲೆನಾಡಿನ ಜೀವಕ್ಕೆ ರಾಜಧಾನಿ ಕೈತುತ್ತು ನೀಡುತ್ತಿದೆ’…ಎನ್ನುವ ಹನಿ ಅವರ ಬ್ಲಾಗ್ ಇದು.

ಮೊದಲ ಬರಹವೇ ಕಮಲಾದಾಸ್ ಅವರ ಇಲ್ಲವಾದ ನೋವಿನಿಂದ ತುಂಬಿದೆ. ಕಮಲಾದಾಸ್ ಬಗ್ಗೆ ಬಂದ ಎಲ್ಲಾ ಬರಹಗಳಿಗಿಂತ ತೀರಾ ತೀರಾ ಭಿನ್ನವಾದ ಬರಹ ಇದು.

ಕಮಲಾದಾಸ್ ಹಾಗೂ ವಾರಿಜಾ ಟೀಚರ್ ಇಬ್ಬರಿಗೂ ‘ಅವಧಿ’ ಈ ಕಳ್ಳಮಾಲಿನ ಮೂಲಕ ನಮಸ್ಕಾರ ಸಲ್ಲಿಸುತ್ತಿದೆ.

p-26ಕಲೆ: ಸೃಜನ್

ವಿಷಾದಕರ ಸುದ್ದಿಯೊಂದಿಗೇ ಇದನ್ನು ಆರಂಭಿಸಬೇಕಾಗಿರಲಿಲ್ಲ. ಆದರೆ ಕಮಲಾ ದಾಸ್ ಸತ್ತಿರುವುದು ನಿಜ. ಅದು ‘ತುಂಬಲಾಗದ ನಷ್ಟ’ ಉಂಟು ಮಾಡಿರುವುದೂ ನಿಜ.

ಬಹುಶಃ ನೂರಕ್ಕೆ ೯೦ರಷ್ಟು ಪುರುಷ ಪುಂಗವರೇ ತುಂಬಿರುವ ಸಾಹಿತ್ಯ ಜಗತ್ತಿಗೆ ಕಮಲಾ ದಾಸ್ ಅಲಿಯಾಸ್ ಸುರಯ್ಯಾ ಅಲಿಯಾಸ್ ಮಾಧವಿ ಕುಟ್ಟಿ ಸತ್ತಿರುವುದು ಅಂಥ ನಷ್ಟವೇನೂ ಆಗಿರಲಿಕ್ಕಿಲ್ಲ.

ಹಾಗೇ ಹಿಂದೂಗಳಿಗೂ ಈಕೆ ತಮ್ಮವಳಾಗಿರಲಿಲ್ಲ. ಯಾಕೆಂದರೆ ಆಕೆ ಇಸ್ಲಾಮಿಗೆ ಸೇರಿದ್ದಳು. ಇಸ್ಲಾಮ್ ಎಂದೂ ಆಕೆಯನ್ನು ತಮ್ಮವಳೆಂದು ಅಂಗೀಕರಿಸಿರಲಿಲ್ಲ. ಹೀಗಾಗಿ ಈಕೆ ಆಚೆ ಈಚೆಗಳ ನಡುವೆ ನಿಂತ ಒಂಟಿ ಯಾತ್ರಿಯಂತಿದ್ದಳು. ಆದರೆ ಈ ಎಲ್ಲರಿಗೂ ಚುರುಕು ಮುಟ್ಟಿಸಿದ್ದಳು.

ಈಗ ಪುಂಖಾನುಪುಂಖವಾಗಿ ಶ್ರದ್ಧಾಂಜಲಿ ಲೇಖನ ಬರೆಯುತ್ತಿರುವವರೂ ಕೂಡ ಆಕೆಯ ಬರಹಗಳ ರೋಮಾಂಚನಕಾರಿ ವಿವರಗಳನ್ನು ನೆನೆದುಕೊಳ್ಳುತ್ತಿದ್ದಾರೆ. ಈಕೆಯ ಪೋಲಿ ಬರಹಗಳನ್ನು ಆಗಾಗ ನೆನೆಯುವುದು ಆರೋಗ್ಯಕ್ಕೆ ಒಳ್ಳೆಯದು.
ಆದರೆ ಅದೆಲ್ಲಕ್ಕೂ ಮೀರಿ, ಒಂದೇ ಒಂದು ಕಾರಣಕ್ಕೆ ಆಕೆ ನನಗೆ ಮತ್ತೆ ಮತ್ತೆ ನೆನಪಾಗುತ್ತಾಳೆ. ಅದು ವಾರಿಜಾ ಟೀಚರ್ ಅವರಿಂದಾಗಿ.
**

ತಮ್ಮ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾರೆ ಎಂಬ ಒಂದೇ ಕಾರಣಕ್ಕೆ ವಾರಿಜಾ ಟೀಚರ್ ಮೇಲೆ ಮಾಧವಯ್ಯ ಮಾಸ್ಟ್ರು ಮುನಿಸಿಕೊಂಡಿದ್ದರು. ಅವರಿಬ್ಬರ ನಡುವೆ ದೊಡ್ಡ ರಾದ್ಧಾಂತವೇ ನಡೆದುಹೋಗಿತ್ತು. ‘ನಿನ್ನ ಪೊಗರು ನನ್ನ ಮುಂದೆ ತೋರಿಸಬೇಡ’ ಎಂದು ಮಾಧವಯ್ಯ ಮಾಸ್ಟ್ರು ಬಯ್ದರು. ನಾನೇನು ನಿಮ್ಮ ತಲೆ ಮೇಲೆ ಕಾಲು ಹಾಕಿದ್ದೇನಾ ? ನನ್ನ ಕಾಲ ಮೇಲೆ ತಾನೆ ? ನೋಡ್ಲಿಕ್ಕಾಗದಿದ್ದರೆ ಆಚೆ ಕೂತುಕೊಳ್ಳಿ’ ಎಂದು ವಾರಿಜಾ ಟೀಚರ್ ಬಾಯಿ ಮಾಡಿದರು.

ಅದೇ ಮೊದಲ ಬಾರಿಗೆ ಮಾಧವಯ್ಯನವರಂಥ ಸಿಟ್ಟಾ ಸಿಡುಕ ಜನದ ಮೇಲೆ ಹರಿಹಾಯ್ದ ಹೆಂಗಸೊಂದನ್ನು ನಾವು ನೋಡಿದ್ದು. ಇದ್ದಕ್ಕಿದ್ದಂತೆ ವಾರಿಜಾ ಮೇಡಂ ನನಗೆ ತುಂಬ ಇಷ್ಟವಾಗಿಬಿಟ್ಟರು. ಅದರಲ್ಲಿ ಮಾಧವಯ್ಯನವರ ಮೇಲಿದ್ದ ಸಿಟ್ಟಿನ ಪಾತ್ರವೂ ಇತ್ತು. ಅವರು ವಿನಾಕಾರಣ ನಮ್ಮ ಮೇಲೆ ರೇಗುತ್ತಿದ್ದರು, ತದುಕುತ್ತಿದ್ದರು.

ಈ ಪ್ರಕರಣದಿಂದ ನಮಗೇನೋ ಟೀಚರ್ ಇಷ್ಟವಾದರು ನಿಜ, ಆದರೆ ಊರಿನಲ್ಲಿ ಅವರಿಗೆ ಗಯ್ಯಾಳಿ ಟೀಚರ್ ಎಂಬ ಬಿರುದು ದಕ್ಕಿತು. ಇದರ ಹಿಂದೆ ಮಾಧವಯ್ಯ ಮಾಷ್ಟ್ರು ಮತ್ತು ಇತರ ಕೆಲವರು ಇದ್ದರೆಂದು ಹೇಳಬೇಕಾಗಿಲ್ಲ.

ಆಗ ನಾನು ಒಂಬತ್ತನೆ ಕ್ಲಾಸಿನಲ್ಲಿದ್ದೆ. ನಮ್ಮ ಊರಿನಿಂದ ತಾಲೂಕು ಕೇಂದ್ರಕ್ಕೆ ೫೦ ಕಿಲೋಮೀಟರ್ ದೂರವಿತ್ತು. ನಿತ್ಯ ಹೋಗಿ ಬರುವುದು ಸಾಧ್ಯವಿಲ್ಲ ಎಂದು ವಾರಿಜಾ ಮೇಡಂ ಊರಿನಲ್ಲಿದ್ದ ತಮ್ಮ ಸಂಬಂಕ ನಿತ್ಯಾನಂದ ಮಯ್ಯರ ಮನೆಯಲ್ಲಿ ಉಳಿದುಕೊಂಡಿದ್ದರು.

ಮಯ್ಯರ ಮನೆ ನಮ್ಮ ಮನೆಗೆ ಒಂದು ಕಿಲೋಮೀಟರ್ ದೂರದಲ್ಲಿತ್ತು. ಅವರ ಮನೆಯಿಂದೊಂದು, ನಮ್ಮ ಮನೆಯಿಂದೊಂದು ಕಾಲುದಾರಿಗಳು ಬಂದು ಪೇಟೆಗೆ ಬರುವ ಮುಖ್ಯ ಹಾದಿಗೆ ಕೂಡಿಕೊಳ್ಳುತ್ತಿದ್ದವು. ನಿತ್ಯ ಬೆಳಗ್ಗೆ ಶಾಲೆಗೆ ಹೋಗುವ ಹೊತ್ತಿಗೆ ವಾರಿಜ ಟೀಚರ್ ಸಿಗತೊಡಗಿದರು. ಮೊದಮೊದಲು ಟೀಚರ್ ಕಣ್ಣಿಗೆ ಬೀಳುವುದೇಕೆ ಎಂದು ಹೊತ್ತು ತಪ್ಪಿಸಿ ಬರಲು ನೋಡಿದೆ, ಆಗಲಿಲ್ಲ. ಕಣ್ಣು ತಪ್ಪಿಸಿ ಹೋಗಲು ಯತ್ನಿಸಿದೆ, ಸಾಧ್ಯವಾಗಲಿಲ್ಲ. ಹೇಗೆ ಬಂದರೂ ಟೀಚರ್ ಅಡ್ಡ ಸಿಕ್ಕೇ ಸಿಗುತ್ತಿದ್ದರು.

ಹಾಗೆ ಅವರು ಸಿಗತೊಡಗಿದ ಕೆಲವೇ ದಿನಗಳಲ್ಲಿ ನಾನು ಮೈಚಳಿ ಬಿಟ್ಟು ಮಾತನಾಡುವಂತಾದೆ. ಅವರು ಯಾವ ಮುಜುಗರವೂ ಇಲ್ಲದೆ ತಮ್ಮ ವೈಯಕ್ತಿಕ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರು. ಮನೆಯಲ್ಲಿ ಇಬ್ಬರು ಅಣ್ಣಂದಿರ ದಬ್ಬಾಳಿಕೆ ಹಾಗೂ ತಂದೆಯ ಅಸಹಕಾರದ ನಡುವೆ ಹಟ ಕಟ್ಟಿ ಡಿಗ್ರಿ ಮಾಡಿದ್ದು, ಟೀಚರ್ ಕೆಲಸ ಸಿಕ್ಕಿದಾಗ ಮುಗಿಬಿದ್ದು ಪ್ರೀತಿ ತೋರಿಸಿದ ತಂದೆ- ಅಣ್ಣಂದಿರಿಗೆ ತಿರುಗೇಟು ನೀಡಿದ್ದು, ಡಿಗ್ರಿ ಮಾಡುವ ಸಂದರ್ಭ ಮೂರ್ನಾಲ್ಕು ಹುಡುಗರು ಗೆಳೆಯರಾದದ್ದು, ಗೆಳೆಯರೊಂದಿಗೆ ಆಡುತ್ತಿದ್ದ ಹಲವಾರು ‘ಹರೆಯದ ಆಟ’ಗಳು ಮೊದಲಾದವನ್ನೆಲ್ಲ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಿದ್ದರು.

More

%d bloggers like this: