ಕಮಲಾದಾಸ್ ಕುರಿತು ಎಲ್ ಸಿ ಸುಮಿತ್ರ

ನಿರೀಕ್ಷಿಸಿ
ಕಮಲಾದಾಸ್ ಕುರಿತು
‘ಗುಬ್ಬಿಹಳ್ಳದ  ಸಾಕ್ಷಿ’ ಲೇಖಕಿ ಎಲ್ ಸಿ ಸುಮಿತ್ರ ಅವರ ಆತ್ಮೀಯ ಬರಹ
ಹೌದು ನಾನು ಹಲವು ಹೆಸರನ್ನು ಬಳಸುತ್ತೇನೆ…
richie_0714_sand1 (1)ನಿರೀಕ್ಷಿಸಿ….
ಕಮಲಾದಾಸ್ ಕುರಿತು

sumitra-book

‘ಗುಬ್ಬಿಹಳ್ಳದ  ಸಾಕ್ಷಿಯಲ್ಲಿ ‘ ಲೇಖಕಿ ಎಲ್ ಸಿ ಸುಮಿತ್ರ ಅವರ ಆತ್ಮೀಯ ಬರಹ

ಹೌದು ನಾನು ಹಲವು ಹೆಸರನ್ನು ಬಳಸುತ್ತೇನೆ…

ಕಮಲಾದಾಸ್, ಭಾಗೇಶ್ರೀ, ಕಾಮರೂಪಿ

ಭಾಗೇಶ್ರೀ ತಮ್ಮ ಬ್ಲಾಗ್ ನಲ್ಲಿ ಕಮಲಾದಾಸ್ ಗೊಂದು ಸಲಾಂ ಹೇಳಿದ್ದರು. ಅದಕ್ಕೆ ಕಾಮರೂಪಿ ಎಂದೇ ಹೆಸರಾದ ಹಿರಿಯ ಬರಹಗಾರ ಪ್ರಭಾಕರ ಅವರು ಪ್ರತಿಕ್ರಿಯಿಸಿದ್ದಾರೆ.

ಅದು ಭಾಗೇಶ್ರೀ ಬರವಣಿಗೆಯಷ್ಟೇ ಮಹತ್ವದ್ದು ಅನಿಸಿದ್ದರಿಂದ ಇಲ್ಲಿದೆ-

kamarupi-nagerupaಚಿತ್ರ: ಶಮ, ನಂದಿಬೆಟ್ಟ

ಪ್ರಿಯ ಶ್ರೀಮತಿ ಬಾಗೇಶ್ರೀ,

ತೀರಿಕೊಂಡ ಕಮಲಾ ದಾಸ್ ಉರುಫ್ ಸುರಯ್ಯ ಬಗ್ಗೆ ನಿಮ್ಮ ಬರವಣಿಗೆ ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳುತ್ತೇನೆ, ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳಲಾರೆ.

ಆದರೆ ಇದಕ್ಕೆ ಮುಂಚೆ ನಿಮ್ಮ ಬರವಣಿಗೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಬಹಳ ನೇರವಾದ ಬರವಣಿಗೆ, ಯಾವರೀತಿಯ ಫಾಂಗ್ ಫೂಂಗ್ ಇಲ್ಲದ ಬರವಣಿಗೆ. ಫಾಂಗ್ ಫೂಂಗ್ ಅಸ್ಸಾಮಿಯಾ ಭಾಷೆಯ ಒಂದು idiom, ಇಂಗ್ಲಿಷಿನಲ್ಲಿ ಹೇಳಬೇಕೆಂದರೆ ನಿಮ್ಮ ಬರವಣಿಗೆಯಲ್ಲಿ no beating about the bush, no waffling. ಬರೆಯಬೇಕಾದ್ದನ್ನು ನೇರವಾಗಿ ಬರೆಯುವುದರಲ್ಲಿ ಏನು ತಾನೇ ವೈಶಿಷ್ಟ್ಯ ಅಂತ ನೀವು ಕೇಳಬಹುದು. ಆದರೆ ಹೇಳಬೇಕಾದ್ದನ್ನು, ಬರೆಯಬೇಕಾದ್ದನ್ನು ನೇರವಾಗಿ ಹೇಳುವುದು, ಬರೆಯುವುದು ಇಷ್ಟು ಸಹಜ ಪ್ರವೃತ್ತಿಯಲ್ಲ. ಈ ಗುಣ, ಈ ಬಲಿಷ್ಟತೆ ನಾನಂತೂ ಈವರೆಗೂ ಸಾಧಿಸಿಕೊಂಡಿಲ್ಲ. ಅದಕ್ಕೇ ಈ ಕಳೆದ ಎಂಠತ್ತ್ತು ತಿಂಗಳುಗಳಲ್ಲಿ ನಿಮ್ಮ ಪ್ರತಿಯೊಂದು ಕನ್ನಡ ಪ್ರಬಂಧವೂ ನಾನು ಮತ್ತೆ ಕಲಿಯಬೇಕೆಂದಿರುವ ಕನ್ನಡ ಬರವಣಿಗೆಯಲ್ಲಿ ಸಹಾಯ ಮಾಡಿದೆ, ಮಾಡುತ್ತಿದೆ. ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿದ್ದೇನೆ.

ಮಾಧವಿ ಕುಟ್ಟಿ, ಕಮಲಾ ದಾಸ್, ಸುರಯ್ಯ. ಈ ಮಹಿಳೆಯ ಬಹುಮುಖೀ ವ್ಯಕ್ತಿತ್ವ ನಿಮ್ಮ ಪ್ರಬಂಧದಲ್ಲಿ ಎತ್ತಿ ತೋರಿಸಿದ್ದೀರಿ. ಸನ್ ಸಾವಿರದೊಂಭೈನೂರೆಪ್ಪತ್ತೈದನೇ ಇಸವಿ.
ಅದು ತುರ್ತು ಕಾಲೀನ ಪರಿಸ್ಥಿತಿ ಘೋಷಿಸಲ್ಪಟ್ಟ ಸಮಯ. ಆಗ ನಾನು ಮುಂಬೈನಲ್ಲಿ ಚಾಕರಿ ಮಾಡುತ್ತಿದ್ದೆ. ಆಗ ಕವಿಯಿತ್ರಿಯ ಮತ್ತು ಆಕೆಯ ಪತಿಯ ಪರಿಚಯ ಸ್ವಲ್ಪ ಇತ್ತು. ಎರಡು ಬಾರಿ ಅವರ ಫ್ಲಾಟ್ ನಲ್ಲಿ ಅವರನ್ನು ಕಾಣಲು ಹೋಗಿದ್ದ ನೆನಪು. ಆಗಲೇ ನನಗೆ ಅನ್ನಿಸಿತು, ಈ ಪೃಥಿವಿಯಲ್ಲಿ ಎಲ್ಲಾರೀತಿಯಲ್ಲೂ ಎರಡು ವರ್ಗಗಳಿವೆ. ಅವರ ಶ್ರೇಣಿ ಮತ್ತು ನನ್ನಶ್ರೇಣಿ ಎಂದೆಂದಿಗೂ ಬೆರೆಯುವುದಿಲ್ಲ ಅಂತ. ಆ ಅಂತಸ್ತಿನ ಮತ್ತು ಆ ಅಂತಸ್ತಿಗೆ ಬೇಕಾದ ಕ್ಷಮತೆ, ಒಂದು ರೀತಿ ಆರ್ಥಿಕ ಕ್ಷಮತೆಗಿಂತಾ ಮೀರಿದ ಕ್ಷಮತೆ, ಸಂಪಾದಿಸಿ ಕೊಟ್ಟಿದ್ದ, ಒಂದು ನನಗೇ ಅರ್ಥವಾಗದ ಅವರ ಬದುಕಿನ ರೀತಿ ರಿವಾಜುಗಳ ಪರಿವೇಷ ಅವರುಗಳನ್ನು ಭೇಟಿಯಾದ ಕೆಲವೇ ಕ್ಷಣಗಳಲ್ಲಿ ನನಗೆ ಮನದಟ್ಟಾಯಿತು. Real born aristocracy.

ಈ ಸಾಮಾಜಿಕ ಕ್ಷಮತೆಯೇ ಕವಿಯಿತ್ರಿಗೆ ತನ್ನ ಸ್ವ ಇಛ್ಹೆಗಳನ್ನು ಪೂರೈಸಿಕೊಳ್ಲಲು, ಇಷ್ಟ ಬಂದ ರಸ್ತೆಯಲ್ಲಿ ಓಡಾಡಲು, ಏನೇನು ಭಯ ಸಂಕೋಚವಿಲ್ಲದೆ ಯಾರೂ ಖುಲಾಮತ್ತಾಗಿ ಮಾತನಾಡದ ವಿಷಯಗಳಬಗ್ಗೆ ಮಾತನಾದುವುದು, ಇವೆಲ್ಲಕ್ಕೂ ಸಹಾಯ, ಅದಕ್ಕೆ ಬೇಕಾದ ಬಲಿಷ್ಟತೆ ಕೊಟ್ಟಿದ್ದವು.

ಈ ಮಾತನ್ನು ನಾನು ಟೀಕೆಯ ರೂಪದಲ್ಲಿ ಹೇಳುತ್ತಿಲ್ಲ; ಎಷ್ಟೋ ಮಂದಿ ಇದಕ್ಕೂ ಮೀರಿದ ಸಾಮಾಜಿಕ ಮತ್ತು ಆರ್ಥಿಕ ಕ್ಷಮತೆಯನ್ನು ಹೊಂದಿದ್ದರೂ ಅದನ್ನು ಕೆಲಸಕ್ಕೆ ತೆಗೆದುಕೊಂಡು ತಮ್ಮದೇ ರಸ್ತೆಯೊಂದರಲ್ಲಿ ಯಾರಿಗೂ (ನೀವೆನ್ನುವಂತೆ) ಕ್ಯಾರೆ ಅನ್ನದೇ ಅಧವಾ ಅನ್ನಿಸಿಕೊಳ್ಳದೇ ಹೋಗುವುದಿಲ್ಲ. ಇರಬಹುದು, ಪರಿಚವಿಲ್ಲದ ರಸ್ತೆ, ಮುಗ್ಗರಿಸಬಹುದು. ಆದರೂ ತಮ್ಮದೇ ರಸ್ತೆಯೊಂದರಲ್ಲಿ ಪಯಣಿಸಿದೆ ಅನ್ನುವ ಹೆಮ್ಮೆ, ಗೌರವ ಕವಿಯಿತ್ರಿಗೆ ಸಲ್ಲಲೇ ಬೇಕು
.
ಅನೇಕ ವಿಷಯಗಳ ಬಗ್ಗೆ, , ಅದರಲ್ಲೂ ಆಕೆಯ ಹೆಣ್ಣೂತನ ಮತ್ತು ಅದನ್ನು ಯಾವ ರೀತಿ ವ್ಯವಹರಿಸಿಕೊಂಡರು ಅನ್ನುವ ವಸ್ತುವಿಷಯಗಳ ಬಗ್ಗೆ ಆಕೆಯ ಅರ್ಥಯುಕ್ತ ಸಂಬಂದ್ಧತೆ ಇರಲಿಲ್ಲದ ಮನೋಮತಗಳನ್ನು ನೀವೇ ಉಲ್ಲೇಖಿಸಿದ್ದೀರಿ. ಇದರ ಬಗ್ಗೆ ನಾನು ಹೇಳುವುದೇನೂ ಇಲ್ಲ. ಆದರೂ ಆಕೆಯ ಬರವಣಿಗೆಯನ್ನು ಕುರಿತು ಒಂದೆರಡು ಮಾತು ಹೇಳಿ ಈ ಕಾಮೆಂಟ್ ಮುಗಿಸುತ್ತೇನೆ.

ಆಕೆಯ My Life ನಾನು ಮುಂಬೈಗೆ ಬಂದ ಕೆಲವೇ ತಿಂಗಳುಗಳಲ್ಲಿ ಪ್ರಕಟವಾಯಿತು. ಅದಕ್ಕೆ ಸಾಕಷ್ಟು ಪಬ್ಲಿಸಿಟಿ ಸಹ ದೊರಕಿತು. ಇರಬಹುದು, ಇದು ನನ್ನ snobbery. ಆದರೆ ಭಾರತೀಯ ಬರೆಹಗಾರರ ಇಂಗ್ಲಿಷ್ creative ಬರಣಿಗೆಯಲ್ಲಿ ನನಗೆ ಅಂದಿನ ದಿನಗಳಲ್ಲಿ ಸುತರಾಂ ಆಸಕ್ತಿ ಇರಲಿಲ್ಲ. ಈ ನಾಸಕ್ತಿಗೆ ಕಾರಣ ಪ್ರಾಯಶಃ ನನ್ನ ಇಂಗ್ಲಿಷ್ ಸಾಹಿತ್ಯದ ತಿಳುವಳಿಕೆ. ನಿಜವಾಗಿಯೂ ಹೇಳಬೇಕೆಂದರೆ ಭಾರತೀಯಬರೆಹಗಾರರು ಬರೆಯುತ್ತಿದ್ದ ಇಂಗ್ಲಿಷ್ಶ್ ಸಾಹಿತ್ಯದ ಬಗ್ಗೆ ನನ್ನ ತಿರಸ್ಕಾರ ಪ್ರವೃತ್ತಿಯನ್ನು ನಾನು ಎಂದೂ ಸರಿಯಾಗಿ ಚಿಂತಿಸಿ, ಯೋಚಿಸಿ ಒಂದು ನಿರ್ಧಾರಕ್ಕೆ ಬಂದ ಪ್ರವೃತ್ತಿಯಾಗಿರಲಿಲ್ಲ. ಬರೇ ಪ್ರೆಜುಡಿಸ್. ಆದರೂ ಅಂದಿನ ಕಮಲಾ ದಾಸ್ ಅವರ ಜೀವನ ಚರಿತ್ರೆ, ಕವನಗಳು ಓದಿದಾಗ ಇದೇನು ಅಧ್ವಾನ್ನ ಬರವಣಿಗೆಯಯ್ಯಾ, ಅನ್ನಿಸುತ್ತಿತ್ತು. ಅದರಲ್ಲೂ ಅವರ ಜೀವನಚರಿತ್ರೆ, ಪ್ರಾಯಶಃ ನೂರರಲ್ಲಿ ತೊಂಭತ್ತೊಂಭತ್ತು ಜೀವನಚರಿತೆಗಳಂತೆ ಬರೇ ಒಂದು ಸುಳ್ಳುಗಳ ಸರಪಳಿ ಅನ್ನಿಸಿತು. ಅವರ ಇಂಗ್ಲಿಷ್ ಕವಿತೆಗಳನ್ನಂತೂ ಸೀರಿಯಸ್ಸಾಗಿ ಓದಲು ನನಗೆ ಎಂದೆಂದು ಸಾಧ್ಯವಾಗಲಿಲ್ಲ. ಈ ಮಾತು ಇಂಗ್ಲಿಷಿನಲ್ಲಿ ಕವನ ಹೊಸೆಯುವ ಭಾರತೀಯ ಭಾಷೆಗಳ ಮಿಕ್ಕೆಲ್ಲ ಲೇಖಕರಿಗೂ ಅನ್ವಯಿಸುತ್ತ್ತೆ ಅಂತ ಅನ್ನಿಸುತ್ತೆ

ಆದರೆ ಇವೆಲ್ಲ ಐವತ್ತು ವರುಷಗಳೆಗೂ ಮೀರಿ ಹಿಂದೆ ಶಬ್ದಭಾಷಾರ್ಜನೆ ಮಾಡಿದ್ದ ಮುದುಕನೊಬ್ಬನ ಮಾತುಗಳು. ಅಂದಿನ ಬಿಗಟ್ರಿಯಿಂದ ಕಳಚಿಕೊಳ್ಳಲು ಈಗ ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ಇದರಲ್ಲಿ ನಿಮ್ಮ ಮತ್ತು ನಿಮ್ಮ ಪೀಳಿಗೆಯವರ ಬರವಣಿಗೆಗಳು, ಅದರಲ್ಲೂ ದೆವ್ವಪಿಶಾಚಿಗಳು ಓಡಾಡುವ ಸಮಯದಲ್ಲಿ ಹಠಾತ್ತನೆ ನನ್ನ ಕಂಪ್ಯೂಟರಿನಲ್ಲಿ ಕಣ್ಣಿಗೆ ಬೀಳುವ ಅಪರಿಚಿತ ವ್ಯಕ್ತಿಗಳ ಬರವಣಿಗೆಗಳು ಸಹಾಯ ಮಾಡಿವೆ. ಯಾರಿಗೆ ಗೊತ್ತು, ಕಮಲ ದಾಸ್ ಉರ್ಫ್ ಸುರಯ್ಯ ಅವರ ಬರವಣಿಗೆಗಳನ್ನೂ ನನ್ನ ಪೂರ್ವಗ್ರಹಗಳಿಂದ ಕಳಚಿಕೊಂಡು ಮುಕ್ತನಾಗಿ ಮತ್ತೆ ಓದಿ ಇದುವರೆಗೂ ನಾನು ಕಾಣದಿದ್ದ ಗುಣಗಳನ್ನು ಕಂಡುಕೊಳ್ಳುವುದರಲ್ಲಿ ನಿಮ್ಮ ಪ್ರಬಂಧ ಕೆಲಸಕ್ಕೆ ಬರಬಹುದೇನೋ.

ಇತಿ,

ಪ್ರಭಾಕರ

ಇಂತಿ, ನಮಸ್ಕಾರಗಳು-ನಾಗೇಶ್ ಹೆಗಡೆ

ನಿಮ್ಮ ನಗರಕ್ಕೆ ನಮಸ್ಕಾರ ಎನ್ನುತ್ತಿದ್ದಾರೆಯೇ ನಾಗೇಶ್ ಹೆಗಡೆ?

ನಾಗೇಶ್ ಹೆಗಡೆ ಅವರ ಇನ್ನಷ್ಟು ಫೋಟೋಗಳಿಗೆ ಭೇಟಿ ಕೊಡಿ- ಓದುಬಜಾರ್

IMG_1607

ಸಂದೀಪ್ ಕಾಮತ್ ಆರೋಪ: ನಾಗೇಶ್ ಹೆಗಡೆಯವರೇ ನೇರ ಹೊಣೆ!

img_6527

‘ಕಡಲ ತೀರ’ದ ಸಂದೀಪ್ ಕಾಮತ್ ಅವರು ನಾಗೇಶ್ ಹೆಗಡೆ ಅವರ ಭಾಷಣದಿಂದ ಎಷ್ಟು ವಿಚಲಿತರಾಗಿ ಹೋಗಿದ್ದಾರೆಂದರೆ ಘನ ಗಂಭೀರ ಲೇಖನವನ್ನು ಬರೆದಿದ್ದಾರೆ. ಹಾಗಾಗಿ ಗಂಭೀರವಾಗಿಯೇ ಅದನ್ನು ನಿಮ್ಮ ಮುಂದಿಡುತ್ತಿದ್ದೇವೆ

-ಸಂದೀಪ್ ಕಾಮತ್

Nagesh  hegde 08ಸುಮಾರು ಐದು ವರ್ಷಗಳ ಹಿಂದಿನ ಮಾತು.ರಾಜೀವ್ ದೀಕ್ಷಿತ್ ರ ಲೇಖನಗಳು ನನ್ನ ಮೇಲೆ ತೀವ್ರ ಪ್ರಭಾವ ಬೀರಿದ್ದವು.ಸ್ವದೇಶಿ ಚಿಂತನೆಗಳ ಬಗೆಗಿನ ವಿಚಾರಧಾರೆ ನನ್ನನ್ನು ತೀವ್ರವಾಗಿ ಕಾಡಿದ್ದವು.ಅದರಿಂದ ಎಷ್ಟು ತೊಂದರೆ ಅನುಭವಿಸಿದ್ದೆ ಅಂದರೆ ಅಪ್ರೆಂಟಿಶ್ ಶಿಪ್ ಮುಗಿದ ತಕ್ಷಣ ಅಮೆರಿಕಾ ಮೂಲದ ಕಂಪೆನಿಯೊಂದು ಕೆಲಸದ ಆಫರ್ ನೀಡಿದಾಗ ತಗೊಳ್ಳೋದೋ ಬಿಡೋದೋ ಅನ್ನೋ ಗೊಂದಲ!ಕಡೆಗೂ ಗೆಳತಿಯೊಬ್ಬಳ ಸಮಯೋಚಿತ ಉಪದೇಶದಿಂದ ’ಹಣವೇ ಜೀವನದಲ್ಲಿ ಮುಖ್ಯ ,ಉಳಿದ ವಿಷಯಗಳು ಹೊಟ್ಟೆ ತುಂಬಿದ ಮೇಲೆ ’ ಅನ್ನೋ ನಿರ್ಧಾರಕ್ಕೆ ಬಂದು ಸ್ವದೇಶಿ ಚಿಂತನೆಗಳಿಗೆ ತಿಲಾಂಜಲಿ ನೀಡಿದ್ದೆ!

ನಿನ್ನೆ ಮೇ ಫ್ಲವರ್ ನ ’ಫಿಶ್ ಮಾರ್ಕೆಟ್’ ಕಾರ್ಯಕ್ರಮದಲ್ಲಿ ಶ್ರೀ ನಾಗೇಶ್ ಹೆಗಡೆಯವರೊಂದಿಗಿನ ಸಂವಾದ ಮುಗಿದ ಮೇಲೆ ಬಹಳ ಸಮಯದ ನಂತರ ಮನಸ್ಸು ಮತ್ತೆ ಒಂಥರಾ ಗೊಂದಲದ ಗೂಡಾಗಿದೆ.ಜಿ ಎನ್ ಮೋಹನ್ ರವರು ’ಫಿಶ್ ಮಾರ್ಕೆಟ್ ನಲ್ಲಿ ಬರುವವರು ತಮ್ಮ ತಮ್ಮ ಅಭಿಪ್ರಾಯಗಳೊಂದಿಗೆ ಬಂದು,ತಮ್ಮ ಅಭಿಪ್ರಾಯಗಳೊಂದಿಗೇ ವಾಪಾಸ್ ಆಗಬೇಕು/ಆಗುತ್ತಾರೆ ’ ಅನ್ನೋ ಮಾತನ್ನು ಯಾವಾಗಲೂ ಹೇಳ್ತಿರ್ತಾರೆ.ಆದರೆ ಈ ಸಲ ನನ್ನ ಅಭಿಪ್ರಾಯಗಳು ನಾಗೇಶ್ ಹೆಗಡೆಯವರ ವಿಚಾರಧಾರೆಯಿಂದಾಗಿ ಸ್ವಲ್ಪ ವಿಚಲಿತಗೊಂಡಿರೋ ಹಾಗಿದೆ.

ಇಡೀ ಸಂವಾದ ಪರಿಸರ,ವಿಜ್ಞಾನ,ವಿಜ್ಞಾನದ ಅವೈಜ್ಞಾನಿಕ ಉಪಯೋಗ ಇಂಥದ್ದೇ ವಿಚಾರಗಳ ಸುತ್ತ ಸುತ್ತುತ್ತಿತ್ತು.ವೈಯುಕ್ತಿಕವಾಗಿ ನಾನು ಪರಿಸರವಾದಿಯಲ್ಲ.ನನಗೆ ಆ ಕುರಿತು ಆಸಕ್ತಿಯೂ ಇಲ್ಲ.ಬಹುಷ ನನ್ನ ತಂದೆಯವರಿಗೆ ಮರದ ಸಾ ಮಿಲ್ ಇದ್ದಿದ್ದೇ ಅದಕ್ಕೆ ಕಾರಣ ಇದ್ದಿರಬಹುದು ಅನಿಸುತ್ತದೆ! ಯಾರಾದರೂ ಹಸಿ ಹಸಿ ಮರ ಕತ್ತರಿಸಿ ನಮ್ಮ ಮಿಲ್ ಗೆ ತಂದು ಹಾಕಿದರೆ ಮಾತ್ರ ನಮ್ಮ ಬಿಸ್ ನೆಸ್ ಚೆನ್ನಾಗಿ ನಡೀತಾ ಇದ್ದಿದ್ದು.ಅದೂ ಅಲ್ಲದೆ ಪರಿಸರ ಸಂರಕ್ಷಣೆ ಬಗ್ಗೆ ಗಂಟೆ ಗಟ್ಟಲೆ ಮಾತಾಡಿ ’ತಮ್ಮ ಮನೆಗೆ ಮಾತ್ರ ತೇಗದ ಮರದ ಬಾಗಿಲೇ ಬೇಕು,ಅದರಲ್ಲಿ ದಶಾವತಾರದ ಕೆತ್ತನೆ ಇರಬೇಕು ’ ಅನ್ನೋ ಮನೋಭಾವನೆಯ ಜನರನ್ನ;ಜಾಗತೀಕರಣದ ,ಸಮಾಜವಾದದ ಬಗ್ಗೆ ಉಪದೇಶ ಕೊಟ್ಟು ಮರ್ಸಿಡಿಸ್ ಬೆಂಜ್ ನಲ್ಲಿ ಪುರ್ರನೆ ಹಾರಿ ಹೋಗುವ ಜನರನ್ನು ಕಂಡ ಮೇಲೆ ನನಗ್ಯಾಕೋ ’ದೊಡ್ಡವರ’ ಮಾತನ್ನು ಕೇಳುವುದೇ ಸ್ವಲ್ಪ ಕಷ್ಟ.

ಆದರೆ ನಾಗೇಶ್ ಹೆಗಡೆಯವರು ಮಾತ್ರ ಹಾಗಿರಲಿಲ್ಲ.ಗೆಳತಿ ಮಾಲತಿ ಶೆಣೈ ಅವರು ಹೇಳಿದ ಹಾಗೆ He is gem of a person !ಅವರ ಒಂದೊಂದು ಮಾತೂ ಬಹಳ ಪ್ರಭಾವಿಯಾಗಿತ್ತು.ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡ ರೀತಿಯೂ ಇಷ್ಟವಾಯಿತು.

More

ಚಂದ್ರಿಕಾ ಬರೆದ ನಿನ್ನ ಕಥೆಗಳು

nannolagina ninna backಪಿ ಚಂದ್ರಿಕಾ, ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿಗೆ ತಲುಪಿಕೊಂಡ ಹುಡುಗಿ. ಈಗ ಎಚ್ ಎಸ್ ರಾಘವೇಂದ್ರ ರಾವ್ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ತಮ್ಮ ತುರುಬಿಗೆ ಡಾಕ್ಟರೇಟ್ ಗರಿ ಸಿಕ್ಕಿಸಿಕೊಂಡಿದ್ದಾರೆ.

ಜೊತೆಗಾರ ನ ರವಿಕುಮಾರ್ ಜೊತೆಗೂಡಿ ‘ಅಭಿನವ’ ಪತ್ರಿಕೆ ರೂಪಿಸುತ್ತಾ, ಅಭಿನವ ಪ್ರಕಾಶನದ ಮೂಲಕ ಹಲವರಿಗೆ ಬೆಳಕು ನೀಡಿದಾಕೆ. ಒಳ್ಳೆಯ ಕವಿ. ಸದಾ ಹೊಸ ಪ್ರಯೋಗಗಳಿಗೆ ತುಡಿಯುವ ಚಂದ್ರಕಾ ಜುಗಲ್ಬಂದಿ ಕವಿತೆ ಕೊಟ್ಟರು. ಕನ್ನಡದ ಟಿ ವಿ ಧಾರಾವಾಹಿಗಳಿಗೆ ಒಂದಿಷ್ಟು ಸಾಹಿತ್ಯ ಸ್ಪರ್ಶ ನೀಡಿದರು.

ಆದರೆ ಅವರೊಳಗೆ ಒಬ್ಬ ಕಥೆಗಾರ್ತಿ ಅಡಗಿ ಕುಳಿತಿದ್ದಾಳೆ ಎಂದು ಗೊತ್ತಿರಲಿಲ್ಲ. ಆದರೆ ದಿಢೀರನೆ ಆಕೆ ‘ನನ್ನೊಳಗಿನ ನಿನ್ನ ಕಥೆಗಳು’ ಮೂಲಕ ಪ್ರತ್ಯಕ್ಷವಾದಾಗ ‘ಅರೆ!’ ಎನ್ನುವಂತಾಯಿತು. ಪುಟ್ಟ ಕಥೆಗಳು ಗಾಢವಾಗಿ ಕಲಕುತ್ತದೆ. ಇಂದಿನಿಂದ ಆಗಾಗ ಚಂದ್ರಿಕಾ ಕಥೆಗಳು ‘ಅವಧಿ’ಯಲ್ಲಿ ಕಾಣಿಸಿಕೊಳ್ಳುತ್ತದೆ.

nannolagina ninna

ಕಂಪ್ಯೂಟರ್ ಮತ್ತು ಕೊಳಲು

ಕಂಪ್ಯೂಟರ್ ವ್ಯಾಪಾರಿ ಮತ್ತು ಕೊಳಲಿನ ವ್ಯಾಪಾರಿ ಒಂದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಕಂಪ್ಯೂಟರ್ ವ್ಯಾಪಾರಿಗೆ ತನ್ನದು ದೊಡ್ಡ ಉದ್ಯೋಗ. ಕೊಳಲಿನವನನ್ನು ಅಸಡ್ಡೆಯಿಂದ ಮಾತನಾಡಿಸಿದ. ಅಷ್ಟರಲ್ಲಿ ದಿಕ್ಕುತಪ್ಪಿ ಒಡೆದ ಹಡಗು ಒಂದು ದ್ವೀಪಕ್ಕೆ ಬಂದು ನಿಲ್ಲುತ್ತದೆ. ಕಂಪ್ಯೂಟರಿನವ ಏನೆಲ್ಲಾ ಹೇಳಿದರೂ ಆ ದ್ವೀಪದ ಜನಕ್ಕೆ ಅರ್ಥವಾಗುವುದಿಲ್ಲ. ಕೊಳಲಿನವ ಕೊಳಲು ಊದಲು ಶುರುಮಾಡಿದ. ಅವರಿಗೆ ಆ ಜನ ತಿನ್ನಲು ಕುಡಿಯಲು ತಂದುಕೊಟ್ಟರು. ಮತ್ತು ಅಷ್ಟೂ ಕೊಳಲುಗಳನ್ನು ಕೊಂಡು ಹೊಸ ದೋಣಿಯನ್ನು ಕೊಟ್ಟರು. ಕಂಪ್ಯೂಟರ್ ವ್ಯಾಪಾರಿ ಮಾತಿಲ್ಲದೆ ದೋಣಿ ಹತ್ತಿದ.

%d bloggers like this: