ಸುಧನ್ವ ಕಂಡ ನಾಗೇಶ ಹೆಗಡೆಯವರ ಕಾಲುದಾರಿ

-ಸುಧನ್ವ ದೇರಾಜೆ


ಚಂಪಕಾವತಿ



IMG_8497

 

 

ನಮ್ಮ ಮನೆಗೆ ದಿನಪತ್ರಿಕೆ ಬರುತ್ತಿದ್ದುದು ರಾತ್ರಿ ೮ಕ್ಕೆ. ಮರುದಿನ ಸಂಜೆಯ ಮೊದಲು ಅಪ್ಪ ಕೇಳಿಯೇ ಕೇಳುತ್ತಿದ್ದ ಪ್ರಶ್ನೆ- ‘ನಾಗೇಶ ಹೆಗಡೆಯವರ ಕಾಲಂ ಓದಿದ್ಯಾ?’ ಇಂಟರ್‌ನೆಟ್ ಗೊತ್ತಿಲ್ಲದ, ಟಿವಿ ಇಲ್ಲದ ನಮ್ಮಲ್ಲಿಗೆ ಹೆಗಡೆಯವರ ಅಂಕಣ, ವಿಜ್ಞಾನದ ಒಂದು ಪ್ರವಾಹವನ್ನೇ ಹರಿಸುತ್ತಿತ್ತು. (ಇಂಟರ್‌ನೆಟ್-ಟಿವಿ ಇಟ್ಟುಕೊಂಡವರಿಗೂ ಹೆಗಡೆಯವರು ಹೇಳುವುದು ಹೊಸ ವಿಷಯವೇ ಆಗಿರುತ್ತದೆಂಬುದು ನಂತರ ತಿಳಿಯಿತು!) ಅಂಕಣದಲ್ಲಿ ಅವರು ಹೊಸ ವಿಜ್ಞಾನ ವಿಷಯದ ಬಗೆಗಷ್ಟೇ ಹೇಳುತ್ತಿರಲಿಲ್ಲ, ಅದರ ಜತೆಗೆ ಒಂದು ವಿಚಾರ ಸರಣಿ ಹೊಸೆದುಕೊಂಡಿರುತ್ತಿತ್ತು. ಅತಿ ಗಂಭೀರವಾಗಿರದೆ ಕೊಂಚ ತಮಾಷೆಯೂ ಆಗುತ್ತಿತ್ತು. ಸ್ಪಷ್ಟವಾಗಿ ಸರಳವಾಗಿ ಇರುತ್ತಿತ್ತು. ಹೀಗಾಗಿ, ಏನನ್ನೂ ಓದದ ನನ್ನ ತಮ್ಮನೂ, ಸುಧಾ ವಾರಪತ್ರಿಕೆಯ ಕೊನೆಯ ಪುಟದ ‘ಸುದ್ದಿಸ್ವಾರಸ್ಯ’ವನ್ನು ಓದಿದಷ್ಟೇ ಆಸಕ್ತಿಯಿಂದ ಹೆಗಡೆಯವರ ಕಾಲಂನ್ನೂ ಓದತೊಡಗಿದ.

ಇತ್ತೀಚೆಗೆ ಬಂದ ಒಂದು ಎಸ್ಸೆಮ್ಮೆಸ್ಸು ಇದು- ‘ನೀನೀಗ ಬೈಕು ಕೊಳ್ಳಬೇಡ. ೨೦೨೫ರಲ್ಲಿ ನೀನು ೫ ಲೀಟರ್ ಪೆಟ್ರೋಲ್ ಕೊಂಡರೆ ಪಲ್ಸರ್ ಬೈಕ್ ಫ್ರೀಯಾಗಿ ಸಿಗತ್ತೆ !’ ಶನಿವಾರ ಸಂಜೆ ಮೇ ಫ್ಲವರ್ ಮೀಡಿಯಾ ಹೌಸ್‌ನ ‘ಫಿಶ್ ಮಾರ್ಕೆಟ್’ನಲ್ಲಿ ಕಾಣಿಸಿಕೊಂಡ ವಾಮನ ಮೂರ್ತಿ ನಾಗೇಶ ಹೆಗಡೆಯವರ ಮಾತಲ್ಲೂ ಅದೇ ‘ಮೆಸೇಜು’ ಬಂತು.

 

 

ತುಟಿ ಕೆಂಪು ಮಾಡಿಕೊಂಡಿರುವ ಕುಳ್ಳಗಿನ ಬಡಕಲು ದೇಹ. ಫಕ್ಕನೆ ಹೆಗ್ಗೋಡು ಸುಬ್ಬಣ್ಣರ ನೆನಪು ತರುವಂಥ ಮುಖ. ವಿಜ್ಞಾನ ತಂತ್ರಜ್ಞಾನವು ಸಬಲರಿಂದ ಸಬಲರಿಗಾಗಿಯೇ ಬಳಕೆಯಾಗುತಿದೆ ಎಂಬುದು ಅವರ ಮಾತಿನ ಒಟ್ಟು ಆರೋಪ. ಸರಿಯಾಗಿ ಉರಿಯುವ ಒಲೆ ಕಂಡುಹಿಡಿಯದೆ ಚಂದ್ರಲೋಕಕ್ಕೆ ಹೊರಟಿದ್ದಾರೆ. ಮರ ಕತ್ತರಿಸುವ ಆಧುನಿಕ ಗರಗಸಗಳು ತಯಾರಾದಾಗ ಕಾಡುಗಳೇ ಇಲ್ಲವಾಗಿವೆ. ಕಡಿಮೆ ಬೆಲೆಯ-ವಾಯು ಮಾಲಿನ್ಯ ಇಲ್ಲದ ನ್ಯಾನೊದಂಥ ಕಾರಿನ ಬದಲು ಬಸ್ಸು ತಯಾರಿಸಿದ್ದರೆ ಅದು ಶ್ಲಾಘಿಸುವ ವಿಷಯ. ಇಂದು ಎಲ್ಲವೂ ಖಾಸಗೀಕರಣಕ್ಕೆ ಒಳಗಾಗಿ ಪ್ರಜಾಪ್ರಭುತ್ವ ನಲುಗಿದೆ. ಅಮೆರಿಕದಂಥ ಒಂದು ದೇಶ ತನ್ನ ಕಂಪನಿಗಳ ಮೂಲಕ ಇನ್ನೊಂದು ದೇಶದಲ್ಲಿ ಭಾರೀ ಪ್ರಮಾಣದ ಭೂಮಿಯನ್ನು ಕೊಂಡುಕೊಳ್ಳುವ ಕೆಲಸ ನಡೆಯುತ್ತಿದೆ. ಇದರಿಂದ ಅನನ್ಯತೆ-ಸ್ವಾವಲಂಬನೆಗಳ ನಾಶ ಆಗುತ್ತಿದೆ ಎಂಬುದು ಅವರ ನೋವು. ಬೆಂಗಳೂರಿನ ಸುತ್ತಲಿನ ಹಳ್ಳಿಗಳ ಸಂಪನ್ಮೂಲಗಳು ಮಹಾನಗರಕ್ಕೆ ಬರುತ್ತಿವೆ. ಬೆಂಗಳೂರಿನ ತ್ಯಾಜ್ಯಗಳು ಆ ಹಳ್ಳಿಗಳಿಗೆ ಹೋಗ್ತಿವೆ. ಬೆಂಗಳೂರಿನಿಂದ ಮೈಸೂರಿಗೆ ಚತುಷ್ಪಥ ರಸ್ತೆಯಲ್ಲಿ ಹೋಗಲು ಈಗ ಅರ್ಧ ಗಂಟೆ ಕಡಿಮೆ ಸಾಕು. ಆದರೆ ಆ ದಾರಿಯಲ್ಲಿರುವ ರೈತ ತನ್ನ ಉಳಿದ ಜಮೀನಿಗೆ ಹೋಗಲು, ಚತುಷ್ಪಥ ದಾಟಲು ಅರ್ಧ ಗಂಟೆ ಕಾಯಬೇಕಾಗಿದೆ ಎಂಬ ವೈರುಧ್ಯದ ಬಗ್ಗೆ ಅವರಿಗೆ ದುಃಖ.

ನಮ್ಮ ವಿದ್ಯುತ್ತಿನ ಶೇ.೪೦ ಭಾಗ ರೈತರ ಪಂಪ್‌ಸೆಟ್‌ಗಳಿಗೆ ವ್ಯಯವಾಗುತ್ತಿದೆ. ಆದರೆ ಅವರಿಗೆ ಸೋಲಾರ್ ಶಕ್ತಿಯನ್ನೋ ಗಾಳಿಯಂತ್ರವನ್ನೋ ಕೊಡದ ಸರಕಾರ ಟ್ರ್ಯಾಕ್ಟರ್‌ನ್ನು-ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಿದೆ. ಭಾರತದಲ್ಲಿ ದಿಢೀರನೆ ಬೆಳೆದ ತಂತ್ರಜ್ಞಾನ, ದುರ್ಬಳಕೆಯ ಎಲ್ಲ ಮಾರ್ಗಗಳಲ್ಲೂ ನಡೆದಿದೆ. ನಮಗೆ ಸರಿದಾರಿ ತೋರಬೇಕಾದ ಮಾಧ್ಯಮಗಳು ಹಾಗೂ ಸರಕಾರಗಳೇ ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿವೆ ಎಂಬ ಬೇಸರ. ಹೀಗೆಲ್ಲ ನಗುನಗುತ್ತಲೇ ಪನ್ ಮಾಡುತ್ತಲೇ ಮಾತಾಡಿದ ನಾಗೇಶ ಹೆಗಡೆ, ಎಲ್ಲರಿಂದ ಎತ್ತರದಲ್ಲಿ ನಿಂತು ಮುಂದಿನ ಪ್ರಪಾತವನ್ನು ವಿವರಿಸಿದವರಂತೆ ಕಂಡರು. ಪ್ರಪಾತದಲ್ಲಿ ನೇತಾಡುತ್ತಾ ಈ ಹಣ್ಣು ಅದೆಷ್ಟು ರುಚಿ ಎನ್ನುವ ಝೆನ್ ಒಡಪಿನ ಅರ್ಥವೂ ಅವರಿಗೆ ತಿಳಿದಂತಿತ್ತು. ಅಷ್ಟಕ್ಕೂ ಅವರು ತೀರ ಹೊಸದಾದ ಸಂಗತಿಯೇನೂ ಹೇಳಲಿಲ್ಲ. ಕ್ರಾಂತಿಗಿಂತ ಮುಖ್ಯವಾಗಿ ಸರ್ವಾಂಗೀಣ ಪ್ರಗತಿ ಆಗಬೇಕು ಎಂಬ ಹಲವರ ಆಸೆಯೇ ಅವರ ಆಸಕ್ತಿಯಾಗಿತ್ತು. ಬಹಳ ಕನ್ವಿನ್ಸಿಂಗ್ ಆಗಿ ಮಾತಾಡಲು ಅವರಿಗೆ ಸಾಧ್ಯವಾಗದಿದ್ದರೂ, ತನ್ನ ನಿಲುವಿನಲ್ಲಿ ಅವರಿಗಿರುವ ಬದ್ಧತೆ-ನಂಬಿಕೆ ಸ್ಪಷ್ಟವಾಗಿ ತಿಳಿಯುವಂತಿತ್ತು. ಬೆಂಗಳೂರಿನಿಂದ ೨೦ಕಿಮೀ ಆಚೆಗಿನ ಹಳ್ಳಿಯಲ್ಲಿ, ಫೋನು-ಕರೆಂಟು-ಟಿವಿ ಇತ್ಯಾದಿ ಸರಿಯಾದ ಸೌಲಭ್ಯಗಳಿಲ್ಲದಲ್ಲಿ ಅವರು ಬದುಕುತ್ತಿರುವುದು ಸಾಹಸದಂತೆ ಮಹಾ ಪಟ್ಟಣಿಗರಿಗೆ ಕಂಡರೆ, ಈ ಮಹಾನಗರಗಳಲ್ಲಿ ಬದುಕುವುದೇ ಸಾಹಸ ಅಂತ ಹೆಗಡೆ ಅಂದುಕೊಂಡಿದ್ದರು. ಯಾವುದು ಅತ್ಯಂತ ಸರಳವೋ ಅದನ್ನೇ ಭಾರೀ ಸಾಹಸವೆಂಬಂತೆ ಕಾಣಿಸಿರುವ ತಂತ್ರಜ್ಞಾನದ ಶಕ್ತಿಯ ಅನಾವರಣ ಅದರಿಂದಾಯಿತು. ಇನ್ನಷ್ಟು

ನಾಗೇಶ್ ಹೆಗಡೆ c/o ಫಿಶ್ ಮಾರ್ಕೆಟ್

ನಾಗೇಶ್ ಹೆಗಡೆ ಫಿಶ್ ಮಾರ್ಕೆಟ್ ನಲ್ಲಿದ್ದರು. ‘ಸದ್ಯಕಿದು ಗದ್ದಲ ಸಂತಿ’ ಎಂಬ ಹಣೆಪಟ್ಟಿ ಹಚ್ಚಿಕೊಂಡೇ ಆರಂಭವಾಗಿರುವ ಫಿಶ್ ಮಾರ್ಕೆಟ್ ನಲ್ಲಿ ಈ ಬಾರಿ ಒಂದಿಷ್ಟು ಸದ್ದು ಗದ್ದಲವಿತ್ತು. ನಾಗೇಶ್ ಹೆಗಡೆ ಈ ಸಂತೆಯಲ್ಲಿಯೂ ತಮ್ಮ ದನಿ ಕೇಳುವಂತೆ ಮಾಡಿದರು.

ಫಿಶ್ ಮಾರ್ಕೆಟ್ ನಲ್ಲಿ ನನ್ನಂತ ಮೆಲುದನಿಯವರಿಗೇನು ಕೆಲಸ ಎಂದುಕೊಂಡರೆನೋ?. ನ್ಯಾನೋ ಬಸ್ ಗಳು ಅಗತ್ಯವಿರುವ ದೇಶದಲ್ಲಿ ನ್ಯಾನೋ ಕಾರ್ ಗಳು ಬರುತ್ತಿರುವ ವಿಪರ್ಯಾಸದಿಂದ ಹಿಡಿದು ಇಂದಿನ ಪತ್ರಿಕೋದ್ಯಮದವರೆಗೆ ತಮ್ಮ ಗಟ್ಟಿ ನಂಬಿಕೆಯನ್ನು ಮುಂದಿಟ್ಟರು.

ಆ ಚಿತ್ರಗಳು ಇಲ್ಲಿವೆ. ಡಿ ಜಿ ಮಲ್ಲಿಕಾರ್ಜುನ್, ಶ್ರೀಜಾ, ಸುಘೋಷ್ ಅವರ ಕೃಪೆಯಿಂದ. ಎಂದಿನಂತೆ ‘ಕಡಲತೀರ’ದ ಸಂದೀಪ್ ಕಾಮತ್ ತಮ್ಮ ಬ್ಲಾಗ್ ನಲ್ಲಿ ಈ ಮಾರ್ಕೆಟ್ ಬಗ್ಗೆ ಬರೆದರೆ ಎಂದಿನಂತೆ ಎತ್ತಿ ಇಲ್ಲಿ ಸಾಗಿಸಲು ನಾವೂ ಅವರ ಬ್ಲಾಗ್ ಬಾಗಿಲು ಕಾಯುತ್ತಿದ್ದೇವೆ.

ಅಂದ ಹಾಗೆ ಈ ಮಾರ್ಕೆಟ್ ನಲ್ಲಿ ಕೆ ಎಸ್ ರಾಜಾರಾಂ, ಸಾಗರದಿಂದ ಚಂದ್ರಶೇಖರ್, ಹುಬ್ಬಳ್ಳಿಯಿಂದ ಸುನಂದಾ ಹಾಗೂ ಪ್ರಕಾಶ್ ಕಡಮೆ, ಯು ಬಿ ಪವನಜ, ಹಾಲ್ದೊಡ್ಡೇರಿ ಸುಧೀಂದ್ರ ಇದ್ದರು.

IMG_8475(2)

IMG_8463 IMG_8466

IMG_1618 IMG_1625

IMG_1621 IMG_8493

IMG_1624 IMG_1538

IMG_1601 IMG_1550

IMG_8428 IMG_8436

IMG_1551 IMG_8543

IMG_8550 IMG_8554

ರಂಗಶಂಕರ-ಜೂನ್

image003

ಜೋಗಿ ಬರೆದಿದ್ದಾರೆ: ಈಡು ಮತ್ತು ಕಾಡು!

images

ಬೇಟೆ, ಶಿಕಾರಿ, ಈಡು ಮತ್ತು ಕಾಡು!

ಬೇಟೆಯನ್ನು ನಿಷೇಧಿಸಿ ದಶಕಗಳೇ ಆಗಿವೆ. ಹೀಗಾಗಿ ಬೇಟೆ ಸಾಹಿತ್ಯ ಮತ್ತೆ ಸೃಷ್ಟಿಯಾಗುವುದು ಸಾಧ್ಯವಿಲ್ಲ. ಒಂದು ಸಾಹಿತ್ಯ ಪ್ರಕಾರ ಹೇಗೆ ನಶಿಸಿ ಹೋಗುತ್ತದೆ ಅನ್ನುವುದಕ್ಕೆ ಇದೇ ಸಾಕ್ಷಿ. ಹಾಗಂತ ಸಾಹಿತ್ಯ ಪ್ರಕಾರ ಉಳಿಸಬೇಕು ಅನ್ನುವ ಕಾರಣಕ್ಕೆ ಬೇಟೆಗೆ ಅನುಮತಿ ಕೊಡುವುದಕ್ಕಾಗುವುದಿಲ್ಲ.

ಈಗ ಕುಳಿತುಕೊಂಡು, ಬೇಟೆಯನ್ನು ಕ್ರೌರ್ಯ ಅಂತ ನೋಡುವವರಿಗೆ ಆ ಕಾಲದ ಅನಿವಾರ್ಯತೆ ಗೊತ್ತಿರುವ ಸಾಧ್ಯತೆ ಇಲ್ಲ. ಆಗ ಹಳ್ಳಿಗಳಲ್ಲಿ, ಬನದ ಸೆರಗಿನಲ್ಲಿ ಅಲ್ಲಲ್ಲಿ ಒಂದೊಂದು ಮನೆಯಿರುತ್ತಿತ್ತು. ಆ ಮನೆ ಮಂದಿಯ ಪ್ರಮುಖ ಉದ್ಯೋಗ ಕೃಷಿ ಆಗಿರುತ್ತಿತ್ತು. ಕೃಷಿಗೆ ಅಗತ್ಯವಾದ ಜಾನುವಾರುಗಳನ್ನು ಸಾಕಿಕೊಂಡು, ಸ್ವಲ್ಪಮಟ್ಟಿಗಿನ ಹೈನುಗಾರಿಕೆಯಲ್ಲೂ ಆ ಕುಟುಂಬ ತೊಡಗಿಕೊಳ್ಳುತ್ತಿತ್ತು. ಆಗೆಲ್ಲ ಇಂಥ ಒಂಟಿ ಮನೆಗಳು ಸಾಧ್ಯವಾದಷ್ಟೂ ಸ್ವಾವಲಂಬಿಯಾಗಲು ಪ್ರಯತ್ನ ಪಡುತ್ತಿದ್ದವು. ಅಕ್ಕಿ, ತರಕಾರಿ, ತೆಂಗಿನಕಾಯಿ, ಹಾಲು, ಹೈನು ಎಲ್ಲವೂ ಆ ಪರಿಸರದಲ್ಲೇ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಹೊರಗಿನಿಂದ ತರುತ್ತಿದ್ದ ವಸ್ತುಗಳೆಂದರೆ ಉಪ್ಪು, ಬೆಂಕಿಪೆಟ್ಟಿಗೆ ಮುಂತಾದ ಸಣ್ಣಪುಟ್ಟ, ಅತ್ಯಗತ್ಯ ವಸ್ತುಗಳನ್ನು ಮಾತ್ರ.

img_1124 (1)

ಇಂಥ ಹಳ್ಳಿಗಳಲ್ಲಿ ಆ ಕಾಲದಲ್ಲಿ ಒಂದು ನರಭಕ್ಷಕ ಹುಲಿ ಕಾಣಿಸಿಕೊಂಡಿತೆಂದರೆ ಇಡೀ ಪ್ರದೇಶವೇ ಭೀತಿಯಿಂದ ನಡುಗುತ್ತಿತ್ತು. ಅದಕ್ಕೆ ಸರಿಯಾಗಿ, ನರಭಕ್ಷಕ ಅಲ್ಲೋ ಇಲ್ಲೋ ಒಬ್ಬೊಬ್ಬರನ್ನು ಬಲಿ ತೆಗೆದುಕೊಂಡ ಸುದ್ದಿ ಆಗೀಗ ಬರುತ್ತಿತ್ತು. ಆಗೆಲ್ಲ ಆ ಹುಲಿಯನ್ನು ಹೊಡೆಯುವುದಕ್ಕೆ ಶಿಕಾರಿದಾರರನ್ನು ಕರೆಸಲಾಗುತ್ತಿತ್ತು.

ಇದಲ್ಲದೇ, ಹಳ್ಳಿಯ ಶ್ರೀಮಂತ ಕುಟುಂಬಗಳಲ್ಲಿ ಷೋಕಿಗೆ ಬೇಟೆಯಾಡುವವರೂ ಇರುತ್ತಿದ್ದರು. ಬ್ರಿಟಿಷ್ ದೊರೆಗಳ ಠಿಕಾಣಿ ಇದ್ದ ಊರುಗಳಲ್ಲಿ ಇಂಥ ಮೃಗಯಾವಿನೋದ ಜಾಸ್ತಿಯೇ ಇತ್ತು. ಕನ್ನಡದಲ್ಲಿ ಬೇಟೆ ಸಾಹಿತ್ಯ ಸಿಗುವುದು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ.

ದಕ್ಷಿಣ ಕನ್ನಡದ ಕೆದಂಬಾಡಿ ಜತ್ತಪ್ಪ ರೈ ಮತ್ತು ಕೊಡಗಿನ ಕಾಕೆಮಾನಿ- ಕನ್ನಡದಲ್ಲಿ ಸೊಗಸಾದ ಬೇಟೆ ಸಾಹಿತ್ಯ ಕೊಟ್ಟವರು ಇವರಿಬ್ಬರು. ಇವರು ಬರೆದದ್ದೆಲ್ಲ ಸ್ವಾನುಭವವೇ. ಅದರಲ್ಲೂ ಕಾಕೆಮಾನಿಯಂತೂ ತಮ್ಮನ್ನು ಎಲ್ಲೂ ಸಮರ್ಥಿಸಿಕೊಳ್ಳುವುದಕ್ಕೂ ಹೋಗದೆ ಬೇಟೆಯ ನೆನಪುಗಳನ್ನು ದಾಖಲಿಸಿದ್ದಾರೆ.

ಇನ್ನಷ್ಟು

ಇಂದು ಸಂಜೆ ಫಿಶ್ ಮಾರ್ಕೆಟ್

nagesh

ನವೋಮಿ ಕಾಲಂ: ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡಿದ್ದಿದ್ರೆ….

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ

ಹೋಗ್ತಾ ಇದ್ದೇನೆ..

ಅವನಿಲ್ಲದ ದಿನ ನೋಡಿ ಅವಳು ಒಂದಿಷ್ಟು ಬಟ್ಟೆ ಬರೆ ತನಗೆ ಅಗತ್ಯವಾಗಿ ಬೇಕಾಗಿದ್ದ ಸಾಮಾನನ್ನು ತನ್ನ ಗೆಳೆಯನ ಮನೆಗೆ ಸಾಗಿಸಿದ್ದಾಳೆ. ಅವಳ ಈ ವರ್ತನೆ ನೋಡಿದರೆ ಫೈನಲ್ ದಿನಕ್ಕಾಗಿ ಕಾದಿರುವ ಹಾಗಿದೆ. ಈ ರೀತಿ ಕಳ್ಳಿಯಂತೆ ವರ್ತಿಸುವಾಗ ಆ ಮನೆಯ ಒಂದೊಂದು ಮೂಲೆಯೂ ತಮ್ಮಲ್ಲೇ ಮಾತಾಡಿಕೊಂಡು ನಗತೊಡಗುತ್ತವೆ. ಅಕ್ಕಿ ತುಂಬಿದ ಆ ಚೆಂಬನ್ನು ಈಕೆ ತುಳಿಯುವಾಗ ಅವಳ ಕಾಲು ಗಳು ನಡುಗುತ್ತಿದ್ದುದನ್ನು ಆ ಮನೆಯ ಹೊಸ್ತಿಲು ಇನ್ನೂ ಮರೆತಿಲ್ಲ.ಮದುವೆಯಾದ ಹೊಸತರಲ್ಲಿ ತಾಯಿ ತಂದೆಯರ ಕಣ್ತಪ್ಪಿಸಿ ಏನೋ ನೆವ ಹುಡುಕಿ ಮುದ್ದಿನ ಹೆಂಡತಿಯ ಕಡೆಗೆ ಬರುತ್ತಿದ್ದ ಗಂಡ, ಯಾರಾದರೂ ನೋಡಿಯಾರೆಂಬ ಭಯದಿಂದ ಓಡುವ ಅವಳು, ಮತ್ತೆ ಅವಳನ್ನು ಎಳೆದುಕೊಂಡು ಬಾಗಿಲು ಹಾಕುವ ಗಂಡ ಇವನ್ನೆಲ್ಲ ನೀವಿಬ್ಬರೂ ಮರೆತರೇನೂ ನಾನಂತೂ ಮರೆತಿಲ್ಲ ಎನ್ನುತ್ತಿದೆ ಅಲ್ಲಿಯ ಮಂಚ., ಅಡಿಗೆ ಮನೆಯ ಒಡಲಲ್ಲಂತೂ ಇಂಥ ಹತ್ತಾರು ಕಥೆಗಳಿವೆ. ಆರಂಭದಲ್ಲಿ ಇವಳು ಮಾಡಿದ ರುಚಿಯಿಲ್ಲದ ಅಡಿಗೆಯನ್ನು ಮತ್ತೆ ಮತ್ತೆ ಚಪ್ಪರಿಸುತ್ತ ಕೈಬೆರಳನ್ನು ಹಾಗೆ ಮುದ್ದಿಸುತ್ತ., ಏನೇನೋ ಪೊಲಿ ಮಾತಾಡುತ್ತಿದ್ದನ್ನು ಕೇಳಿ ಥೂಥೂ ಶಾಂತಂಪಾಪಂ ಈ ಮನುಷ್ಯ ಜಾತಿ ಎಂದು ನಾನೇ ನಾಚಿಕೆ ಪಟ್ಟುಕೊಂಡಿರಲಿಲ್ಲವೆ..

Z3(2)

ಆ ಮನೆಯ ಹಾಲ್ ಗಂತೂ ಇವರಿಬ್ಬರ ವರ್ತನೆಯೇ ಬೇಸರ ತರಿಸಿದೆ.ಎಷ್ಟೋ ಸಂಜೆಗಳನ್ನು ಈ ಮನೆಯ ಸದಸ್ಯರು ಅದೆಷ್ಟು ಪ್ರೀತಿಯಿಂದ ಇಲ್ಲಿ ಕಳೆದಿಲ್ಲ..ಆ ಮುದ್ದು ಕಂದಮ್ಮನ ಆಗಮನವನ್ನು ಇದೇ ಹಾಲ್ ನಲ್ಲಿಯೇ ಎಲ್ಲ ಸಂಭ್ರಮದಿಂದ ಆಚರಿಸಿರಲಿಲ್ಲವೆ, ತನ್ನನ್ನು ಯಾರೂ ನೋಡುತ್ತಿಲ್ಲ ಎನ್ನುವುದನ್ನು ಪಕ್ಕಾ ಮಾಡಿಕೊಳ್ಳುತ್ತ ಮೈಕೈ ತುಂಬಿಕೊಂಡು ನಳನಳಿಸುತ್ತಿದ್ದ ತನ್ನ ಮಡದಿಯನ್ನು ಹಾಗೆ ಗಿಂಡುತ್ತಿದ್ದುದನ್ನು ಮರೆಯೋಕೆ ಹೇಗೆ ಸಾಧ್ಯ..ಅವಳಾದರೂ ಏನು ಬೇಡಬೇಡವೆನುತ್ತಲೇ ನಾಚಿಕೊಂಡು ಅದನ್ನು ಖುಷಿಯಿಂದಲೇ ಅನುಭವಿಸುತ್ತಿರಲಿಲ್ಲವೆ….ಹೇಳಿಕೊಳ್ಳೋಕೆ ಖುಷಿಖುಷಿಯಾದಂಥ ಎಷ್ಟೊಂದು ವಿಷಯಗಳಿವೆ. ಆದರೆ ದಿನಗಳೆದಂತೆ ಶುರುವಾದ ಒಂದೊಂದು ಕಿರಿಕಿರಿಗಳು ಎಲ್ಲಕ್ಕಿಂತ ಮಹತ್ವ ಪಡೆದು ಈ ರೀತಿ ಇಬ್ಬರೂ ಬೇರೆಬೇರೆ ಯಾಗುವಂತೆ ಮಾಡುತ್ತಿದ್ದುದು ಜೀವವಿಲ್ಲದ ನಮ್ಮಿಂದಲೂ ನೋಡಕ್ಕಾಗುತ್ತಿಲ್ಲ. ಆಶ್ಚರ್ಯ ಎಂದರೆ ಇಬ್ಬರಲ್ಲೂ ಅಂಥ ನೋವು ಕಾಣುತ್ತಿಲ್ಲ..ಸದ್ಯ ಬಿಡುಗಡೆ ಸಿಕ್ಕರೆ ಸಾಕು ಎಂದು ಓಡಾಡುತ್ತಿದ್ದುದನ್ನು ನೋಡಿದರೆ ಬೇಜಾರಾಗುತ್ತದೆ….

ಈ ಕಡೆ …

ಅವರಿಬ್ಬರು ಎದುರು ಬದಿರು ಕುಳಿತುಕೊಂಡು ಒಬ್ಬರ ಕಣ್ಣಲ್ಲಿ ಮತ್ತೊಬ್ಬರು ಕಳೆದುಹೋಗಿದ್ದಾರೆ. ಹೊಸ ಮನೆ ತುಂಬುವ, ಶೃಂಗರಿಸುವ, ತಮ್ಮನ್ನು ತಾವು ತುಂಬಿಕೊಳ್ಳುವ ಸಂಭ್ರಮದಲ್ಲಿ ಇಬ್ಬರೂ ಜಗವನ್ನೇ ಮರೆತುಬಿಟ್ಟಿದ್ದಾರೆ..ಅವಳು ಹನಿಮೂನ್ ಗೆ ಎಲ್ಲಿಹೋಗಬೇಕೆಂದು ಈಗಲೇ ಲೆಕ್ಕ ಹಾಕುತ್ತಿದ್ದಾಳೆ. ಅವನು ..ಅವಳನ್ನು ಅಲ್ಲಿ ಇಲ್ಲಿ ಎಲ್ಲೆಲ್ಲೋ ಕರೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾನೆ. ಆದರೂ ಮನದ ಮೂಲೆಯೊಂದರಲ್ಲಿ ಅವನಿಗೆ ಭಯ ಕಾಡಿದೆ. ಎಲ್ಲ ತಾವಂದುಕೊಳ್ಳುವಂತೆ ಆಗಿದ್ದರೆ..ಮನೆಯಲ್ಲಿರುವ ಆ ರಾಕ್ಷಸಿ ತಾನಾಗಿಯೇ ಮನೆ ಬಿಟ್ಟು ಹೋದರೆ ಎಷ್ಟೊಂದು ಚೆಂದ.ಯಾವನಾದರೊಟ್ಟಿಗೆ ಓಡಿ ಹೋದರಂತೂ ಇನ್ನೂ ಒಳ್ಳೆಯದು… ಸೌಹಾರ್ದಯುತವಾಗಿಯೇ ಎಲ್ಲ ಬಗೆಹರಿಸಿಕೊಳ್ಳಬಹುದು. ಆದರೂ..ಯಾವಾಗಪ್ಪ ಅವಳಿಂದ ಬಿಡುಗಡೆ ಎಂದುಕೊಳ್ಳುತ್ತಲೇ ಅದನ್ನು ಹೊರಗಡೆ ತರದೆ ಖುಷಿಯಿಂದಲೇ ಮತ್ತೆಮತ್ತೆ ಇವಳ ಕೈಸವರುತ್ತಿದ್ದಾನೆ.ಏನೇ ಆಗಲಿ ಹನಿಮೂನ್ ಗೆ ಸ್ವಿಜರ್ ಲ್ಯಾಂಡ್ಗೆ ಹೋಗೋದು ನಿಶ್ಟಿತ ಎಂದು ಹೇಳುತ್ತಿದ್ದಾನೆ…

ಇನ್ನಷ್ಟು

‘ಲಂಕೇಶ್ ಪತ್ರಿಕೆ’ ಓದುವವನನ್ನು ಕೆಣಕಬೇಡ!”

2008010154420402-ಡಾ ಸಿದ್ಧಲಿಂಗಯ್ಯ
‘ಲಂಕೇಶ್ ಪತ್ರಿಕೆ ಓದುವವನನ್ನು ಕೆಣಕಬೇಡ!’ ಅಂತ ನಾನು ಆಗಾಗ ಹೇಳ್ತಾ ಇರ್ತ್ತಿನಿ. ಯಾಕೆಂದರೆ ಅವರಿಗೆ ಸ್ವಲ್ಪ ತಿಳಿವಳಿಕೆ ಬಂದಿರುತ್ತದೆ. ‘ಲಂಕೇಶ್ ಪತ್ರಿಕೆ’ ಓದೋರು ಉಳಿದವರಂತಲ್ಲ, ಉಳಿದವರಿಗಿಂತ ಸ್ವಲ್ಪ ಭಿನ್ನವಾದ ಜನ ಎನ್ನುವ ದೃಷ್ಟಿಯಿಂದ ಹೊಸ ಗಾದೆಯನ್ನು ಹೇಳಿದೆ. ಸುಮಾರು ಹದಿಮೂರು, ಹದಿನಾಲ್ಕು ವರ್ಷಗಳ ಹಿಂದೆ, ಇದಕ್ಕೆ ಸಂಬಂಧಪಟ್ಟಂತೆ ನನಗೆ ಒಂದು ಅನುಭವವಾಗಿತ್ತು. ಒಂದು ವಿಶ್ವವಿದ್ಯಾಲಯದವರು ಕಾರವಾರ ಜಿಲ್ಲೆಯಲ್ಲಿ ವಿಚಾರಸಂಕಿರಣವನ್ನು ಏರ್ಪಡಿಸಿದ್ದರು. ನಮ್ಮ ವಿಶ್ವವಿದ್ಯಾಲಯದ ಕಡೆಯಿಂದ ನಾನು ಹೋಗಿದ್ದೆ. ನಾವೆಲ್ಲ ಉಪನ್ಯಾಸಕರು ಬಸ್ಸಿನಿಂದ ಇಳಿದು ಬರುತ್ತಿದ್ದಾಗ ಆ ಸಂಘಟಕರು ಬಂದು ನಮ್ಮನ್ನು ಒಂದು ಪ್ರಶ್ನೆ ಕೇಳಿದರು-ನೀವು ಪ್ರೊಫೆಸರೋ, ಡಾಕ್ಟರೋ ಎಂದು. ಯಾಕೆಂದರೆ ಊಟ ವಸತಿ ವ್ಯವಸ್ಥೆ ಮಾಡುವುದಕ್ಕೋಸ್ಕರ. ನಾವೆಲ್ಲ ಪ್ರೊಫೆಸರ್ ಎಂದರೆ ಬಹಳ ಮರ್ಯಾದೆ ಇರಬೇಕೆಂದುಕೊಂಡು ‘ನಾವೆಲ್ಲ ಪ್ರೊಫೆಸರ್ಸ್’ ಎಂದೆವು. ಕೆಲವರು ‘ಡಾಕ್ಟರ್ ‘ಎಂದರು. ಇದರ ಪರಿಣಾಮ ಏನಾಯಿತೆಂದರೆ ಪ್ರೊಫೆಸರ್ಸ್ ಗೆಲ್ಲ ಭಾರಿ ಕಳಪೆ ವ್ಯವಸ್ಧೆ, ಅಂದರೆ ತಣ್ಣೀರು ಸ್ನಾನ. ಡಾಕ್ಟರ್ ಗಳಿಗೆ ಬಿಸಿನೀರು ಸ್ನಾನ.

lankesh_cover1_th

ನಮ್ಮ ಮಿತ್ರನೊಬ್ಬ ಪ್ರೊಫೆಸರ್ ಎಂದಾಗ ಅವನಿಗೆ ಮುರುಕಲು ಕಾಟ್ ತೋರಿಸಿ ಮಲಗಲಿಕ್ಕೆ ಹೇಳಿದರು. ಪಾಪ ಅವನು ಬಿದ್ದೇ ಹೋದ. ನಾನೂ ಕೂಡ ಪ್ರೊಫೆಸರ್ ಎಂದು ಹೇಳಿದ್ದೆ. ನನಗೂ ವಿಪರೀತ ತೊಂದರೆಯಾಯಿತು. ಡಾಕ್ಟರ್ ಗಳೆಲ್ಲ ಸಂತೋಷವಾಗಿದ್ದರು. ಪ್ರೊಫೆಸರ್ಸ್ ಗೆ ಮಾತ್ರ ಅನ್ಯಾಯ ಮಾಡಿದ್ದರು. ವಸತಿ ಸರಿಯಿರಲಿಲ್ಲ. ಊಟದ ವ್ಯವಸ್ಧೆ ಕೂಡ ಒಂದು ಸಾಧಾರಣ ಹೋಟೆಲಿನಲ್ಲಿ. ಡಾಕ್ಟರ್ ಗಳಿಗೆ ಒಳ್ಳೆ ಹೋಟೆಲ್. ಮತ್ತಿನ್ನೊಂದು ವಿಶೇಷವೆಂದರೆ ಪ್ರೊಫೆಸರ್ಸ್ ಗೆ ಬಸ್ ಚಾರ್ಜ್ ಮಾತ್ರ ಎಂಬ ಸುದ್ದಿ ಹಬ್ಬಿಸಿದರು. ನನಗೇಕೋ ಅನುಮಾನ ಬಂತು. ಇದು ವಿಶ್ವವಿದ್ಯಾಲಯದ ಧೋರಣೆಯಲ್ಲ, ಯಾರೋ ತಿಳಿಗೇಡಿಗಳ ಕೆಲಸ ಎಂದು. ಆ ಸಂದರ್ಭದಲ್ಲಿ ನಾವು ನಾಲ್ಕಾರು ‘ಶೋಷಿತರು’ ಆ ಡಾಕ್ಟರುಗಳ ಜೊತೆ ನಮಗೆ ಸಮಾನತೆ ಬೇಕೆಂದು ಕೇಳಿದೆವು. ಅವರು ನಮ್ಮನ್ನು ದಬಾಯಿಸಿದರು – ಎಷ್ಟೇ ಆಗಲಿ ನೀವು ಪ್ರೊಫೆಸರ್ಸ್ ಅನ್ನೋ ಥರ. ನಾವು ಆಗ, ಈ ವಿಚಾರದಲ್ಲಿ ನೀವು ಏನಾದರೂ ಬದಲಾವಣೆ ಮಾಡಿಕೊಳ್ಳದಿದ್ದರೆ ಮುಂದಿನ ವಾರದ ‘ಲಂಕೇಶ್ ಪತ್ರಿಕೆ’ ಯಲ್ಲಿ ‘ಡಿ. ಎ. ನುಂಗಿದ ದಾಂಡಿಗರು’ ಎಂದು ಹಾಕಿಸಿಬಿಡುತ್ತೇವೆ ಅಂತ ಹೆದರಿಸಿದೆವು. ಅವರು ಕೂಡಲೇ ಹೆದರಿದರು. ಆಗ ಡಾಕ್ಟರ್ ಗಳಿಗಿಂತ ಹೆಚ್ಚಿನ ಮಾನ್ಯತೆ ನಮಗೆ ಸಿಕ್ಕಿತು. ಏಕೆಂದರೆ ಲಂಕೇಶ್ ಪತ್ರಿಕೆಯಲ್ಲಿ ಬರೆಸುತ್ತಾರಂತೆ ಇವರು ಎಂಬ ಕಾರಣಕ್ಕಾಗಿ. ಕೊನೆಗೆ ನಮ್ಮನ್ನು ಪ್ರೊಫೆಸರ್ ಎಲ್ಲಿ, ಪ್ರೊಫೆಸರ್ ಎಲ್ಲಿ ಎಂದು ಕೇಳಲಿಕ್ಕೆ ಶುರುಮಾಡಿದರು!

lankesh77ಈ ಪತ್ರಿಕೆ ಜನತೆಯ ನೋವು ಮತ್ತು ಸಿಟ್ಟಿಗೆ ಅಭಿವ್ಯಕ್ತಿ ಹಿಡಿದಿದ್ದು ಒಂದು ದೊಡ್ಡ ಕೆಲಸ. ಮೊದಲೆಲ್ಲ ಪ್ರಗತಿಪರ ಚಿಂತನೆ, ಹಿನ್ನೆಲೆ ಇರುವವರಿಗೆ ಮಾತ್ರ ಆಳುವವರ ಬಗ್ಗೆ ಶಂಕೆ, ಅವರ ಸ್ಧಾನಮಾನದ ಬಗ್ಗೆ ಅಗೌರವ ಇತ್ಯಾದಿಗಳಿದ್ದವು. ಆದರೆ ಒಟ್ಟು ಕನ್ನಡ ಜನತೆಯೇ ಸರ್ಕಾರವನ್ನು, ಒಬ್ಬ ಮಂತ್ರಿಯನ್ನು ಲಘುವಾಗಿ ತಮಾಷೆಯಾಗಿ ಗೇಲಿ ಮಾಡುವಂತಹ ಒಂದು ಆರೋಗ್ಯಕರವಾದ ಸ್ಥಿತಿಗೆ ತಲುಪಿದ್ದು ‘ಲಂಕೇಶ್ ಪತ್ರಿಕೆ’ ಯ ಒಂದು ಸಾಧನೆಎಂದು ನನ್ನ ಭಾವನೆ. ಏಕೆಂದರೆ ಸರ್ಕಾರವೆಂದರೆ ಪ್ರಶ್ನಾತೀತವಾದದ್ದು, ಮಂತ್ರಿಗಳು ಅಂದರೆ ದೇವರ ಸಮಾನ. ಅವರಿಗೆ ಸನ್ಮಾನ ಬಿಟ್ಟು ನಾವು ಬೇರೆ ಏನನ್ನೂ ಮಾಡಬಾರದು ಎನ್ನುವಂಥ ತಪ್ಪು ಕಲ್ಪನೆಯಿದ್ದಾಗ ‘ಲಂಕೇಶ್ ಪತ್ರಿಕೆ’ ಅವರಿಗೆ ಸನ್ಮಾನವನ್ನು ಬಿಟ್ಟು ಇನ್ನೇನು ಮಾಡಬಹುದೆಂಬುದನ್ನು ಜನತೆಗೆ ಕಲಿಸಿಕೊಟ್ಟಿದೆ. ಕೆಟ್ಟವರು, ದುಷ್ಟರು, ಭ್ರಷ್ಟರು, ಅಹಂಕಾರಿಗಳನ್ನು ಹೆದರಿಸುವುದಕ್ಕೆ ಸಾಧ್ಯವಾದದ್ದು ಈ ಪತ್ರಿಕೆಯ ಮೂಲಕ.

ಕೆಲವು ಪತ್ರಿಕೆಗಳೆಲ್ಲ ದೊಡ್ಡ ವ್ಯಕ್ತಿಯ ಬಗ್ಗೆ ಬರೆಯುತ್ತಿದ್ದಾಗ, ದೊಡ್ಡವರ ಭ್ರಷ್ಟಾಚಾರದ ಬಗ್ಗೆ ಬರೆಯುತ್ತಿದ್ದಾಗ, ಈ ಪತ್ರಿಕೆ ವಿಧಾನಸೌಧದ ವಿಚಾರವನ್ನಷ್ಟೇ ಅಲ್ಲ, ಹೋಬಳಿ ಕೇಂದ್ರದಲ್ಲಿರುವಂತಹ ವೈದ್ಯ, ತಾಲ್ಲೂಕಿನ ತಹಸೀಲ್ದಾರ, ಹಳ್ಳಿಯ ಒಬ್ಬ ಗ್ರಾಮಲೆಕ್ಕಿಗ ಇವರು ಯಾವ ರೀತಿ ಜನರ ರಕ್ತ ಹೀರುತ್ತಿದ್ದಾರೆ, ಜನರನ್ನು ಅವಮಾನ ಮಾಡುತ್ತಿದ್ದಾರೆ, ತೊಂದರೆ ಕೊಡುತ್ತಿದ್ದಾರೆ ಅನ್ನುವುದನ್ನು ಬರೆದಾಗ ಎಲ್ಲ ಮಟ್ಟದಲ್ಲೂ ಒಂದು ಎಚ್ಚರ ಪ್ರಾರಂಭವಾಯ್ತು. ಜನರಲ್ಲೂ ಎಚ್ಚರ ಮೂಡಿತು. ‘ಪತ್ರಿಕೆ’ ಯ ಬಗ್ಗೆ ಜನ ಇಷ್ಟಪಟ್ಟ ಇನ್ನೊಂದು ಅಂಶವೆಂದರೆ ಭಾಷೆ. ಮೊದಲು ನಮಗೆ ಈ ಪತ್ರಿಕೆಯನ್ನು ಓದುತ್ತಿದ್ದರೆ ಆಶ್ಚರ್ಯ ಮತ್ತು ಸಂತೋಷವಾಗೋದು. ‘ಪ್ರಿನ್ಸಿಪಾಲನಿಗೆ ಗೂಸ’ ಅಂತ ಹಾಕೋರು. ಈ ರೀತಿ ಭಾಷೆ ಬಳಸಲು ಸಾಧ್ಯವೆಂದು ನಮಗೆ ಗೊತ್ತಿರಲಿಲ್ಲ. ಪ್ರಿನ್ಸಿಪಾಲನ ಮೇಲೆ ಹಲ್ಲೆ ಎಂದು ನಮಗೆ ಗೊತ್ತಿದ್ದದ್ದು. ‘ಪ್ರಿನ್ಸಿಪಾಲನಿಗೆ ಗೂಸ’ ಎಂಬ ವಾಕ್ಯಗಳನ್ನು ಜನತೆ ನೋಡಿದಾಗ ಈ ಪತ್ರಿಕೆ ನಮ್ಮ ಭಾಷೆಯಲ್ಲೆ ಇದೆ, ನಮ್ಮ ಥರ ಮಾತನಾಡುತ್ತಿದ್ದಾರೆ ಅನ್ನೋರು. ‘ಇನ್ಸ್ ಪೆಕ್ಟರ್ ಗೆ ಇಕ್ಕಿದರು’, ‘ಲಾಯರ್ ಗೆ ಲಾತ’ ಹೀಗೆ ಇವೆಲ್ಲ ನಮಗೆ ಆಕರ್ಷಕವಾಗಿ ಕಂಡು, ಮಾಧ್ಯಮಗಳ ಭಾಷೆಯ ಇನ್ನೊಂದು ಸಾಧ್ಯತೆಯನ್ನು ತೋರಿಸಿಕೊಟ್ಟಂಥ ಪತ್ರಿಕೆ ಇದಾಯಿತು.

ನಮಗೆ ಆಶ್ಚರ್ಯವಾಗುವ ಇನ್ನೊಂದು ಅಂಶವೆಂದರೆ ಕೆ. ಕೆ. ಮೂರ್ತಿಯವರ ಬಗೆಗಿನ ವರದಿ. ನಾನು ಈ ಕೆ. ಕೆ. ಮೂರ್ತಿಯವರು ಚೌಡಯ್ಯ ಹಾಲನ್ನು ಕಟ್ಟಿಸಿದ್ದಾರೆ, ದೊಡ್ಡ ಕಲಾಪ್ರೇಮಿ, ಸಂಗೀತ ಪ್ರೇಮಿ ಎಂದೇ ತಿಳಿದುಕೊಂಡಿದ್ದೆ. ಅದೂ ಇರಬಹುದು. ಸ್ವಲ್ಪ ಗೌರವವಿತ್ತು. ಆದರೆ ‘ಲಂಕೇಶ್ ಪತ್ರಿಕೆ’ ಯಲ್ಲಿ ಒಂದು ದಿವಸ ‘ಸೀಮೆಎಣ್ಣೆ ಕಳ್ಳ ಕೆ. ಕೆ ಮೂರ್ತಿ’ ಎಂದು ಹಾಕಿದ್ದರು. ನನಗೆ ಗಾಬರಿಯಾಯಿತು. ಕಲೆ, ನೃತ್ಯ, ಸಂಗೀತ ಎಂದು ಹೇಳುವ ಸಂಸ್ಕೃತಿಯ ಕೆ. ಕೆ. ಮೂರ್ತಿ ಎಲ್ಲಿ, ಈ ಸೀಮೆಎಣ್ಣೆ ಕಳ್ಳ ಕೆ. ಕೆ. ಮೂರ್ತಿ ಎಲ್ಲಿ ಅಂತ. ನನಗೆ ಇನ್ನಾರೋ ಇರಬೇಕೆಂದು ಆಶ್ಚರ್ಯವಾಯಿತು. ಮತ್ತೆ ಮತ್ತೆ ಓದಿದರೆ ಅದೆ ಕೆ.ಕೆ. ಮೂರ್ತಿ! ಹೀಗೆ ಈ ಪತ್ರಿಕೆ ಈ ರೀತಿಯ ಸಂತೋಷವನ್ನೂ ಕೊಡುತ್ತಾ ಈ ಸಮಾಜದಲ್ಲಿ ಅಹಿತಕರವಾದದ್ದನ್ನು ಮಾಡುವವರು, ಲೂಟಿ ಮಾಡವಂಥವರು, ಆಕ್ರಮ ಮಾರ್ಗದಲ್ಲಿ ಸಂಪತ್ತನ್ನು ಕ್ರೋಢೀಕರಿಸುವಂಥವರಿಗೆ ಸರಿಯಾದ ಪಾಠವನ್ನು ಕಲಿಸುತ್ತಿದೆಯೆನ್ನುವುದು ಜನರು  ಇದನ್ನು ಇಷ್ಟಪಡುವುದಕ್ಕೆ ಇದೊಂದು ಕಾರಣ.

ಬ್ರೆಕ್ಟ್ ನನ್ನು ‘ನೀವು ಯಾರ ಪರ’ ಎಂದು ಕೇಳಿದರೆ, ‘ಸಮಾಜವನ್ನು ಬದಲಾವಣೆ ಮಾಡುವ ದಿಕ್ಕಿನಲ್ಲಿ ಚಳವಳಿ ಮಾಡತಕ್ಕಂತಹ ಜನತೆಯ ಪರ’ ಎಂದು ಅವನು ಹೇಳಿದ. ರೈತ ಚಳವಳಿಯಾಗಲಿ, ಗೋಕಾಕ್ ಚಳವಳಿಯಾಗಲಿ, ದಲಿತ ಚಳವಳಿಯಾಗಲಿ, ಚಳವಳಿಗಳ ಪರವಾಗಿ ನಿಂತ ‘ಪತ್ರಿಕೆ’. ಈ ಚಳವಳಿಗಳ ನಾಯಕರೇನಾದರೂ ತಪ್ಪು ಮಾಡಿದಾಗ, ದೃಷ್ಟಿಕೇನದಲ್ಲಿ ವ್ಯತ್ಯಾಸವಾದಾಗ ಅವರನ್ನು ಟೀಕೆ ಮಾಡಿದ್ದುಂಟು. ಈ ಚಳವಳಿಗಳು ಅತಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಟ್ಟಕ್ಕೆ ಹೋದಾಗ ಲಂಕೇಶ್ ರವರು ನಿಯಂತ್ರಣ ಮಾಡಿದ್ದಾರೆ. ಸ್ವಲ್ಪ ತಮಾಷೆ ಮಾಡಿದ್ದಾರೆ, ಗೇಲಿ ಮಾಡಿದ್ದಾರೆ. ಅದು ಆರೋಗ್ಯಕರವಾದದ್ದು.

ಇನ್ನೊಂದು ಅಂಶ. ಈ ಪತ್ರಿಕೆ ಶೋಷಿತ ಪರ. ಎಲ್ಲರನ್ನೂ ಒಂದು ಮಾಡಬೇಕು, ತಮ್ಮ ತಮ್ಮ ಜಾತಿಗಳ ಹಿನ್ನೆಲೆಯನ್ನು ಮರೆತು ಬದುಕುವುದೇ ನಮ್ಮ ಉದ್ದೇಶ ಎನ್ನುವುದು ನಮ್ಮ ಪತ್ರಿಕೆಗಳ ಒತ್ತಾಸೆಯಾಗಿ ಕೂಡ ಇರಬೇಕು. ಆದರೆ ಕೆಲವು ಪತ್ರಿಕೆಗಳು ಏನು ಮಾಡುತ್ತವೆಂದರೆ, ‘ಮರ ಉರುಳಿ ಹರಿಜನನ ಸಾವು’ ಅಂತ ಶೀರ್ಷಿಕೆ ಕೊಟ್ಟುಬಿಟ್ಟಿರುತ್ತವೆ. ಮರಕ್ಕೇನು ಇವನು ಹರಿಜನ ಅಂತ ಗೊತ್ತಿತ್ತೇ? ಮರ ಉರುವುದಕ್ಕೂ ಒಬ್ಬ ದಲಿತ ಸಾಯುವುದಕ್ಕೂ ಸಂಬಂಧವೇ ಇಲ್ಲ. ಅವರ ಪ್ರಕಾರ ಮರಗಳು ಕೂಡ ಜಾತಿ ಭಾವನೆ ಇಟ್ಟುಕೊಂಡಿರುತ್ತವೆಂದು ಕಾಣುತ್ತೆ! ‘ಮರ ಉರುಳಿ ಹರಿಜನನ ಸಾವು’ ಎಂಬುದರ ಅರ್ಥವೇನು? ಮನುಷ್ಯರ ಮನಸ್ಸಿನಲ್ಲಿ ಇವನು ಹರಿಜನ ಅನ್ನೋದು, ಬ್ರಾಹ್ಮಣ ಅನ್ನೋದು, ಇವನು ಒಕ್ಕಲಿಗ ಅನ್ನೋದು ಅಷ್ಟೊಂದು ನಿಲ್ಲಬಾರದು. ಕೆಲವು ಸಲ ಒಬ್ಬನ ಮೇಲೆ ಹಲ್ಲೆಯಾಗುತ್ತದೆ. ಇದು ಅವನ ಜಾತಿಯ ಕಾರಣಕ್ಕಾಗಿ ಆಗಿದ್ದರೆ ಆಗ ಹೇಳೋದು ಸರಿ. ಆ ಕಾರಣಕ್ಕಾಗಿ ಅವನಿಗೆ ಹಲ್ಲೆಯಾಗಿದ್ದರೆ ಆ ಅರ್ಥದಲ್ಲಿ ಹೇಳೋದು ನ್ಯಾಯ. ಆದರೆ ಒಂದು ಮರ ಕೂಡ ಒಬ್ಬ ಹರಿಜನನ ಮೇಲೆ ಹೋಗಿ ಬೀಳುತ್ತದೆಂದರೆ ನಿಜವಾಗಿ ಯೋಚನೆ ಮಾಡಬೇಕಾದ ವಿಚಾರ!

ಪತ್ರಕರ್ತರು ಈ ರೀತಿ ಬರೆಯೋದು ಸರಿಯೇ? ಇದನ್ನು ಯೋಚನೆ ಮಾಡಬೇಕು. ಇನ್ನೊಂದು ಕಡೆ ಓದಿದ್ದೆ – ‘ಹರಿಜನ ಮಹಿಳೆಗೆ ತ್ರಿವಳಿ ಶಿಶು ಜನನ’ ಅಂತ. ಇದಕ್ಕೂ ಹರಿಜನ ಆಗಿದ್ದಕ್ಕೂ ಸಂಬಂಧವಿಲ್ಲ. ಅದು ವೈಯಕ್ತಿಕವಾದದ್ದು; ದೈಹಿಕವಾದದ್ದು. ಆಕೆಯ ದೈಹಿಕ ವಿಚಾರಕ್ಕೂ ಇದಕ್ಕೂ ನಾವು ಸಂಬಂಧ ಕಟ್ಟೋಕಾಗುವುದಿಲ್ಲ! ಆದರೆ ಪತ್ರಿಕೆಯವರು ಯಾಕೆ ಈ ರೀತಿ ಮಾಡುತ್ತಿದ್ದಾರೊ! ‘ಲಂಕೇಶ್ ಪತ್ರಿಕೆ’ ಬಹುಶ ಇದನ್ನುತೊಡೆದು ಹಾಕುವುದಕ್ಕೆ ಪ್ರಯತ್ನ ಪಟ್ಟಿದೆ.

ಇನ್ನಷ್ಟು

ಸಂದೀಪನ ‘ಛಂದ’ದ ಕಥೆ

ಒಂಬತ್ತು, ಎಂಟು, ಎಂಟು…

-ಸಂದೀಪ ನಾಯಕ್

footsteps

ತುಸುವೇ ತಳ್ಳಿದರೂ ಬಿದ್ದು ಹೋಗುವಂತಿದ್ದ ದಣಪೆಯನ್ನು ಓರೆ ಮಾಡಿ ದೇವಿ ರಸ್ತೆಗೆ ಬಂದಾಗ ಕವಿದ ಮೋಡಗಳಿಂದಾಗಿ ಮಧ್ಯಾಹ್ನದ ಹಗಲು ಎಣ್ಣೆ ತೀರುತ್ತ ಬಂದ ದೀಪದಂತಿತ್ತು. ಅವಳು ಈ ಊರಿಗೆ ಮನೆ ಕೆಲಸಕ್ಕೆಂದು ಬಂದು ಆಗಲೇ ಆರು ತಿಂಗಳಿಗಿಂತಲೂ ಹೆಚ್ಚೇ ಇರಬೇಕು.

ಇಲ್ಲಿಗೆ ಬಂದ ಮೊದಲಿಗೆ ದೇವಿ `ನಾನು ಬಂದು ಇಪ್ಪತ್ತು ದಿನ ಆಯ್ತು, ತಿಂಗಳಾಯ್ತು, ನೂಲು ಹಬ್ಬಕ್ಕೆ ಮೂರು ತಿಂಗಳು’ ಎಂದೆಲ್ಲ ಲೆಕ್ಕ ಹಾಕುತ್ತಿದ್ದಳು. ಈಗೀಗ ಅದನ್ನು ನಿಲ್ಲಿಸಿದ್ದಾಳೆ. ಆ ದಿನಗಳು ನಿಲ್ಲದೆ ಮುಂದೆ ಹೋಗುತ್ತಿರುವಾಗ ಹಿಂದಿನಿಂದ ಅವುಗಳ ಲೆಕ್ಕವನ್ನು ದೇವಿ ಮಾಡದೆ ಅವುಗಳೊಂದಿಗೆ ಹೋಗುತ್ತಿದ್ದಳು.

ದೇವಿಗೆ ರಸ್ತೆಯಲ್ಲಿ ಸಾಗುವ ವಾಹನಗಳ ನಡುವೆ ಹಾದಿ ಬಿಡಿಸಿಕೊಂಡು ಹೋಗುವುದೆಂದರೆ ಜೀವ ಕುತ್ತಿಗೆಗೆ ಬರುತ್ತಿತ್ತು. ಈಗ ಈ ಊರಿನ ಎಲ್ಲ ವೈವಾಟೂ ಅವಳಿಗೆ ಆಗಿದೆ. ಬೆಳಿಗ್ಗೆ ಎದ್ದು ಹಾಲನ್ನು, ತುಸು ದೂರವೇ ಇರುವ ಮೀನಿನ ಅಂಗಡಿಯಿಂದ ಮೀನನ್ನು ಅವಳೇ ತರುತ್ತಿದ್ದಳು. ಈಗವಳು ಮನೆಯಲ್ಲಿ ಉಂಡು ಚಾಪೆಯ ಮೇಲೆ ಅಡ್ಡವಾಗಿರುವ ಮಂಕಾಳಜ್ಜಿಗೆ ಗುಳಿಗೆಗಳನ್ನು ತರಬೇಕಿತ್ತು. ಏನೇನೋ ಮನಸ್ಸಿಗೆ ಹಚ್ಚಿಕೊಂಡು ಆ ಅಜ್ಜಿಗೆ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ. ಆಗಾಗ ರಕ್ತದ ಒತ್ತಡ ಏರಿ ಬಡಬಡಿಸುವುದೂ ನಡೆಯುತ್ತಿತ್ತು. ದೇವಿ ಈಗ ಅಜ್ಜಿ ಮಲಗಿರುವಾಗಲೇ ಗುಳಿಗೆಗಳನ್ನು ತಂದುಬಿಡುವಾ ಎಂದು ಹೊರಟಿದ್ದಳು

ತೆಂಕಣಕೇರಿಯ ರತ್ನ ಅಕ್ಕೋರು ದೇವಿಯನ್ನು ಅವಳ ಅವ್ವ ಸಾವಿತ್ರಿಗೆ ಕಬೂಲು ಮಾಡಿಸಿ ಮನೆ ಕೆಲಸಕ್ಕೆಂದು ಕಳಿಸಿಕೊಟ್ಟಿದ್ದರು. `ನಾನೂ ಎಲ್ಲೂ ಹೋಗೂದಿಲ್ಲ, ಇಲ್ಲೇ ಇರ್ತೆ’ ಎಂದ ದೇವಿಯ ಹಠವನ್ನು ಒಂದೇ ಮಾತಿನಲ್ಲಿ ಇಲ್ಲದಂತೆ ಮಾಡಿದ್ದಳು. ಕೆಲವು ಹಸಿರು ಕೋರಾ ನೋಟುಗಳನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ರತ್ನ ಅಕ್ಕೋರಿಗೆ ಮಾತು ಕೊಟ್ಟು ಬಂದ್ದಿದ ಸಾವಿತ್ರಿ `ಬಾಯಿ ಬಿಟ್ಟರೆ ನೋಡು. ನಿನ್ನ ಮದ್ವೆ ಮಾಡುವವರು ಯಾರು? ನಮಗೇನು ನಿಮ್ಮ ಅಜ್ಜ ಮಾಡಿಟ್ಟ ಆಸ್ತಿ ಇದ್ಯೇನೆ? ಅಕ್ಕನಂಗೆ ಇಲ್ಲೇ ಇದ್ದು, ಯಾರ ಸಂಗತಿಗಾದರೂ ಓಡಿ ಹೋಗ್ತಿಯೋ ನೋಡ್ತೆ. ಸುಮ್ಮನೆ ನಾನ ಹೇಳದಂಗೆ ಕೇಳು’ ಎಂದವಳೇ ತಲೆ ಕೆಳಗಾಗಿ ನೇತಾಡುವ ಕೋಳಿಗಳನ್ನು ಹಿಡಿದು ಅವನ್ನು ಮಾರಲು ಅಂಕೋಲೆ ಪೇಟೆಯ ಆಡೂಕಟ್ಟೆ ಕಡೆ ನಡೆದಿದ್ದಳು.

footsteps

ದೇವಿಯ ಕಣ್ಣಿನ ಮುಂದೆ ಬೇರೆ ಹಾದಿಗಳೇ ಇರಲಿಲ್ಲ. ಅವಳ ಹಾಗೆಯೇ ಅರ್ಧಕ್ಕೆ ಶಾಲೆ ಬಿಟ್ಟ ಊರಿನ ಪೋರಿಯರಾದ ಮಾಲಾ, ರುಕ್ಮಿಣಿ, ಗುಲಾಬಿಯರು, ತಾವು ಮಾರುತ್ತಿದ್ದ ಹೂವು, ತೆಂಗಿನಕಾಯಿ, ಗೇರುಬೀಜ, ಹುಳಿಸೊಪ್ಪು, ಮುರುಗಲ ಕಾಯಿಯ ಹಿತ್ತಲ ವ್ಯವಹಾರಗಳನ್ನು, ಏಕಾಏಕಿ ಇಲ್ಲಿನ ಕೆಲಸಗಳನ್ನು ತಮ್ಮ, ತಂಗಿಯರಿಗೆ ವಹಿಸಿ ಬಸ್ಸುಗಳನ್ನು ಹತ್ತಿದ್ದರು. ಮುಂಬಯಿ, ಹುಬ್ಬಳ್ಳಿ, ಹೈದ್ರಾಬಾದು ಎಂದೆಲ್ಲ ಮನೆ ಕೆಲಸಕ್ಕೆಂದು ಹೋದ ಅವರು, ಊರಿನ ಬಂಡಿ ಹಬ್ಬಕ್ಕೆ ಬಂದಾಗ ಬಣ್ಣದ ಬಟ್ಟೆ ಹಾಕಿಕೊಂಡು ದೇವಿಗೆ ಅರ್ಥವಾಗದ ಅಲ್ಲಿನ ಭಾಷೆ ಮಾತಾಡುತ್ತ ಅವಳಿಗೆ ಗಡಿಬಿಡಿ ಆಗುವಂತೆ ಮಾಡುತ್ತಿದ್ದರು. ಅವರ ಮಾತಿನಿಂದ ದೇವಿ ಕೆಂಗೆಡುತ್ತಿದ್ದಳು. ಅವರ ವರ್ಣನೆಯ ಊರುಗಳು ದೇವಿಯನ್ನು ಕನಸಿನ ತೀರಗಳಿಗೇನೂ ಕರೆದಿರಲಿಲ್ಲ. ಚೂರುಪಾರು ದುಡ್ಡನ್ನು ಮನೆಗಳಿಗೆ ಕಳಿಸುತ್ತಿದ್ದ ಆ ಹುಡುಗಿಯರ ತೂಕ ಊರವರ ದೃಷ್ಟಿಯಲ್ಲಿ ಒಂದು ಗುಂಜಿಯಷ್ಟಾದರೂ ಹೆಚ್ಚಾಗಿದ್ದು ಖರೆ ಎಂಬುದು ಸಣ್ಣವಳಾದ ಅವಳಿಗೂ ತಿಳಿಯುತ್ತಿತ್ತು.

`ಅಕ್ಕನ ಹಂಗೆ ಯಾರ ಸಂಗ್ತಿಯಾದರೂ ಓಡಿ ಹೋಗ್ತಿಯೊ ನೋಡ್ತೆ’ ಎಂದ ಅವ್ವನ ಮಾತು, ಉಪ್ಪಿದ್ದರೆ, ಗಂಜಿ ಇಲ್ಲದ, ಗಂಜಿಯ್ದಿದರೆ ಉಪ್ಪಿಲ್ಲದ ತಮ್ಮ ಮನೆ ಸ್ಥಿತಿ ಆದದ್ದಾಗಲಿ ಹೋಗಿಯೇ ಬಿಡುವ’ ಎಂದುಕೊಳ್ಳುವಂತೆ, ಗಟ್ಟಿ ಮನಸ್ಸು ಮಾಡುವಂತೆ ಮಾಡಿದವು. ಆ ಹಡಬೆ ಅಕ್ಕ ನೀಲಾ ಯಾರೊಂದಿಗೊ ಓಡಿ ಹೋಗಿ, ಊರವರು `ಸಾವಿತ್ರಿಗೆ ಒಬ್ಬ ಪುಕಟ್ ಅಳಿಯ ಸಿಕ್ಕ’ ಎಂದು ನಗಾಡುವಂತೆ ಆಗಿತ್ತು. ಅಕ್ಕ ಹೋಗಿದ್ದು ಯಾರೊಂದಿಗೆ, ಅವನು ಎಲ್ಲಿಯವನು ಎಂಬುದು ಇಲ್ಲಿಯವರೆಗೆ ಪತ್ತೆ ಹತ್ತದ ಸಂಗತಿಯಾಗಿತ್ತು. ಅವಳೊಂದು ಮನೆಗೆ ಪತ್ರ ಬರೆಯಬಹುದು, ಒಂದು ತಾರು ಬಿಡಬಹುದು, ಇಲ್ಲ ಗಂಡನೊಂದಿಗೆ ಮನೆಗೇ ಬರಬಹುದು ಎಂದು ಸಾವಿತ್ರಿ,ಮಗಳು ದೇವಿ ಅಂದುಕೊಂಡು ಸುಳ್ಳಾಗಿತ್ತು. ಅಕ್ಕನಂತೆ ನಾನು ಆಗಬಾರದು ಅಂದುಕೊಂಡು ದೇವಿ ಪೂರ್ವ ನಿರ್ಧಾರದಂತೆ ಜೋರು ಮಳೆಯಲ್ಲಿ ರತ್ನ ಅಕ್ಕೋರ ತಂಗಿ ಇರುವ ಊರಿಗೆ ಬಸ್ಸು ಹತ್ತಿದ್ದಳು. ಆ ಸಮಯದಲ್ಲಿ ಊರಲ್ಲಿ ಬತ್ತ ಸಸಿಗಳನ್ನು ನೆಟ್ಟಿ ಮಾಡಲು ಜನರು ಹಣಕಿದ್ದರು.

ಇನ್ನಷ್ಟು

ಮಂಡ್ಯ ರಮೇಶ್ ಮೊದಲ ಅಪರಾಧ

rangavalli inv mail(2)

ಮಾತು-ಮೌನದ ನಡುವೆ ಒಪ್ಪೊತ್ತಿನ ನೆನಪು ಎಂಬ ಶೀಷರ್ಿಕೆ ಹೊತ್ತ ರಂಗವಲ್ಲಿ ಕೃತಿಯ ಮೂಲಕ ನಟ ಮಂಡ್ಯ ರಮೇಶ್ ತಮ್ಮ ಬದುಕಿನ ಹಲವು ಮಜಲುಗಳನ್ನು `ರಂಗವಲ್ಲಿ’ ಯಲ್ಲಿ ಬಿಡಿಸಿದ್ದಾರೆ.

ಮೂಲತಃ ರಂಗಭೂಮಿಯ ಮೈಸೂರಿನ `ರಂಗಾಯಣ’ ಮೂಲಕ ರಂಗಯಾತ್ರೆ ನಡೆಸಿ ನಗರದ ರಾಮಕೃಷ್ಣನಗರದಲ್ಲಿ ನಟನ ರಂಗಮಂಟಪ ಎಂಬ ರಂಗ ಕುಟೀರ ಕಟ್ಟಿ ನಿರಂತರ ರಂಗಭೂಮಿಯ ಕೈಂಕರ್ಯ ನಡೆಸಿಕೊಂಡು ಬಂದವರು.

ಈ ಪಯಣದ ಮೆಲುಕುಗಳಲ್ಲದೇ ರಾಜ್ಯದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅವರ ಲೇಖನಗಳು `ರಂಗವಲ್ಲಿ’ಯಲ್ಲಿ ಅಡಕವಾಗಿದೆ.

ಪುಸ್ತಕ ಸಿರಿ

invitition book

Previous Older Entries

%d bloggers like this: