ಇಂದು ದರ್ಶಿನಿ ಕಾವ್ಯ ಸಂಜೆ

img_0493ಇಂದು  (ಮಂಗಳವಾರ)

ಸಂಜೆ 6 ರಿಂದ 7 ಗಂಟೆವರೆಗೆ

ಗುಜರಾತಿನ ಹೊಸ ದನಿಯ ಕವಯತ್ರಿ

ದರ್ಶಿನಿ ದಾದಾವಾಲಾ

ಅವರೊಂದಿಗೆ ಒಂದು ಕಾವ್ಯ ಸಂಜೆ

ಅಷ್ಟೇ ಅಲ್ಲ,

ಜೋಗಿ, ಎಚ್ ಎನ್ ಆರತಿ ಕೂಡಾ ತಮ್ಮ ಕವನಗಳನ್ನು ವಾಚಿಸುತ್ತಾರೆ

ಮಮತಾ ಸಾಗರ್ ದರ್ಶಿನಿಯ ಕವಿತೆಗಳನ್ನು ಕನ್ನಡಿಸುತ್ತಾರೆ

ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ

1, ಯಮುನಾಬಾಯಿ ರಸ್ತೆ, ಮಾಧವ ನಗರ

ಬೆಂಗಳೂರು-೧


ಕಸ್ತೂರಿಯಲ್ಲಿ ಶಿವು

shivu-photo-for-blogಇಂದು ರಾತ್ರಿ  ಕಸ್ತೂರಿ ಚಾನಲ್ಲಿನಲ್ಲಿ
ರಾತ್ರಿ  ೧೦ ಗಂಟೆ ಯಿಂದ  ೧೦-೩೦ರ  ಸಮಯದಲ್ಲಿ
ನನಗೆ  ರಾಯಲ್ ಫೋಟೋಗ್ರಫಿ  ಪ್ರಶಸ್ತಿ  ಮತ್ತು
ಛಾಯಾ ಕನ್ನಡಿ  ಭೂಪಟಗಳ  ಕುರಿತಾದ
ಸಂದರ್ಶನ  ಮತ್ತು  ಫೋಟೊಗಳ ಪ್ರದರ್ಶನ ಪ್ರಸಾರವಾಗುತ್ತದೆ..
ದಯವಿಟ್ಟು  ತಪ್ಪದೇ  ನೋಡಿ
ಪ್ರೀತಿಯಿಂದ
ಶಿವು…

ಲಿಮ್ಕಾ ದಾಖಲೆ…ವಾರೆ ವಾಹ್ !

downloadvaareva-back1ವ್ಯಂಗ್ಯ ವಿಮರ್ಶಕ ವಸಂತ್ ಹೊಸಬೆಟ್ಟು ಅವರೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಕನ್ನಡಪ್ರಭದಲ್ಲಿ ಇವರು ಬರೆದ ವ್ಯಂಗ್ಯಚಿತ್ರ ಅಂಕಣ ‘ವಾರೆ ವಾಹ್…! ಲಿಮ್ಕಾ ರೆಕಾರ್ಡ್ಸ್ ಗೆ ಸೇರಿದೆ.

ವಸಂತ ಹೊಸಬೆಟ್ಟು ಇಂಡಿಯನ್ ಎಕ್ಸ್ಪ್ರೆಸ್ ನ ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ. ವಸಂತ ಹೆಸರಾಗಿರುವುದು ಮಾತ್ರ ತಮ್ಮ ವ್ಯಂಗ್ಯಚಿತ್ರದಿಂದ. ಮಂಗಳೂರಿನ ಸಾಹಿತಿ ಸೀ ಹೊಸಬೆಟ್ಟು ಅವರ ಪುತ್ರ ವಸಂತ ಬಾಲ್ಯದಿಂದಲೇ ಗೆರೆಗೆ ಮನಸೋತವನು. ಈಗ ವ್ಯಂಗ್ಯ ವಿಮರ್ಶಕ ಕೂಡ. ಕಲಾ ವಿಮರ್ಶಕರೇ ವ್ಯಂಗ್ಯಚಿತ್ರ ವಿಮರ್ಶಕರೂ ಆಗಬೇಕಾದ ಈ ಸಂದರ್ಭದಲ್ಲಿ ವಸಂತ್ ವ್ಯಂಗ್ಯ ಲೋಕ ಮಾತ್ರವನ್ನೇ ತಮ್ಮ ಕ್ಷೇತ್ರವಾಗಿಸಿಕೊಂಡಿದ್ದಾರೆ.

vaareva೨೦೦೪ ರಿಂದ ಸತತವಾಗಿ ಇವರು ‘ಕನ್ನಡಪ್ರಭ’ ಕ್ಕೆ ಬರೆದ ವ್ಯಂಗ್ಯಚಿತ್ರ ಅಂಕಣಕ್ಕೆ ಈಗ ಲಿಮ್ಕಾ ಮನ್ನಣೆ. ಕಂಗ್ರಾಟ್ಸ್ ವಸಂತ್. 

ನಾಗತಿಹಳ್ಳಿ ಹಬ್ಬ

1st-page 8th-page

ಸೃಜನ್ ಪನ್

k11png-1

%d bloggers like this: