ರಂಗಶಂಕರ ಯುಗಾದಿ

image003

ಛಂದ ಪುಸ್ತಕ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ

d2

ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.

ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ.  ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು ಕಳುಹಿಸಬೇಕು.  ಹಸ್ತಪ್ರತಿ ಹಿಂತಿರುಗಿಸಲಾಗುವದಿಲ್ಲ.
d2

ಆಯ್ಕೆಯಾದ ಕತೆಗಾರರಿಗೆ 10000 ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ.  ಈ ಪುಸ್ತಕವನ್ನು 2009ರ ಮೇ ತಿಂಗಳ ಕೊನೆಯಲ್ಲಿ  ಬೆಂಗಳೂರಿನಲ್ಲಿ  ನಡೆಯವ ಸುಂದರ ಸಮಾರಂಭದಲ್ಲಿ  ಬಿಡುಗಡೆ ಮಾಡಲಾಗುವುದು.

ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿಧರ್ಾರ.  ಕತೆಗಳನ್ನು ಕಳಿಸಬೇಕಾದ ವಿಳಾಸ: ಛಂದ ಪುಸ್ತಕ, c/o  ವಸುಧೇಂದ್ರ, -004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76 (ದೂ. 98444 22782)
ಕೊನೆಯ ದಿನಾಂಕ: ಏಪ್ರಿಲ್ 15, 2009

ಬಿ.ಸುರೇಶ ಬರೆದ ಪ್ರತಿಭಟನೆ ಪತ್ರ

2285327-3-charlie-chaplin

ಈಚೆಗೆ ಆಗುತ್ತಿರುವ ಮತೀಯ ಘರ್ಷಣೆಗಳ ಬಗ್ಗೆ ತಾವು ಬಲ್ಲಿರಿ. ಈ ಘರ್ಷಣೆಗಳ ಮುಂದುವರಿದ ಅಧ್ಯಾಯ ಎಂಬಂತೆ ಚಾರ್ಲಿ ಚಾಪ್ಲಿನ್ ನ ವಿಗ್ರಹ ನಿರ್ಮಾಣ ಮಾಡಹೊರಟ ಚಿತ್ರತಂಡದವರನ್ನು ಮತ್ತು ಸ್ವತಃ ಚಾಪ್ಲಿನ್ ನಂತಹ ಮಹಾನ್ ಕಲಾವಿದನನ್ನು ಮತೀಯವಾದಿಗಳು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. `ಯಾವುದೇ ಕಲಾವಿದನಿಗೆ ಜಾತಿ, ಮತ, ಭಾಷೆ, ದೇಶದ ಎಲ್ಲೆಗಳಿಲ್ಲ’ ಎಂದು ನಂಬಿರುವ ನಾವು ಈ ಘಟನೆಯನ್ನು ಖಂಡಿಸಿ, ಪ್ರತಿಭಟಿಸುತ್ತಿದ್ದೇವೆ.

ಮಾರ್ಚ್  20, ಶುಕ್ರವಾರ, ಸಂಜೆ 4.30 ಗಂಟೆಯಿಂದ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಗಾಂಧೀಜಿಯವರ ಪ್ರತಿಮೆಯ ಎದುರು ಪ್ರತಿಭಟನಾ ಸಭೆ ನಡೆಯಲಿದೆ. ನಾಡಿನ ಪ್ರತಿಷ್ಠಿತ ಸಾಹಿತಿಗಳು, ಕಲಾವಿದರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಪ್ರತಿನಿಧಿಗಳು ರಾಜ್ಯಪಾಲರನ್ನು ಭೇಟಿಯಾಗಿ ಮನವಿಯೊಂದನ್ನು ನೀಡಲಿದ್ದಾರೆ.

ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟದ ಪರವಾಗಿ
-ಬಿ.ಸುರೇಶ

%d bloggers like this: