ಚರ್ಚೆ ಆರಂಭವಾಗಿದೆ…ನೂರೆಂಟು ಬಾಳೆಹಣ್ಣು ನಿನಗೆ

‘ಜುಗಾರಿ ಕ್ರಾಸ್’ ಚರ್ಚೆಗಾಗಿಯೇ ಇರುವ ಅಂಕಣ. ಸದ್ಯದ ಆಗುಹೋಗುಗಳಿಗೆ ಹಿಡಿಯುವ ಕನ್ನಡಿ.

ಕುಂದಾಪುರದ ಒತ್ತಿನೆಣೆಯಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ‘ಆತ ಕ್ರಿಶ್ಚಿಯನ್’ ಎಂಬ ನೆಪ ಒಡ್ಡಿ ಬಂದ ಆರೋಪ ಕುರಿತು ಜೋಗಿ ಬರೆದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳು, ಬೈಗುಳಗಳು ಸಾಕಷ್ಟು.

ಒಂದು ಮಿತಿಯಾಚೆ ಇದ್ದ ಪ್ರತಿಕ್ರಿಯೆಗಳನ್ನು ದೂರವೇ ಇಟ್ಟು, ಇನ್ನು ಕೇವಲ ಹೊಗಳಿಕೆಯನ್ನೂ ಕೈಬಿಟ್ಟು ಕೆಲವನ್ನು ಪ್ರಕಟಿಸಿದ್ದೇವೆ. ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ-

image1ದಕ್ಷಿಣ ಕನ್ನಡ ಎತ್ತ ಸಾಗುತ್ತಿದೆ ಮತ್ತು ಹೀಗೆ ಸಾಗಿದರೆ ಏನಾಗಬಹುದು ಎಂಬುದನ್ನು ಚಾಪ್ಲಿನ್ ಶೈಲಿಯ ವ್ಯಂಗ್ಯದಲ್ಲಿ ಹೇಳಿದ್ದಿರಿ. ಹೀಗೆ ಹೇಳುತ್ತಿರುವಂತೆ ಅತ್ತ ಹಿಂದೂ ಸಮಾಜೋತ್ಸವದ ತಯಾರಿ ನಡೆಯುತ್ತಿದೆ, ಇಂತಹ ಕೆಲಸಗಳು ತಾನಾಗಿಯೇ ಕುಸಿಯಲಿ ಅಂತ ಬಿಟ್ಟು ಬಿಡುವುದೋ ಅಥವಾ ಸಾಂಘಿಕ ಹೋರಾಟಕ್ಕೆ ತಯರಾಗುವುದೋ ಎಂಬ ಗೊಂದಲದಲ್ಲಿ ನಾವೆಲ್ಲಾ ಇದ್ದಂತಿದೆ. ಇವರನ್ನು ಇದಿರಿಸುವ ಶಕ್ತಿ ನಮ್ಮಲ್ಲಿ ಇಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕೇ? ಬೌದ್ಹಿಕವಾಗಿ ನಾವೆಲ್ಲ ಬರೆಯುವುದು, ಚರ್ಚಿಸುವುದು ಇದ್ದದ್ದೇ. ಆದರೆ ಬೆಳೆಯುವ ಕೋಮುವಾದವನ್ನು ತಡೆಗಟ್ಟುವುದು ಹೇಗೆ? ಕರಾವಳಿ ಕರ್ನಾಟಕದ ಜನ ನಾಯಕರು ಅನಿಸಿಕೊಂಡ ಶ್ರೀ, ಮೊಯಿಲಿ, ಆಸ್ಕರ್, ಪೂಜಾರಿ ಮೊದಲಾದವರ ಪ್ರತಿಕ್ರಿಯೆ ಇದಕ್ಕೆ ಏನು?

ಹೆಳವನ ಹೆಗಲ ಮೇಲೆ ಕುರುಡ ಕುಳಿತರೆ ಏನಾಗಬಹುದು? ನನಗಂತೂ ತಲೆ ಕೆಟ್ಟು ಹೋಗಿದೆ.

ಪುರುಷೋತ್ತಮ ಬಿಳಿಮಲೆ, ದೆಹಲಿ

image2no doubt, ಇಲ್ಲಿನ ಸನಾತನಿಗಳು ‘ನಾವು ತಾಲಿಬಾನಿಗಳ ಅಪ್ಪಂದಿರು’ ಅನ್ನುವುದನ್ನು ತೋರಿಸಿಕೊಳ್ಳಲು ಹೊರಟಂತಿದೆ. ಬುದ್ಧ, ಕನಕ, ಚಾಪ್ಲಿನ್, ಜಲಗಾರ, ಜಾಡಮಾಲಿಗಳನ್ನು ಮುಟ್ಟುವ ಮುಟ್ಟಿಸಿಕೊಳ್ಳುವ ತಾಕತ್ತಿನ್ನು ಈ ದೇಶದ ಗೊಡ್ಡು ಸನಾತನಿಗಳ ಎದೆಗಳಲ್ಲಿ ಹುಟ್ಟಿಕೊಂಡಿಲ್ಲ. ಬಿಟ್ಟಿ ತಿಂದು ಉಡುಪಿಯ ಮಠದ ಹಂದಿಗಳು ಮಾತ್ರ ಕೊಬ್ಬಿವೆ ಅಂದುಕೊಂಡಿದ್ದೆ, ಆದರೆ ಮಠದ ಗಟಾರದ ಪರಮ ಪವಿತ್ರ ತೀರ್ಥ ಕುಡಿದವರು ಇಷ್ಟು ವಿಕೃತರಾಗಬೇಕೆ?

ಜಾತಿಗೂ, ಮೈಬಣ್ಣಕ್ಕೂ , ಪ್ರತಿಭೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಅನ್ನುವ ತಿಳಿವಳಿಕೆಯೇ ಈ ದೊಡ್ಡ ದೇಶಕ್ಕಿನ್ನು ಬಂದಿಲ್ಲ. ಯಾವತ್ತೋ ಶಿಲುಬೆಗೇರಿದ ಯೇಸು ಕ್ರಿಸ್ತನನ್ನೇ ಬಿಡದೆ ಶಿಲುಬೆಯಿಂದ ಎಳೆತಂದು ಮತ್ತೆ ಮತ್ತೆ ಕೊಂದವರಿಗೆ ಚಾಪ್ಲಿನ್ ಯಾವ ಲೆಕ್ಕ. ಜೋಗಿಯವರಿಗೆ ಲೇಖನದ ಜೊತೆಗೆ ತಮ್ಮ ಹಿಂದೂ ಐಡೆಂಟಿಟಿಯನ್ನು ಅಷ್ಟು ಉತ್ಸಾಹದಿಂದ ಹೇಳಿಕೊಳ್ಳುವ ಅಗತ್ಯವಿತ್ತೇ?

-ಕೆ.ಎಲ್.ಚಂದ್ರಶೇಖರ್ ಐಜೂರ್

image2ಜೋಗಿಯವರೆ,
ಚಾಪ್ಲಿನ್ ಘಟನೆ ನಾಚಿಕೆಗೇಡು. ತಲೆತಗ್ಗಿಸುವ ಹಾಗಾಗಿದೆ.
ದಯವಿಟ್ಟು ಇನ್ನೂ ಹೆಚ್ಚಿಗೆ ಬರೀರಿ ಇಂಥದರ ಬಗ್ಗೆ.

ಹಯ್ಯೊ, ಈಗಲೆ ಹಿಟ್ಲರನ ಮಕ್ಕಳು ಎಲ್ಲ ಕಡೆ ತಲೆಯೆತ್ತಿ ಅಬ್ಬರಿಸೋಕೆ ಶುರುಹಚ್ಚಿದಾರೆ. ಇನ್ನುಹೀಗೇ ಮುಂದುವರೆದರೆ ನಾವೆಲ್ಲ ಯಹೂದಿಗಳಿಗೆ ಇಶ್ಯೂ ಮಾಡಿದ ಸ್ಟಾರ್ ಬ್ಯಾಡ್ಜುಗಳ ಥರೆ ಜಾತಿವಾರು ಐಡೆಂಟಿಫಿಕೇಶನ್ ಬ್ಯಾಡ್ಜುಗಳನ್ನ ಧರಿಸಿ ಓಡಾಡಬೇಕಾಗಿ ಬಂದರು ಆಶ್ಚರ್ಯ ಏನಿಲ್ಲ. ಇದನ್ನು ನಾವೆ ವೋಟು ಹಾಕಿ ಕುರ್ಚಿ ಏರಿದವರು ಸುಮ್ಮನೆ ಕೂತು ನೋಡುತ್ತಾರೆ. ಎಲ್ಲ ಢಮಾಕ್ರಸಿಯ ಲೀಲೆಗಳು!! ನೀವು ಹೇಳಿದ ಹಾಗೆ ನಾವು ತಣ್ಣಗೆ ಶಿಲಾಯುಗಕ್ಕೆ ಮರಳಿದರೇ ಒಳ್ಳೆಯದು ಅಂತ ಕಾಣತ್ತೆ. ವಿ ಡಿಸರ್ವ್ ಇಟ್.
ಖೇದವಾಗುತ್ತಿದೆ.

ಟೀನಾ

image2ಜೋಗೀ,
ಇದೇನಿದು? ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಕಳಿಸಿದ್ದೀರಾ? ನಾನು ಕೂಡ ಕಂಪ್ಯೂಟರಿನಲ್ಲಿ ಓದುತ್ತಿದ್ದೇನೆ? ಜ್ಙಾನ ಮಸ್ತಕದಿಂದ ಮಸ್ತಕಕ್ಕೆ ಹರಿಯಬೇಕೇ ಹೊರತು, ಮಸ್ತಕದಿಂದ ಕಂಪ್ಯೂಟರಿಗೆ, ಕಂಪ್ಯೂಟರಿನಿಂದ ಮಸ್ತಕಕ್ಕೆ ಬರಕೂಡದು. ಇದೇ ಕೊನೆ, ನನಗೆ ಗೊತ್ತು, ನೀವಿನ್ನೆಂದೂ ಕಂಪ್ಯೂಟರಿಗೆ ನಿಮ್ಮ ಬರಹ ಕಳಿಸಲಾರಿರಿ, ನಾನೂ ಕೂಡ ಕಂಪ್ಯೂಟರಿನಲ್ಲಿ ಓದುವ ಮಾತೇ ಇಲ್ಲ.

ಏಕೆಂದರೆ ನಿಮ್ಮ ಬರಹ ನನ್ನ ಕಣ್ಣನ್ನು ಪೂರ್ತಿ ತೆರೆಸಿದೆ, ನಾನು ನಿಮಗೆ ಚಿರಋಣಿಯಾಗಿರುತ್ತೇನೆ. ಏನು ಗುರುದಕ್ಷಿಣೆ ಬೇಕೋ ಕೇಳಿ, ಕೊಡುತ್ತೇನೆ. ಚಾಪ್ಲಿನ್ನ ನೆಪದಲ್ಲಿ ನಿಮ್ಮ ಕಣ್ಣು ತೆರೆಸಿದ ಈ ಮಹನೀಯರುಗಳಿಗೆ, ಅವರ ದೆಸೆಯಿಂದ ನಮ್ಮ ಕಣ್ಣು ತೆರೆಸಿದ ನಿಮಗೆ ನಮೋನಮಃ. ನನ್ನ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಹೇಗೆ ಎಂದು ಅಳುತ್ತ ಕೂತಿದ್ದೇನೆ.

– ಕೇಶವ

image2ಅಯ್ಯೋ ರಾಮ ರಾಮಾ… ದೇವರೇ…. ನಾನು ಇನ್ನು ಮೇಲೆ ಕಿರಿಸ್ತಾನರ ಈ ಸಮೃದ್ಧ ದೇಶದಲ್ಲೇ ಸಿಕ್ಕಿಬಿದ್ದೆನೆ? ನಡೆದುಕೊಂಡು ಊರು ಸೇರಲೂ ಸಾಧ್ಯವಿಲ್ಲವೆ? ಭಗವಂತಾ ಹನುಮಂತಾ, ಒಮ್ಮೆ ಬಂದು ನನ್ನನ್ನೂ ನನ್ನ ಗಂಡನನ್ನೂ ಈ ದೇಶದಿಂದ ಹೊತ್ತುಕೊಂಡು ಹೋಗಿ ನಮ್ಮ ಭರತ ಭೂಮಿಯ ಪುಣ್ಯನೆಲದಲ್ಲಿ ಇಳಿಸಿಬಿಡಪ್ಪಾ. ಅಲ್ಲಿಗೆ ಸೇರಿದ ಮೇಲೆ, ಅಲ್ಲಿಯ ಮಣ್ಣಿನಲ್ಲೇ ಬೆಳೆದ ನೂರೆಂಟು ಬಾಳೆಹಣ್ಣುಗಳನ್ನು ನಿನಗೆ ಅರ್ಪಿಸುತ್ತೇನೆ.

ಈ ಜ್ಞಾನೋದಯ ನೀಡಿದ ಗುರುಃಬ್ರಹ್ಮ ಜೋಗಿಯವರೇ, ನಿಮ್ಮಡಿಗೂ ಹೊಸದೊಂದು ಪಾದುಕೆ ಅರ್ಪಿಸುತ್ತೇನೆ.

ಸುಪ್ತದೀಪ್ತಿ


%d bloggers like this: