ನಾಳೆ ಅಲ್ಲ…ಮುಂದಿನ ಶನಿವಾರ…

h-exp-03

ಫಿಶ್ ಮಾರ್ಕೆಟ್

ಈ ಬಾರಿ

ಖ್ಯಾತ ನಿರ್ದೇಶಕ

ಟಿ ಎನ್ ಸೀತಾರಾಂ

ಅವರೊಂದಿಗೆ ಆಪ್ತ ಸಂವಾದ

೨೧ ಮಾರ್ಚ್ ಶನಿವಾರ

ಸಂಜೆ ೬ ಕ್ಕೆ

ವಿವರಗಳು ಸದ್ಯದಲ್ಲೇ… ನಿರೀಕ್ಷಿಸಿ

ಮಂಗಳೂರಿನತ್ತ ಮಾನವತಾ ನಡಿಗೆ

maanavathaa-vedike-1 manavatha-vedike-2

ನೀವು, ನೀಲು ಮತ್ತು ನಾವು..

ಲಂಕೇಶ್ ಅಂದ್ರೆ ನೀಲು, ನೀಲು ಸಿಕ್ರೆ ಲಂಕೇಶ್ ನೆನಪಾಗುತ್ತದೆ. ನೀಲು ಸೃ‍ಷ್ಟಿಕರ್ತ ಲಂಕೇಶ್ ಸ್ಮರಿಸುತ್ತಾ..

-ಅಲೆಮಾರಿ

poetry_reading

ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ
ಹಣ, ನೆಲಹೊನ್ನು ಬೇಕು
ಕೆಲವರಿಗೆ ಪ್ರೀತಿ;
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.

***

ದುಷ್ಟ ಪುಸ್ತಕ ಅಪ್ಪಟ ಅಪಾಯದ್ದು
ಯಾಕೆಂದರೆ
ದುಷ್ಟ ಮನುಷ್ಯನಂತೆ ಅದು
ಅಕಸ್ಮಾತ್
ಪಶ್ಚಾತ್ತಾಪ ಪಡಲಾರದು.
***

ಹೂಗಳ ಮುಗ್ಧ ಚೆಲುವು
ಮತ್ತು ಎರಗಿ, ಹೀರಿ, ಸುಖಿಸುವ
ಚಿಟ್ಟೆಯ ವ್ಯಭಿಚಾರಗಳೇ
ಕಾಯಿ, ಹಣ್ಣು, ಬೀಜಗಳ ಹುಟ್ಟಿಗೆ ಕಾರಣ.

***

ವಿಲಾಸಿ ತರುಣಿ ಕಾಲೂರಿ
ಪಾಪ ನಿವೇದನೆ ಮಾಡಿಕೊಳ್ಳುತ್ತಿರಲು
ಮುದಿ ಸನ್ಯಾಸಿಯ.
ಕಾಮವೂ ಕೆರಳುವುದು.
ಏನನ್ನೂ ಕೆರಳಿಸದ
ನಿಚ್ಚಳ ಬೆಳಕಿನಜಡ ರೂಪಕ್ಕಿಂತ
ಕತ್ತಲ ಕೋಣೆಯ
ಸ್ಪರ್ಶ, ಗಂಧಗಳೇ ಜೀವಂತ.

***

ರಾಜ್ಯಗಳನ್ನು ಗೆಲ್ಲಲಾಗದ
ಚಕ್ರವರ್ತಿಯ ಅವಮಾನ
ಸಂಗಾತಿಯ ಹೃದಯ ಗೆಲ್ಲಲಾಗದ
ತರುಣನ ಪರಿತಾಪಕ್ಕಿಂತ
ದೊಡ್ಡದೇನಲ್ಲ .

***

ಕಂಡದ್ದು ಕಂಡಹಾಗೆ
ಹೇಳುವವನ ವರಸೆಗೆ
ಮರುಳಾಗಬೇಡಿ
-ಕಂಡ ಕಣ್ಣು, ಹೇಳುವ ನಾಲಗೆ
ಬೇರೆ ಬೇರೆ!

***

ನೀಲುವಿನಂತೆ ಬರೆಯಲು ಬಯಸುವ
ಜಾಣೆಯರು
ನೀಲುವಿನಂತೆ ಭಯ, ಕಾತರ,
ಆತಂಕ ಪಡುವುದ ಕಲಿಯಬೇಕು.

***

ಕಾಳಿದಾಸ ಸುಂದರಿಯ ವರ್ಣಿಸುವಾಗ
ತನ್ನ ವರ್ಣನೆಯನ್ನೇ ಹೆಚ್ಚು ಪ್ರೀತಿಸಿದ
ಅನಿಸುತ್ತದೆ, ಕ್ಷಮಿಸಿ.
***

ಕಡು ಬಡವ ಕೂಡ
ತನ್ನ ಗುಡಿಸಲಲ್ಲಿ
ಸುಂದರ ಮಣ್ಣಿನ ತಟ್ಟೆಯ ಪಕ್ಕಕ್ಕೆ
ಹೊಳೆವ ತಾಮ್ರದ ಗಿಂಡಿಯಲ್ಲಿ
ನೀರಿಟ್ಟುಕೊಂಡರೆ
ಅದೇ ಅಭಿರುಚಿ.

ಮಹಿಳೆ: ಸಾಹಿತ್ಯ, ಚಳವಳಿ

seminar_invite

seminar_inviteq

%d bloggers like this: