ಜೋಗಿ ಬರೆದಿದ್ದಾರೆ: ಇಂಗ್ಲಿಷ್ ಗೀತೆಯ ಕನ್ನಡ ಮಾತೆ?

jogi22ಜೋಗಿ

ಸುಡುಬೇಸಗೆಯ ಇಳಿಸಂಜೆಯ ಹಾಗೆ, ಚಳಿಗಾಲದ ಎಳೆಬಿಸಿಲಿನ ಹಾಗೆ ಖುಷಿಕೊಡುವ ಸಾಹಿತ್ಯಪ್ರಕಾರ ಎಂದರೆ ಕಾವ್ಯ. ಈಗ ತುಂಬ ಜನಪ್ರಿಯವಾಗಿರುವ ಕಾದಂಬರಿ, ಸಣ್ಣಕತೆ, ಪ್ರಬಂಧದಂಥ ಪ್ರಕಾರಗಳು ಹುಟ್ಟಿಕೊಂಡದ್ದು ತೀರಾ ಇತ್ತೀಚೆಗೆಆರಂಭಿಕ ಸಾಹಿತ್ಯವನ್ನು ನೋಡಿದರೆ ಎಲ್ಲಾ ಭಾಷೆಯಲ್ಲೂ ಅದು ಕಾವ್ಯದ ರೂಪದಲ್ಲೇ ಇರುವುದನ್ನು ಕಾಣಬಹುದು. ನಮ್ಮಲ್ಲೂ ಆದಿಕವಿ ಪಂಪ, ನಂತರದ ಮಹಾಕವಿಗಳೆಲ್ಲ ಕಾವ್ಯವನ್ನೇ ಬರೆದರು. ಕಾವ್ಯದ ರೂಪದಲ್ಲೇ ಕತೆಯನ್ನೂ ಹೇಳಿದವರು.

ರಾಮಾಯಣ, ಮಹಾಭಾರತದಂಥ ಕಥನಗಳೂ ಕಾವ್ಯದ ರೂಪದಲ್ಲಿ ಏಕಿದ್ದವು ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ನಮ್ಮದು ಶ್ರುತಿ ಮತ್ತು ಸ್ಮೃತಿ ಸಂಸ್ಕೃತಿ. ಕೇಳಿ ಮನನ ಮಾಡಿಕೊಂಡು ನೆನಪಿಟ್ಟುಕೊಂಡು ಒಪ್ಪಿಸಬೇಕಾಗಿದ್ದ ಕಾಲ ಅದು. ಕೇಳಿ ನೆನಪಿಟ್ಟುಕೊಳ್ಳುವುದಕ್ಕೆ ಕಾವ್ಯದಷ್ಟು ಸುಲಭವಾದ ಪ್ರಕಾರ ಮತ್ತೊಂದಿಲ್ಲ. ಲಯಬದ್ಧವಾಗಿ, ರಾಗಬದ್ಧವಾಗಿ ಹಾಡಲ್ಪಟ್ಟದ್ದು ನೆನಪಿನಲ್ಲಿ ಉಳಿಯುವುದು ಸುಲಭ.

 

poetry1ಯಾರು ಅಂಕುಶವಿಟ್ಟರೂ ನನ್ನ ಮನಸ್ಸು ಬನವಾಸಿಯನ್ನು ನೆನೆಯುತ್ತದೆ ಎಂಬ ಸಾಲು ಓದಿದಾಗ ಅರ್ಥಪೂರ್ಣವಾಗಿಯೇ ಕೇಳಿಸುತ್ತದೆ. ಆದರೆ ಅದು ಕವಿಯ ಮಾತಾಗಲಾರದು. ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಬಹುದುಯಾರೇ ಅಂಕುಶ ಇಟ್ಟರೂ ಬನವಾಸಿಯನ್ನು ನನ್ನ ಮನಸ್ಸು ನೆನೆಯುತ್ತದೆ ಎಂದೋ ಯಾರೇ ಅಡ್ಡಿಪಡಿಸಿದರೂ ನಾನು ಬನವಾಸಿಯನ್ನು ಸ್ಮರಿಸುತ್ತೇನೆ ಎಂದರೂ ಅರ್ಥದಲ್ಲಿ ವ್ಯತ್ಯಾಸ ಆಗುವುದಿಲ್ಲ. ಆದರೆ ಅದು ಕವಿಯ ಮಾತಾಗಿ ಉಳಿಯುವುದಿಲ್ಲ.

ಹೇಳುವವನ ಹೇಳಿಕೆಯಾಗಷ್ಟೇ ನಮ್ಮನ್ನು ತಲುಪುತ್ತದೆ. ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ, ಬನವಾಸಿ ದೇಶಮಂ ಎಂದಾಗಲೇ ಅದು ಕವಿವಾಣಿ. ಅದನ್ನು ಬೇರೆ ರೀತಿಯಲ್ಲಿ ಹೇಳುವುದು ಕಷ್ಟ. ಹೀಗಾಗಿ ಅದಕ್ಕೊಂದು ಅನನ್ಯತೆ ಬರುತ್ತದೆ. ಅಂಥ ಅನನ್ಯತೆ ಬರಬೇಕಾದರೆ ಕಾವ್ಯದಲ್ಲೇ ಅದನ್ನು ಹೇಳಬೇಕು ಎಂಬುದನ್ನು ಸಂಸ್ಕೃತ ಮತ್ತು ಹಳೆಗನ್ನಡದ ಕವಿಗಳು ಅರ್ಥ ಮಾಡಿಕೊಂಡಿದ್ದರು.

ಯಾವುದೇ ಕಾವ್ಯವನ್ನು ತೆಗೆದುಕೊಂಡರೂ ಅರ್ಥ ಮತ್ತು ಭಾವಕ್ಕಿಂತ ಮುಖ್ಯವಾಗುವುದು ಕವಿಯ ಮಾತಲ್ಲೇ ಅದನ್ನು ಕೇಳುವ ಖುಷಿ. ಅದನ್ನು ಮೂಲಕ್ಕಿಂತ ಚೆನ್ನಾಗಿ ವಿಶ್ಲೇಷಿಸಬಲ್ಲ ಟೀಕಾಕಾರನೋ ಅರ್ಥಧಾರಿಯೋ ನಮಗೆ ಸಿಗಬಹುದು. ಆದರೆ ಅರ್ಥಸ್ಪುರಣ ಆಗುವುದು ಮೂಲಕಾವ್ಯದ ಸಾಲುಗಳಿಂದ ಎನ್ನುವುದನ್ನು ಮರೆಯುವಂತಿಲ್ಲ. ಉದಾಹರಣೆಗೆ ರಾಮಾಯಣದ ಬಾಲಕಾಂಡದಲ್ಲಿ ಬರುವ ಶ್ಲೋಕವನ್ನೇ ನೋಡು:

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ

ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಂ

ಶ್ಲೋಕ ಅರ್ಥವಾಗುವುದಿಲ್ಲ ಎಂದು ನೀನು ಹೇಳುತ್ತಿ ಎಂದು ನನಗೆ ಗೊತ್ತು. ಅದನ್ನು ಅನುವಾದಿಸಿದರೆ ಅದರ ಅರ್ಥವಷ್ಟೇ ನಮಗೆ ದಕ್ಕುತ್ತದೆ. ಕಾವ್ಯದ ಸೊಬಗು ಮಾಯವಾಗುತ್ತೆ. ಹೀಗಾಗಿ ಕಾವ್ಯವನ್ನು ಭಾಷೆ ಕಲಿತಾದರೂ ಮೂಲದಲ್ಲೇ ಓದುವುದು ಒಳ್ಳೆಯದು.


ಕವಿತೆ ಅರ್ಥವಾಗುವುದಿಲ್ಲ ಎಂಬ ಎಂಬ ಮಾತಿಗೆ ಅರ್ಥವಿಲ್ಲ ಎಂದು ನನಗೆ ಅನ್ನಿಸುವುದು ಅದೇ ಕಾರಣಕ್ಕೆ. ನಾನು ತಾಜ್ಮಹಲ್ ನೋಡಿ ಬಂದು ಅದು ಹೇಗಿದೆ, ಎಷ್ಟು ಸುಂದರವಾಗಿದೆ ಎಂದು ವರ್ಣಿಸಿದ ಹಾಗೆ ಅನುವಾದ. ತಾಜ್ಮಹಲ್ ಹೀಗಿದೆ ಎಂಬ ಕಲ್ಪನೆ ನಿನಗೆ ಬರಬಹುದೇ ವಿನಾ ಪರಿಸರ, ಅಲ್ಲಿನ ಗಾಳಿ, ಬೆಳಕು, ಘಮ, ಅದನ್ನು ಕಂಡಾಗ ಮೂಡುವ ನೆನಪು, ಅನುಭೂತಿ ಎಲ್ಲವೂ ಅದರೆದುರು ನಿಂತಾಗಲೇ ಮನಸ್ಸನ್ನು ಮುದಗೊಳಿಸಬೇಕು.

ಆಗಲೇ ಅದು ನಮ್ಮನ್ನು ತಟ್ಟುವುದು. ಇನ್ನು ತುಂಬಾ ಒಳ್ಳೆಯ ಅನುವಾದ ತಾಜಮಹಲ್ಲಿನ ಫೋಟೋ ನೋಡಿದಷ್ಟು ಸೊಗಸಾಗಿರಬಹುದು ಅಷ್ಟೇ. ತಾಜಮಹಲ್ಲಿನ ಮುಂದೆ ನಿಂತ ಅನುಭವವನ್ನು ಅದು ಕೊಡಲಾರದುಆದರೆ, ಪ್ರತಿಯೊಂದು ಕವಿತೆಯೂ ನಮಗೆ ಗೊತ್ತಿರುವ ಭಾಷೆಯ ಮೂಲಕವೇ ನಮಗೆ ಅರ್ಥವಾಗುತ್ತಾ ಹೋಗುತ್ತದೆ ಎಂದು ನೀನು ವಾದಿಸಬಹುದು. ಅದೂ ನಿಜವೇ ಆದರೂ, ಅರ್ಥವಾಗುವುದು ಬೇರೆ, ಅನುಭವವಾಗುವುದೇ ಬೇರೆ. ಪರಮಹಂಸರು ತಲೆಯ ಮೇಲೆ ಕೈಯಿಟ್ಟಾಗ ವಿವೇಕಾನಂದರಿಗೆ ಏನನ್ನಿಸಿತು ಅನ್ನುವುದನ್ನು ನಾವು ಓದಿ ಅರ್ಥಮಾಡಿಕೊಂಡಷ್ಟೇ ನಮಗದು ಸತ್ಯ. ಅವರಿಗೆ ಆಗ ಅನಿರ್ವಚನೀಯ ಅನುಭವ ಆಗಿರಬಹುದು. ಹೇಳಲಾಗದ ಅನುಭವವನ್ನು ಮಾತಿನ ಮೂಲಕ ದಾಟಿಸಿದಾಗ ದಕ್ಕುವುದು ಮಾತಿಗೆ ಬಲವಿದ್ದಷ್ಟು ಮಾತ್ರ.

More

ಅಯ್ಯೋ… ನಿಮ್ಮ ಬ್ಲಾಗೇ ಸರಿ ಇಲ್ಲ?

ರವಿ ಹೆಗಡೆ ಕಿವಿಮಾತು 

kannada Bloggers ನಿಂದ  

 

ನಾನು ಎಷ್ಟೊ ಕನ್ನಡ ಬ್ಲಾಗುಗಳನ್ನು, ವೆಬ್ ಸೈಟುಗಳನ್ನು ನೋಡಿದ್ದೇನೆ. ಶೇ.50ಕ್ಕಿಂತ ಹೆಚ್ಚು ಕನ್ನಡದ ಬ್ಲಾಗು ಹಾಗೂ ವೈಬ್ ಸೈಟಿನಲ್ಲಿ ಫಾಂಟುಗಳ ಸಮಸ್ಯೆ ಇದೆ. ಅದಕ್ಕಾಗಿ ಬ್ಲಾಗಿನಲ್ಲೇನಿದೆ ಎಂದು ಓದಲು ಕಷ್ಟ ಪಟ್ಟಿದ್ದೇನೆ. ಒಬ್ಬೊಬ್ಬರ ಬ್ಲಾಗ್ ಓದಲು ಒಂದೊಂದು ಥರ ಬ್ರೌಸರ್ ಬೇಕು!

ಕೆಲವು ಬ್ಲಾಗುಗಳನ್ನು Internet Explorerನಲ್ಲಿ ಓದಲು ಸಾಧ್ಯವಾಗುತ್ತದೆ. ಆದರೆ, Firefoxನಲ್ಲಿ ಗಿಜಿಬಿಜಿ ಅಕ್ಷಗಳು ಕಾಣಿಸುತ್ತವೆ. ಇನ್ನು ಕೆಲವು ಬ್ಲಾಗುಗಳನ್ನು Internet Explorerನಲ್ಲಿ ಓದಲಾಗದು ಆದರೆ, firefoxನಲ್ಲಿ ಅಚ್ಚುಕಟ್ಟಾಗಿ ಓದಬಹುದು. ಇನ್ನೂ ಕೆಲವು ಬ್ಲಾಗುಗಳಲ್ಲಿ ಹೆಡ್ಡಿಂಗ್ ಓದಬಹುದು, ಬರಹ ಓದಲಾಗದು. ಇನ್ನಷ್ಟರಲ್ಲಿ ಹೆಡ್ಡಿಂಗ್ ಕಾಣಿಸದು, ಬರಹ ಓದಬಹುದು.

browser1ನನ್ನಂತೆ ಅನೇಕರು ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ನಿಮ್ಮಲ್ಲೂ ಅನೇಕರಿಗೆ ಈ ಅನುಭವ ಆಗಿರಬಹುದು. ಆದರೆ, ಇದು ನಮ್ಮ ಬಹುತೇಕ ಬ್ಲಾಗರುಗಳಿಗೆ ಗೊತ್ತಿಲ್ಲ ಎನಿಸುತ್ತದೆ.

ಇದೆಲ್ಲಾ ಸಮಸ್ಯೆಗೆ ಎರಡು ಮುಖ್ಯ ಕಾರಣ
1 – ಬ್ರೌಸರುಗಳ ಸಾಮರ್ಥ್ಯ
2 – ಬ್ಲಾಗ್ ಟೆಂಪ್ಲೇಟುಗಳ ಮಿತಿ

ಜಗತ್ತಿನಲ್ಲಿ ಅನೇಕ ಥರದ ಬ್ರೌಸರುಗಳು, ಅವುಗಳ ವಿವಿಧ ವರ್ಷನ್ನುಗಳು ಇವೆ. ಅವು ಬೇರೆ ಬೇರೆ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತವೆ. ಆಗ ಹಲವಾರು ಸೈಟುಗಳು ಡಿಸೈನು ಹಾಗೂ ಫಾಂಟುಗಳ ಸಮಸ್ಯೆ ಅನುಭವಿಸುತ್ತವೆ. ಈ ಸಮಸ್ಯೆ ಕನ್ನಡದಂಥ ಭಾಷೆಗೆ ಹೆಚ್ಚು. ಆದ್ದರಿಂದ, ಎಲ್ಲ ಥರದ ಬ್ರೌಸರುಗಳಲ್ಲೂ, ಎಲ್ಲ ವರ್ಷನ್ನುಗಳಲ್ಲೂ, ಎಲ್ಲಾ ಆಪರೇಟಿಂಗ್ ಸಿಸ್ಟಂಗಳಲ್ಲೂ ಸಮಾನ ರೀತಿಯಲ್ಲಿ ಓದುವಂತೆ ಮಾಡುವುದು ನನ್ನ ನಿಮ್ಮಂಥ ಕನ್ನಡದ ಸಾಮಾನ್ಯ ಬ್ಲಾಗರುಗಳಿಗೆ ಕಷ್ಟ.

ಅದಕ್ಕಾಗಿ ಅತಿ ಹೆಚ್ಚು ಜನರು ಬಳಸುವ ಬ್ರೌಸರುಗಳಲ್ಲಿ ನಿಮ್ಮ ಬ್ಲಾಗ್ ಕಾಣಿಸುತ್ತಿದೆಯೋ ಎಂದು ಖಾತರಿಪಡಿಸಿಕೊಳ್ಳಿ ಸಾಕು.

More

ಪ್ರಗತಿಪರ ಚಳವಳಿಗಳ ಸ್ಥಿತಿ ಗತಿ

samvada-1

samvada-2

ಮಾಧ್ಯಮ ಸ್ವಾತಂತ್ರ್ಯ ಸಂಕಿರಣ

download-1

‘ಕುಂದಾಪ್ರಕನ್ನಡ’ ದ ಅಳಲು

 

ನೀವೆಂತಕೆ ಮಕ್ಳಿಗೆ ಕುಂದಾಪ್ರ ಕನ್ನಡ ಕಲ್ಸುದಿಲ್ಲ…?

-‘ಕುಂದಾಪ್ರಕನ್ನಡ’ ದಿಂದ

3228177923_a71e94c4c0ಚಿತ್ರ :ಬಾಲಸುಬ್ರಹ್ಮಣ್ಯ ಭಟ್

ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್ ಕುಂದಾಪ್ರದರು ಪ್ಯಾಟಿಗ್ ಬಂದ್ ಸೆಟ್ಲ ಆದೋರು ನಿಮ್ಮ ಮಕ್ಕಳಿಗೆ ಅಲ್ಲಿ ಭಾಷಿಸಂಸ್ಕೃತಿ ಕೊಡುಕೆ ಮರ್ತರಲ್ಲೇ ಮಾರಾಯ್ರೆಇದ್ನ ಕಂಡ್ರೆ ಕೇಂಡ್ರ ಭಾಳ ಭೇಜಾರಾತ್ತಲೆ. ನೀವ್ ಕುಂದಾಪ್ರದ ಜನ ಎಂಥಕ್ಕೆ ಮಕ್ಳ ಮರಿಗೆ ನಿಂ ಕುಂದಗನ್ನಡ ಕಲಸೂದಿಲ್ಲ ಅವ್ರ್ ಪ್ರಶ್ನೆಗೆ ಉತ್ರ ಕೊಡುವ ಅಂದ್ರೆ… ನಂಗ್ ಮದಿಯೇ ಆಯಿಲ್ಲ ಇನ್ನ್ ಮಕ್ಳಿಗೆ ಕಲ್ಸುದ್ ಎಲ್ಲ್ ಬಂತ್. ಆರೂ ಅವ್ರ್ ಕೇಂಡದ್ ಪ್ರಶ್ನೆಗೆ ನೀವೆಲ್ಲ ಎಂತ ಹೇಳ್ತ್ರಿ ಕಾಂಬ ಅಂದೇಳಿ ಇದನ್ನ್ ಬರುಕೆ ಹೊರ್ಟದ್ದ್..

 

ಕುಂದಾಪ್ರ ಬದ್ಯರ್ ಕೆಲ್ಸಕ್ಕಂದೇಳಿಯೋಯಾಪಾರ ಮಾಡುಕಂದೇಳಿಯೋ ಪರವೂರಿಗೆ ಹೋದ್ರೂ ಸೈತನಾನ್ ಕಂಡ್ ಮಟ್ಟಿಗೆ ಹೇಳುದಾರೆಅವ್ರವ್ರ್ ಮಟ್ಟಿಗೆ ಮನ್ಯಗೆ ಕುಂದಾಪ್ರ ಕನ್ನಡದಗೇ ಮಾತಾಡ್ತ್ರ್. ಹಾಂಗಂದೇಳಿ ಇದು ನೂರಕ್ಕ್ ನೂರ್ ಸತ್ಯ ಅಂದೇಳಿ ಹೇಳುಕ್ ಬತ್ತಿಲ್ಲ… ಈಗ ಊರ್ ಬಿಟ್ಟ್ ಸುಮಾರ್ ವರ್ಷ ಆಯಿ ಪರವೂರಗೇ ಖಾಯಂ ಆಯಿ ಬಿಡಾದ ಮಾಡ್ದರ್ ಇದ್ರೆಅವ್ರ ಮಕ್ಳ್ ಅಲ್ಲೇ ಹುಟ್ಟಿ ಬೆಳದ್ದಿದ್ರೆಸುತ್ತ ಮುತ್ತ ಇಪ್ಪರ್ ಎಂತ ಭಾಷಿ ಮಾತಾಡ್ತ್ರೋ ಅದೇ ಭಾಷಿಯಗೇ ದೋಸ್ತಿಗಳ್ ಹತ್ರಶಾಲ್ಯಗೆ ಮಾತಾಡುದ್ರಗೆ ಎಂತ ವಿಚಿತ್ರವೂ ಕಾಂತಿಲ್ಲ. ಆರೆ ಮನ್ಯಗ್ ಮಾತ್ರ ಕುಂದಾಪ್ರ ಕನ್ನಡದಗೇ ಮಾತಾಡ್ತ್ರ್. ಅದೂ ಅಲ್ದೇ ನಾವ್ ಒಂದ್ ಜಾಗದಗೇ ಸುಮಾರ್ ವರ್ಷ ಇದ್ರೆನಮ್ ಬದಿ ಭಾಷಿ ಮಾತುಡವರ್ ನಮ್ ಸುತ್‌ಮುತ್ತ ಇಲ್ದಿದ್ರೆಬ್ಯಾಡ ಅಂದ್ರೂ ಒಂಚೂರಾರೂ ಅವ್ರ್ ಮಾತಾಡು ಭಾಷಿ ನಮ್ಗೇ ಗೊತಿಲ್ದಾಂಗೇ ನಮ್ ಮಾತಗೆ ಬತ್ತ್. ಹಾಂಗಾಯಿ ಕುಂದಪ್ರದರ್ ಅವ್ರವ್ರ್ ಮಕ್ಳಿಗೆ ಅವ್ರ್ ಸಂಸ್ಕೃತಿ ಭಾಷಿ ಕಲ್ಸುದಿಲ್ಲ ಅಂತ ಹೇಳ್ರೆ ನಾನಂತೊ ಒಪ್ಪುಕ್ ತಯಾರಿಲ್ಲ.

 

ಅವ್ರ ಹೇಳ್ದಾಂಗಿನರ್ ಇರ್ತ್ರ್ಇಲ್ಲ ಅಂದೇಳಿ ಅಲ್ಲ. ಅವ್ರಿಗೆ ಕುಂದಾಪ್ರ ಕನ್ನಡ ಅಂದೇಳ್ರ್ ಏನ್ಕನ್ನಡ ಮಾತಾಡುಕೇ ನಾಚ್ಕಿ ಆಪುಕೂ ಸಾಕ್. ಹಾಂಗಿನರ್ ಬಗ್ ಬ್ಲಾಗ್ ಶುರು ಮಾಡದ್ ಸುರಿಗೆ ನಾನೇ ಒಂದ್ ಪೋಸ್ಟ್ ಮಾಡಿದ್ದೆ.  ಒಂದ್ ನಾಲ್ಕಕ್ಷರ ಟುಸ್-ಪುಸ್ ಅಂಬುಕ್ ಕಲ್ತ್ ಮೇಲೆ ನಮ್ ಭಾಷಿ ಮಾತಾಡುಕೆ ಅವ್ರ್ ಭರಾಮಿಗ್ ಕಮ್ಮಿ ಆತ್ತ್. ಇಂಗ್ಲಿಷ್ ಮಾತಾಡುದೇ ಒಂದ್ ಜಾಪ್ ಅಂದೇಳಿ ಅವ್ರ್ ಲೆಕ್ಕ. ನಮ್ ಕೆಲ್ಸಕ್ಕೋ ಮತ್ತೊಂದಕ್ಕೋ ಎಷ್ಟ್ ಬೇಕೋ ಅಷ್ಟ್ ಮಾತಾಡಿನಮ್ಮವ್ರ್ ಹತ್ರ ಮಾತಾಡುವತಿಗೆ ನಮ್ಮ್ ಭಾಷಿ ಮಾತಾಡ್ರೆ ಇವ್ರ ಗಂಟ್ ಎಂತ ಹೋತ್ತೋ ನಂಗಂತೂ ಗೊತಿಲ್ಲ. ಹೀಂಗಿನರ್ ಇಲ್ದೇ ಇಲ್ಲ ಕುಂದಾಪ್ರ ಬದ್ಯಗೆ ಅಂದೇಳಿ ಹೇಳುಕಾತಿಲ್ಲ. ಆರ್ ನಂಗ್ ಗೊತ್ತಿದ್ದ್ ಮಟಿಗೆ ಅಂತರ್ ಮಸ್ತ್ ಜನ ಇಲ್ಲ. ನೀವ್ ಎಂತ್ ಅಂತ್ರಿ…?

 

ನಮ್ ಭಾಷಿ ಮಾತಾಡುಕೆ ಹುಣ್ಸಿಹಣ್ ಮಾಡ್ವರನ್ ಕಂಡ್ರ್ ಕೂಡ್ಲೇ ಒಂದ್ ಕತಿ ನೆನ್ಪ್ ಆತ್ತ್ ಕಾಣಿ. ಇದು ಎಲ್ಲೋ ಓದದ್ದೋ ಯಾರೋ ಹೇಳದ್ದೋ ನೆನ್ಪ್ ಆತಿಲ್ಲ. ಆರೆ ಕತಿ ಭಾರಿ ಗಮ್ಮತಿತ್ತ್. ಕುಂದಾಪ್ರ ಬದಿಯಳ್ ಒಬ್ಳ್ ಫಾರಿನ್ನಿಗ್ ಮದಿ ಆಯಿ ಹೋದ್ಲಂಬ್ರ್. ಮದಿ ಆಯಿ ಒಂದ್ ವರ್ಷ ಆರ್ ಮೇಲೆ ಮೊದಲ್ನೇ ಹೆರ್ಗಿಗೆ ಅಂದೇಳಿ ಅವ್ಳ್ ಗಂಡ ಅವ್ಳನ್ ಊರಿಗ್ ಬಿಟ್ಟ್ ಹೋದ ಅಂಬ್ರ್. ಅವ್ಳ್ ಅಮ್ಮ ಅವ್ಳನ್ ಕರ್ಕಂಡ್ ಡಾಕ್ಟ್ರ ಹತ್ರ ಕರ್ಕಂಡ್ ಹೋರ್. ಡಾಕ್ಟ್ರೂ ಕುಂದಾಪ್ರ ಬದಿಯರೇ… ಆರೂ ಇವ್ಳ್ ಫಾರಿನ್ನಿಂದ ಬಂದದ್ದಲ್ದಾ ಅದನ್ನ್ ತೋರ್ಸ್ಕಂದೇಳಿ ಇವ್ಳ್ ಡಾಕ್ಟ್ರತ್ರ ರೀ ಟುಸ್ಪುಸ್ಅಂದೇಳಿ ಬಟ್ಲರ್ ಇಂಗ್ಲೀಷ್ಗೇ ಮಾತುಡುದಂಬ್ರ್… ಅವ್ಳ್ ಮಾತಾಡ್ತಿದ್ದ ತಪ್ ತಪ್ ಇಂಗ್ಲೀಷ್ 

ಕೇಂಡ್ಡಾಕ್ಟ್ರಿಗೂಒಳ್ಗೊಳ್ಗೇ ತಡ್ಕಂಬ್ಕೆ ಆಗ್ದಿದ್ದಷ್ಟ್ ನೆಗಿ ಬತಿತ್ತ್… ಆರೂ ಕಷ್ಟ್ ಪಟ್ಟ್ ನೆಗಿ ತಡ್ಕಂಡ್ ಇದ್ರ್ಆಯ್ತ್ಅವ್ಳನ್ನ ಪರೀಕ್ಷೆ ಮಾಡಿಮಾತ್ರಿ

ಔಷಿದ್ಧಿ ಎಲ್ಲ ಕೊಟ್ಟ್ಹದ್ನೈದ್ ದಿನ ಬಿಟ್ಟ್ ಆಸ್ಪತ್ರಿಗ್ ಬಂದ್ ಸೇರುಕ್ ಹೇಳ್ರಂಬ್ರ್ಸರಿ ಹದ್ನೈದ್ ದಿನಹೋಯ್ತ್ಅವ್ಳನ್ ಆಸ್ಪತ್ರಿಗೆ ಸೇರ್ಸ್ರ್

ಆಗ್ಳಿಕೂ ಅವ್ಳ್ ಮಾತ್ ಪೂರಾ ಬಟ್ಲರ್ ಇಂಗ್ಲೀಷೇ..  ಎಲ್ಲಿವgಗ್ ಅಂದ್ರ್ ಗುಡ್ಸಿ ಒರ್ಸುಕೆ ಬಪ್ಪರ್ ಹತ್ರವೂ ಇಂಗ್ಲೀಶೇ… ಸರಿ ಇನ್ನೇನ್ ಅವ್ಳಿಗೆ ಹೆರ್ಗಿ ಹೊಟ್ಟಿ ನೋವ್ ಶುರುವಾಯ್ತ್ಹೆರ್ಗಿ ವಾರ್ಡಿಗೆ ಕರ್ಕಂಡ್ ಹೋದ್ರ್ಅಷ್ಟೊತ್ತಿಗೆ ಅಲ್ಲಿಗ್ ಬಂದ್ ಡಾಕ್ಟ್ರಿಗೆ ಅವ್ಳ್ ಬೊಬ್ಬಿ ಕೇಣತ್ತಂಬ್ರ್… ಅಯಯ್ಯಬ್ಯೋಹೊಟ್ಟಿ ನೋವ್ ತಡುಕಾತಿಲ್ಯೋನಂಗೆಡಿದೋ… ಡಾಕ್ಟ್ರೆ ನೋವ್ ಕಡ್ಮಿ ಆಪುಕೆ ಎಂತಾರು ಕೋಡಿನ್ಯೋ… ಅವ್ಳ್ ಬೊಬ್ಬಿಯೇ ಬೊಬ್ಬಿ… ಅಚ್ಚ ಕುಂದಾಪ್ರ ಕನ್ನಡದಗೇ… :-)

  

ನೀವೆಲ್ಲ ಹೀಂಗ್ ಜಾಪ್ ಮಾಡುವರಲ್ಲ ಅಂದೇಳಿ ನಂಗ್ ಗೊತ್ತಿತ್ತ್… ಇಲ್ದಿದ್ರೆ ನೀವೆಲ್ಲ ಈ ಬ್ಲಾಗಿಗೆ ಬತ್ತಿದ್ರ್ಯಾನಿಮ್ಮ್ ಮಕ್ಳತ್ರ ಕುಂದಾಪ್ರ ಕನ್ನಡದಗೇ ಮಾತಾಡ್ತ್ರಿ ಅಲ್ದಾ?

%d bloggers like this: