‘ಥ್ಯಾಂಕ್ಸ್ ಮಾ’ ಗೆ ಲಂಕೇಶ್ ಚಿತ್ರ ಪ್ರಶಸ್ತಿ

ಇಂದು ಪಿ ಲಂಕೇಶ್ ಹುಟ್ಟುಹಬ್ಬ. ಈ ಅಂಗವಾಗಿ ಪ್ರತೀ ವರ್ಷ ನೀಡಲಾಗುವ ಪಿ ಲಂಕೇಶ್ ಚಿತ್ರ ಪ್ರಶಸ್ತಿಗೆ ಇರ್ಫಾನ್ ಕಮಾಲ್ ನಿರ್ದೇಶನದ ‘ಥ್ಯಾಂಕ್ಸ್ ಮಾ’ ಚಿತ್ರ ಆಯ್ಕೆಯಾಗಿದೆ. ಈ ಸಿನೆಮಾದ ಪೋಸ್ಟರ್ ಗಳು ಇಲ್ಲಿವೆ.

ಇನ್ನೊ ಹೆಚ್ಚಿನ ವಿವರಗಳಿಗೆ ‘ಮ್ಯಾಜಿಕ್ ಕಾರ್ಪೆಟ್’ಗೆ ಭೇಟಿ ಕೊಡಿ-  

main

thanksmaa-poster thanksmaa

ಪತ್ರಕರ್ತರಿಗೊಂದು ಸೂರು

journalist-full

 

ಇಲ್ಲೊಂದು ಸಂವಾದ ತಾಣವಿದೆ. ಹೆಸರು-kannada journalists.

ಕನ್ನಡ ಪತ್ರಕರ್ತರ ಮಾತು ಬಿಡಿ. ಸರಿಯಾಗಿ ಸಂವಾದ ಮಾಡಬೇಕು ಎನ್ನುವ ಪತ್ರಕರ್ತರಿಗೆ ಸರಿಯಾದ ವೇದಿಕೆಯಾದರೂ ಎಲ್ಲಿತ್ತು? ಕನ್ನಡಪ್ರಭದ ಕಾರ್ಯ ನಿರ್ವಾಹಕ ಸಂಪಾದಕ ರವಿ ಹೆಗಡೆ ಆ ನಿಟ್ಟಿನಲ್ಲಿ ಒಂದು ವೇದಿಕೆಗೆ ಕಾರಣರಾಗಿದ್ದಾರೆ.

ಇದು ಪತ್ರಕರ್ತರು ತಮ್ಮನ್ನು ಪರಿಚಯಿಸಿಕೊಳ್ಳುವ, ಪರಸ್ಪರ ಗೆಳೆಯರಾಗುವ, ಸಂವಾದ ನಡೆಸುವ, ಬಿಸಿ ಚರ್ಚೆ ಗೆ ಕಾವು ನೀಡುವ, ತಮಗೆ ಗೊತ್ತಿದ್ದನ್ನು ಹಂಚಿಕೊಳ್ಳುವ, ತಾವು ನಡೆಸುತ್ತಿರುವ ಕಾರ್ಯಕ್ರಮಗಳನ್ನು ತಿಳಿಸುವ…ಹೀಗೆ ಎಲ್ಲವನ್ನೂ ಒಂದು ಮಾಡಿದ ವೇದಿಕೆ ಇದು. ಮೊದಲ ಬಾರಿಗೆ ಅನೇಕ ಪತ್ರಕರ್ತರು, ಅದರಲ್ಲೂ ಕನ್ನಡ ಪತ್ರಕರ್ತರು ಒಂದೆಡೆ ಸೇರಿದ್ದಾರೆ. ಸಂವಾದ ನಡೆಸುತ್ತಿದ್ದಾರೆ.

ಪತ್ರಕೆ ವಿನ್ಯಾಸ ಬದಲಾಗುತ್ತಿದೆ ಎಂಬುದು ಗೊತ್ತಾಗಿದ್ದು ಇಲ್ಲಿ, ಎನ್ ಡಿ ಟಿ ವಿ ಈಗ ನಡೆಸುತ್ತಿರುವ ಏಳು ಅದ್ಭುತಗಳು ಜಾಹೀರಾತು ಗಳಿಸುವ ತಂತ್ರವೇ ಎಂದು ಚರ್ಚೆಯಾಗಿದ್ದು ಇಲ್ಲಿ. ಬ್ರೆಕಿಂಗ್ ನ್ಯೂಸ್ ಎನ್ನುವುದು ಹೇಗಿರಬೇಕು ಎಂಬುದರ ಸ್ಪಷ್ಟತೆಗೆ ಒದ್ದಾಡಿದ್ದು ಇಲ್ಲಿ. ಇಲ್ಲಿನ ಚರ್ಚೆಗಳು ಹೇಗಿರುತ್ತದೆ ಎನ್ನುವುದಕ್ಕೆ ಒಂದು ಸ್ಯಾಂಪಲ್ ಆಗಿ ಕಸ್ತೂರಿ ಚಾನಲ್ ನ ಪತ್ರಕರ್ತೆ ಶ್ರೀ ಅವರ ಒಂದು ಲೇಖನ ನೀಡುತ್ತಿದ್ದೇವೆ –

ಹಾಗಾಗಿ ಇನ್ನೇಕೆ ತಡ ನೀವೂ ಬನ್ನಿ

ಒಂದು ಕ್ಲಿಕ್ ಮೂಲಕ ಈ ಎಲ್ಲಕ್ಕೂ ಕೀಲಿಕೈ ಪಡೆದುಕೊಳ್ಳಿ

ಸದಸ್ಯರಾಗಲು ಇಲ್ಲಿ ಕ್ಲಿಕ್ಕಿಸಿ

ಈ ವ್ಯಕ್ತಿ ಮುತಾಲಿಕ್, ಹೆಚ್ಚುಕಡಿಮೆ 29 ಕ್ರಿಮಿನಲ್ ಮೊಕದ್ದಮೆ

-ಶ್ರೀ 

ಇತ್ತೀಚೆಗೆ ದೆಹಲಿಯಲ್ಲಿರುವ ಪತ್ರಕರ್ತ ಡಿ.ಪಿ.ಸತೀಶ್ ತಮ್ಮ ಬ್ಲಾಗಲ್ಲಿ ಬರೆದುಕೊಂಡಿದ್ದುದು ನನ್ನ ಗಮನ ಸೆಳೆದಿದೆ, ಲಿಂಕ್ ಇಲ್ಲಿದೆ.http://ibnlive.in.com/blogs/author/237/d.p.satish.html ಇದು ದಿನಾ ನನ್ನನ್ನು ಕಾಡುವ ವಿಚಾರವಾದ್ದರಿಂದ ಇಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೇನೋ ಅನ್ನುವ hope ನನ್ನದು.

pub_012609-1

ಈ ವ್ಯಕ್ತಿ, ಮುತಾಲಿಕ್, ತನ್ನ ಕೆಲಸವನ್ನು ಆರಂಭಿಸಿದ್ದು 90 ದಶಕದಲ್ಲಿ. ಅಂದಿನಿಂದ ಇಂದಿನವರೆಗೆ ಹೆಚ್ಚುಕಡಿಮೆ 29 ಕ್ರಿಮಿನಲ್ ಮೊಕದ್ದಮೆ ಮುತಾಲಿಕ್ ಮೇಲೆ ದಾಖಲಾಗಿದೆ. ಸತೀಶ್ ಬರೆದ ಹಾಗೆ, ಮಾಧ್ಯಮಗಳು ಹಾಗೂ ಪಬ್ಲಿಸಿಟಿ ಅಂದ್ರೆ ಮುತಾಲಿಕ್-ಗೆ ಬಲು ಇಷ್ಟ. ಕೆಟ್ಟದೋ, ಒಳ್ಳೆಯದೋ, ಒಟ್ಟಿನಲ್ಲಿ ಪಬ್ಲಿಸಿಟಿ ಬೇಕು. ಏನಾದರೊಂದು ಹೇಳುತ್ತಲೇ ಇರಬೇಕು, ಸುದ್ದಿಯಲ್ಲಿರಬೇಕು, ಇದು ಚಟದಂತಾಗಿಬಿಟ್ಟಿದೆ. ಇವರ ಇತ್ತೀಚೆಗಿನ ಘೋಷಣೆಗಳೆಂದರೆ, ಪಾಕಿಸ್ತಾನಿ ಆಟಗಾರರು ಹಾಗೂ ಕಲಾವಿದರಿಗೆ ಭಾರತಕ್ಕೆ ಬರಲು ಬಿಡುವುದಿಲ್ಲವೆಂಬ ಬೆದರಿಕೆ, ಬಾಬಾಬುಡನ್-ಗಿರಿಯಲ್ಲಿ ಕರಸೇವೆ, ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರ ಸಭೆ, ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವಕ್ಕೆ ಬೆಂಬಲಿಸುವವರಿಗೆ ಬೆಂಬಲ ನೀಡುವ ನಿರ್ಧಾರ. ಬುರ್ಖಾ ಹಾಕಿ ಮತದಾನ ಮಾಡುವುದನ್ನು ನಿಷೇಧಿಸಿ ಎಂಬ ಬೇಡಿಕೆ. ಗಡೀಪಾರು ಮಾಡಿದರೆ 10,000 ಕಾರ್ಯಕರ್ತರೊಡನೆ ದಕ್ಷಿಣ ಕನ್ನಡವನ್ನು ಪ್ರವೇಶಿಸುವ ಘೋಷಣೆ.

ಮುತಾಲಿಕ್ ಬೆಳೆದಿದ್ದು ಈಹಿಂದೆಯೂ ಇದೇ ರೀತಿ ಘೋಷಣೆಗಳನ್ನು ಮಾಡುತ್ತ, ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ. ಶಿವಸೇನೆಯಿಂದ ಹೊರಬಂದ ಮೇಲೆ ತಮ್ಮ ವಿಚಾರಧಾರೆಗಳನ್ನು ಇಷ್ಟಪಡುವವರನ್ನು ಬೆಂಬಲಿಗರನ್ನಾಗಿಸಿಕೊಂಡು ರಾಷ್ಟ್ರೀಯ ಹಿಂದೂ ಸೇನೆ ಕಟ್ಟಿದರು. 2008ರ ಚುನಾವಣೆಯಲ್ಲಿ ಸ್ಪರ್ಧೆ, ಸೋಲು. ಪಬ್ ದಾಳಿ ಮುನ್ನ ಶ್ರೀರಾಮಸೇನೆಯ ಹೆಸರು ದೊಡ್ಡದಾಗಿ ಯಾರೂ ಕೇಳೇ ಇರಲಿಲ್ಲವಾದರೂ, ಅದಕ್ಕಿಂತ ದೊಡ್ಡ ಕೆಲಸಗಳನ್ನು ತಾವು ಮಾಡಿದ್ದೇವೆ, ಅದು ತುಂಬಾ ಚಿಕ್ಕದು ಅಂತ ಶ್ರೀರಾಮಸೇನೆಯವರೇ ಹೇಳಿಕೊಂಡಿದ್ದಾರೆ. ಹೌದು, ಮಾಡಿದ್ದು ನಿಜ. ಶಂಕಿತ ಉಗ್ರರನ್ನು ಉಡಾಯಿಸಲಿಕ್ಕೋಸ್ಕರ ಹುಬ್ಬಳ್ಳಿ ನ್ಯಾಯಾಲಯದ ಸ್ಫೋಟಕ್ಕೆ ಸಂಚು ರೂಪಿಸಿದ್ದು ಇವರೇ. ಇದರ ಹಿಂದೆ-ಮುಂದೆ ಇರುವ ಕಥೆಗಳು ನಿಮಗೆಲ್ಲರಿಗೂ ಗೊತ್ತು ಅಂದುಕೊಂಡಿರುವೆ. ಝೀ ಕನ್ನಡ, ಕಸ್ತೂರಿ ಮತ್ತು ಕನ್ನಡಪ್ರಭಾ ಬಿಟ್ರೆ ಬೇರ್ಯಾರೂ ‘ಆಫ್-ದ-ರೆಕಾರ್ಡ್ ‘ ಇದ್ದಿದ್ದಕ್ಕೆ ಪಬ್ಲಿಸಿಟಿ ಕೊಟ್ಟಿರಲಿಲ್ಲ.

ಗುಜರಾತಿನಲ್ಲಿ ನಡೆದ ಗೋಧ್ರಾ ರೈಲು ಭಸ್ಮದ ಘಟನೆ, ಹಾಗೂ ನಂತರದ ಕೋಮುಗಲಭೆ ಘಟನೆಗಳು ಯಾವ ಪ್ರಾಮಾಣಿಕ ಪತ್ರಕರ್ತನಿಗೂ ಸಹ್ಯವಾಗಲಾರವು. ಇಂತಹಾ ಶಕ್ತಿಗಳನ್ನು ಬೆಳೆಯಲು ಬಿಟ್ಟರೆ ಕರ್ನಾಟಕ ಇನ್ನೊಂದು ಗುಜರಾತ್ ಆಗುವ ದಿನ ದೂರವಿಲ್ಲ. ಯಾವ ರಾಜಕೀಯ ಶಕ್ತಿಗಳಿಂದ ಕರ್ನಾಟಕದ ಭಟ್ಕಳ, ಬೀದರ್ ಮುಂತಾದೆಡೆ ಭಯೋತ್ಪಾದಕ ಚಟುವಟಿಕೆಗಳು ತಡೆರಹಿತವಾಗಿ ಸಾಗುತ್ತಿದ್ದವೋ ಅವೇ ಶಕ್ತಿಗಳೇ ಮುತಾಲಿಕ್ ಅಂತಹವರನ್ನೂ ಬೆಳೆಯಲು ಬಿಟ್ಟಿವೆ. ಇದರಲ್ಲಿ ಬಿಜೆಪಿ ಸರಕಾರದ ಪಾಲು ಕಡಿಮೆಯೆಂದೇ ಹೇಳಬೇಕು.

ಬಾಗಲಕೋಟೆ, ದಾವಣಗೆರೆ, ಹುಬ್ಬಳ್ಳಿ-ಧಾರವಾಡದ ನಿರುದ್ಯೋಗಿ ಯುವಕರನ್ನು ಬುಟ್ಟಿಗೆ ಹಾಕಿಕೊಂಡು ಶ್ರೀರಾಮಸೇನೆಯ ಜತೆಗೆ ಇವರು ‘ರಾಷ್ಟ್ರರಕ್ಷಾಸೇನೆ’ ಕಟ್ಟಿದ್ದಾರೆ, ನಿವೃತ್ತ ಮಿಲಿಟರಿ ಅಧಿಕಾರಿಗಳಿಂದ ಸೇನಾತರಬೇತಿ ನೀಡುವ ಪ್ಲಾನ್ ಕೂಡ ಇದೆ. ಅವರೇ ಹೇಳಿಕೊಳ್ಳುವಂತೆ, ಅದು ಆತ್ಮಹತ್ಯಾದಳ. ಹಿಂದುತ್ವದ ಹೆಸರಲ್ಲಿ, ರಾಷ್ಟ್ರರಕ್ಷಣೆಯ ಹೆಸರಲ್ಲಿ ಏನನ್ನಾದರೂ ಮಾಡಲು ಅವರು ಸಿದ್ಧ. ಇವರು ರೀತಿನೀತಿಯಲ್ಲಿ ನಕ್ಸಲರಿಗಿಂತ ಯಾವ ರೀತಿ ಭಿನ್ನ?

ಈಗ ನನ್ನ ಪ್ರಶ್ನೆಗಳೆಂದರೆ,
1) ಈ ಹಂತಕ್ಕೆ ಬೆಳೆದು ನಿಂತವರ ಬಣ್ಣ ಬಯಲು ಮಾಡಿದರೆ ತಪ್ಪಾ ? ನಮ್ಮ ಕಾಲದ ಬೆಳವಣಿಗೆಗಳಿಗೆ ಸ್ಪಂದಿಸುವುದೇ ಪತ್ರಿಕೋದ್ಯಮದ ಕರ್ತವ್ಯ ತಾನೇ?

2) ಇನ್ನೊಂದು ರೀತಿ ಯೋಚಿಸುವಾಗ, ಡಿ.ಪಿ.ಸತೀಶ್ ಹೇಳಿದ ಹಾಗೆ ಇಂಥದಕ್ಕೆ ಪಬ್ಲಿಸಿಟಿ ಕೊಟ್ಟಷ್ಟು ಅವರು ಬೆಳೆಯುತ್ತಾರೆ ಅನ್ನುವುದು ಸತ್ಯ. ಪಬ್ ದಾಳಿಯಾದ ನಂತರ 9 ರಾಜ್ಯಗಳಲ್ಲಿ ಇವರ ಸೇನೆಗೆ ಬೇಡಿಕೆ ಬಂದಿದೆ, ಸಂಖ್ಯಾಬಲ ಹೆಚ್ಚಾಗಿದೆ ಎಂಬುದು ಸತ್ಯ. ಅವರಿಗೆ ಸಿಕ್ಕ ಪಬ್ಲಿಸಿಟಿಯನ್ನು ಸಮರ್ಥವಾಗಿ ಉಪಯೋಗಿಸಿಕೊಂಡು, ಇನ್ನಷ್ಟು ಬೆಳೆದಿರುವುದು ಸತ್ಯ.

ಹಾಗೆಂದು ಕೆಲವು ಸಂದರ್ಭಗಳಲ್ಲಿ, ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸಾಂಪ್ರದಾಯಿಕ ಮನೋಭಾವವನ್ನೇ ಬಂಡವಾಳವಾಗಿರಿಸಿಕೊಂಡು ಆಟವಾಡುತ್ತಿರುವ ಇಂಥವರ ಮೇಲೆ ಕೆಲವೊಮ್ಮೆ ಏನು ಹೇಳುವುದೂ ಕಷ್ಟವಾಗಿಬಿಡಬಹುದು. (ಉದಾಹರಣೆಗೆ, ಪಬ್ ದಾಳಿಯನ್ನು ವಿರೋಧಿಸಿದ 90 ಶೇಕಡಾ ಜನ ಪಬ್ ಸಂಸ್ಕೃತಿಯನ್ನೂ ವಿರೋಧಿಸಿದ್ರು, ಅವರು ಮಾಡಿದ್ದು ಸರಿಯಿದೆ, ಮಾಡಿದ ರೀತಿ ಮಾತ್ರ ಸರಿಯಿಲ್ಲ ಅಂದ್ರು. ಅದಕ್ಕೆ ಎಡ-ಬಲ-ಕಾಂಗ್ರೆಸ್-ಬಿಜೆಪಿ ಅನ್ನೋ ಬೇಧ ಇರಲಿಲ್ಲ)

ಒಟ್ಟಿನಲ್ಲಿ ಹೇಳುವುದಾದರೆ ಈ ವಿಷಯ ತುಂಬಾ ಸೂಕ್ಷ್ಮ. ಇಂಥಾ ಸಮಯದಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಏನು, ಹೇಗಿದ್ದರೆ ಸರಿ? ಏನೂ ಇಲ್ಲವೆಂಬಂತೆ ಸುಮ್ಮನಿರುವುದು ಸರಿಯೋ, ಅಥವಾ ಇರುವ ಸತ್ಯವನ್ನು ಒಪ್ಪಿಕೊಂಡು ಅದರಲ್ಲಿರುವ ತಪ್ಪನ್ನು ಎತ್ತಿಹಿಡಿಯುವುದು, ಓದುಗರ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತರುವುದು ಸರಿಯೋ?

%d bloggers like this: