ಇಂದೇ… ಅಲ್ಲ…. ಈಗಲೇ ಸದಸ್ಯರಾಗಿ

travel_blogs_and_bloggers

ಕನ್ನಡದ ಬ್ಲಾಗ್ ಲೋಕಕ್ಕೆ ಒಂದು ಸಂತಸದ ಸುದ್ದಿ. ಕನ್ನಡದ ಬ್ಲಾಗಿಗರನ್ನೆಲ್ಲಾ ಒಂದೆಡೆ ಸೇರಿಸುವ ಪ್ರಯತ್ನ ಆರಂಭವಾಗಿದೆ. ಕನ್ನಡ ಬ್ಲಾಗ್ ಲೋಕ ದಿನೇ ದಿನೇ ಬೆಳೆಯುತ್ತಿದೆ. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು, ಇನ್ನಷ್ಟು ಮತ್ತಷ್ಟು ಜನ ಬ್ಲಾಗ್ ಅಂಗಳಕ್ಕೆ ಬರುವಂತಾಗಲು ಕನ್ನಡ ಬ್ಲಾಗಿಗರ ಕೂಟ ತಲೆ ಎತ್ತಿದೆ.

ಅರ್ಥಪೂರ್ಣ ಚರ್ಚೆ, ಸಂವಾದ, ಭಿನ್ನಾಭಿಪ್ರಾಯದ ಜೊತೆಗೆ ಸ್ನೇಹ ಎಲ್ಲವೂ ಇಲ್ಲಿರುತ್ತದೆ. ಬ್ಲಾಗ್ ಕಾರ್ಯಾಗಾರ ನಡೆಸಲಾಗುತ್ತದೆ. ಬ್ಲಾಗ್ ಇನ್ನೂ ಚಂದ ಮಾಡುವ ಬಗ್ಗೆ ಬ್ಲಾಗಿಗರೇ ಇಲ್ಲಿ ಪರಸ್ಪರ ಸಲಹೆ ಸೂಚನೆ ನೀಡುತ್ತಾರೆ. ಆದ್ದರಿಂದ ಬನ್ನಿ ಬ್ಲಾಗ್ ಲೋಕ ಪ್ರವೇಶಿಸಿ.

ನಿಜಕ್ಕೂ ಬ್ಲಾಗಿಗರನ್ನು ಒಂದೆಡೆ ಸೇರಿಸಲು ಹೆಜ್ಜೆ ಹಾಕುವಾಗ ಇಷ್ಟು ಅದ್ಭುತ ಪ್ರತಿಕ್ರಿಯೆ ಬರುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಮೊದಲನೆಯದಾಗಿ ನಾವು ಥ್ಯಾಂಕ್ಸ್ ಹೇಳಬೇಕಾಗಿದ್ದು ಕನ್ನಡಪ್ರಭದ ಕಾರ್ಯ ನಿರ್ವಾಹಕ ಸಂಪಾದಕ ರವಿ ಹೆಗಡೆ ಅವರಿಗೆ.

 

 

ಅವರು ಕಳಿಸಿದ ಒಂದು ಮೇಲ್ ನಮಗೆ ಈ ಹೊಸ ವೇದಿಕೆ ಹುಟ್ಟುಹಾಕುವ ಹುಮ್ಮಸ್ಸು ತುಂಬಿತು.

ಈ ಮಧ್ಯೆ ಪುರುಷೋತ್ತಮ ಬಿಳಿಮಲೆ, ಸಿ ಎನ್ ರಾಮಚಂದ್ರನ್, ಎಂ ಎಸ್ ಮೂರ್ತಿ, ಹಂಪ ನಾಗರಾಜಯ್ಯ, ಎಂ ಎಸ್ ತಿಮ್ಮಪ್ಪ ರಂತಹ ಹಿರಿಯರೂ, ಜೋಗಿ, ನಾಗರಾಜ ವಸ್ತಾರೆಯಂತಹ ಬರಹಗಾರರೂ ಸೇರಿದಂತೆ ಹುರುಪಿನ ಬ್ಲಾಗಿಗರೆಲ್ಲರೂ ಈ ಒಂದು ಮರದಡಿಗೆ ಸೇರುತ್ತಿರುವುದು ಸಂತೋಷ ಕೊಟ್ಟಿದೆ.

ನಿಮ್ಮ ಫೋಟೋಗಳನ್ನು ಬಳಸಿ. ಈಗಾಗಲೇ ಬಿಳಿಮಲೆ ಅವರು ಮಾಡಿರುವಂತೆ ಲೇಖನಗಳನ್ನು ಸೇರ್ರಿಸುತ್ತಾ ಹೋಗಿ ಸೃಜನ್ ಮಾಡಿದಂತೆ ಫೋಟೋ, ಕಲೆ ಸೇರಿಸಿ. ಒಬ್ಬರಿಗೊಬ್ಬರು ಗೆಳೆಯರಾಗಿ. ಮಾತಾಡಿಕೊಳ್ಳಿ. ಚರ್ಚೆ ಬೆಳಸಿ.

ಈ ಬ್ಲಾಗಿಗರ ಕೂಟದ ಬಗ್ಗೆ ನಿಮ್ಮ ಗೆಳೆಯರಿಗೂ ತಿಳಿಸಿ. ನಾವು ಸದಾ ನಿಮ್ಮ ಜೊತೆ….

ಸದಸ್ಯರಾಗಲಿ ಇಲ್ಲಿ ಕ್ಲಿಕ್ಕಿಸಿ

%d bloggers like this: