ಮೊಬೈಲ್ ಗೆ ಬಂದ ಈ ಎಸ್ಎಂಎಸ್

ಇತ್ತೀಚೆಗೆ ನನ್ನ ಮೊಬೈಲ್ ಗೆ ಬಂದ ಈ ಎಸ್ಎಂಎಸ್ ತುಂಬಾ ಇಷ್ಟವಾಯಿತು.

ನಿಮಗೂ ಹಿಡಿಸಬಹುದು ಎಂಬ ಕಾರಣಕ್ಕೆ ಇಲ್ಲಿ ಅದನ್ನು ಯಥಾವತ್ ನೀಡಿದ್ದೇನೆ…
-ಎಂ.ಎಲ್. ಲಕ್ಷ್ಮೀಕಾಂತ್
digging4
ಹಳ್ಳಿಯಲ್ಲಿದ್ದ ಬಡ ರೈತ ಜೈಲಿನಲ್ಲಿರುವ ತನ್ನ ಮಗನಿಗೆ ಒಂದು ಪತ್ರ ಬರೆಯುತ್ತಾನೆ- ಈ ವರ್ಷ ನಾನೂ ಆಲೂಗಡ್ಡೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ನೆಲದ ಗುಳಿ ಹೊಡೆಯಲು ನನ್ನಿಂದ ಆಗುತ್ತಿಲ್ಲ. ಒಂದು ವೇಳೆ ನೀನು ಜೈಲಿನಲ್ಲಿ ಇಲ್ಲದೆ ನನ್ನ ಜತೆ ಇದ್ದರೆ ಆ ಕೆಲಸ ಸುಲಭವಾಗುತ್ತಿತ್ತು.  

ಇದಕ್ಕೆ ಜೈಲಿನಿಂದಲೇ ರೈತನ ಮಗ ಉತ್ತರ ಕೊಡುತ್ತಾನೆ- ದಯವಿಟ್ಟು, ನೆಲ ಅಗೆಯಬೇಡ. ಅದರಲ್ಲಿ ನಾನು ಗನ್ ಗಳನ್ನು ಹೂತಿಟ್ಟಿದ್ದೇನೆ.

ಮರುದಿನವೇ ಪೊಲೀಸರ ದಂಡು ಬಂದು ಆ ಬಡ ಕೃಷಿಕನ ಜಮೀನನ್ನೆಲ್ಲಾ ಅಗೆದು ಬಿಡುತ್ತದೆ. ಗನ್ ಗಳಿಗಾಗಿ ಹುಡುಕಾಡಿ ಬರಿಗೈಲಿ ವಾಪಸಾಗುತ್ತದೆ.

ತಂದೆಗೆ ಮಗ ಮತ್ತೆ ಪತ್ರ ಬರೆಯುತ್ತಾನೆ- ಅಪ್ಪ ಈಗ ನೀನು ಆಲೂಗಡ್ಡೆ ಬೆಳೆಯಬಹುದು. ಜೈಲಿನಲ್ಲಿದ್ದುಕೊಂಡು ನಾನು ಮಾಡಬಹುದಾದ ಸಹಾಯ ಇಷ್ಟೆ!


ಜಿ ಎಸ್ ಬಿ ಅಗ್ನಿಹೋತ್ರಿ ಕೇಳ್ತಾರೆ…

voteearth

ಭೂಮಿಯ ಕಾವು ವಿಪರೀತ ಜಾಸ್ತಿಯಾಗುತ್ತಿದೆ. ಇದು ಭೌಗೋಳಿಕವಾಗಿ ಸಾಕಷ್ಟು ಸಮಸ್ಯೆಗಳನ್ನೂ ಹುಟ್ಟಿಹಾಕುತ್ತಿದೆ. ಪ್ರಕ್ರತಿಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ.
ಜಾಗ್ರತಿಗಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗ ಡಬ್ಲುಡಬ್ಲುಎಫ್ ಹೊಸದೊಂದು ಪ್ರಯತ್ನಕ್ಕೆ ಕೈಹಾಕಿದೆ. ನಾವೂ ಕೈಜೋಡಿಸೋಣ. ವಿಶ್ವದಾದ್ಯಂತ ನಡೆಯುತ್ತಿರುವ ಈ ಕಾರ್ಯಕ್ರಮ ವಿಶೇಷವಾಗಿದೆ.
ಏಕಕಾಲಕ್ಕೆ ವಿಶ್ವದೆಲ್ಲೆಡೆ ಬೆಳಕಿಗೆ ಒಂದು ಗಂಟೆ ಬ್ರೇಕ್ ನೀಡಿದರೆ ಹೇಗಿರತ್ತೆ?
ಅದೇ ಪ್ರಯತ್ನ ಇಲ್ಲಾಗುತ್ತಿದೆ. ಮಾರ್ಚ್ 28 ರಂದು ಸಂಜೆ 8:30ರಿಂದ ಒಂದು ಗಂಟೆ ಕಾಲ ವಿಶ್ವದೆಲ್ಲೆಡೆ ಲೈಟ್ ಸ್ವಿಚ್ ಆಫ್ ಮಾಡಲು ಸಾದ್ಯವೇ…?

%d bloggers like this: