ಇದು ಕಾಯಿಲೆಯೋ… ಖಯಾಲಿಯೋ..

 district1_thumbಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ.

ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ

 –ಕೆ.ಎಲ್.ಚಂದ್ರಶೇಖರ್ ಐಜೂರ್     

ಮಠಗಳಿಗೆ ದುಡ್ಡು ಚೆಲ್ಲುವ ಯಡಿಯೂರಪ್ಪನವರ ಅತ್ಯುತ್ಸಾಹ ಈ ಸಲವೂ ಮುಂದುವರೆದು ಇದು ಅವರ ಸರ್ಕಾರದ ಹೊಸ ಆರ್ಥಿಕ ನೀತಿಯಾಗತೊಡಗಿದೆ. ಇದು   ಯಡಿಯೂರಪ್ಪನವರ ಕಾಯಿಲೆಯೋ ಅಥವಾ ಖಯಾಲಿಯೋ ಗೊತ್ತಾಗಬೇಕಿದೆ. ಇಷ್ಟಕ್ಕೂ ಅಷ್ಟೊಂದು ದುಡ್ಡು ಪಡೆವ ಮಠಗಳು ಮಾಡುವ ಘನಕಾರ್ಯವಾದರೂ ಏನು? ಅವೇ ಪುರೋಹಿತಸಾಹಿ, ವೈದಿಕ ಆಚರಣೆಗಳಲ್ಲಿ ಕಾಲ ಕಳೆಯುತ್ತಾ ದಲಿತರನ್ನು ತಮ್ಮ ಮಠ ಮಂದಿರಗಳಿಂದ ಇನ್ನಷ್ಟು ದೂರವಿಡುವ ಹೊಸ ಬಗೆಯ ಸಂಶೋದನೆಗಳಲ್ಲಿ ತೊಡಗಿಕೊಳ್ಳುವುದು ತಾನೇ.

ಕೆಲಸಕ್ಕೆ ಬಾರದ ಮಠಗಳಿಗೆ ಸುರಿಯುವ ದುಡ್ಡನ್ನು ಹಸಿರು ಕಾರ್ಡ್ ಸಿಕ್ಕರೆ ಮಾತ್ರ ಬದುಕಲು ಸಾದ್ಯ ಎಂದುಕೊಂಡಿರುವ ಬಡವರ ಅನ್ನದ ತಟ್ಟೆಗಳಿಗಾದರು ಹಾಕಬಾರದಿತ್ತೆ. ಕಡು ಬಡವನ ಪಾಲಿನ ಅನ್ನವನ್ನು ಉಣ್ಣಲು ಕುಳಿತಿರುವ ಈ ಮಠಾಧಿಪತಿಗಳಿಗಾದರೂ  ಇಂಥ ಹಣವನ್ನು ನಿರಾಕರಿಸಬೇಕೆಂಬ ಕನಿಷ್ಠ ಸೌಜನ್ಯ ತಮ್ಮೊಳಗೆ ಹುಟ್ಟಿಕೊಳ್ಳದಿರುವುದು   ದುರಂತ. 

ಇನ್ನು ಮೊನ್ನೆ ಶಿವರಾತ್ರಿ ಹಬ್ಬದಂದು ಸರ್ಕಾರ ಗಂಗಾಜಲವನ್ನು ಇಡೀ ನಾಡಿನ ಮನೆ ಮನೆಗೂ ತಲುಪಿಸುವ ಸಾಹಸಕ್ಕೆ ಕೈ ಹಾಕಿತು. ಅರೆ ಸುಟ್ಟ ಹೆಣಗಳನ್ನು, ಕೊಳೆತ, ಅನಾಥ  ಶವಗಳನ್ನು ಗಂಗಾನದಿಗೆ ತೇಲಿಬಿಡುವ ಎಗ್ಗಿಲ್ಲದ ಪುಣ್ಯ ಕಾರ್ಯಗಳ ಬಗ್ಗೆ ಈ ಘನ ಸರ್ಕಾರಕ್ಕೆ ಅಂಥ ಅರಿವಿರಲ್ಲಿಲ್ಲವೆಂದು ಕಾಣುತ್ತದೆ. ದೆಹಲಿಯ M.C.ಮೆಹ್ತಾರಂತಹ ವಕೀಲರು ಗಂಗಾನದಿಯನ್ನು ಶುದ್ಧಿಕರಿಸಿ ಎಂದು ಸುಪ್ರೀಂ ಕೋರ್ಟ್ ನಲ್ಲಿ     ಹತ್ತಾರು PIL(Public Interest Litigation) ಕೇಸು ಜಡಿದು ಅಲೆಯಬೇಕಿರಲ್ಲಿಲ್ಲ.

ತೀರ್ಥ ಪವಿತ್ರ ಎಂಬ ಕಾರಣಕ್ಕೆ ಯಾವ ಮೂರ್ಖನು ಗಟಾರದೊಳಕ್ಕೆ  ತನ್ನ ಬೊಗಸೆಯೊಡ್ದಲಾರ. ಇನ್ನಾದರು  ಯಡಿಯೂರಪ್ಪನವರ ಘನಸರ್ಕಾರ  ಇಂಥ ಅಡ್ಡಕಸುಬಿ ಕೃತ್ಯಗಳಿಂದ ಹೊರಬಂದು ಈ ಮಣ್ಣಿನ ಜನರ ನಿಜವಾದ ಕಷ್ಟಗಳಿಗೆ ಸ್ಪಂದಿಸಲಿ.  

                                                                                                                        

%d bloggers like this: