ಕಿ ರಂ ಬರೆದಿದ್ದಾರೆ

ಭೇಟಿ ಕೊಡಿ- ಓದುಬಜಾರ್  1

ಎಲ್ಲಾ ಮಠಗಳನ್ನು ರಾಷ್ಟ್ರೀಕರಣಗೊಳಿಸಬೇಕು…

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ.

ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ

ಎಸ್ ಸಿ ದಿನೇಶ್ ಕುಮಾರ್ ಚಿತ್ರದುರ್ಗ ಸಾಹಿತ್ಯ ಸಮ್ಮೇಳನದಲ್ಲಿ ಎಲ್ ಬಸವರಾಜು ಅವರು ಆಡಿದ ಮಾತುಗಳನ್ನಿಟ್ಟುಕೊಂಡು ತಮ್ಮ ‘ದೇಸಿ ಮಾತು‘ ಅಂಕಣದಲ್ಲಿ ಚರ್ಚೆ ಮುಂದುವರೆಸಿದ್ದರು. ಇದು ಅವದಿಯ ಜುಗಾರಿ ಕ್ರಾಸ್ ಅಂಕಣದಲ್ಲಿ ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ ಎಂದು ಪುನರ್ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಲೇಖನಕ್ಕೆ ಸಿದ್ಧಮುಖಿ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ.

ಸಂವಾದ ಈಗ ಆರಂಭವಾಗಿದೆ. ನೀವೂ ಪಾಲ್ಗೊಳ್ಳಿ…

20081004swami4

ಸನ್ಯಾಸಿಗಳು ಸ್ವಾಮಿ ಇವರು ಸನ್ಯಾಸಿಗಳು,
ಯುದ್ದ ಬಂದಾಗ ಶಸ್ತ್ರ ಬಿಟ್ಟವರು..
ಸನ್ಯಾಸಿಗಳು ಎಲ್ಲವನ್ನೂ ಬಿಟ್ಟವರು…

ಇದು ಎ.ಕೆ. ರಾಮಾನುಜನ್ ಸ್ವಾಮಿಗಳ ಕುರಿತು ಕಟುವಾಗಿ ಬರೆದ ಪದ್ಯ.ಇದು ಸತ್ಯವೂ ಹೌದು.
ಸರ್ವಸಂಗ ಪರಿತ್ಯಾಗಿಯಾಗಬೇಕಾಗಿದ್ದ ಸನ್ಯಾಸಿ ಇಂದು ಎಲ್ಲವೂ ಆಗಿದ್ದಾನೆ.
ರಾಜಕೀಯ ಪಕ್ಷಗಳ, ಸರ್ಕಾರದ ನಿಯಂತ್ರಕ ಶಕ್ತಿಯಂತೆ ಸೂತ್ರಧಾರನಂತೆ ಕೆಲಸ ಮಾಡುತ್ತಿರುವುದು ಕಟು ವಾಸ್ತವ.
ಸ್ವಾಮಿಗಳೆಂಬ ಧಾರ್ಮಿಕ ಭ್ರಷ್ಟಾಚಾರಿಗಳು ಧರ್ಮದ ತಿರುಳೇ ಅರಿಯದವರು.

ಧರ್ಮ ವೃಕ್ಷದ ನೆರಳಿನಲ್ಲಿ ಬೆಂಕಿ ಕಾಸಿಕೊಳ್ಳುವ ವೀರರು. ಮೌಢ್ಯ ತುಂಬಿತ ಜನರೇ ಇವರಿಗೆ ಸೌದೆ. ಎಲ್ಲರ ಸಂಗವಿದ್ದರೂ ಅವರ ಅಭಿಮಾನಕ್ಕೆ ಭಂಗ ಬರದು.

 (ಇಲ್ಲಿ ಒಂದಿಷ್ಟು ಬಾಗ ಎಡಿಟ್ ಮಾಡಲಾಗಿದೆ-ಸಂ)

ರಾಜ್ಯದಲ್ಲಿ ಸ್ವಾಮಿಗಳು ಮಠಗಳನ್ನು ಸ್ಥಾಪಿಸುತ್ತಿರುವುದನ್ನು ನೋಡಿದರೆ ಹಿಂದೆ ರಾಜರು, ಸಣ್ಣ ಪುಟ್ಟ ಪಾಳೇಗಾರರು ಪಾಳೆಪಟ್ಟುಗಳನ್ನು ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಆಳ್ವಿಕೆ ನಡೆಸುತ್ತಿದ್ದ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ಇವರಿಗೆ ಯಾವ ನಿಯಮಗಳು ಅನ್ವಯವಾಗುವುದಿಲ್ಲ. ತಾವು ನೀಡಿದ ಹೇಳಿಕೆಯೇ ವೇದ ವಾಕ್ಯ ಎಂದು ನಂಬಿಕೊಂಡ ಕೂಪ ಮಂಡೂಕಗಳು.

ಸ್ವಾಮಿಗಳನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆ ಮಾಡಬೇಕು, ಬಹುಪರಾಕ್ ಕೂಗಬೇಕು.ಪಾದಕ್ಕೆ ಪೊಡಮಡಬೇಕು. ಟೀಕೆ ಮಾಡಬಾರದು ಎಂಬ ಧೋರಣೆಯುಳ್ಳ ಸ್ವಾಮಿಗಳು ಸ್ಥಾಪಿಸಿಕೊಂಡಿರುವ ಎಲ್ಲಾ ಮಠಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಈಗ ಹೊಂದಿರುವ ಅಕ್ರಮ ಆಸ್ತಿಯನ್ನು ಸರ್ಕಾರಗಳು ವಶಪಡಿಸಿಕೊಳ್ಳಬೇಕು. ಮಠಗಳಿಗೆ ಹಣ ನೀಡುವುದನ್ನು ನಿಲ್ಸಿಸಬೇಕು …. ಹೀಗಾದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ.

ನಾಮವಿಟ್ಟರೆ, ವಿಭೂತಿ ಧರಿಸಿದರೆ ರುದ್ರಾಕ್ಷಿ ಹಾಕಿಕೊಂಡರೆ, ವೇದಮಂತ್ರಗಳನ್ನು ಕಲಿತರೆ ಅದು ಅವರ ಪಾಂಡಿತ್ಯದ ಪ್ರದರ್ಶನವೇ ಹೊರತು ಸ್ಲಂನಲ್ಲಿ ವಾಸಿಸುವವರು, ಸಾಮಾನ್ಯ ರೈತರಿಗಿಂತ ಹೆಚ್ಚೇನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಮಠಗಳು ಏನೋ ಮಹತ್ವದ ಸಾಧನೆ ಮಾಡಿವೆ ಎಂದಾದರೆ ಅದು ಸರ್ಕಾರಗಳು ಕಾಲಕಾಲಕ್ಕೆ ನೀಡಿದ ಪ್ರೋತ್ಸಾಹವೇ ಕಾರಣ.ಇಂದು ಯಾವುದೇ ಮಠ-ಪೀಠಾಧೀಶರು ನಾವು ಸರ್ಕಾರದ ಋಣದಲ್ಲಿ ಬದುಕುವುದಿಲ್ಲ. ಸರ್ಕಾರದ ನೆರವಿಲ್ಲದೆ ನಾವು ಮಠಗಳನ್ನು ನಡೆಸುತ್ತೇವೆ ಎಂದು ಎದೆತಟ್ಟಿಕೊಂಡು ಹೇಳಲಿ. ಇದಾಗದಿದ್ದರೆ ಎಲ್ಲವನ್ನೂ ತೊರೆದು ಮಠದ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟು ಸಾಮಾನ್ಯರಂತೆ ಬದುಕುವಂತಾದಾಗ ಮಾತ್ರ ಸಮತಾ ಸಮಾಜ ನಿರ್ಮಾಣವಾಗಲು ಸಾಧ್ಯ.

ಕುವೆಂಪು ಅವರ ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಆಶಯ ನೆರವೇರಲಿದೆ. ಇಲ್ಲದಿದ್ದರೆ ಒಡೆಯ ಗುಲಾಮ ಪದ್ದತಿ ಮುಂದುವರಿಯಲಿದೆ.
(ಇಲ್ಲಿ ಒಂದಿಷ್ಟು ಬಾಗ ಎಡಿಟ್ ಮಾಡಲಾಗಿದೆ-ಸಂ)

– ಸಿದ್ದಮುಖಿ
+++
ಗಮನಿಸಿ: ಸಂಪದ ದ ಎಚ್ ಪಿ ನಾಡಿಗ್ ಅವರ ಸಲಹೆಯಂತೆ ಪ್ರತಿಕ್ರಿಯೆ ನೀಡುತ್ತಿರುವವರ, ಲೇಖನ ಬರೆದವರ ಈ ಮೇಲ್ ಐ ಡಿ ನೀಡುತ್ತಿಲ್ಲ. ಯಾವುದೇ ಖಾಸಗಿ ಪತ್ರವಿದ್ದರೆ avadhi.pusthaka@gmail.com ಗೆ ಮೇಲ್ ಮಾಡಿ. ಅವರಿಗೆ ಕಳಿಸುವ ಜವಾಬ್ದಾರಿ ನಮ್ಮದು.–ಸಂ   

ನಿಮ್ಮ ಕೈಗಳಿಗೆ ಈಗ ‘ಮಾಮೂಲಿ ಗಾಂಧಿ’

maamuli-gand-1-11

ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. ‘ನೀನು ಕಥೆಗಳನ್ನು ಬರೆಯುತ್ತಾ ಇರಬೇಕು…’ ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಈಗ ‘ಮಾಮೂಲಿ ಗಾಂಧಿ’ ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ.

ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು ‘ಮಾಮೂಲಿ ಗಾಂಧಿ’ ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ ‘ಉಡಿಯಲ್ಲಿಯ ಉರಿ’ ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.26ರಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ‘ಉಡಿಯಲ್ಲಿಯ ಉರಿ’ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮರ್ಶಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ.

ಎರಡನೇ ಕಥಾ ಸಂಕಲನ ‘ಮತಾಂತರ’ದ ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ ‘ಮಾಮೂಲಿ ಗಾಂಧಿ’ ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ.

ಫೆಬ್ರುವರಿ-09ರ ಮಯೂರದಲ್ಲಿ ‘ಕನ್ನಡಿಯೊಳಗಿನ ಚಿತ್ರಗಳು’ ಕಥೆ ಪ್ರಕಟವಾದಾಗ, ಈ ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ಈ ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್ ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಆ ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ… “ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. ‘ಕನ್ನಡಿಯೊಳಗಿನ ಚಿತ್ರಗಳು’ ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್ ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.’

ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ ‘ಎರಡು ಪಾರಿವಾಳಗಳು’. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಈ ಎರಡು ಪಾರಿವಾಳಗಳು. ಹಾಗೆಯೇ ‘ದೊಡ್ಡವರ ನಾಯಿ’, ‘ಒಂದು ಸಹಜ ಸಾವು’ ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ.

ಹೀಗೆ ಏನೇ ಹೇಳಿದರೂ ‘ಕಥಾ ಸಂಕಲನ’ ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ.

ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ… ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಹೇಗೆ ಸಂಪರ್ಕಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ.

ನಿಮ್ಮ ಪ್ರೀತಿಯ ಬಯಸುತ್ತಾ…

mkmk1

ಸಂಪರ್ಕ

ಕಲಿಗಣನಾಥ ಗುಡದೂರು

ಇಂಗ್ಲಿಷ್ ಉಪನ್ಯಾಸಕ

ಸಂಕೇತ ಪಿ.ಯು.ಕಾಲೇಜ್

ಸಿಂಧನೂರು-584128

ಜಿಲ್ಲೆ: ರಾಯಚೂರು

ಮೊ: 9916051329

ಖುಷಿಯಾಯ್ತು ಗುಪ್ತಾಜಿ…

ಕನ್ನಡ ಪತ್ರಿಕೋದ್ಯಮದಲ್ಲಿ ಸದಾ ಜೀವಂತ ಆಲೋಚನೆಗಳೊಂದಿಗೆ ಸಂಚರಿಸುವ, ಹೊಸ ತಲೆಮಾರಿನ ಜೊತೆ ಸಂವಾದ ನಡೆಸುವ, ಹುಮ್ಮಸ್ಸು ತುಂಬುವ, ಎಲ್ಲಕ್ಕೂ ಮಿಗಿಲಾಗಿ ಪತ್ರಿಕೋದ್ಯಮದ ಇಂದಿನ ಆಲೋಚನೆಗಳೊಂದಿಗೆ ಬದಲಾವಣೆಗೆ ತೆರೆದುಕೊಳ್ಳುತ್ತಾ ಹೋಗುವ ಪ್ರಜಾವಾಣಿಯ ನಿವೃತ್ತ  ಕಾರ್ಯನಿರ್ವಾಹಕ ಸಂಪಾದಕ ರಾಜಾ ಶೈಲೇಶಚಂದ್ರ ಗುಪ್ತ ಅವರು ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಟಿ ಎಸ್ ಆರ್ ಪ್ರಶಸ್ತಿ ಸ್ವೀಕರಿಸಿದರು.

ರಾಜಾ ಶೈಲೇಶ್ ಚಂದ್ರ ಅವರದ್ದು ‘ಯಥಾ ರಾಜಾ ತಥಾ ಪ್ರಜಾ’ ಶೈಲಿ. ಅವರು ಸರಿಯಾಗಿ ಮುನ್ನಡೆಸಿದ್ದಾರೆ. ಅವರ ಪ್ರಜೆಗಳೂ ಸರಿಯಾದ ದಾರಿಯಲ್ಲಿದ್ದಾರೆ ಎಂಬುದು ಹೆಮ್ಮೆ.

ಇದೇ ಸಂದರ್ಭದಲ್ಲಿ ಶಿವರಾಮ ಅಸುಂಡಿ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಮಂಗಲಾ ಮಮ್ಮಿಗಟ್ಟಿ ಹಾಗೂ ಶಿವಾನಂದ ಕಳವೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿದರು. ಎಲ್ಲರಿಗೂ ಅಭಿನಂದನೆಗಳು. 

dsc_0568

%d bloggers like this: