ಹೇಳಿದ್ದು ಜಾಗಿಂಗ್, ಹೋಗಿದ್ದು ಲೈವ್ ಬ್ಯಾಂಡ್ ಗೆ

P For…

mmcdonnell_a_pink1

-ಲೀಲಾ ಸಂಪಿಗೆ

 

ಬೆಳಗಿನ ಜಾವ 4.30. ದಡಬಡನೆ ಎದ್ದ ಮುರಳಿ ಫ್ರೆಷ್ ಆದ. ತಿಳಿಬಣ್ಣದ ಜಾಗಿಂಗ್ ಸೂಟ್ ಹಾಕ್ಕೊಂಡ. ಹೊಸದಾಗಿ ಕೊಂಡಿದ್ದ ಜಾಗಿಂಗ್ ಷೂ ಹಾಕ್ಕೊಂಡ. ಆರೋಗ್ಯದ ಬಗ್ಗೆ, ಫಿಟ್ನೆಸ್ ಬಗ್ಗೆ ಗಂಡನಿಗಿರುವ ಆಸಕ್ತಿ ಮುರಳಿಯ ಹೆಂಡತಿಯನ್ನು ಮೆಚ್ಚಿಸಿತ್ತು. ಬಿಸಿಬಿಸಿಯಾಗಿ ಒಂದು ಲೋಟ ಹಾಲು ತಂದ್ಕೊಟ್ಲು. ಅಷ್ಟೊತ್ತಿಗೆ 4.50. ಕಾರ್ ಸ್ಟಾರ್ಟ್ ಮಾಡಿದ್ದೇ ಸರಿ, ಸೀದಾ ಲಾಲ್ ಬಾಗ್ ರಸ್ತೆಯ ಬಂಗಲೆಯೊಂದರಲ್ಲಿ ಕಾರ್ ಪಾರ್ಕ್ ಆಯ್ತು.

ಬಾಗಿಲ್ಲಲ್ಲೇ ನಿಂತಿದ್ದ ಪಪ್ಪು ಸೆಲ್ಯೂಟ್ ಹೊಡೆದು ಒಳಕರೆದೊಯ್ದ.  ಮುರಳಿ ಐ.ಎ.ಎಸ್. ಅಧಿಕಾರಿ. ಒಳಹೊಕ್ಕು ಆಗಲೇ ಬಂದು ಆಸೀನರಾಗಿದ್ದ ಎಸ್.ಪಿ. ಸೋಮು, ನ್ಯಾಯಾಧೀಶರಾದ ನಾರಾಯಣರಾವ್, ಖ್ಯಾತ ವಕೀಲರಾದ ವಹೀದ್, ಕೈಗಾರಿಕೋದ್ಯಮಿ ಅಜಯ್, ಸಚಿವರುಗಳಾದ ಜೆ.ಕೆ.ಮಧುಸೂದನ್, ಹಿರಿಯ ಎಂ. ಎಲ್.ಎ.ಗಳು, ಎಂ.ಎಲ್.ಸಿ ಗಳು……… ದೊಡ್ಡ ದಂಡೇ ಅಲ್ಲಿತ್ತು. ಇಡೀ ರಾಜ್ಯದ ಸೂತ್ರದಾರರೇ ಆ ಭವ್ಯ ಲೈವ್ ಬ್ಯಾಂಡ್ನೊಳಗೆ ತೇಲಾಡ್ತಾ ಇರೋ ಹಾಗಿತ್ತು.

dance_bar

ಹೀಗೇ ಕುಶಲೋಪರಿಯೊಂದಿಗೆ ಅದೂ ಇದೂ ಹರಟೆ, ಹಾಗೇನೇ ಒಂದಷ್ಟು ಚರ್ಚೆಗಳು ನಡೀತಾ ಇರುವಾಗಲೇ ಅರೆವಸ್ತ್ರ ಧಾರಿಣಿ, ಬಳಕುವ ಲಲನೆಯರು ಮೆಲ್ಲನೆ ಹೆಜ್ಜೆಯಿಡುತ್ತಾ ಬಾಗುತ್ತಾ ಒಬ್ಬೊಬ್ಬರನ್ನೇ ಕರೆದೊಯ್ದರು. ಅದೊಂದು ಪುಷ್ಪಾಕೃತಿಯ ತಾಣ. ಹೊರಗಿನಿಂದ ನೋಡೋಕೆ ಹೂವಿನ ಪಕಳೆಗಳು ಕಂಗೊಳಿಸುತ್ತಾವೆ. ಒಳ ಹೊಕ್ಕರೆ ಮೆತ್ತನೆಯ ಹಾಸು. ಮಲ್ಲಿಗೆಯ ಸಿಂಪರಣೆ. ಕೈಹಿಡಿದಪ್ಪುವ ಮಂದಹಾಸಿನಿಯರು. ಆಗಾಗ್ಗೆ ಮೆಲ್ಲಗೆ ತೂಗುತ್ತಾ ತೆರೆದು, ಮುಚ್ಚುವ ಪಕಳೆಗಳ, ಇಂಪಾದ ಸಂಗೀತದ ಕಂಪನದೊಂದಿಗೆ ಹಂಸತೂಲಿಕ ಸ್ವರ್ಗದ ಸುಖಕ್ಕೆ ಕಿಚ್ಚು ಹಬ್ಬಿಸುವ ಎಲ್ಲ ತಾಕತ್ತನ್ನು ಹೊಂದಿರುತ್ವೆ. ಅದರೊಳ ಹೊಕ್ಕವನು ಈ ಪ್ರಪಂಚವನ್ನೇ ಮರೆತು ತನಗಿಂತ ಸುಖಿಯಿಲ್ಲ ಅಂತಲೇ ತೇಲಾಡ್ತಾನೆ ಅಲ್ಲಿ.

ಈ ಹಂಸ ತೂಲಿಕ ಸ್ಪೆಷಲ್ ಪ್ಯಾಕೇಜ್! ಇದಕ್ಕೆ ಸರದಿಯಿರುತ್ತದೆ ! ಈ ಸ್ವರ್ಗದ ಬಾಗಿಲು ತೆರೆದು ಎಲ್ಲಾ ಸುಖಗಳನ್ನು ಅಪ್ಪಲು ಕಾಯಬೇಕಾಗುತ್ತೆ. ಇನ್ನೊಂದೆಡೆ ನೃತ್ಯ ಮನಮೋಹಕವಾಗಿರುತ್ತೆ. ತಾನು ಕುಂತಲ್ಲದೇ ಮಂದಹಾಸದೊಂದಿಗೆ ಬಳುಕುತ್ತಾ ತಂದೀಯುವ ಉಷಃ ಪಾನದೊಂದಿಗೆ ಅವರ ಒಡನಾಟದಲ್ಲಿ ತನ್ನನ್ನೇ ತಾನು ಮರೆತು ತೇಲಾಡುತ್ತಾನೆ. ಹಂಸತೂಲಿಕದಂತೆ ಪಕಳೆಗಳು ಮುಚ್ಚಿ ಕೊಡುವಷ್ಟು ಪ್ರೈವೈಸಿಯಿಲ್ಲದಿದ್ದರೂ ಇಲ್ಲಿಯೂ ಪ್ರೇವೈಸಿಗೇನು ಕೊರತೆಯಿಲ್ಲ. ಸುಮಾರು ಹದಿನಾರರಿಂದ ಮೂವತ್ತರೊಳಗಿನ ಲಲನೆಯರು ಈ ಸೆಲೆಬ್ರೆಟೀಸ್ ಗಾಗಿ , ಗಣ್ಯಾತಿಗಣ್ಯರಿಗಾಗಿ ಸೇವೆಗೈಯ್ಯಲು ಸಿದ್ಧರಿರುತ್ತಾರೆ.

ಬೇರೆ ಬೇರೆ ಭಾಷೆಗಳು ಸಾಮಾನ್ಯವಾಗಿ ಇವರಿಗೆ ಗೊತ್ತಿರ್ತಾವೆ. ಸಾಮಾನ್ಯವಾಗಿ ರೂಪಕ್ಕೆ, ಇಂಗ್ಲೀಷಿಗೆ ಆದ್ಯತೆ. ಬಂದ ಗಿರಾಕಿಗಳು ಕೊಡೋ ಪರ್ಸನಲ್ ಟಿಪ್ಸ್ ಅಂದರೆ ಅವರ ಎದೆಯೊಳಗೆ ತುರುಕುವ ನೋಟುಗಳು ಇವರದ್ದೇ. ಉಳಿದಂತೆ ಮಾಲೀಕರೊಂದಿಗೆ ಆದ ಒಪ್ಪಂದದಂತೆ ಮಾತ್ರ. ಅದರಲ್ಲೂ ಖೋತಾ ಆಗೋದೇ ಹೆಚ್ಚು. ನುಡಿದಂತೆ ನಡೆಯುವ ಮಾಲೀಕರುಗಳು ಈ ಕ್ಷೇತ್ರದಲ್ಲಿ ಕಡಿಮೆಯೇ ಎನ್ನುತ್ತಾರೆ. ಅಲ್ಲಿ ದುಡಿಯುವ ಹುಡುಗೀರು. ಎಷ್ಟು ಕೊಟ್ರೂ ಅವರು ಹಾಗೆ ಕೊಸರಾಡೋದು ಬಿಡೋದೇ ಇಲ್ಲಾಂತಾರೆ ಮಾಲೀಕರುಗಳು.

ಎಲ್ಲ ಸುಖಾಂತ್ಯವಾದ ಮೇಲೆ ಬಂದಿದ್ದ ಗಣ್ಯಾತಿಗಣ್ಯ ಗಿರಾಕಿಗಳು ಮತ್ತದೇ ಜಾಗಿಂಗ್ ಸೂಟ್ ಕೊಡವಿಕೊಂಡು, ಜಾಗಿಂಗ್ ಷೂಗಳನ್ನು ಧರಿಸಿ ತಾವೇ ಚಾಲಕರಾಗಿ ವಿಧ ವಿಧವಾದ ಕಾರುಗಳೇರಿ ಕಣ್ಮರೆಯಾಗ್ತಾರೆ. ಈ ತಾಣಗಳು ಯಾವ ನಿಷೇಧ, ನಿಯಂತ್ರಣಗಳಿಗೂ ಸಾಮಾನ್ಯವಾಗಿ ಒಳಪಡೋಲ್ಲ. ಯಾಕೆಂದ್ರೆ ಇಲ್ಲಿ ಸುಖಿಸೋರೆಲ್ಲಾ ಒಂದೋ ಕಾನೂನು ಪಾಲಕರುಗಳು, ಇಲ್ಲಾಂದ್ರೆ ಶಾಸನಗಳ ಸೃಷ್ಟಿಕರ್ತರು, ಅಥವಾ ಎಲ್ಲವನ್ನು ಅದ್ದುಬಸ್ತಿನಲ್ಲಿಡೋವಷ್ಟು ತಾಕತ್ತಿರುವವರು! ಆಗಾಗ್ಗೆ ಲೈವ್ ಬ್ಯಾಂಡ್ಗಳ ನಿಷೇಧ, ಮತ್ತೆ ಮುಕ್ತ ಇದು ನಡೆಯುತ್ತಲೇ ಇರುತ್ತೇ. ಆದ್ರೆ ಬಾರ್ ಗಳನ್ನೂ ಮುಚ್ಚಬಹುದೇ ವಿನಃ ಗಿರಾಕಿಗಳಿಗೆ ಹಿಂದಿನ ಸೇವೆ ಅದೇ ರೀತಿ ಲಭ್ಯ ಇರುತ್ತೆ. ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರು ಉದ್ಯೋಗ ಕಳ್ಕೊಂಡ್ರೆ ಲೈಂಗಿಕವೃತ್ತಿ ಮಹಿಳೆಯರಿಗಾಗಿ ರೂಪಾಂತರಗೊಂಡವರೇ ಅಧಿಕ.

ಉದಾಹರಣೆಗೆ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್ ಗಳನ್ನೂ ನಿಷೇಧಿಸಿದ ನಂತರ ಸಾವಿರಾರು ಯುವತಿಯರು ಲೈಂಗಿಕ ವೃತ್ತಿಗಿಳಿದ್ರು. ವ್ಯಾಪಾರಿಗಳ ಒಡನಾಡಿಗಳಾಗಿ, ಬಾಡಿಗೆ ಹೆಂಡಂದಿರಾಗಿ ಬದುಕ ಬದಲಾಯಿಸ್ಕೊಂಡ್ರು, ಡ್ಯಾನ್ಸ್ ಬಾರ್ ನ ಹುಡ್ಗೀರು, ಅವರ ಗಿರಾಕಿಗಳು ಹಾಗೇ ಇರ್ತಾರೆ, ಭೇಟಿ, ಸಂಪರ್ಕದ ಸ್ಥಳ ಬದಲಾಗ್ತಿವೇ ಅಷ್ಟೆ. ಸ್ವಲ್ಪ ವಿದ್ಯೆಯೂ ಇದ್ದು ಬೇರೆ ಬೇರೆ ಭಾಷೆ ಗೊತ್ತಿದ್ದು, ಯೌವನೆಯರಾಗಿದ್ರೆ ಸಾಕು, ಅವರ ದುಡಿಮೆ ಏರ್ತಾ ಹೋಗುತ್ತೆ. ಶ್ರೀಮಂತ ಉದ್ಯಮಿಗಳಿಗೆ, ಉನ್ನತ ಅಧಿಕಾರಿಗಳಿಗೆ, ಗಣ್ಯಾತಿಗಣ್ಯರಿಗೆ ಇವರು ಜೋತೆಗಾರ್ತಿಯರಾಗಿ, ಬಾಡಿಗೆ ಹೆಂಡತಿಯರಾಗಿ ಹೋಗ್ತಾರೆ. ಸಾಮಾನ್ಯವಾಗಿ ಅವರ ಪ್ರವಾಸದ ಸಂದರ್ಭಗಳನ್ನು ಹೆಚ್ಚು ಬಳಸ್ಕೊಳ್ತಾರೆ. ಹೊದಲ್ಲೆಲ್ಲಾ ತನ್ನ ಹೆಂಡತಿ ಎಂದೇ ಪರಿಚಯಿಸಿ ಕೊಳ್ಲೋದ್ರಿಂದ ರಿಸ್ಕ್ ಅತಿ ಕಡಿಮೆ.

ಬ್ಯಾಂಕರ್ ಗಳು , ಉದ್ಯಮಪತಿಗಳು, ವೈದ್ಯರು, ಕ್ರೀಡಾಪಟುಗಳು, ಉನ್ನತ ಅಧಿಕಾರಿಗಳು, ಶ್ರೀಮಂತರುಗಳು ಇವರನ್ನು ಹೊರಗುತ್ತಿಗೆಯಾಗಿ ಕರೆದೊಯ್ತಾರೆ. ಇಂಗ್ಲೀಷ್ ಗೊತ್ತಿದ್ದ ಹುಡ್ಗೀರಂತೂ ಎಲ್ಲಿಲ್ಲದ ಬೇಡಿಕೆ. ಸಾಮಾನ್ಯವಾಗಿ ತಿಂಗಳಿಗೆ 30 ರಿಂದ ಲಕ್ಷಗಳವರೆಗೂ ಜೊತೆಗೆ ಸೀರೆ, ಚಿನ್ನ, ಬೆಳ್ಳಿ, ಒಡವೆಗಳು, ಗಿಫ್ಟ್ ಪಡ್ಕೋತ್ತಾರೆ. ಇದರಲ್ಲೇನೂ ಮುಲಾಜಿಲ್ಲ. ಅವರಿಗೆ ದೇಹಸುಖಬೇಕು, ನಮಗೆ ಹಣ ಬೇಕು ಈ ನಿರ್ಧಾಕ್ಷಿಣ್ಯ ಡೀಡ್ ಅವರಿಬ್ಬರಿಗೂ ಇರುತ್ತೆ. ಈ ಲೈಂಗಿಕ ವೃತ್ತಿ ಮಹಿಳೆಯರ ಬದುಕುಗಳಿಗೂ ರಿಸ್ಕ್ ಗಳಿದ್ದರೂ ದಿನಕ್ಕೆ 50 ರೂಪಾಯಿಗೂ ಗಿರಾಕಿಗಳು ಗಿಟ್ಟದೆ ಹೋಗೋ, ಬೀದಿಯಲ್ಲಿ, ಬದುಕು ನಡೆಸೋ ಹೆಣ್ಣುಗಳ ಬದುಕಿನ ಕಷ್ಟ ಲವಶೇಷವೂ ಇರೋಲ್ಲ. ಇತ್ತೀಚಿಗೆ ಹಣಕ್ಕಾಗಿ ಇಂಥಾ ಹೈಫೈ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ಬಿರುಸಾಗ್ತಿದೆ. ಈ ದಂಧೆಯ ತಲೆಹಿಡುಕರು ಇದನ್ನು ಲಾಭದಾಯಕ ಉದ್ಯೋಗವಾಗಿಸಿ ಕೊಂಡಿದಾರೆ. ಜಾಗತೀಕರಣ, ಆಧುನಿಕತೆ, ತಂತ್ರಜ್ಞಾನದಗಳು ಈ ದಂಧೆಯನ್ನು ಗಟ್ಟಿಗೊಳಿಸುವಲ್ಲಿ, ಹೆಣ್ಣನ್ನು ಸರಕಾಗಿಸುವಲ್ಲಿ, ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ.

2 ಟಿಪ್ಪಣಿಗಳು (+add yours?)

 1. basuhongal
  ಜನ 25, 2009 @ 15:26:52

  kannoonu maduvavaru…adanna rakshisuvavare idarlliddare…idakke uttar henu…

  ಉತ್ತರ

 2. kaligananath gudadur
  ಜನ 24, 2009 @ 23:12:04

  It’s the open truth that we are all
  responsible for this hazard. We have to unfurl
  the hard realities of this social shame.
  -Kaligananath Gudadur

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: