ಪ ಸ ಕುಮಾರ್ ಕಲಾ ಪಯಣ

ಪ ಸ ಕುಮಾರ್ ಜೊತೆ ನಡೆದ ಕಲಾ ಪಯಣದ ನೋಟ ಇಲ್ಲಿದೆ.

ಈ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಕಾಗಿನೆಲೆ ಸಹಾ ಹಾಜರಿದ್ದರು.

img_7784

img_7756 img_7839

img_7831

img_7792 img_7800

img_77791

ಪ ಸ ಕುಮಾರ್ ಬಗ್ಗೆ ಅಲೆಮಾರಿ ಬರೆದಿರುವ ಪತ್ರ ಬಹುಷಃ  ಪ ಸ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತದೆ ಎಂಬ ಕಾರಣಕ್ಕಾಗಿ ಇಲ್ಲಿ ನೀಡುತ್ತಿದ್ದೇವೆ.

ಇಂದು ಸಂಜೆ ಪ.ಸ.ಕುಮಾರ್ ಅವರೊಂದಿಗೆ ಫಿಶ್ ಮಾರ್ಕೆಟ್ ಸೇರುತ್ತದೆ ಎಂಬ ಆಹ್ವಾನ ಬಂತು. ಆದರೆ ಕೆಲಸದೊತ್ತಡ ಮಾರ್ಕೆಟ್ ಗೆ ಬರಲಾಗುತ್ತಿಲ್ಲ. ಪ.ಸ. ಕುಮಾರ್ ಅವರೊಂದಿಗೆ ಬಹುಶಃ ಅತ್ಯಂತ ಸಂತೋಷದ ಸಂವಾದವೊಂದರಲ್ಲಿ ಭಾಗಿಯಾಗುವ ಅವಕಾಶ ಮಿಸ್ ಆಗುತ್ತಿದೆ.
ಕುಮಾರ್ ಸರ್ ತುಂಬಾ ಇಂಟ್ರೆಸ್ಟಿಂಗ್ ವ್ಯಕ್ತಿ. ಅವರೊಂದಿಗೆ ಕೂತರೆ ಸಾಹಿತ್ಯದ ಬಗ್ಗೆ ಮಾತಾಡಬಹುದು, ಸಿನಿಮಾ ಬಗ್ಗೆ, ಕಲೆಯ ಜತೆಗೆ, ರಾಜ್ಯದಲ್ಲಿ ನಡೆದ ಕಲಾ ಚಳವಳಿಗಳ ಬಗ್ಗೆ ಮಾತನಾಡಬಹುದು.ಕವಿತೆಗಳು ಪ್ರತಿಮೆಗಳ ಬಗ್ಗೆ ಭರಫೂರ ಮಾತಾಡಬಹುದು. ಅವರಿಗೆ ಮೂಡಿದ್ದರೆ ಸಂಗೀತದ ಆಲಾಪಗಳನ್ನು ಕೇಳಬಹುದು. ಹಿಂದೂಸ್ತಾನಿ ಅವರಿಗೆ ಅಚ್ಚುಮೆಚ್ಚು. ದೇವರ ಮನೆ ಹೊಕ್ಕರೆ ಅರ್ಧ ತಾಸು ಹಾಡಿ ಪೂಜೆ ಮುಗಿಸಿ ಬರುತ್ತಾರೆ ಕುಮಾರ್ ಸರ್. ಕಾರ್ಯಕ್ರಮಕ್ಕೆ ಬಂದರೆ ನಾನು ಎಲ್ಲರ ಮಾತಿನ ನಡುವೆ  ಹಾಡಲು ಕೇಳುತ್ತಿದ್ದದಂತೂ ನಿಜ.
ನನಗೀಗಲೂ ಬೆರಗಾಗುವ ಸಂಗತಿ; ನಮಗೆ ನಾಚಿಕೆಯಾಗಿಸುವಂತೆ ಇರುವ ಅವರ ಉತ್ಸಾಹ. ವಯಸ್ಸಿನ ಅಂತರ ನೋಡದೆ ಎಲ್ಲರೊಂದಿಗೆ ಖುಷ್ ಖುಷ್ಯಾಗಿ ಮಾತನಾಡುತ್ತಾರೆ. ನಿಮಗೆ ಗೊತ್ತಾ?  ಕೆಲಸದಿಂದ ನಿವೃತ್ತರಾದ ಮೇಲೆ ಕ್ಯಾಸಿಯೋ ಕೀಬೋರ್ಡ್ ನುಡಿಸುವುದನ್ನು ಅಭ್ಯಾಸ ಮಾಡಲಾರಂಭಿಸಿದ್ದಾರೆ.
ಇತ್ತೀಚೆಗೆ ಮಿತ್ರ ಮಂಜುನಾಥ ಸ್ವಾಮಿ ಜತೆಗೆ ಅವರ ಸ್ಟುಡಿಯೋಕ್ಕೆ ಹೋದಾಗ ಮೂರ್ನಾಲ್ಕು ಹಾಡುಗಳನ್ನು ನುಡಿಸಿದ್ದರು. ಹಾಂ. ಸ್ಟುಡಿಯೋ ಅಂದಾಕ್ಷಣ ನೆನಪಾಯ್ತು.. ಕುಮಾರ್ ಸರ್ ಗೆ ಚಂದ್ರ ಅಂದ್ರೆ ತುಂಬಾ ಇಷ್ಟ. “ಚಂದ್ರನ ಕುರಿತು ಪೇಟಿಂಗ್ ಸೀರಿಸ್ ಮಾಡ್ತಿದ್ದೀನಿ” ಅಂತ್ಹೇಳಿದ್ರು. ಹಾಗೆ ಹೇಳಿ ತುಂಬಾ ದಿನ ಆಯ್ತು. ಆಗಲೇ ಎರಡು ಪೇಟಿಂಗ್ ಮುಗಿಸಿದ್ದರು. ಮತ್ತೆ ಬರೆದ್ರಾ? ಅದನ್ನು ಕೇಳಬೇಕೂಂತ ಇದ್ದೆ. ಎಲ್ಲರ ಮುಂದೆ ಕೇಳಿದ್ರೆ ಕುಮಾರ್ ಸರ್ ಕಮಿಟ್ ಆಗ್ತಾರೆ ಅನ್ನೋ ಆಸೆ..
ಈ ಸೀರಿಸ್ ಗೆ ಹೆಸರೂ ಇಟ್ಟಿದ್ದಾರೆ. .. “ಆಧಾ ಹೈ ಚಂದ್ರಮಾ…” ಅಂತಾ. ಅವರ ಸೀರೀಸ್ “ಆಧಾ” ಆಗಿ ಉಳಿದಿದೆಯೋ ಹೇಗೆ? ಕೇಳಬೇಕು.
ಮಕ್ಕಳಿಗೆ ಕಥೆ ಹೇಳುವ ಹಾಗೆ, ಚಿತ್ರಗಳನ್ನು ನೋಡೋದನ್ನು ಕಲಿಸಬೇಕೂಂತ ಯಾವಾಗ್ಲೂ ಹೇಳ್ತಾ ಇರ್ತಾರೆ. ಇದನ್ನು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಇದೂ ಫಿಶ್ ಮಾರ್ಕೆಟ್ ನಲ್ಲಿ ಚರ್ಚೆಯಾಗಬಹುದಾ?
ಫಿಶ್ ಮಾರ್ಕೆಟ್ ಗೆ ಕಡೆಗೆ ಒಂದರ್ಧ ಗಂಟೆ ಬಂದು ಹೋಗಬಹುದಾ? ಪ್ರಯತ್ನ ಮಾಡುತ್ತೇನೆ.
-ಅಲೆಮಾರಿ

ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು

parzania-2005-9b

ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ’ ಎಂಬ ಚಿತ್ರ.ಅಹ್ಮದಾಬಾದ್‌ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್‌ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ  ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ ತುಳುಕಿತು. ನಿಧ ನಿಧಾನವಾಗಿ ನಿಜಕ್ಕೂ ಅದೊಂದು ಸಿನಿಮಾ ಎಂದು ಅನಿಸದೇ ನಾನು ನನ್ನ ಮನೆಯ ಪಕ್ಕದಲ್ಲೇ ಕಂಡ ಒಂದು ಭೀತ ಸನ್ನಿವೇಶದಂತೆ ಆಘಾತವಾಯಿತು. ಜಗತ್ತು ಮಲಗಲು ಹೊರಡುವ ಹೊತ್ತಿಗೆ ಶುರುವಾದ ಈ ಘಟನೆ ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು.

ಸಂಪೂರ್ಣ ಓದಿಗೆ ಭೇಟಿ ಕೊಡಿ:  ಕಳ್ಳ ಕುಳ್ಳ

 

evrest-view-hotel1
ಮೇಲೆ ಮೇಲೆ ಹೋದಂತೆ ಥಂಡಿಯಿಂದ ರಾತ್ರಿಗಳು ಬಹಳ ಅಸಹನೀಯವಾಗಿರಲು ಪ್ರಾರಂಭವಾಗಿದ್ದವು. ಅಲ್ಲಿ ಯಾವ ಹೋಟಲಿನಲ್ಲೂ ಹೀಟರುಗಳು ಇರಲಿಲ್ಲ. ಅಲ್ಲಿ ಬುಕಾರಿ ಎಂಬ ಒಂದು ರೀತಿಯ ಒಲೆಯನ್ನು ಇದ್ದಲಿನಿಂದ ಹಚ್ಚಿಸಿಡುತ್ತಿದ್ದರು. ಅದರ ಮೇಲೆ ಬಿಸಿ ನೀರಿನ ಕೆಟಲು ಇತ್ತಿರುತ್ತಿದ್ದರು. ಅದರಲ್ಲಿ ಯಾವಾಗಲೂ ಬಿಸಿ ನೀರು ಇರುತ್ತಿತ್ತು. ಇದು ಇಡೀ ಕೋಣೆಯನ್ನು ಬೆಚ್ಚಗಿಡುತ್ತಿತ್ತು. ನಾವು ಯಾವಾಗಲು ಬುಕಾರಿಯ ಸುತ್ತ ಕುಳಿತು ಊಟ ಮಾಡಿ ಆಟ ಆಡುತ್ತಿರುತ್ತಿದ್ದೆವು. ಮೇಲೆ ಮೇಲೆ ಹೋದಂತೆ ನಾವು ಬಿಸಿ ನೀರನ್ನು ಸಹ ಹಣ ಕೊಟ್ಟು ಕೊಳ್ಳಬೇಕು. ಥಂಡಿ ನೀರೊಂತು ಕುಡಿಯಲಸಾಧ್ಯ. ಅಲ್ಲಿ ಎಲ್ಲ ಸಾಮಾನುಗಳನ್ನೂ ಬೆನ್ನ ಮೇಲೆ ಹೊತ್ತು ತರಬೇಕಾದ್ದುದ್ದರಿಂದ ಗ್ಯಾಸ್ ಬಹಳ ದುಬಾರಿ. ನಾಮ್ ಚೆವರೆಗೆ ಮಾತ್ರ ವಿದ್ಯುಚ್ಚಕ್ತಿ ಇದೆ. ಹಾಗಾಗಿ ಮೇಲೆ ಮೇಲೆ ಹೋದಂತೆ, ಗ್ಯಾಸನ್ನು ಬರಿ ಊಟಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ನಾಮ್ ಚೆಯಲ್ಲಿ ಗ್ಯಾಸ್ ಗೀಜರಿಂದ ಬೆಸಿಮಾಡಿದ್ದ ನೀರಿನ ಸ್ನಾನ ಸಾಧ್ಯವಿತ್ತು. ಒಂದು ಸ್ನಾನಕ್ಕೆ ೨೦೦ ನೇಪಾಲಿ ರುಪಾಯಿಗಳು. ಆದರೆ ಈ ಥಂಡಿಯಲ್ಲಿ ನಮಗೆ ಯಾರಿಗೂ ಬಟ್ಟೆ ಬಿಚ್ಚುವ ಉತ್ಸಾಹ ಇರಲಿಲ್ಲ. ನಾಮ್ ಚೆ ಇಂದ ಮುಂದಕ್ಕೆ ಸ್ನಾನದ ಮನೆಗಳೇ ಇರಲಿಲ್ಲ! ನಾವು ಕಟ್ಮಂಡು ಬಿಟ್ಟ ಮೇಲೆ ಸ್ನಾನವೇ ಮಾಡಿರಲಿಲ್ಲ. ನಾಳೆ ತೆಂಗ್ ಬೋಚೆಗೆ ಹೊರಡುವವರಿದ್ದೆವು. ಎಂದಿನಂತೆ ೫-೬-೭ ಎಂದು ಸಿರ್ಧರಿಸಿ ಥಂಡಿಯನ್ನು ಶಪಿಸುತ್ತಾ ಮಲಗಲು ತೆರಳಿದೆವು.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಜೀವಜಾಲ 

%d bloggers like this: