ನೀವು ಬರಲೇಬೇಕು

pasa-design

ಒಂದು ಪುಸ್ತಕ, 12 ಮುಖಪುಟ

img_7696

ಒಂದು ಪುಸ್ತಕ, 12 ಮುಖಪುಟ. ಈ ಆಶ್ಚರ್ಯಕರ ಘಟನೆ ನಡೆದದ್ದು ಛಂದ ಪುಸ್ತಕದಿಂದ. ಒಂದು ಪುಸ್ತಕ 12 ಮುಖಪುಟಗಳೊಂದಿಗೆ ಪ್ರಕಟವಾದದ್ದು ಎಲ್ಲಾದರೂ ಕೇಳಿದ್ದೀರಾ? ಆಗಿದೆ. ವಸುಧೇಂದ್ರ ಅವರ ‘ಹಂಪಿ ಎಕ್ಸ್ ಪ್ರೆಸ್’ ಪುಸ್ತಕ 12 ಮುಖಪುಟಗಳೊಂದಿಗೆ ರಾರಾಜಿಸಿದೆ.

ಛಂದ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ 12 ಮುಖಪುಟಗಳ ಪುಸ್ತಕವನ್ನು ಪ್ರದರ್ಶನಕ್ಕಿಡಲಾಗಿತ್ತು.  ವಸುಧೇಂದ್ರ ಹಂಪಿ ಎಕ್ಸ್ ಪ್ರೆಸ್ ತರುವ ಯೋಚನೆ ಮಾಡಿದಾಗ ಮುಖಪುಟಕ್ಕೆ ಒಂದು ಸ್ಪರ್ಧೆ ಏರ್ಪಡಿಸಬಾರದೇಕೆ ಎಂಬ ಪ್ರಶ್ನೆ ಎದ್ದು ನಿಂತಿತು. ಅಪಾರ ಈ ಯೋಚನೆಗೆ ಸಾಥ್ ನೀಡಿದರು. ಆಮೇಲೆ ನಾನಾ ಹಂತಗಳ ಆಯ್ಕೆ ನಡೆಯಿತು. ಕೊನೆಗೆ ಆಯ್ಕೆ ಮಂಡಳಿಗೆ ಚೆನ್ನಾಗಿದೆ ಅನಿಸಿದ್ದು 12. ಆದರೆ 12 ಮುಖಪುಟ ಮಾಡಲಿಕ್ಕಾಗುತ್ತಾ? ಅಂತ ಯೋಚಿಸಿದಾಗ ಮೈಸೂರಿನ ಕಾವಾದ  ಪ್ರವೀಣ್ ಮುಖಪುಟ 5 ಸಾವಿರ ರೂ ಬಹುಮಾನ ಗೆದ್ದುಕೊಂಡಿತು.

ಎಲ್ಲಾದರೂ 12 ಮುಖಪುಟ ಮಾಡಕ್ಕಾಗುತ್ತಾ ಎಂಬ ಪ್ರಶ್ನೆಯನ್ನು ವಸು ಹಾಗೂ ಅಪಾರ ಚಾಲೆಂಜ್ ಆಗಿ ತೆಗೆದುಕೊಂಡರೇನೋ. ಕೊನೆ ಸುತ್ತಿನಲ್ಲಿ ಹಿಂದುಳಿದ 11 ವಿನ್ಯಾಸವನ್ನು ಕೈಗೆತ್ತಿಕೊಂಡು ‘ಲಿಮಿಟೆಡ್ ಎಡಿಶನ್’ ಆವೃತ್ತಿ ತಂದೇಬಿಟ್ಟರು. ಮುಖಪುಟದಲ್ಲಿಯೇ ಕಲಾವಿದರ ಹೆಸರೂ ರಾರಾಜಿಸುತ್ತಿತ್ತು.

ಚಂದ ಆಲ್ವಾ?

ಜಿಲೇಬಿ ರೆಡಿ

pustka-sambrama

%d bloggers like this: