ಸುರೇಶ್ ಗೆ, ಪ್ರೀತಿಯಿಂದ…

forum-bangalore1

 

ಸುರೇಶ್ ರವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

(ಆದ್ರೆ ನಾನು ಸಂದೀಪ್ ನಾಯಕ್ ಅಲ್ಲ ಕಾಮತ್!)

“ಸಿನಿಮಾ ಕೇವಲ ಮಾರಾಟದ ಸರಕಾಗಬಾರದು ಅಲ್ವಾ? ” ಅಂತ ಕೇಳಿದ್ರಿ.
ನೀವು ನನ್ನನ್ನು ಕೇಳಿದ್ದಾ?? ನನ್ನನ್ನು ಕೇಳಿದ್ರೆ ’ಖಂಡಿತ ಮಾರಾಟದ ಸರಕಾಗಬಾರದು ’ ಅಂತೀನಿ.
ಆದ್ರೆ ಸಿನೆಮಾ ರಂಗದಲ್ಲಿರೊ 90% ಜನ ಹಣ ,ಹೆಸರು ಮಾಡಲು ಇರೋದು ಅಲ್ವಾ ಸರ್ ? ಉಳಿದ 10 % ಜನರು ಏನೇ ಸದಭಿರುಚಿಯ ಸಿನೆಮಾ ಕೊಟ್ರೂ ದಿನದ ಕೊನೆಗೆ ಹಣ ಎಣಿಸಿಲ್ಲ ಅಂದ್ರೆ ಬದುಕೋದು ಹೆಂಗೆ ಸರ್??
ನಿಮ್ಮ ಲೇಖನದ ಉದ್ದೇಶ ತುಂಬಾ ಚೆನ್ನಾಗಿದೆ .ಆದರೆ ಉದ್ದೇಶ ಏನೇ ಇದ್ರೂ ಪ್ರ್ಯಾಕ್ಟಿಕಲ್ ಆಗಿಲ್ಲದಿದ್ರೆ ಏನು ಸಾಧಿಸಿದ ಹಾಗಾಗುತ್ತೆ?

ಫುಟ್ಪಾತಿನಲ್ಲಿ ಎಷ್ಟೆ ಒಳ್ಳೆಯ ಚಿತ್ರಾನ್ನ ಸಿಕಿದ್ರೂ ನಾವ್ಯಾಕೆ ಅಡಿಗಾಸ್ ಗೆ ಹೋಗ್ತೀವಿ.
ದುಡ್ಡಿನ ಮದವುಳ್ಳವರಷ್ಟೆ ಮಲ್ಟಿಪ್ಲೆಕ್ಸ್ ಗೆ ಹೋಗ್ತಾರೆ ಅನ್ನೋ ಜನ ಯಾಕೆ ಚಿಕ್ಕ ಪುಟ್ಟ ಹೋಟೆಲ್ ಗೆ ಹೋಗಲ್ಲ?
ಐಟಿ-ಬಿಟಿ ಸಂಸ್ಕೃತಿ ,ಮಲ್ಟಿಪ್ಲೆಕ್ಸ್ ಸಂಸ್ಕೃತಿ ಅಂತ ಜನರಲೈಸ್ ಮಾಡೊದು ನನ್ಗೆ ಅಷ್ಟು ಸರಿ ಅನ್ನಿಸ್ಲಿಲ್ಲ ಅಷ್ಟೆ.

ನಾಗ್ತಿಹಳ್ಳಿ ’ಮಾತಾಡ್ ಮಾತಾಡು ಅಂತ ಎಷ್ಟೆ ಒಳ್ಳೆ ಸಿನೆಮಾ ಮಾಡಲಿ ,ದಿನದ ಕೊನೆಗೆ ಸಿನೆಮಾ ನೋಡೊದಿಕ್ಕೆ ಒಳ್ಳೆಯ ಮಲ್ಟಿಪ್ಲೆಕ್ಸ್ ಗೆ ತಾನೆ ಹೋಗೋದು?
ಇಲ್ಲಾಂದ್ರೆ ಮಲ್ಲೇಶ್ವರಂ ರೀಜಯ್ಸ್ ನಂಥ ಒಳ್ಳೆಯ ಜಾಗದಲ್ಲಿ ತಾನೇ ಸಿನೆಮಾ ಪ್ರೀಮಿಯರ್ ಏರ್ಪಡಿಸೋದು?ಪಾನ್ ಪರಾಗ್ ಘಾಟ್ ಬರೋ ಮೆಜೆಶಸ್ಟಿಕ್ ನ ಥಿಯೇಟರ್ ಗಳಿಗೆ ಯಾರೂ ತಲೇನೂ ಹಾಕಲ್ಲ.
ಮತ್ತಿಕೆರೆಯಲ್ಲೊಂದು ಟೆಂಟ್ ಸಿನೆಮಾಗೃಹ ಇದೆ ಲಕ್ಷ್ಮಿ ಅಂತ.ಪಕ್ಕಾ ಒರಿಜಿನಲ್ ಟೆಂಟ್ ! ಇಲ್ಲಿ ನಾನು ಎರಡು ಮೂರು ಸಿನೆಮಾ ನೋಡಿದ್ದೇನೆ.ಕೊನೆಗೆ ಒಂದು ಜಗಲಿ ಇದೆ ಆ ಜಗಲಿಯ ಮೇಲೆ ಕೂತು.ಆದ್ರೆ ನಮ್ಮ ಜನರು ಆ ಟೆಂಟ್ ಕಡೆ ತಲೆನೂ ಹಾಕಲ್ಲ.
ಸೀದಾ ಬಿಡದಿಯ ಫಿಲಂ ಸಿಟಿಗೆ ಹೋಗಿ ಟೆಂಟ್ ಸಿನೆಮಾ ನೋಡ್ತಾರೆ!
ನಿಮಗೆ ಗೊತ್ತಿರೋ ಥರ ಸಿನೆಮಾ ಒಂದು ಜೂಜು.ಅದರಲ್ಲಿ ಎಷ್ಟೆ ಎಕ್ಸ್ಪರಿಮೇಂಟ್ ಮಾಡ್ಬೇಕಿದ್ರೂ ಕೊನೆಗೆ ಧೈರ್ಯ ಮಾಡ್ಬೇಕಾಗಿರೋದು ದುಡ್ಡಿರೋ ಪ್ರೊಡ್ಯೂಸರ್ ಅಲ್ವ?
ನಿಮ್ಮ ಕಾಳಜಿ ಎಲ್ಲರಿಗೂ ಬಂದ್ರೆ ಚೆನ್ನಾಗಿರ್ತಿತ್ತು.ಆದ್ರೆ ಎಲ್ಲಾ ದುಡ್ಡಿನ ಸುತ್ತಲೇ ಗಿರಕಿ ಹೋಡೆಯೋ ಈ ದಿನಗಳಲ್ಲಿ ಇದು ಕಷ್ಟ!!

ಒಂದು ಮಾತು ಮರೆತೆ ಹೋಗಿತ್ತು!
ನಾನು ಮಲ್ಟಿಪ್ಲೆಕ್ಸ್ ಗೂ ಹೋಗಿದ್ದೀನಿ ಹಾಗೆ ಮತ್ತಿಕೆರೆಯ ಟೆಂಟ್ ನಲ್ಲಿ ಕುಳಿತು ಸಿನೆಮಾ ನೋಡಿದ್ದೀನಿ.
“ಮಲ್ಟಿಪ್ಲೆಕ್ಸ್‌ನ ಆರಿಸಿಕೊಳ್ಳುವವರ ಮನಸ್ಸು ಎಂತಹದು, ಮತ್ತು ಮಲ್ಟಿಪ್ಲೆಕ್ಸ್‌ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು ಎಂಬುದು ಅದಾಗಲೇ ಪ್ರಮಾಣೀಕೃತ ಸತ್ಯ” ಅಂತ ನೀವು ಹೇಳಿದ್ದು ಸ್ವಲ್ಪ ಬೇಸರ ತರಿಸಿತು:(

ಗಿರೀಶ್ ಕಾಸರವಳ್ಳಿಯವರ ’ಗುಲಾಬಿ ಟಾಕೀಸ್’ ಕೂಡಾ ಬಿಡುಗಡೆಯಾಗಿದ್ದು ಪಿವಿ ಆರ್ ಮಲ್ಟಿಪ್ಲೆಕ್ಸ್ ನಲ್ಲೇ! ಹಾಗಿದ್ರೆ ಗಿರೀಶ್ ಕಾಸರವಳ್ಳಿ ಕೂಡಾ ಮಲ್ಟಿಪ್ಲೆಕ್ಸ್ ಮನಸ್ಥಿತಿಯವರಾ??
’ಗುಲಾಬಿ ಟಾಕೀಸ್’ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆ ಆಗೋದಿಕ್ಕೆ ’ಅದರದ್ದೇ ’ ಆದ ಕಾರಣಗಳಿತ್ತು ಅಂತ ನೀವು ಹೇಳಬಹುದು .ಆದರೆ ಮಲ್ಟಿಪ್ಲೆಕ್ಸ್ ಗಳಿಗೆ ’ಅವರದ್ದೇ ’ ಆದ ಕಾರಣಗಳಿಂದ (ಪಾನ್ ಪರಾಗ್ ಘಾಟು!) ಹೋಗೋರು ಇದ್ದಾರಲ್ಲ ಸರ್ .ಅವರ ಮನಸ್ಥಿತಿಯ ಬಗ್ಗೆ ಆಪಾದಿಸೋದು ಸರಿ ನಾ??

-Sandeep Kamath
kadalateera.blogspot.com
sandeepkamath82@yahoo.com

‘ಅಪಾರ’ ಕಥೆ – ಕೇರಾಫ್ ಕೊಯಮತ್ತೂರ್

ಮತ್ತೆ ಮತ್ತೆ ಅಡಿಗ

‘ಸಿರಿ’ ಬಂದ ಕಾಲಕ್ಕೆ

mn211

tಮೃಗನಯನಿ 

 

ಅರವಿಂದ್ ಅಡಿಗರ ‘ದಿ ವೈಟ್ ಟೈಗರ್’ ಓದುತ್ತಿದ್ದರೆ, ಗೋಪಾಲ ಕೃಷ್ಣ ಅಡಿಗರ ‘ಜಗದ್ಗುರು ಆಗ’ ಪದ್ಯದ ಸಾಲುಗಳು ನೆನಪಾಗುತ್ತಿದ್ದವು.

ಬರೀ ಬಡಾಯಿಯ ದೇಶಭಕ್ತಿ ನಮ್ಮದು. ನಮ್ಮ

ಬೆನ್ನನ್ನು ನಾವೇ ತಟ್ಟಿಕೊಂಡು ಕುಣಿದಾಡುತ್ತಾ

ನಮ್ಮ ಗರಿಮೆಯನ್ನು ನಾವೇ ಬಣ್ಣಿಸುವ ದರಿದ್ರ ಜನ

ಯಾರೋ ಎಲ್ಲೋ ಏಕೋ ಒಂದು ಒಳ್ಳೆಯ ಮಾತನಾಡಿದರೆ

ಅದನ್ನೆ ಸಹಸ್ರ ಸಹಸ್ರ ಕಂಠದಿ ಹಾಡಿ ಅದನ್ನೇ

ದೇಶದುದ್ದಕ್ಕೂ ಅಗಲಕ್ಕೂ ಸಾರುತ್ತಾ ನಮ್ಮಾಧುನಿಕ

ದೈನ್ಯ ಕೈಂಕರ್ಯಗಳ ಮರೆಸಳೆಳಸುವ ಮಂದಿ

ಈ ನಮ್ಮ ಭಾರತದ ಬಂದಿ ವಂದಿ

ದಿ ವೈಟ್ ಟೈಗರ್ ಕಾದಂಬರಿಯ ನಾಯಕನಿಗೂ (ನಾಯಕನಾ?) ಹೀಗೇ ಅನ್ನಿಸಿರಬೇಕು, ಅದಕ್ಕೇ ಚೈನಾದ ಪ್ರಧಾನ ಮಂತ್ರಿ ಭಾರತಕ್ಕೆ ಕೆಲವು ದಿನಗಳ ಭೇಟಿಗೆ ಬರುತ್ತಿದ್ದಾರೆ ಎಂಬುದನ್ನು ರೇಡಿಯೋದಲ್ಲಿ ಕೇಳಿಸಿಕೊಂಡ ???? ಚೈನಾದ ಪ್ರಧಾನ ಮಂತ್ರಿಗೆ ನಮ್ಮ ದೇಶದ ರಾಜಕಾರಣಿಗಳು ದೇಶದ ಚಿತ್ರಕ್ಕೆ ಚಂದದ ಬಣ್ಣ ಬಳಿದು ತೋರಿಸುವ ಮೊದಲೇ ತಾನು ತನ್ನ ಕಥೆಯನ್ನು ಹೇಳುವುದರ ಮೂಲಕ ದೇಶದ ನೈಜ ಚಿತ್ರವನ್ನು ಅವರ ಮುಂದಿಡಬೇಕೆಂದು ನಿರ್ಧರಿಸಿ ಅವರಿಗೆ ಏಳು ಪತ್ರಗಳನ್ನು ಬರೆಯುತ್ತಾನೆ. ಚೈನಾದ ಪ್ರಧಾನ ಮಂತ್ರಿಗಳಿಗೆ ಏಳು ಪತ್ರಗಳನ್ನ ಬರೆಯುತ್ತಾನೆ ಅನ್ನುವುದನ್ನ ಕಲ್ಪಿಸಿಕೊಳ್ಳಲು ಸ್ವಲ್ಪ ಕಷ್ಟವಾದರೂ ಭಾರತದ ನೈಜ ಚಿತ್ರಣ ಎಷ್ಟು ನೈಜ ಎನ್ನುವುದನ್ನು ತಿಳಿದುಕೊಳ್ಳಲು ಓದತೊಡಗಿದೆ.

aravjpgಚೈನಾದ ಪ್ರಧಾನಿಗೆ ಬರೆದ ಮೊದಲ ಪತ್ರದಲ್ಲೇ ಕಥೆ ಹೇಳುತ್ತಿರುವವನು ಒಂದು ಕೊಲೆ ಮಾಡಿದ್ದಾನೆ ಎಂದು ಗೊತ್ತಾದಾಗ ಈ ಕಾದಂಬರಿ ಏನಾದರೂ, ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾ ತಾನು ಮಾಡಿದ ತಪ್ಪುಗಳನ್ನೆಲ್ಲಾ ಪಾದ್ರಿಯ ಮುಂದೆ ಹೇಳಿಕೊಳ್ಳುವ ಕ್ಯಾಥೋಲಿಕ್ ನಂತೆ ಬಲರಾಮ್ ಹಲ್ವಾಯಿ ಕೂಡಾ ಚೈನಾದ ಪ್ರಧಾನ ಮಂತ್ರಿಯ ಮುಂದೆ ತಪ್ಪೊಪ್ಪಿಗೆ ಮಾಡಿಕೊಳ್ಳುವ ಕಥೆಯೋ? ತಾನು ಮಾಡಿದ ತಪ್ಪಿಗೆ ಕಾರಣಗಳನ್ನು ಒದಗಿಸುತ್ತಿದ್ದಾನ? ಅಂತ ಅನುಮಾನವಾದರೂ ಅಂಥದೇನೂ ಆಗದೆ, ನಮ್ಮ ನಾಯಕ ಬಲರಾಮ್ ತಾನು ಮಾಡಿದ ಕೃತ್ಯವೂ ದೇಶದ ಚಿತ್ರಣದ ಒಂದು ಭಾಗದಂತೆ, ಅದೇ ನಿರುಮ್ಮಳತೆಯಿಂದ ವಿವರಿಸಿಕೊಂಡು ಹೋಗುತ್ತಾನೆ.

ಒಂದು ಹೆಸರೇ ಇಲ್ಲದೆ ಬರೀ ಹುಡುಗ (ಮುನ್ನ) ಎಂದು ಕರೆಸಿಕೊಳ್ಳುತ್ತಿದ್ದ ಹುಡುಗನಿಂದ ಶುರುವಾಗುವ ಕಥೆ ಅವನು ಬಲರಾಮ್ ಆಗಿ ಸ್ಕೂಲ್ ಇನ್ಸ್ಪೆಕ್ಟರ್ ನಿಂದ ‘ಬಿಳಿ ಹುಲಿ’ ಎಂದು ಹೊಗಳಿಸಿಕೊಂಡು, ನಿಷ್ಠಾವಂತ ಸೇವಕನಾಗಿ ಕೊನೆಗೆ ‘ರೂಸ್ಟರ್ ಕೂಪ್’ನಿಂದ ಹೊರಬಂದು, ತಾನು ಹಿಂದೊಮ್ಮೆ ಕರೆಸಿಕೊಂಡಂತೆ ನಿಜವಾಗಲೂ ವೈಟ್ ಟೈಗರ್ ಆಗುವವನ ಕಥೆ, ಮೊದಲ ಪತ್ರದಲ್ಲಿಯೇ ಅವನು ತನ್ನ ಮಾಲೀಕನನ್ನ ಕೊಲೆ ಮಾಡಿ ಬಂದಿರುತ್ತಾನೆ ಎಂದು ತಿಳಿದರೂ ಓದಿಸಿಕೊಂಡು ಹೋಗುತ್ತದೆ ಎನ್ನುವುದಾದರೆ ಆ ಶ್ರೇಯಸ್ಸೆಲ್ಲಾ ಅರವಿಂದ ಅಡಿಗ ಕಟ್ಟಿಕೊಡುವ ಬಲರಾಮ್ ಜಗತ್ತು, ಬಲರಾಮನ ಸ್ವಭಾವ ವೈಚಿತ್ರ್ಯ- ಅವನ ಮುಗ್ಧತೆ, ಆಸೆ, ಆಕಾಂಕ್ಷೆ, ಸಂಕಟ, ದುಃಖ, ದುಮ್ಮಾನ, ದಾಸ್ಯ, ಕುಟಿಲತೆ, ಕ್ರೌರ್ಯ, ಘಾಸಿ ಮಾಡುವ ಕ್ರೂರ ವಿನೋದ ಎಲ್ಲಕ್ಕೆ ಸಲ್ಲುತ್ತದೆ.

ವಿಶೇಷವಾಗಿ ಆಕರ್ಷಿಸುವುದು ಆ ‘ರೂಸ್ಟರ್ ಕೂಪ್’ನ ಚಿತ್ರಣ. ನಮ್ಮ ಸಂತೆಗಳಲ್ಲಿ, ಒಂದು ರಾಶಿ ಕೋಳಿ ಹುಂಜಗಳನ್ನು ಒಟ್ಟಿರುವ ಪಂಜರಗಳನ್ನು ನೋಡಿರುತ್ತೇವಲ್ಲ, ಅವುಗಳಲ್ಲೇ ಒಂದನ್ನು ತೆಗೆದು ಕಟುಕ ಕತ್ತರಿಸುತ್ತಿರುತ್ತಾನೆ, ಅದನ್ನು ನೋಡಿಕೊಂಡೂ, ನಮಗೂ ನಾಳೆ ಆ ಸ್ಥಿತಿಯೇ ಅಂತ ಗೊತ್ತಿದ್ದರೂ, ಪಂಜರದೊಳಗೇ ಒಂದನೊಂದನ್ನು ಕುಕ್ಕುತ್ತಾ, ಒಂದು ಮತ್ತೊಂದರ ಮೇಲೆ ಹೊಲಸು ಮಾಡುತ್ತಾ, ಕೇವಲ ಉಸಿರಾಡಲು ಹೊಡೆದಾಡುತ್ತಿರುತ್ತವೆ. ಪಂಜರದಿಂದ ಹೊರಬರಲು ಪ್ರಯತ್ನಿಸುವುದೇ ಇಲ್ಲ. ಕಥಾ ನಾಯಕ ಬಲರಾಮನ ಪ್ರಕಾರ ಭಾರತದ ಬಡಜನರ ಸ್ಥಿತಿಯೂ ಅದೇ. ಈ ಬಡಜನರು ಕೇವಲ ಬದುಕಲಿಕ್ಕಾಗಿ, ಜೀವಕ್ಕಾಗಿ ತಮ್ಮತಮ್ಮಲೇ ಹೊಡೆದಾಡಿಕೊಳ್ಳುವುದರಲ್ಲಿ ಎಷ್ಟು ಕಳೆದು ಹೋಗಿದ್ದಾರೆಂದರೆ, ಪಂಜರದಿಂದ ಹೊರಬಂದು ಸ್ವತಂತ್ರರಾಗಬೇಕೆಂಬ ಜ್ಞಾನವೇ ಇಲ್ಲ. ಇದೆಲ್ಲಾ ಎಷ್ಟು ನಿಜ ಅನ್ನಿಸಿಬಿಡುತ್ತದೆ. ನಾವೆಲ್ಲಾ ಪಂಜರದಲ್ಲಿ ಬಂದಿಯಾದ ಕೋಳಿಗಳಂತೆ ಅನ್ನಿಸತೊಡಗುತ್ತದೆ.

More

ಆಫ್ಟರ್‌ 20 ಇಯರ್ಸ್

idlijpg2

ಇಡ್ಲಿಗೆ ಸಾಂಬಾರ್ ಮಾಡುವುದು ಹೇಗೆ ಎಂದು ಬರೆಯಲು ತಡವಾಯಿತು. ಬಹುಶಃ ಇಡ್ಲಿ ವಡೆ ಒಣಗಿ ಹೋಗಿರಬೇಕು. ದಯವಿಟ್ಟು ಕ್ಷಮಿಸಿ.

ಅಂದ ಹಾಗೆ ಸಾಂಬಾರ್ ಮಾಡುವುದು ಬಹಳ ಸುಲಭ. ಸಾಮಾನ್ಯವಾಗಿ ಇಡ್ಲಿ ಸಾಂಬಾರ್ ಹಾಗೂ ಊಟದ ಸಾಂಬಾರ್ ಎನ್ನೋ ಪ್ರತ್ಯೇಕತೆ ಹೋಟೆಲ್‌ಗಳಲ್ಲಿದೆ. ನೀವು ಹೋಟೆಲ್‌ಗಳಿಗೆ ಮಧ್ಯಾಹ್ನ ಹೋದರೆ ಹಾಗೇ ಕೇಳಿ. ಕೆಲವೊಮ್ಮೆ ಊಟದ ಸಾಂಬಾರ್ ಅನ್ನೇ ಕೊಟ್ಟು ಬಿಡ್ತಾರೆ. ಅದು ಇಡ್ಲಿಗೆ ರುಚಿಸದು.

ಸರಳವಾದ ಕಾರಣವೆಂದರೆ ಇಡ್ಲಿ ಸಾಂಬಾರ್ ಸ್ವಲ್ಪ ನೀರಾಗಿರುತ್ತೆ ; ಊಟದ ಸಾಂಬಾರ್ ಸ್ವಲ್ಪ ಗಟ್ಟಿ. ಮತ್ತೊಂದು ಕಾರಣವೆಂದರೆ ಊಟದ ಸಾಂಬಾರ್‌ಗೆ ತರಕಾರಿ ಹೆಚ್ಚು ಹಾಕ್ತಾರೆ. ಆದರೆ ಇಡ್ಲಿ ಸಾಂಬಾರ್‌ಗೆ ಎಲ್ಲ ತರಕಾರಿ ಆಗೋದಿಲ್ಲ.

ಸಂಪೂರ್ಣ ಓದಿಗೆ ಭೇಟಿ ಕೊಡಿ- ಪಾಕಚಂದ್ರಿಕೆ 

 

+++

goodjpg

ನಿಜವಾಗಿಯೂ ಗೆಳೆತನ ಎಂದರೇನು? ಒಟ್ಟಿಗೆ ತಿರುಗಾಡುವುದೇ, ಐಸ್‌ಕ್ರೀಮ್‌ ತಿನ್ನುವುದೇ, ನೋಟ್ಸ್‌ ಕೇಳುವುದೇ, ದುಬಾರಿ ಉಡುಗೊರೆ ಕೊಡುವುದೇ? ಸ್ನೇಹ ಇರುವುದು ಪ್ರೀತಿಯಲ್ಲಾ, ನಿಕಟ ಒಡನಾಟದಲ್ಲಾ, ತ್ಯಾಗದಲ್ಲಾ, ಸ್ವಾರ್ಥದಲ್ಲಾ ನಿಃಸ್ವಾರ್ಥದಲ್ಲಾ? ಈ ಮಾತಿಗೆ ಕಾಲಮಾನಕ್ಕೊಂದು ವ್ಯಾಖ್ಯೆ ಬಂದುಹೋಗಿವೆ. ಸ್ನೇಹದಲ್ಲಿ ನಿಸ್ವಾರ್ಥ ಇರಬೇಕು ಎಂಬ ಹಳಸಲು ಮಾತುಗಳು ಸದಾ ನಮ್ಮ ನಡುವೆ ಹಾದು ಹೋಗಿವೆ. ಆದರೆ ಗೆಳೆತನ ಈ ಎಲ್ಲಾ ಹಂಗನ್ನೂ ತೊರೆದು ಎರಡು ಜೀವಗಳ ಮಧ್ಯೆ ಲಿಂಗ, ವಯಸ್ಸು, ಜಾತಿ, ವರ್ಚಸ್ತು, ಅಂತಸ್ತು, ಮತಾತೀತವಾಗಿ ಹುಟ್ಟಿಕೊಂಡಿದೆ.

ಸ್ನೇಹ ಮತ್ತೊಬ್ಬನನ್ನು ಇತ್ಯಾತ್ಮಕ(ಪಾಸಿಟಿವ್‌)ವಾಗಿ ಬದಲಿಸಬೇಕು ಎಂಬ ಒಂದು ಹಿತ ನುಡಿಯ ಮೇಲೆ ಇಲ್ಲೊಂದು ಕತೆ ಇದೆ. ಅದು ಅತ್ಯಂತ ಜನಪ್ರಿಯ ಕತೆ. ಆದರೆ ಓದಿದ ಪ್ರತಿ ಸಲವೂ ಅದು ನಮ್ಮನ್ನು ಆರ್ದ್ರಗೊಳಿಸುತ್ತದೆ. ಪ್ರತಿ ಓದಿನಲ್ಲೂ ಅದು ನಿಮಗೆ ಏನೇನನ್ನೋ ಹೇಳುತ್ತದೆ.

ನಿಮಗೇ ಗೊತ್ತು, ಅದು ಓ ಹೆನ್ರಿ ಕತೆ. ಹೆಸರು:  ಆಫ್ಟರ್‌  20 ಈಯರ್ಸ್‌ (ಇಪ್ಪತ್ತು ವರ್ಷಗಳ ನಂತರ). ಅನುವಾದ: ಚಿತ್ರಾಂಗದ.

ನಮ್ಮ `ತಿಳಿಯ ಹೇಳುವ ಇಷ್ಟಕತೆಯನು’ ಮಾಲಿಕೆಯಲ್ಲಿ ಈ ಬಾರಿ ಒಂದು ಅನುವಾದಿತ ಕತೆ. 

ಸಂಪೂರ್ಣ ಓದಿಗೆ ಭೇಟಿ ಕೊಡಿ-  ಕಳ್ಳ ಕುಳ್ಳ 

%d bloggers like this: