ಆ ಅಜ್ಜ, ಈ ಮೊಮ್ಮಗ

ಮುದೇನೂರು ಸಂಗಣ್ಣ ಎಲ್ಲರ ಅಜ್ಜ. ‘ಆ ಅಜ್ಜ, ಈ ಮೊಮ್ಮಗ’ ಎಂಬ ತಮ್ಮ ಕವನ ಸಂಕಲನದಂತೆ ಬದುಕಿದವರು.

‘ನಾವು ನಮ್ಮಲ್ಲಿ’ ಅವರ ಅಪರೂಪದ ಫೋಟೋಗಳನ್ನೂ ಹಾಗೂ ಆನಂದ ಋಗ್ವೇದಿ ಅವರ ಆತ್ಮೀಯ ಬರಹವನ್ನು ಪ್ರಕಟಿಸಿದೆ.

mudenooru-sanganna3

mudenooru-sanganna41

ಮಲ್ಟಿಪ್ಲೆಕ್ಸ್‌ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು?

ಬಿ ಸುರೇಶ ಅವರ ‘ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಗೆ ಬಂದ ಪ್ರತಿಕ್ರಿಯೆಗಳಿಗೆ ಬಿ ಸುರೇಶ್ ಅವರೇ ಉತ್ತರಿಸಿದ್ದಾರೆ – ಥ್ಯಾಂಕ್ಸ್ ಕಣಮ್ಮ ಸುರೇಶ್

 

India Spider Man 3

ಸುಪ್ರೀತ್ ಅವರ ಪ್ರತಿಕ್ರಿಯೆಗೆ

ಗೆಳೆಯರು ಹೇಳುತ್ತಾ ಇರುವುದು ಸರಿ. ಈ ಲೇಖನದಲ್ಲಿ ಎಲ್ಲವೂ ಚರ್ಚಿತವಾಗಿಲ್ಲ. ಚರ್ಚಿತವಾಗಬಹುದಾದ ಅನೇಕ ವಿಷಯಗಳಿವೆ. ಪ್ರಾಯಶಃ ಈಗ ಇರು ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಇಡೀ ವಿವರವನ್ನ ಮರುಪರಿಶೀಲಿಸಬಹುದು.

ಆದರೆ ಎರಡನೆಯ ಅರ್ಧದಲ್ಲಿ ನೂವು ಕೇಳುತ್ತಾ ಇರುವ ಪ್ರಶ್ನೆಗಳಿಗೆ ಬಹುತೇಕ ಉತ್ತರಗಳು ಲೇಖನದಲ್ಲಿ ಸಿಗುತ್ತವೆ.
ಮಲ್ಟಿಪ್ಲೆಕ್ಸ್‌ನ ಆರಿಸಿಕೊಳ್ಳುವವರ ಮನಸ್ಸು ಎಂತಹದು, ಮತ್ತು ಮಲ್ಟಿಪ್ಲೆಕ್ಸ್‌ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು ಎಂಬುದು ಅದಾಗಲೇ ಪ್ರಮಾಣೀಕೃತ ಸತ್ಯ. ತಲೆಗೆ ಐನೂರು ರೂ.ಕೊಟ್ಟು ಸೌಲಭ್ಯ ಕೊಳ್ಳುವವರು ಎಂತಹವರು ಎಂದು ಬಿಡಿಸಿ ಹೇಳಬೇಕೆ?

ನನ್ನ ಲೇಖನದಿಂದ ನಿಮ್ಮ ತಲೆಯಲ್ಲಿ ಒಂದು ಹುಳು ಮಾತ್ರ ಬಿಟ್ಟಿದ್ದೇನೆ. ಅದು ಏನೇನು ಮಾಡುತ್ತದೋ ನೋಡೋಣ, ನನಗೂ-ನಿಮಗೂ…
ಒಳಿತಾಗಲಿ, ಸುಪ್ರೀತ್

 

 

ಸಂದೀಪ್ ನಾಯಕ್ ಅವರ ಪ್ರತಿಕ್ರಿಯೆಗೆ


ಕಾಸು ಗಿಟ್ಟತ್ತೆ ಅಂತ ಅವರು ನೀಲಿ ಚಿತ್ರ ಹಾಕ್ತಾ ಇಲ್ಲ. ಅವರು ಸಮಾಜಸೇವೆ ಹೆಸರಲ್ಲಿ ಮಾಡ್ತಾ ಇರುವ ವ್ಯಾಪಾರವನ್ನ ಗಮನಿಸಬೇಕು, ಗೆಳೆಯರೇ…
ಅದೇ ಇಲ್ಲಿ ದೊಡ್ಡ ಪ್ರಶ್ನೆ.

ಸಿನಿಮಾ ಕೇವಲ ಮಾರಾಟದ ಸರಕಾಗಬಾರದು ಅಲ್ವಾ? ಅದಕ್ಕೆ ಇರುವ ಜವಾಬ್ದಾರಿಗಳು ಬಹಳ ದೊಡ್ಡದು ಅಲ್ವಾ?
ಮೊದಲು ನಮ್ಮ ರಸ್ತೆಯಲ್ಲೇ ಇದ್ದ ದಿನಸಿ ಅಂಗಡಿಯಲ್ಲಿ ನಾವು ಚೌಕಾಸಿ ಮಾಡುತ್ತಿದ್ದೆವು. ಈಗ ಮಾಲ್‌ನಲ್ಲಿ ಚೌಕಾಸಿಗೆ ಅವಕಾಶವಿಲ್ಲ.
ಹಾಗೆಯೇ ಚಿತ್ರಮಂದಿರದ ವಿವರವನ್ನ ಗಮನಿಸಬೇಕು.

ಇದು ಆರ್ಥಿಕ ನೆಲೆಯಿಂದ, ಸಾಮಾಜಿಕ ನೆಲೆಯಿಂದ ಚರ್ಚಿತವಾಗಬೇಕಾದ ವಿಷಯ.
ಒಮ್ಮೆ ಜೋಸೆಫ್‌ ಸ್ಟಿಗ್ಲಿಟ್ಸ್‌ನ ಓದಿ.

 

ಶುಭದಾ ಅವರ ಪ್ರತಿಕ್ರಿಯೆಗೆ


ಥ್ಯಾಂಕ್ಸ್! ನಾನು ಕನ್ನಡವನ್ನೂ ರಾಷ್ಟ್ರಭಾಷೆ ಎನ್ನುತ್ತೇನೆ. ಅದು ನನ್ನ ಖುಷಿಗೆ.
ಅಥವಾ ಕನ್ನಡಾಭಿಮಾನಿಗಳ ಖುಷಿಗೆ. ಅದು ರಾಷ್ಟ್ರೀಯ ಸತ್ಯವಲ್ಲ ಎಂಬುದು ನಿಮಗೂ ಗೊತ್ತು, ನನಗೂ ಗೊತ್ತು.
ಹಿಂದಿಯನ್ನ ಹೇರಲಾಗಿದೆ. ಅದರ ಸಂಕಷ್ಟವನ್ನ ಪ್ರತಿಭಾರೀ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನುಭವಿಸುತ್ತಾ ಇದ್ದೇವೆ.
ಇದರಿಂದ ಬಿಡಿಸಿಕೊಳ್ಳಲು ಹೋರಾಟವಾಗುತ್ತಿದೆ. ಗೆಲುವು ಸಿಗಬೇಕಿದೆಯಷ್ಟೆ.
ಪ್ರತಿಕ್ರಿಯೆಗೆ ವಂದನೆಗಳು.
ಬಿ.ಸುರೇಶ

ಅಲೆವ ಮನದ ‘ಚಂದ್ರಯಾನ’

TV9 ನ ದೆಹಲಿ ವರದಿಗಾರ ಶಿವಪ್ರಸಾದ್ ತಮ್ಮ ‘ಅಲೆಯುವ ಮನ’ ಬ್ಲಾಗ್ ನಿಂದ ಪರಿಚಿತರು. ‘ಶಾಂತವಾಗು ಮನವೆ, ತಲ್ಲಣಿಸಬೇಡ’ ಎನ್ನುವ ಘೋಷ ವಾಕ್ಯ ಇವರ ಬ್ಲಾಗ್ ನದ್ದು. ಪತ್ರಿಕೋದ್ಯಮದ ನಿರಂತರ ಸವಾಲುಗಳಿಗೆ ತೆರೆದುಕೊಳ್ಳುವ ಪತ್ರಕರ್ತರಿಗೆ ಹೇಳಿಮಾಡಿಸಿದ ವಾಕ್ಯ.

ತಮ್ಮ ಕೆಲಸದ ಮಧ್ಯೆಯೂ ಶಿವಪ್ರಸಾದ್ ‘ಚಂದ್ರಯಾನ’ ಪುಸ್ತಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ. 

new-cover1

%d bloggers like this: