ಕಾಡಿನೊಳಗೊಂದು ಕೊಟ್ಟಾಯಂ!

ಜೋಗಿ ಹೊಸ ಕಾದಂಬರಿ

ಭಾಗ-೫ 

 jogijpg3

ವಾಗ್ಲೆ ಅತ್ಯುತ್ಸಾಹದಿಂದ ನಾನೇ ಬರ್ತೀನಿ ಬಿಡ್ರೀ’ ಅಂತ ಹೇಳಿದ್ದರೂ, ಅವರು ಖಂಡಿತಾ ಬರುವುದಿಲ್ಲ ಎಂದು ನನಗೆ ಗೊತ್ತಿತ್ತು. ಸಾಮಾನ್ಯವಾಗಿ ಫಾರೆಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುವವರಿಗೆ ಕಾಡಿನ ಸಹವಾಸ ಸಾಕಾಗಿ ಹೋಗಿರುತ್ತದೆ. ನಗರಗಳಲ್ಲಿದ್ದು ಸಕಲ ಸೌಲಭ್ಯಗಳನ್ನೂ ಅನುಭವಿಸುತ್ತಾ ಆರುತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ಕಾಡು ಸುತ್ತುವುದಕ್ಕೆ ಹೋಗುವವರ ಪಾಲಿಗೆ ಕಾಡೆಂದರೆ ಆಪ್ಯಾಯಮಾನ. ಆದರೆ ಕಾಡಿನ ನಡುವೆಯೇ ವಾಸ ಮಾಡುವವರಿಗೆ ಅದು ಸಮಸ್ಯೆಗಳ ಸಂತೆ. ಅದರಲ್ಲೂ ಕಾಡನ್ನು ರಕ್ಷಿಸುವ ಹೊಣೆ ಹೊತ್ತವರಿಗಂತೂ ನೂರೆಂಟು ತಾಪತ್ರಯ. ಯಾವ ಹೊತ್ತಿನಲ್ಲಿ ಎಲ್ಲಿ ಯಾರು ಮರ ಕಡಿಯುತ್ತಾರೋ, ಎಲ್ಲಿ ಬೇಟೆಯಾಡುತ್ತಾರೋ, ಯಾವಾಗ ದಂತಚೋರನೊಬ್ಬ ಕಾಣಿಸಿಕೊಂಡು ನಿದ್ದೆಗೆಡಿಸುತ್ತಾನೋ ಗೊತ್ತಿರುವುದಿಲ್ಲ. ಈ ಮಧ್ಯೆ ಕಾಡಿನ ನಡುವೆ ಬೇಸಾಯ ಮಾಡಿಕೊಂಡಿರುವವರು, ಕಾಡಿನೊಳಗೆ ಹಾಡಿ ಮಾಡಿಕೊಂಡು ಜೀವಿಸುವ ಮೂಲನಿವಾಸಿಗಳು, ಅವರನ್ನು ಉದ್ದಾರ ಮಾಡುವುದಕ್ಕೆ ಬರುವ ಎನ್‌ಜಿಓಗಳು, ಕಾಡು ಹಾಳಾಗುತ್ತಿದೆ ಎಂದು ರಾದ್ಧಾಂತ ಮಾಡುವ ಪರಿಸರವಾದಿಗಳು- ಇವರೆಲ್ಲ ಸೇರಿ ದಿನಾ ಒಂದಲ್ಲ ಒಂದು ಸಮಸ್ಯೆ ಸೃಷ್ಟಿಸುತ್ತಲೇ ಇರುತ್ತಾರೆ.

ಇವೆಲ್ಲಕ್ಕಿಂತ ದೊಡ್ಡ ಕಾಟವೆಂದರೆ ವಿಐಪಿಗಳದ್ದು. ಅವರಿಗೆ ಫಾರೆಸ್ಟ್ ಗೆಸ್ಟ್‌ಹೌಸ್ ಬುಕ್ ಮಾಡಿ, ಅಲ್ಲಿಗೆ ಬರುವ ಮಂತ್ರಿ ಮಹೋದಯರ ಐಎಸ್ ಅಧಿಕಾರಿಗಳ ಫ್ಯಾಮಿಲಿಗೆ ಕಾಡು ತೋರಿಸುತ್ತಾ ಅವರನ್ನು ರಂಜಿಸುವುದರಲ್ಲೇ ಕಾಲ ಕಳೆದುಹೋಗುತ್ತದೆ. ಕೆಲವರಂತೂ ಸಫಾರಿಗೆ ಕರೆದೊಯ್ದಾಗ ಒಂದೂ ಆನೆ ಸಿಗಲಿಲ್ಲ, ಹುಲಿ ಕಾಣಿಸಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಳ್ಳುತ್ತಾರೆ. ಏನು ಮಾಡ್ತೀರ್ರೀ ಇಲ್ಲಿದ್ದುಕೊಂಡು ಎಂದು ಹೀಯಾಳಿಸಿ ಹೋಗುತ್ತಾರೆ.

ವಾಗ್ಲೆಗೂ ಅಂಥ ಸಮಸ್ಯೆಗಳಿದ್ದವು. ಅದು ಅಭಯಾರಣ್ಯ ಆಗದೇ ಇದ್ದದ್ದರಿಂದ ಅವರು ಸಫಾರಿಗೆ ಕರೆದೊಯ್ಯುವ ಕಷ್ಟದಿಂದ ಪಾರಾಗಿದ್ದರು. ಆದರೆ, ರಕ್ಷಿತಾರಣ್ಯದಲ್ಲಿ ಚಾರಣ ಮಾಡುವುದಕ್ಕೆಂದೇ ಯಾರ್‍ಯಾರೋ ಬರುತ್ತಿದ್ದರು. ಬೆಂಗಳೂರಿನಿಂದ ಚೀಫ್ ಕನ್ಸರ್ವೇಟರ್ರೋ ಚೀಫ್ ಸೆಕ್ರೆಟರಿಯೋ ಫೋನ್ ಮಾಡಿ ಇಂಥವರು ಬರುತ್ತಿದ್ದಾರೆ, ಚೆನ್ನಾಗಿ ನೋಡ್ಕೊಳ್ರಪ್ಪ ಎಂದು ಸೂಚನೆ ನೀಡುತ್ತಿದ್ದರು. ಬಂದವರಿಗೆ ಸ್ನಾನಕ್ಕೆ ಬಿಸಿನೀರು ಸಿಗದಿದ್ದರೆ, ಇಡ್ಲಿ ತಣ್ಣಗಿದ್ದರೆ, ಮಂಚದಲ್ಲಿ ತಿಗಣೆ ಇದ್ದರೆ ನೇರವಾಗಿ ಆರ್‌ಎಫ್‌ಓಗೇ ಫೋನ್ ಮಾಡಿ ದಬಾಯಿಸುತ್ತಿದ್ದರು.

12

ಇವತ್ತು ಬರೋಕ್ಕಾಗಲ್ಲ ಕಣ್ರೀ, ನಂಜೇಗೌಡರ ಕಡೆಯವರು ಬರ್ತಿದ್ದಾರಂತೆ. ಅವರ ಜೊತೆ ಸುತ್ತಾಡಬೇಕು. ನೀವು ಹೇಗಾದರೂ ಮಾಡಿ ಇವತ್ತೊಂದು ದಿನ ಸಾಂತು ಜೊತೆಗೇ ಹೋಗಿಬಿಡಿ. ನಾಡಿದ್ದು ನಾನು ಬರ್ತೀನಿ’ ಬೆಳಗ್ಗೆಯೇ ವಾಗ್ಲೆ ಫೋನ್ ಮಾಡಿ ಹೇಳಿದ್ದನ್ನು ಶಿವನಿಗೆ ಹೇಳಿದೆ. ಅವನು             ಸಾಂತು ಸಹವಾಸ ಬೇಡ, ಜೋಸೆಫ್‌ನ ಕರೆಸ್ತೀನಿ’ ಅಂದು ಅವನಿಗೆ ಫೋನ್ ಮಾಡಿದ. ಜೋಸೆಫ್ ಫೋನ್ ವ್ಯಾಪ್ತಿ ಪ್ರದೇಶದ ಹೊರಗಿತ್ತು.

ಶಿವ ಹಟ ಬಿಡದ ತ್ರಿವಿಕ್ರಮನಂತೆ ನೆಲ್ಯಾಡಿಗೆ ಫೋನ್ ಮಾಡಿ ಗೆಳೆಯ ಹರಿಪ್ರಸಾದನಿಗೆ ಹೇಳಿ, ಅವನು ಮೋಹನನ ಜೀಪು ಗೊತ್ತು ಮಾಡಿ, ಅದನ್ನು ಜೋಸೆಪ್ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ. ನಾವು ಜೋಸೆಪ್‌ಗೋಸ್ಕರ ಕಾಯುತ್ತಾ ಕೂತೆವು. ಈ ಮಧ್ಯೆ ಮಮ್ಮದೆ ಹೊಟೆಲಿಗೆ ಹೋಗಿ ತಿಂಡಿ ತಿಂದು ಬರುವುದೆಂದು ನಿರ್ಧಾರವಾಗಿತ್ತು. ಅವನಿಗೆ ಹಿಂದಿನ ರಾತ್ರಿಯೇ ಏಡಿ ಗಸಿ ಮಾಡಿಡುವುದಕ್ಕೆ ಆದೇಶ ನೀಡಿದ್ದೆವಲ್ಲ?

More

%d bloggers like this: