ಲಂಕೇಶರ ‘ಸಾರ್ಥಕ ಬದುಕು’

lankesh822

ಈ ಅಪರೂಪದ ಫೋಟೋ ಕನ್ನಡಿ ಸಂಸ್ಥೆ ಕಳಿಸಿಕೊಟ್ಟಿದೆ.

ಕೇರಳದ ಬೀದಿಯಲ್ಲಿ ಬಟ್ಟೆ ಲೆಕ್ಕಾಚಾರ..

ಮತ್ಸ್ಯಗಂಧಿಯರ ನಾಡಲ್ಲಿ…

ಫ್ರೇಮ್-೨

img_7377-11

ಜಿ ಎನ್ ಮೋಹನ್

ಕೇರಳದಲ್ಲಿ ಬಂದಿಳಿದವನಿಗೆ ಮೊದಲು ಕಂಡದ್ದೇ ಫುಟ್ಬಾಲ್. ಕಡಲ ತೀರದಲ್ಲೇ ಇರುವ ವಿಮಾನ ನಿಲ್ದಾಣ ದಿಂದ ಇನ್ನೂ ನಾಲ್ಕೆಜ್ಜೆ ದಾಟಿಲ್ಲ ಆಗಲೇ ಫುಟ್ಬಾಲ್ ಕಲರವ. ಶಂಖುಮುಖಂ ಕಡಲ ದಂಡೆಯನ್ನೇ ಫುಟ್ಬಾಲ್ ಕ್ರೀಡಾಂಗಣ ಮಾಡಿಕೊಂಡು ಗುಲ್ಲೆಬ್ಬಿಸುತ್ತಿದ್ದ ಮರಡೋನಾ ಬಂಧುಗಳು ಸಾಕಷ್ಟು ಮಂದಿ ಎದುರಾದರು. ಹೋಟೆಲ್ ನ ಕಿಟಕಿಯಿಂದಾಚೆ ಇಣುಕಿದರೆ ಅಲ್ಲೂ ಫುಟ್ಬಾಲ್. ಅಂಗೈ ಅಗಲ ನೆಲ ಕಂಡರೆ ಸಾಕು ಫುಟ್ಬಾಲ್, ಫುಟ್ಬಾಲ್, ಫುಟ್ಬಾಲ್.

ಕೊಲ್ಕೊತ್ತಾದ ಜನರ ಸಾಗರವನ್ನು ಕಂಡು ಸ್ವತಹ ಫುಟ್ಬಾಲ್ ದೇವರು ಮರಡೋನಾನೆ ಬೆಚ್ಚಿ ಬಿದ್ದು ಕೂತಿದ್ದ. ಜರ್ಮನಿಯಿಂದ ಬಂದಿದ್ದ ನನ್ನ ಗೆಳತಿಯೊಬ್ಬಳು ಬೆಂಗಳೂರಿನ ಮನೆಯಲ್ಲಿ ಕುಳಿತು ಮರಡೋನಾ ಸ್ವಾಗತಿಸಲು ಏರ್ಪೋರ್ಟ್ ನಲ್ಲಿ ಸೇರಿದ್ದ ಜನರ ದಂಡು ಕಂಡು ಬೆಕ್ಕಸ ಬೆರಗಾಗಿದ್ದಳು. ಅರ್ಜೆಂಟೀನ ಹಾಗೂ ಭಾರತ ಎರಡರ ನಡುವಣ ದೂರ ಮಾತ್ರ ಗೊತ್ತಿದ್ದ ಆಕೆಗೆ ಇದು ಬಿಡಿಸಲಾರದ ಒಗಟಾಗಿತ್ತು. ಇಷ್ಟೊಂದು ಜನ, ಓ ಗಾಡ್! ಎಂದಷ್ಟೇ ಉದ್ಘರಿಸಲು ಅವಳಿಗೆ ಸಾಧ್ಯವಾಗಿತ್ತು.

maradona_1_1280x1024

ಅರ್ಜೆಂಟಿನ ಹಾಗೂ ಭಾರತದ ನಡುವಿನ ಬೌಗೋಳಿಕ ದೂರ ಮಾತ್ರ ಗೊತ್ತಿದ್ದ ಜಗತ್ತು ಜರ್ಮನಿಯ ಆ ಹುಡುಗಿಯಂತೆಯೇ ನಿಧಾನವಾಗಿ ಈ ಎರಡೂ ದೇಶಗಳ ನಡುವಿನ ಭಾಂದವ್ಯದ ಪಾಠ ಕಲಿಯುತ್ತಿತ್ತು.

ನನಗೆ ಮರಡೋನಾ ಯಾಕೆ ಇಷ್ಟ ಗೊತ್ತಾ? ಆತ ತನ್ನ ತೋಳಿನ ಮೇಲೆ ಚೆಗೆವಾರನ ಹಚ್ಚೆ ಹಾಕಿಸಿಕೊಂಡಿದ್ದಾನೆ. ಕೋಟಿಗಟ್ಟಲೆ ಹಣಕ್ಕೆ ವಿಮೆ ಮಾಡಿಸಿದ ಅವನ ಕಾಲುಗಳು ಚೆಂಡನ್ನು ಒದೆಯುವಾಗ ಜನ ಹೇಗೆ ಹುಚ್ಚೆದ್ದು ಕುಣಿಯುತ್ತಾರೋ, ಅಷ್ಟೇ ಹುಚ್ಚು ಅವನು ತನ್ನ ತೋಳಿನ ಮೇಲಿರುವ ಚೆಗೆವಾರ ಹಚ್ಚೆ ತೋರಿಸಿದಾಗಲೂ ಹರಿಯುತ್ತದೆ. ಆ ಫುಟ್ಬಾಲ್ ದೇವರು ನಿಜಕ್ಕೂ ದೇವರದ್ದೇ ರಾಜ್ಯವಾಗಿರುವ ಈ ಭಾಗಕ್ಕೂ ಬಂದಿದ್ದರೆ ಇನ್ನಷ್ಟು ಸುಸ್ತಾಗುತ್ತಿದ್ದನೇನೋ.

ಫುಟ್ಬಾಲ್ ನಷ್ಟೇ ಇಲ್ಲಿನ ಮತ್ತೊಂದು ಕ್ರೇಜ್ ಕೆಂಬಾವುಟದ್ದು. ನೀವು ಯಾವ ಜಾಗವನ್ನಾದರೂ ಹೆಸರಿಸಿ- ಅಲ್ಲಿ ಒಂದು ಕೆಂಬಾವುಟ ತೋರಿಸುತ್ತೇನೆ ಎನ್ನುವಷ್ಟು ವಿಶ್ವಾಸ ನನ್ನೊಳಗೆ. ಬಹುಷಃ ಹೀಗೆ ಯಾರ್ಯಾರು ವಿಶ್ವಾಸ ತಾಳಿರುತ್ತಾರೋ ಅವರನ್ನೇಕೆ ಪಂಥದಲ್ಲಿ ಸೋಲಿಸಬೇಕು ಎನ್ನುವುದಕ್ಕಾಗಿಯೇ ಕೆಂಬಾವುಟ ನೆಟ್ತಿದ್ದಾರೆನೋ ಅನಿಸಬೇಕು ಹಾಗಿದೆ.

ಎಲ್ಲೆಲ್ಲೂ ಕೆಂಬಾವುಟ ನೋಡುತ್ತಿದ್ದ ನನಗೆ ಇದಕ್ಕೆ ಎಷ್ಟು ಮೀಟರ್ ಬಟ್ಟೆ ಖರ್ಚಾಗಿರಬಹುದು ಎಂಬ ಲೆಕ್ಕಾಚಾರ ದಿಢೀರನೆ ತಲೆಯೊಳಗೆ ಬಂದಿತು. ಅದಕ್ಕೆ ಕಾರಣವೂ ಇತ್ತು. ಮಂಗಳೂರಿನಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಸಿಂಗಾರ ಮಾಡಲೆಂದು ಬಟ್ಟೆ ಕೊಳ್ಳಲು ಹೋಗಿದ್ದ ನನಗೆ ಅಂಗಡಿ ಮಾಲೀಕ ಈ ಬಾರಿ ಮಂಗಳೂರು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲ ಎಂದ.

ಪಾಪ ಬಟ್ಟೆ ಕೊಳ್ಳುವವರಿಲ್ಲದೆ ಸ್ಟಾಕ್ ಸಾಕಷ್ಟು ಉಳಿದುಬಿಟ್ತಿದೆಯೇನೋ ಎಂದುಕೊಂಡೆ. ನನ್ನ ಮುಖದಲ್ಲಿ ‘ಯಾಕೆ?’ ಎಂಬ ಪ್ರಶ್ನೆ ತಿರುಪತಿಯ ಆ ವೆಂಕಟರಮಣನ ಹಣೆಯ ನಾಮದಷ್ಟೇ ನಿಚ್ಚಳವಾಗಿ ಕಂಡಿರಬೇಕು. ಬಟ್ಟೆ ಏನೋ ಮಾರಾಟ ಆಗುತ್ತಿದೆ ಮಾರಾಯರೇ. ಆದರೆ ಬರೀ ಕೇಸರಿ ಅಂದ. ‘ಅಂದರೆ?’ ಎಂಬ ಪ್ರಶ್ನೆ ಮತ್ತೆ ನನ್ನ ಮುಖದಲ್ಲಿ. ಆ ಅಂಗಡಿಯವನ ಲೆಕ್ಕಾಚಾರ ತೀರಾ ತೀರಾ ಸರಳ.

ಒಂದು ಕಾಲದಲ್ಲಿ ಮಂಗಳೂರಿನಲ್ಲಿ ಕೆಂಪು ಬಟ್ಟೆ ಮೀಟರ್ ಗಟ್ಟಲೆ ಮಾರಾಟವಾಗುತ್ತಿತ್ತು. ಆದರೆ ಈಗ ಅದರ ಜಾಗದಲ್ಲಿ ಕೇಸರಿ ಬಟ್ಟೆ ಮಾರಾಟವಾಗುತ್ತಿದೆ. ಯಾವ ಬಟ್ಟೆ ಆದರೂ ನಮ್ಮ ಕೆಲಸ ತರಿಸಿ ಮಾರುವುದೇ, ಆದರೆ ಮಂಗಳೂರು ಸರಿಯಾಗಿಲ್ಲ ಎಂದು ಅಸ್ವಸ್ಥಗೊಳ್ಲುತ್ತಿದ್ದ. ಕಾರಣ ಇಷ್ಟೇ. ಬಾವುಟ, ಬ್ಯಾನರ್, ಕಾಮ್ರೇಡ್ ಗಳ ಅಂಗಿ ಅಂತ ತಾನು ತಾನು ಕೆಂಪು ಬಟ್ಟೆ ಖರೀದಿಸುತ್ತಿದ್ದವರು ಗಣನೀಯವಾಗಿ ಇಳಿಮುಖವಾಗಿದ್ದರು. ಆ ಜಾಗದಲ್ಲಿ ಈಗ ಕೇಸರಿ ಬಟ್ಟೆ ಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ.

ಇಂತಹದ್ದೇ ಒಂದು ಚಿಲ್ ಅನ್ನುವ ಅನುಭವ ನನಗೆ ‘ಗುಲಾಬಿ ಟಾಕೀಸ್’ ನೋಡಿದಾಗಲೂ ಆಗಿತ್ತು. ಈಗ ಕೇರಳದ ಬೀದಿ ಬೀದಿಯಲ್ಲಿ ಸುತ್ತುತ್ತಿರುವಾಗ ಆ ಮಂಗಳೂರಿನ ಬಟ್ಟೆ ಅಂಗಡಿಯವನಿಗೆ ಒಂದು ಫೋನ್ ಮಾಡಿ ಶುಭ ಸಮಾಚಾರ ಮುಟ್ಟಿಸಬೇಕು ಅನಿಸಿತು.

ನಾನೇನು ಕೇರಳದಲ್ಲಿ ಸಿನೆಮಾ ನೋಡಲು ಬಂದಿದ್ದೇನೋ ಅಥವಾ ಬಟ್ಟೆ ಕೊಳ್ಳಲು ಬಂದಿದ್ದೇನೋ ಎಂದು ನನಗೇ ಕನ್ಫ್ಯೂಸ್ ಆಗಲು ತೊಡಗಿತು…

%d bloggers like this: