ಕಟಕಟೆಯಲ್ಲಿ ಪುಸ್ತಕಗಳು

ಗಾಳಿಬೆಳಕು

mmmmನಟರಾಜ ಹುಳಿಯಾರ್

ಅನಂತಮೂರ್ತಿಯವರ ‘ಅವಸ್ಥೆ’ ಪ್ರಕಟವಾಗಿ ಸಿನಿಮಾ ಆದಾಗ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ಕೋರ್ಟಿಗೆ ಹೋದರು. ಈ ಕಾದಂಬರಿಯನ್ನಾಧರಿಸಿದ ಸಿನಿಮಾದಲ್ಲಿ ತಮ್ಮ ಪತಿಯನ್ನು ವಿಕೃತವಾಗಿ ಚಿತ್ರಿಸಲಾಗಿದೆ ಎಂದು ಮಾನನಷ್ಟ ಮೊಕದ್ದಮೆ ಹೂಡಿದರು. ಜೊತೆಗೆ ಗೋಪಾಲಗೌಡರ ಶಿಷ್ಯರೂ ಗಲಾಟೆ ಎಬ್ಬಿಸಿದರು. ಆದರೆ ಸೋನಕ್ಕ ಅತ್ಯಂತ ಸಭ್ಯ ಮಹಿಳೆ. ಭಾವನಾತ್ಮಕವಾಗಿ ಘಾಸಿಗೊಂಡಿರಬಹುದಾದ ಅವರು ಈ ಮಾನನಷ್ಟದ ದಾವೆಯಲ್ಲಿ ಒತ್ತಾಯಿಸಿದ್ದ ಸಾಂಕೇತಿಕ ಪರಿಹಾರ ಒಂದು ರೂಪಾಯಿ ಮಾತ್ರ.

ಇತ್ತ, ತಮ್ಮ ಕಾದಂಬರಿಯನ್ನು ಕೋರ್ಟಿಗೆ ಎಳೆದದ್ದನ್ನು ಕಂಡ ಲೇಖಕ ಅನಂತಮೂರ್ತಿಯವರಿಗೆ ಸಹಜವಾಗಿಯೇ ಷಾಕ್ ಆಯಿತು. ಜೆ.ಪಿ, ಲೋಹಿಯಾ ಮುಂತಾಗಿ ತಾವು ಕಂಡ ಆದರ್ಶವಾದಿ ರಾಜಕಾರಣಿಗಳ ದ್ವಂದ್ವ, ಸವಾಳುಗಳನ್ನೆಲ್ಲಾ ಸೇರಿಸಿ ತಾವು ಹೆಣೆದ ರಾಜಕೀಯ ನಾಯಕನೊಬ್ಬನ ಪಾತ್ರವನ್ನು ಕೇವಲ ಗೋಪಾಲಗೌಡರ ತದ್ರೂಪಿಯೆಂದು ಕರೆದ ತಕ್ಷಣ ಅನಂತಮೂರ್ತಿಯವರಿಗೆ ನೋವಾಯಿತು. ಇದೊಂದು ಸಂಕೀರ್ಣವಾದ ಪಾತ್ರ, ಇದು ನನ್ನ ಸ್ವಂತ ಸೃಷ್ಟಿ ಎಂದು ಅವರು ಕೋರ್ಟಿಗೆ ಮನದಟ್ಟು ಮಾಡಲು ಇದ್ದದ್ದು ಶುದ್ಧ ಸಾಹಿತ್ಯಿಕ ಸಂಕೇತಗಳೇ ಹೊರತು ಪೀನಲ್ ಕೋಡುಗಳಲ್ಲ. ಅತ್ಯಂತ ಮೂರ್ತವಾದ, ಕರಾರುವಕ್ಕಾಗಿ ವಿವರಿಸಲಾದ ಸೂತ್ರಗಳ ಭಾಷೆಯಲ್ಲಿ ವ್ಯವಹರಿಸುತ್ತಾ ಅಪ್ಪಟ ವಾಸ್ತವದಲ್ಲಿ ಮುಳುಗಿರುವ ಕೋರ್ಟಿಗೆ ಕಾಲ್ಪನಿಕ ಕೃತಿಯೊಂದನ್ನು ಪ್ರವೇಶಿಸಲು ಯಾವ ಬಾಗಿಲು ತಾನೇ ಇದ್ದೀತು? ಇಂಥ ಅಪರಾಧದ ಅರ್ಥ ಇಂಥದ್ದು ಎಂದು ವಿವರಿಸಿ ನ್ಯಾಯ ಕೊಡುವ ಸಂಸ್ಥೆಗೆ ಸಂಕೇತ, ಪ್ರತಿಮೆ, ರೂಪಕ, ಕಲ್ಪನೆ, ಸರ್ರಿಯಲಿಸಂ, ಮ್ಯಾಜಿಕ್ ರಿಯಲಿಸಂ – ಇವನೆಲ್ಲ ಮನವರಿಕೆ ಮಾಡಿಕೊಡಬಲ್ಲ ಭಾಷೆಯನ್ನು ಯಾವ ವಿಮರ್ಶಕ ತಾನೇ ರೂಪಿಸಬಲ್ಲ? fact (ವಾಸ್ತವವಿವರಗಳ) ಜೊತೆಗೆ ಮಾತ್ರ ವ್ಯವಹರಿಸುವ ಸಂಸ್ಥೆಗೆ fiction (ಕಲ್ಪನೆಯ) ನ್ಯಾಯಬದ್ಧತೆಯ ಬಗ್ಗೆ ಹೇಗೆ ಮನವರಿಕೆ ಮಾಡಿಕೊಡುವುದು? ಇವೆಲ್ಲ ಪ್ರಶ್ನೆಗಳೂ ಅನಂತಮೂರ್ತಿಯವರನ್ನು ಕಾಡಿರಬಹುದು.

CB068378

ಆಗ ತಮ್ಮಂಥ ಸೃಜನಶೀಲ ಲೇಖಕನ ಕೃತಿಯೊಂದನ್ನು ಕೋರ್ಟಿಗೆ ಎಳೆಯುವುದು ಅನೈತಿಕ ಎಂದು ಅನಂತಮೂರ್ತಿಯವರಿಗೆ ಅನ್ನಿಸುತ್ತದೆ. ಸಾಹಿತ್ಯದ ಸ್ವಾಯತ್ತ ಜಗತ್ತಿನ ಮೇಲೆ ಅಸಾಹಿತ್ಯಿಕ ದಾಳಿ ಮಾಡುತ್ತವೆ ಎಂಬ ರೀತಿಯ ಮಾತುಗಳು ಅವರ ಬಾಯಿಂದ ಸಲೀಸಾಗಿ ಬರುತ್ತವೆ. ಅದಕ್ಕೂ ಹಿಂದೆ ಅವರ ಐವತ್ತನೇ ಹುಟ್ಟುಹಬ್ಬದ ದಿನವೋ ಅಥವಾ ಆ ಹುಟ್ಟುಹಬ್ಬದ ಅಂಗವಾಗಿಯೋ ನಡೆಸಲಾದ ಸೆಮಿನಾರ್ ದಿನ ನಡೆದ ವಿಚಿತ್ರ ಘಟನೆಯೊಂದನ್ನು ಇಲ್ಲಿ ನೆನಪಿಸುತ್ತಿದ್ದೇನೆ. ಅವತ್ತು ಭಾನುವಾರ, ಅಂದಿನ ‘ಕನ್ನಡ ಪ್ರಭ’ದ ಸಾಪ್ತಾಹಿಕದಲ್ಲಿ ಸುಮತೀಂದ್ರ ನಾಡಿಗರು (ಬೇಕೆಂತಲೇ ಆ ಲೇಖನ ಸರಿಯಾಗಿ ಆವತ್ತೇ ಪ್ರಕಟವಾಗುವಂತೆ ಯೋಜಿಸಿ) ಅನಂತಮೂರ್ತಿಯವರು ಕೃತಿಚೌರ್ಯ ಮಾಡಿದ್ದಾರೆ ಎಂದು ಮ್ಯಾಲಮುಡ್ ನ ‘ಮೌರ್ನರ್’ ಕತೆಯ ಭಾಗಗಳನ್ನೂ ‘ಮೌನಿ’ ಕತೆಯ ಭಾಗವನ್ನೂ ಅಕ್ಕಪಕ್ಕಕ್ಕಿಟ್ಟು ತೋರಿಸಿದ್ದರು. ಆಗ ಕೂಡ ಅನಂತಮೂರ್ತಿಯವರಿಗೆ ಹಾಗೂ ನಮ್ಮಂಥ ಅನೇಕ ಸಾಹಿತ್ಯದ ವಿದ್ಯಾರ್ಥಿಗಳಿಗೆ ನಾಡಿಗರ ನಡೆ ಅನೈತಿಕ ಅನಿಸಿತು. ಅಂದು ಕೆಲವು ಹುಂಬ ಸಾಹಿತಿಗಳು ಇದನ್ನು ಕೋರ್ಟಿಗೆ ಹಾಕಬೇಕೆಂದು ಕೂಗಿದ್ದರು. ಆದರೆ ಅನಂತಮೂರ್ತಿಯವರ ವಿದ್ಯಾರ್ಥಿ ಜಿ.ಕೆ.ಗೋವಿಂದರಾವ್ ಅನಂತಮೂರ್ತಿಯವರನ್ನು ಉಗ್ರವಾಗಿ ಸಮರ್ಥಿಸಿ ಇಡೀ ಸಾಹಿತ್ಯವೇ ಒಬ್ಬರಿಂದ ಒಬ್ಬರು ಪಡೆಯುವ ಕೆಲಸ ಎಂದು ಆಧಾರಸಹಿತ ತೋರಿಸಿ ಈ ವಿವಾದ ತಣ್ಣಗಾಗುವಂತೆ ನೋಡಿಕೊಂಡರು. ಅವತ್ತು ಗೋವಿಂದರಾಯರಿಗೆ ಕೃತಜ್ಞರಾಗಿದ್ದ ಅನಂತಮೂರ್ತಿಯವರು ಇದೇ ಗೋವಿಂದರಾವ್ ಅನಂತಮೂರ್ತಿಯವರ ಡಾಲರ್ ಕಾಲನಿ ಮನೆಯ ವಿರುದ್ಧ ಪ್ರತಿಭಟಿಸಿದಾಗ ಅವರನ್ನು ಬಾಯಿಗೆ ಬಂದಂತೆ ಜರೆದರು. ತಮ್ಮ ಬಗ್ಗೆ ಗೋವಿಂದರಾವ್ ಶುದ್ಧ ನೈತಿಕ ಪ್ರಶ್ನೆಯೊಂದನ್ನು ಎತ್ತಿದ ತಕ್ಷಣ ‘ಬೇಕಿದ್ದರೆ ಕೋರ್ಟಿಗೆ ಹೋಗಿ ನೋಡೋಣ’ ಎಂದರು! ನೈತಿಕ ಪ್ರಶ್ನೆಯೊಂದು ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂಬುದು ಅನಂತಮೂರ್ತಿಯವರಿಗೆ ಗೊತ್ತಿರದಿರಲು ಸಾಧ್ಯವೇ? ಅಂದರೆ ತಮ್ಮ ಪತಿಗೆ ಅನ್ಯಾಯವಾಗಿದೆಯೆಂದು ಭಾವನೆಯ ಮಟ್ಟದಲ್ಲಿ ನೊಂದ ಸೋನಕ್ಕ ಕೋರ್ಟಿಗೆ ಹೋದರೆ ಅದು ಅನೈತಿಕ. ಅದೇ ತಾವು ನೈತಿಕ ಪ್ರಶ್ನೆ ಎದುರಿಸಿದಾಗ ಕೋರ್ಟು ಬೇಕು! More

ಯುವಕವಿಗೆ ಬರೆದ ಪತ್ರಗಳು

ಜಿ ಪಿ ರಾಜರತ್ನಂ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ಈ ಸಂದರ್ಭದಲ್ಲಿ ‘ಅಂಕಣ’ ಬಳಗ ಮಾಲೆಯ ಪುಸ್ತಕಗಳನ್ನೂ ಬಿಡುಗಡೆ ಮಾಡಲಾಯಿತು. ಜಿ ಎಸ್ ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ಓ ಎಲ್ ನಾಗಭೂಷಣಸ್ವಾಮಿ ಅವರು ಅನುವಾದಿಸಿರುವ ರಿಲ್ಕ್ ನ ‘ಯುವಕವಿಗೆ ಬರೆದ ಪತ್ರಗಳು’, ಸಂಧ್ಯಾ ದೇವಿ ಅವರ ‘ಅಗ್ನಿದಿವ್ಯ’ ಲಕ್ಕೂರು ಆನಂದ ಅವರ ‘ಬಟವಾಟೆಯಾಗದ ರಸೀತಿ’ ನಾಗ ಐತಾಳ ರು ಸಂಪಾದಿಸಿರುವ ‘ಗೆಲುವಿನ ಚಿಲುಮೆ ರಾಜರತ್ನಂ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಅಭಿನವ, ಅಂಕಣ, ಸಂಚಯ, ಸಾಹಿತ್ಯಾಂಜಲಿ ಕಾರ್ಯಕ್ರಮಕ್ಕೆ ಸಹಕರಿಸಿದ್ದವು

 

rajaratham_photo_

rajaratham_photo_2

rajaratham_photos_1

ಬೆಂಗಳೂರಿನಲ್ಲಿ ಎಬೆನ್ ಮೊಗ್ಲೆನ್

free-kannada

ಫ್ರೀ ಸಾಫ್ಟ್ ವೇರ್ ಏಕೆ ಬೇಕು?

eben_moglen

ಎಬೆನ್ ಮೊಗ್ಲೆನ್ ಅವರದ್ದು ಸ್ವತಂತ್ರ ಸಾಫ್ಟ್ ವೇರ್ ಚಳುವಳಿಯಲ್ಲಿ ಅತ್ಯಂತ ದೊಡ್ಡ ಹೆಸರು. ಸಂಸ್ಕೃತಿ ಎಂಬುದು ಅದೇಗೆ ಆಸ್ತಿಯಾಯಿತು ಮತ್ತು ಅದರ ಕುರಿತಾಗಿ ನಾವೇನು ಮಾಡಬೇಕೆಂಬ ಅವರ ವಿಶ್ಲೇಷಣೆಯು ವಿಶ್ವದಾದ್ಯಂತ ಪ್ರಮುಖ ಚರ್ಚೆ ಹುಟ್ಟು ಹಾಕಿದೆ.

ಫ್ರೀ ಸಾಫ್ಟ್ ವೇರ್ ಚಳವಳಿಯ ಜನಕ ಎಂದೆ ಕರೆಯಬಹುದಾದ ಎಬೆನ್ ಈ ವಾರ ಬೆಂಗಳೂರಿನಲ್ಲಿರುತ್ತಾರೆ. ಕರ್ನಾಟಕದ ಫ್ರೀ ಸಾಫ್ಟ್ ವೇರ್ ಮೂವ್ಮೆಂಟ್ ‘ಅವಧಿ’ಯ ಜೊತೆ ಸೇರಿ ನಡೆಸುತ್ತಿರುವ ಉಪನ್ಯಾಸಕ್ಕೆ ಪೂರಕವಾಗಿ ಈ ಲೇಖನ –

 

ಫ್ರೀ ಸಾಫ್ಟ್ ವೇರ್ , ಹೊಸ ಮಾಧ್ಯಮ ಮತ್ತು ಪ್ರಾದೇಶಿಕ ಭಾಷೆಗಳು

-ಜಯಕುಮಾರ್ ಎಚ್ ಎಸ್

 

ಫ್ರೀ ಸಾಫ್ಟ್ವೇರ್  ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ ಮೂಲ ತಂತ್ರಾಂಶವನ್ನು (Proprietary software)   ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.

ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ ಮತ್ತು ಡಿಜಿಟಲ್ ಯುಗದಲ್ಲಿ ಅತ್ಯಂತ ಮೂಲ ತಳಪಾಯವೆಂದರೆ ಆಪರೇಟಿಂಗ್ ಸಿಸ್ಟಮ್. ಆದ್ದರಿಂದ, ಯಾವುದೇ ರಾಷ್ಟ್ರವು ಈ ತಳಪಾಯವನ್ನು ನಿಯಂತ್ರಿಸಲು ಸೂಕ್ತ ಶ್ರಮವಹಿಸಬೇಕು. ತನ್ನ ಪಾರದರ್ಶಕತೆಯಿಂದಾಗಿ, ಭಾರತಕ್ಕೆ ಗ್ನೂ/ಲಿನಕ್ಸ್ ಅಂತದೊಂದು ಆಕರ್ಷಕ ತಳಪಾಯವೆನಿಸಿದೆ. ಡಿಜಿಟಲ್ ತಂತ್ರಜ್ಞಾನವು ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ವಸ್ತುವೊಂದನ್ನು (ಚಲನಚಿತ್ರಗಳು, ಲೇಖನಗಳು, ಹಾಡುಗಳು) ಒಂದು ಬಾರಿ ಸೃಷ್ಟಿಸಲು ತಗಲುವ ವೆಚ್ಚದಲ್ಲೇ ವಿಶ್ವದಾದ್ಯಂತ ವಿತರಿಸುವ ಸಂಸ್ಕೃತಿಯನ್ನು ಅದು ಸಾಧ್ಯಗೊಳಿಸಿದೆ. ಡಿಜಿಟಲ್ ತಂತ್ರಜ್ಞಾನದ ಲಾಭವನ್ನು ಎಲ್ಲ ಜನ ಸಮುದಾಯಕ್ಕೆ ತಲುಪಿಸಲು ಗ್ನೂ/ಲಿನಕ್ಸ್ (ಜಿಎನ್ಯು) ಒಂದು ಅತ್ಯುತ್ತಮ ಅವಕಾಶಗಳಲ್ಲೊಂದಾಗಿದೆ.

ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಹೇಳುವುದಾದಲ್ಲಿ, ಡಿಜಿಟಲ್ ಕಾಲಯುಗದಲ್ಲಿ ಭಾರತದ ಭವಿಷ್ಯಕ್ಕೆ ಗ್ನೂ/ಲಿನಕ್ಸ್ ಏಕೆ ಸಂದರ್ಭೋಚಿತವಾಗಿದೆ ಎನ್ನುವುದಕ್ಕೆ ಹತ್ತಲವು ಕಾರಣಗಳಿವೆ. ಬಹುತೇಕ ಎಲ್ಲ ಸಾಫ್ಟ್ ವೇರ್ ಗಳು ಮತ್ತು ಆಪರೇಟಿಂಗ್ ಸಿಸ್ಟಂ ಗಳು ಭಾರತದಲ್ಲಿ ಕೇವಲ ಶೇಕಡಾ 5 ರಷ್ಟು ಜನರಷ್ಟೇ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿವೆ. ಪ್ರಾದೇಶಿಕ ಭಾಷೆಯಲ್ಲಿ ಕಂಪ್ಯೂಟರ್ ಲಭ್ಯವಿರಬೇಕಾದಲ್ಲಿ, ಗ್ನೂ/ಲಿನಕ್ಸ್ ಆಯ್ಕೆ ಮಾತ್ರವೇ ನಮ್ಮ ಮುಂದಿರುವುದು, ಏಕೆಂದರೆ ಮಾಲೀಕತ್ವದ ಆಪರೇಟಿಂಗ್ ಸಿಸ್ಟಮ್ಸ್ ಗಳನ್ನೂ ನಾವು ಮಾರ್ಪಡಿಸಲು ಸಾಧ್ಯವಿಲ್ಲ.

ಗ್ನೂ/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ಸ್ ಸ್ವಾಭಾವಿಕ ಆಯ್ಕೆಯಾಗಿರುವುದೇಕೆಂದರೆ, ಯಾವುದೇ ಭಾಷೆಯೊಂದರೊಡನೆ ಅನುಸಂಧಾನ ನಡೆಸಲು ಅದು ಸ್ವಾತಂತ್ರ್ಯ ನೀಡುತ್ತದೆ. ಭಾರತದಂಥಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ತಲಾದಾಯವು 410 ಡಾಲರ್ ಗಳಷ್ಟಿದೆ. ಆಪರೇಟಿಂಗ್ ಸಿಸ್ಟಮ್ ಮತ್ತು ಬಳಕೆ ಮಾಡಬೇಕಾದ ಸಾಫ್ಟ್ ವೇರ್ ಗಳಿಗೆ ಅಷ್ಟು ವೆಚ್ಚ ತಗುಲಿದರೆ, ಭಾರತದ ಬಹುಸಂಖ್ಯಾತ ಜನರಿಗೆ ಈ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಅಸಾಧ್ಯವಾಗುವುದು.

ತಲಾದಾಯವು ಸುಮಾರು 30 ಸಾವಿರ ಡಾಲರ್ ಗಳಿರುವ ಅಮೇರಿಕಾದಂಥಹ ರಾಷ್ಟ್ರಗಳಲ್ಲಿ ಅದನ್ನು ಪಡೆದುಕೊಳ್ಳಲು ಸಾಧ್ಯವಿರುವುದಷ್ಟೆ. ಆದ್ದರಿಂದ ಭಾರತಕ್ಕೆ ಬೇಕಾಗಿರುವುದು ರೂಪಾಯಿಗಳಲ್ಲಿರುವ ಸಾಫ್ಟ್ವೇರ್ ಹೊರತು ಡಾಲರ್ ಗಳಲ್ಲಿರುವುದಲ್ಲ ಮತ್ತು ಉಚಿತವಾಗಿ ಲಭ್ಯವಿರುವುದರಿಂದ ಗ್ನೂ/ಲಿನಕ್ಸ್ ಆ ಅವಶ್ಯಕತೆಯನ್ನು ಪೂರೈಸುತ್ತದೆ.

ಯೂ ಟ್ಯೂಬ್, ವಿಕಿಪೀಡಿಯಾ, ಗ್ನೋಮ್ ಇತ್ಯಾದಿ ಯಂಥಹ ಬಳಕೆದಾರರೇ ಸೃಷ್ಟಿಕಾರರೂ ಆಗಬಲ್ಲ, ಜನಸಮುದಾಯವೇ ಮಾಲೀಕರಾಗಬಲ್ಲ ಹೊಸ ಮಾಧ್ಯಮ ಲೋಕವನ್ನು ಸ್ವತಂತ್ರ ಮತ್ತು ಮುಕ್ತ ಸಾಫ್ಟ್ ವೇರ್ ತಂತ್ರಜ್ಞಾನವು ಅಭಿವೃದ್ಧಿಪಡಿಸಿರುವುದು ಆಶ್ಚರ್ಯವಾಗೇನೂ ಉಳಿದಿಲ್ಲ. ಇಂಟರ್ನೆಟ್ ಅನ್ನು ಅಭಿವೃದ್ಧಿ ಪಡಿಸಿರುವುದು ಮಾಹಿತಿಯನ್ನು ಹಂಚಿಕೊಳ್ಳುವ ಸಲುವಾಗಿ… ಆದರೆ, ಅದನ್ನು ಹಂಚಿಕೊಳ್ಳಲಾಗದು, ಲೈಸನ್ಸ್ ಪಡೆದುಕೊಳ್ಳಿ ಎಂದು ಕಂಪನಿಗಳು ತಾಕೀತು ಮಾಡುತ್ತಿವೆ.

ಇದರ ಹಿಂದೆಯೇ, ಡಿಜಿಟಲ್ ವಲಯದಲ್ಲಿ ಜ್ಞಾನವನ್ನು ಪ್ರಜಾಸತ್ತೆಗೊಳಿಸಲು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಇಂಥಹ ಪ್ರಶ್ನೆಗಳು ಅಂದು ಮುದ್ರಣ ಮಾಧ್ಯಮದ ಅಸ್ತಿತ್ವದೊಡನೆ ಬಂದ ಪ್ರಶ್ನೆಗಳಷ್ಟೆ ಮಹತ್ವವುಳ್ಳವು. ಇದರಿಂದಾಗಿಯೇ ನಾವು ಐ ಪಾಡ್ ಗಳನ್ನು ಕಾಣುತ್ತಿದ್ದೇವೆ. . . ಇದರಿಂದಾಗಿಯೇ ಎಂ.ಜಿ ರಸ್ತೆಯಲ್ಲಿ ಪೈರೇಟ್ ಮಾಡಿರುವ ವಿಸಿಡಿ ಗಳನ್ನು ಕಾಣುತ್ತಿದ್ದೇವೆ. . . ಇದರಿಂದಾಗಿಯೇ ಸೋನಿ ಕಂಪನಿಯು ವಿತರಿಸುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸಂಗೀತವನ್ನು ಇಂದಿನ ಮಕ್ಕಳು ವಿತರಿಸುವ ಕೆಲಸ ಮಾಡುತ್ತಿದ್ದಾರೆ. .

ಕಾರ್ಪೋರೆಟ್ ವಿಶ್ವವು ಅಕ್ಷಯಪಾತ್ರೆಯನ್ನು ಅದರಲ್ಲೂ ಡಿಜಿಟಲ್ ಅಕ್ಷಯಪಾತ್ರೆಯನ್ನು ಉತ್ಪಾದಿಸುವ ಬಯಕೆ ಹೊಂದಿದೆ ಎನ್ನಲಾಗುತ್ತಿದೆ. . ಆದರೆ ಅದು ನಿಜಕ್ಕೂ ಕಲಿಕೆ ಮತ್ತು ಹಂಚುವ ನೈಜ ಬಯಕೆಯನ್ನು ಹೊಂದಿದೆಯೇ? ಮಾಧ್ಯಮ, ಪತ್ರಿಕೋದ್ಯಮ, ಮತ್ತು ಸ್ಥಳೀಯ ಭಾಷೆಗಳು ಇನ್ನೂ ಏಕಸ್ವಾಮ್ಯ ಕಂಪನಿಗಳ ಸರಪಳಿಯಲ್ಲಿ ಬಂಧಿಯಾಗಿಯೇ ಉಳಿದಿವೆ. ಇದರಿಂದಾಗಿ ಲೈಸೆನ್ಸ್ ಹೆಸರಿನಲ್ಲಿ ಕಲಿಕೆಯನ್ನೇ ನಿಷೇಧಿಸಲಾಗುತ್ತಿದೆ.

ಒಂದು ಪರ್ಯಾಯ ಆಪರೇಟಿಂಗ್ ಸಿಸ್ಟಂ ಆಗಿ ಗ್ನೂ/ಲಿನಕ್ಸಿನ ಪ್ರವೇಶವು ಹಲವು ಬದಲಾವಣೆಗಳನ್ನು ತರುವುದರ ಜೊತೆಗೆ ಪ್ರೋಗ್ರ್ಯಾಮಿಂಗ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ಕ್ಷೇತ್ರದಲ್ಲಿ ಪ್ರಮುಖ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತಿದೆ. ಇಂದು ಪುಸ್ತಕಗಳು ಹಕ್ಕು ಸ್ವಾಮ್ಯಕ್ಕೆ ಒಳಪಡುವುದಕ್ಕೆ ವಿರುದ್ದವಾಗಿ ಹಕ್ಕುಸ್ವಾಮ್ಯರಹಿತ ಗೊಳ್ಳುತ್ತಿವೆ. ಕ್ರಿಯೇಟಿವ್ ಕಾಮನ್ಸ್, ನಾಲೆಡ್ಜ್ ಕಾಮನ್ಸ್ ಎಂಬ ಹೊಸ ದೃಷ್ಟಿಕೋನಗಳು ವಿಶ್ವದೊಳಗೆ ಪಸರಿಸತೊಡಗಿವೆ. .

ಇದು ಭಾರತದ ಸಂದರ್ಭದಲ್ಲಿ ಸ್ವಾವಲಂಬನೆ ಕುರಿತಂತೆ ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ. ಡಿಜಿಟಲ್ ವಿಶ್ವದಲ್ಲಿ, ಡಿಜಿಟಲ್ ಜ್ಞಾನದ ಕೀಲಿಕೈ ಮಾಲೀಕರಾರು. . . ಅದು ಜನಸಮುದಾಯವೇ ಅಥವಾ ಹೊಸ ಈಸ್ಟ್ ಇಂಡಿಯಾ ಕಂಪನಿಯೇ? ನಾವು ಬಳಸುವ ಕಂಪ್ಯೂಟರ್ ಗೆ ನಾವು ಮಾಲೀಕರೆ ಅಥವಾ ಮೈಕ್ರೋಸಾಫ್ಟ್ ಕಂಪನಿಯೇ ಎಂಬ ಪ್ರಶ್ನೆಗಳು ಬಳಕೆದಾರರನ್ನು ಬಡಿದೆಬ್ಬಿಸುತ್ತವೆ.

ಭಾರತದ ಜನತೆಯಲ್ಲಿ ಕೇವಲ ಶೇ. 5 ಮಂದಿ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ನಾವು ಸಾಫ್ಟ್ ವೇರ್ ಗಳನ್ನು ಉತ್ಪಾದಿಸುತ್ತಿದ್ದೇವೇಕೆ?

ಕೃಷಿ ಪತ್ರಿಕೋದ್ಯಮ ಕಾರ್ಯಾಗಾರ

invitation

ಎತ್ತಣ ಕಾಬೂಲು, ಎತ್ತಣ ವಿಜಾಪುರ?

ಗಾಳಿಪಟ

18_21_4-kite_web
ಎರಡೂವರೆ ಸಾವಿರ ಕಿಲೋಮೇಟರ್ ದೂರದಲ್ಲಿರುವ ಅಫಘಾನಿಸ್ತಾನದ ಕಾಬೂಲಿನಲ್ಲೂ ಅದೇ ಸುಮಾರಿಗೆ ಅಮೀರ್ ಮತ್ತು ಹಸನ್ ಎನ್ನುವ ಹುಡುಗರು ಯಥಾವತ್ ಹೀಗೇ ಮಾಡಿ ಎಲ್ಲ ಪತಂಗಳನ್ನು ಕತ್ತರಿಸಿ ಗೆಲ್ಲುತ್ತಾರೆ. ಹಾಗಂತ ಐದೂವರೆ ಸಾವಿರ ಮೈಲಿ ದೂರದ ಅಮೇರಿಕದಲ್ಲಿ ಕೂತು ಖಾಲಿದ್ ಹುಸೇನಿ “Kite Runner” ಎನ್ನುವ ಕಾಲ್ಪನಿಕ ಕತೆಯಲ್ಲಿ ದಾಖಲಿಸಿದ್ದನ್ನು ಇಂಗ್ಲಂಡಿನಲ್ಲಿ ಕೂತು ಓದಿ, ೧೯೭೮ರ ವಿಜಾಪುರದ ನನ್ನ ಬಾಲ್ಯದಲ್ಲಿ ನೆನೆದು ಖುಷಿಸುತ್ತಿದ್ದೇನೆ.
ಎತ್ತಣ ಕಾಬೂಲು, ಎತ್ತಣ ವಿಜಾಪುರ – ಎತ್ತಣಿದೆತ್ತ ಸಂಬಂಧವೈಯ್ಯಾ!

ಸಂಪೂರ್ಣ ಓದಿಗೆ ಭೇಟಿ ಕೊಡಿ: ತೊದಲು ಮಾತು 
+++
dsc000052
ಅರುಣ್ ಜೋಳದಕೂಡ್ಲಿಗಿ ನಮ್ಮ ನಡುವಿನ ತರುಣ(!) ಕವಿ. ಹಂಪಿ ಕನ್ನಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ. ಹಂಪಿಯ ಸ್ಮಾರಕ, ದಿಬ್ಬ ಹಾಗೂ ಹಿಮಾಲಯದಲ್ಲಿ ಆಗಾಗ ಕಳೆದು ಹೋಗುವುದು ಇವನ ಹವ್ಯಾಸ. ಇವನ ಇತ್ತೀಚಿನ ಕವನ ಇಲ್ಲಿದೆ. ಓದಿ ಪ್ರತಿಕ್ರಿಯಿಸಿ. ಕವಿತೆ ಹಿಡಿಸಿದರೆ, ಬ್ಲಾಗ್ ನ್ನು ಹೊಗಳಿ, ಹಿಡಿಸದಿದ್ದರೆ ಯಾವುದೇ ಮುಲಾಜಿಲ್ಲದೆ ಕವಿಯನ್ನು ಟೀಕಿಸಿ…

ಸಂಪೂರ್ಣ ಓದಿಗೆ ಭೇಟಿ ಕೊಡಿ: ನಾವು ನಮ್ಮಲ್ಲಿ

%d bloggers like this: