ಕ್ರೈಂ ಸ್ಟೋರಿ ಥರ ಎಂಜಾಯ್ ಮಾಡ್ತಿದ್ರು

ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?

ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.

ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ.

ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ

120408095421greetings-card-for-true-heroes-011208-bp-01

dundiraj
dundiraj@corpbank.co.in

ಇಂತಹ ಸಂಧರ್ಭಗಳಲ್ಲಿ ಮಾಧ್ಯಮದವರನ್ನು ದೂರವಿಡಬೇಕು.

ಟಿ ವಿ ಯಲ್ಲಿ ಕೆಲವರು ಮುಂಬೈ  ಘಟನೆಯನ್ನು ಕ್ರೈಂ ಸ್ಟೋರಿ ಥರ ಎಂಜಾಯ್ ಮಾಡ್ತಿದ್ರು.

+++

ಸಂದೀಪ್ ಕಾಮತ್
kadalateera.blogspot.com
sandeepkamath82@yahoo.com

ಒಂದು ದೃಷ್ಟಿಯಲ್ಲಿ ನೋಡಿದ್ರೆ ಮಾಧ್ಯಮದವರು ಮಾಡಿದ್ದು ತಪ್ಪು.ಆದ್ರೆ at the same time ಟಿವಿ ಮುಂದೆ ಕೋಟ್ಯಾಂತರ ಜನ ಕಣ್ಣು ಮಿಟುಕಿಸದೆ ಕೂತಿದ್ರೂ ಅನ್ನೋದೂ ನಿಜ. ಜನರಿಗೆ ಮಾರನೇ ದಿನದ ಪೇಪರ್ ನಲ್ಲಿ ಬರೋ ನ್ಯೂಸ್ ನೋಡೋ ಅಷ್ಟು ವ್ಯವಧಾನವೂ ಇಲ್ಲ ಬಿಡಿ. ಈಗ ತೋರಿಸಿದ ನ್ಯೂಸೇ ಇನ್ನು ಒಂದು ಘಂಟೆ ಬಿಟ್ಟು ತೋರಿಸಿದ್ರೆ ’ಬಡ್ಡಿ ಮಕ್ಕಳು ತೋರಿಸಿದ್ದೇ ತೋರಿಸ್ತಾರೆ, ಏನೂ ಹೊಸದು ತೋರಿಸ್ತಾ ಇಲ್ಲ ’ ಅಂತ ಬಯ್ಯೋದೂ ನಾವೇ ಅಲ್ವ??
ಒಂದು ಕಾಲ ಇತ್ತು ಪಕ್ಕದ ಊರಿನಲ್ಲಿ ಭೂಕಂಪ ಆಗಿ ಸತ್ರೂ ರಾತ್ರಿ ೮.೩೦ ಕ್ಕೆ ಡಿಡಿ ನ್ಯೂಸ್ ನೋಡಿನೇ ಅಥವಾ ಮಾರನೇ ದಿನ ಪ್ರಜಾವಾಣಿ ನೋಡಿನೇ ಗೊತ್ತಾಗೋ ಪರಿಸ್ಥಿತಿ ಇತ್ತು.
ಆದ್ರೆ ಈಗ ಇನ್ಸ್ಟಂಟ್ ಕಾಫಿ ಥರ ಎಲ್ಲ ಥಟ್ ಅಂತ ಬರಬೇಕು. ಇಂಟರನೆಟ್ ಪೇಜ್ ಸ್ವಲ್ಪ ತಡವಾಗಿ ಓಪನ್ ಆದ್ರೂ ಬಿ.ಎಸ್.ಎನ್.ಎಲ್ ಗೆ ಹಿಡಿ ಶಾಪ ಹಾಕಿನೇ ಮುಂದೆ ಪಯಣ ನಮ್ಮದು!
ನನಗೆ ಗೊತ್ತಿರೋ ಪ್ರಕಾರ ನ್ಯೂಸ್ ಚ್ಯಾನೆಲ್ ನವರು ಡಿಲೇಡ್ ಲೈವ್ ತೋರಿಸಿದ್ದು .ನಾನು ನೋಡಿದ್ದು ಟೈಮ್ಸ್ ನೌ ಹಾಗಾಗಿ ಅರ್ನಾಬ್ ಪದೇ ಪದೇ ’ನೀವು ನೋಡ್ತಾ ಇರೋದು ಅರ್ಧ ಘಂಟೆ ಹಿಂದೆ ರೆಕಾರ್ಡ್ ಮಾಡಿರೋದು ’ ಅಂತ ಪದೇ ಪದೇ ಹೇಳ್ತಾ ಇರೋದು ನಾನೇ ನೋಡಿದ್ದೆ.
ಆದರೂ ಮಾಧ್ಯಮದವ್ರು ಎಚ್ಚರವಾಗಿರ್ಬೇಕು ನಿಜ.ಆ ಉಗ್ರಗಾಮಿ ಚಡ್ಡಿಯ ಕಲರ್ ನಿಂದ ಹಿಡಿದು ಎಲ್ಲ ಹೇಳಿ ಬಿಡ್ತಾರೆ. ಅದು ನಿಜ ಹೇಳ್ತಾರೋ ಊಹಿಸಿ ಹೇಳ್ತಾರೋ ದೇವರಿಗೇ ಗೊತ್ತು!
ಇದನ್ನು ಉಗ್ರಗಾಮಿಗಳು ನೋಡಿ ಮುಂದಿನ ಸ್ಟ್ರಾಟೆಜಿ ಮಾಡೋದೂ ನಿಜ!

ನೀವೇನೆ ಹೇಳಿ ಲೈವ್ ಅನ್ನೋದು ಜನರ ಹಾಸುಹೊಕ್ಕಾಗಿ ಬಿಟ್ಟಿದೆ.ಕೇವಲ ಏಳು ನಿಮಿಶ ಡೀಲೇ ಮಾಡಿ ತೋರಿಸೋ ಕ್ರಿಕೆಟ್ ಮಾಚೇ ನಮಗೆ ಬೇಡ ಅಂತ ಹೆಳಿದ್ದು ನಾವೇ ಅಲ್ವ??

ಅದಿನ್ನ್ನೇನು ಲೈವ್ ನೋಡ್ತೀವೊ ನಾವು!!!(ಅಮೆರಿಕಾದಲ್ಲಿ ಮಿಲನ ಮಹೋತ್ಸವವನ್ನೆ ಲೈವ್ ತೋರಿಸ್ತಾರಂತೆ ಕಾಸ್ ಕೊಟ್ರೆ! )

%d bloggers like this: