ಮೂಲಭೂತವಾದಿಗಳಿಗೂ ಸಂಬಂಧಿಸಿದೆ…

ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?

ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.

ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ.

ಗುರು ಅವರು ನೀಡಿದ ಮೊದಲ ಪ್ರತಿಕ್ರಿಯೆ ಇಲ್ಲಿದೆ

ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ

120408035836cst_before

parasurama kalal

parasuram_kalal@yahoo.in | 

ಲೀಲಾ ಸಂಪಿಗೆ ಅವರು ಎತ್ತಿರುವ ಪ್ರಶ್ನೆ ಬಹಳ ಮುಖ್ಯ. ಇದು ಭಯೋತ್ಪಾದನೆಗೆ ಮಾತ್ರ ಸಂಬಂಧಿಸಿದ್ದಲ್ಲ. ಮೂಲಭೂತವಾದಿಗಳಿಗೂ ಸಂಬಂಧಿಸಿದ್ದಾಗಿದೆ ಎನ್ನುವುದು ನನ್ನ ಸೇರ್ಪಡೆ.

ಮೂಲಭೂತವಾದಿ ಸಂಘಟನೆಯ ಯಾವುದೇ ತಲೆತಿರುಕ ಏನಾದರೂ ಮಾತನಾಡಿದರೂ ಅದು ಆಲ್ ಎಡಿಸನ್ ಸುದ್ದಿಯಾಗುತ್ತದೆ. ಸೆನ್ಸೆಷನಲ್ ಎಂಬ ಹೆಸರಲ್ಲಿ ಆ ಸುದ್ದಿಗೆ ಪ್ರಾಮುಖ್ಯತೆ ಸಿಗುತ್ತದೆ.

ಸುದ್ದಿ ಮಾಧ್ಯಮದದಲ್ಲಿ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ನನ್ನ ಅನುಭವವೆಂದರೆ ಕೆಲವೇ ಕೆಲವು ಬೆರಳೆಣಿಕೆಯ ಜನರು ನಡೆಸುವ ಇಂತಹ ಪ್ರತಿಭಟನೆಗಳಿಗೆ ಮಾಧ್ಯಮಗಳೇ ದೊಡ್ಡ ಪ್ರಚಾರ ನೀಡುತ್ತವೆ. ಮಾಧ್ಯಮದವರು ಬರುವವರಿಗೆ ಅವರು ಪ್ರತಿಭಟನೆಯನ್ನೇ ನಡೆಸುವುದಿಲ್ಲ.. ಮಾಧ್ಯಮದವರು ಬಂದ ಮೇಲೆಯೇ ಅವರು ಪ್ರತಿಭಟನೆ ನಡೆಸಿ ಬಂಧಿತರಾಗುತ್ತಾರೆ. ಹಂಪಿಯಲ್ಲಿ ಕೋಮುವಾದಿಗಳು ಇಂತಹ ಕೆಲಸ ನಡೆಸಿಯೇ ರಾಜ್ಯಾದ್ಯಾಂತ ಸುದ್ದಿಗೆ ಪಾತ್ರರಾಗಿದ್ದಾರೆ. ಹಿರೋಗಳಾಗಿ ಮೆರೆದಿದ್ದಾರೆ. ಮಾಧ್ಯಮದವರು ಯಾರು ಅಲ್ಲಿಗೆ ತೆರಳದೇ ಅದನ್ನು ಉಪೇಕ್ಷೆ ಮಾಡಿದರು ಅಂತಾ ಇಟ್ಟುಕೊಳ್ಳಿ. ಆಗ ಅವರ ಧ್ವನಿಯೇ ಉಡುಗಿ ಹೋಗುತ್ತದೆ. ಈ ಬಗೆಯಲ್ಲೂ ಚರ್ಚೆ ನಡೆಯಬೇಕು ಎನ್ನುತ್ತೇನೆ ನಾನು.

– ಪರುಶುರಾಮ ಕಲಾಲ್

+++

ನೀಲಾಂಜಲ

http://neelanjala.wordpress.com | neelanjala@gmail.com

ಏನು ಸರೀನೋ ತಪ್ಪೋ ಗೊತ್ತಿಲ್ಲ, ಆದ್ರೆ ಕಳೆದ ಮೂರು ನಾಲ್ಕು ದಿನದಿಂದ ನಾನು ಸರಿಯಾಗಿ ಪೇಪರ್ ಓದುತ್ತಾ ಇಲ್ಲ. ಸಂಬಂಧಪಟ್ಟ ಸುದ್ದಿ ನೋಡುತ್ತಿಲ್ಲ. ಟೆರರಿಸ್ಟ್ ಒಂದು ಜೀಪ್ ನಲ್ಲಿ ತಪ್ಪಿಸಿ ಕೊಂಡಿದ್ದಾರಂತೆ, ತಾಜ್ ನಲ್ಲಿ ಇದ್ದವರು hostage ಡ್ರೆಸ್ ಹಾಕ್ಕೊಂಡು ಹೊರಗೆ ಬಂದಿದ್ದಾರಂತೆ, ನಿನ್ನೆ ಅಷ್ಟೇ live RDX ಬಾಂಬ್ CSTnalli ಸಿಕ್ಕಿತಂತೆ……ಸುದ್ದಿ ಕೇಳಿ ಮನೆ ಹೊರಗೆ ಕಾಲಿಡಲೋ ಬೇಡ ಅನ್ನಿಸ್ತಿದೆ. ನಿಜವಾಗಲೂ terror ಅಂದ್ರೆ ಏನು ಅಂತ ಸ್ವಲ್ಪ ಅನುಭವ ಆಗಿದೆ. ಕಣ್ಣಿಂದ ನೋಡಿದವರು, ಅದನ್ನು ಅನುಭವಿಸಿದವರು ಈ ಟೆರರ್ ಅನ್ನು ಲೈಫ್ ಟೈಮ್ ನಲ್ಲಿ ಮರೆಯೋಲ್ಲ. ಹಾಗಂತ ಹೆದರಿಕೊಂಡು ಮನೇಲೆ ಇರೋಕೆ ಆಗುತ್ತಾ. ಲಕ್ ಚೆನ್ನಾಗಿರೋ ತನಕ ಬದುಕೋದು ಮತ್ತು ಲೈಫ್ ಎದುರಿಸೋದು.

ನೀಲಾಂಜಲ

+++

gnanadev
http://gnanadev.wordpress.com | devbolde@yahoo.co.in | 

ಮಾಧ್ಯಮದವರು ಈ ಹೇಯ ಘಟನೆಯ ವೇಳೆಗೆ ರಾಜಕಾರಣಿಗಳನ್ನು ಹೇಗೆ ಬಹಿಷ್ಕರಿಸಬೇಕು ಎ೦ದು ಹೇಳಿದ್ದರೋ ಹಾಗೆಯೇ ಮಾಧ್ಯಮದವರಿಗೂ ಬಹಿಷ್ಕಾರ ಅಗತ್ಯ. ಸ್ವಲ್ಪ ಅ೦ಕೆ, ಹಿಡಿತ ಅವಶ್ಯ. ಈ ಘಟನೆಯನ್ನು ಯಾವುದೋ ಒ೦ದು ಫಿಲ್ಮ್ ಚಿತ್ರೀಕರಣದ೦ತೆ ಮಾಡಿದ್ದನ್ನು ನಾವೆಲ್ಲರೂ ಖ೦ಡಿಸಬೇಕು. ಒ೦ದು ಮಿತಿಯಲ್ಲಿ ಇರಬೇಕು. ಎಲ್ಲರೂ ವಿವೇಕದಿ೦ದ ವರ್ತಿಸುವ ಅಗತ್ಯವಿದೆ

ಚಿತ್ರ ಕೃಪೆ: ಇಂಡಿಯಾ ಟುಡೆ

ರಾಜರತ್ನಂ ನೆನಪಿನಲ್ಲಿ…

rajarathnam-birthday

rajarathnam-birthday-back

ಲೀಲಾ ಅವರು ಹೇಳಿದ್ದು ಕರೆಕ್ಟ್.

ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?

ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.

ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ.

ಗುರು ಅವರು ನೀಡಿದ ಮೊದಲ ಪ್ರತಿಕ್ರಿಯೆ ಇಲ್ಲಿದೆ

ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ

+++

cimg1958ಚಿತ್ರ: ಗೌತಮ್
                                                                           (ಹೆಜ್ಜೆ ಬ್ಲಾಗ್ ನಿಂದ)
ಗುರು

malnadhudga@gmail.com |

ಲೀಲಾ ಅವರು ಹೇಳಿದ್ದು ಕರೆಕ್ಟ್. ಯಾಕೆ ಅಂದ್ರೆ ನಮ್ಮ ಹಾಗೆ ಉಗ್ರರು ಟಿ ವಿ ನೋಡ್ತಾ ಇರ್ತಾರೆ. ಅವರಿಗೂ ಎಲ್ಲಾ ವಿಷಯ ತಿಳಿದು ಬಿಡುತ್ತೆ. ಅದಕ್ಕೇ ಅದನ್ನು ಲೈವ್ ತೋರಿಸೋ ಬದಲು, ಕಾರ್ಯಾಚರಣೆ ಪೂರ ಆದಮೇಲೆ ತೋರಿಸಿದರೆ ಒಳ್ಳೆಯದು ಅಲ್ವ?

ಅಪಾರ ಮತ್ತೊಂದು ಕಥೆ: ಸಾರಿ ಪದ್ಮಿನಿ

 

ಏನೇ ಆಗಲಿ, ಇವತ್ತು ಪದ್ಮಿನಿಯನ್ನು ಮಾತನಾಡಿಸಿ ಎಲ್ಲ ಹೇಳಿಬಿಡಬೇಕು ಎಂದು ಕಳೆದ ರಾತ್ರಿಯೆಲ್ಲಾ ಕುಳಿತು ತಾನು apara
ಮಾಡಿದ ಉಕ್ಕಿನಂಥ ನಿರ್ಧಾರ ಐದು ನಿಮಿಷ ಹಿಂದಿನವರೆಗೂ ಅಷ್ಟೇ ಗಟ್ಟಿಯಾಗಿದ್ದದ್ದು , ಈಗ ಕೃಷ್ಣ ಅಪಾರ್ಟ್‌ಮೆಂಟಿನ ಮೂರನೇ ಮಹಡಿಯ ಕೊನೇ ಮೆಟ್ಟಿಲುಗಳನ್ನೇರುತ್ತಿರುವಾಗ ಏಕೋ ಐಸ್‌ಕ್ರೀಮಿನಂತೆ ಕರಗುತ್ತಿರುವ ಸುಳಿವು ಹತ್ತಿ ದತ್ತಾತ್ತ್ರೇಯ ಕಂಗಾಲಾಗಿ ಆಸರೆಗೆ ಪಕ್ಕದ ಗೋಡೆಯನ್ನು ಹಿಡಿದುಕೊಂಡ. ವರ್ಚುಯಲ್ ಸಿಸ್ಟಮ್ಸ್ ಕಂಪ್ಯೂಟರ್ ಸೆಂಟರಿನ ಬಾಗಿಲಿನಲ್ಲಿದ್ದ ಒಂದೇ ಜತೆ ಪರಿಚಿತ ಚಪ್ಪಲಿಗಳು ಒಳಗೆ ಪದ್ಮಿನಿ ಇದ್ದಾಳೆಂದೂ ಮತ್ತು ಪದ್ಮಿನಿ ಒಬ್ಬಳೇ ಇದ್ದಾಳೆಂದೂ ಸೂಚಿಸಿ ಅವನ ಎದೆಬಡಿತವನ್ನು ಮತ್ತಷ್ಟು ಹೆಚ್ಚಿಸಿದವು. ಕಾರಿಡಾರಿನಲ್ಲಿ ನಿಂತ ದತ್ತಾತ್ರೇಯ ಕೈಯಿಂದ ತಲೆಗೂದಲನ್ನು ಸರಿಮಾಡಿಕೊಂಡು ಬಾಗಿಲ ಕಡೆಗೆ ನಡೆದ. ಹೆಜ್ಜೆಗಳು ಭಾರ ಎನಿಸಿದವು. ಸದ್ದು ಮಾಡದಂತೆ ಬಾಗಿಲ ಬಳಿಗೆ ಹೋದವನಿಗೆ ಕಂಪ್ಯೂಟರಿನ ಮುಂದೆ ಕುಳಿತಿದ್ದ ಪದ್ಮಿನಿಯ ಬೆನ್ನಿನ ಭಾಗ ಮಾತ್ರ ಕಾಣುತ್ತಿತ್ತು. ನೀಲಿಬಣ್ಣದ ಕಮೀಜಿನಲ್ಲಿ ಗೋಡೆಯ ಕಡೆ ಮುಖ ಮಾಡಿ ತನ್ನ ಕೆಲಸದಲ್ಲಿ ಮಗ್ನಳಾಗಿದ್ದ ಪದ್ಮಿನಿ ದತ್ತಾತ್ರೇಯನಿಗೆ ಹಿಂದೆಂದಿಗಿಂತಲೂ ಕಠಿಣವಾಗಿ ಕಂಡು ಅವನು ಸದ್ದಿಲ್ಲದೆ ವಾಪಾಸು ಬಂದು ಕೆಳಗೆ ರಸ್ತೆಯಲ್ಲಿ ಹರಿಯುತ್ತಿದ್ದ ಜನಸಂದಣಿಯನ್ನು ಗಮನಿಸುತ್ತಾ, ಇವರಿಗೆಲ್ಲಾ ತನ್ನ ಸಮಸ್ಯೆಯ ಪರಿವೆಯೇ ಇಲ್ಲವಲ್ಲ ಎಂದು ಗಲಿಬಿಲಿಗೊಂಡ. ಪದ್ಮಿನಿಯನ್ನು ಮಾತಾಡಿಸಲು ನನಗೇಕೆ ಇಂಥ ಭಯವಾಗಬೇಕು ಎಂಬ ಯಕ್ಷಪ್ರಶ್ನೆಯನ್ನು ಪ್ರಸ್ತುತ ವಾರದಲ್ಲಿ ನೂರಾ ಎಂಟನೇ ಸಲ ಹಾಕಿಕೊಂಡು ಖಿನ್ನನಾದ.

ಇದೆಲ್ಲ ಶುರುವಾಗಿದ್ದು ಸರಿಸುಮಾರು ಎರಡು ತಿಂಗಳಿನ ಹಿಂದೆ. ಕಂಪ್ಯೂಟರಿನ ಯಾವುದೋ ಡಿಪ್ಲೊಮ ಮುಗಿಸಿಕೊಂಡಿದ್ದ ಕುಮಾರ್ ತೀರ ಚಿಕ್ಕದಾದ ಆ ಸಣ್ಣ ರೂಮಿನಲ್ಲಿ ಎರಡು ಕಪ್ಪು ಬಿಳುಪು ಕಂಪ್ಯೂಟರುಗಳನ್ನಿಟ್ಟುಕೊಂಡು ವರ್ಚುಯಲ್ ಸಿಸ್ಟಮ್ಸ್ ಎಂದು ದೊಡ್ಡ ಬೋರ್ಡು ಬರೆಸಿ, ಅದಕ್ಕೆ ಎರಡು ಮಾರು ಸೇವಂತಿಗೆ ಹೂವಿನ ಹಾರ ಹಾಕಿ, ಊದಿನಕಡ್ಡಿ ಬೆಳಗಿ, ಓಪನಿಂಗ್ ಶಾಸ್ತ್ರ ಮುಗಿಸಿದ ಮಾರನೇ ದಿನವೇ ಆಗಷ್ಟೇ ಡಿಗ್ರಿ ಮುಗಿಸಿದ್ದ ದತ್ತಾತ್ರೇಯ ಫೀಜು ಕಡಿಮೆ ಎಂಬ ಒಂದೇ ಕಾರಣಕ್ಕೆ ಸೇರಿಕೊಂಡ.

w4c2ಕಲೆ: ಸೃಜನ್
ಸಣ್ಣಕೋಣೆಯೆಂದೋ, ಕಪ್ಪು ಬಿಳುಪು ಮಾನಿಟರುಗಳ ದೆಸೆಯಿಂದಲೊ ಅಥವಾ ನೋಡಲು ಕುಮಾರ ಸ್ವಲ್ಪ ಪೆಕರನಂತೆ ಕಾಣುತ್ತಿದ್ದುದರಿಂದಲೊ ಅಂತೂ ದತ್ತಾತ್ರೇಯನ ನಂತರ ಬಹಳ ಜನವೇನೂ ಆ ಕಂಪ್ಯೂಟರ್ ಸೆಂಟರಿಗೆ ಸೇರಿಕೊಳ್ಳಲಿಲ್ಲ. ಹೀಗಾಗಿ ಸೇರಿದ ಕೆಲವರಿಗೇ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಅಭ್ಯಾಸ ಮಾಡಲು ಅನುವಾಗುತ್ತಿತ್ತು. ದತ್ತಾತ್ರೇಯ ಹೋಗುತ್ತಿದ್ದ ಸಂಜೆ ಆರೂವರೆಯಿಂದ ಏಳೂವರೆವರೆಗಿನ ಅವಧಿಯಲ್ಲಿ ಮತ್ತಾರು ಬರುತ್ತಿಲ್ಲವಾದ್ದರಿಂದ ಅವನ ಪಕ್ಕದಲ್ಲಿದ್ದ ಎರಡನೇ ಕಂಪ್ಯೂಟರ್ ಮುಸುಕು ಹೊದ್ದು ಕುಳಿತಿರುತ್ತಿತ್ತು. ಆ ಸಮಯ ಕುಮಾರನ ಚಾ, ಸಿಗರೇಟಿನ ಸಮಯವಾದ್ದರಿಂದ ಹತ್ತು ನಿಮಿಷ ದತ್ತಾತ್ರೇಯನಿಗೆ ಪಾಠ ಮಾಡಿದಂತೆ ಮಾಡಿ, ಇದನ್ನು ಪ್ರಾಕ್ಟಿಸ್ ಮಾಡ್ತಿರು, ಈಗ ಬಂದೆ ಎಂದು ಮೂರನೇ ಕ್ರಾಸಿನಲ್ಲಿದ್ದ ಸಲೀಮನ ಟೀ ಶಾಪಿಗೆ ಹೋಗುತ್ತಿದ್ದವನು ವಾಪಾಸು ಬರುತ್ತಿದ್ದುದು ಏಳೂವರೆಗೆ. ಹೀಗಾಗಿ ಪ್ರತಿದಿನವೂ ತೀರಾ ಸಣ್ಣದಾದ ಆ ರೂಮಿನಲ್ಲಿ ದತ್ತಾತ್ರೇಯ ಒಬ್ಬನೇ ಒಂದು ಗಂಟೆಯ ಅವಧಿಯನ್ನು ಕಂಪ್ಯೂಟರಿನೊಡನೆ ಕಳೆಯಬೇಕಾಗುತ್ತಿತ್ತು. ಆಗೆಲ್ಲಾ ಅವನು ಆ ಏಕಾಂತವನ್ನು ಅನುಭವಿಸುವನಂತೆ ಕಾಲುಗಳನ್ನು ಉದ್ದಕ್ಕೆ ಗೋಡೆಗೆ ತಗಲುವಂತೆ ಚಾಚಿ, ಫ್ಯಾನಿಲ್ಲದ ಕೋಣೆಯ ಸೆಖೆಯನ್ನು ನಿವಾರಿಸಲೆಂದು ಷರಟಿನ ಮೂರು ಗುಂಡಿಗಳನ್ನು ಬಿಚ್ಚಿ ಸಣ್ಣ ದನಿಯಲ್ಲಿ `ಚಾಂದ್ ನೇ ಕುಚ್ ಕಹಾ ರಾತ್ ನೇ ಕುಚ್ ಸುನಾ’ ಅಂತ ಯಾವುದೊ ಹಾಡನ್ನು ಗುನುಗಿಕೊಳ್ಳುತ್ತ ಕಂಪ್ಯೂಟರಿನೊಡನೆ ಗುದ್ದಾಡುತ್ತಿದ್ದವನು ಅಪರೂಪಕ್ಕೊಮ್ಮೆ ಯಾರಾದರೂ ಕುಮಾರನನ್ನು ಕೇಳಿಕೊಂಡು ತಕ್ಷಣ ಒಳಗೆ ಬಂದರೆ ಸರಕ್ಕನೆ ಖುರ್ಚಿಯಿಂದೆದ್ದು ಷರಟಿನ ಗುಂಡಿಗಳನ್ನು ಹಾಕಿಕೊಳ್ಳುತ್ತ `ಏಳೂವರೆಗೆ ಬಂದರೆ ಸಿಗ್ತಾರೆ’ ಎಂದು ತಡವರಿಸುತ್ತಿದ್ದ.

ಒಂದು ತಿಂಗಳಿನವರೆಗೂ ಹೀಗೇ ದಿನ ಕಳೆಯುತ್ತಿದ್ದ ದತ್ತಾತ್ರೇಯನಿಗೆ ಅವತ್ತು ಕಂಪ್ಯೂಟರಿಗೆ ಬಂದಾಗ ಬಿಳಿಯ ಬಣ್ಣದ ವಸ್ತ್ರಗಳಲ್ಲಿ ಹಂಸದಂತೆ ಕಾಣುತ್ತಿದ್ದ ಹುಡುಗಿಯೊಬ್ಬಳು ಕುಮಾರನ ಹತ್ತಿರ `ಹೌ ಟು ಕ್ರಿಯೇಟ್ ಎ ಡೈರೆಕ್ಟರಿ’ ಎಂಬುದನ್ನು ಹೇಳಿಸಿಕೊಳ್ಳುತ್ತಿದ್ದುದನ್ನು ಕಂಡು ತನ್ನ ಒಂಟಿತನದ ಸಮಸ್ಯೆ ಹೀಗೆ ಅನಿರೀಕ್ಷಿತ ರೋಮಾಂಚಕಾರಿ ರೀತಿಯಲ್ಲಿ ಪರಿಹಾರವಾದದ್ದು ಪರಮಾನಂದವುಂಟುಮಾಡಿತು.ಅದರ ನಂತರ ದತ್ತಾತ್ರೇಯನಿಗೆ ಕಂಪ್ಯೂಟರಿಗೆ ಬರಲು ಎಂತದೋ ಹೊಸ ಹುರುಪು ತುಂಬಿಕೊಂಡಿತು. ಮಾಮೂಲಿಯಂತೆ ಸೂಚನೆಗಳನ್ನು ಕೊಟ್ಟು ಕುಮಾರ್ ಸಲೀಮ್ ಟೀ ಶಾಪಿಗೆ ಹೋಗಿಬಿಡುತ್ತಿದ್ದ. ಇವನು ಇನ್‌ಷರ್ಟ್ ಮಾಡಿಕೊಂಡು ನೇರವಾಗಿ ಕೂತುಕೊಂಡು ಸೀರಿಯಸ್ಸಾಗಿ ಅಭ್ಯಾಸ ಮಾಡಲಾರಂಬಿಸಿದ. ಪಕ್ಕದಲ್ಲಿ ಕುಳಿತ ಪದ್ಮಿನಿಯ ಮೈಯಿಂದ ಬರುತ್ತಿದ್ದ ಎಂಥದೋ ಸುವಾಸನೆಯನ್ನು ಹೀರಿಕೊಳ್ಳುತ್ತಾ,ಅವಳ ಬೆಳ್ಳನೆಯ ಪಾದಗಳನ್ನು ಗಮನಿಸುತ್ತಾ ಸ್ವಲ್ಪ ಹೊತ್ತು ಮೈಮರೆಯುತ್ತಿದ್ದ ದತ್ತಾತ್ರೇಯ ಮರುಕ್ಷಣವೇ ಅವಳ ಇರುವಿಕೆಯಿಂದ ತನಗೇನೂ ಆಗಿಲ್ಲವೆನ್ನುವುದನ್ನ ಯಾರಿಗೋ ತೋರಿಸುವವನಂತೆ ಒಮ್ಮೆ ಪುಸ್ತಕದೆಡೆಗೂ ಮತ್ತೊಮ್ಮೆ ಕಂಪ್ಯೂಟರ್ ತೆರೆಯೆಡೆಗೂ ನೋಡುತ್ತಾ ಬ್ಯುಸಿಯಾಗಿ ಅಭ್ಯಾಸ ಮಾಡುತ್ತಿದ್ದ. ಮತ್ತೆರಡು ನಿಮಿಷಗಳಲ್ಲಿ ಟೈಪ್ ಮಾಡುತ್ತಿದ್ದ ಅವಳ ಬೆರಳುಗಳೋ, ಮುಡಿದ ಜಾಜಿ ಹೂವಿನ ವಾಸನೆಯೋ ಅಥವಾ ಕುಳಿತ ಭಂಗಿಯೋ ಅವನ ಗಮನವನ್ನು ಸೆಳೆಯುತ್ತಿದ್ದವು.
More

ಚರ್ಚೆಗೆ ಬಾಗಿಲು ತೆರೆದಿದೆ

 

ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?

ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.

ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ. ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ-

mumbai

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ತನಗೊಂದು ಲಕ್ಷ್ಮಣರೇಖೆ ತಾನೇ ಬರೆದುಕೊಳ್ಳುವ ತುರ್ತು ಅಗತ್ಯವನ್ನು ಮುಂಬೈ ಮೇಲಿನ ಉಗ್ರರ ದಾಳಿ ತೆರೆದಿರಿಸಿದೆ. ಡೆಮಾಕ್ರೆಸಿಯ ನಾಲ್ಕನೇ ಅಂಗವಾಗಿ ತಾನೇ ಡೆಮಾಕ್ರೆಸಿಯ ಗುತ್ತಿಗೆ ಹಿಡಿದ ತೆರದಲ್ಲಿ ಮಾಧ್ಯಮ ಭ್ರಮಿಸಿ ಕಾರ್ಯ ನಿರ್ವಹಿಸುತ್ತಿರುವಂತಿದೆ.

ಮುಂಬೈ ಮೇಲಿನ ಉಗ್ರರ ದಾಳಿ ಜಗತ್ತಿನ ಗಮನ ಸೆಳೆಯುವುದು ಮೂಲ ಉದ್ದೇಶವಾಗಿತ್ತು. ಭಯೋತ್ಪಾದನೆಯ ಭೀತಿಯನ್ನು ಸೃಷ್ಟಿಸುವುದರ ಮೂಲಕ ಭಾರತದಲ್ಲಿ ರಕ್ಷಣೆಯಿಲ್ಲದ ಅತಂತ್ರ ಸ್ಥಿತಿಯನ್ನು ಬಿಂಬಿಸಬೇಕಾಗಿತ್ತು. ಆ ಕೆಲಸವನ್ನು ಪರಿಣಾಮಕಾರಿಯಾಗಿ ತನಗರಿವಿಲ್ಲದೆಯೇ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ಮಾಡಿದವೇ? ಎಂಬ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾಗಿದೆ.

ಪ್ರಜಾಪ್ರಭುತ್ವದ ಗುತ್ತಿಗೆದಾರರಂತೆ ವರ್ತಿಸುತ್ತಿರುವ ಮಾಧ್ಯಮಗಳ ಸರ್ವ ಶ್ರೇಷ್ಠತೆಯ ಬಗೆಗೂ ಚರ್ಚೆಗೆ ಇದು ಸಕಾಲ. ಮಾಧ್ಯಮಗಳಲ್ಲಿನ ಪರಸ್ಪರ ಪೈಪೋಟಿ ಎಂತಹ ಅತಿರೇಕಕ್ಕೆ ತಲುಪಬಹುದು ಎಂಬುದಕ್ಕೆ ಮುಂಬೈ ಮೇಲಿನ ದಾಳಿಯ ಸಂದರ್ಭದ ಸತತ ನಾಲ್ಕು ದಿನಗಳ ನಿರಂತರ ‘ಕಮೆಂಟರಿ’ ನೈಜ ಉದಾಹರಣೆಯಾಗಿದೆ.

ಭಾರತದ ಆಡಳಿತಗಾರರು ಬಫೂನ್ ಗಳು, ಪೋಲೀಸ್-ಸರಕಾರ ನಿಷ್ಪ್ರಯೋಜಕ ಎಂಬ ಧಾಟಿಯಲ್ಲಿ ನಡೆದ ಚರ್ಚೆ, ಉಗ್ರರನ್ನು ಮಟ್ಟ ಹಾಕಿದ ನಂತರ ‘ಯುದ್ಧಗೆಲ್ಲಿಸಿಕೊಟ್ಟ’ ವೀರರಂತೆ ಬೀಗಿದ ರೀತಿ ಅಸಹ್ಯ ಹುಟ್ಟಿಸುವ ತೆರದಲ್ಲಿತ್ತು. ಪೈಪೋಟಿಯ ವರದಿಯ ಭಾವೋದ್ವೇಗದಲ್ಲಿದ್ದ ಮಾಧ್ಯಮಗಳು ‘ಗೌಪ್ಯತೆಯ’ ಜವಾಬ್ದಾರಿಯನ್ನು ಗಾಳಿಗೆ ತೂರಿದ್ದು ಗಮನಾರ್ಹವಾಗಿತ್ತು.

‘ಎಕ್ಸ್ಕ್ಲೂಸಿವ್’ ಭರಾಟೆಯಲ್ಲಿ ಸ್ಥಿಮಿತತೆ ಕಳೆದುಕೊಂಡ ಅದೆಷ್ಟು ವರದಿಗಳು ಕಾರ್ಯಾಚರಣೆಗೆ ಅಡ್ಡಿಯಾದವು. ಸೂಕ್ತ ಜ್ಙಾನವಿಲ್ಲದ, ತರಬೇತಿ ಇಲ್ಲದ ವರದಿಗಾರಿಕೆಯ ಅಪಾಯವೂ ಬಯಲಾಯಿತು. ಶ್ರೀಮಂತರ ಆವಾಸ ಸ್ಥಾನಗಳಾದ ಮುಂಬೈನ ತಾಜ್, ಓಬಿರಾಯ್, ಟ್ರಿಡೆಂಟ್ ನಂತಹ ಹೋಟೆಲ್ ಗಳ ಮೇಲಿನ ದಾಳಿ ಉಗ್ರರು ಪ್ರಪಂಚದ ಗಮನಸೆಳೆಯಲೆಂದೇ ನಡೆಸಿದ ಕೃತ್ಯ.

ಈ ಉದ್ದೇಶವನ್ನು ಈಡೇರಿಸಲು ಮಾಧ್ಯಮಗಳು ಸಹಕರಿಸಿದವು ಎಂಬ ಅಭಿಪ್ರಾಯ ಕೇಳಿ ಬಂತು. ಅದೇ ಸಂದರ್ಭದಲ್ಲಿ ದಾಳಿಗೊಳಗಾಗಿ ಮಡಿದ ನೂರಾರು ಜೀವಗಳ, ಬದುಕುಗಳ ಬಗ್ಗೆ ಗಮನ ಕೊಡಲು ಮಾಧ್ಯಮಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಇದೇ ಸಂದರ್ಭದಲ್ಲಿ ಲಾಭಕೋರ ಮಾಧ್ಯಮ ಮಾಲೀಕರು, ಆಡಳಿತಗಾರರು ಇಂತಹ ವರದಿಗಾರಿಕೆಯ ಹೊಣೆಯನ್ನು ಸಿಬ್ಬಂದಿಗೆ ರವಾನಿಸುವಾಗಲೇ ಅವರ ರಕ್ಷಣೆಯ ಬಗ್ಗೆ ಅದೆಷ್ಟು ಜವಾಬ್ದಾರರು ಎಂಬುದೂ ಕೂಡ ಪ್ರಶ್ನಾರ್ಹ.

1129080159131_450

‘ಸುದ್ದಿಮನೆ ಸೈನಿಕರು’ ಎಂಬ ಬಿರುದಿದ್ದರೆ ಸಾಲದು, ಅದಕ್ಕೆ ಪೂರಕವಾದ ಸಿದ್ಧತೆಯನ್ನು ಮಾಡಬೇಕಾದ ಅನಿವಾರ್ಯತೆ ಖಂಡಿತಾ ಮಾಧ್ಯಮದ ಮುಂದಿದೆ. ಅಂತಹ ಸಂದಿಗ್ದತೆಯಲ್ಲಿನ ಒತ್ತಡ, ಆತಂಕ, ಉದ್ವೇಗ, ಸವಾಲುಗಳನ್ನು ನಿಭಾಯಿಸ ಬೇಕಾಗಿದೆ. ಆಧುನಿಕ ಭಯೋತ್ಪಾದನೆಯ ವರದಿಗೆ ವರದಿಗಾರರನ್ನು ತಯಾರು ಮಾಡಬೇಕಾಗಿದೆ.

ಕ್ಷಣಕ್ಷಣದ ಘಟನಾವಳಿಗಳ ‘ಲೈವ್’ ವರದಿಗೆ ಒಂದು ಲಕ್ಷ್ಮಣರೇಖೆ ಎಳೆದು ಕೊಳ್ಳಬೇಕಾದ ಅಗತ್ಯವಿದೆ. ದೇಶದ ಸಮಗ್ರತೆ, ಗೌಪ್ಯತೆಯ ಅರಿವು ವರದಿಗಿರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವರದಿಗಾರಿಕೆಗೆ ಎದೆಯೊಡ್ಡಲು ಕಳುಹಿಸುವ ಮಾಧ್ಯಮ ನಿರ್ವಾಹಕರು ಪತ್ರಕರ್ತರಿಗೆ ಪೈಪೋಟಿಯನ್ನು ಮೀರಿ ಅವರಿಗೆ ರಕ್ಷಣೆ, ವಿಪತ್ತು ನಿರ್ವಹಣೆಯ ತರಬೇತಿ ಕೊಡಬೇಕಾಗಿದೆ. ಜೀವವನ್ನು ಒತ್ತೆಯಿಟ್ಟು ಸುದ್ದಿ ನೀಡುವ ಸುದ್ದಿ ಮನೆ ಸೈನಿಕರ ಜೀವಗಳಿಗೂ ಪತ್ರಕರ್ತ ಎನ್ನುವ ಕಿರೀಟವನ್ನೂ ಮೀರಿದ ರಕ್ಷಣೆ ಬೇಕಾಗಿದೆ.

-ಲೀಲಾ ಸಂಪಿಗೆ 

ಚಿತ್ರ ಕೃಪೆ: ಇಂಡಿಯಾ ಟುಡೆ

%d bloggers like this: