ಪ್ಯಾಸೆಂಜರ್ ರೈಲು ಹಾಗೂ ನಾನು-ಇಬ್ಬರೂ ನಿಧಾನಿ

ಅಕ್ಷತಾ ಕೆ

ದಣಪೆಯಾಚೆ…

 

‘ಎಂಥ ಎಂಥ ಲೋಕಾನೋ, ಎಂಥ ಎಂಥ ಲೋಕಾನೋ’ ಎಂಬ ಇತ್ತೀಚಿನ ಯಾವುದೋ ಸಿನಿಮಾದ ಹಾಡು ಎಲ್ಲೆಂದರಲ್ಲಿ ಕಿವಿಗೆ ಬೀಳುವಾಗ ನನಗೆ ರೈಲಿನಲ್ಲಿ ನಾನು ಕಂಡ ವೈವಿಧ್ಯಮಯ ಲೋಕಗಳ ನೆನಪಾಗುತ್ತದೆ.

ಇತ್ತೀಚಿನ ಒಂದೆರಡು ವರ್ಷಗಳಲ್ಲಿ ನನ್ನ ಜೀವ ಮತ್ತು ಭಾವದ ಜೊತೆ ಬೆಸೆದ ಹಲವು ತಂತುಗಳು ರಾಜಧಾನಿಯಲ್ಲೆ ಬೀಡು ಬಿಟ್ಟಿರುವುದರಿಂದ ನಾನು ಎರಡು ತಿಂಗಳಿಗೊಮ್ಮೆಯಾದರೂ ಬೆಂಗಳೂರಿಗೆ ಭೇಟಿ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಮೊದ ಮೊದಲು ಬಸ್ಸೋ, ಟ್ರೈನೋ ಎಂದೆಲ್ಲ ಮೊದಲೇ ಯೋಚಿಸಿ ರಿಸರ್ವೇಶನ್ ಮಾಡಿಸಿ ಪ್ರಯಾಣದ ದಿನ ಹತ್ತಿರ ಬಂದಂತೆ ಈಗ ಹೋಗಲೋ, ಮತ್ತೊಮ್ಮೆ ಹೋಗಲೋ ಎಂದೆಲ್ಲ ಆತಂಕ, ಸಂಧಿಗ್ದತೆಗೆ ಬೀಳುತಿದ್ದ ನನಗೆ ಪ್ಯಾಸೆಂಜರ್ ಟ್ರೈನ್ಗಳಲ್ಲಿ ಓಡಾಡುವುದು ಅಭ್ಯಾಸವಾದ ಮೇಲೆ ಈ ಎಲ್ಲ ಗೊಂದಲಗಳು ತಪ್ಪಿವೆ.

ಕವಿತೆಯೊಂದು ಉಸುರುವಂತೆ ` ಹೀಗೆ ಹೊರಟುಬಿಡುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ ಯಾವುದಾದರೇನು ಬಸ್ಸು ಎಂದು ಹೊರಟೇಬಿಟ್ಟೆ’ ಎನ್ನುತ್ತದೆ. ಹಾಗೆ ನಾನು ಕೂಡಾ ಪ್ಯಾಸೆಂಜರ್ ಟ್ರೈನ್ನಲ್ಲಿ ಸೀಟಂತೂ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಬೆಂಗಳೂರಿನಲ್ಲಿರುವ ಯಾವುದೋ ಒಂದು ತಂತು ತುಸು ಎಳೆದರೂ ಸಾಕು ಹೊರಟೇಬಿಡುತ್ತೇನೆ.

train_boy

ಎಕ್ಸ್ಪ್ರೆಸ್ ಟ್ರೈನಿನಲ್ಲಿ ಕಿಟಕಿ ಪಕ್ಕ ಸೀಟು ಸಿಕ್ಕರೆ ಕಣ್ಣನ್ನು ಹೊರಕ್ಕೆ ನೆಡುವುದು, ರಾತ್ರಿಯ ಟ್ರೈನಾದರೆ ತಮ್ಮ ಪಾಡಿಗೆ ತಾವು ಮಲಗಿಕೊಳ್ಳುವುದು, ಪಕ್ಕದವನು ಗೊರಕೆಯ ಅಸಾಮಿಯಾಗಿದ್ದರೆ ಅವನಿಗೆ ಹಿಡಿಶಾಪ ಹಾಕುವುದು, ಲಗೇಜುಗಳು ಜಾಸ್ತಿಯಿದ್ದರೆ, ಅಮೂಲ್ಯವಾದ ವಸ್ತುವೇನಾದರೂ ಬಳಿ ಇದ್ದರೆ ಒಂದು ರೀತಿಯ ಭಯದಲ್ಲೆ ಅಲರ್ಟ್ ಆಗಿದ್ದು ನಿದ್ದೆ ಮಾಡದೇ ಅದನ್ನು ಕಾಯುವುದು ಈ ರೀತಿಯ ದೃಶ್ಯಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಆದರೆ ಪ್ಯಾಸೆಂಜರ್ ಟ್ರೈನಿನ ಪ್ರಯಾಣ ಎಲ್ಲವಕ್ಕಿಂತ ವಿಭಿನ್ನ.

ಚಲಿಸುತ್ತಿದೆಯೋ ಇಲ್ಲವೋ ಎಂದು ಒಳಗೆ ಕೂತವರಿಗೆ ಹಲವು ಬಾರಿ ಗೊಂದಲ ಹುಟ್ಟಿಸುವಷ್ಟು ನಿಧಾನಕ್ಕೆ ಚಲಿಸುವ, ಗಳಿಗೆಗೊಮ್ಮೆ ಕ್ರಾಸಿಂಗ್ ಕಾರಣಕ್ಕೆ ಎಕ್ಸ್ಪ್ರೆಸ್ಗಳಿಗೆಲ್ಲ ದಾರಿ ಮಾಡಿಕೊಟ್ಟು ನಿಂತೆ ಬಿಡುವ ರೈಲಿದು. ಇದಕ್ಕೆ ಬರುವ ಹೆಚ್ಚಿನ ಪ್ರಯಾಣಿಕರು ಕಾಲದ ಹಂಗಿಗೆ ಒಳಪಟ್ಟವರಲ್ಲ, ಶಿವಮೊಗ್ಗೆಯಿಂದ ಬೆಳಗಿನ ಜಾವ 5.15ಕ್ಕೆ ಹೊರಡುವ ರೈಲು ಮದ್ಯಾಹ್ನ 11.30ಕ್ಕೆ ಬೆಂಗಳೂರು ತಲುಪುತ್ತದೆಯಾದರೂ, 12.30ಕ್ಕೆ ತಲುಪಿದರೂ ಏನೀಗ ಎನ್ನುವ ಜಾಯಮಾನದ ಪ್ರಯಾಣಿಕರೇ ಹೆಚ್ಚು. ಆ ದೀರ್ಘ ಸಮಯದ ತನಕದ ಮಾತಾಡದೇ ಗುಮ್ಸುಮ್ ಆಗಿರುವುದಾದರೂ ಹೇಗೆ ಹೇಳಿ?

ಅದು ಎಕ್ಸ್ ಪ್ರೆಸ್ ಟ್ರೈನಿನ ಹಾಗೆ ಯಾರಿಗೆ ಯಾರೂ ಬೆನ್ನು ಹಾಕಿ ಕೂರುವುದಿಲ್ಲ, ಬಸ್ಸಿನ ಹಾಗೆ ಪ್ರಯಾಣ ಆಯಾಸ ತರುವುದಿಲ್ಲ, ರಾತ್ರಿ ಟ್ರೈನಿನ ಹಾಗೆ ಮಲಗುವ ವ್ಯವಸ್ಥೆಯು ಇಲ್ಲ. ಎಲ್ಲ ಎದುರು ಬದುರು ಸೀಟುಗಳು ಒಂದೊಂದು ಸೀಟಿನಲ್ಲೂ ನಾಲ್ಕು ಜನ ಕೂರುವ ವ್ಯವಸ್ಥೆ ಇದ್ದರೂ ಕನಿಷ್ಟ ಐದಾರು ಜನರಂತೂ ಕೂತೆ ಇರುತ್ತಾರೆ. ಆರು+ಆರು ಜನ ಎದುರು ಬದರು ಕೂತು ಮೌನವಾಗಿದ್ದರೆ ಸರ್ವಜನಾಂಗದ ಶಾಂತಿಯ ತೋಟ ಭಾರತದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತಿತ್ತೆ? ಆದ್ದರಿಂದ ಪರಸ್ಪರ ಮಾತುಕಥೆಯಲ್ಲಿ ತೊಡಗುತ್ತಾರೆ. ಮಾತು ಕಥೆಯಾಗಿ, ಹಾಡಾಗಿ ಹರಿಯುತ್ತದೆ. ಸಂಕಷ್ಟ ಕೇಳಿದಾಗೊಮ್ಮೆ ಛೆ ಎಂಬ ಉದ್ಗಾರ, ಸಂತೋಷದ ವಿಷಯ ಕೇಳಿದಾಗ ಕುಲುಕುಲು ನಗು ಎಲ್ಲ ಭೋಗಿಗಳಲ್ಲೂ ಅನುರಣಿಸುತ್ತದೆ.

ತಾಯಿಯ ಮಡಿಲಲ್ಲಿರುವ ಪುಟ್ಟ ಮಗು ರೈಲು ಪ್ರಯಾಣದ ಉದ್ದಕ್ಕೂ ಪಕ್ಕದ, ಎದುರಿನ ಸೀಟಿನಲ್ಲಿ ಕೂತ ಹಲವರ ಮಡಿಲೇರಿ ಮತ್ತೆ ಮರಳಿ ತಾಯಿಯ ಮಡಿಲಿಗೆ ಬರುತ್ತದೆ. ಸ್ವಲ್ಪ ಹೊತ್ತು ತಾಯಿಗೂ ವಿರಾಮ ಕೊಡಬೇಕೆನ್ನುವ ದೊಡ್ಡ ಮನದ ಜೀವಗಳು ಪ್ಯಾಸೆಂಜರ್ ರೈಲಿನಲ್ಲಲ್ಲದೆ ಇನ್ನೆಲ್ಲಿ ಕಾಣಲು ಸಾಧ್ಯ? ಪ್ಯಾಸೆಂಜರ್ ರೈಲಿನ ಮಹಿಳಾ ಭೋಗಿಯ ಲೋಕವಂತೂ ನನಗೆ `ಕಿರುಗೂರಿನ ಗಯ್ಯಾಳಿಗಳನ್ನೆ’ ನೆನಪಿಗೆ ತರುತ್ತದೆ. ಎರಡು ಜಡೆ ಸೇರುವುದಿಲ್ಲ ಎಂಬ ಪಭೃತಿಗಳು ಒಮ್ಮೆ ಈ ಭೋಗಿಯನ್ನು ಟಿಕೇಟ್ ಕಲೆಕ್ಟರ್ ನ ಮಾರುವೇಷದಲ್ಲಾದರೂ ಬಂದು ನೋಡಿ ಹೋಗಬೇಕು.

ಒಮ್ಮೆ ಒಬ್ಬ ತಾಯಿ ಪೂರ್ತಿ ಟಿಕೇಟ್ ತೆಗೆದುಕೊಳ್ಳಬೇಕಾದ ಮಗನಿಗೆ ಅರ್ಧ ಟಿಕೇಟ್ ಖರೀದಿ ಮಾಡಿದ್ದಳು, ಟಿಕೇಟ್ ಕಲೆಕ್ಟರ್ ಬಂದವನೇ ಅರ್ಧ ಟಿಕೇಟ್ ನೋಡಿ ಯಾವ ತರಗತಿಯಲ್ಲಿ ಓದುತ್ತೀಯ ಎಂದು ಕೇಳಿದ, ತಾಯಿ ವಯಸ್ಸು ಸುಳ್ಳು ಹೇಳು ಎಂದು ಮಗನಿಗೆ ಹೇಳಿಕೊಟ್ಟಿದ್ದಳು, ತರಗತಿಯನ್ನಲ್ಲ, ಅದಕ್ಕೆ ಹುಡುಗ ಬಹು ಉತ್ಸಾಹದಿಂದ ಎಂಟನೇ ತರಗತಿ ಎಂದ. ಕಲೆಕ್ಟರ್ ಪೂರ್ತಿ ಟಿಕೇಟ್ ಮಾಡಿಸುವಲ್ಲಿ ಅರ್ಧ ಟಿಕೇಟ್ ಮಾಡಿಸಿದ್ದೀರಾ 350 ರೂಪಾಯಿ ದಂಡ ಕಟ್ಟಿ ಎಂದು ಕೂತ. ಆ ಹೆಂಗಸು ದುಡ್ಡಿಲ್ಲ ಕಣಣ್ಣ ಅಂದ್ಲು. ಅದೆಲ್ಲ ನಂಗೊತ್ತಿಲ್ಲ, ತಿಪಟೂರಲ್ಲಿ ಇಳಿದುಕೊಂಡು ಟಿಕೇಟ್ ತಗಂಬನ್ನಿ ಅಂದ, ಅಣ್ಣಾ ಅಲ್ಲಿ ಇಳಿದು ಟಿಕೇಟ್ ತಗಳ್ಳೋ ತನಕ ಈ ರೈಲು ಹೊರಟುಬಿಡತ್ತೆ. ಇದು ಬಿಟ್ಟರೆ ರೈಲಿಲ್ಲ ಅಂದ್ಲು. ಅಲ್ಲಮ್ಮ ಬಸ್ಸಿಗಿಂತ ಅರ್ಧದಷ್ಟು ರೇಟು ಕಡಿಮೆ ಆದ್ರೂ ಹೀಗೆ ಮಾಡ್ತೀರಾ ಅಂದ್ರೆ ಹೇಗೆ? ಬಸ್ಸಿಗೆ ಅವನು ಕೇಳಿದಷ್ಟು ಕೊಟ್ಟು ಹೋಗಲ್ವಾ? ಟಿಕೇಟ್ ತಗೊಳ್ಳಿ ಇಲ್ಲಾ ಅಂದ್ರೆ ಪಕ್ಕದ ಸ್ಟೇಷನ್ನಲ್ಲಿ ಇಳ್ಕಂಡು ಒಯ್ತಾ ಇರಬೇಕು ಎಂದು ಫರ್ಮಾನು ಹೊರಡಿಸಿದ. More

ಎನ್ ರಾಮ್ ಬೆಂಗಳೂರಿನಲ್ಲಿ

ದ ಹಿಂದೂ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕರಾದ ಎನ್ ರಾಮ್ ಬೆಂಗಳೂರಿನಲ್ಲಿರುತ್ತಾರೆ. ಈ ಭಾನುವಾರ (ಡಿಸೆಂಬರ್ 7) ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ಬೆಳಗ್ಗೆ 10-30 ಕ್ಕೆ ಸಮುದಾಯ ರಂಗ ಸಂಘಟನೆಯ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.  

samudaya-invite 

ಸಿ ಆರ್ ಚಂದ್ರಶೇಖರ್ 60

crc-invitation-back

crc-invitation

ಕಬ್ಬನ್ ಪಾರ್ಕ್ ನಲ್ಲಿ ‘ಎಂಡ್ಕುಡ್ಕ ರತ್ನ’

dsc00687

ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ ರಾವ್ ಅವರು ಜಂಟಿಯಾಗಿ ನಡೆಸುತ್ತಿರುವ ಬ್ಯಾಂಡ್ ಸ್ಟಾಂಡ್ನಲ್ಲಿ ಸಂಗೀತ ದ ಕಾರ್ಯಕ್ರಮದಲ್ಲಿ ಈ ಬಾರಿ ನದ್ದೇ ದರ್ಬಾರು. ಜಿ ಪಿ ರಾಜರತ್ನಂ ಅವರ ಸೃಷ್ಟಿ ಯಾದ ‘ಎಂಡ್ಕುಡ್ಕ ರತ್ನ’ನನ್ನು ರಾಜು ಅನಂತಸ್ವಾಮಿ ಎಲ್ಲರ ಮುಂದಿದಲಿದ್ದಾರೆ. ಡಿಸೆಂಬರ್ ಏಳರಂದು ಕಬ್ಬನ್ ಪಾರ್ಕ್ ನಲ್ಲಿ 5 ರಿಂದ 7 ರವರೆಗೆ

ಸಂಪರ್ಕ: 99453 68083

90084 08161

“ಷರೀಫ್” ರಿಗೊ೦ದು ಪತ್ರ…

– ಸಿದ್ದು ದೇವರಮನಿ

asjpg1

ಆ ಊರಲ್ಲಿ ಯುದ್ದ ಜಾರಿಯಲ್ಲಿದೆ
ಜಾತಿಯ ದುರಾಭಿಮಾನದಿ೦ದ
ಸಾಮರಸ್ಯದ ಸಾವಿನಿ೦ದ
ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ
ಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ
ಬರೀ ಬಾ೦ಬು ಹೊಗೆಯೆದ್ದು  ಬಾನಿಗೆ ಪುಟಿದೇಳುತ್ತಿದೆ
ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ
ಕಾರಣ
ಮನ-ಮನಸುಗಳ  ಪ್ರೀತಿ  ಬಿರುಕಲ್ಲಿ ಬತ್ತಿದಕ್ಕೆ.

ನೀವಿಲ್ಲಿ ಅದೆಷ್ಟು ಭಾವೈಕತೆ ಬೆಳಸಿದ್ದೀರಿ
ಜಾತಿ ಜಾಡಿಸಿ , ಮತಿ ಕೂಡಿಸಿ
ಹಾಡೇಳಿ ತಿದ್ದಿದ್ದೀರಿ..

ಬ೦ದಾಗಿನಿ೦ದ ನಿಮ್ಮ ಬಳಿಗೆ ಬರುತ್ತೇನೆ
ಸಮಾಧಿಯಲ್ಲಿ ತಾವು ಮಲಗಿದ್ದೀರಿ
ಎಬ್ಬಿಸಲು ಕಳವಳಿಸುತ್ತೇನೆ.
ಹೇಳಿ, ಬರಲಿ ಯಾವಾಗ ?
ನಿಮ್ಮೊ೦ದಿಗೆ ಮತಾಡುವುದಿದೆ..
ಸ್ವಲ್ಪ ದಿನ ಬಿಟ್ಟು ಬರುತ್ತೇನೆ
ರೆಡಿಯಾಗಿರಿ,  ಹೋಗಿಬರುವ
ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ.


%d bloggers like this: