ನುಡಿಸಿರಿಯ ಗಾರುಡಿ

ಡಿ ಎಸ್ ಶ್ರೀನಿಧಿ ನುಡಿಸಿರಿಯ ಹತ್ತು ಹಲವು ಚಿತ್ರಗಳನ್ನು ‘ಅವಧಿ’ಗಾಗಿ ಸೆರೆಹಿಡಿದಿದ್ದಾರೆ.

ಇನ್ನೊ ಹೆಚ್ಚಿನ ಫೋಟೋಗಳಿಗಾಗಿ ಯಥಾಪ್ರಕಾರ ‘ಓದು ಬಜಾರ್’ ಗೆ ಭೇಟಿ ಕೊಡಿ-  

picture-038

picture-029

ಬೊಳುವಾರು ‘ನುಡಿಸಿರಿ’ಯಲ್ಲಿ

ಡಿ ಎಸ್ ಶ್ರೀನಿಧಿ -ನುಡಿಸಿರಿಯ ಸಭಾಂಗಣದಿಂದ

 

bolwarಮುಸ್ಲಿಂ ಬರಹಗಾರನೊಬ್ಬನ ಮನದ ಸಂವೇದನೆಗಳನ್ನು ಆಳ್ವಾಸ್ ನುಡಿಸಿರಿಯ ಕೊನೆಯ ದಿನದ ಬೆಳಗಿನ ಕಥಾಸಮಯದ ಬಗ್ಗೆ ಮಾತನಾಡಿದ ಬೊಳುವಾರು ಮಹಮದ್ ಕುಂಞ್ ಅತ್ಯಂತ ಸಮರ್ಥವಾಗಿ ನಮ್ಮೆದುರು ಬಿಡಿಸಿಟ್ಟರು. ತಾನು ಏನು- ತನ್ನ ಬರವಣಿಗೆಯ ಉದ್ದೇಶಗಳೇನು ಎಂಬುದನ್ನು ವಿವರಿಸುತ್ತಲೇ ತನ್ನ ಸುತ್ತಲ ಸಮಾಜ ತನ್ನ ಮೇಲೆ ಬೀರಿದ ಪರಿಣಾಮಗಳನ್ನು ಬೊಳುವಾರು ಚಿತ್ರಿಸಿದ ರೀತಿ ಅನನ್ಯ.

ಬೊಳುವಾರು, ಮಾತಿಗೆ ಆರಂಭಿಸುತ್ತಲೇ, ನನ್ನ ಹೆಸರಲ್ಲಿ ಮಹಮದ್ ಎಂಬ ಪದ ಇರುವುದರಿಂದ, ಮತ್ತು ನನ್ನ ಅಪ್ಪ ಅಥವ ಅಜ್ಜ ಒಂದು ಕಾಲದಲ್ಲಿ ಪಾಕಿಸ್ಥಾನದ ನಿರ್ಮಾಣಕ್ಕೆ ಕಾರಣಕರ್ತರಾಗಿರುವುದರಿಂದ ನಿಮಗೆಲ್ಲ ನನ್ನ ದೇಶಪ್ರೇಮದ ಬಗ್ಗೆ ಅನುಮಾನವಿರುತ್ತದೆ. ಮತ್ತು ಹಾಗಿಲ್ಲದೇ ಹೋದರೇ, ನಿಮ್ಮ ದೇಶ ಪ್ರೇಮದ ಬಗ್ಗೆ ನನಗೆ ಅನುಮಾನ ಬರುತ್ತದೆ ಅಂತ ಚಟಾಕಿ ಹಾರಿಸಿದರು.

ಆದರೆ ನಾನು ಕೂಡ ನಿಮ್ಮ ಹಾಗೆ ನಮ್ಮ ದೇಶವನ್ನು ಅತಿಯಾಗಿ ಪ್ರೀತಿಸುವವನು, ಮತ್ತು ಪಾಕಿಸ್ತಾನವನ್ನು ದ್ವೇಷಿಸಿವವನು, ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ಮ್ಯಾಚುಗಳನ್ನು ಪಾಕಿಸ್ತಾನದ ವಿರುದ್ಧ ಗೆದ್ದಾಗ ಪಟಾಕಿಗಳನ್ನು ಹಚ್ಚುತ್ತಿದ್ದವನು, ಆದ್ರೆ ಈಗ ಐ ಪಿ ಎಲ್  ಬಂದು, ಯಾರು ಯಾರು ಯಾವ ದೇಶಕ್ಕೆ ಸೇರಿದವರು ಎಂಬುದೇ ಕನ್ಫ್ಯೂಸ್ ಆಗಿ ಪಟಾಕಿ ಹೊಡೆಯುವುದು ಬಿಟ್ಟಿದ್ದೇನೆ ಎಂದರು ಬೊಳುವಾರು.

ನನಗೆ ಹುಟ್ಟುವ ಮೊದಲೇ ಅಜರ್ ಹಾಕುವ ಸೌಲಭ್ಯ ಇದ್ದಿದ್ದರೆ, ದಶರಥನ ಮಗ ರಾಮನಾಗಿಯೋ, ವಸುದೇವನ ಮಗನಾದ ಕೃಷ್ಣನಾಗಿಯೋ, ಶುಧ್ದೋದನನ ಮಗ ಬುದ್ಧನಾಗಿಯೋ ಹುಟ್ಟಿಸುವಂತೆ, ಕಡೇ ಪಕ್ಷ ಕರಮಚಂದನ ಮಗ ಮೋಹನದಾಸನಾಗುವಂತೆ ಅಜರ್ ಹಾಕುತ್ತಿದ್ದೆ, ಆದರೆ ಆ ಸೌಲಭ್ಯ ಇರಲಿಲ್ಲ. ಹೀಗಾಗಿ ಪುತ್ತೂರಿನ, ಬೀಡಿ ಕಟ್ಟುವ ಅಬ್ಬಾಸ್ ಬ್ಯಾರಿಯ ಮಗನಾಗಿ ಹುಟ್ಟಬೇಕಾಯಿತು. ಹಾಗೆ ಹುಟ್ಟಿದ ಮೇಲೆ, ಅಬ್ಬಾಸ್ ಬ್ಯಾರಿಯ ನಿಲುವಿಗೆ ನಾನೂ ಬದ್ಧನಾಗಬೇಕಾಯಿತು, ಆತನ ಸಂಪ್ರದಾಯಗಳೇ ನನ್ನ ಸಂಪ್ರದಾಯಗಳಾಗಬೇಕಾಯಿತು.

ನಾನು ಬರೆಯಲು ಆರಂಭಿಸುವಾಗ ನನ್ನಲ್ಲಿ ಎರಡು ತೆರನಾದ ಯೋಚನೆಗಳಿದ್ದವು. ಒಂದು, ಅಷ್ಟಾಗಿ ಕನ್ನಡದ ಮುಖ್ಯ ಓದುಗ ವಾಹಿನಿಗೆ ಪರಿಚಯವಿಲ್ಲದ ನನ್ನ ಸಮುದಾಯವನ್ನು ಓದುಗರಿಗೆ ಪರಿಚಯಿಸುವುದು ಮತ್ತು ಓದುವ ಆಸಕ್ತಿಯೇ ಇಲ್ಲದ ನನ್ನ ಸಮುದಾಯದ ಜನರನ್ನು ಓದಲು ಪ್ರೇರೇಪಿಸುವುದು. ಜೊತೆಗೆ, ಮುಸ್ಲಿಮರಲ್ಲೂ ಒಳ್ಳೆಯವವರು ಇರುತ್ತಾರಾ ಅನ್ನುವ ಯೋಚನೆಯನ್ನು ಇತರರಿಗೆ ಮೂಡಿಸುವುದು, ಅದರೊಂದಿಗೆ, ತಮ್ಮ ಸಮುದಾಯದ ಕಂದಾಚಾರಗಳನ್ನು ಎಂದಿನಿಂದಲೂ ಪಾಲಿಸುತ್ತ ಬಂದಿರುವ ನನ್ನ ಸಮುದಾಯದ ಜನರನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು ಅಂದರು ಬೊಳುವಾರು.

ಹೇಗೆ ಬರೆಯಬೇಕು, ಏನು ಬರೆಯಬೇಕು ಎಂದು ಯೋಚಿಸಿದಾಗ ಹೊಳೆದದ್ದು ನನ್ನದೇ ಊರಿನ ಕಲ್ಪನೆ. ಹೀಗಾಗಿ ನಾನು ಮುತ್ತುಪ್ಪಾಡಿ ಎಂಬ ನನ್ನದೇ ಊರೊಂದನ್ನು ಸೃಷ್ಟಿಸಿದೆ, ಅದರಲ್ಲಿ ಹಳ್ಳಿಗಿರಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟೆ. ಓದಲು ಶಾಲೆ, ಈಜಲು ನದಿ, ಅಂಗಡಿ ಬೀದಿ, ರೋಗ ಬಂದರೆ ಆಸ್ಪತ್ರೆ, ಸತ್ತರೆ ಸ್ಮಶಾನ, ಬೇರೆ ಬೇರೆ ಜಾತಿಗಳ ಜನ- ಹೀಗೆ ಎಲ್ಲವನ್ನು ಹುಟ್ಟಿಸಿದ ಮೇಲೆ, ಅವರುಗಳನ್ನು ಅವರ ಪಾಡಿಗೆ ಏನು ಬೇಕಾದರೂ ಮಾಡಿಕೊಳ್ಳಿ ಅಂತ ಬಿಟ್ಟು, ನಾನು ನನ್ನ ಪಾಡಿಗೆ ಕಥೆ ಬರೆದುಕೊಂಡು ಹೋದೆ ಎಂದು ತಾನು ಬರಹಗಾರನಾದ ಬಗೆ ವಿವರಿಸಿದರು ಬೊಳುವಾರು ಮಹಮದ್ ಕುಂಞ

ನಾನು ಕುಮಾರವ್ಯಾಸ ಭಾರತ ಗ್ರಂಥಕ್ಕಾಗಿ ವಿನ್ಯಾಸ ಮಾಡಿದ್ದೆ. ಆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಲ್ಲಿ ಜರುಗಿತು. ಆ ಸಮಾರಂಭದಲ್ಲಿ ಭಾಗವಹಿಸಿ ವಾಪಸು ಊರಿಗೆ ಬಂದೆ, ಅಂದು ದಕ್ಷಿಣ ಕನ್ನಡದ- ನಾನು ಹೆಸರು ಹೇಳಲು ಬಯಸದ ಸಾಹಿತಿ ಮಿತ್ರರೊಬ್ಬರು ಫೋನ್ ಮಾಡಿ, – ನೀವು ಮುಸ್ಲಿಮ್ ಅಂದವರಿಗೆ ಮೆಟ್ಟಲ್ಲಿ ಹೋಡೀಬೇಕು ಸ್ವಾಮೀ, ಬೊಳುವಾರು ಕುಂಞ್ ಅಲ್ಲ ನೀವು ಬೊಳುವಾರು ಆಚಾರ್ರು ಎಂದು ಹೇಳಿದ್ರು. ನನಗೆ ಏನು ಹೇಳಬೇಕು ಅಂತ ತೋಚದೇ ಥ್ಯಾಂಕ್ಸ್ ಅಂದೆ!

ಒಬ್ಬ ಮುಸ್ಲಿಂ ಬರಹಗಾರನ ಮನಸ್ಥಿತಿ ಮತ್ತು ಪರಿಸ್ಥಿತಿಗಳನ್ನು ಬಹಳ ಸಮರ್ಥವಾಗಿ ನಿರೂಪಿಸಿದರು ಬೊಳುವಾರು. ಇಂದಿನ ಭಯೋತ್ಪಾದನೆಯ ತಲ್ಲಣದ ಸಂದರ್ಭದಲ್ಲಿ, ಬೊಳುವಾರು ಅವರ ಮಾತುಗಳು ಯಾಕೋ ಆಪ್ತ ಅಂತ ಅನ್ನಿಸಿತು.

ಚಿತ್ರ: ‘ಕನ್ನಡವೇ ನಿತ್ಯ’ ಬ್ಲಾಗ್ ನಿಂದ

ನಿಜಕ್ಕೂ ಇದು ಸಸ್ಪೆನ್ಸ್ ಕಥೆ

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

ನನ್ನಿಂದೇನು ತಪ್ಪಾಯಿತೆಂದು ನನಗಿನ್ನೂ ಸ್ಪಷ್ಟವಾಗಿಲ್ಲ. ತಪ್ಪು ಮಾಡಿರಲೇ ಬೇಕು ನಾನು, ಇಲ್ಲದಿದ್ದರೆ ಇವರೆಲ್ಲಾ ಇಷ್ಟು ಆಸಕ್ತಿವಹಿಸಿ ನನ್ನ ಕೇಸಿನ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನನಗೆ ಈ ದಿನದಿಂದ ಸರಿಯಾಗಿ ಎರೆಡು ತಿಂಗಳಿಗೆ ಆಜೀವನ ಕಾರಾಗೃಹ ವಾಸ ಎಂದು ನಿರ್ಧಾರವಾಗಿದೆ. ನಿಜವಾದ ಶಿಕ್ಷೆಯಾಗುವ ಮುಂಚೆಯೇ ಅದರ ಕಲ್ಪನೆಗಳು ನಮ್ಮನ್ನು ಆವರಿಸಿಕೊಂಡು ತಿನ್ನುತ್ತವೆ ಎಂದು ಕೇಳಿದ್ದೆ. ಆದರೆ ಅದು ಹೀಗೆ ನನ್ನ ವಿಷಯದಲ್ಲೇ ಸತ್ಯವಾಗುತ್ತೆ ಎಂದು ತಿಳಿದಿರಲಿಲ್ಲ! ತಿಳಿದಿದ್ದರೂ ಏನುಮಾಡಬಹುದಿತ್ತು ತಪ್ಪಿಸಿಕೊಳ್ಳಲಂತೂ ಸಾಧ್ಯವಿಲ್ಲವಲ್ಲ! ದಿನದ ಇಪ್ಪತ್ನಾಲ್ಕು ಘಂಟೆಯೂ ಆಜೀವ ಪರ್ಯಂತ ನಡೆಸಬೇಕಾದ ಜೈಲು ವಾಸದ ಕಲ್ಪನೆಗಳು ಕಿತ್ತು ತಿನ್ನುತ್ತಿವೆ.. ಅದರ ಕಷ್ಟಗಳನ್ನು ನೆನೆ-ನೆನೆದು ಚಿಂತಾಕ್ರಾಂತನಾಗಿದ್ದೇನೆ.

ಇದೆಲ್ಲಾ ವ್ಯವಸ್ಥಿತವಾಗಿ ನನ್ನ ವಿರುದ್ಧ, ನನ್ನನ್ನು ಇದರಲ್ಲಿ ಸಿಕ್ಕಿಹಾಕಿಸಲು ಮಾಡಿದ ತಂತ್ರ ಎಂಬುದು, ಒಂದೊಂದಾಗಿ ಘಟನೆಗಳನ್ನು ಅವಲೋಕಿಸುತ್ತಾ ಹೋದ ಹಾಗೆ ತಿಳಿಯುತ್ತಿದೆ. ಸುಮಾರು ಐದಾರು ತಿಂಗಳಿಂದಲೇ ಇದೆಲ್ಲಾ ನಡೆಯುತ್ತಿತ್ತೇನೋ? ನನ್ನ ಕಣ್ಣೆದುರಿಗೆ ನಡೆಯುತ್ತಿದ್ದರೂ ಇದು ನನಗೆ ಶಿಕ್ಷೆಯಾಗಿ ಪರಿಣಮಿಸುತ್ತದೆ ಎಂಬ ಕಿಂಚಿತ್ ಅರಿವೂ ಇರಲಿಲ್ಲ. ಇದ್ದಿದ್ದರೆ ಹೀಗಾಗುವುದನ್ನು ಹೇಗಾದರೂ ತಪ್ಪಿಸುತ್ತಿದ್ದೆ.

img_5562

ದುಃಖದ ವಿಚಾರವೆಂದರೆ ನಾನು ಮಾಡ(ಡಿ)ದ ತಪ್ಪಿಗೆ ಸಾಕ್ಷಿಯಾಗಿ ಒಬ್ಬೊಬ್ಬರಾಗಿ ಬಂದು ಪುರಾವೆ ಒದಗಿಸಿದವೆರೆಲ್ಲಾ ನನಗೆ ತೀರ ಹತ್ತಿರದವರೇ. ಅಮ್ಮನ ಎದೆ ಹಾಲೇ ವಿಷವಾದರೆ ಕಾಯುವರಾರು ಹೇಳಿ? ಮೊದಲು ನನ್ನ ಬಗ್ಗೆ ಸಾಕ್ಷಿ ಹೇಳಿದವನು ಆ ದಲ್ಲಾಳಿಯೇ ಇರಬೇಕು! ಅವನೊಬ್ಬ ಹಣದ ಪಿಶಾಚಿ. ಹಣಕ್ಕೋಸ್ಕರ ಏನನ್ನೂ ಮಾಡಲು ಹೇಸದವ. ಅವನು ಹೇಳುವಾಗ ಅಲ್ಲಿ ನಾನಿರಲಿಲ್ಲ. ನಿಜ ಹೇಳಬೇಕೆಂದರೆ ಅವನು ಹಾಗೆ ಸಾಕ್ಷಿ ಹೇಳುತ್ತಿರುವ ಸಮಯಕ್ಕೆ ಸರಿಯಾಗಿ ಇಂಥ ಯಾವುದರ ಕಲ್ಪನೆಯೂ ಇಲ್ಲದೆ ನಾನು ಯಾವುದೋ ಪಬ್ಬಿನಲ್ಲಿ ಬಿಯರ್ ಕುಡಿಯುತ್ತಿದ್ದೆನೋ ಏನೋ. ಆಮೇಲೆ ಒಬ್ಬೊಬ್ಬರಾಗಿಯೇ ನನ್ನ ಮುಂದೆಯೇ ಕಿಂಚಿತ್ತೂ ಪಾಪ ಪ್ರಜ್ಞೆ ಇಲ್ಲದೆ ಬಂದು ಸಾಕ್ಷಿ ಹೇಳಿದರಲ್ಲ. ಅಪ್ಪ ಅಮ್ಮನೂ ಕೂಡ. ಹೇಳುವಾಗ ಎಂಥಾ ಖುಷಿ ಅವರ ಕಣ್ಗಳಲ್ಲಿ! ಇವರ ಸ್ವಂತ ಮಗನಾ ನಾನು ಎಂದು ಅನುಮಾನವಾಗುತ್ತಿದೆ. ಸ್ವಂತ ಮಗನೇ ಆಗಿದ್ದರೆ ಹೇಗೆ ಇಷ್ಟೊಂದು ನಿಷ್ಟುರತೆಯಿಂದ ನನ್ನ ಈ ಶಿಕ್ಷೆಗೆ ತಳ್ಳುತ್ತಿರಲಿಲ್ಲ! ಚಿಕ್ಕಂದಿನಿಂದಲೂ ನನ್ನೊಂದಿಗೆ ಚಿಕ್ಕ ಚಿಕ್ಕ ವಿಷಯಗಳಿಗೂ ಜಗಳ ಆಡುತ್ತಿದ್ದ ನನ್ನ ತಂಗಿಯಂತೂ ಅವತ್ತು ಸಾಕ್ಷಿ ಹೇಳುವ ಸಮಯದಲ್ಲಿ ಇಡೀ ಬಾಲ್ಯದ ಸಿಟ್ಟನ್ನೆಲ್ಲಾ ಕಾರಿಕೊಳ್ಳುವಂತೆ ಸಾಕ್ಷಿ ನುಡಿದಳು!

ನನ್ನ ಶಿಕ್ಷೆಯ ದಿನ ನಿಗದಿಯಾಗುತ್ತಿದ್ದಂತೆ ಇವರೆಲ್ಲರ ಖುಷಿ ಹೇಳತೀರದು. ತಮ್ಮ ಬಹುಕಾಲದ ಹೋರಾಟಕ್ಕೆ ಸಂದ ಪ್ರತಿಫಲದಂತೆ ಎಲ್ಲರೂ ಹರ್ಷಿಸಿದರು. ಹತ್ತಿರದವರಿಗೆಲ್ಲಾ ಫೋನು ಮಾಡಿ ತಿಳಿಸಿ ಸಂಭ್ರಮಿಸಿದರು. ಈ ಶಿಕ್ಷೆಯ ದಿನದ ಸಿದ್ಧತೆಯಲ್ಲಿ ತಮ್ಮನ್ನು ತಾವು ಮುಳುಗಿಸಿಕೊಂಡರು. ಯಾಕೆ ಹೀಗೆ ಇವರೆಲ್ಲಾ ನಡೆದುಕೊಂಡರು? ನಾನು ಮಾಡದ ತಪ್ಪಿಗೆ ನನಗ್ಯಾಕೆ ಹೀಗೆ ಶಿಕ್ಷೆ ಆಗುವಂತೆ ಮಾಡಿದರು?

2

ಈಗ ನೆನಪಾಗುತ್ತಿದೆ. ಹೋದವರ್ಷವೇ ನಡೆದಿದ್ದು. ಅವನು ನನ್ನ ಬಾಲ್ಯದ ಗೆಳೆಯ. ಅವನನ್ನೂ ಇದೇ ರೀತಿಯ ಶಿಕ್ಷೆಗೆ ಗುರಿಮಾಡಲಾಗಿತ್ತು. ಅವತ್ತು ಭಾನುವಾರ. ಅವನನ್ನು ಅವನಿದ್ದ ಜೈಲಿನಲ್ಲೇ ಭೇಟಿ ಮಾಡಿದ್ದೆ. ಆದರೂ ಅವನ ಹಾಸ್ಯಭರಿತ ಮಾತುಗಳಿಂದ, ಅವನ ಸಹಜ ನಡತೆಯಿಂದ ಅದು ಜೈಲೆಂದು ಭಾಸವಾಗಿರಲಿಲ್ಲ. ಅವನಿಗಲ್ಲಿ ಕಷ್ಟವೇ ಇಲ್ಲವೆಂದುಕೊಂಡಿದ್ದೆ. ಆದರೆ ಅವನ ಮಾತುಗಳನ್ನು ಇಂದು ನೆನೆಸಿಕೊಂಡರೆ ಅದಕ್ಕೆ ಬೇರೆಯೇ ಅರ್ಥ ಹುಟ್ಟುತ್ತಿದೆ. ಅದೇ ಅವನ ಮಾತಿನ ನಿಜವಾದ ಅರ್ಥ ಎಂಬ ಅರಿವು ಹುಟ್ಟುತ್ತಿದೆ ಜೊತೆಗೆ ಇದು ನನಗೆ ಅಂದೇ ಏಕೆ ಅರ್ಥವಾಗಲಿಲ್ಲ ಎಂಬ ವ್ಯಥೆಯೂ!

ಮೊನ್ನೆ ಮತ್ತೆ ಅವನನ್ನು ನೋಡಲು ಹೋದೆ. ನನ್ನ ಜೊತೆ ಹೆಚ್ಚು ಹೊತ್ತು ಮಾತಾಡಲು ಜೈಲರಿನಿಂದ ಕಷ್ಟ ಪಟ್ಟು ಬಹಳಷ್ಟು ಕೋರಿಕೆಗಳನ್ನು ಸಲ್ಲಿಸಿ ಅನುಮತಿ ಪಡೆದಿದ್ದ. ನಾನು ಹೇಳುವ ಮೊದಲೇ ನನಗೆ ಶಿಕ್ಷೆಯಾಗಿರುವ ಸಂಗತಿ ಅವನಿಗೂ ತಿಳಿದಿತ್ತು. ನನ್ನ ಸ್ಥಿತಿಗೇ ಇವನೂ ಬಂದನಲ್ಲಾ ಎಂದು ಒಳಗೊಳಗೇ ಸಂತೋಷಪಡುತ್ತಿದ್ದಾನೆ ಎಂಬ ಅನುಮಾನವು ನನ್ನ ಹಾದು ಹೋದರೂ ಅದನ್ನು ಸುಳ್ಳಾಗಿಸುವಂತೆ ತುಂಬಾ ಮರುಕ ಪಟ್ಟ. ನನಗೆ ಎಲ್ಲರೂ ಸೇರಿ ಎಸಗಿದ ದ್ರೋಹದ ಬಗ್ಗೆ ಹೇಳಿಕೊಂಡೆ ಸಹನೆಯಿಂದ ಕೇಳಿಸಿಕೊಂಡ.ಭುಜದ ಮೇಲೆ ಕೈಯಿಟ್ಟು ಸಮಾಧಾನ ತುಂಬಲು ಯತ್ನಿಸಿದ.

ಜೈಲಿನಲ್ಲಿ ತುಂಬ ಕಷ್ಟ ಕೊಡ್ತಾರ ತೊದತೊದಲಿ ಕೇಳಿದೆ. ಅದರ ಬಗ್ಗೆ ಹೇಳಿ ಇನ್ನೂ ನನ್ನ ಚಿಂತೆಗೆ ಕೆಡವಲು ಅವನಿಗೆ ಇಷ್ಟವಿರಲಿಲ್ಲವೋ ಏನೋ ಅಷ್ಟೇನೂ ಕಷ್ಟವಾಗುವುದಿಲ್ಲವೆಂದು ಮಾತು ತೇಲಿಸಿದ. ನಿಜ ಹೇಳಬೇಕೆಂದರೆ ಈ ಜೀವನವೇ ಒಂಥರಾ ನೆಮ್ಮದಿ. ಜೈಲಿನ ಹೊರಗಡೆಯಾದರೆ ಕೆಲಸವನ್ನೂ ನಮ್ಮ ಬೇರೆ ಬೇರೆ ಜವಾಬ್ದಾರಿಗಳನ್ನು ನಾವೇ ನೋಡಿಕೊಳ್ಳಬೇಕು, ಆದರೆ ಇಲ್ಲಿ ಕಷ್ಟಪಟ್ಟು ಕೆಲಸಗಳನ್ನು ಮಾಡಿದರಾಯಿತು. ಊಟ ತಿಂಡಿಯ ಜವಾಬ್ದಾರಿಯಾಗಲೀ ಅವರಿವರಿಗೆ ಹೇಳಬೇಕೆಂಬ ಕಷ್ಟಗಳಾಗಲೀ ಇರುವುದಿಲ್ಲ ಎಲ್ಲವನ್ನೂ ಜೈಲರೇ ನೋಡಿಕೊಳ್ಳುತ್ತಾರೆ. ಏನೆಂದರೆ ನಮಗೇನು ಬೇಕೋ ಅದನ್ನು ಮಾಡುವ ಸ್ವಾತಂತ್ರವಿರುವುದಿಲ್ಲ ಅಷ್ಟೇ ಅದಕ್ಕೇ ಇದಕ್ಕೆ ಜೈಲೆಂದು ಹೆಸರು ಎಂದ. ಅದೇ ಮುಖ್ಯವಲ್ಲವಾ? ಸ್ವಾತಂತ್ರ್ಯವಿಲ್ಲವೆಂದಮೇಲೆ ಬದುಕಿ ಏನು ಮಾಡಬೇಕು ಅನ್ನಿಸಿತು. ಬದುಕಬೇಕು ಬದುಕಿದರೆ ಮುಂದೆ ಎಂದಾದರೂ ಬಿಡುಗಡೆಯಾಗಬಹುದು ಆವಾಗ ಸ್ವತಂತ್ರವಾಗಿರಬಹುದು ಎಂಬ ಆಸೆಯಾದರೂ ಇರುತ್ತದೆ ಹೆದರಿ ಸತ್ತರೆ ಮುಂದೆ ಸಿಗುವ ಬಿಡುಗಡೆಯನ್ನೂ ಕತ್ತು ಹಿಚುಕಿ ಕೊಂದ ಹಾಗೆ ಎಂದ. ಯಾವುದೋ ಪುಸ್ತಕದ ಸಾಲುಗಳನ್ನ ನನ್ನ ಮುಂದೆ ಒಪ್ಪಿಸುತ್ತಿದ್ದಾನೆ. ಸಾಯಲು ಧೈರ್ಯವಿಲ್ಲದವರು ಹೀಗೆ ಮಾತಾಡುವುದು ಅನ್ನಿಸಿತು.

ಎದ್ದು ಬಂದೆ ಖಾಲಿ ರಸ್ತೆಗಳಲ್ಲಿ ಮನಬಂದಂತೆ ಅಲೆದಾಡಿದೆ. ಬೇಕ್ಕಾದ್ದು ಕೊಂಡು ತಿಂದೆ, ಇಷ್ಟವಾದ ವಿಸ್ಕಿಯನ್ನ ಮತ್ತೆ ಮತ್ತೆ ಕುಡಿದೆ. ಬೇಕಾದಹಾಗೆ ಕೂಗಾಡಿದೆ ಎಲ್ಲರಿಗೂ ಇವನಿಗೆ ಹುಚ್ಚು ಹಿಡಿದಿದೆ ಎಂದೇ ಅನ್ನಿಸಿರಬೇಕು. ತಪ್ಪಿಲ್ಲ ನನಗೆ ಹುಚ್ಚು ಹಿಡಿದಿರುವುದು ಹೌದು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬಂದರೆ ಅದು ಹುಚ್ಚೇ!

3

ಇವತ್ತಿನಿಂದ ನನ್ನ ಶಿಕ್ಷೆ ಜಾರಿಯಾಗುತ್ತದೆ. ಜೈಲರು ಅತ್ಯಂತ ಉತ್ಸಾಹದಲ್ಲಿದ್ದಾರೆ. ಮನುಷ್ಯ ನಲ್ಲಿ ಯಾವಾಗಲೂ ತಾನು ಬೇರೆಯವರನ್ನು ಆಳಬೇಕು ಎಂಬ ಹಪಹಪಿರುತ್ತದೆ. ಬ್ರಿಟೀಷರು ಕೇವಲ ಹಣದಾಸೆಗಾಗಿ ನಮ್ಮನ್ನು ಆಳಿದರಾ? ಉಹು ಬೇರೆಯವರನ್ನು ಆಳುತ್ತಿದ್ದೇನೆ ಅವನ ಎಲ್ಲಾ ಚಟುಟಿಕೆಗಳನ್ನ ನಿಗ್ರಹಿಸುತ್ತಿದ್ದೇನೆ ಎಂಬ ಅನಿಸಿಕೆಯೇ ವಿಚಿತ್ರವಾದ ಒಂದು ಸಂತೋಷವನ್ನು ಕೊಡುತ್ತೆ.ಹಮ್ಮನ್ನು ಅಹಂಕಾರವನ್ನ ತೃಪ್ತಿಗೊಳಿಸುತ್ತೆ. ಅಂಥಾ ಅಹಂಕಾರವನ್ನ ತಣಿಸಿಕೊಳ್ಳಲೆಂದೇ ಬ್ರಿಟೀಶರು ನಮ್ಮನ್ನ ಅಷ್ಟು ವರ್ಷಗಳ ಕಾಲ ಆಳಿದರು ಅಲ್ಲವಾ? ಜೈಲರಿಗೆ ಇಂದಿನಿಂದ ನನ್ನನ್ನು ನಿಗ್ರಹಿಸುವ ಸಂತೋಷ.

ಈಗ ಅಲ್ಲಿಗೆ ಹೋಗಲೇ ಬೇಕಾದ ಘಳಿಗೆ ಬಂದಿದೆ. ನಾನು ತಡ ಮಾಡುತ್ತಿದ್ದೇನೆಂದು ಆಗಲೇ ಹಲವರು ಸಿಟ್ಟಾಗಿದ್ದಾರೆ. ನಾನು ಕೊನೆಯದಾಗಿ ಸ್ವತಂತ್ರವಾಗಿರುವುದನ್ನು ನೋಡಲೆಂದೇ ಬಹಳಷ್ಟು ಜನ ಸೇರಿದ್ದಾರೆ. ಬಂಧುಗಳು ಸ್ನೇಹಿತರು ಮಿತ್ರರು. ನಾನು ಜೈಲು ಸೇರುವುದನ್ನು ನೋಡಿಯೇ ಅವರು ವಾಪಸ್ಸು ಹೋಗುವುದು. ಇವರೆಲ್ಲರ ಇರುವಿಕೆಯಿಂದಲೇ ನನ್ನ ಕಿರಿಕಿರಿ ಇನ್ನೂ ಹೆಚ್ಚುತ್ತಿದೆ. ನಾನು ಹೊರಟಿದ್ದರಿಂದ ಜೈಲರ್ ಖುಶಿಯಾಗಿದ್ದಾರೆ. ವಧಾಸ್ಥಾನಕ್ಕೆ ಹೋಗುವ ಕುರಿಯಂತೆ ನಾನು ಕಂಡರೆ ವ್ಯಾಧನಂತೆ ಅವರ ಸಂತೋಷ ಕಣ್ಣುಗಟ್ಟುತ್ತಿದೆ.

ಮುಗಿಯಿತು. ನನಗೆ ಗೊತ್ತು ಇನ್ನು ನನ್ನ ಮಾತಾಡಗೊಡುವುದಿಲ್ಲ. ನನ್ನ ಸ್ವಾತಂತ್ರದ ಹಕ್ಕಿ ರೆಕ್ಕೆ ಕತ್ತರಿಸಿಕೊಂಡು ಕೆಟ್ಟದಾಗಿ ಕಾಣುತ್ತಿದೆ.. ಈಗಲೂ ಓಡಿಹೋಗಿ ಬಿಡಲ? ಕೊನೆಯ ಅವಕಾಶ.. ಅಯ್ಯೂ ನನ್ನ ತಲೆಯ ಮೇಲೆ ನಾನೇ ಚಪ್ಪಡಿಕಲ್ಲು ಎತ್ತಿಹಾಕಿಕೊಳ್ಳುತ್ತಿದ್ದೇನೆ… ಅವಳಿಗೆ ತಾಳಿ ಕಟ್ಟೇ ಬಿಟ್ಟೆ… ಮಾಂಗಲ್ಯಂ ತಂತುನಾನೇನಾ ಮಮ ಜೀವನ…

ಶ್ರೀನಿಧಿ cliks ‘ನುಡಿಸಿರಿ’

ಸೋಮಾರಿ ಹುಡುಗ (lazy guy) ಅಂತೂ ಕೆಲಸ ಮಾಡಿದ್ದಾನೆ. ಸದಾ ಮುಗುಳ್ನಗುತ್ತಲೇ ಇರುವ ಪತ್ರಕರ್ತ, ಕಸ್ತೂರಿ ನಿವಾಸಿ ಶ್ರೀನಿಧಿ ಬೆಂಗಳೂರಿನಿಂದ ಮೂಡಬಿದ್ರೆಗೆ ದಂಡೆತ್ತಿ ಹೋಗಿದ್ದಾನೆ.

ಶ್ರೀನಿಧಿ ಡಿ ಎಸ್ ಅಲ್ಲಿನ ‘ನುಡಿಸಿರಿ’ಯನ್ನು ‘ಅವಧಿ’ಗಾಗಿ ಸೆರೆ ಹಿಡಿದಿದ್ದಾನೆ. ಶ್ರೀನಿಧಿ ನಿಜಕ್ಕೂ ಒಂದು ನಿಧಿ ಕೊಟ್ಟಿದ್ದಾನೆ ಥ್ಯಾಂಕ್ಸ್ ಶ್ರೀ.

ಇನ್ನಷ್ಟು ಸುಂದರ ಫೋಟೋಗಳಿಗಾಗಿ ‘ಓದುಬಜಾರ್’ ಗೆ ಭೇಟಿ ಕೊಡಿ-

 

vedike

picture-004

ಅಪಾರ ಕಥೆ: ಮೇಷ್ಟರ ಸೈಕಲ್ಲಿನ ಬೇಬಿ ಸೀಟು

ajpg1ಚಿತ್ರ: ಪೂನೋಮೋ

ನಿವಾರದ ಮಾರ‌‌‌ನಿಂಗ್ ಸ್ಕೂಲಿನ ಎರಡನೇ ಪೀರಿಯಡ್‌ನಲ್ಲಿ ಎಯ್ತ್ ಬಿ ವಿದ್ಯಾರ್ಥಿಗಳಿಗೆ `ಸರಳರೂಪಕ್ಕೆ ತನ್ನಿ’ ಎಂಬ ಲೆಕ್ಕದ ಎರಡನೇ ಸ್ಟೆಪ್ಪನ್ನು ಬೋರ್ಡಿನ ಮೇಲೆ ಮಾಡಿ ಬಾಗಿಲ ಕಡೆ ತಿರುಗಿದ ಗೋಪಾಲಯ್ಯ ಮೇಷ್ಟ್ರು ಅಲ್ಲಿ ಎಷ್ಟೋ ಹೊತ್ತಿನಿಂದ ಎಂಬಂತೆ ನಿಂತಿದ್ದ ತಮ್ಮ ಧರ್ಮ ಪತ್ನಿಯನ್ನು ಕಂಡು ತುಸು ಅಚ್ಚರಿಗೊಂಡರು. ಮರುಕ್ಷಣವೇ ತಮ್ಮ ಇಪ್ಪತ್ತೆಂಟು ವರ್ಷಗಳ ಸರ್ವೀಸಿನಲ್ಲಿ ಶಾರದಮ್ಮ ಎಂದೂ ಯಾವ ಕಾರಣಕ್ಕೂ ತಮ್ಮನ್ನು ಹುಡುಕಿಕೊಂಡು ಶಾಲೆಯ ತನಕ ಬಂದಿರಲಿಲ್ಲವೆಂಬುದು ನೆನಪಾಗಿ ಸಣ್ಣ ಆತಂಕದಿಂದಲೇ ಲೆಕ್ಕವನ್ನು ಅಲ್ಲಿಗೇ ಕೈಬಿಟ್ಟು , ಗಲಾಟೆ ಮಾಡದೆ ಪ್ರಯತ್ನಿಸುತ್ತಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿ ಹೊರಬಂದರು.


ಮೇಷ್ಟ್ರು ಹೊರಗೆ ಬಂದ ತಕ್ಷಣ ಗಾಬರಿಗೊಂಡಿದ್ದ ಶಾರದಮ್ಮ ಮಗಳು ಪೃಥ್ವಿಕಾ ಬೆಳಗ್ಗಿನಿಂದ ಮನೆಯಲ್ಲಿಲ್ಲದ್ದನ್ನೂ ಎರಡು ದಿನದಿಂದ ಅವಳು ಒಂಥರಾ ಇದ್ದುದನ್ನೂ, ತಮಗೆ ತಿಳಿಸದೆ ಎಂದೂ ಹೀಗೆ ಹೊರಗೆ ಹೋದವಳಲ್ಲ ವೆಂಬುದನ್ನೂ ಕಡೆಗೆ ತಮಗೇಕೋ ಸಿಕ್ಕಾಪಟ್ಟೆ ಭಯವಾಗುತ್ತಿದೆಯೆಂಬುದನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
`ಗಾಬರಿ ಪಡಬೇಡ, ಪುಚ್ಚಿಯೇನು ಪುಟ್ಟ ಮಗುವೇ? ಕಾಲೇಜು ಓದೋ ಹುಡುಗಿ’ ಎಂಬ ಸಮಾಧಾನದ ಮಾತಾಡಿದರೂ ಮೇಷ್ಟ್ರಿಗೂ ಎಂಥದೋ ಆತಂಕ ನಿಧಾನವಾಗಿ ತುಂಬಿಕೊಳ್ಳುತ್ತಿದ್ದುದು ಅವರು ತಕ್ಷಣ ಹೆಡ್ ಮಾಸ್ಟರ ಕೋಣೆಗೆ ಹೋಗಿ ಅರ್ಧ ದಿನದ ಸಿ ಎಲ್ ಹಾಕಿ ಬಂದದ್ದರಿಂದಲೇ ತಿಳಿಯುವಂತಿತ್ತು.ಮನೆಗೆ ಹೋಗುವ ದಾರಿಯಲ್ಲಿ ಶಾರದಮ್ಮ ಮಗಳು ಇಲ್ಲದಿರುವುದನ್ನು ತಾನು ಮೊದಲು ಹೇಗೆ ಕಂಡುಕೊಂಡೆ ಎಂಬುವದನ್ನ ಪದೇಪದೇ ಅಳುವ ದನಿಯಲ್ಲಿ ವಿವರಿಸುವಾಗ ಮೇಷ್ಟ್ರು ತಾಳ್ಮೆ ಕಳೆದುಕೊಂಡು `ಅಂದರೆ ನಿನ್ನ ಮಾತುಗಳ ಅರ್ಥವೇನು? ನಮ್ಮ ಪುಚ್ಚಿ ಯಾವನೋ ಜೊತೆಗೆ ಓಡಿಹೋಗಿದ್ದಾಳೆ ಅಂತಲಾ? ಎಂದು ಸಿಡಿಮಿಡಿ ಗೊಂಡರು. ಮೇಷ್ಟ್ರು ರೇಗಿದ್ದಕ್ಕೋ ತಮ್ಮ ಮನದಾಳದಲ್ಲಿದ್ದ ಅನುಮಾನವನ್ನು ಆಡಿ ತೋರಿಸಿದ್ದಕ್ಕೋ ಅಂತೂ ಮನೆ ತಲುಪುವ ತನಕ ಶಾರದಮ್ಮ ಮತ್ತೆ ಮಾತಾಡಲಿಲ್ಲ.
ಮನೆಗೆ ಬಂದ ಮೇಷ್ಟರು ಮಗಳ ಕೋಣೆಯಲ್ಲಿ ಏನು ಎಂಬುದು ಗೊತ್ತಿಲ್ಲದೆಯೂ ಏತಕ್ಕಾಗಿಯೋ ಹುಡುಕಾಡಿದರು. ಗೋಡೆಗೆ ನೇತುಹಾಕಿದ ಪೃಥ್ವಿಕಾಳ ಬಟ್ಟೆಗಳನ್ನೂ, ಮುಕ್ತಾಯದ ಹಂತದಲ್ಲಿದ್ದ ಅವಳ ಹೊಸ ಪೇಂಟಿಂಗನ್ನೂ, ಗೋಡೆಗೆ ಹಚ್ಚಿದ ಅವಳ ಇಷ್ಟದ ಸ್ಟೆಫಿಗ್ರಾಫ್‌ಳ ಪೋಸ್ಟರನ್ನೂ ನೋಡುತ್ತಾ ಮೇಷ್ಟ್ರಿಗೆ ಮಗಳು ಒಳಗೆಲ್ಲೋ ಸ್ನಾನ ಮಾಡುತ್ತಿರಬಹುದು ಅಷ್ಟೇ ಎಂದೆನಿಸಿಬಿಟ್ಟಿತು. ಆದರೆ ಸಂಜೆಯಾದರೂ ಪೃಥ್ವಿಕಳ ಸುಳಿವೇ ಇಲ್ಲದಿರಲು ಮನೆಯ ಉಷ್ಣತೆ ನಿಧಾನವಾಗಿಯೇ ಏರ ತೊಡಗಿತು. ಮನೆಯ ಹೊರಗೆ ಒಳಗೆ ಮತ್ತೆ ಗೇಟಿನವರೆಗೂ ಹೋಗಿ ಬಗ್ಗಿ ಬೀದಿಯ ಅಂಚಿನವರೆಗೂ ದೃಷ್ಟಿ ಹಾಯಿಸಿ ಮಾಡುತ್ತಿದ್ದ ಮೇಷ್ಟ್ರಿಗೆ ಇನ್ನೇನು ಅಳಲು ಸಿದ್ಧವಾಗಿ ನಿಂತಿರುವ ತಮ್ಮ ಹೆಂಡತಿಯತ್ತ ನೋಡುವ ಧೈರ್ಯವಾಗಲಿಲ್ಲ.
ಸ್ವಲ್ಪ ಹೊತ್ತಿನ ಬಳಿಕ ಒಳಗೆ ಹೋಗಿ ಪ್ಯಾಂಟು ಧರಿಸಿ ಚಪ್ಪಲಿ ಮೆಟ್ಟಿಕೊಂಡು ಪತ್ನಿಗೆ `ನೋಡು, ಪುಚ್ಚಿ ಅಂಥವಳಲ್ಲ , ನೀನು ಧೈರ್ಯವಾಗಿರು. ನಾನು ಅವಳ ಗೆಳತಿಯರ ಮನೆಗಳಲ್ಲಿ ವಿಚಾರಿಸುತ್ತೀನಿ’ ಎಂದು ಹೇಳಿ ಮನೆಯಿಂದ ಹೊರ ಬಿದ್ದರು. ಟಿವಿಯಲ್ಲಿ ಮೆಗಾಸೀರಿಯಲ್ ನೋಡುತ್ತಾ ಕುಳಿತಿದ್ದ ದಪ್ಪನೆಯ ಹೆಂಗಸರ ಬೆಳಗ್ಗೆಯಿಂದಾ ಕಾಣ್ತಾಯಿಲ್ವಾ? ರಾತ್ರಿ ಇದ್ದಳಾ? ನಿಮಗೆ ಹೇಳದೇ ಹೋದಳಾ? ಎಂಬಂಥ ರಾಗದ ಪ್ರಶ್ನೆಗಳನ್ನು ಎದುರಿಸಲಾಗದೆ ಕಂಗಾಲಾಗಿ ಬೇಗನೆ ಮನೆಗೆ ತಿರುಗಿ ಬಂದ ಮೇಷ್ಟರು ತೀರ ನಿಶ್ಯಕ್ತರಾಗಿದ್ದರು. ಮಬ್ಬುಗತ್ತಲಲ್ಲಿ ಮನೆಯ ಬಾಗಿನಲ್ಲಿ ಎದುರುಬದುರು ಮೌನವಾಗಿ ಕುಳಿತ ದಂಪತಿಗಳಿಗೆ ತಾವು ಕಾಯುತ್ತಾ ಕುಳಿತಿರುವುದು ಮಗಳಿಗಾಗಿಯೋ ಅಥವಾ ಮಗಳ ಕುರಿತ ಸುದ್ದಿಗಾಗಿಯೋ ಎಂಬಂಥ ವಿಚಿತ್ರ ಅನುಮಾನವಾಯಿತು.
ಯಾವ ಕ್ಷಣವನ್ನು ಎದುರಿಸಲು ದಂಪತಿಗಳು ದೇವರಲ್ಲಿ ಧೈರ್ಯ ಬೇಡುತ್ತಾ ಕುಳಿತಿದ್ದರೋ ಆ ಕ್ಷಣ ಬಂದೇಬಿಟ್ಟಿತು. ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಪೃಥ್ವಿಕಾಳ ಗೆಳತಿ ಎಂದು ಹೇಳಿಕೊಂಡು ಬಂದ ಆ ಹಸಿರು ಲಂಗದ ಹುಡುಗಿ ರೂಪದಲ್ಲಿ . ಅವಳು ಹೇಳಿದ್ದರ ಸಾರಾಂಶವಿಷ್ಟೇ: ಹಿಂದೀ ಮಧ್ಯಮಾ ಪರೀಕ್ಷೆಯ ತಯಾರಿಗೆ ಪದ್ಮನಾಭ ಎಂಬುವನ ಹತ್ತಿರ ಟ್ಯೂಷನ್‌ಗೆಂದು ಹೋಗುತ್ತಿದ್ದ ಪೃಥ್ವಿಕಾ ಕಳೆದೆರಡು ತಿಂಗಳಿನಿಂದ ಅವನನ್ನೇ ಪ್ರೀತಿಸತೊಡಗಿದ್ದಳು. ಮತ್ತು ಮನೆಯಲ್ಲಿ ಹೇಳುವ ಧೈರ್ಯವಾಗದೆ ಈ ದಿನ ಬೆಳಿಗ್ಗೆ ಅವನೊಡನೆ ಎಲ್ಲಿಗೋ ಓಡಿಹೋಗಿದ್ದಳು.
ಹಸಿರು ಲಂಗದ ಹುಡುಗಿ ಯಾವಾಗ ಹೋದಳೋ ತಿಳಿಯಲಿಲ್ಲ.ಮಾಸ್ತರು ಆಕಾಶವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟರು. ಏನೊಂದೂ ಮಾತಾಡದೆ. ಹಿನ್ನೆಲೆಗೆ ಶಾರದಮ್ಮನ ಮುಸಿಮುಸಿ ಅಳು ಇತ್ತು. ಹಾಗೆ ಅದೆಷ್ಟು ಹೊತ್ತು ಕುಳಿತಿದ್ದರೋ ಮೇಷ್ಟರು ಒಮ್ಮೆಲೆ ಪತ್ನಿಯೆಡೆಗೆ ತಿರುಗಿ ಗಡುಸಾದ ದನಿಯಲ್ಲಿ , `ಹೀಗೇ ಅಳ್ತಾ ಕೂತಿರ್ತೀಯಾ ಇಲ್ಲಾ ಎದ್ದು ಅಡಿಗೆ ಮಾಡ್ತೀಯಾ’ ಎಂದು ರೇಗಿದರು. ಆಕೆ ಕುಳಿತಲ್ಲಿಂದ ಏಳದೆ ಅಳುವುದನ್ನು ಮುಂದುವರೆಸಲು ಮೇಷ್ಟ್ರು ವಿಚಿತ್ರ ದನಿಯಲ್ಲಿ ಚೀರಿದರು, `ಯಾವ ಕತ್ತೆ ಮುಂಡೆ ಎಲ್ಲಿ ಹಾಳಾದರೆ ನಂಗೇನು?ನೀನೇನು ಎದ್ದು ಅಡಿಗೆ ಮಾಡ್ತೀಯೋ ಇಲ್ಲ ಗ್ರಹಚಾರ ಬಿಡಿಸ್ಬೇಕೋ?’ ಶಾರದಮ್ಮ ಕಣ್ಣೊರೆಸಿಕೊಳ್ಳುತ್ತಾ ಎದ್ದು ನಡೆದ ಎಷ್ಟೋ ಹೊತ್ತಿನ ನಂತರವೂ ಮೇಷ್ಟ್ರು ಕಂಪಿಸುತ್ತಲೇ ಇದ್ದರು.
    

ಪೃಥ್ವಿಕಾ-ಪುಚ್ಚಿ-ಗೋಪಾಲಯ್ಯ ಮೇಷ್ಟ್ರ ಮುದ್ದಿನ ಒಬ್ಬಳೇ ಮಗಳು. ಅಮ್ಮನಿಗಿಂತ ಅಪ್ಪನನ್ನೇ ಹಚ್ಚಿಕೊಂಡು ಬೆಳೆದ ಹುಡುಗಿ. ಅವಳು ಚಿಕ್ಕವಳಿದ್ದಾಗ ಮೇಷ್ಟ್ರು ತಮ್ಮ ಮಿತ್ರ ವಿಜಯಾ ಬ್ಯಾಂಕ್ ಉದ್ಯೋಗಿ ಸುಬ್ರಮಣ್ಯಂ ಅವರು ಎಲ್ಲಿಂದಲೋ ತರಿಸುತ್ತಿದ್ದ ಸೋವಿಯಟ್ ರಷ್ಯಾದ ನುಣುಪು ಹಾಳೆಗಳ ಬಣ್ಣದ ಚಿತ್ರದ ಪುಸ್ತಕಗಳನ್ನು ಮಗಳಿಗೋಸ್ಕರ ಬೇಡಿ ತರುತ್ತಿದ್ದರು. ಅದರಲ್ಲಿನ ಚಿತ್ರಗಳನ್ನು ನೋಡುವುದು, ನುಣುಪು ಹಾಳೆಗಳನ್ನು ತನ್ನ ನುಣುಪು ಕೆನ್ನೆಗಳಿಗೆ ಒತ್ತಿಕೊಳ್ಳುವುದು ಎಂದರೆ ಪುಟ್ಟ ಪೃಥ್ವಿಕಾಗೆ ಎಲ್ಲಿಲ್ಲದ ಖುಷಿ. ಮಗಳಿಗೆ ಚಿತ್ರಕಲೆಯಲ್ಲಿನ ಆಸಕ್ತಿಯನ್ನು ಕಂಡ ಮಾಸ್ತರು ಅವಳು ನಾಲ್ಕನೇ ಕ್ಲಾಸಿನಲ್ಲಿರುವಾಗ ಒಂದು ದಿನ ಬಣ್ಣದ ಕ್ರೆಯಾನ್ಸ್ ತಂದುಕೊಟ್ಟಿದ್ದರು. ಪೃಥ್ವಿಕಾ ಅವನ್ನು ತೆಗೆದುಕೊಂಡು ಮೇಷ್ಟ್ರ ನೋಟ್ಸ್ ಆಫ್ ಲೆಸೆನ್ ಪುಸ್ತಕದಲ್ಲಿ ದೊಡ್ಡ ಹಸಿರು ಗಿಳಿಯ ಚಿತ್ರ ಮೂಡಿಸಿದ್ದಳು. ಅವತ್ತೇ ಇರಬೇಕು ಮೇಷ್ಟ್ರು ಮೊದಲ ಬಾರಿಗೆ ಮಗಳಿಗೆ ಹೊಡೆದದ್ದು.

 

 

 

ಥಟ್ ಅಂತ ಹೇಳಿ

ಚಂದನದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ‘ಥಟ್ ಅಂತ ಹೇಳಿ’. ಈ ಕಾರ್ಯಕ್ರಮ ದ ಉಸ್ತುವಾರಿ ವಹಿಸಿರುವ ನಾ ಸೋಮೇಶ್ವರ ಅವರು ಅಲ್ಲಿಯ ನೋಟವನ್ನು ನೀಡಲೆಂದೇ ಒಂದು ಬ್ಲಾಗ್ ಆರಂಭಿಸಿದ್ದಾರೆ.

ವಿವರ ಹಾಗೂ ಇನ್ನಷ್ಟು ಫೋಟೋಗಳಿಗಾಗಿ ‘ಓದುಬಜಾರ್’ ಗೆ ಭೇಟಿ ಕೊಡಿ

dscf24371

ಒಂದು ವಿದ್ಯಮಾನ

program-pgr-shailesh

ಸ್ಪ್ರೈಟ್ ಕುಡೀತೀಯಾ…?

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ

‘ಪ್ರೊಫೈಲ್ ನಲ್ಲಿ ರೆಡ್ ವೈನ್’ ಓದಿದಾಗಿನಿಂದ ನನಗೆ ಬರೆಯಲೇಬೇಕೆನಿಸಿದೆ. ಯಾರಾದರೂ ಗೊಲ್ಕೊಂಡಾ ರೆಡ್ ವೈನ್ ಎಂದ ಕೂಡಲೇ ನನ್ನ ಕಿವಿ ನೆಟ್ಟಗಾಗುತ್ತದೆ. ಹೆಸರು ಕೇಳಿಯೇ ಖುಷಿಯಾಗುತ್ತದೆ. ಸೌಮ್ಯಸ್ವಭಾವದ ಈ ಪಾನೀಯಕ್ಕೆ ಜನ, ಸಮಾಜ ಕ್ರಿಮಿನಲ್ ಪಟ್ಟ ಕಟ್ಟಿರುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಅದನ್ನು ಅಪ್ಪಿಕೊಂಡಿರುವುದನ್ನು ಬರೆಯಬೇಕೆನ್ನಿಸುತ್ತದೆ.

ಗೋಲ್ಕೊಂಡಾ ಇಷ್ಟ ಪಟ್ಟ ಸಂದರ್ಭಗಳನ್ನು ಹಂಚಿಕೊಳ್ಳುವ ಮುನ್ನ ಅದಕ್ಕೆ ವೇದಿಕೆ ಸೃಷ್ಟಿಯಾಗಿದ್ದು ಹೇಗೆ ಎಂಬುದನ್ನು ವಿವರಿಸಲೇ ಬೇಕು. ಆಗ ನಾವೊಂದಿಷ್ಟು ಜನ ಶಿವಮೊಗ್ಗದಲ್ಲಿದ್ವಿ. ಎರಡು ತಿಂಗಳ ಅಸೈನ್ ಮೆಂಟ್. ನಮ್ಮ ಟೀಮ್ ನಲ್ಲಿ ಹಿರಿಕಿರಿಯರು ಎನ್ನದೇ ಎಲ್ಲರೂ ಇದ್ದರು. ದಿನನಿತ್ಯದ ಕೆಲಸ ಮುಗಿದ ನಂತರ ನಾವು ಸಂಜೆ ಹೊತ್ತು ಅಲ್ಲಿ ಇಲ್ಲಿ ಸುತ್ತೋದು ವಾಡಿಕೆಯಾಗಿತ್ತು.. ನಮ್ಮ ಟೀಮ್ ಗೆ ಕಾರ್ಪೋರೆಟ್ ಸಂಸ್ಕೃತಿ ಇದ್ದ ಮಹಿಳೆಯೊಬ್ರು ಸಂಪನ್ಮೂಲ ವ್ಯಕ್ತಿಯಾಗಿದ್ದುದು, ಅವರ ಕುಟುಂಬವು ಶಿವಮೊಗ್ಗದಲ್ಲಿಯೇ ಇದ್ದ ಕಾರಣ ಆ ಕುಟುಂಬದೊಂದಿಗೆ ನಮ್ಮ ಪರಿಚಯ ಆಗಿತ್ತು. ಅವರ ಹೆಸರು ಸೀಮಾ ಅಂಥ ಇಟ್ಟುಕೊಳ್ಳಿ.

il_430xn7582846

ನಾವು ಶಿವಮೊಗ್ಗೆಗೆ ಕೆಲವೇ ದಿನಗಳ ಅತಿಥಿಯಾದ ಕಾರಣ ನಮ್ಮನ್ನು ಅವರು ಆಗಾಗ ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು. ಆ ಮನೆಯಲ್ಲಿ ಭಾನುವಾರದ ದಿನ ಕಿಟ್ಟಿಪಾರ್ಟಿಗಳು ನಡೆಯುತ್ತಿದ್ದವು. ಹೆಂಗಸರು ಸಾಮಾನ್ಯವಾಗಿ ಜಿನ್, ರೆಡ್ ವೈನ್ ಹೀಗೆ ಲೈಟ್ ಅಂಥ ಕರೆಸಿಕೊಂಡಿರೋ ಪಾನೀಯಗಳನ್ನು ಸೇವಿಸೋರು. ಅಂಥ ಸಂಪ್ರದಾಯ ತೊರೆದ ತೀರಾ ಹೈಫೈ ಸಂಸ್ಕೃತಿಯವರಲ್ಲದಿದ್ದರೂ ಎಲ್ಲರೂ ಸೇರಿದಷ್ಟು ಹೊತ್ತು ಸಾಕಷ್ಟು ತಮಾಷೆ ಇರುತ್ತಿತ್ತು. ಬಿಡುವಿದ್ದಾಗ ನಾನು ನನ್ನ ಗೆಳತಿ ಆಗಾಗ ಅವರ ಮನೆಗೆ ಹೋಗೋದು, ಊಟ ಮಾಡೋದು ಇವೆಲ್ಲಾ ಆಗುತ್ತಿತ್ತು.

ನನ್ನ ಗೆಳತಿ, ಅನಿತಾ ಅಂತ ಇರ್ಲಿ. ತೀರ್ಥ ಕುಡಿದ್ರೆ ಥಂಡಿ, ಪ್ರಸಾದ ತಿಂದ್ರೆ ಉಷ್ಣ ಎನ್ನೋ ಅವ್ಳ ಮೂಗು ಯಾವಾಗ್ಲೂ ಸೊರಗುಟ್ಟತ್ತಲೇ ಇರುತ್ತಿತ್ತು. ಧೂಳಾಗಲ್ಲ, ಪೆಟ್ರೊಲ್ ವಾಸನೆ ಆಗಲ್ಲ, ಥಂಡಿ ಆಗಲ್ಲ, ಬಿಸಿಲು ಆಗಲ್ಲ ದಿನದ 24 ಘಂಟೆ ನೆಗಡಿ, ನೆಗಡಿ. ಯಾರಾದ್ರೂ ಅವಳ ಎದುರು ಕಸಗುಡಿಸೋಕೆ ಬಂದ್ರೆ ನೆಗೆದುಬಿಡೋಳು. ಮೂಗಾದ್ರೂ ಕುಯ್ಕೊಂಡು ಬಿಡೆ ಎಂದ್ರೆ ಹಾಳಾಗ್ಲಿ ಬಿಡು ಎನ್ನುತ್ತಿದ್ದಳು. ಇವಳಿಗೆ ಇವಳ ಥಂಡಿಗೆ ಏನಾದ್ರೂ ಒಂದು ಮಾಡಲೇ ಬೇಕು ಎನ್ನೋ ಹುಚ್ಚು ನನ್ನ ತಲೆ ಸೇರಿತ್ತು. ಅಂದು ಸೀಮಾ ಮನೆಗೆ ಹೋದವಳು, ಇವಳ ಮೂಗಿನ ಸಮಸ್ಯೆ ವಿವರಿಸಿದೆ. ಅವಳೂ ಸ್ವಲ್ಪ ಕೀಟಲೆ. ಈ ಸಾರಿ ಕಿಟ್ಟಿ ಪಾರ್ಟಿಗೆ ಬರ್ತಿರಲ್ಲಾ ಆವಾಗ ಏನಾದ್ರೂ ಮಾಡೋಣ ಬಿಡು ಎಂದು ಕಣ್ಣುಮಿಟುಕಿದಳು. ಸರಿ ನನಗೆ ಅರ್ಥವಾಯ್ತು. ಹೆಂಗಿರಬಹುದು ನೆನಪಿಸಿಕೊಂಡೇ ನಕ್ಕು ನಕ್ಕು ಸುಸ್ತಾದೆವು.

ಆ ಭಾನುವಾರ ಬಂದೇ ಬಿಟ್ಟಿತ್ತು. ಬಾರೇ ಹೋಗೋಣ ಎಂದೆ ಆಯ್ತು ಎಂದಳು ಅನಿತಾ. ಸಂಜೆ ಆರು ಘಂಟೆಗೆ ಸಾಕಷ್ಟು ಹೆಣ್ಣುಮಕ್ಕಳು ಸೇರಿದ್ದರು. ತಿನ್ನೋಕೆ ಸ್ಟಾರ್ಟರ್ಸ್ ಒಂದೋಂದೆ ಸರಬರಾಜಾಗುತ್ತಿತ್ತು. ಇವಳು ಪಕ್ಕಾ ಸಸ್ಯಾಹಾರಿ. ಅವಳಿಗೆಂದೇ ವೆಜಿಟೆಬಲ್ ಐಟೆಮ್ಸ್ ರೆಡಿ ಮಾಡಿದ್ದಳು. ಅಲ್ಲಿದ್ದ ಕೆಲವರು ಜಿನ್, ರೆಡ್ ವೈನ್ ಎಂಜಾಯ್ ಮಾಡತೊಡಗಿದ್ದರು. ಸಂಜೆ ಏಳಾಗುತ್ತಿದ್ದಂತೆ ಇವಳ ಮೂಗು ಸುರಿಯತೊಡಗಿತ್ತು. ಸರಿಯಾದ ಸಮಯ ಎಂದುಕೊಂಡು ಸ್ವಲ್ಪ ಸ್ಪ್ರೈಟ್ ಕುಡಿ ಎನ್ನುತ್ತಾಳೆ ಸೀಮಾ. ನಂಗೆ ಮೊದಲೇ ಮೂಗು ಸುರಿತಾ ಇದೆ. ಏನಾಗೊಲ್ಲ ಸರಿ ಹೋಗತ್ತೆ ಸೀಮಾ ಒತ್ತಾಯ ಸರಿ…ಅಂಥ ಒಂದೇ ಗುಟುಕಿಗೆ ಅನಿತಾ ಅದನ್ನು ಕುಡಿದುಬಿಡುತ್ತಾಳೆ.

ಇನ್ನೂ ಅನಿತಾಳನ್ನು ನೋಡುವ ಸರದಿ ಎಲ್ಲರದ್ದೂ. ಸಕತ್ತಾಗಿದೆ ಸ್ಪ್ರೈಟ್…ಇನ್ನೊಂದು ಚೂರು ಎನ್ನತ್ತಾಳೆ. ಆಯ್ತು ಇನ್ನೊಂದಿಷ್ಟು ಕೊಡ್ತಾಳೆ ಸೀಮಾ. ಅದು ಮುಗಿಯುತ್ತದೆ ಇನ್ನೂ ಬೇಕೆನ್ನುತ್ತದೆ ಪ್ರಾಣಿ. ಸಾಕು ಊಟ ಮಾಡಿ ಸೀಮಾ ಆರ್ಡರ್ ಮಾಡುತ್ತಾಳೆ. ಅಲ್ಲಿಂದ ಅನಿತಾ ಮಾತು ಆರಂಭವಾಗುತ್ತದೆ. ನಂಗ್ಯಾಕೋ ತುಂಬಾ ಖುಷಿಯಾಗ್ತಾ ಇದೆ. ನನ್ನ ಕೋಲ್ಡ್ ಎಲ್ಲಾ ಹೋದಂಗಿದೆ. ಚೆನ್ನಾಗಿ ಉಸಿರಾಡೋಕೂ ಆಗ್ತಾ ಇದೆ. ಐ ಎಮ್ ಫಿಲಿಂಗ್ ಗ್ರೇಟ್.. ನಿಜಕ್ಕೂ ಗ್ರೇಟ್ ಅನ್ನಿಸ್ತಾ ಇದೆಯಾ…ಎಲ್ಲರೂ ನಗುತ್ತಾರೆ. ಯಾಕೋ ನಂಗೆ ಕುಣಿಯೋಣ ಅನ್ನಿಸ್ತಾ ಇದೆ. ಬೆಳಿಗ್ಗೆಯಿಂದ ತಲೆ ಭಾರ ಇತ್ತು ಈಗ ಹಗುರ ಎನ್ನಿಸ್ತಾ ಇದೆ. ಆದ್ರೂ ನಂಗ್ಯಾಕೋ ಡೌಟು…ಇದು ರೆಗ್ಯುಲರ್ ಸ್ಪ್ರೈಟ್ ಥರ ಇಲ್ಲ ಕಣೆ. ….ಹೀಗೆ ಸುಮಾರು ಹೊತ್ತು ಅವಳ ಮಾತು ಮುಂದುವರಿಯುತ್ತದೆ.

ಆಶ್ಚರ್ಯ ಎಂದ್ರೆ ಅದರ ಬಿಸಿಗೋ ಏನೋ ಅವಳ ಮೂಗು ಸೊರಗುಟ್ಟುವುದು ತಾತ್ಕಾಲಿಕ ಶಮನ ಕಂಡಿತ್ತು. ಒಂಚೂರು ಏರಿದ್ದ ನಶೆ ಇಳಿದ ಬಳಿಕ ಅನಿತಾ ಸುಮ್ಮನೆ ತನ್ನ ಪಾಡಿಗೆ ತಾನೂ ನಕ್ಕು ಈಗ ಹೇಳಿ ಸ್ಪ್ರೈಟ್ ನಲ್ಲಿ ಏನು ಮಿಕ್ಸ್ ಮಾಡಿದ್ರಿ ಅಂತ ಸೀಮಾಳ ಕಿವಿ ಹಿಂಡುತ್ತಾಳೆ. ಏನಿಲ್ಲ ಸ್ವಲ್ಪ ಜಿನ್ ಮಿಕ್ಸ್ ಮಾಡಿದ್ದೆ.ಬೇಜಾರಾ ಏನೂ ಇಲ್ಲ ತುಂಬಾ ಖುಷಿಯಾಯ್ತು. ನೋಡು ನನ್ನ ಮೂಗು ಸುರಿಯೋದು ನಿಂತು ಬಿಟ್ಟಿದೆ. ಇನ್ಮುಂದೆ ದಿನಾ ಒಂದು ರೌಂಡ್ ಈ ಕಡೆ ಬಂದು ಹೋಗ್ತಿನಿ ಕಣೆ. ಏನೂ ಬೇಡಾ. ಸುಮ್ಮನೆ ತಮಾಷೆಗೆ ಇರ್ಲಿ ಅಂಥ. ಇದು ಲೇಡಿಸ್ ಡ್ರಿಂಕ್ ಅಷ್ಟೇ. ನಾನು ಏನೇನೋ ಅಂದ್ಕೊಂಡಿದ್ದೆ. ಇಷ್ಟ್ಟೊಂದು ರುಚಿಯಾಗಿರುತ್ತೆ ಅಂದ್ಕೊಂಡಿರಲಿಲ್ಲ. ಸ್ಪ್ರೈಟ್ ಮಿಕ್ಸ್ ಮಾಡಿದ್ದಕ್ಕೆ ಸಿಹಿಯಾಗಿದೆ. ಇಲ್ದಿದ್ರೆ ಕಹಿ ಇರುತ್ತೆ. ಯಾವೂದು ಅತಿ ಆಗ್ಬಾರ್ದು. ಇದನ್ನು ಕುಡಿದ ಮಾತ್ರಕ್ಕೆ ನಿನ್ನ ಮೂಗು ಸುರಿಯೋದು ನಿಂತ್ಹೋಗತ್ತೆ ಅಂತ ಅಲ್ಲ. ಸ್ವಲ್ಪ ಕಿಕ್ ಇತ್ತಲ್ಲ.ಅದಕ್ಕೆ ಸ್ವಲ್ಪ ಛೆಂಜ್ ಅನ್ನಿಸ್ತಷ್ಚೇ. ತುಂಬಾ ಸಿರೀಯಸ್ ಆಗಿ ಏನೂ ತೆಗೆದುಕೊಳ್ಳಬೇಡ ಎಂದಿದ್ದಳು ಸೀಮಾ. ಹೇಳದೇ ಕೊಟ್ಟಿದ್ದಕ್ಕೆ ಸಾರಿ. ಕೋಪ ಮಾಡ್ಕೋಬೇಡ. ಇಷ್ಟು ದಿನ ಇಂಥದ್ದೊಂದಿದೆ ಅಂಥಾನೆ ನಂಗೆ ಗೊತ್ತಿರ್ಲಿಲ್ಲ. ಥ್ಯಾಂಕ್ಸ್ ಕಣೆ ಎಂದಿದ್ದಳು.

ಮಾರನೆ ದಿನವೂ ಅನಿತಾ ಜಿನ್ ತಂದ ಖುಷಿಯನ್ನು ವರ್ಣಿಸುವುದು ಮುಂದುವರಿದಿತ್ತು. ಅದಾದ ನಂತರ ಸೀಮಾ ಅವಳಿಗೆ ಜಿನ್ ಕೊಟ್ಟಿದ್ದಾಗಲೀ, ಅಥವಾ ಸ್ವತಹ ಅನಿತಾ ಅವಳಿಗೆ ಕೇಳುವುದಾಗಲಿ ಆಗಲಿಲ್ಲ. ಆದರೂ ಆಗಾಗ ನಾವು ಆ ಪ್ರಸಂಗ ನೆನಪಿಸಿಕೊಂಡು ಅವಳಿಗೆ ಹಾಸ್ಯ ಮಾಡುತ್ತಿದ್ವಿ. ಈಗಲೂ ಅನಿತಾ ಸಿಕ್ಕಾಗ ಆಗಾಗ ಕೇಳುತ್ತೇನೆ…

ಸ್ಪ್ರೈಟ್ ಕುಡೀತೀಯಾ….

(ಅನಿತಾ ಅಷ್ಟೊಂದು ಖುಷಿ ಪಟ್ಟ ಮೇಲೆ ನಾನ್ಯಾಕೆ ರುಚಿ ನೋಡಬಾರದು ಎಂದು ತುಂಬಾ ಸಲ ನನಗೆ ಅನ್ನಿಸತೊಡಗಿತ್ತು. ಆದರೆ ನಾನಾಗಿಯೇ ಕೇಳೋದು ಹೇಗೆ ಎಂದು ಸುಮ್ಮನಾಗಿದ್ದೆ. ಇಂಥ ಯಾವುದೇ ಪಾನೀಯವನ್ನು ನಾನು ಮುಟ್ಟಿದವಳಲ್ಲ ಅಥವಾ ನನ್ನ ಸಂಸ್ಕೃತಿಯೂ ಅದಲ್ಲ ಅಂತ ನಾನು ಘೋಷಿಸದಿದ್ದರೂ ಬೇರೆಯವರೂ ಹಾಗೆ ನನ್ನ ಬಗ್ಗೆ ತಿಳಿದುಕೊಂಡ ಕಾರಣ ಅತ್ತ ಕೇಳಲೂ ಆಗದೆ ಬಿಡಲೂ ಆಗದೆ ಗೊಂದಲದ ಸ್ಥಿತಿಯಲ್ಲಿದ್ದೆ.

ಮುಂದೆ ಎಲ್ಲಾದರೂ ಒಂದು ದಿನ ಅವಕಾಶ ಬಂದೇ ಬರುತ್ತೆ ಅನ್ನೋ ವಿಶ್ವಾಸ. ಆಗ ಪರಿಚಯವಾಗಿದ್ದೇ ಗೋಲ್ಕೊಂಡಾ ವೈನ್. ಮುಂದಿನ ಭಾಗದಲ್ಲಿ ಈ ವೈನ್ ಮತ್ತು ನನ್ನ ಸಂಬಂಧ ಗಾಢವಾಗಿದ್ದನ್ನ ವಿವರಿಸ್ತೀನಿ)

ಈಶಾನ್ಯೆ ಬರೆಯುತ್ತಾರೆ..

ಮೂರನೆಯ ದಿನ – ಫಕ್ದಿಂಗ್ ವರೆಗೆ

agni-air-to-lukla

ನಮ್ಮ ಲೀಡರ್ ವಸುಮತಿ. ಅವರ ಬಗ್ಗೆ ಬರೆಯದೆ ಇರುವುದು ಅನ್ಯಾಯ. ನಮ್ಮ ಗುಂಪಿನಲ್ಲಿ ಅವರ ಮಗಳು ಸ್ಮಿತ, ಮಗ ಶರತ್ ಮತ್ತು ಅವರ ಸೋದರನ ಮಗಳು ತನ್ವಿ, ಮೂರೂ ಜನರಿದ್ದರು. ಎಲ್ಲರೂ ಮಜಾ ಮಾಡುವವರು ಹಾಗೂ ಒಳ್ಳೆಯ ಜನರು. ಆದರೆ ವಸುಮತಿಯವರು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ವ್ಯಕ್ತಿ. ಇದರಿಂದಾಗಿಯೇ ಅವರಿಗೆ ತುಂಬ ಹಗೆಗಳು. ಸೈನ್ಯದಲ್ಲಿದ್ದ ಅವರ ಗಂಡ ಹೇಳುವಂತೆ ’ನನಗೇ ಒಂದೊಂದು ಸಲ, ನಾನಲ್ಲ ಇವಳೇ ಸೈನ್ಯದಲ್ಲಿ ಇದ್ದಿದ್ದು ಅನ್ನಿಸುತ್ತದೆ’ ಎಂಬಂತಹ ಶಿಸ್ತಿನ ಸಿಪಾಯಿ. ಇದರಿಂದ ಬಹಳ ಸಲ ಗುಂಪಿನಲ್ಲಿ ಕಸಿವಿಸಿ ನಡೆಯುತ್ತಿತ್ತು. ಆದರೆ, ಅಂತಹದವರೊಬ್ಬರಿದ್ದರೆ, ಈ ರೀತಿಒಂದು ಟ್ರೆಕ್ ಸುಲಭಸಾಧ್ಯ. ವಸುಮತಿಯವರು ನಮಗೆ ಸಮಯಪಾಲನೆ ಬಗ್ಗೆ ಯಾವಾಗಲೂ ಹೇಳುತ್ತಲೇ ಇರುತ್ತಿದ್ದರು. ಯಾರಾದರೂ ತಡ ಮಾಡಿದರೆ ನಾನು ಅವರನ್ನು ಹಿಂತಿರುಗಿ ಕಳುಹಿಸುತ್ತೇನೆ ಎಂದೇ ಹೇಳುತ್ತಿದ್ದರು. ಆವರು ಹೀಗೆ ಹೇಳಿದಾಗಲೆಲ್ಲಾ, ’ಅದು ನನಗಲ್ಲ’ ಎಂದೇ ಎಣಿಸುತ್ತಿದ್ದೆ.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಜೀವ ಜಾಲ

+++

 

ಜರ್ನಿ ಟು ಹಂಪಿ

raviajjipura_mode
ಅವತ್ತು ಶುಕ್ರವಾರ. ಸಮಯ ರಾತ್ರಿ ಹತ್ತೂವರೆ.
ಹನ್ನೊಂದು ಜನರ ಪುಂಡ ಪಡೆಯನ್ನು ತುಂಬಿಕೊಂಡ ಹಂಪಿ ಎಕ್ಸ್ಪ್ರೆಸ್ ಹೊಸಪೇಟೆಯೆಡೆಗೆ ಶಿಳ್ಳೆ ಹಾಕುತ್ತಾ ಸಾಗಿತ್ತು. ನಮ್ಮ ಮೈಮನದ ತುಂಬೆಲ್ಲ ಜೋಷ್ ಜೋಷ್ ಮತ್ತು ಸಿಫರ್್ ಜೋಷ್. ಬೆನ್ನಿಗಿದ್ದ ಬ್ಯಾಗುಗಳನ್ನು ಒಗೆದು ಎಲ್ಲರಂತೆ ಬತರ್್ ಹತ್ತಿ ಮಲಗಿ ಗೊರಕೆ ಹೊಡೆಯಲಿಲ್ಲ. ರಾತ್ರಿ ಒಂದರ ತನಕ ಹರಟೆ, ಜೋಕು, ಅಂತ್ಯಾಕ್ಷರಿ ಎಲ್ಲಾ ನಿರಾತಂಕವಾಗಿ ಸಾಗಿತ್ತು. ಯಾರೋ ರಿಟೈಡರ್್ ಆಫೀಸರ್ ಒಬ್ಬರು ನಮ್ಮ ನಡುವೆ ತಗಲಿಹಾಕಿಕೊಂಡ್ರು. ತೋಳಗಳ ನಡುವೆ ಕುರಿ ತಗಲಿಬಿದ್ದಂಗಾಗಿತ್ತು ಅವರ ಸ್ಥಿತಿ. ಅವರೇನೂ ಕಡಿಮೆ ಇಲ್ಲ ಬಿಡಿ. ಮಾತು ಅಂದ್ರೆ ಸಾಕು ಸೇರಿಗೆ ಸವ್ವಾ ಸೇರು ಅಂತಾರಲ್ಲ ಅಂಥವರು. ಕೊನೆಗೆ ನಮ್ಮ ಚೀಕಲಾ, ಸರ್ ಮಲಗಿ ನೀವು. ವಯಸ್ಸಾಗಿದೆ. ಜಾಸ್ತಿ ಮಾತಾಡಿದ್ರೆ ಹೃದಯ ಬೇರೆ ನಿಮಗೆ ಇರೋದ್ರಿಂದ ತೊಂದ್ರೆ ಆದೀತು ಅಂತ ಮಲಗಿಸಿದಳು. ಅವರು ಆಗಲೂ ನೀವೆಲ್ಲ ಜರ್ನಲಿಸ್ಟ್ ಅಂದ್ರಲ್ಲ ಪಗಾರ ಜೋರೈತೇನು ಅಂದ್ರು. ಭಾಳ ಕೊಡ್ತೇವಿ ಅಂದ್ರು. ನಾವೇ ಸ್ವಲ್ಪ ಕಡಿಮೆ ಇಸಿಕೊಂತಾ ಇದೀವಿ ಅಂದ್ವಿ. 
ಸಂಪೂರ್ಣ ಓದಿಗೆ ಭೇಟಿ ಕೊಡಿ: ನದಿ ಪ್ರೀತಿ 

ಲಂಕೇಶ್ ಅವರ ಪದ್ಯ ಓದಿದರೆ ಕಿ ರಂ ಥರಾ ಓದಬೇಕು

ಬೇಂದ್ರೆ ಪದ್ಯ ಓದಿದರೆ ಕಿ ರಂ ಥರಾ ಓದಬೇಕು ಅಂತ ಕೆಲದಿನಗಳ ಹಿಂದೆ ಬಾಗೇಶ್ರೀ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದರು. ಸುಚಿತ್ರಾ ಆಪ್ತ ಸಮೂಹದ ಎದುರು ಕಿ ರಂ ಬೇಂದ್ರೆಯವರನ್ನು ತೆರೆದಿಟ್ಟ ರೀತಿಗೆ ಸಂದ ಪ್ರಶಂಸೆ ಅದು. ಕಿ ರಂ ಅವರ ಕಾವ್ಯ ಪ್ರೀತಿ ಎಲ್ಲರಿಗೂ ಗೊತ್ತಿರುವಂತಹದು.

ದಶಕಗಳ ಕಾಲ ಕಾವ್ಯವನ್ನು ಒಬ್ಬ ತಪಸ್ವಿಯಂತೆ ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವವರು ಅವರು. ಲಂಕೇಶ್ ಕವಿತೆಗಳನ್ನು ಅವರು ಓದುವ ಪರಿಯೂ ಅಷ್ಟೆ. ಅವರ ಓದಿನಲ್ಲಿ ಒಂದೊಂದು ಕವಿತೆಯೂ ಪಡೆದುಕೊಳ್ಳುತ್ತಾ ಹೋಗುವ ಹೊಸ ವಿನ್ಯಾಸ, ಬಿಚ್ಚಿಡುವ ಅರ್ಥಗಳು ಹಲವು.

‘ಕಾವ್ಯಮಂಡಲ’ ಕಟ್ಟಿ ಕಾವ್ಯದ ನಾದವನ್ನು ಹಿಡಿದ ಕಿ ರಂ ಅವರು ಲಂಕೇಶ್ ಜೊತೆಗಿದ್ದ ಒಂದು ಅಪರೂಪದ ಫೋಟೋ ಇಲ್ಲಿದೆ.

lan

Previous Older Entries

%d bloggers like this: