ಸಂಚಯ ಕಾವ್ಯ ಮತ್ತು ಲೇಖನ ಸ್ಪರ್ಧೆ

 

ನಂ. 100, 2ನೇ ಮುಖ್ಯರಸ್ತೆ, 6ನೇ ಬ್ಲಾಕ್, 3ನೇ ಹಂತ, 3ನೇ ಘಟ್ಟ, ಬನಶಂಕರಿ

ಬೆಂಗಳೂರು – 560 085

ಫೋನ್ ನಂ. 080-26791925 ಮೊಬೈಲ್: 98440 63514

prahlad118@yahoo.com

ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಚಯ ಸಾಹಿತ್ಯ ಪತ್ರಿಕೆಯು ಈ ವರ್ಷವೂ ಕನ್ನಡದ ಕಾವ್ಯ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಿದೆ.

ಕಾವ್ಯ ಸ್ಪರ್ಧೆ

ಇದರಲ್ಲಿ ಭಾಗವಹಿಸುವವರು ತಮ್ಮ ಸ್ವಂತ ರಚನೆಯ ಎರಡು ಕವಿತೆಗಳನ್ನು ಕಳುಹಿಸಬೇಕು. ಅನುವಾದಗಳಾಗಲೀ, ಈಗಾಗಲೇ ಪ್ರಕಟಗೊಂಡಿರುವ ಕವಿತೆಗಳಿಗಾಗಲೀ ಅವಕಾಶವಿಲ್ಲ.

 

ಲೇಖನ ಸ್ಪರ್ಧೆ

ಈ ಸ್ಪರ್ಧೆಗೆ ಕೊಟ್ಟಿರುವ ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 15 ಪುಟಗಳನ್ನು ಮೀರದ ಒಂದು ಲೇಖನ ಕಳುಹಿಸಬಹುದು.

ಲೇಖನ ಸ್ಪರ್ಧೆಯ ವಿಷಯಗಳು

ದ.ರಾ.ಬೇಂದ್ರೆ ಅವರ ಕವಿತೆಯೊಂದರ ಚರ್ಚೆ

ಗಾಂಧೀಜಿ ಅವರ `ಹಿಂದ್ ಸ್ವರಾಜ್’ ಪುಸ್ತಕ ಮತ್ತು ಅದರ ಪ್ರಸ್ತುತತೆ

ಜಾರುವ ಕಾಲದಲ್ಲಿ ನನ್ನ ಊರಿನ ಚಿತ್ರಗಳು

ಕರ್ಣಾಟಕದ ರಾಜಕಾರಣದ ದಿಕ್ಕು-ದಿಸೆ

ಇವತ್ತಿನ ಕನ್ನಡದ ಹೊಸ ಬರಹಗಾರರ ಎದುರಿನ ಸವಾಲುಗಳು

 

ಸ್ಪರ್ಧೆಯ ನಿಯಮಗಳು

ಬರಹಗಳು ಸ್ವತಂತ್ರವಾಗಿದ್ದು, ಎಲ್ಲೂ ಪ್ರಕಟಗೊಂಡಿರಬಾರದು ಸ್

ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಹಾಗೂ ವಯೋಮಿತಿಗಳು ಇಲ್ಲ.

ಸ್ಪರ್ಧೆಗೆ ಕಳುಹಿಸಲಾದ ಹಸ್ತಪ್ರತಿಗಳನ್ನು ವಾಪಸ್ಸು ಕಳುಹಿಸಲಾಗುವುದಿಲ್ಲ.

ಹಸ್ತಪ್ರತಿಯ ಜೊತೆಗೆ ಲೇಖಕರ ಹೆಸರು, ಸಂಪರ್ಕ ವಿಳಾಸಗಳನ್ನು ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಬಹುಮಾನಗಳು ಪುಸ್ತಕ ರೂಪದ್ದಾಗಿದ್ದು ತೀರ್ಪ್ರುಗಾರರ ತೀರ್ಮಾನವೇ ಅಂತಿಮ.  ಆಯ್ದ ಬಹುಮಾನಿತ ಬರಹಗಳು ಸಂಚಯ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತದೆ.

 

ಬಹುಮಾನ ವಿತರಣೆ ಜನವರಿ 31, 2009ರಂದು ಬೆಂಗಳೂರಿನಲ್ಲಿ ನಡೆಯುವ `ಕವಿದಿನ’ದ ಕಾರ್ಯಕ್ರಮದಲ್ಲಿ ನಡೆಯಲಿದೆ. ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ನವೆಂಬರ್ 30, 2008

ಬರಹಗಳನ್ನು ಕಳುಹಿಸಬೇಕಾದ ಸಂಪರ್ಕ ವಿಳಾಸ   ಕೇರಾಫ್ ಜೆನ್ ಹೈಜಿನಿಕ್ಸ್, ನಂ. 86, 8ನೇ ಅಡ್ಡರಸ್ತೆ, ಅಶೋಕನಗರ, ಬನಶಂಕರಿ 1ನೇ ಹಂತ, ಬೆಂಗಳೂರು – 560 050

ಜೋಗಿ ಕಹಾನಿ

 

ಅದೇ ನನ್ನ ಉತ್ತರ

ನೂರು ಪತ್ರ ಬರೆದಿದ್ದೀನಿ. ಒಂದಕ್ಕೂ ಉತ್ತರ ಬರೆದಿಲ್ಲ.

ಶಿಷ್ಯ ಆಕ್ಷೇಪಿಸುತ್ತಾ ಗೊಣಗಿಕೊಂಡ. ಗುರು ಹೇಳಿದ:

ಅದೇ ನನ್ನ ಉತ್ತರ.

ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ

 

‘ಮೌನ ಕಣಿವೆ’ ಸುರಗಿ ಅವರ ಬ್ಲಾಗ್. ಸುರಗಿ ಯಾರು? ಈ ಪ್ರಶ್ನೆ ಬ್ಲಾಗ್ ಪ್ರಪಂಚದಲ್ಲಿ ಓಡಾಡುತ್ತಲೇ ಇದೆ. ಅನಾಮಿಕತೆ ಉಳಿಸಿಕೊಳ್ಳುವುದರ ಹಿಂದೆ ಇರುವ ಸ್ವಾತಂತ್ರ್ಯವನ್ನು ಸುರಗಿ ಇಲ್ಲಿ ವಿವರಿಸಿದ್ದಾರೆ. ಈ ಹಿಂದೆ ಎನಿಗ್ಮಾ ಬಳಗ ಈ ಅನಾಮಿಕತೆಯ ಬಗ್ಗೆ ಬರೆದ ಬರವಣಿಗೆಗೆ ಇದು ಪೂರಕ ಓದು-
ಕೆಲವು ಜನ ಮೆಸೇಜ್ ಮಾಡಿ ’ಸುರಗಿ ನಿಮ್ಮ ನಿಜವಾದ ಹೆಸರಾ?’ ಎಂದು ಕೇಳಿದ್ದಾರೆ. ಹೆಸರಿನಲ್ಲೇನಿದೆ ಮಹಾ ಎಂದುಕೊಂಡರೂ, ಎಲ್ಲಾ ಇರುವುದು ಹೆಸರಲ್ಲೇ ಎಂಬುದು ನನಗೆ ಗೊತ್ತಿದೆ. 

ಸಾರ್ವಜನಿಕ ಬದುಕಿನಲ್ಲಿ, ಸಮಾಜದಲ್ಲಿ ನಾವು ’ಎನೋ’ ಆಗಿರುತ್ತೇವೆ. ನಾವು ಆಡುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ’ನಮ್ಮವರ’ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹಾಗಾಗಿ ಅಳೆದು, ತೂಗಿ ಮಾತಾಡುತ್ತೇವೆ. ಆದರೆ ಹೇಳಲಾರದ ದುಃಖ-ದುಮ್ಮಾನಗಳು, ಆಸೆ-ಆಕಾಂಕ್ಷೆಗಳು, ಸಿಟ್ಟು-ಸೆಡವುಗಳು ಮನಸ್ಸಿನೊಳಗೆ ಹಾಗೇ ಉಳಿದು ಬಿಡುತ್ತಲ್ಲ, ಅದಕ್ಕೇನು ಮಾಡೋಣ?

’ಡೈರಿ ಬರೆದು ಬಿಡಿ’ ಅಂದು ಬಿಡಬಹುದು. ಆದರೆ, ಅದು ಖಾಸಗಿ ಹಂತದಲ್ಲೇ ಉಳಿದು ಬಿಡುತ್ತದೆ. ತನ್ನ ಕ್ರಿಯೆಗಳನ್ನು ಬೇರೆಯವರು ಗಮನಿಸಬೇಕು ಎಂಬುದು ಮನುಷ್ಯ ಸಹಜ ಗುಣ. ಹಾಗಾಗಿ ಬ್ಲಾಗ್ ಬರೆಯಲು ಆರಂಭಿಸಿದೆ. ಇದು ’ನನ್ನೊಡನೆ ನಾನು’ ಮಾತಾಡಿಕೊಂಡಂತೆ. ಇದನ್ನೇ ನಾನು ನನ್ನ ಬ್ಲಾಗ್ ಬರವಣಿಗೆಯ ಆರಂಭದಲ್ಲಿ ಹೇಳಿಕೊಂಡಿದ್ದೇನೆ.

’ಮನಸ್ಸಿಗೆ ತೋಚಿದಂತೆ ಬರೆಯಲು ಬ್ಲಾಗೇನು ಪರ್ಸನಲ್ ಡೈರಿಯಾ?’ ಎಂದು ವಿಜಯ ಕರ್ನಾಟಕದಲ್ಲಿ ಲೇಖಕರೊಬ್ಬರು ಪ್ರಶ್ಣಿಸಿದ್ದಾರೆ. ಹೌದು, ಒಂದು ರೀತಿಯಲ್ಲಿ ಅದು ಪರ್ಸನಲ್ ಡೈರಿಯೇ. ಯಾರೂ ಓದುಗರಿಲ್ಲದಿದ್ದರೂ ನಾನು ಮನಸ್ಸು ಬಂದಾಗಲೆಲ್ಲಾ ಬರಿತಾನೇ ಇರ್ತಿನಿ. ಇಷ್ಟಕ್ಕೂ ಬರವಣಿಗೆ ಅನ್ನೊದು ಬಿಡುಗಡೆ. ಅದು ಲೇಖಕನ ಮಡುಗಟ್ಟಿದ ಭಾವನೆಗಳ ಅಭಿವ್ಯಕ್ತಿ.

ಇಂತಹ ಬರವಣಿಗೆಯಲ್ಲಿ ಆತ್ಮಚರಿತ್ರೆಯ ಛಾಯೆಯಿರಬಹುದು। ಹೆಂಗಸರಲ್ಲಿ ಸ್ವಂತ ಐಡೆಂಟಿಟಿ ಇರುವವರು ಕಡಿಮೆ. ’ಇಂತಹವರ’ ಪತ್ನಿ, ಮಗಳು, ತಂಗಿ, ತಾಯಿ ಅಥವಾ ಗೆಳತಿ ಎಂದೇ ಗುರುತಿಸುತ್ತಾರೆ. ಅದರಲ್ಲೂ ಗಣ್ಯ ವ್ಯಕ್ತಿಯ ಪತ್ನಿಯಾಗಿದ್ದು, ಗಂಡನ ಕ್ಷೇತ್ರದಲ್ಲೇ ಚೂರು ಪಾರು ಹೆಸರು ಮಾಡಿದ್ದರೆ ಅವಳನ್ನು ಸಂಶಯದಿಂದಲೇ ನೋಡಲಾಗುತ್ತದೆ. ಪತಿಯ ನೆರಳಲ್ಲೆ ಪತ್ನಿಯ ಪ್ರತಿಭೆಯನ್ನು ಗುರುತಿಸಲಾಗುತ್ತದೆ.

ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ. ನನ್ನ ಬರಹ ಮಾತ್ರ ನಿಮ್ಮ ಮುಂದಿರುತ್ತದೆ. ಅದು ಮಾತ್ರ ನಿಮ್ಮನ್ನು ತಲುಪುತ್ತದೆ. ಸಮಾಜವನ್ನು ತಿದ್ದುವ, ಬದಲಿಸುವ ದೊಡ್ಡ ದೊಡ್ಡ ಹೊಣೆಗಾರಿಕೆಗಳು ಖ್ಯಾತ ನಾಮರಿಗೇ ಇರಲಿ.

ಕನ್ನಡದ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕಗಳು ನನ್ನ ಲೇಖನಗಳನ್ನು ಪ್ರಕಟಿಸಲಿಲ್ಲ. ಹಿಂದೆ ಪ್ರಕಟಿಸುತ್ತಿದ್ದವು. ಯಾಕಿರಬಹುದೆಂದು ಕೆದಕಿದಾಗ ಗೊತ್ತಾಗಿದ್ದು; ನಾನು ’ಇಂತವರ’ ಪತ್ನಿಯೆಂದು, ಮತ್ತೊಂದು ಕಾರಣ ಆ ಪತ್ರಿಕೆಯ ದ್ಯೇಯಧೋರಣೆಗಳಿಗೆ ವ್ಯತಿರಿಕ್ತವಾಗಿ ನನ್ನ ಬರಹ ಇದ್ದದ್ದು. ’ನಿಮ್ಮ ಬರಹದಲ್ಲಿ ಸತ್ವ ಇದ್ದಿರಲಾರದು ಬಿಡಿ’ ಎಂದು ನೀವನ್ನಬಹುದು. ಆದರೆ ಅದೇ ಬರಹಗಳನ್ನು ಪ್ರಜಾವಾಣಿ ಸಮೂಹ ಪ್ರಕಟಿಸಿತು.’ ಓ॥ಗೊತ್ತಾಯ್ತು ಬಿಡಿ ನೀವು ಎಲ್ಲಿ ಗುರುತಿಸಲ್ಪಡುತ್ತೀರಿ ’ ಅಂತ ರಾಗ ಎಳೆದ್ರಾ.. ಇದೇ ಸ್ವಾಮಿ, ಪೂರ್ವಗ್ರಹ ಅಂದ್ರೆ.

ಮೊನ್ನೆ ’ಕೆಂಡ ಸಂಪಿಗೆ’ಯಲ್ಲಿ ಜೋಗಿ ಬರೆದ ಬೈರಪ್ಪನವರ ಬರಹಕ್ಕೆ ಕಮೆಂಟ್ ಬರೆಯೋಣವೆಂದುಕೊಂಡೆ. ಯಾಕೆಂದರೆ ಬೈರಪ್ಪನವರ ಸ್ತ್ರೀ ಪಾತ್ರಗಳು ಜೋಗಿಗೆ ಕಾಡದಿರಬಹುದು. ಆದರೆ ನನಗಂತೂ ಕಾಡಿವೆ. ಅವರ ಸ್ತ್ರೀ ಪಾತ್ರಗಳು ಕಾದಂಬರಿಕಾರರನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತವೆ. ಕಾದಂಬರಿಕಾರ ಅವರನ್ನು ಉಸಿರುಗಟ್ಟಿಸಿದರೂ ನನ್ನಂಥ ಓದುಗಳಲ್ಲಿ ಅದು ಮರು ಜೀವ ಪಡೆದು ಚಿಗುರಿಕೊಳ್ಳುತ್ತದೆ.

ಆದರೆ ಬರೆಯಲಿಲ್ಲ. ಅಲ್ಲಿರುವ ಕಮೆಂಟ್ ರಾಶಿ ನೋಡಿ ಬೆರಗಾಗಿ ಹೋದೆ. ನಮ್ಮ ಪರಿಸರ ನಮ್ಮ ವ್ಯಕ್ತಿತ್ವವನು ರೂಪಿಸುತ್ತದೆ. ಓದು ಮತ್ತು ಅನುಭವ ಅದಕ್ಕೆ ಇನ್ನೊಂದು ಆಯಾಮ ನೀಡಬಹುದು. ಆದರೆ ನಮ್ಮದಲ್ಲದ ವ್ಯಕ್ತಿತ್ವವನ್ನು ಅರೋಪಿಸಿ ಜಗ್ಗಾಡಿದರೆ ನೋವಾಗುವುದಿಲ್ಲವೇ? ಜೋಗಿಯ ಬರವಣಿಗೆ ಹಿನ್ನೆಲೆಗೆ ಸರಿದು ಜೋಗಿ ’ಇಂಥವರು’, ಕಮೆಂಟ್ ಮಾಡಿದವರು ’ಇಂತವರಿಗೆ ಸಂಬಂದಿಸಿದವರು’ ಎಂಬುದರ ಮೇಲೆ ಚರ್ಚೆ ಮುಂದುವರಿಯುತ್ತಿತ್ತು. ಸೂಕ್ಷ ಮನಸ್ಸಿನವರಿಗೆ ಇದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.

ಯಾವುದೋ ಒಂದು ಸಮುದಾಯದ ಅಥವಾ ಸಿದ್ಧಾಂತದ ಚೌಕಟ್ಟಿನೊಳಗೆ ನನ್ನನ್ನು ನನಗೆ ಗುರುತಿಸಿಕೊಳ್ಳಲು ಸಾಧ್ಯವಾಗದು. ಆದರೆ ಪ್ರಭಾವಕ್ಕೊಳಗಾಗಬಹುದು. ಗುರುತಿಸಿಕೊಳ್ಳುವುದೇ ಅನಿವಾರ್ಯವಾದರೆ ಸ್ತ್ರೀವಾದಿಯಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಹಾಗಾಗಿ ’ ಇಂಥವರ’ ನೆರಳಲ್ಲಿ ಗುರುತಿಸಿಕೊಂಡರೆ ನಮ್ಮ ಐಡೆಂಟಿಟಿ ಮಸುಕಾಗುತ್ತದೆ. ಇಲ್ಲವೇ ಸಂಶಯಕ್ಕೊಳಗಾಗುತ್ತದೆ.

ಡಾರ್ಕ್ ರೂಂನಿಂದ ಬರೆದಾಗಲೂ ಕಿರಿಕಿರಿಯಾಗುವುದುಂಟು. ಸುಮಾರು ಒಂದು ತಿಂಗಳಿಗೂ ಹಿಂದೆ ನಾನು ಕೆಲವು ಪರಿಚಿತರಿಗೆ ಮೆಸೇಜ್ ಮಾಡಿ ನನ್ನ ಬ್ಲಾಗ್ ನೋಡುವಂತೆ ಮನವಿ ಮಾಡಿದ್ದೆ. ಇಮೇಲ್ ಗಿಂತಲೂ ಮೆಸೇಜ್ ಸುಲಭ ಅಂದುಕೊಂಡು ಮೊಬೈಲ್ ನಂಬರ್ ಪ್ರೋಪೈಲ್ ನಲ್ಲಿ ನೀಡಿದ್ದೆ. ಇಂಗ್ಲೀಷ್ ಪತ್ರಕರ್ತನೊಬ್ಬ ’ಲೀವಿಂಗ್ ಟುಗೆದರ್’ ಲೇಖನ ಬರೆದಾಗ ಎಚ್ಚೆತ್ತುಕೊಂಡ. ಬೆನ್ನು ಬಿಡದ ಬೇತಾಳದಂತೆ ಕಾಡತೊಡಗಿದ. ಅವನು ಇನ್ನಾರೋ ಪತ್ರಕರ್ತೆ ತಾನೆಂದು ಭಾವಿಸಿದನಂತೆ!

ಈ ಬ್ಲಾಗ್ ಮನುಷ್ಯ ಸ್ವಭಾವದ ಕೆಲವು ಮುಖಗಳನ್ನು ಪರಿಚಯ ಮಾಡಿಕೊಟ್ಟಿದೆ. ಅದಕ್ಕಾಗಿ ಕೃತಜ್ನತೆಯಿದೆ. ನಿಜದ ಬದುಕಿನಲ್ಲಿ ಎಲ್ಲವನ್ನೂ ಬಿಚ್ಚಿಟ್ಟು ಬದುಕಲಾಗದು. ಇಲ್ಲಾದರೆ ಅಡ್ಡಗೊಡೆಯಲ್ಲಿಟ್ಟ ದೀಪದಂತೆ ಹೇಳಿಕೊಳ್ಳಬಹುದು. ಹೇಳಿ ಹಗುರಾಗಬಹುದು. ಕೆಲವೊಮ್ಮೆ ಪ್ರತಿಕ್ರಿಯೆಯೂ ಸಿಗಬಹುದು. ಭಾವನೆಗಳ ವಿನಿಮಯಕ್ಕೆ ಇಲ್ಲಿ ಮುಕ್ತ ಅವಕಾಶವಿದೆ. ಓದುಗರ ಜೋತೆ ನೇರ ಸಂಪರ್ಕವಿರುವುದರಿಂದ ಬ್ಲಾಗ್ ಒಮ್ಮೊಮ್ಮೆ ಆಪ್ತ ಸಲಹಾ ಕೇಂದ್ರದಂತೆಯೂ ಕೆಲಸ ಮಾಡುತ್ತದೆ.

ನನ್ನದೊಂದು ಪುಟ್ಟ ಭಾವ ಪ್ರಪಂಚ. ಅಲ್ಲಿರುವುದು ನಾನು ಮತ್ತು ನನ್ನ ಭಾವನೆಗಳು ಮಾತ್ರ. ಅಲ್ಲಿಗೆ ಆಕ್ರಮಣವಾಗದಂತೆ ನಾನು ಎಚ್ಚರ ವಹಿಸುತ್ತೇನೆ. ’ನಿನಗೆ ನೀನೇ ಗೆಳೆಯ’ ಎಂಬ ಮಾತಿನಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ.

 

ಕಿ ರಂ ಮತ್ತು ಚಾಕಲೇಟು

ಭಯದ ಬಣ್ಣ ಹೇಗಿರುತ್ತದೆ?

`ಮೋಹನದಾಸ’ ಉದಯಪ್ರಕಾಶರ ನೀಳ್ಗತೆ. ಗಾತ್ರದ ದೃಷ್ಟಿಯಿಂದ ಇದನ್ನು ಕಾದಂಬರಿ ಎನ್ನಬಹುದಾದರೂ ನೀಳ್ಗತೆ ಎನ್ನುವುದೇ ಸೂಕ್ತ. ಇದನ್ನು ಹಿಂದಿಯಿಂದ ಅನುವಾದಿಸಿದವರು ಆರ್.ಪಿ.ಹೆಗಡೆ. ಇವರು `ತಿರೀಛ’ ಕತೆಯನ್ನು `ದೇಶಕಾಲ’ದಲ್ಲಿ ಓದಿ ಪ್ರಭಾವಿತರಾಗಿ ಉದಯಪ್ರಕಾಶರ `ಮೋಹನದಾಸ’ ಎಂಬ ನೀಳ್ಗತೆಯನ್ನು ತರಿಸಿ ಓದುತ್ತಾರೆ ಮತ್ತು ವಸ್ತು, ಶೈಲಿ, ತಂತ್ರದ ದೃಷ್ಟಿಯಿಂದ ಅದ್ಭುತವೆನಿಸುವ ಈ ನೀಳ್ಗತೆ ಕನ್ನಡಿಗರೆಲ್ಲರನ್ನು ತಲುಪಬೇಕೆಂಬ ಉದ್ದೇಶದಿಂದ ಅನುವಾದಿಸಲು ಮುಂದಾಗುತ್ತಾರೆ. ಆರ್.ಪಿ.ಹೆಗಡೆಯವರ ಈ ಘನ ಅಭಿರುಚಿಯ ಫಲಶ್ರುತಿ ಇದೀಗ ಲೋಹಿಯಾ ಪ್ರಕಾಶನದಿಂದಾಗಿ ನಮ್ಮೆಲ್ಲರ ಕೈಸೇರುವಂತಾಗಿರುವುದು ನಿಜಕ್ಕೂ ಅಭಿನಂದನೀಯ.

ಸಂಪೂರ್ಣ ಓದಿಗೆ ಭೇಟಿ ಕೊಡಿ- ಓದುವ ಹವ್ಯಾಸ  

+++

 

ಬೇಂದ್ರೆ ಪದ್ಯ ಓದಿದರೆ ಕೀರಂ ತರ ಓದಬೇಕು!

ಚಿತ್ರ : ಸುಶ್ರುತ ದೊಡ್ಡೇರಿ

ಕೀರಂ ಪದ್ಯವನ್ನು ಓದುವ ಬಗೆಯೆಂದರೆ ಪುಟ್ಟ ಮಗುವೊಂದು ಒಂದು ಬಾರ್ ಚಾಕಲೇಟನ್ನು ಪ್ರಪಂಚದ ಆನಂದವೆಲ್ಲ ಅದರಲ್ಲೇ ಅಡಕವಾಗಿದೆ ಎಂಬಂತೆ ತಿನ್ನುವ ಬಗೆಯಂತೆ. ಅದರಲ್ಲಿ ಒಂದು ಇನೊಸೆಂಟ್ ತನ್ಮಯತೆ ಇದೆ ಅನ್ನಿಸುತ್ತದೆ. ಪಾಂಡಿತ್ಯ ಕಣ್ಣಿಗೆ ರಾಚುವುದಿಲ್ಲ, ಪದಗಳಲ್ಲಿ ಜಾರ್ಗನ್ನುಗಳ ಭರಾಟೆ ಇರುವುದಿಲ್ಲ. ಸ್ವಲ್ಪ ಸ್ಪಾನಿಶ್ ಸಿನೆಮಾದ ಹಾಗೆಯೇ! 

ಸಂಪೂರ್ಣ ಓದಿಗೆ ಭೇಟಿ ಕೊಡಿ- ಬಾಗೇಶ್ರೀ 

%d bloggers like this: