ಫೋಟೋ ನೆಗೆಟಿವ್ ಮತ್ತು ಗುಬ್ಬಿಹಳ್ಳ

ಬ್ಯಾಂಡ್ ಸ್ಟಾಂಡ್ ನಲ್ಲಿ ‘ಪ್ರಕೃತಿ’

ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ ರಾವ್ ಸದಾ ‘ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ…’ ಗುಂಪಿಗೆ ಸೇರಿದವರು. ಹಾಗಾಗಿಯೇ ಪ್ರಕೃತಿ ಎಂಬ ತಂಡ ಕಟ್ಟಿಕೊಂಡಿದ್ದಾರೆ. ಐ ಟಿ,  ಕಾರ್ಪೊರೇಟ್ ಸಂಸ್ಥೆಗಳ ಕಿವಿಗೆ  ಕನ್ನಡದ ಕವಿತೆಗಳನ್ನು ಹಾಕುವ ಉತ್ಸಾಹದಲ್ಲಿದ್ದಾರೆ.

ಇದೂ ಅಲ್ಲದೆ ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನಲ್ಲಿ ಪ್ರತೀ ವಾರ ಸುಗಮ ಸಂಗೀತದ ಹಬ್ಬ ನಡೆಸುತ್ತಾರೆ. ಇದು ಹಬ್ಬ -ಯಾಕೆಂದರೆ ತಾವೇ ಒದ್ದಾಡಿ ಹಣ ಹಾಕಿ ಪೊಲೀಸರ ಹತ್ತಿರ ಪರದಾಡಿ ಲೈಸೆನ್ಸ್ ತಂದು ಗೀತೆಗಳು ಜನರಿಗೆ ತಲುಪುವಂತೆ ಮಾಡುತ್ತಾರೆ. ಅಂದ ಮಾತ್ರಕ್ಕೆ ಸುಮ್ಮನೆ ಯಾರನ್ನೋ ಕರೆಸಿ ನಾಮಕಾವಸ್ತೆ ಕಾರ್ಯಕ್ರಮ ಮಾಡುವುದಿಲ್ಲ. ಜನ ಕೇಳಬೇಕು ಎಂದು ಬಯಸುವ ಗಾಯಕರೇ ಅಲ್ಲಿರುತ್ತಾರೆ.

ಇಲ್ಲಿನ ಫೋಟೋಗಳೇ ಆ ಕಾರ್ಯಕ್ರಮದ ಅಭಿರುಚಿಗೆ ಸಾಕ್ಷಿ. ನಿಮ್ಮ ಬಳಿಗೂ ಈ ಕಾರ್ಯಕ್ರಮ ಬರಬೇಕಾದರೆ ಅಥವಾ ನೀವು ಬ್ಯಾಂಡ್ ಸ್ಟಾಂಡ್ ನತ್ತ ಹೋಗಬೇಕಾದರೆ ಈ ಫೋನ್ ನಂಬರ್ ಬಳಸಿ- 99453 68083

ಅಂದ ಹಾಗೆ ಈವಾರ ಅರ್ಚನಾ ಉಡುಪ  ಹಳೆಯ ಚಿತ್ರ ಗೀತೆಗಳಿಗೆ ದನಿ ನೀಡುತ್ತಾರೆ (೧೯ ರಂದು)
೨೬ ರಂದು ಬೇಂದ್ರೆ ಮೀಟ್ಸ್ ಕೈಲಾಸಂ ಪಲ್ಲವಿ ಮತ್ತು ರವಿ ಮೂರೂರ್ ಅವರಿಂದ, ನವೆಂಬರ್ ಎರಡರಂದು ಸಿ ಅಶ್ವಥ್ ಮೈಸೂರು ಮಲ್ಲಿಗೆಗೆ,  ೯ ರಂದು ದಿವ್ಯಾ ರಾಘವನ್ ಶಿಶು ಗೀತೆಗಳಿಗೆ, ೧೬ ರಂದು ಸುಪ್ರಿಯಾ ಆಚಾರ್ಯ ಭಾವ ಗೀತೆಗಳಿಗೆ, ೨೩ ರಂದು ಪುತ್ತೂರು ನರಸಿಂಹ ನಾಯಕ್ ದಾಸರ ಪದಗಳಿಗೆ ದನಿಯಾಗುತ್ತಾರೆ.

ಗೋಮೂತ್ರ: ಇನ್ನಷ್ಟು ಚರ್ಚೆಗೆ ಸ್ವಾಗತ

ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ಲೇಖನ ‘ಗೋಮೂತ್ರ: ಔಷಧವೋ?, ಅಪಮಾನವೋ?’ ಗೆ ಬಂದ ಪ್ರತಿಕ್ರಿಯೆ ಇಲ್ಲಿದೆ. ಇನ್ನಷ್ಟು ಚರ್ಚೆಗೆ ಸ್ವಾಗತ.

Nalini
nmaiya@hotmail.com |

It is high time somebody wrote an educative article on this subject! The use of gomutra is wide spread in Karnataka now! So many of my relatives are taking it! When you look at it objectively and scientifically it is quite clear that it is just an excretion of cow’s body same as human urine! Thanks for an informative article!

Shivaram Pailoor
shivarampailoor@gmail.com |

good piece of information..need to be thrown open to wider platform

subramani
etv.subbu@gmail.com |

ಲೇಖನದ ಮಾಹಿತಿ ತುಂಬಾ ಉಪಯುಕ್ತವಾಗಿದೆ.
ಸುಬ್ರಮಣಿ

manassu
manassina.maatu@gmail.com |

ಆದರೆ ಪ್ರಾಣಿಗಳ ಸಾಕಣೆಯಿಂದಾಗಿ ಪರಿಸರದ ಮೇಲೆ ಅಗಾಧವಾದ ಹೊರೆಯಾಗುವುದೆಂದೂ, ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.[36,37] ಆದ್ದರಿಂದ ಪ್ರಜ್ಞಾವಂತರೆಲ್ಲರೂ ಈ ಎಲ್ಲಾ ವಿಚಾರಗಳ ಬಗ್ಗೆ ವಸ್ತುನಿಷ್ಠವಾದ, ವೈಜ್ಞಾನಿಕವಾದ ಅಭಿಪ್ರಾಯವನ್ನು ತಳೆಯುವುದು ಅತ್ಯಗತ್ಯವಾಗಿದೆ.

ಮನುಶ್ಯನೂ ಕೂಡ ಪರಿಸರಕ್ಕೆ ಹೊರೆಯಾಗಿರಬೇಕಲ್ಲವೇ? ಆಗಿದ್ದಾನೆ. ತನ್ನ ಮುಗಿಯದ ಕೊಳ್ಳುಬಾಕತನದಿಂದ ಪರಿಸರವನ್ನು ಗುಡಿಸಿ ಗುಂಡಾರ ಮಾಡಿರುವುದು ಮನುಶ್ಯ ತಾನೆ? ಅಟ್ಟ ಹಾಸದಿಂದ ಮೆರೆದಾಡುತ ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕೊಂದು ತಿನ್ನುತ್ತ ನೆಲವನ್ನು ನರಕ ಮಾಡಿದವನು ಮನುಶ್ಯತಾನೆ? ಹೊಗೆಯುಗುಳುವ ಯಂತ್ರ ಕಂಡುಹಿಡಿದು ಕೋಟಿ ಕೇಜಿಗಟ್ಟಲೆ ಇಂಗಾಲದ ಡೈಆಕ್ಸಡನ್ನು ಗಾಳಿಯಲ್ಲಿ ಸೇರಿಸಿ ಬದುಕನ್ನು ಉಸಿರು ಕಟ್ಟಿಸಿದವನು ಮನುಶ್ಯತಾನೆ? ಆದುನಿಕತೆಯ ಹಣೆ ಪಟ್ಟಿ ಕಟ್ಟಕೊಂಡು ಇಂದು ಬಂದಿರುವ ಅಲೋಪತಿಯ ಮದ್ದುಗಳೆಶ್ಟು ಮರಣದ ಉರುಳುಗಳಾಗಿಲ್ಲ? ಅಂತಹ ಮರಣದ ಮದ್ದುಗಳನ್ನು ಅಮಾಯಕ ಜನಗಳ ಮೇಲೆ ಪ್ರಯೋಗ ನಡೆಸುತ್ತಿಲ್ಲ? ಕ್ಯಾನ್ಸರ್ ಬಂದಿರುವುದು ಈ ಆದುನಿಕ ಅಟ್ಟ ಹಾಸದಿಂದ ತಾನೆ? ಮಾನವನ ಕೂಳ ಬದುಕಿನಿಂದ ತಾನೆ? ಮತ್ತೆ ಮನುಶ್ಯರನ್ನು ಯಾಕೆ ಸಾಕಬೇಕು? ಸಾಲಾಗಿ ನಿಲ್ಲಿಸಿ ಕೊಂದು ಮನುಶ್ಯಸಂಕೆಯನ್ನು ಕಡಿಮೆ ಮಾಡುವುದನ್ನು ಈ ಆದುನಿಕ ರುವಾರಿಗಳೇಕೆ ಚಿಂತಿಸುತ್ತಿಲ್ಲ?
ಈ ಆದುನಿಕ ರುವಾರಿಗಳಿಗಿರುವುದು ಕ್ರಿಶ್ಚಿಯನ್ ಧರ್ಮದ ಹಿನ್ನೆಲೆ ಅನ್ನುವುದು ಮರೆಯಬೇಡ. ಗೋವುಗಳ ಬಗ್ಗೆ ಇಶ್ಟೆಲ್ಲ ಹೆಕ್ಕಿ ತಂದಿರುವ ನಿಮ್ಮ ಬರಹ, ವರದಿಗಿರುವ ಹಿನ್ನೆಲೆ ಕ್ರಿಶ್ಚಿಯನ್ ದರ್ಮದ ಕರಾಳ ಕೈ ಅನ್ನವುದನ್ನು ತಿಳಿಯದೇ ಹೇಳಹೊರಟಿರುವ ಮಂಕು ನಿಮ್ಮದು. ದಲಿತರ ಮೇಲೆ ನಡೆದಿರುವ ಕೀಳು ನಡವಳಿಕೆಯನ್ನು ಕಂಡಿಸಿ ಅದನ್ನು ನಿಲ್ಲಿಸುವುದರ ಬಗ್ಗೆ ತಿಳಿಯೋಣ. ಅದು ಬಿಟ್ಟು ನಂಬಿಕೆಗೆ ಕೊಡಲಿ ಇಡಲು ಹೊರಟ ನಿಮಗೆ ಒಂದು ಎದರು ಮಾತು.
@@
ಪ್ರಾಣಿಗಳ ಸಾಕಣೆಯಿಂದಾಗಿ ಪರಿಸರದ ಮೇಲೆ ಅಗಾಧವಾದ ಹೊರೆಯಾಗುವುದೆಂದೂ, ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ.

ಪ್ರಾಣಿಗಳಿಗಿಂತ ಮನುಶ್ಯನೇ ಪರಿಸರ ಹಾನಿಗೆ ಹೆಚ್ಚು ಕಾರಣ. ಯಾವ ಪ್ರಾಣಿಯೂ ಪರಿಸರ ಹಾನಿಯಾಗುವ ರೀತಿ ಬದುಕುತ್ತಿಲ್ಲ. ಅದು ಜೀವ ವೈವಿದ್ಯದ ಸಮತೋಲನ ಕಾಪಾಡುವದರಲ್ಲಿ ಒಂದು ಮುಕ್ಯ ಪಾತ್ರವಹಿಸಿವೆ. ಅಂದ ಮೇಲೆ ಈ ಮನುಶ್ಯನನ್ನು ಸಾಕುವುದು ಬದುಕಿಸುವುದರಲ್ಲಿ ಎಂತ ಒಳಿತಿದೆ? ಸಾಲಾಗಿ ನಿಲ್ಲಿಸಿ ಕೊಂದು ಬಿಡೋಣವೆ?

ಭಾರತದ ಗೋಮೂತ್ರ ಸಗಣಿಯ ಬಗ್ಗೆ ಅಲ್ಲಗಳೆಯುವ ನೀವು…ಆದುನಿಕ ದೇಶಗಳ ಪ್ಯಾರಸಿಟಾಮಲ್, ಬ್ರೂಫಿನ್, ಆಸ್ಪರೀನ್ ಎಂಬ ನೂರಾರು ವಿಷಗಳ ಬಗ್ಗೆ ಯಾಕೆ ಮಾತೆತ್ತಿಲ್ಲ? ಮುಂದುವರಿದ ದೇಶಗಳಲ್ಲಿ ಮಾರಾಟ ನಿಲ್ಲಿಸಿರುವ ಇಂತಹ ಸಾವಿರಾರು ಮದ್ದುಗಳು ಭಾರತದಲ್ಲಿ ಮಾರಾಟವಾಗುವುದರ ಬಗ್ಗೆ ನಿಮಗೆ ಕಾಣಿಸುವುದಿಲ್ಲವೇ? ಯಾಕೆ ಆ ನಿಟ್ಟಿನಲ್ಲಿ ಮಾತನಾಡುತ್ತಿಲ್ಲ?

(ಇಲ್ಲಿ ಈ ಪತ್ರದ ಒಂದು ಪ್ಯಾರಾವನ್ನು ಎಡಿಟ್ ಮಾಡಲಾಗಿದೆ. ಬೇಕು ಎನ್ನುವವರಿಗೆ ಇದನ್ನು ಇ ಮೇಲ್ ಮೂಲಕ ಕಳಿಸಲಾಗುವುದು. ಆದರೆ ಚರ್ಚೆ ಸಭ್ಯತೆ ಮೀರಿ ಹೋಗುವುದು ಬೇಡ ಎಂಬ ಕಾರಣಕ್ಕಾಗಿ ಮಾತ್ರ ಇಲ್ಲಿ ಹಾಕಲಾಗಿಲ್ಲ- ಸಂ)

ಸೋಗೆಮನೆ ಕಥೆ

ನಾಟಕ

ಪಾತ್ರಗಳೆಲ್ಲ ಹೊರಟು ಹೋದ ಮೇಲೆ ಬೆಳಕು ಆರಿತು.
ರಂಗದ ಎದುರು ನಿರ್ದೇಶಕ ಮಾತ್ರ.
ಮೊದಲು ಅವನಿಗನ್ನಿಸಿದ್ದು
‘ಪಾತ್ರಗಳಿಲ್ಲದೆಯೂ ನಾಟಕ ಸಾಧ್ಯವೇ?’
ನಂತರ ಅಂದುಕೊಂಡ
‘ನಾನೂ ಒಂದು ಪಾತ್ರವೆ?’
ಚಪ್ಪಾಳೆ ತಟ್ಟಿತು ಜಗತ್ತು

%d bloggers like this: