ನಿಸಾರ್ ಅಹ್ಮದ್ ಬರ್ತಾರೆ, ಖಂಡಿತಾ ಬನ್ನಿ

ಸೋಗೆಮನೆ ಕಥೆಗಳು

ನಾನು

ಬುಡ್ಡಿಯ ಬೆಳಕು ಅತ್ತಿಂದಿತ್ತ ಹೊಯ್ದಾಡುತ್ತಿತ್ತು.
ಗೋಡೆಯ ಮೇಲೆ ನರಿಗಳ ಹಿಂಡು ಎಕ್ಕದ ಗಿಡವಾಗಿ, ಎಕ್ಕದ ಗಿಡ ಕಾಗೆಯಾಗಿ, ಕಾಗೆ ಹಲ್ಲಿಯಾಗಿ, ಹಲ್ಲಿ ಮುಳ್ಳಾಗಿ…
ಹೇಳುವುದು ಮರೆತಿದ್ದೆ

ಅದು ನನ್ನದೇ ನೆರಳು

 

ಅವನ ಹಾದಿ

ದಖನ್ ದೇಶದಲ್ಲಿ ಬಹಳ ಹಿಂದೆ ನಡೆದ ಕಥೆ. ದರೋಡೆಕೋರನೊಬ್ಬನಿಗೆ ಹಾದಿಹೋಕರನ್ನು ದೋಚುವುದೇ ಕೆಲಸ. ತಮ್ಮಲ್ಲಿದ್ದ ಎಲ್ಲವನ್ನೂ ಅವರು ಕೊಡಬೇಕಿತ್ತು ಇಲ್ಲವೇ ಹೆಣವಾಗಬೇಕಿತ್ತು.  ಒಮ್ಮೊಮ್ಮೆ ಇವರ ತಂಡ ಇಡೀ ಹಳ್ಳಿಯನ್ನೇ ದೋಚುತ್ತಿತ್ತು.
ಅಂಥ ಒಂದು ಹಳ್ಳಿಯಲ್ಲಿ ಒಬ್ಬಳು. ದರೋಡೆಕೋರ ಅವಳನ್ನು ಹೊತ್ತೊಯ್ದ. ತಣಿಯುವಷ್ಟು ಪ್ರೇಮಿಸಿದ. ಒಂದು ದಿನ ಅದೆಂಥದೋ ದೊಡ್ಡ ಕಾಯಿಲೆ ಬಡಿದು ಅವಳು ಸತ್ತುಹೋದಳು. ಅವನಿಗೆ ಹುಚ್ಚು ಹಿಡಿಯುವುದೊಂದು ಬಾಕಿ. ತಾನು ಬಚ್ಚಿಟ್ಟದ್ದನ್ನೆಲ್ಲ ದಾನ ಮಾಡಿದ. ಸುಮ್ಮನೆ ಉದ್ದಕ್ಕೆ ನಡೆಯುತ್ತ ಹೋದ. ಹಲವು ದರೋಡೆಗಳನ್ನು ತಡೆದ. ಕಂಡವರಿಗೆ ಗಂಜಿ ಬೇಯಿಸಿ ಕೊಟ್ಟ.
ಹಾದಿಯಲ್ಲಿ ನಡೆಯುತ್ತಿದ್ದವನು ಇದ್ದಕ್ಕಿದಂತೆ ಜನರ ಎದೆಯೊಳಗೆ ನಡೆಯತೊಡಗಿದ. ಶತಮಾನಗಳನ್ನು ದಾಟಿದ.

ಅಕಾಲ‘ದಿಂದ ಆಯ್ದದ್ದು 

%d bloggers like this: