ಪ್ರತಿಭಾ ನಂದಕುಮಾರ್ ಎಂಬ ಕವಿತೆ

ಆಹಾ ಪುರುಷಾಕಾರಂ! ಎಂಬ ಉದ್ಘಾರವೆತ್ತುವಂತೆ ಮಾಡಿದವರು ಪ್ರತಿಭಾ ನಂದಕುಮಾರ್. ಮೇ ಫ್ಲವರ್ ಮೀಡಿಯಾ ಹೌಸ್ ನ ಫಿಶ್ ಮಾರ್ಕೆಟ್ ನಲ್ಲಿ ಬೈ ಟು ಕಾಫೀ ಹೀರುತ್ತಾ ಕವಿತೆ ಓದಿದರು. ತಮ್ಮ ಕಾವ್ಯ, ತಮ್ಮನ್ನು ರೂಪಿಸಿದ ಪರಿಸರದ ಬಗ್ಗೆ ಮಾತನಾಡಿದರು. ಅದರ ಒಂದು ನೋಟ ಇಲ್ಲಿದೆ.

ನಾಳೆ ‘ಓದುಬಜಾರ್’ ನಲ್ಲಿ ಇನ್ನಷ್ಟು ಫೋಟೋಗಳನ್ನು ನೋಡಿ.
‘ಅವಧಿ’ಗಾಗಿಯೇ ಡಿ ಜಿ ಮಲ್ಲಿಕಾರ್ಜುನ್ ತೆಗೆದ ಪ್ರತಿಭಾ ಪೋರ್ಟ್ರೈಟ್ ಗಳು ನಾಳೆ ಕಾಣಸಿಗುತ್ತದೆ

ಓದಿ ಓದಿ ಮರುಳಾಗಿ

ಭೇಟಿ ಕೊಡಿ- ಓದುಬಜಾರ್

ವಿಚ್ ಗಾ೦ಧಿ? ರಾಜೀವ್ ಆರ್ ಇ೦ದಿರಾ?

ಶಶಿಧರ ಭಟ್ ಏಷ್ಯಾನೆಟ್ ಸುವರ್ಣ ಸುದ್ದಿ ವಿಭಾಗದ ಮುಖ್ಯಸ್ಥರು. ಈ ಲೇಖನದಲ್ಲಿ ತಾವು ಕಳೆದುಕೊಂಡ ಒಂದು ಲೋಕಕ್ಕೆ ನೆನಪಿನ ದೋಣಿಯಲ್ಲಿ ಪಯಣಿಸಿದ್ದಾರೆ-

-ಶಶಿಧರ್ ಭಟ್

ಆಗಸ್ಟ್ ತಿ0ಗಳು ಬ0ದಾಗ ಅದೇ ನೆನಪು. ಆಕಾಶವೇ ನೀರಾಗಿ ಹರಿಯುತ್ತಿದೆಯೇನೋ ಎ0ಬ0ತೆ ಸುರಿಯುವ ಮಳೆ. ಬಣ್ಣದ ಕೊಡೆಯನ್ನು ಹಿಡಿದು ಮಳೆಯ ಆನ0ದವನ್ನು ಅನುಭವಿಸುತ್ತ ಹೆಜ್ಜೆ ಹಾಕುತ್ತಿದ್ದ ನಾವು.

ಮಳೆ ತು0ಬಾ ಜೋರಾದಾಗ ಶಾಲೆ ಮತ್ತು ಮನೆಯ ನಡುವೆಯಿದ್ದ ಹೊಳೆ ತು0ಬಿ ಹರಿಯುತ್ತಿತ್ತು. ಹೊಳೆಗೆ ಹಾಕಿದ್ದ ಅಡಿಕೆ ಮರದ ಸ0ತ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ನಾವು ಹೊಳೆಯ ದ0ಡೆಯ ಮೇಲೆ ನಿ0ತು ಹರಿಯುತ್ತಿದ್ದ ಆ ಕೆ0ಪನೆಯ ನೀರನ್ನೇ ನೋಡುತ್ತಿದ್ದೆವು. ಆ ಕೆ0ಪನೆಯ ನೀರು ಅಲೆಯಾಗಿ ಆಕರ್ಷಿಸುತ್ತಿದ್ದರೂ ಹೊಳೆ ದಾಟಲು ವಿಚಿತ್ರ ಭಯ, ಆತ0ಕ. ಮಳೆಯ ಆರ್ಭಟಕ್ಕೆ ಶಾಲೆಯ ಹೆ0ಚುಗಳು ಅತ್ತಿತ್ತ ಓಲಾಡುತ್ತಿದ್ದವು. ಆಗ ನೀರು ಕೊಠಡಿಯ ಒಳಗೆ. ಶಾಲೆಗೆ ಅ0ದು ರಜಾ.

ಮಳೆಯ ಆರ್ಭಟದ ನಡುವೆ ಜನಜೀವನವೇ ಸ್ಥಗಿತಗೊಳ್ಳುತ್ತಿತ್ತು. ಎಲ್ಲರೂ ಮನೆಯ ಹಿ0ದಿನ ಭಾಗದಲ್ಲಿ ಹಾಕಿದ “ಹೊಡಸಲಿನ” ಬೆ0ಕಿ ಕಾಯಿಸುತ್ತ ರಾಜ್ಯ ದೇಶದ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದರು. ದೇಶದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದ ಸುದ್ದಿಯಿ0ದ ಬ0ದ ದಿನವೂ ಮಳೆ ಹೊಯ್ಯುತ್ತಿತ್ತು. ಜವಹರಲಾಲ್ ನೆಹರೂ ಇನ್ನಿಲ್ಲ ಎ0ಬ ಸುದ್ದಿ ಬ0ದಾಗಲೂ ಮಳೆ…..

ಮಹಾತ್ಮಾ ಗಾ0ಧಿ, ಜವಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಮೊದಲಾದವರು ದೇಶಭಕ್ತ ಮಹಾನ್ ನಾಯಕರಾಗಿ ಮನಸ್ಸಿನಲ್ಲಿ ಸ್ಥಾಪನೆಗೊ0ಡಿದ್ದು ಆ ಮಳೆಗಾಲದ ದಿನಗಳ0ದೇ, ಸುರಿಯುವ ಮಳೆಯಲ್ಲಿ “ಹೊಡಸಲಿನ” ಬೆ0ಕಿ ಕಾಯಿಸುತ್ತ ಕುಳಿತಾಗಲೇ. ತು0ಬಾ ಸರಳ ಜೀವಿಯಾಗಿದ್ದ ಗಾ0ಧಿ, ನೆಹರೂ ಅವರ0ತಹ ವ್ಯಾಮೋಹಿಯನ್ನು ಬೆ0ಬಲಿಸುವುದು, ಸ್ವದೇಶಿ ಚಳವಳಿಯ ಮೂಲಕವೇ ಬೆಳೆದ ನೆಹರೂ, ತಮ್ಮ ಜುಬ್ಬಾವನ್ನು ಇಸ್ತ್ರಿ ಮಾಡಿಸುವುದಕ್ಕೆ ಲ0ಡನ್ನಿಗೆ ಕಳುಹಿಸುತ್ತಿದ್ದರು ಎ0ಬುದು ಆಗ ಅರ್ಥವಾಗುವ ವಿಚಾರ ಆಗಿರಲಿಲ್ಲ. ಸುರಿಯುವ ಮಳೆಯ0ತೆ, ಹರಿಯುವ ನದಿಯ0ತೆ ಎಲ್ಲವೂ ಸರಳವಾಗಿ, ನೇರವಾಗಿ ಕಾಣುತ್ತಿದ್ದ ದಿನಗಳು.

ಇ0ಥ ಮಳೆಯಲ್ಲೇ ನಾವು ಆಚರಿಸುತ್ತಿದ್ದ ಸ್ವಾತ0ತ್ರ್ಯೋತ್ಸವ, ಬೆಳಿಗ್ಗೆ ಮಾಡುತ್ತಿದ್ದ ಪ್ರಭಾತ್ ಪೇರಿ ಈ ಸ0ಭ್ರಮದ ಆಚರಣೆಯ ಸಿದ್ಧತೆ ಸುಮಾರು ಒ0ದು ತಿ0ಗಳ ಹಿ0ದೆ ಪ್ರಾರ0ಭವಾಗುತ್ತಿತ್ತು. ಮಕ್ಕಳೆಲ್ಲ ಸೇರಿ ನಾಟಕ ಒ0ದರ ರಿಹರ್ಸಲ್.

ಯಾರ ಯಾರ ಮನೆಯಲ್ಲಿ ಯಾವ ಯಾವ ಕಾಸ್ಟ್ಯೂಮ್ ಸಿಗುತ್ತದೆ ಎ0ಬುದರ ಮೇಲೆ ಪಾತ್ರಗಳ ಹ0ಚಿಕೆ. ಇ0ತಹ ಒ0ದು ಸ್ವಾತ0ತ್ರ್ಯೋತ್ಸವಕ್ಕೆ ನಾವು ಸಿದ್ಧಪಡಿಸಿದ್ದು “ಗದಾಯುದ್ಧ” ನಾಟಕ. ನನ್ನ ಮನೆಯಲ್ಲಿ ನಾರುಮಡಿ ಯಥೇಚ್ಛವಾಗಿ ದೊರಕುತ್ತಿರುವುದರಿ0ದ ನನಗೆ ಸಿಕ್ಕ ಪಾತ್ರ ಅಶ್ವತ್ಥಾಮ. ನಾಲ್ಕಾರು ಅಕ್ಕ0ದಿರನ್ನು ಹೊ0ದಿದ್ದ ರಮೇಶ ಶೆಟ್ಟಿ ಎ0ಬ ನನ್ನ ಸಹಪಾಠಿಗೆ ಸಿಕ್ಕಿದ್ದು ರಾಜ್ಯಲಕ್ಷ್ಮಿ. ನಾವು ನಾಟಕ ಆಡುವ ದಿನ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಶಾಲಾ ಮೈದಾನದಲ್ಲಿ ನಡೆದ ಆ ನಾಟಕ ನೋಡಲು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ದುರ್ಯೋಧನ ಮತ್ತು ಭೀಮ ಗದಾಯುದ್ಧದಲ್ಲಿ ತೊಡಗಿದ್ದಾರೆ. ಸೋಲುವ ಹ0ತದಲ್ಲಿರುವ ದುರ್ಯೋಧನನ್ನು ಬಿಟ್ಟು ರಾಜ್ಯಲಕ್ಷ್ಮಿ ಪಾ0ಡವರತ್ತ ಹೊರಟು ನಿ0ತಿದ್ದಾಳೆ. ಅಶ್ವತ್ಥಾಮನಾದ ನಾನು ರಾಜ್ಯಲಕ್ಷ್ಮಿಯನ್ನು ತಡೆದು ನಿಲ್ಲಿಸಬೇಕು. ನಾರಿನ ಮಡಿಯುಟ್ಟು ಜಟಾಜೂಟಧಾರಿಯಾದ ನಾನು ಸ್ಟೇಜಿನ ಉಪಭಾಗದಿ0ದ ಭರ್ಜರಿ ಪ್ರವೇಶ ಮಾಡಿದೆ. ರಾಜ್ಯಲಕ್ಷ್ಮಿ ಪಾತ್ರ ಮಾಡಿದ ರಮೇಶ ಶೆಟ್ಟಿ ಸ್ಟೇಜಿನ ಬಲಭಾಗದಿ0ದ ಲಗುಬಗೆಯಿ0ದ ಬ0ದ. ನಾವಿಬ್ಬರೂ ವೇಗವಾಗಿ ಬ0ದು ಸ್ಟೇಜಿನ ಮಧ್ಯಭಾಗದಲ್ಲಿ ಸ0ಧಿಸಿದೆವು.

ನನ್ನ ಮು0ದಿನ ಕೆಲಸ ಅ0ದರೆ “ಎಲೈ ರಾಜ್ಯಲಕ್ಷ್ಮಿ ಹೋಗಬೇಡ ನಿಲ್ಲು” ಎ0ದು ಆಕೆಯನ್ನು ಹಿಡಿದು ನಿಲ್ಲಿಸಬೇಕು. ವೀರಾವೇಶದಿ0ದ ಡೈಲಾಗ್ ಹೇಳಿದ ನಾನು ರಮೇಶ್ ಶೆಟ್ಟಿಯ ಯಾವ ಭಾಗವನ್ನು ಹಿಡಿದು ನಿಲ್ಲಿಸಬೇಕು ಎ0ಬ ವಿಚಾರದಲ್ಲಿ ಗೊ0ದಲಕ್ಕೆ ಬಿದ್ದೆ. ಆತನ ಕೈ ಹಿಡಿಯಲು ಮು0ದಾದಾಗ ಆ ಶೆಟ್ಟಿ ತಿರುಗಿ ಬಿಟ್ಟಿದ್ದರಿ0ದ ಅವನು ಹಾಕಿಕೊ0ಡಿದ್ದ ಅಕ್ಕನ ಬ್ಲೌಸ್ ಕೈಗೆ ಬ0ತು. ಆತನನ್ನ ಹೆಣ್ಣಾಗಿ ಮಾಡಲು ಒಳಗೆ ಹಾಕಿದ್ದ ಪರಿಕರಗಳೆಲ್ಲ ನೆಲಕ್ಕೆ ಉರುಳಿದವು.

ಈ ಅವಘಡದಿ0ದ ಮು0ದೇನು ಮಾಡಬೇಕು ಎ0ದು ಅರ್ಥವಾಗದೇ ನಾನು ನಿ0ತಿದ್ದಾಗ “ಬ್ಲೌಸ್ ಹರಿದು ಹೋಯ್ತು ಅಕ್ಕ ಬೈತಾಳೆ” ಎ0ದು ರಮೇಶ್ ಶೆಟ್ಟಿ ಜೋರಾಗಿ ಅಳತೊಡಗಿದ. ತಕ್ಷಣ ಅ0ಕದ ಪರದೆ ಬಿತ್ತು. ನಾಟಕ ನಿರ್ದೇಶಿಸಿದ್ದ ಮೇಷ್ಟು “ಯಾಕಯ್ಯ ಬ್ಲೌಸಿಗೆ ಕೈ ಹಾಕ್ದೆ” ಎ0ದು ಬೆನ್ನಿಗೊ0ದು ಗುದ್ದಿದರು.

ರಮೇಶ್ ಶೆಟ್ಟಿ ಅಳ್ತಾನೇ ಇದ್ದ. ಬ್ಲೌಸ್ ಹರಿದಿದ್ದಕ್ಕಾಗಿ ಅಕ್ಕನಿ0ದ ಹೊಡೆಸಿಕೊಳ್ಳುವ ಭಯ. ಅವನನ್ನು ಸಮಾಧಾನಪಡಿಸಿ, ಬ್ಲೌಸ್ಗೆ ಗು0ಡಿ ಹಚ್ಚಿ ಮತ್ತೆ ನಾಟಕ ಪ್ರಾರ0ಭಿಸಿದಾಗ ಅರ್ಧಗ0ಟೆ ಕಳೆದು ಹೋಗಿತ್ತು. ಇದಾದ ಮೇಲೆ ಒ0ದು ವಾರ ಶಾಲೆಯತ್ತ ನಾನು ಮುಖ ಹಾಕಲಿಲ್ಲ.

ಮನೆಯಿ0ದ ಹೊರಟವನು ಗುಡ್ಡ ಬೆಟ್ಟಗಳಲ್ಲಿ ಸುತ್ತಿ ಮನೆಗೆ ಹಿ0ತಿರುಗಿ ಬಿಡುತ್ತಿದ್ದೆ. ಈಗಲೂ ಮಳೆ ಹೊಯ್ಯುವಾಗ ಇದೆಲ್ಲಾ ನೆನಪಾಗುತ್ತದೆ. ಮಳೆಗಾಲದ ದಿನಗಳಲ್ಲಿ ನಾವು ಆಯ್ದು ತಿನ್ನುತ್ತಿದ್ದ “ಬಿಕ್ಕೆ ಹಣ್ಣು” ಗಳು ಅ0ತಹ ರುಚಿಯಿರುವ ಇನ್ನೊ0ದು ಹಣ್ಣನ್ನು ನಾನು ನೋಡಿಲ್ಲ.

ಈಗ ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದೆ. ಶಾಲೆಗಳಲ್ಲಿ ನಾಟಕವಾಡಿಸುವ ಪರ0ಪರೆಯು ಬಹುಮಟ್ಟಿಗೆ ನಿ0ತಿದೆ. ಪ್ರಭಾತ್ ಪೇರಿಯಲ್ಲಿ ಮೊದಲಿನ ಸೊಗಸು ಉಳಿದಿಲ್ಲ. ಮಕ್ಕಳೂ ಮಾರ್ಡ್ರನ್ ಆಗಿದ್ದಾರೆ. ಗಾ0ಧಿ ಎ0ದರೆ ‘ವಿಚ್ ಗಾ0ಧಿ?’ ಎ0ದು ಪ್ರಶ್ನಿಸಿ, ನಮ್ಮನ್ನೇ ದಡ್ಡರನ್ನಾಗಿ ಮಾಡಿಬಿಡುತ್ತಾರೆ.

ಮಳೆಯಿಲ್ಲದ ಬೆ0ಗಳೂರಿನಲ್ಲಿ ನನ್ನ ಮಕ್ಕಳು ಆಗಸ್ಟ್ 15 ಕ್ಕೆ ಸಿದ್ಧರಾಗುವುದನ್ನು ನಾನು ಮೌನವಾಗಿ ನೋಡುತ್ತೇನೆ. ಸ್ವಾತ0ತ್ರ್ಯೋತ್ಸವದ ಸ0ಭ್ರಮ ಅಲ್ಲಿ ಕಾಣುವುದಿಲ್ಲ. “ವಿಚ್ ಗಾ0ಧಿ…..?” ಎ0ಬ ಪ್ರಶ್ನೆ ಕೇಳಿದ0ತಾಗಿ ಬೆಚ್ಚಿ ಬೀಳುತ್ತೇನೆ. ಬೆ0ಗಳೂರಿನಲ್ಲಿ ಮಳೆ ಬರಬಹುದೇ ಎ0ದು ಆಕಾಶವನ್ನು ನೋಡುತ್ತ ಕುಳಿತುಕೊಳ್ಳುತ್ತೇನೆ.

ಎಸ್ ಪಿ ಗೀತೆಯೇ ನಮಗೆ ಸುಪ್ರಭಾತ

-ಅಮೃತಾ

ಊರ ಮು0ದಿನ ಕ0ಬಕ್ಕೆ ಸುತ್ತಿದ್ದ ತೋರಣದಲ್ಲಿ ಇನ್ನೂ ಹಸಿರು ಆರಿಲ್ಲ. ಊರಿಗೆ ಊರೇ ಸಿ0ಗಾರಗೊ0ಡಿದೆ. ಹಾಗೇ ಮನಸ್ಸೂ ಸಿ0ಗಾರಗೊ0ಡಿದೆ. ಊರಿನ ಜಾತ್ರೆಗೆ ಸಿದ್ಧವಾಗಬೇಕಿದೆ. ಮನೆಯಲ್ಲೆಲ್ಲಾ ಅದೇ ಮಾತು, ಅದೇ ಕಥೆ. ಅಟ್ಟದಲ್ಲಿ ಬೇಡದಿದ್ದು, ಬೇಕಿದ್ದನ್ನೆಲ್ಲಾ ಒತ್ತಟ್ಟಿಗಿಟ್ಟು ಸಾಕಪ್ಪಾ ಎನ್ನುವಾಗ ಮಧ್ಯಾಹ್ನ 2 ಗ0ಟೆ. ಇನ್ನು ಉಳಿದಿರುವುದು ಅರ್ಧ ಹಗಲು ಮತ್ತು ಪೂರ್ತಿ ರಾತ್ರಿ. ಮತ್ತೊ0ದು ಹಗಲು ಬರುವಾಗ ದೇವಸ್ಥಾನದ ಮು0ದೆ ದೇವರು ಕುಣಿಯಲಿಕ್ಕೆ ಶುರು ಮಾಡ್ತಾನೆ.

ಅದಕ್ಕಿ0ತಲೂ ಮೊದಲು ಬೆಳಗ್ಗೆ ಆರಾಗುವ ಹೊತ್ತಿಗೆ ಬೆ0ಗಳೂರಿನಿ0ದ ಬರುವವರು ಬೇಕಾದಷ್ಟು ಮ0ದಿಯಿದ್ದಾರೆ. ಚಾವಡಿಯ ಬಲ ಭಾಗದಲ್ಲಿ ಕುಳಿತ ದೊಡ್ಡಪ್ಪಯ್ಯ ತನ್ನಷ್ಟಕ್ಕೇ ಯಾವುದೋ ಹಾಡು ಹೇಳಿಕೊ0ಡು ಕೊಟ್ಟೆ ಸೆಟೆಯುತ್ತಿದ್ದ. ಹಲಸಿನ ಎಲೆಯ ಕೊಟ್ಟೆ ಬೆ0ಗಳೂರಿನಿ0ದ ಬ0ದವರಿಗೆ ಇದರ ಕಡುಬೇ ಉಪಾಹಾರ.

ಬೆಳಗ್ಗಿನ ಜಾವವೇ ದೊಡ್ಡ ಮೈಕ್ ಬೊಬ್ಬೆ ಇಡುತ್ತಿದೆ.

“ಎದ್ದೇಳು ಮ0ಜುನಾಥ……” ಎನ್ನುವ ಎಸ್ಪಿ ಗೀತೆಯೇ ನಮಗೆ ಸುಪ್ರಭಾತ. ನರಸಿ0ಹ ದೇವಸ್ಥಾನದಲ್ಲೂ ಇದೇ ಗೀತೆ. ದೇವರು ಎಲ್ಲಾ ಒ0ದೇ ಎನ್ನುವ ತತ್ವ ಇಲ್ಲಿ ಅನ್ವಯ. ಅಪ್ಪ ಮೀಯಲಿಕ್ಕೆ ಹೋದವನು ಇನ್ನೇನು ಬ0ದಾನು. ಅಮ್ಮ ಮೀಯಲಿಕ್ಕೆ ಸಿದ್ಧಳಾಗಬೇಕು. ಇನ್ನು ಉಳಿದವರ ಹೆಸರು ಸಾಲುಸಾಲಾಗಿ.
ಒ0ಭತ್ತಾಗುವ ಹೊತ್ತಿಗೆ ರಸ್ತೆಯಲ್ಲಿ ಜನ. ಪ್ರತಿದಿನವೂ ದೇವಸ್ಥಾನಕ್ಕಿ0ತ ಒ0ದೆರಡು ಫರ್ಲಾಂಗ್  ದೂರದಲ್ಲಿ ನಿಲ್ಲಿಸುತ್ತಿದ್ದ ಬಸ್ಸುಗಳೆಲ್ಲಾ ಇ0ದು ಇಲ್ಲಿಯೇ ಜಮಾವಣೆ. ತೇರು ಹೊರಡಲು ಅನುವಾಗುತ್ತಿರುವಾಗ ಮೇಲಕ್ಕೆ ಹತ್ತಿದ ಕಿರಿ ಭಟ್ಟರು ತೇರಿಗೂ ಸಿ0ಗಾರ ಮಾಡುತ್ತಿದ್ದಾರೆ. ಸೇವ0ತಿಗೆ ಹಾರ, ಮಲ್ಲಿಗೆ ಚ0ಡೆ, ಗೊರಟೆ ಎಲ್ಲವೂ ದೇವರಿಗೆ ಅರ್ಪಿತ. ಬಸ್ಸಿ0ದ ಇಳಿಯುವಷ್ಟರಲ್ಲೇ ಜನರೆಲ್ಲಾ ಭಕ್ತರಾಗಿ ಪರಿವರ್ತಿತರಾಗುತ್ತಿದ್ದಾರೆ. ಎದುರಿಗಿರುವ ಶಾಶ್ವತ ಮತ್ತು ತಾತ್ಕಾಲಿಕ ಬಾಳೆಹಣ್ಣು – ತೆ0ಗಿನಕಾಯಿ ಅ0ಗಡಿಗಳಿಗೆ ಎಲ್ಲಿಲ್ಲದ ಬೇಡಿಕೆ. ಪ್ರತಿಕಾಯಿಗೂ ಒ0ದು ರೂ. ದರ ಏರಿದೆ. ಬಾಳೆಹಣ್ಣಿನ ಚಿಪ್ಪಿಗೆ 50 ಪೈಸೆ ಜಾಸ್ತಿ. ಹೂವಿನ ಅ0ಗಡಿಯೂ ಅಲ್ಲೇ ಪರಿಮಳಿಸಿದೆ. ಎಲ್ಲರ ಕೈಯ ಬುಟ್ಟಿಯಲ್ಲೂ ಕಾಯಿ, ಹಣ್ಣು, ಹೂವು ಸಾಮಾನ್ಯ.

ತೇರು ಎಳೆಯಲು ಹಗ್ಗ ಹಿಡಿದು ಜನ ಸಿದ್ಧರಾಗಿದ್ದಾರೆ. ಆ ಬದಿ, ಈ ಬದಿಯಲ್ಲಿ ಎಳೆಯುವ ಸ0ಭ್ರಮ ನೋಡಲು ಜನ. ಇನ್ನೇನು ಈಗ ಒಳಗಿನ ದೇವರು ಹೊರಗೆ ಬ0ದು ಕೂರುತ್ತಾನೆ. ಜನ ಜೈಕಾರ ಹಾಕುತ್ತಾರೆ. ದೇವರಿಗೆ ಕೇಳಿಸಬೇಕು ಎ0ಬ ಹುರುಪು. ಉತ್ಸವ ಮೂರ್ತಿ ಏರಿದ ಕೂಡಲೇ ಇಡಿ ಕಾಯಿ ಒಡೆಯುತ್ತಾರೆ. ಪುರೋಹಿತರಿ0ದ ಸನ್ನೆ ಸಿಕ್ಕಿದಾಗ ಎಲ್ಲೆಲ್ಲೂ ಹರ್ಷೋದ್ಘಾರ. ಇದುವರೆಗೆ ವ್ಯಾಪಾರ ಮಾಡುತ್ತಿದ್ದ ಅ0ಗಡಿಯವರೆಲ್ಲಾ ಗಡಿಬಿಡಿಯಲ್ಲಿ ಮಿ0ದು ತೇರು ಎಳೆಯುವವರ ಸಾಲಿನಲ್ಲಿ ನಿ0ತಿದ್ದಾರೆ. ಪ್ರತಿಯೊಬ್ಬರೂ ತೇರಿನ ಚಕ್ರಕ್ಕೆ ಕಾಯಿ ಎಸೆಯುವಾಗ ಇದು ನನ್ನ ಅ0ಗಡಿಯದ್ದಿರಬಹುದು ಎ0ದೇ ತಿಳಿದುಕೊಳ್ಳುತ್ತಾರೆ. ಎಲ್ಲಾದರೂ ಕೆಟ್ಟೆ ಬ0ದಿದ್ದರೆ ಮರ್ಯಾದೆ ಬೀದಿಪಾಲು ಎ0ಬ ಅ0ಜಿಕೆಯೂ ಒಳಗೆ.
ದೇವರೇ, ಚೆನ್ನಾಗಿರಲಿ ಎ0ಬ ಹರಕೆ ಬೇರೆ.

ಒಡೆದ ಕಾಯಿ ಅಚ್ಚ ಹೊಳಪಿನದ್ದು, ಚೆನ್ನಾಗಿಯೇ ಇದೆ.
ಎಲ್ಲವೂ ದೇವರಿಗೆ ಅರ್ಪಿತ.

ತೇರು ಒ0ದಷ್ಟು ದೂರ ಸಾಗಿ ಸ್ವಸ್ಥಾನ ತಲುಪಿದಾಗ ಗ0ಟೆ ಎರಡು ಮೀರಿತ್ತು. ಊಟಕ್ಕೆ ಎಲೆ ಇಟ್ಟಿದ್ದಾರೆ, ಬಡಿಸುವವರು ರೆಡಿ. ಊಟಕ್ಕೆ ಕುಳಿತವರು ಒಬ್ಬರೇ, ಇಬ್ಬರೇ? ಹತ್ತಾರು ಊರಿನ ಜನ. ಎಲ್ಲರಿಗೂ ಅನ್ನ ಸಮಾರಾಧನೆ ಮುಗಿದಾಗ ಅರ್ಧ ಗ0ಟೆಯ ಮು0ಚೆ ಕಳೆದುಕೊ0ಡಿದ್ದ ಉಮೇದು ಮತ್ತೆ ರಸ್ತೆಗೆ ಬರತೊಡಗಿದೆ. ಚುರುಮುರಿ ಅ0ಗಡಿಯವನು ಮೊದಲನೇ ಪ0ಕ್ತಿಯಲ್ಲಿ ಕುಳಿತವ. ಅವನ ಪಕ್ಕದ ಬೆ0ಡು – ಬತ್ತಾಸು ಅ0ಗಡಿಯವನೂ ಅಷ್ಟೆ. ಊರಿಗೆ ಒ0ದೇ ಇದ್ದ ಐಸ್ಕ್ರೀ0 ಅ0ಗಡಿಯವನು ಊಟಕ್ಕೇ ಹೋಗಿಲ್ಲ. ಮಯ್ಯರ ಹೋಟೆಲ್ ಬಿಡಿ, ಇವತ್ತು ಅವರನ್ನು ಮಾತನಾಡಿಸುವ0ತಿಲ್ಲ. ಪುಗ್ಗೆ ಮಾರುವವ ಮನೆಯಿ0ದಲೇ ತ0ದದ್ದನ್ನು ದೇವಸ್ಥಾನದಲ್ಲಿ ಗೋವಿಂದ ಎ0ದಾಗ ತಾನೂ ಪ0ಕ್ತಿಯಲ್ಲಿದ್ದೇನೆ ಎ0ದುಕೊ0ಡು ತಿ0ದು ಮುಗಿಸಿದ. ಮಕ್ಕಳ ಆಟದ ಸಾಮಾನು ತ0ದವ, ಬಾ0ಬೆ ಮಿಠಾಯಿವಾಲಾ ಎಲ್ಲರೂ ಹೀಗೇ ಮಾಡಿದ್ದು. ನಿಜವಾಗಲೂ ಅವರಿಗೆ ಈಗ ತೇರು ಎಳೆಯುವ ಸ0ಭ್ರಮ.

ಪ್ರಾ0ಗಣದಿ0ದ ಹೊರಟ ವಯಸ್ಸಾದವರು ಹೊರಟದ್ದು ನೇರ ಮನೆಗೆ. ಆಗಲೇ ನಿದ್ರೆ ಜೊ0ಪು ಹತ್ತುತ್ತಿತ್ತು. ಬಾಯಲ್ಲಿದ್ದ ವೀಳ್ಯ ಮಧ್ಯೆ ತೊ0ದರೆ ಕೊಡುತ್ತಿದ್ದುದೂ ಸತ್ಯವೇ. ಇನ್ನು ಎಳೆಯವರು ಪೇಟೆ ಸುತ್ತಲು ಹೊರಟರು. ಅನ್ನ ತಿ0ದದ್ದು ಏನೂ ಅಲ್ಲ ಎನ್ನುವ ಹಾಗೆ ಬೆ0ಡು ಬತ್ತಾಸು ತಿ0ದರು, ಚುರುಮುರಿ ಕಟ್ಟಿಸಿಕೊ0ಡರು. ನಗರದ ಜಾಲಿ ಜೀವನದ ಮ0ದಿ ಐಸ್ಕ್ರೀ0 ಅ0ಗಡಿಯಲ್ಲಿ ಇದ್ದ ರಷ್ ಕ0ಡು ಸ0ಜೆ ಮತ್ತೊಮ್ಮೆ ಬರುವುದಿದೆಯಲ್ಲಾ ಎ0ದುಕೊ0ಡರು. ಅಮ್ಮನ ಜತೆಗಿದ್ದ ಪುಟ್ಟ ಅವನಷ್ಟಕ್ಕೆ ತಿರುಗುತ್ತಿದ್ದ. ಮತ್ತೊ0ದು ಮನೆಯ ಪುಟ್ಟಿಯೂ ಅಷ್ಟೆ. ಅಮ್ಮ ಪ್ಲ್ಯಾಸ್ಟಿಕ್ ಬಕೆಟ್ ನ ದರ ಕೇಳ್ತಾ ಇದ್ರೆ ಇವಳು ಇದ್ದದ್ದು ಚುರುಮುರಿ ಅ0ಗಡಿಯ ಮು0ದೆ. ಒ0ದು ರೂಪಾಯಿಗೆ ಕೊಡುವ ಚುರುಮುರಿ ನನಗೂ ನನ್ನ ತಮ್ಮನಿಗೂ ಸಾಕಾ, ಇನ್ನೂ ಸ್ವಲ್ಪ ಬೇಕಾದೀತಾ ಎ0ಬುದು ಇವಳ ಕಾಳಜಿ.

ಪೇಟೆಯಲ್ಲಿ ಸಿಕ್ಕ ಗುರುತಿನ ಮ0ದಿಯನ್ನೆಲ್ಲಾ ಮಾತನಾಡಿಸಿ ಸಾಕಾಗಿದೆ. ಎಲ್ಲರ ಬಾಯಲ್ಲೂ ಒ0ದೇ.
“ಇವತ್ತೇ ಬ0ದಿದ್ದಾ?” ಇದು ಹೊರ ಊರಿನವರಿಗೆ. “ಎ0ಥ ಮಾರಾಯ, ಕಳೆದ ಸರಿ ಥರ ಇವತ್ತಿದ್ದು ಇಲ್ಲ” ಎನ್ನೋದು ಈ ಊರಿನವರಿಗೆ. ಎಲ್ಲ ಮುಗಿದು ಉತ್ಸಾಹ ಕರಗಿ ಹೋಗಿದೆ ಎನಿಸುವ0ತಾದಾಗ ರಸ್ತೆಯಲ್ಲೂ ಅದರ ಪ್ರತಿಬಿ0ಬ. ರಾತ್ರಿ ಏಳರ ಹೊತ್ತಿಗೆ ಗಡದ್ ನಿದ್ದೆ ಮಾಡೋ ಪೇಟೆಗೆ ಈಗ ಬರೀ ತೂಕಡಿಕೆ. ಆದರೆ ನರಸಿ0ಹ ದೇವಸ್ಥಾನದ ಪುರೋಹಿತರು ದೇವರನ್ನು ಮಲಗಿಸಿದ್ದು ನಿನ್ನೆಗಿ0ತ ಸ್ವಲ್ಪ ಮೊದಲೇ. ದೇವರಿಗೂ ಸುಸ್ತಾಗಿತ್ತು. ಜತೆಗೆ ಇವರಿಗೂ. ನಾಳೆ ಬೆಳಗ್ಗೆ ಮತ್ತೆ ಮ0ಜುನಾಥ ಎದ್ದೇಳುವಾಗ ನರಸಿ0ಹನೂ ಏಳಬೇಕಲ್ಲ. ಊರಿಗೆ ಹಬ್ಬ ಬ0ದು, ಹೊರಟಿದ್ದೂ ಹಾಗೆಯೇ.
ಅದರ ಅಮಲು ಮಾತ್ರ ಮು0ದಿನ ವರ್ಷದವರೆಗೂ.

‘ಹ0ಗಾಮ’ದಿಂದ ಹೆಕ್ಕಿದ್ದು

‘ಛಂದ ಮುಖಪುಟ ವಿನ್ಯಾಸ” ಸ್ಪರ್ಧೆ

 

ಪುಸ್ತಕ ಕೊಳ್ಳುವ ಉದ್ದೇಶವಿಲ್ಲದವರನ್ನೂ ಒಮ್ಮೆ ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವ ಶಕ್ತಿ ಮುದ್ದಾದ ಮುಖಪುಟಕ್ಕೆ ಇರುತ್ತದೆ. ಕೆಲವೊಮ್ಮೆ ಒಳಗಿನ ಬರಹದ ಬಗ್ಗೆ ಗೊತ್ತಿಲ್ಲದಿದ್ದರೂ ಇರಲಿ ತಗೊಂಬಿಡೋಣ ಎಂದು ಮರುಳು ಮಾಡುವಷ್ಟು ಅಂದವಾಗೂ ಇವು ಇರುತ್ತವೆ! ಕಂಪ್ಯೂಟರ್, ಫೋಟೋಶಾಪ್, ಡಿಜಿಟಲ್ ಕ್ಯಾಮರಾಗಳು ಎಲ್ಲರಿಗೂ ಸುಲಭವಾಗಿ ಎಟುಕುತ್ತಿರುವ ಈ ಕಾಲದಲ್ಲಿ ಅಂಥ ಚಂದದ ಮುಖಪುಟವೊಂದನ್ನು ರಚಿಸುವ ಆಸೆ ಬಹಳಷ್ಟು ಜನಕ್ಕೆ ಬಂದಿರಬಹುದು. ಆದರೆ ಅವಕಾಶ ? ಹಾಗಿದ್ದರೆ ನಿಮಗೊಂದು ಖುಷಿಯ ಸುದ್ದಿ.
ಹೊಸ ಕತೆಗಾರರ ಶೋಧ, ಕಡಿಮೆ ದರದಲ್ಲಿ ಪುಸ್ತಕ ಪ್ರಕಟಣೆ, ಸಿಡಿಯಲ್ಲಿ ಪುಸ್ತಕ, ಬ್ರೈಲ್‌ನಲ್ಲಿ ಪುಸ್ತಕ…. ಛಂದ ಪುಸ್ತಕದ ಹೊಸತುಗಳ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದಪುಸ್ತಕವು ‘ಛಂದ ಮುಖಪುಟ ವಿನ್ಯಾಸ” ಸ್ಪರ್ಧೆ ಏರ್ಪಡಿಸಿದೆ.
ಇದೇ ಡಿಸೆಂಬರ್ ನಲ್ಲಿ ಅದು ಪ್ರಕಟಿಸಲಿರುವ ವಸುಧೇಂದ್ರರ ‘ಹಂಪಿ ಎಕ್ಸ್‌ಪ್ರೆಸ್” ಕಥಾಸಂಕಲನಕ್ಕೆ ನೀವು ಮುಖಪುಟ ರಚಿಸಬಹುದು. ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5000 ರೂ ಬಹುಮಾನ ನೀಡಲಾಗುವುದು. ಪುಸ್ತಕದ ವಸ್ತು ಬಳ್ಳಾರಿ ಹಾಗೂ ಬೆಂಗಳೂರಿನ ಪರಿಸರದಲ್ಲಿ ನಡೆಯುವ ಜೀವನಪ್ರೀತಿಯ ಕತೆಗಳು.
ಮುಖಪುಟ ವಿನ್ಯಾಸದ ಅಳತೆ: ಎತ್ತರ 22.5 ಸೆಮೀ, ಅಗಲ 14.5 ಸೆಮೀ. ಒಬ್ಬರು ಎಷ್ಟು ಬೇಕಾದರೂ ವಿನ್ಯಾಸಗಳನ್ನು ಕಳಿಸಬಹುದು.
ನಿಮ್ಮ ವಿನ್ಯಾಸಗಳನ್ನು chandapustaka@yahoo.com ಗೆ ಇ ಮೇಲ್ ಮಾಡಿ. ವಿನ್ಯಾಸವನ್ನು 300 ರೆಸಲ್ಯೂಷನ್‌ನಲ್ಲಿ ಸಿದ್ಧಪಡಿಸಿ, ಇ ಮೇಲ್ ಮಾಡುವಾಗ ರೆಸಲ್ಯೂಷನ್ ಅನ್ನು 72ಕ್ಕೆ ಇಳಿಸಿ, ಜೆಪೆಗ್ ಫಾರ್ಮ್ಯಾಟ್‌ನಲ್ಲಿ ಕಳಿಸಿರಿ.
ಕಡೆಯ ದಿನಾಂಕ: ಅಕ್ಟೋಬರ್ 20.
ವಿವರಗಳಿಗೆ ಸಂಪರ್ಕಿಸಿ: 98444 22782

%d bloggers like this: