ಯಾವ ಫೋಟೋಗಳಿಗೂ ‘ಕಾಪಿರೈಟ್’ ಇಲ್ಲ

ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ಆ ಕ್ಷಣವೇ ಓದುಗರ ಮುಂದೆ ಇಡಬೇಕು ಎಂಬ ಹಂಬಲ ‘ಅವಧಿ’ಯದ್ದು. ಆ ಕಾರಣಕ್ಕಾಗಿಯೇ ಅವಧಿ ಹಾಗೂ ‘ಬುಕ್ ಬಜಾರ್’ ಎರಡರಲ್ಲಿಯೂ ಆಗಿಂದಾಗಲೇ ಫೋಟೋಗಳನ್ನು ಪ್ರಕಟಿಸುತ್ತಿದ್ದೇವೆ. ಒಂದೆರಡಲ್ಲ. ಇಡೀ ಕಾರ್ಯಕ್ರಮದಲ್ಲಿನ ವಾತಾವರಣವನ್ನು ದೂರದೂರು ಹಾಗೂ ದೇಶದಲ್ಲಿರುವವರಿಗೂ ಮುಟ್ಟಿಸಬೇಕು ಎಂಬುದು ನಮ್ಮ ಆಸೆ. ಹಾಗಾಗಿಯೇ ಪುಸ್ತಕ ಬಿಡುಗಡೆಗೆ ಮಾತ್ರವೇ ಸೀಮಿತವಾಗಿರದೆ ಆ ಕಾರ್ಯಕ್ರಮದ ಸ್ವಾದವನ್ನು ಸೆರೆ ಹಿಡಿಯಲು ಯತ್ನಿಸುತ್ತಿದ್ದೇವೆ.

ಇನ್ನೊಂದು ವಿಶೇಷವೆಂದರೆ ಹಾಗೆ ತೆಗೆದ ಎಲ್ಲ ಚಿತ್ರಗಳನ್ನೂ ಮೂಲ ಸೈಜ್ನಲ್ಲಿಯೇ ಕಾಪಿಡುತ್ತಿದ್ದೇವೆ. ಅಷ್ಟೆ ಅಲ್ಲ ಮೇಫ್ಲವರ್ ಮೀಡಿಯಾ ಹೌಸ್ ನ ವೆಬ್ ಅಲ್ಬಮ್ನಲ್ಲಿಯೂ ರಕ್ಷಿಸಿಡುತ್ತಿದ್ದೇವೆ. ಗೊತ್ತಿಲ್ಲ, ಮುಂದೊಂದು ದಿನ ಇದೇ ಸಾಹಿತ್ಯ ಚರಿತ್ರೆಯ ಪುಟಗಳಿಗೆ ಹಾಳೆಗಳಾಗಬಹುದೇನೋ. ಆಗಲಿ- ಎಂಬುದು ನಮ್ಮ ಆಸೆ.

ನಾವು ಪ್ರಕಟಿಸುತ್ತಿರುವ ಯಾವ ಫೋಟೋಗಳಿಗೂ ‘ಕಾಪಿರೈಟ್’ ಇಲ್ಲ. ಅದರಲ್ಲಿ ನಮಗೆ ಅಷ್ಟೇನೂ ಮೋಹವಿಲ್ಲ. ಒಂದು ಪುಟಾಣಿ ಗೂಡಂತಿರುವ ಬ್ಲಾಗ್ ಲೋಕದಲ್ಲಿ ನಾವೇ ಗೆರೆಗಳನ್ನು ಎಳೆದುಕೊಳ್ಳುತ್ತಾ ಕೂತರೆ ದೇಶಕೋಶ ಮೀರುವುದು ಕಷ್ಟ ಎನ್ನುವುದು ನಮ್ಮ ನಿಲುಮೆ. ಹಾಗಾಗಿ ಇಲ್ಲಿನ ಫೋಟೋಗಳನ್ನು ದಾರಾಳವಾಗಿ ಬಳಸಿಕೊಳ್ಳಬಹುದು. ಡೌನ್ ಲೋಡ್ ಮಾಡಿಕೊಳ್ಳಬಹುದು. ಸಿ ಡಿ ಯಲ್ಲಿ ಕೂಡಿಡಬಹುದು. ಬೇಕಾದವರು ಬೇಕಾದಾಗ ನಮ್ಮ ಕಚೇರಿಗೆ ಬಂದು ಬೇಕಾದ ಫೋಟೋಗಳನ್ನು ಸಿ ಡಿ ಗೆ ಹಾಕಿಸಿಕೊಂಡೂ ಹೋಗಬಹುದು.

ನಮ್ಮನ್ನು ಸಂಪರ್ಕಿಸಬೇಕಾದರೆ ದೂರವಾಣಿ- 080-22374436

ಮೇಲ್- mayflowermh@gmail.com

ವಿಳಾಸ- mayflower media house

1, first floor, unit 5

yamunabai road, Madhavanagar

Bangalore-560001

ಇನ್ನೂ ಸುಲಭವಾಗಿ ಹೇಳಬೇಕೆಂದರೆ ಈಟಿವಿ ಕಚೇರಿ ಬಳಿ ಬಂದು ಎಡವಿ, ನಮ್ಮ ಕಚೇರಿಯಲ್ಲಿರುತ್ತೀರಿ.

7 ಟಿಪ್ಪಣಿಗಳು (+add yours?)

 1. Suchi
  ಸೆಪ್ಟೆಂ 16, 2008 @ 21:33:05

  ಕಾಪಿರೈಟ್ ಇದ್ರೂ ಆ ಹೆಸರನ್ನೇ ತೆಗೆದುಹಾಕಿ ತಮ್ಮದು ಮಾಡಿಕೊಳ್ಲೋ ಈ ಕಾಲದಲ್ಲಿ ಕಾಪಿರೈಟ್ ಇದ್ರೂ ಇಲ್ಲದಿದ್ರೂ ಏನು ವ್ಯತ್ತ್ಯಾಸವಿಲ್ಲ ಬಿಡ್ರಿ 🙂

  ಉತ್ತರ

 2. ಗಾಣಧಾಳು ಶ್ರೀಕಂಠ
  ಸೆಪ್ಟೆಂ 16, 2008 @ 12:15:54

  ಒಳ್ಳೆಯ ಯೋಚನೆ. ಎಲ್ಲ ಫೋಟೋ ಸ್ನೇಹಿತರಿಗೂ ಇಂಥ ‘ಬ್ಯೂಟಿಫುಲ್ ಬುದ್ದಿ ಬರಲಿ’ ಅಂತ ಹಾರೈಸುತ್ತೇನೆ.

  ಉತ್ತರ

 3. sughosh nigale
  ಸೆಪ್ಟೆಂ 16, 2008 @ 12:14:05

  ಲೀಲಾ ಮೇಡಂ, ನಿಮ್ಮ ಅನುಭವವನ್ನು ನನ್ನೊಡನೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು…. ಹಿ…ಹಿ..ಹಿ….

  ಉತ್ತರ

 4. leelasampige
  ಸೆಪ್ಟೆಂ 16, 2008 @ 09:31:25

  ಸುಘೋಷ್, ನಿಮ್ಮ ಹಳೆಯ [ಗೆಳತಿಯರ] ಫೋಟೋಗಳನ್ನ ಅವಧಿಗೆ ತಂದು ಸ್ಕ್ಯಾನ್ ಮಾಡಿ ಸಿ.ಡಿ.ಗೆ ಹಾಕಿ ಇಟ್ಕೋಳಿ. ಇಳಿ ವಯಸ್ಸಿನ ಬೊಚು ಬಾಯಲ್ಲಿ ಮೆಲುಕು ಹಾಕೋಕೆ ಬೇಕಾಗುತ್ತೆ!
  ಲೀಲಾ ಸಂಪಿಗೆ

  ಉತ್ತರ

 5. sughosh nigale
  ಸೆಪ್ಟೆಂ 15, 2008 @ 19:43:38

  ಕಾಲೇಜಿನ ದಿನಗಳಲ್ಲಿ ನೂರ ಹತ್ತು ರೂಪಾಯಿಯ ರೋಲ್ ಹಾಗು ಹದಿನಾಲ್ಕು ರೂಪಾಯಿಯ ಪೆನ್ಸಿಲ್ ಸೆಲ್ ಹಾಕಿ, ತೆಗೆದ ಫೋಟೋ ಚೆನ್ನಾಗಿ ಬರಲ್ಲಿಲ್ಲವೆಂದರೆ ಅದಕ್ಕೆ ಯಥೇಚ್ಛವಾಗಿ ಬೇಸರ ಪಡುತ್ತ ಇದ್ದ ದಿನಗಳು ನೆನಪಿಗೆ ಬರುತ್ತಿವೆ. ನನ್ನ ಫ್ರೆಂಡ್ ಸರ್ಕಲ್ ನಲ್ಲಿ ಯಾರ ಬಳಿಯೂ ಇಲ್ಲದಷ್ಟು ಫೋಟೋಗಳು ಈಗ ನನ್ನ ಬಳಿ ಇವೆ (ನನ್ನ ಹಳೆಯ ‘ಗೆಳತಿಯರ’ ಫೋಟೋಗಳು ಸೇರಿದಂತೆ) ಎಂಬುದೇ ನನಗೀಗ ಹೆಮ್ಮೆಯ ಸಂಗತಿ. – ಸುಘೋಷ್ ನಿಗಳೆ.

  ಉತ್ತರ

 6. ಸಂದೀಪ್ ಕಾಮತ್
  ಸೆಪ್ಟೆಂ 15, 2008 @ 19:07:06

  ಅಯ್ಯೋ ಇಥಾ ಉದಾತ್ತವಾದ ಯೋಚನೆ!! ನೀವೂ ಕನಕದಾಸ ,ಪುರಂದರದಾಸ ಸಾಲಿಗೆ ಸೇರಿ ಬಿಡ್ತೀರ:)
  ಪಾಪ ದಾಸರು ಸಾವಿರಾರು ಕೀರ್ತನೆಗಳನ್ನು ಬರೆದರೂ ಎಲ್ಲೂ ಕಾಪಿರೈಟ್ ಪ್ರೊಟೆಕ್ಟೆಡ್ ಅಂತ ಹೇಳೆ ಇಲ್ಲ!! ಕಾಗಿನೆಲೆಯಾಧೀಶ ,ಪುರಂದರ ವಿಠ್ಠಲ ಅಂತೇನಾದ್ರೂ ಇಲ್ಲ ಅಂದ್ರೆ ಯಾರು ಬರೆದಿದ್ದು ಅಂತ ಗೊತ್ತೇ ಆಗಲ್ಲ.
  ಆದ್ರೆ ಈಗಿನ ಯುವಕ/ಯುವತಿಯರ ಕೈಯಲ್ಲಿ ಹೈ ಫೈ ಡಿಜಿಟಲ್ ಕ್ಯಾಮರಾ ಸಿಕ್ಕಿವೆ.minimum 7 megapixels ಇರೋದ್ರಿಂದ ಯಾರು ಹೇಗೇ ತಗೆದ್ರೂ ಫೋಟೊ ಚೆನ್ನಾಗೇ ಬರುತ್ತವೆ(ನಂದೊಂದೆ ಚೆನ್ನಾಗಿ ಬರಲ್ಲ 😦 ) ;ಆದ್ರೂ ನೋಡು ’ನಾನು’ ತೆಗೆದದ್ದು ಫೋಟೊ ಅನ್ನೊ ಅಹಂ!! ಅದಕ್ಕೆ ಕಾಪಿ ರೈಟ್ ಬೇರೆ !
  ಫೋಟೊ ತೆಗೀಬೇಕಾದ್ರೆ ಯಾವ ಫೋಟೊಗ್ರಾಫರ್ರೂ ಅನುಮತಿ ಕೇಳಲ್ಲ.ಆದ್ರೆ ಅದೇ ಫೋಟೊ ಬೇರೆ ಎಲ್ಲದ್ರೂ ಕಾಣ ಸಿಕ್ರೆ ಕದ್ದದ್ದು ಅಂತ ಅಪವಾದ:(
  ಥ್ಯಾಂಕ್ಸ್ ಹೊಸ ಟ್ರೆಂಡ್ ಪ್ರಾರಂಭಿಸಿದ್ದಕ್ಕೆ!

  ಉತ್ತರ

 7. ವಿಕಾಸ್ ಹೆಗಡೆ
  ಸೆಪ್ಟೆಂ 15, 2008 @ 16:05:14

  thanx Avadhi and the ‘avadhi gals’ for nice photos of nice memories 🙂

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: