ಯಾವ ಫೋಟೋಗಳಿಗೂ ‘ಕಾಪಿರೈಟ್’ ಇಲ್ಲ

ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ಆ ಕ್ಷಣವೇ ಓದುಗರ ಮುಂದೆ ಇಡಬೇಕು ಎಂಬ ಹಂಬಲ ‘ಅವಧಿ’ಯದ್ದು. ಆ ಕಾರಣಕ್ಕಾಗಿಯೇ ಅವಧಿ ಹಾಗೂ ‘ಬುಕ್ ಬಜಾರ್’ ಎರಡರಲ್ಲಿಯೂ ಆಗಿಂದಾಗಲೇ ಫೋಟೋಗಳನ್ನು ಪ್ರಕಟಿಸುತ್ತಿದ್ದೇವೆ. ಒಂದೆರಡಲ್ಲ. ಇಡೀ ಕಾರ್ಯಕ್ರಮದಲ್ಲಿನ ವಾತಾವರಣವನ್ನು ದೂರದೂರು ಹಾಗೂ ದೇಶದಲ್ಲಿರುವವರಿಗೂ ಮುಟ್ಟಿಸಬೇಕು ಎಂಬುದು ನಮ್ಮ ಆಸೆ. ಹಾಗಾಗಿಯೇ ಪುಸ್ತಕ ಬಿಡುಗಡೆಗೆ ಮಾತ್ರವೇ ಸೀಮಿತವಾಗಿರದೆ ಆ ಕಾರ್ಯಕ್ರಮದ ಸ್ವಾದವನ್ನು ಸೆರೆ ಹಿಡಿಯಲು ಯತ್ನಿಸುತ್ತಿದ್ದೇವೆ.

ಇನ್ನೊಂದು ವಿಶೇಷವೆಂದರೆ ಹಾಗೆ ತೆಗೆದ ಎಲ್ಲ ಚಿತ್ರಗಳನ್ನೂ ಮೂಲ ಸೈಜ್ನಲ್ಲಿಯೇ ಕಾಪಿಡುತ್ತಿದ್ದೇವೆ. ಅಷ್ಟೆ ಅಲ್ಲ ಮೇಫ್ಲವರ್ ಮೀಡಿಯಾ ಹೌಸ್ ನ ವೆಬ್ ಅಲ್ಬಮ್ನಲ್ಲಿಯೂ ರಕ್ಷಿಸಿಡುತ್ತಿದ್ದೇವೆ. ಗೊತ್ತಿಲ್ಲ, ಮುಂದೊಂದು ದಿನ ಇದೇ ಸಾಹಿತ್ಯ ಚರಿತ್ರೆಯ ಪುಟಗಳಿಗೆ ಹಾಳೆಗಳಾಗಬಹುದೇನೋ. ಆಗಲಿ- ಎಂಬುದು ನಮ್ಮ ಆಸೆ.

ನಾವು ಪ್ರಕಟಿಸುತ್ತಿರುವ ಯಾವ ಫೋಟೋಗಳಿಗೂ ‘ಕಾಪಿರೈಟ್’ ಇಲ್ಲ. ಅದರಲ್ಲಿ ನಮಗೆ ಅಷ್ಟೇನೂ ಮೋಹವಿಲ್ಲ. ಒಂದು ಪುಟಾಣಿ ಗೂಡಂತಿರುವ ಬ್ಲಾಗ್ ಲೋಕದಲ್ಲಿ ನಾವೇ ಗೆರೆಗಳನ್ನು ಎಳೆದುಕೊಳ್ಳುತ್ತಾ ಕೂತರೆ ದೇಶಕೋಶ ಮೀರುವುದು ಕಷ್ಟ ಎನ್ನುವುದು ನಮ್ಮ ನಿಲುಮೆ. ಹಾಗಾಗಿ ಇಲ್ಲಿನ ಫೋಟೋಗಳನ್ನು ದಾರಾಳವಾಗಿ ಬಳಸಿಕೊಳ್ಳಬಹುದು. ಡೌನ್ ಲೋಡ್ ಮಾಡಿಕೊಳ್ಳಬಹುದು. ಸಿ ಡಿ ಯಲ್ಲಿ ಕೂಡಿಡಬಹುದು. ಬೇಕಾದವರು ಬೇಕಾದಾಗ ನಮ್ಮ ಕಚೇರಿಗೆ ಬಂದು ಬೇಕಾದ ಫೋಟೋಗಳನ್ನು ಸಿ ಡಿ ಗೆ ಹಾಕಿಸಿಕೊಂಡೂ ಹೋಗಬಹುದು.

ನಮ್ಮನ್ನು ಸಂಪರ್ಕಿಸಬೇಕಾದರೆ ದೂರವಾಣಿ- 080-22374436

ಮೇಲ್- mayflowermh@gmail.com

ವಿಳಾಸ- mayflower media house

1, first floor, unit 5

yamunabai road, Madhavanagar

Bangalore-560001

ಇನ್ನೂ ಸುಲಭವಾಗಿ ಹೇಳಬೇಕೆಂದರೆ ಈಟಿವಿ ಕಚೇರಿ ಬಳಿ ಬಂದು ಎಡವಿ, ನಮ್ಮ ಕಚೇರಿಯಲ್ಲಿರುತ್ತೀರಿ.

ಈ ಹುಡುಗಿ ದೀಪಿಕಾ…

ಮೇ ಫ್ಲವರ್ ಅಂಗಳದಲ್ಲಿ ನಡೆಯುವ ಫಿಶ್ ಮಾರ್ಕೆಟ್ ಕಾರ್ಯಕ್ರಮಗಳಿರಲಿ ಅಥವಾ ನಗರದ ಯಾವ ಮೂಲೆಯಲ್ಲಾದರೂ ಜರುಗುವ ಕಾರ್ಯಕ್ರಮಗಳಿರಲಿ ಅಲ್ಲಿ ನಮ್ಮ ದೀಪಿಕಾ ಇರಲೇಬೇಕು. ಎಲ್ಲರ ಮೊಗದಲ್ಲಿ ನಗೆ ಅರಳುವಂತೆ ಕ್ಯಾಮೆರಾ ಫೋಕಸ್ ಮಾಡುವ, ಒಂದಷ್ಟು ಜನ ನೆಟ್ಟನೇರ ಗಂಭೀರವಾಗಿ ನಿಲ್ಲುವಂತೆ ಮಾಡುವ, ಅರಳು ಹುರಿದಂತೆ ಮಾತನಾಡುತ್ತಲೇ ಎಲ್ಲರನ್ನೂ ತನ್ನ ಕ್ಯಾಮೆರಾದಲ್ಲಿ ತುಂಬಿಕೊಳ್ಳುವ ಈ ಹುಡುಗಿ ದೀಪಿಕಾ.

ಬ್ಲಾಗ್ ಮಂಡಲದ ವಿಕಾಸ್ ಬಣ್ಣಿಸಿದಂತೆ ಫೋಟೋ ಟೆರರಿಸ್ಟ್ ಪೈಕಿ ಒಬ್ಬಳು. ಕೆನ್ ಕಲಾ ಶಾಲೆಯಲ್ಲಿ ಕ್ಯಾನ್ವಾಸ್ ಮೇಲೆ ಬಣ್ಣ ಹರಡುತ್ತಿದ್ದ ಈ ಹುಡುಗಿ ನಂತರ ಇಡೀ ರಾಜ್ಯಕ್ಕೇ ಕಲಾ ಪದವಿಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾಳೆ. ಕ್ಯಾಮರಾ- ಇವಳ ಹಲವು ಹುಚ್ಚುಗಳ ಪೈಕಿ ಒಂದು. ತನ್ನ ಬಳಿ ಇರುವ ಕ್ಯಾನನ್ ಡಿಜಿಟಲ್ ಕ್ಯಾಮೆರಾದಿಂದಲೇ ಹಲವರನ್ನು ‘ಶೂಟ್’ ಮಾಡಿ ಬಿಸಾಡಿರುವ ದೀಪಿಕಾ ಈಗ ದೊಡ್ಡ ಕ್ಯಾಮೆರಾದ ತಲಾಶ್ ನಡೆಸಿದ್ದಾಳೆ. ‘ನಿಮ್ಮ ನಿಮ್ಮ ತನುವ ಸಂರಕ್ಷಿಸಿಕೊಳ್ಳಿ’.

ಅವಧಿ ಹಾಗೂ ಬುಕ್ ಬಜಾರ್ ಎರಡಕ್ಕೂ ಕ್ಯಾಮೆರಾ ಹಿಡಿಯುವ ದೀಪು ನಿಮ್ಮ ಬಳಿ ಬಂದಾಗ, ಎಸ್.. ನಿಮ್ಮ ದಂತಪಂಕ್ತಿಗಳನ್ನು ತೋರಿಸಿ. ಅವಳ ದಂತಪಂಕ್ತಿಯ ಕಡೆ ಕಣ್ಣು ಹಾಯಿಸಲೂ ಬೇಡಿ..

ಕುಂ ವೀ ಜಗತ್ತು

ಚಿತ್ರಗಳು: ದೀಪಿಕಾ ಎಂ ಜೆ

ಛಂದ ಪುಸ್ತಕದ ವತಿಯಿಂದ ಕುಂ ವೀ ಅವರ ಜಗತ್ತನ್ನು ಶೋಧಿಸುವ ಭಿನ್ನ ರೀತಿಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ಜರುಗಿತು. ಅದರ ನೋಟ ಇಲ್ಲಿದೆ.
ಇನ್ನಷ್ಟೋ ಫೋಟೋಗಳಿಗಾಗಿ ‘ಓದು ಬಜಾರ್’ ಗೆ ಭೇಟಿ ಕೊಡಿ-

%d bloggers like this: