‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
“ಅವ್ಳು ನಂಗ್ ನಂಗೇ ಬೇಕು .ಪೂರ್ತಿ ಬೇಕು” ಅಂದ ಪ್ರದಿ. ನಾನು ಮಧು ಮುಖ ಮುಖ ನೋಡ್ಕೂಂಡ್ವಿ. “ಮೊನ್ನೆ ನೀನೂ ಹೀಗೇ ಆಂದಿದ್ದೆ.”ಅಂದ್ಲು ನಂಗೆ ಆಶ್ಚರ್ಯ ಆಯಿತು. “ಹೂ ಮೊನ್ನೆ ನಂದ ಕೊಟ್ಟಿದ್ ಡೈರಿ ಮಿಲ್ಕ್ ಚಾಕಲೇಟ್ ನಂಗ್ ನಂಗೇ ಪೂರಾ ಬೇಕು ಅಂತ ಹಠ ಮಾಡಿರಲಿಲ್ವ…”
ನಾನು, ಮಧು (ಮಧುಮಿತ), ಪ್ರದೀಪ್ ಮೂರು ಜನನೂ ಫಾರ್ಮ್ ಫುಡ್ನಲ್ಲಿ ಕೂತಿದ್ವಿ. ನಮ್ಮ ಹಾಸ್ಟೇಲಿನ ಊಟ (?) ಬೇಜಾರಾದಾಗಳೆಲ್ಲಾ ಅಂದ್ರೆ ವಾರದಲ್ಲಿ ಹತ್ತು ದಿವ್ಸ ಹಾಸ್ಟೆಲ್ ಹಿಂದಿರೋ ಫಾರ್ಮ ಫುಡ್ ಗೆ ಹೋಗ್ತೀವಿ. ಆ ಪುಟ್ಟ ಹೋಟೇಲ್ ಗೇರು ತೋಟದ ಮಧ್ಯ ಇರೋದ್ರಿಂದ ಅದಕ್ಕೆ ಆ ಹೆಸರು. ಆ ಹೋಟೆಲ್ ಸುತ್ತ ಆಸ್ಟ್ರೇಲಿಯಾದ ಬೇರೆ ಬೇರೆ ಜಾತಿ ಹಕ್ಕಿಗಳನ್ನೆಲ್ಲಾ ಪಂಜರದಲ್ಲಿ ಇಟ್ಟಿದಾರೆ. ಹಾಸ್ಟೆಲಿಗೆ ಬಂದ ಎರಡೇ ದಿನಕ್ಕೆ ಅಲ್ಲಿಗೆ ಹೋಗಿ ಅಲ್ಲಿನ ಹಕ್ಕಿಗಳಿಗೆಲ್ಲಾ ಹೆಸರಿಟ್ಟು….ಆ ವಿಶ್ಯ ಇನ್ನೂಂದ್ ದಿವ್ಸ ಹೇಳ್ತಿನಿ ಬಿಡಿ.
ಪ್ರದಿ ವಿಷಯಕ್ ಬರೋಣ. ಅವ್ನು ಧುಮುಗುಟ್ಟುತ್ತಿದ್ದ. “ಏನಾಯ್ತೋ” ಮತ್ತೆ ಕೇಳಿದಳು ಮಧು ಬೆಳಗ್ಗಿನಿಂದ ಇದೇ ಪ್ರಶ್ನೇನ ಮಿನಿಮಮ್ ಹತ್ತು ಸಾರಿ ಆದ್ರೂ ಕೇಳಿರಬಹುದು ನಾವು.
ನಾನ್ ಕಾಲ್ ಮಾಡ್ದಾಗ್ಲೆಲ್ಲಾ ಬ್ಯುಸಿಯಾಗಿರ್ತಾಳೆ ಬೆಳ್ ಬೆಳಗ್ಗೆ ಕಾಲೇಜಲ್ಲಿ ಆ ಶಂಕರ್ ಜೊತೆ ಮಾತಾಡ್ತಾ ಕೂತಿರ್ತಾಳೆ. ಅವ್ನು ಅವತ್ತು ಶುಭಾಂಗ (ಇನ್ನೊಂದು ಹೋಟೆಲ್ ) ದಲ್ಲಿ ಅವ್ಳು ತಿಂತಿದ್ ತಟ್ಟೇಗೆ ಕೈಹಾಕಿ ದೋಸೆ ಮುರ್ಕೊಂಡ್ ತಿಂದ. ಇವ್ಳು ಸುಮ್ನನೇ ಇದ್ಲು. ಅವ್ನು ಸರಿ ಇಲ್ಲ ಮಾತಾಡ್ ಬೇಡ ಅಂದೆ. ನಿಂಗೆ ಅವ್ನ ಮೇಲೆ ಜಲಸಿ ನನ್ ಮೇಲ್ ಅನುಮಾನ ಪಡ್ತೀಯ ಅಂತ ಅಳಕ್ ಶುರು ಮಾಡಿದ್ಲು. ಈಗ ಮಾತಾಡ್ತಿಲ್ಲ. ನಂಗ್ ಅವ್ಳ ಮೇಲೆ ಅನುಮಾನ ಇಲ್ಲ. ಅವ್ಳ ಬಿಟ್ಟು ಇರಕ್ಕಾಗಲ್ಲ ನಂಗೆ. ಇದೆಲ್ಲ ಯಾಕ್ ಅರ್ಥ ಆಗಲ್ಲ ಅವ್ಳಿಗೆ ಅಂದ.
ರಕ್ಷಾ ಪ್ರಿಯ ಗರ್ಲ್ ಫ್ರೆಂಡು. ತುಂಬ ಲೈವ್ಲಿ ಹುಡ್ಗಿ. ಎಲ್ಲರ ಜೊತೆ ಚೆನ್ನಾಗಿ ಹೊಂದ್ಕೊಳ್ತಾಳೆ. ಇಷ್ಟ ಆಗೋಹಂಗೆ ಮಾತಾಡ್ತಾಳೆ. ಇವ್ನು ತನ್ನಷ್ಟಕ್ಕೆ ತಾನು ಇರೋ ಹುಡ್ಗ. ನಾವೇ ಒಂದು ಎರಡು ಮೂರು ಜನ ಸ್ನೇಹಿತರು ಅವ್ನಿಗೆ. ಇವ್ನು ಕಾಲ್ ಮಾಡ್ದಾಗ ರಕ್ಷಾ ನಂಬರ್ ಏನಾದ್ರೊ ಬ್ಯುಸಿ ಬಂದ್ರೆ ಸಾಕು ನಂಗೋ, ಮಧುಗೋ ಕಾಲ್ ಮಾಡಿ ಯಾರ್ ಜೊತೆ ಮಾತಾಡ್ತಿದಾಳೆ ಅಂತ ಕೇಳ್ತಿದ್ದ. ನಿಂದ್ ಅತಿಯಾಯ್ತು ಅಂತ ಬೈದ್ರೆ ಅದಕ್ಕೆ “ಹಂಗಲ್ಲಾ ಕಣೇ “ಅಂತ ಏನೇನೋ ವಿವರಣೆಗಳು
ಇವತ್ತಂತೂ ತಂಬ ಅತಿಯಾಗಾಡ್ತಿದಾನೆ ಅನ್ನುಸ್ತು ನಂಗೆ “ನೀನು ನಮ್ ತಟ್ಟೆಗೆ ಕೈ ಹಾಕಿ ತಿನ್ನಲ್ವೇನೋ ? ಯಾವಾಗ್ಲೂ ನನ್ ಜೋತೆಗೋ, ಸಿರಿ ಜೊತೆಗೋ ಮಾತಾಡ್ತಿರ್ತೀಯ. ಅವ್ಳುವೆ ಸಿರಿ, ಮಧು ಸರಿ ಇಲ್ಲ ಅವ್ರ ಜೊತೆ ಮಾತಾಡ್ಬೇಡ ಅಂದ್ರೆ ನಮ್ ಜೊತೆ ಮಾತಾಡದ್ ಬಿಟ್ ಬಿಡ್ತೀಯ ಅಂತ ಜಗಳಕ್ ಹೋದ್ಲು ಮಧು . ಹಾಸ್ಟೇಲಿಗೆ ಹೊಗಿ ರಕ್ಷಾನ ಸಮಧಾನ ಮಾಡಿ ಅವ್ನಿಗೆ ಫೋನ್ ಮಾಡ್ಸದು ಅಂತ ಡಿಸೈಡ್ ಆಯ್ತು.
ಇದು ಪೊಸೆಸಿವ್ನೆಸ್ಸೋ ಅಥವ ಜಲಸಿಯೋ ಅಂತ ಅನುಮಾನ ಆಯ್ತು. “ಇಲ್ವೇ ಈ ಹುಡುಗ್ರು ಜಲಸಿನ ಸಮರ್ಥಿಸಿಕೊಲ್ಲೋಕೆ ಪೂಸೆಸಿವ್ನೆಸ್ ಅಂತ ಹೆಸ್ರು ಕೊಡ್ತಾರೆ. ” ಬುಸುಗುಟ್ಟಿದಳು ಮಧು
ಹೌದಾ ಕೇಳಿಕೊಂಡೆ. ಆದ್ರೆ ಇದು ಬರೀ ಹುಡುಗರ ಪ್ರಾಬ್ಲಮ್ ಏನಲ್ವಲ್ಲ. ಒಂದೊಂದು ಹುಡುಗೀರು ಎಷ್ಟು ಭಯಂಕರ ಪೂಸೆಸಿವ್ ಆಗಿರ್ತಾರಂದ್ರೆ ನಾನು ಹಳೇ ಹಾಸ್ಟೆಲ್ ನಲ್ಲಿ ಇದ್ದಾಗ ನನ್ನ ರೂಮ್ ಗೆಳತಿ ಅಸ್ಥಮಾ ಅಟ್ಯಾಕ್ ಆಗಿ ಹಾಸ್ಪಿಟಲ್ ಸೇರಿದ್ದಳು. ಅವಳನ್ನ ನೋಡ್ಕೊಂಡ್ ಹೋಗಕ್ಕೆ ಅಂತ ಪ್ರಜ್ವಲ್ ಬಂದಿದ್ದ. ಬಂದು ಕೂತು ಮಾತಾಡಿಸ್ತಿದಾನೆ. ಅವನ ಗರ್ಲ್ ಫ್ರೆಂಡ್ ಅವನನ್ನು ಹುಡುಕಿ ಕೊಂಡು ಬಂದ್ಲು. ಬಂದವಳೇ ನೀನು ಅವಳ ಜೊತೆ ಮಲಗಕ್ಕೆ ಬಂದಿದೀಯ. ನೀವಿಬ್ರೂ ಜೊತೆಗಿರಬೇಕು ಅಂತಾನೆ ಅವ್ಳು ಅಸ್ಥಮಾ ಅಂತ ನಾಟ್ಕ ಆಡ್ತಾಳೆ. ಇಲ್ಲಿಗೆ ಕರೆಸ್ಕೋತಾಳೆ ಎಂದು ಕಿರುಚಾಡಿ ಎಲ್ಲರ ಮುಂದೆ ಅವನಿಗೆ ಚಪ್ಪಲೀಲಿ ಹೊಡೆದಿದ್ದಳು .
ಎಲ್ಲಿ ಅವ್ಳು ನನ್ನ ಬಿಟ್ಟು ಹೋಗ್ಬಿಡ್ತಾಳೋ ಅನ್ನೋ ಸುಪ್ತವಾಗಿರೋ ಭಯ ತನ್ನ ಹುಡುಗಿ ಬೇರೊಬ್ಬನ್ ಜೊತೆ ಮಾತಾಡೋವಾಗ, ವ್ಯವಹರಿಸುವಾಗ ಮತ್ಸರ ಪಡೋಹಂಗೆ ಮಾಡುತ್ತೆ “ಅಷ್ಟೊಂದು ಏನು ಮಾತಾಡದಿರುತ್ತೆ ?” ಮಾತಾಡವಾಗ ಇವ್ಳ ಕೈ ಮುಟ್ಟಿದ ಅಲ್ವ ?” “ಇಬ್ರೂ ಒಂದೇ ಗ್ಲಾಸ್ನಲ್ಲಿ ಜೂಸ್ ಕುಡದ್ರಾ ?” ಅಂತೆಲ್ಲಾ ಯೋಚಿಸೋ ಹಾಗೆ ಮಾಡುತ್ತೆ… ಅದು ನಮ್ಮ ತಪ್ಪಲ್ಲ ನಮ್ಮ ವಂಶವಹಿನಿಗಳಲ್ಲಿರೋ ತಪ್ಪು. ಆದಿ ಮಾನವರಿಗೆ ಕಮಿಟ್ಮೆಂಟ್ ಗಳಿರಲಿಲ್ಲ. ತಮ್ಮ ಸಂಗಾತಿಯನ್ನ ರಮಿಸಿ ಒಲಿಸಿಕೊಳ್ಳೋಕೆ ಇನ್ನೂಂದು ಅವಕಾಶ ಸಿಗ್ತಿರ್ಲಿಲ್ಲ. ಅದಕ್ಕೆ ತಮ್ಮ ಸಂಗಾತಿಯನ್ನ ಕಳೆದುಕೊಳ್ಳೋ ಹಾಗೆ ಮಾಡುವ ಅಥವಾ ತಮ್ಮ ಸಂಬಂಧವನ್ನು ಹಾಳುಮಾಡಬಹುದಾದ ಯಾವುದೇ ನಿಜವಾದ ಅಥವ ಕಲ್ಪಿಸಿಕೊಂಡ ಅಪಾಯಗಳನ್ನು ತುಂಬ ಸೂಕ್ಷ್ಮ ವಾಗಿ ಗಮನಿಸುತಿದ್ರು. ಆ ಸ್ವಭಾವವೇ ಇನ್ನೂ ಉಳಿದಿದೆ ಅಷ್ಟೆ ಅಂತ ವಿಕಾಸವಾದಿ ಮನೋ ವಿಜ್ಞಾನಿಗಳು ಹೇಳ್ತಾರೆ” ಅಂದ ಸಾತ್ಯಕಿ.
ಅದೇ ಈಗ ನಾವು ಆದಿಮಾನವತನವನ್ನ ಕಳಚಿಕೊಂಡು ಆಧುನಿಕ ಮಾನವರಾಗಿದ್ದೇವಲ್ಲ. ಯೋಚಿಸೋ ಶಕ್ತಿ ಇಲ್ವ ನಮಗೆ. ನಾವು ಪ್ರೀತಿಸೋರು ನಮ್ಮನ್ನು ನಿಜವಾಗಲೂ ಪ್ರೀತಿಸುವುದೇ ಆದ್ರೆ ಖಂಡಿತಾ ಬಿಟ್ಟು ಹೋಗಲ್ಲ . ಇಲ್ಲಾ ಅಂದ್ರೆ ನಾವು ಏನು ತಿಪ್ಪರಲಾಗ ಹಾಕಿದ್ರು ಹೋಗೇ ಹೋಗ್ತಾರೆ. ನಮ್ಮ ಪೂಸೆಸಿವ್ನೆಸ್ ತೋರಿಸಿ ಉಸಿರುಗಟ್ಟಿಸುವುದರಿಂದ ಏನುಪಯೋಗ ?ನಾವು ಎಷ್ಟೇ ಯೋಚಿಸಿದ್ರೂ ನಮ್ಮ ಸಂಗಾತಿ ನಮಗಿಂತ ಆಕರ್ಶಕವಾಗಿರೋರ ಜೊತೆ ಅಥವಾ ನಮಗೆ ಪೈಪೋಟಿ ನೀಡಬಹುದಾದಂತಹವರ ಜೊತೆ ವ್ಯವಹರಿಸುತ್ತಿದ್ದರೆ ಹೊಟ್ಟೆಕಿಚ್ಚಾಗೋದು ಸಹಜ. ಹಾಗೆ ಆದಾಗಲೆಲ್ಲ “ನಿನ್ನ ಹಳೇ ಬುದ್ದಿ ತೋರಿಸಬೇಡ ಬಾಯ್ಮುಚ್ಕೂಂಡಿರು ಅಂತ ಬೈದು ಸುಮ್ಮನಾಗಿಸೋಣ ಅಲ್ವ …….
ಏನ್ ಗೊತ್ತಾ ಮುಂದಿನವಾರ ಒಂದು ಆಟ ಅಡೊಣಾ ಅನ್ಕೊಂಡಿದೀನಿ. ಒಂದಷ್ಟು ಪ್ರಶ್ನೆಗಳಿರುತ್ತವೆ ಅದಕ್ಕೆ ನೀವು ಕೂಡೋ ಉತ್ತರದ ಮೇಲೆ ನೀವು ಯಾವ ಥರದ ವ್ಯಕ್ತಿತ್ವದ ಗುಂಪಿಗೆ ಸೇರಿದವರು ಅಂತ ನಿರ್ಧಾರ ಮಾಡುತ್ತೆ. ನೀವ್ ನೀವೇ ಮಾಡಿಕೊಳ್ಳೋ ವಿಶ್ಲೇಷಣೆ ಅದು. ನೀವೆಲ್ಲಾ ಹೂಂ ಅಂದ್ರೆ ಆಟ ಆದೆ ಬಿಡೋಣಾ. have a chweety cutey week ahead…
ಇತ್ತೀಚಿನ ಟಿಪ್ಪಣಿಗಳು