ಮನೆ, ಮನಕೆ ತೇಜಸ್ವಿ
09 ಸೆಪ್ಟೆಂ 2008 ನಿಮ್ಮ ಟಿಪ್ಪಣಿ ಬರೆಯಿರಿ
in ನೆನಪು
ತೇಜಸ್ವಿಯವರ ೭೦ ನೆಯ ಹುಟ್ಟುಹಬ್ಬದ ಅಂಗವಾಗಿ ‘ಅವಧಿ’ ಹೊರತಂದ ಪಿ ಮಹಮದ್ ಹಾಗೂ ಗುಜ್ಜಾರ್ ರಚಿಸಿದ ಮೂರು ತೇಜಸ್ವಿ ಕಾರ್ಡ್ ಗಳನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಯಿತು.
ತೇಜಸ್ವಿಯವರ ಪತ್ನಿ ರಾಜೇಶ್ವರಿ, ತಂಗಿ ತಾರಿಣಿ, ಒಡನಾಡಿಗಳಾದ ಎಂ ಎಸ್ ಶ್ರೀರಾಮ್, ಜಿ ಎಚ್ ನಾಯಕ್ ಅವರು ಈ ಕಾರ್ಡ್ ಗಳನ್ನು ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ಭಾರತ ಯಾತ್ರಾ ಕೇಂದ್ರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿ ಚಂದ್ರೇಗೌಡ, ಎಂ ಪಿ ಪ್ರಕಾಶ್, ಬಿ ಎಲ್ ಶಂಕರ್ ಬಿಡುಗಡೆ ಮಾಡಿದರು, ಅವಿರತ ಬಳಗದ ಸಮಾರಂಭದಲ್ಲಿ ಕೆ ವೈ ನಾರಾಯಣ ಸ್ವಾಮಿ, ಸುಚೇಂದ್ರಪ್ರಸಾದ್ ಬಿಡುಗಡೆ ಮಾಡಿದರು.
ತೇಜಸ್ವಿ ಎಂಬ ‘ಮೂಡಿಗೆರೆಯ ಮಾಯಾವಿ’
09 ಸೆಪ್ಟೆಂ 2008 ನಿಮ್ಮ ಟಿಪ್ಪಣಿ ಬರೆಯಿರಿ
in ನೆನಪು
ತೇಜಸ್ವಿ ಎಂಬ ಮೂಡಿಗೆರೆಯ ಮಾಯಾವಿಗೆ ಈಗ ೭೦. ಪ್ರತಿಯೊಬ್ಬರಿಗೂ ಎಟುಕುವ ಮುಕ್ತ ವಿಶ್ವವಿದ್ಯಾಲಯವಾಗಿದ್ದ ತೇಜಸ್ವಿ ಎಲ್ಲರ ಮನೆ, ಮನದಂಗಳದಲ್ಲಿ ಇರಲಿ ಎಂಬ ಆಶಯದಿಂದ ‘ಅವಧಿ’ ಕನ್ನಡ ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ ಮಹಮ್ಮದ್ ಹಾಗೂ ಗುಜ್ಜಾರ್ ಅವರ ತೇಜಸ್ವಿ ಚಿತ್ರಗಳನ್ನು ಪ್ರಕಟಿಸಿದೆ.
ಇದು ಎಷ್ಟು ಮುದ್ದಾಗಿ ಪ್ರಕಟವಾಗಿದೆ ಎಂದರೆ ಈಗಾಗಲೇ ಸುಮಾರು ೧೦೦೦ ಪ್ರತಿಗಳು ಮಾರಾಟವಾಗಿ ಹೋಗಿದೆ. ಆದರೆ ಕಡಿದಾಳು ಶಾಮಣ್ಣ, ಭಾರತ ಯಾತ್ರಾ ಕೇಂದ್ರದ ಬಿ ಎಲ್ ಶಂಕರ್, ಎಂ ಪಿ ಪ್ರಕಾಶ್ ವಿವಿಧ ಕಾರ್ಯಕ್ರಮಗಳಲ್ಲಿ ಈ ಕಾರ್ಡ್ ನೋಡಿ ಇನ್ನಷ್ಟು ಕಾರ್ಡ್ ಗಳಿಗೆ ಬೇಡಿಕೆ ಮುಂದಿಟ್ಟಿದ್ದಾರೆ. ಹಾಗಾಗಿ ತೇಜಸ್ವಿ ಕಾರ್ಡ್ ಮತ್ತೆ ಎರಡನೆಯ ಮುದ್ರಣಕ್ಕೆ ಸಜ್ಜಾಗುತ್ತಿದೆ.
3 ಕಾರ್ಡ್ ಗಳ ಒಂದು ಸೆಟ್ ಗೆ 30 ರೂ. ಬದಲಿಗೆ ಗೆಳೆಯರ ಬಳಿ ಇರಲಿ ಎಂಬ ಕಾರಣಕ್ಕೆ ಮೂರು ಕಾರ್ಡ್ ಗಳನ್ನೂ ತಲಾ 25 ರಂತೆ ಖರೀದಿಸಿದರೆ 750 ರೂ ಬದಲಿಗೆ 650 ರೂಪಾಯಿಗೆ ಈ ಕಾರ್ಡ್ ಗಳನ್ನು ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತೇವೆ. ಡಿಡಿ ಯನ್ನು mayflower media house ಹೆಸರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಕಳಿಸಿ. ವಿಳಾಸವನ್ನು mayflowermh@gmail.com ಗೆ ಮೇಲ್ ಮಾಡಿ.
ಮತ್ತೆ ಸಿಗುವೆ ಮಗನೇ, ಹೋಗಿ ಬಾ
09 ಸೆಪ್ಟೆಂ 2008 1 ಟಿಪ್ಪಣಿ
in 1
ಮತ್ತೆ ಸಿಗುವೆ ಮಗನೇ, ಹೋಗಿ ಬಾ ತನ್ನ ಮಗುವಿನ ಸಾವನ್ನು ಎದುರು ನೋಡಬೇಕಾಗಿ ಬ0ದರೆ ತಾಯಿಯೊಬ್ಬಳ ಸ್ಥಿತಿ ಎ0ಥದಿರಬಹುದೆ0ದು ಊಹಿಸಿದರೇ ಮೈಜುಮ್ಮೆನ್ನುತ್ತದೆ. ಆದರೆ ಆ ಕಟುವಾಸ್ತವವನ್ನು ಅನುಭವಿಸಿದಾಕೆ ಕ್ರಿಸ್ ಆಯಿಲರ್. ತನ್ನದಲ್ಲದ ತಪ್ಪಿಗಾಗಿ ಎಡ್ಸ್ ಗೆ ಬಲಿಯಾದ ತನ್ನ ಎ0ಟು ವರ್ಷದ ಮಗು ಬೆನ್ನ ಕಡೆ ಗಳಿಗೆಯವರೆಗೂ ಪ್ರತೀ ಕ್ಷಣವನ್ನೂ ಹೀಗೆ ಮುಟ್ಟಿ ನೋಡಿ ಕಳಿಸಿದವಳ ದುಃಖ ಎ0ಥದಿತ್ತೋ. ಮಹಾತಾಯಿ ಆಕೆ. ಮಗುವಿನ ಸಾವಿನ ನ0ತರದ ದಿನಗಳ ಬಗ್ಗೆ ಆಕೆ ಬರೆದದ್ದನ್ನು ಇಲ್ಲಿ ಸ0ಗ್ರಹಿಸಿ ಕೊಡುತ್ತಿದ್ದೇವೆ.
ಜುಲೈ 4, 1986 ರ0ದು ಬೆನ್ ನಿಧನನಾದ. ಅದರ ಮರುದಿನದಿ0ದ ಒ0ದು ಬಗೆಯ ಖಾಲೀತನದ ಭಾವನೆ ನನ್ನನ್ನು ಆವರಿಸಿತು. ಬೆನ್ ಹುಟ್ಟಿ ಒಂಬತ್ತು ವರುಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ಅವನಿಲ್ಲದೇ ಇರುವ ಈ ದಿನ…. ಅದೆ0ಥದೋ ಒ0ಟಿತನ. ಅವನ ಸ್ಪರ್ಶ, ವಾಸನೆ, ಸಾನ್ನಿಧ್ಯವನ್ನು ನೆನಪಿಸುವ ಅವನ ಹಾಸಿಗೆಯಲ್ಲಿ ಉರುಳಿಕೊ0ಡೆ.
ಯಾವ ಸಾ0ಪ್ರದಾಯಿಕ ವಿಧಿ ವಿಧಾನಗಳನ್ನೂ ಕಟ್ಟುನಿಟ್ಟಾಗಿ ಅನುಸರಿಸಬಾರದೆ0ದು ನಾವು ಬೆನ್ ನ ದೇಹವನ್ನು ಪೈನ್ ಮರದಿ0ದ ಮಾಡಿದ ಶವಸ0ಪುಟದಲ್ಲಿರಿಸಿ ಕಪ್ಪು ಶವ ವಾಹನದ ಬದಲು ನಮ್ಮ ಬೆಳ್ಳನೆಯ ಟೊಯೋಟಾ ವ್ಯಾನ್ ನ ಹಿ0ಭಾಗದಲ್ಲಿರಿಸಿ ಚರ್ಚ್ ಗೆ ತ0ದೆವು. ಬೇಸಿಗೆಯ ಹಗಲಿನ ಬಿಸಿಲು ಚರ್ಚ್ ನಲ್ಲೆಲ್ಲ ಹರಡಿತ್ತು.
ಬೆನ್ನ ಎಲ್ಲಾ ಪ್ರೀತಿಪಾತ್ರರು ಸೇರಿದ್ದರು. ಹೂರಾಶಿಯನ್ನು ಸ್ಪರ್ಶಿಸಿದ ಗಾಳಿ ಸುವಾಸನೆಯನ್ನು ಹರಡುತ್ತಿತ್ತು. ಗ್ರ್ಯಾ0ಡ್ಪಾ ಆಯಿಲರ್ನಿ0ದ ಬೆನ್ ನ ಗುಣಗಾನವಾಯಿತು. ಗ್ರ್ಯಾ0ಟ್ ಒ0ದೆರಡು ಮಾತು ಹೇಳಿದ. ಅವನ ಧ್ವನಿಯಲ್ಲಿ ದೃಢತೆ, ಹೆಮ್ಮೆ ಇದ್ದಾಗ್ಯೂ ಕಣ್ಣೀರ ಧಾರೆಯನ್ನು ನಿಯ0ತ್ರಿಸಲಾಗಲಿಲ್ಲ.
ಅ0ದು ನಾವು ಎ0ಥದೋ ನೆಮ್ಮದಿ ಹೊ0ದಿದೆವು. ಆದರೆ ಅದು ಬಹುಕಾಲ ಉಳಿಯಲಿಲ್ಲ. ನನ್ನೆದೆಯಲ್ಲಿ ಆಳವಾದ ಭರಿಸಲಸಾಧ್ಯವಾದ ಶೂನ್ಯವೊ0ದು ಸ್ಥಾಪಿತವಾಯಿತು. ಕೆಲಸದಲ್ಲಿ ತೊಡಗಿಸಿಕೊ0ಡು ಗ್ರ್ಯಾ0ಟ್ ಬೆನ್ ನನ್ನು ಮರೆಯಲು ಯತ್ನಿಸಿದ. ಡಾ. ರಾಸ್ ಬ್ಯಾ0ಡ್ ನಿವೃತ್ತಿಯಾದರು. ಅವರ ಸ್ಥಾನದಲ್ಲಿ ಗ್ರ್ಯಾ0ಟ್ನನ್ನು ನೇಮಿಸಿದರು. ಜನ ನಿತ್ಯ ಗ್ರ್ಯಾ0ಟ್ನ ಹತ್ತಿರ ಕಷ್ಟ ಸುಖ ಹೇಳಿಕೊ0ಡು ನೆಮ್ಮದಿ ಶಾ0ತಿಯ ಮಾತನ್ನು ಆಲಿಸಲು ಬರತೊಡಗಿದರು, ನಾವು ಹಿ0ದೆ ರಾಸ್ಬ್ಯಾ0ಡ್ ಅವರ ಹತ್ತಿರ ಹೋದ0ತೆ.
ಇದೆಲ್ಲಾ ಆದ ಒ0ದು – ಒ0ದೂವರೆ ವರುಷದ ನ0ತರವಿರಬಹುದು, ಒ0ದು ದಿನ ಸ್ಕೀಯಿ0ಗ್ ಮುಗಿಸಿ ಮನೆಗೆ ಮರಳುತ್ತಿದ್ದೆವು. ಸುತ್ತೆಲ್ಲಾ ನಿರುಕಿಸಿದೆ. ಆಕಾಶ ನಿರಭ್ರವಾಗಿತ್ತು. ಎಲ್ಲರ ಮುಖದಲ್ಲಿ ಮ0ದಹಾಸ ಲಾಸ್ಯವಾಡುತ್ತಿತ್ತು. ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ. ಎಲ್ಲೂ ಏನೊ0ದೂ “ಕೊರೆ” ಕಾಣಲಿಲ್ಲ. ಈ ಸರಳ ಸತ್ಯದ ಮನನದಿ0ದ ಮನಸು ನಿರಾಳವಾಯಿತು. ಎಲ್ಲವೂ ಸರಿಯಾಗಿದೆ, ಸಹಜವಾಗಿದೆ. ನನ್ನ ಒಲವಿನ ಪತಿ ಮುದ್ದು ಮಕ್ಕಳೊ0ದಿಗೆ ಕಳೆಯಲು ನಾಳೆಗಳಿವೆ. ಅವರೆಲ್ಲ ನನ್ನನ್ನು ತು0ಬಾ ಪ್ರೀತಿಸುವರು. ಸದಾ ದುಃಖಿಸುತ್ತಾ ಕೂಡುವುದು ಸರಿಯಲ್ಲ ಎ0ದುಕೊ0ಡೆ.
ಆದಾಗ್ಯೂ “ಬೆನ್” ನ ನೆನಪಾಗುವುದು. ಇರಲಿ ಅವನು ಇ0ದು ನನ್ನೊಡನಿರದಿದ್ದರೂ ನಾನು ಅವನ ತಾಯಿಯಾಗಿಯೇ ಇರುವೆ. ಗ0ಡ ಸತ್ತ ಹೆಣ್ಣಿಗೆ “ವಿಧವೆ” ಎ0ಬ ಹೆಸರಿದೆ.
ಆದರೆ ಮಗುವನ್ನು ಕಳೆದುಕೊ0ಡ ತಾಯಿಗೆ ಏನಾದರೂ ಇ0ಥ ಹೆಸರಿದೆಯಾ? ಇಲ್ಲ, ಇರಲೂ ಸಾಧ್ಯವಿಲ್ಲ. ಏಕೆ0ದರೆ ಮಗು ಸತ್ತರೂ ಅವಳು “ತಾಯಿ” ಯಾಗಿಯೇ ಇರುವಳು. ತಾಯ್ತನದಿ0ದ ಅವಳನ್ನು ಯಾರೂ ಎ0ದೂ ಬೇರ್ಪಡಿಸಲಾರರು. ಮಗುವನ್ನು ಒ0ಭತ್ತು ತಿ0ಗಳು ಹೊಟ್ಟೆಯಲ್ಲಿ ಇಟ್ಟುಕೊ0ಡು ಆಮೇಲೆ ಒ0ದು ಜೀವವನ್ನು ಭೂಮಿಗೆ ತರುವ ಪವಾಡಸದೃಶ ಸೃಷ್ಟಿಕಾರ್ಯದಲ್ಲಿ ತಾಯಿ ಭಾಗವಹಿಸುವಳು. ಇ0ತಹ ಮಾತೃತ್ವ, ತಾಯ್ತನ ಹೇಗೆ ತಾನೇ ಇಲ್ಲವಾಗುವುದು? ಇದು ನನ್ನ ತರ್ಕ.
ನಾನೂ ಒಬ್ಬ ತಾಯಿ, ಆದುದರಿ0ದ ನನಗೆ ಗೊತ್ತಿದೆ. ಜೀವನ ಎ0ದಿಗೂ ಮುಕ್ತಾಯವಾಗುವುದಿಲ್ಲ. ಬದುಕು ಬದಲಾಗಬಹುದು, ಹೊಸ ರೂಪ ಪಡೆಯಬಹುದು, ಹೊಸಹಾದಿಗೆ ಹೊರಳಬಹುದು – ಆದರೆ ಅದೆ0ದಿಗೂ ಅ0ತ್ಯವಾಗದು!
ಬೆನ್ ನನ್ನು ಒ0ದಲ್ಲ ಒ0ದು ದಿನ ನಾನು ಖ0ಡಿತಾ ಭೇಟಿಯಾಗುವೆನು. ನನಗೆ ವಿಶ್ವಾಸವಿದೆ, ಮತ್ತೆ ನಮ್ಮ ಕುಟು0ಬ ಪುನರ್ ಮಿಲನಗೊಳ್ಳುವುದು!
ಎಮ್ಮ ಮನೆಯಂಗಳದಿ ‘ಗುಲಾಬಿ’
09 ಸೆಪ್ಟೆಂ 2008 ನಿಮ್ಮ ಟಿಪ್ಪಣಿ ಬರೆಯಿರಿ
ಗಿರೀಶ್ ಕಾಸರವಳ್ಳಿ ಅವರ ಬಹು ನಿರೀಕ್ಷಿತ ‘ಗುಲಾಬಿ ಟಾಕೀಸ್’ ಈಗ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ವೈದೇಹಿ ಅವರ ಕಥೆಯನ್ನು ಆಧರಿಸಿದ ಈ ಚಿತ್ರವನ್ನು PVR ಸಿನೆಮಾದಲ್ಲಿ ಸಂಜೆ 7-15 ಕ್ಕೆ ನೋಡಬಹುದು.
+++
ಸಂಡೇ ಇಂಡಿಯನ್ ಚಿತ್ರ ಬಿಡುಗಡೆಗೆ ಮುನ್ನ ನಡೆಸಿದ ಸಂದರ್ಶನದ ಆಯ್ದ ಬಾಗ ಇಲ್ಲಿದೆ-
‘ಗುಲಾಬಿ ಟಾಕೀಸ್’ ಚಿತ್ರದ ಕುರಿತು…
ಇದು ವೈದೇಹಿ ಅವರ ಸಣ್ಣಕಥೆ ಆಧರಿಸಿದ ಚಿತ್ರ. ವೈದೇಹಿ ಅವರೇ ಹೇಳುವಂತೆ ಇದೊಂದು ಕವಲು ಕಥೆ. ಇಲ್ಲಿ ಮರುಸೃಷ್ಟಿಯ ಕೆಲಸವಾಗುತ್ತದೆ. ಅಂದರೆ ಒಂದು ಕಥೆಯಿಂದ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ. ‘ಗುಲಾಬಿ ಟಾಕೀಸ್’ನ ಪ್ರಧಾನ ಭೂಮಿಕೆಯಲ್ಲಿರುವ ಪಾತ್ರದ ಹೆಸರೇ ಗುಲಾಬಿ. ಆಕೆ ಸೂಲಗಿತ್ತಿ. ಆಕೆಯ ಸ್ನೇಹಿತೆ ನೇತ್ರು. ‘ಗುಲಾಬಿ ಟಾಕೀಸ್’ ಎಂಬ ಚಿತ್ರಮಂದಿರದಲ್ಲಿ ಇವರೆಲ್ಲಾ ಸಿನಿಮಾ ನೋಡುತ್ತಾ ತಮ್ಮ ಖುಷಿ ಹಂಚಿಕೊಳ್ಳುತ್ತಾರೆ. ಸಿನಿಮಾ ಇಲ್ಲಿ ಅವರಿಗೆ ಕನಸುಗಾರಿಕೆಯ ಕೇಂದ್ರ ಬಿಂದುವಾಗುತ್ತದೆ. ಕನಸಿನ ಒಳಗಿನ ಬೇರೆ ಬೇರೆ ಸಾಧ್ಯತೆಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ನೇತ್ರು ಊರುಬಿಟ್ಟು ಓಡಿಹೋಗುತ್ತಾಳೆ. ಗುಲಾಬಿ ಗಂಡ ಮೀನುಗಾರಿಕೆಯಲ್ಲಾದ ಸಮಸ್ಯೆಯಿಂದ ಓಡಿಹೋಗುತ್ತಾನೆ. ಇಲ್ಲಿ ನೇತ್ರುವೇ ಗುಲಾಬಿಯ ಇನ್ನೊಂದು ಮುಖವಾಗುತ್ತಾಳೆ. ವಸ್ತುಸ್ಥಿತಿ ಏನಿದೆ ಎಂದು ನೋಡದೆ ಗುಲಾಬಿಯನ್ನು ಊರು ಬಿಟ್ಟು ಓಡಿಸಲಾಗುತ್ತದೆ. ಗುಲಾಬಿ ಪಾತ್ರವನ್ನು ಉಮಾಶ್ರೀ ಮತ್ತು ನೇತ್ರು ಪಾತ್ರವನ್ನು ಎಂ.ಡಿ. ಪಲ್ಲವಿ ನಿರ್ವಹಿಸಿದ್ದಾರೆ. ‘ದ್ವೀಪ’ಕ್ಕೆ ಸಂಗೀತ ನೀಡಿದ್ದ ಐಸಾಕ್ ಥಾಮಸ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
‘ಗುಲಾಬಿ ಟಾಕೀಸ್’ ಜೀವನ ಸಂದಿಗ್ಧತೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ?
ಈ ಚಿತ್ರದಲ್ಲಿ ಮಾಧ್ಯಮಗಳ ಪರಿಣಾಮ ಒಂದು ಸಮಾಜದ ಮೇಲೆ ಯಾವ ರೀತಿ ಆಗುತ್ತಿದೆ ಎಂಬುದನ್ನು ಹೇಳುವ ಯತ್ನ ಮಾಡಿದ್ದೇನೆ. ಕಥೆಯಲ್ಲಿ ಎಂದಿನಂತೆ ದೊಡ್ಡ ತೆರೆಗೆ ಹೊಂದಿಕೆಯಾಗಬಲ್ಲ ಬದಲಾವಣೆ ಮಾಡಿಕೊಂಡಿದ್ದೇನೆ. ಮಾಧ್ಯಮಗಳು ಸಿದ್ಧ ಅಭಿಪ್ರಾಯಗಳನ್ನು ನಮ್ಮ ಮೇಲೆ ಹೇರುತ್ತವೆ. ಅವುಗಳ ನಿಲುವನ್ನು ನಾವು ಪ್ರಶ್ನಿಸುವುದೇ ಇಲ್ಲ. ಅವುಗಳನ್ನು ಹಾಗೇ ಸ್ವೀಕರಿಸುತ್ತಾ ನಮ್ಮೊಳಗೆ ನಮ್ಮದೇ ಆದಹೊಸ ಸ್ಕ್ರಿಪ್ಟ್ ತಯಾರಾಗುತ್ತದೆ. ಇಲ್ಲಿ ಎಲ್ಲಾ ಮಾಹಿತಿಯೂ ಲಭ್ಯ. ಆದರೆ ಇವು ಎಷ್ಟು ಸತ್ಯ ಎಂಬುದು ಯಾರಿಗೂ ಗೊತ್ತಿಲ್ಲ. ಈ ಚಿತ್ರವೂ ಒಂದು ಹುಡುಕಾಟವೇ.
ಸ್ತ್ರೀ ಸಂವೇದನೆಗಳಿರುವ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ್ದೀರಿ. ‘ಗುಲಾಬಿ ಟಾಕೀಸ್’ ಅಂತಹ ಇನ್ನೊಂದು ಚಿತ್ರವೇ?
ಸ್ವತಃ ಮಹಿಳೆಯೇ ಈಗ ಎಲ್ಲೆಡೆ ಕೇಂದ್ರಬಿಂದುವಾಗುತ್ತಿದ್ದಾಳೆ. ಹಾಗೆಂದು ನಾನು ಉದ್ದೇಶಪೂರ್ವಕವಾಗಿ ಇಂತಹ ವಸ್ತುಗಳನ್ನೇ ಆಯ್ದುಕೊಳ್ಳುತ್ತೇನೆ ಎಂದಲ್ಲ. ಕಥೆ ಇಷ್ಟವಾಗಿ ಅದನ್ನು ತೆರೆಯ ಮೇಲೆ ತರುವ ಸಾಧ್ಯತೆಗಳಿದ್ದಾಗ ಚಿತ್ರಕಥೆಯ ಕೆಲಸ ಶುರುಮಾಡುತ್ತೇನಷ್ಟೆ. ಆದರೂ ಪ್ರತಿ ಬಾರಿ ಹೀಗೇಕಾಗುತ್ತದೆ ಎಂಬುದು ಗೊತ್ತಿಲ್ಲ. ಸ್ತ್ರೀ ಸಂವೇದನೆಯೆಡೆಗೆ ಒಲವಿದೆ ಎಂದು ಹೇಳಲಾರೆ. ಏಕೆಂದರೆ ನಾನು ಅದರ ಹೊರತಾಗಿಯೂ ಚಿತ್ರಗಳನ್ನು ನಿರ್ದೇಶಿಸಿದ್ದೇನೆ.
ಅಮೆರಿಕಾದಲ್ಲಿ ಅಶ್ವಥ್
09 ಸೆಪ್ಟೆಂ 2008 1 ಟಿಪ್ಪಣಿ
(Please note: If you are listening in India, the program starts at 8.00 PM IST on Wednesday night)
-madhukanthk@yahoo.com
ಇತ್ತೀಚಿನ ಟಿಪ್ಪಣಿಗಳು