ಅಯ್ಯೋ ಪಾಪ ಎನ್ನಬೇಡಿರೇ!?

ಅಕ್ಷತಾ ಕೆ

ದಣಪೆಯಾಚೆ…

ಇದರಲ್ಲಿ ಅಂಥ ವಿಶೇಷವೇನೂ ಇಲ್ಲ. ತುಂಬಾ ಸಹಜ ಮತ್ತು ಸರಳವಾದ ಸಂಗತಿಯಿದು. ಭಯ, ದುಗುಡ, ದುಮ್ಮಾನಕ್ಕೆಲ್ಲ ಕಾರಣವೇ ಇಲ್ಲ ಎಂದು ಅಕ್ಕನಿಗೆ ಮನವರಿಕೆಯಾಗಿದ್ದರಿಂದ ಈ ವಿಷಯದಲ್ಲಿ ಅವಳು ಬಹಳ ಸ್ಥಿತಪ್ರಜ್ಞಳಾಗಿ ಮತ್ತು ಪ್ರಾಜ್ಞಳಾಗಿ ವತರ್ಿಸಿದ್ದಳು. ಅದು ಆಗಿದ್ದು ಹೀಗೆ ಸಹಕಾರಿ ಬ್ಯಾಂಕಿನಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅಪ್ಪ, ಸಕರ್ಾರಿ ಆಸ್ಪತ್ರೆಯಲ್ಲಿ ನಸರ್್ ವೃತ್ತಿ ಮಾಡುವ ಅಮ್ಮನ ಮೂವರು ಮಕ್ಕಳಲ್ಲಿ  ಅಕ್ಕ ಇದೀಗ ತಾನೇ ಎಂಎ ಮುಗಿಸಿ ಖಾಸಗಿ ಕಾಲೇಜಿನಲ್ಲಿ ಪಾಠ ಮಾಡುತ್ತ ಪಿಹೆಚ್ಡಿಯನ್ನು ಮಾಡುತ್ತಿರುವವಳು. ಅವಳ ಎಂ ಎ ಮುಗಿದ ಕೂಡಲೆ ಅಪ್ಪ, ಅಮ್ಮ ಮದುವೆಯ ಪ್ರಸ್ತಾಪವನ್ನು ನೇರವಾಗಿ ಅಲ್ಲದಿದ್ದರೂ ಅಲ್ಲಲ್ಲಿ ಸಮಯ ಸಂದರ್ಭ ನೋಡಿಕೊಂಡು ನಿಧಾನಕ್ಕೆ ತೆಗೆದಿದ್ದರು ಆದರೆ ಅವಳು ಮಾತ್ರ ನೇರವಾಗಿ ಅಪ್ಪ ಅಮ್ಮನನ್ನು ಕೂರಿಸಿಕೊಂಡು ತನ್ನ ಮುಂದೆ ಡಾಕ್ಟರೇಟ್ ಮಾಡುವ ಗುರಿಯೊಂದಿದೆ. ಇನ್ನು ಎರಡು ವರ್ಷವಾದರೂ ಆ ಗುರಿ ಸಾಧನೆಗೆ ಬೇಕೆ ಬೇಕು ಅಲ್ಲಿವರೆಗೂ ದಯವಿಟ್ಟು ಮದುವೆ ವಿಷಯ ಎತ್ತುವುದು ಬೇಡ ಎಂದಿದ್ದಳು. ಎರಡ್ಮೂರು ವರ್ಷ ಎಂದರೂ ಅಲ್ಲಿಗೆ ಇಪ್ಪತೈದು, ಇಪ್ಪತ್ತಾರು ವರ್ಷ ಆಗಿಬಿಡತ್ತಲ್ಲ ಎಂದು ಗೊಣಗಿ ಕೊಂಡರೂ ಮಗಳ ಮಾತಿಗೆ ಪ್ರತಿ ಹೇಳದೆ ಸುಮ್ಮನಾಗಿದ್ದರು.

ಗಂಭೀರ ಮನಸ್ಥಿತಿಯ, ಹೆಚ್ಚಿಗೆ ಮಾತನಾಡದ, ಒಂದಿಬ್ಬರು ಗೆಳತಿಯರು ಮಾತ್ರವಿರುವ, ಪುಸ್ತಕದ ಕುಡುಮಿಯಾಗಿರುವ ಅಕ್ಕನಿಗೆ ಹೋಲಿಸಿದರೆ ತಂಗಿ ಭಿನ್ನವಾಗಿದ್ದಳು. ಸದಾ ಮಾತು, ನಗೆಯಿಂದ ತುಂಬಿಕೊಂಡಂತಿರುತಿದ್ದ ಅವಳ ಮಾತಿನಲ್ಲಿ ಹಾಸ್ಯ ರಸ ಚಿಮ್ಮಿ ಬರುತಿತ್ತು. ಇಡೀ ವಾತಾವರಣ ಅವಳ ವರ್ತನೆಯಿಂದಾಗಿ ಜೀವಂತಿಕೆಯಿಂದ ಕಂಗೊಳಿಸುತಿತ್ತು. ತಂಗಿಗೆ ಅಕ್ಕನಲ್ಲಿ ಗೌರವ, ಅಕ್ಕನಿಗೆ ತಂಗಿಯ ಬಗ್ಗೆ ಬೆರಗು. ಇಂಥ ತಂಗಿ ಮೊನ್ನೆ ಮೊನ್ನೆ ಪದವಿ ಕೊನೆ ವರ್ಷದ ಪರೀಕ್ಷೆ ಬರೆದ ಸ್ವಲ್ಪ ದಿನಕ್ಕೆ ಒಬ್ಬ ಹುಡುಗನನ್ನು ಮನೆಗೆ ಕರೆ ತಂದಿದ್ದಳು. ತಂಗಿಯ ಗೆಳೆಯರ ಗುಂಪು ದೊಡ್ಡದಿದ್ದು ಅದರಲ್ಲಿ ಹುಡುಗಿಯರಿಗಿಂತ ಹುಡುಗರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಇದ್ದು ಅವರೆಲ್ಲರ ಜೊತೆಗೂ ಈಕೆ ಸಹಜ ಸ್ನೇಹದಿಂದ ವತರ್ಿಸುವುದರಿಂದ ಆವತ್ತು ಮನೆಗೆ ಬಂದ ಹುಡುಗನ ಬಗ್ಗೆ ಯಾರಿಗೂ ಅಚ್ಚರಿ ಅನಿಸಲಿಲ್ಲ. ಆದರೆ ಆವತ್ತಿನ ನಂತರ ತಂಗಿಯ ಪ್ರತಿ ಮಾತಿನಲ್ಲೂ ಆತನ ಪ್ರಸ್ತಾಪವಿದ್ದೆ ಇರುತಿತ್ತು ಜೊತೆಗೆ ಎದುರು ಕೂತವರು ಅವನ ಬಗ್ಗೆ ಕೇಳಲಿ ಎಂಬ ಆಸೆ ಕಣ್ಣಲ್ಲಿ ಕುಣಿಯುತಿತ್ತು. ಹೇಗಾದರೂ ಮಾಡಿ ಎಲ್ಲಿಂದಾದರೂ ಒಂದು ಎಳೆ ಹಿಡಿದುಕೊಂಡು ಸಂಬಂಧ ಪಡದ ಮಾತಿನಲ್ಲೂ ಸಹ ಅವನನ್ನು ತಂದು ಜೋಡಿಸುವಳು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತಿದ್ದ ಅಕ್ಕ  ಏನೇ ಮದುವೆ ಗಿದುವೆ ಮಾಡ್ಕೋತಿಯೇನೆ ಅವನನ್ನು ಎಂದು ನೇರವಾಗಿಯೇ ಕೇಳಿಯೇ ಬಿಟ್ಟಿದ್ದಳು. ಹಾಗೆ ಕೇಳಿ ಅಕ್ಕ ತಂಗಿಯ ಮುಖ ನೋಡಿದರೆ ಅಲ್ಲಿ ಕಂಡಿದ್ದು ಒಂದು ಬಗೆಯ ನಿರಾಳತೆ! ಅಯ್ಯೋ ಇದನ್ನು ಹೇಳಲು ಎಷ್ಟೆಲ್ಲ ತಿಣುಕಾಡಿದೆ ಕೊನೆಗೂ ಗ್ರಹಿಸಿದಿರಲ್ಲ ಸಧ್ಯ ಎಂಬಂಥದು.

ನಿಂಗೆ ಇನ್ನೂ ಒಂದು ವಿಷಯ ಹೇಳಬೇಕು ನೀನೇನು ಅನ್ಕೋಳ್ತಿಯೋ ಅಂಥ… ರಾಗ ಎಳೆದಿದ್ದಳು ತಂಗಿ. ನಿಲರ್ಿಪ್ತತೆಯಿಂದ ಎದುರು ನಿಂತಿದ್ದಳು ಅಕ್ಕ, ಅವಳ ನೋಟವೆ ಏನು ಹೇಳಬೇಕೊ ಅದನ್ನು ಯಾವ ಸಂಕೋಚ, ಮುಜುಗರ ಇಲ್ಲದೆ ಹೇಳುವಂತವಳಾಗು ಎಂಬುದನ್ನು ಹೇಳುತಿತ್ತು. ತಂಗಿ ಪ್ರಾರಂಭಿಸಿದಳು ಅವರು ( ಕ್ಷಣಹೊತ್ತಿನ ಹಿಂದೆ ಅವನು ಇದ್ದಿದ್ದು ಈ ಕ್ಷಣ ಅವರು ಆಗಿತ್ತು) ಅದೇ ನಾನು ಹೇಳ್ತಾ ಇರ್ತೀನಲ್ಲ ನನ್ನ ಲೆಕ್ಚರರ್ ಅನಿರುದ್ಧ. ಅವರು ನಾವಿಬ್ಬರೂ ಕೂಡಲೇ ಮದುವೆ ಆಗೋಣ. ಓದನ್ನೇನು ಜಛಿಠಟಿಣಟಿಣಜ  ಮಾಡೋದು ಬೇಡ. ನಾನೇ ಮುಂದೆ ಓದಿಸ್ತೀನಿ ಅಂತಿದ್ದಾರೆ ಎಂದು ನೆಲ ನೋಡತೊಡಗಿದಳು. ಅಕ್ಕ ಮತ್ತೆ ತಂಗಿಯ ಮುಖ ನೋಡಿದಳು ಅಲ್ಲಿ ಅವನ ಒತ್ತಾಯದ ಮುದ್ರೆಗಿಂತ ಆ ನಿಧರ್ಾರಕ್ಕೆ ಇವಳ ತೃಪ್ತ ಒಪ್ಪಿಗೆಯ ಮುದ್ರೆಯಿರುವುದೇ ಗೋಚರವಾಯಿತು. ಒಬ್ಬ ಹುಡುಗಿ ರಾಶಿ ಗೆಳೆಯರ ಮಧ್ಯೆ ಇರುವಾಗಲೂ, ನಗೆ ಮತ್ತು ಮಾತಿನಿಂದ ತುಂಬಿರುವಾಗಲೂ ಅವಳಿಗೆ ತಾನು ಒಂಟಿ ಎಂಬ ಭಾವನೆ ಕಾಡಬಹುದು. ಹಾಗಾದಾಗ ತನ್ನನ್ನು ಪೂತರ್ಿಯಾಗಿ ಕೊಟ್ಟುಕೊಳ್ಳುವ ಒಬ್ಬ ಹುಡುಗನ ಸಾಂಗತ್ಯದ ಅಗತ್ಯವಿದೆ ಎಂದು ತಂಗಿಗೆ ಅನಿಸಿದ್ದರೆ ಅದು ತುಂಬಾ ಸಹಜ ಮತ್ತು ಸರಳ ಎಂದು ಅಕ್ಕ ಮನವರಿಕೆ ಮಾಡಿಕೊಂಡಳು.

ಅಪ್ಪ, ಅಮ್ಮನ ಬಳಿ ಅಕ್ಕನೆ ವಿಷಯ ಪ್ರಸ್ತಾಪಿಸಿದಳು. ಅವರಿಬ್ಬರು ಕ್ಷಣಕಾಲ ಮಾತೇ ಮರೆತವರಂತಾದರು. ಮೊದಲ ಮಗಳ ಮದುವೆಗೆ ಇನ್ನೂ ಎರಡು ವರ್ಷ ಬೇಕು ಅನ್ನೋ ಹೊತ್ತಿಗೆ ಎರಡನೇ ಮಗಳ ಮದುವೆಯ ಬಗ್ಗೆ ಅವರು ಯೋಚಿಸಿಯೇ ಇರಲಿಲ್ಲ. ಅಂಥದರಲ್ಲಿ ಈ ಕ್ಷಣದಲ್ಲೆ ಮದುವೆ ಮಾಡಿದರೂ ಸೈ ಎನ್ನುವ ಸ್ಥಿತಿ ಉಂಟಾಗಿದೆ. ಅಕ್ಕನೇ ಮತ್ತೆ ಮಾತು ತೆಗೆದಳು `ನೋಡಿ ನನಗೆ ಸದ್ಯಕ್ಕೆ ಮದುವೆ ಬೇಡ ಎಂದಾಗ ಹೇಗೆ ಒಪ್ಪಿದಿರೋ ಹಾಗೆ ಅವಳು ಮದುವೆ  ಮಾಡಿಕೊಳ್ತೀನಿ ಅಂದಾಗ ಮಾಡಿಕೊಡಲು ತಯಾರಾಗಿ. ಅವರವರ ಆಸಕ್ತಿಯನ್ನು ಕಾಯೋದೆ ಮುಖ್ಯ ಎಂದಳು.  ಸೂಕ್ಷ್ಮ  ಮನಸ್ಥಿತಿಯ ಅಪ್ಪ ಅಮ್ಮ ಎಲ್ಲವನ್ನು ಗ್ರಹಿಸಿದರು. ಮತ್ತು ಆ ಹುಡುಗನನ್ನು ಕರೆಸಿ ಮಾತಾಡಿ ನಿಧಾನಕ್ಕೆ ಮದುವೆಯ ತಯಾರಿಯಲ್ಲಿ ತೊಡಗಿದರು. ಎಷ್ಟೆ ಸರಳ ಎಂದುಕೊಂಡರೂ ಮದುವೆಗೆ ಒಂದು ತಯಾರಿ ಬೇಕೆ ಬೇಕಾಗುತ್ತದೆ. ಮದುವೆಯ ಸಿದ್ಧತೆಗಳು ನಡೆದಂತೆಲ್ಲ ಮನೆಯಲ್ಲಿ ಮನೆಯವರಲ್ಲಿ ಒಂದು ಬಗೆಯ ಉಲ್ಲಾಸ ಉತ್ಸಾಹ ತುಂಬಿಕೊಳ್ಳತೊಡಗಿತು.

ಆದರೆ ಇಂಥ ಉಲ್ಲಾಸದ ಮಧ್ಯೆಯು ಅಕ್ಕನು ಸೇರಿದಂತೆ ಮನೆ ಮಂದಿ ಸಣ್ಣ ಪುಟ್ಟ ಸಂಧಿಗ್ದಕ್ಕೆ ಮುಜುಗರಕ್ಕೆ ಸಿಲುಕತೊಡಗಿದರು. ಇಷ್ಟಕ್ಕೆಲ್ಲ ಅಕ್ಕನೆ ಕಾರಣ ಎಂದು ತಂಗಿ ಸಿಟ್ಟಾದಳು, ಅಮ್ಮ ಒಳಗೊಳಗೆ ಕೊಸಕೊಸ ಎನ್ನುವಳು. ಇನ್ನು ಅಪ್ಪನು ಒಂದು ರೀತಿಯ ನಿಲರ್ಿಪ್ತತೆಗೆ ಸಂದಂತೆ ಕಾಣತೊಡಗಿದ. ಅದಾಗಿದ್ದು ಹೀಗೆ ಅಕ್ಕನನ್ನು ಬಿಟ್ಟು ತಂಗಿಯ ಮದುವೆ ಅನ್ನೋ ಹೊತ್ತಿಗೆ ಅಕ್ಕ ಪಕ್ಕದವರು ನೆಂಟರಿಷ್ಟರು ತಮ್ಮ ತಮ್ಮ ಬಗೆಯಲ್ಲಿ ಇದಕ್ಕೆ ಕಾರಣ ಹುಡುಕತೊಡಗಿದರು. ಇದು ಯಾವ ಮಟ್ಟ ತಲುಪಿತೆಂದರೆ ಪ್ರೇಮಿಸಿ ಏನೋ ಎಡವಟ್ಟು ಮಾಡಿಕೊಂಡಿದೆ ಹುಡುಗಿ ಅದಕ್ಕೆ ಇಷ್ಟು ಹರಿಬರಿ ಮಾಡುತಿದ್ದಾರೆ ಎಂದು ತಂಗಿಯ ಹೊಟ್ಟೆಯನ್ನೇ ದೃಷ್ಟಿಸಿ ನೋಡಿದವರು ಇದ್ದರು. ಮನುಷ್ಯರ ಈ ಬಗೆಯ ಸಣ್ಣತನ, ಸಂಕುಚಿತತೆಗಳು ಮನೆ ಮಂದಿಯ ದುಗುಡವನ್ನು ಹೆಚ್ಚಿಸುತಿತ್ತು. ಅಕ್ಕನ ಗೊಂದಲ ದಿನ ದಿನಕ್ಕೂ ತೀವ್ರಗೊಳ್ಳತೊಡಗಿತು, ಅವಳೇನು ಹೊರಗಿನವರ ಮಾತಿಗೆ ಏನೇನೂ ತಲೆ ಕೆಡಿಸಿಕೊಂಡವಳಲ್ಲ ಆದರೆ ಮನೆಮಂದಿಯಲ್ಲಾದ ಬದಲಾವಣೆಯೇ ಅವಳನ್ನು ಕಂಗೆಡಿಸತೊಡಗಿತ್ತು.

ತಂಗಿಯ ಮದುವೆ ಎಂದರೆ ಅದೊಂದು ಸಹಜವಾಗಿ ನಡೆಯುವ ಪ್ರಕ್ರಿಯೆ ಎಂದಷ್ಟೆ ಭಾವಿಸಿದ್ದವಳಿಗೆ ಅದು ಇಷ್ಟು ಭಿನ್ನ ಭಿನ್ನ ಆಯಾಮಗಳನ್ನು ಹೊಂದಿದೆ ಎಂಬುದು ಆ ಹೊತ್ತಿಗೆ ಕಾಡಿರಲಿಲ್ಲ. ಮದುವೆಗೆ ಬಟ್ಟೆ, ಬಂಗಾರ  ಖರೀದಿಸಬೇಕಲ್ಲ, ಈ ಮನೆಯ ಅಮ್ಮ ಒಡವೆ ವಸ್ತ್ರದ ಬಗ್ಗೆ ಮೊದಲಿನಿಂದಲೂ ಹಪಾಹಪಿ ಗುಣದವಳಲ್ಲ. ಅವಳದು ಹೇಗೂ ಶ್ವೇತ ಬಣ್ಣದ ಯೂನಿಫಾಮ್ ಅದು ಬಿಟ್ಟರೆ ಒಂದು ಹತ್ತಿಪ್ಪತ್ತು ಸೀರೆಗಳಿರಬಹುದು ಅವಳ ಬಳಿ ಇನ್ನು ಬಂಗಾರವು ಅಷ್ಟೆ ಇರುವುದೆ ಅತಿ ಕಡಿಮೆ ತಾಳಿ, ಕಿವಿಯೋಲೆ ಬಿಟ್ಟರೆ ಒಂದು ಉಂಗುರ ಸಹ ಎಂದಿಗೂ ಧರಿಸಿದವಳಲ್ಲ ಇಂಥ ಸರಳ ಅಮ್ಮನ ಇನ್ನೂ ಸರಳವಾಗಿರುವ ಮಗಳು ಅಕ್ಕ, ಹಾಗಿದ್ದರಿಂದ ತಂಗಿಗೆ ಸಹ ಯಾವ ಹೆಚ್ಚಿನ ಫ್ಯಾಶನ್ ಮಾಡಲು ಅವಕಾಶವಿರಲಿಲ್ಲ. ಆದರೀಗ ಮಗಳ ಮದುವೆಗೆ ಬಟ್ಟೆ ಬಂಗಾರ ಆರಿಸುವ ಬಗ್ಗೆ ಅಮ್ಮ ಕಾತರಗೊಂಡಳು ನಮ್ಮ ಮನೆಯಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದು. ಹತ್ತಿರದವರಿಗೆಲ್ಲ ಸೀರೆ ಕೊಡಬೇಕು, ಇಬ್ಬರೂ ಮಕ್ಕಳಿಗೂ ಒಂದಿಷ್ಟು ಬಂಗಾರ ಕೊಳ್ಳಬೇಕು ಎಂದು ಸಂಭ್ರಮಿಸತೊಡಗಿದಳು. ಅಕ್ಕನಿಗೆ ಅಮ್ಮನ ಸಂಭ್ರಮ ತುಂಬಾ ಸಕಾರಣವಾದದ್ದು ಎಂದೆ ಅನಿಸಿತು. ಆದರೆ ತನಗೆ ಮಾತ್ರ ಒಂದು ಸರಳವಾದ ಕಡಿಮೆ ಬೆಲೆಯ ಸೀರೆ ಸಾಕು ಬಂಗಾರವಂತೂ ಬೇಡವೆ ಬೇಡ ಎಂದು ಖಡಾಖಂಡಿತವಾಗಿ ಅಕ್ಕ ನುಡಿದಾಗ ಅಮ್ಮನ ಸಂತೋಷದ ಬಲೂನಿಗೆ ಸೂಜಿ ಚುಚ್ಚಿದಂತಾಯಿತು. ತಂಗಿ ಇದನ್ನು ಬೇರೆಯದೇ ರೀತಿ ಅಥರ್ೈಸಿಕೊಂಡು ಅಕ್ಕ ಹೇಳಿಕೊಳ್ಳದಿದ್ದರೂ ಅವಳಿಗೆ ತನ್ನ ಮದುವೆ ದುಃಖ ತಂದಿದೆ  ಅದಕ್ಕೆ ಅವಳು ಸೀರೆ ಆಭರಣ ಎಲ್ಲವನ್ನು ನಿರಾಕರಿಸುತಿದ್ದಾಳೆ ಎಂದೆ ಬಗೆದಳು. ಈ ಹಿಂದೆ ತಂಗಿಯಲ್ಲಿ ತುಂಬಾ ಹೆಮ್ಮೆ ಮೂಡಿಸುತಿದ್ದ ಅಕ್ಕನ ಸರಳತೆ ಮತ್ತು ಗಾಂಭೀರ್ಯ ಈ ಹೊತ್ತು  ಬೇರೆಯದೆ ತೆರನಾಗಿ ಕಂಡು ಇಬ್ಬರ ನಡುವಿನ ಪರದೆ ದೊಡ್ಡದಾಗುತಿತ್ತು.

ತಂಗಿಗೆ ಮತ್ತೊಂದು ಕಷ್ಟವೂ ಇತ್ತು ಅವಳು ಇಲ್ಲಿನವರೆಗಿನ ಬದುಕಿನಲ್ಲಿ ಅಕ್ಕನನ್ನು ನೋಡಿ, ಕೇಳಿ ಅನುಸರಿಸುತಿದ್ದಳು. ಆದರೀಗ ಮದುವೆಯ ವಿಷಯದಲ್ಲಿ ಅಕ್ಕ ಪೂತರ್ಿ ಅನನುಭವಿ. ಇವಳಿಗಾದರೂ ಒಬ್ಬ ಹುಡುಗನನ್ನು ಪ್ರೇಮಿಸಿದ ಅನುಭವ ಇದೆ, ಅಕ್ಕ ಹುಡುಗರ ವಿಷಯವನ್ನು ಎಂದೂ ಅಚ್ಚರಿಯಿಂದ, ಪ್ರೀತಿಯಿಂದ ಹೋಗಲಿ ಕುತೂಹಲದಿಂದಾದರೂ ಮಾತನಾಡಿದವಳೇ ಅಲ್ಲ. ಮತ್ತೆ ಈ ಬಗ್ಗೆ ಅವಳಲ್ಲಿ ಯಾವ ಹೆಚ್ಚುಗಾರಿಕೆ ಅಥವಾ ಕೀಳರಿಮೆಯು ಕಾಣುವುದಿಲ್ಲ. ಅದು ತನಗೆ ಸಂಬಂಧ ಪಡದ ಲೋಕ ಎಂಬಂತೆ ಇರುತ್ತಾಳೆ. ಇಂಥವಳ ಕೂಡ ಮದುಮಗಳು ತಂಗಿ ಹಂಚಿಕೊಂಡಾಳೇನು? ಅದಕ್ಕೆ ಅವಳೀಗ ಚಿಕ್ಕಮ್ಮ, ಅತ್ತೆ, ಮೊನ್ನೆ ಮೊನ್ನೆ ಮದುವೆಯಾಗಿರುವ ದೊಡ್ಡಮ್ಮನ ಮಗಳ ಜೊತೆ ಜಾಸ್ತಿ ಹೊತ್ತು ಕಳೆಯುತ್ತಾಳೆ ಅವರೆಲ್ಲರ ನಗೆ, ಹಾಸ್ಯದಿಂದ ಮನೆ ಲಕಲಕಿಸತೊಡಗಿದೆ. ಆದರೆ ಅಕ್ಕ ಬಂದಳು ಅಂದರೆ ಅವರೆಲ್ಲರ ಬಾಯಿ ಬಂದಾಗಿಬಿಡುತ್ತದೆ. ಇಲ್ಲವೇ ಯಾವುದೋ ಸಂಬಂಧವಿಲ್ಲದ ವಿಷಯದ ಬಗ್ಗೆ ನಾಲಿಗೆ ಹೊರಳಿ ಕೊಳ್ಳುತ್ತದೆ. ಇದು ಅಕ್ಕನ ಗಮನಕ್ಕೂ ಬರಲಾರಂಭಿಸಿದೆ. ಅಕ್ಕನಿಗೆ ತುಂಬಾ ನೋವಾಗಿದ್ದು ಒಮ್ಮೆ ಅಮ್ಮ ಮತ್ತು ತಂಗಿ ಕೋಣೆಯಲ್ಲಿ ಏನೋ ಗುಸುಗುಸು ನಡೆಸಿದ್ದರು. ಅಮ್ಮ ತುಂಬಾ ಉತ್ಸಾಹದಿಂದ ತನ್ನ ಮತ್ತು ಅಪ್ಪನ ನಡುವಿನ ಪ್ರೇಮದ ದಿನಗಳನ್ನು ಮಗಳಿಗೆ ಬಣ್ಣಿಸುತಿದ್ದಳು. ಅಪ್ಪ ಅಮ್ಮನದು ಅಂತರ್ ಜಾತಿ ಪ್ರೇಮದ ಮದುವೆ ಎಂಬುದಷ್ಟೆ ಗೊತ್ತಿತ್ತು ಬಿಟ್ಟರೆ ಅವರು ಬೇರೆಯವರ ಅಪ್ಪ ಅಮ್ಮ ಇರುವ ಹಾಗೆ ಇದ್ದರು. ಪ್ರೇಮದ ಮದುವೆಯ ವಿಶೇಷತೆ ಏನು ಎಂಬುದನ್ನು ಮಕ್ಕಳಿರುವಾಗ ಸಿನಿಮಾ ನೋಡಿ ಕಲ್ಪಿಸಿ ಕೊಂಡಿದ್ದೆಷ್ಟೋ ಅಷ್ಟೆ ಮನೆಯಲ್ಲಿರವವರಲ್ಲಿ ಅವ್ಯಾವ ವಿಶೇಷತೆಗಳು ಕಾಣುತಿರಲಿಲ್ಲ. ಆದರೀಗ ಇಷ್ಟು ದಿನದ ಮೇಲೆ ಅಮ್ಮ ತನ್ನ ಪ್ರೇಮ ಪರಿಣಯವನ್ನು ಮಗಳಿಗೆ ಹೇಳುತಿದ್ದಾಳೆ ಬಿಟ್ಟರೆ ಸಿಕ್ಕೀತೆ ತಾನು ಕೇಳಿಸಿಕೊಳೋಣ ಎಂದು ಅಕ್ಕ ಅವರ ಬಳಿ ತೆರಳಿದರೆ ಇವಳನ್ನು ನೋಡಿದ್ದೆ ಅಮ್ಮ ಫುಲ್ ಗಪ್ಚುಪ್ ಆಗಿದ್ದೆ ಅಲ್ಲದೆ ಎಲ್ಲಿ ಚೂರು ಪಾರು ಇವಳ ಕಿವಿಗೆ ಬಿತ್ತೋ ಎಂದು ಮಹಾ ಮುಜುಗರಕ್ಕೆ ಒಳಗಾದವಳಂತೆ ಕಂಡು ಬಂದಳು. ಅಕ್ಕನಿಗೆ ತಾನು ಪರಕೀಯಳು ಅನಿಸತೊಡಗಿತು ಮಾತ್ರವಲ್ಲ ಚಿಕ್ಕವರಿರುವಾಗ ತಾನು ಮತ್ತು ತಂಗಿ ಅಮ್ಮ ತೋಳಲ್ಲಿ ಕೂತು ಕತೆ ಕೇಳುತಿದ್ದುದು ಮತ್ತು ನಮ್ಮ ಕತೆಯನ್ನು ಹಂಚಿಕೊಳುತಿದ್ದುದು ನೆನಪಾಗಿ ಈಗವರ  ಲೋಕಕ್ಕೆ ತನಗೆ ಪ್ರವೇಶವಿಲ್ಲವಲ್ಲ ಎಂದು ಸಂಕಟವಾಯಿತು.

ಇಷ್ಟಕ್ಕೆ ಮುಗಿಯಲಿಲ್ಲ ಮದುವೆ ಮನೆಯಲ್ಲಂತೂ ಎಲ್ಲರ ಕಣ್ಣುಗಳು ಅಕ್ಕನ ಮೇಲೆ. ಮತ್ತೆ ಎಲ್ಲರ ಕಣ್ಣುಗಳಲ್ಲು ಅಯ್ಯೋ ಪಾಪ ಎಂಬ ಅನುಕಂಪದ ಅಲೆ. ಅಕ್ಕನಿಗೆ ಸುಸ್ತಾಗತೊಡಗಿತು ಆದರೂ ಅವಳು ಎಲ್ಲೂ ಹಿಂದೆ ನಿಲ್ಲದೆ ಎಲ್ಲ ಸಂಭ್ರಮದಲ್ಲೂ ಯಾರು ಹೇಳಲಿ ಬಿಡಲಿ ಪಾಲ್ಗೊಂಡಳು. ಆ ಕ್ಷಣದಲ್ಲಿ ಆಕೆ ವಧುವಿನ ಅಕ್ಕನಂತಲ್ಲ ತಂಗಿಯಂತೆ ಆಗಿಬಿಟ್ಟಿದ್ದಳು. ಮದುವೆ ಮುಗಿಯಿತು ಮದುಮಕ್ಕಳು ಮನೆಗೆ ಬಂದರು. ಬೇರೆ ಮನೆ ಮಾಡುವ ತನಕ ಇಲ್ಲೆ ಇರಲಿ ಅಪ್ಪ ಅಮ್ಮ ಒತ್ತಾಯಿಸಿದರು. ಅಳಿಯ ಒಪ್ಪಿದ. ಈಗ ತಂಗಿಯ ಕೋಣೆ ಬೇರೆಯಾಗಿದೆ ಮೊದಲಿನಂತೆ ಸಲೀಸಾಗಿ ಅವಳ ಕೋಣೆಗೆ ನುಗ್ಗುವಂತಿಲ್ಲ. ಅಮ್ಮ ದಿನಾ ರಾತ್ರಿ ಗೋಧಿ ಕಡಬು ಮಾಡಿ ತುಪ್ಪದೊಂದಿಗೆ ಅಳಿಯ ಮಗಳಿಗೆ ತಿನ್ನಿಸಲು  ತಯಾರಿ ಮಾಡುವಳು. ಅಳಿಯನು ಮಗಳು ಅಪ್ಪ ಅಮ್ಮನೊಂದಿಗೆ ಕೂತು ಹರಟೆ ಹೊಡೆಯುವರು. ನಿಲರ್ಿಪ್ತನಾಗಿರುತಿದ್ದ ಅಪ್ಪ ಸಹ ಇತ್ತೀಚೆಗೆ ಸಂಭ್ರಮದಿಂದ ತುಂಬಿರುವುದು ಗೋಚರಿಸುವುದು. ಅಳಿಯನ ಸ್ನಾನಕ್ಕೆ ಎಣ್ಣೆ ನೀರು ತಯಾರಾಗುವುದು, ಬೆನ್ನು ತಿಕ್ಕು ಹೋಗೆ ಎಂದು ಅಮ್ಮ ಮಗಳಿಗೆ ಹೇಳುವಳು ತಂಗಿ ನಾಚಿಕೊಂಡು ಹೋಗುವಳು. ಇದನ್ನೆಲ್ಲ ಅಕ್ಕ ಗಮನಿಸುವಳು ಮತ್ತೆ ಆರೋಗ್ಯಕರವಾದ ಮನಸಿರುವ ಅವಳಿಗೆ ಇದೆಲ್ಲ ತುಂಬಾ ಸಹಜವಾಗಿ ಕಾಣುವುದು. ಆದರೆ ಅಪ್ಪ ಅಮ್ಮ ಅವಳ ಉಪಸ್ಥಿತಿಯಲ್ಲಿ ವತರ್ಿಸುವ ರೀತಿಯೇ ಬೇರೆ. ತಂಗಿಯು ಸಹ ಅಪ್ಪ ಅಮ್ಮ ಗಂಡ ಮತ್ತು ತಮ್ಮ ಇರುವಾಗ ಅವಳು ಇರುವ ರೀತಿಗೂ ಅಕ್ಕನ ನೆರಳು ಬಿದ್ದೊಡನೆ ಕಾಣಿಸಿಕೊಳ್ಳುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ತಂಗಿಯ ಗಂಡ ಸಹ ಅಪ್ಪ ಅಮ್ಮ ತಮ್ಮನೊಡನೆ ಚೆಂದ ಬೆರೆಯುವವ ತನ್ನನ್ನು ಕಂಡೊಡನೆ ಮೌನಿಯಾಗುವುದು, ಯಾವುದೋ ಪಾಪ ಪ್ರಜ್ಞೆ ಹೊತ್ತವನಂತೆ ಕಾಣಿಸಿಕೊಳ್ಳುವುದು. ತುಸು ಹೆದರಿದವನಂತೆ ವತರ್ಿಸುವುದು ಇದೆಲ್ಲ ಅಕ್ಕನಿಗೆ ರಗಳೆ ಎನಿಸುವುದು.

ಅಪ್ಪ ಅಮ್ಮನಿಗೆ ಅಳಿಯ ಮಗಳು ಕೆಲವಾರು ವರ್ಷವಾದರೂ ತಮ್ಮೊಡನೆ ಇರಲಿ ಎಂಬ ಪ್ರಬಲವಾದ ಆಶೆ ಹುಟ್ಟಿದೆ. ತಂಗಿಗೂ ಇದು ಇಷ್ಟವೇ ಆದರೆ ಅವಳ ಗಂಡ ಒಪ್ಪುತ್ತಿಲ್ಲ ಅದಕ್ಕೆ ಕಾರಣ ತಾನು ಎಂದು ಅಕ್ಕನಿಗೆ ಮನವರಿಕೆಯಾಗಿದೆ. ತನಗೇನಾದರೂ ಅನಿಸಬಹುದೆಂದು ಅಂವ ಒಪ್ಪುತಿಲ್ಲ. ಅವನು ಈ ಮನೆಗೆ ಹೊಂದಿಕೊಂಡಿದ್ದಾನೆ. ಅಪ್ಪ ಅಮ್ಮನಿಗೆ ಇಷ್ಟವಾಗಿದ್ದಾನೆ. ಅವರಂತೂ ಮೊಮ್ಮಗುವಂದು ಹುಟ್ಟಲಿ ಎಂಬ ಆಶೆಯಲಿದ್ದಾರೆ ಅದನ್ನು ಸೂಕ್ಷ್ಮವಾಗಿ ಅಳಿಯ ಮಗಳಿಗೆ ತಿಳಿಸುತಿದ್ದಾರೆ. ಹೀಗಿರುವಾಗ ಅವರೆಲ್ಲರ ಬದುಕಿನ ದಾರಿಗಳ ಜೊತೆ ತನ್ನದು ಸಧ್ಯಕ್ಕೆ ಹೊಂದಿಕೊಳ್ಳುತಿಲ್ಲ ಮತ್ತು ಈ ದಾರಿಯನ್ನು ಆಯ್ದುಕೊಂಡಿದ್ದು ಸ್ವತಃ ನಾನೆ ಆದ್ದರಿಂದ ಈ ಬಗ್ಗೆ ನನಗೆ ಯಾವ ಮುಜುಗರ ಮತ್ತು ಅಸಹನೆ ಎರಡು ಬೇಕಾದ್ದಿಲ್ಲ ಎಂದು ಖಾತ್ರಿ ಪಡಿಸಿಕೊಂಡ ಅಕ್ಕ ಸ್ವಲ್ಪ ದೂರದ ಊರಿನ ಕಾಲೇಜಿನಲ್ಲಿ ಕೆಲಸ ಹಿಡಿಯುತ್ತಾಳೆ. ಅವಳ ಪಿಹೆಚ್ಡಿ ಗೈಡ್ ಸಹ ಆ ಊರಿನಲ್ಲಿರುವುದರಿಂದ ತನಗೆ ಇದರಿಂದ ಬಹಳ ಉಪಕಾರವಾಗುತ್ತದೆ ಎಂದು ಅಪ್ಪ ಅಮ್ಮನಿಗೆ ತಿಳಿಸಿ ಹೇಳುತ್ತಾಳೆ. ಅವಳು ಹೊರಡುವ ತಯಾರಿಯಲ್ಲಿರುವಾಗ ಅಪ್ಪ ಅಳಿಯನ ಬಳಿ ಹೇಳುವದು ಕೇಳುತ್ತದೆ ನೋಡಿ ಇವಳು ಹೋಗಿಬಿಟ್ಟಳು ಅಂದ್ರೆ ನಾವು ಇಬ್ಬರೆ ಆಗಿಬಿಡುತ್ತೇವೇನೋ?. ಅಳಿಯ ಹೇಳುತ್ತಾ ಇದ್ದಾನೆ `ಮಾವಯ್ಯ ಹಾಗ್ಯಾಕೆ ಅಂದುಕೊಳ್ತೀರಿ ನಾವಿಬ್ಬರು ಇಲ್ಲವೇನು ನಿಮ್ಮ ಜೊತೆಗೆ.  ಈ ಮಾತಿನಿಂದ ಅಪ್ಪ ಅಮ್ಮ ತಂಗಿ ಎಲ್ಲರ ಮುಖವು ಅರಳಿರುವುದು ಕಂಡು ಅಕ್ಕ ನೆಮ್ಮದಿಯಿಂದ ಹೊರಡುವಳು ಮತ್ತು ಹೊರಡುವ ಕ್ಷಣದಲ್ಲಿ ಅಂದುಕೊಳ್ಳುವಳು ನನ್ನ ದಾರಿ ಬೇರೆಯಾಗಿದೆ. ಹಾಗೆಂದು ನೀವು ಆಯ್ದುಕೊಂಡ ದಾರಿಯ ಬಗ್ಗೆ ಬಹಳ ಪ್ರೀತಿಯಿದೆ. ನನ್ನ ಗುರಿ ತಲುಪಿ ನಂತರ ನಿಮ್ಮ ದಾರಿಯಲ್ಲಿ ಬರಲು ನಾನು ಪ್ರಯತ್ನಿಸುವೆ. ನನಗೊಂದಿಷ್ಟು ಸಮಯಾವಕಾಶವಂತೂ ಬೇಕೆ ಬೇಕು.

1 ಟಿಪ್ಪಣಿ (+add yours?)

  1. shreedevi kalasad
    ಸೆಪ್ಟೆಂ 09, 2008 @ 15:54:51

    ಸರಳವಾಗಿ ನಿರೂಪಿಸಲ್ಪಟ್ಟರೂ ಸೂಕ್ಷ್ಮ ಒಳನೋಟದಿಂದ ಕೂಡಿದ ಬರಹ.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: