ಅಫ್ರೋದಿತೆಯ ಮುಂದೆ ಪ್ರೇಮಾಲಾಪ…

sappho1.gif

ಮರ ಪ್ರೇಮದ ಅಧಿದೇವತೆ ಅಫ್ರೋದಿತೆ, ವೈಭವ ಸಿಂಹಾಸನದ ಒಡೆಯ ಸ್ಯೂಸ್ ದೇವನ ಪುತ್ರಿ, ಮೋಹದ ಬಲೆಯ ನೇಯುವಾಕೆ, ನನ್ನ ಶೋಕತಪ್ತ ಹೃದಯವನ್ನು ಒಡೆಯದಿರು. ಬೇಡಿಕೊಳ್ಳುವೆನು ಓ ರಾಣಿ, ಬಾ ನನ್ನ ಬಳಿಗೆ. ದೂರ ನಿಂತರೆ ನನ್ನ ದನಿ ಕೇಳಿಸದು ನಿನಗೆ, ನಿನ್ನ ತಂದೆಯ ಹೊನ್ನ ಅರಮನೆಯ ತೊರೆದು ಬಾ ರಥವೇರಿ. ಅಂದದ ಗುಬ್ಬಿಗಳ ಹಿಂಡಿನ ರಥವನ್ನಿಳಿದು ಸ್ವರ್ಗ, ಅಂತರಿಕ್ಷಗಳ ದಾಟಿ, ಕಪ್ಪು ನೆಲಕ್ಕಿಳಿದಾಗ, ನಿನ್ನ ದಿವ್ಯ ಮಂದಸ್ಮಿತ ಶಾಂತ ಮುಖಮುದ್ರೆ ಕಂಡು ಮೋಹಪರವಶಳಾಗಿ ಈ ನನ್ನ ಹೃದಯ ನೋಡಬಯಸಿ ನಿನ್ನ ಕರೆದೆ. ಇಂಥ ದಿವ್ಯ ಚೆಲುವಿಗೆ ಮೋಹಿತರಾಗದವರುಂಟೆ? ಇದು ನಿನ್ನ ತಪ್ಪಲ್ಲ ಸಾಫೋ, ನೀನು ಈಗ ಹಾರಿ ದೂರವಾದರೂ ಮರಳಿ ಬರುವೆ. ನನ್ನ ಕಾಣಿಕೆಗಳ ಪಡೆದು ಮತ್ತೆ ನನ್ನನ್ನೇ ಪ್ರೀತಿಸುವೆ. ಮತ್ತೆ ಬೇಡುವೆ ಓ ರಾಣಿ, ಈ ಕ್ರೂರ ಸಂಕಷ್ಟಗಳಿಂದ ನನ್ನ ಬಿಡುಗಡೆ ಮಾಡಿ ನನ್ನ ಅಂತರಂಗದ ಮಹದಾಸೆಗಳ ಸಲಿಸಿ, ನನ್ನಲ್ಲಿ ಬೆರೆತು ಒಂದಾಗು.

* * *

ಳಿಗೆ ಬಾ ಸೈಪ್ರಸ್ಸಿನ ಪ್ರೇಮದ ಅಧಿದೇವತೆ!
ಹೊನ್ನ ಬಟ್ಟಲಲ್ಲಿ ಮಧುರ ಮಧುವನ್ನು
ಹರ್ಷದಿಂದ ನೀಡು ಬಾ. ತುಂಬು ಬಟ್ಟಲನು
ನಗುವ ತುಟಿಗಳು ಹೀರಿ ಚುಂಬಿಸಲಿ ಬಟ್ಟಲ ತುದಿ
ಬಾ ಪ್ರೇಮದೇವತೆ ಬಾ.

(ಕೆ ಎನ್ ವಿಜಯಲಕ್ಷ್ಮಿ ಅವರ “ಸ್ಯಾಫೋ ಕಾವ್ಯ” ಕೃತಿಯಿಂದ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: