ಇಲ್ಲಿ ನಿಂತರೆ ಪಕ್ಷಕ್ಕೆ ನಿಷ್ಟ, ಇಲ್ಲಿ ನಿಂತರೆ ಭಿನ್ನಮತೀಯ

ನಾವು ಸ್ಕೂಲಿಗೆ ಹೋಗ್ತಿದ್ದಾಗ ಏಕಪಾತ್ರಾಭಿನಯ ಬಹಳ popular ಆಗಿತ್ತು. ಈಗ ಬೆಂಗಳೂರಿನ ಸ್ಕೂಲುಗಳಲ್ಲಿ ಮಕ್ಕಳಿಗೆ ಹೀಗೆಂದರೇನಂತಲೂ ನೆಟ್ಟಗೆ ಗೊತ್ತಿದ್ದ ಹಾಗಿಲ್ಲ.   ಧರಣಿ ಮಂಡಲ ಮಧ್ಯದ ಕರ್ನಾಟ ದೇಶದೊಳ್ ಇಂದು ರಾರಾಜಿಸುತ್ತಿರುವ ರಾಜಕಾರಣಿಗಳ ಪ್ರತಿಭೆ ನೋಡಿ ನನಗೆ ನಮ್ಮ ಸ್ಕೂಲಿನಲ್ಲಿ ನಾವು ಆಡುತ್ತಿದ್ದ ಏಕಪಾತ್ರಾಭಿನಯ ನೆನಪಾಯಿತು. “ಇಲ್ಲಿ ನಿಂತರೆ ಪಕ್ಷಕ್ಕೆ ನಿಷ್ಟ, ಇಲ್ಲಿ ನಿಂತರೆ ಭಿನ್ನಮತೀಯ” ಅಂತ ಸಲೀಸಾಗಿ ನಟನೆಯ ಶೈಲಿ, ದನಿಯನ್ನು  ಬದಲಾಯಿಸುವ ವರ್ತೂರ್ ಪ್ರಕಾಶರು, ರೇಣುಕಾಚಾರ್ಯರು…   “ಇಲ್ಲಿ ನಿಂತರೆ ಜಾತ್ಯಾತೀತ, ಇಲ್ಲಿ ನಿಂತರೆ ‘ಜಾತ್ಯಾತೀತ ಅಂದರೆ ಏನ್ರೀ’ ಅಂತ ಕೇಳುವವನು” ಅಂತ ಉವಾಚಿಸುವ ನಮ್ಮ ಅದ್ವಿತೀಯ ಕುಮಾರ ಪ್ರತಿಭೆ… ಇವರಲ್ಲಿ ಯಾರಾದ್ರೂ ನಮ್ಮ   ಸ್ಕೂಲಿನಲ್ಲಿದ್ದಿದ್ದರೆ ಎಂಥಾ ದೊಡ್ಡ ಸ್ಟಾರುಗಳೇ ಆಗ್ತಿದ್ರಲ್ಲ ಅಂತ!

ಒಟ್ಟಾರೆ, ಕೋಟಿಗಟ್ಟಲೆ ದುಡ್ಡು ಹರಿಸಿ ನಡೆದಿರುವ, ನಡೆಯುತ್ತಿರುವ ಶಾಸಕರ ಕೊಡುಕೊಳ್ಳಾಟದ ಘೋರತೆಯನ್ನು ಪಕ್ಕಕ್ಕಿಟ್ಟು ಬರೀ ಟಿವಿಯಲ್ಲಿ ಲೈವ್ ಕವರೇಜ್ ತಮಾಶೆ ನೋಡಿ ನಗಲಿಕ್ಕೆ ಶಕ್ತಿ ಇದ್ದವರು ಸ್ಕೂಲಿನ ತೆನಾಲಿರಾಮ- ಕೃಷ್ಣದೇವರಾಯ ಏಕಪಾತ್ರಾಭಿನಯ ನೋಡಿ ನಕ್ಕ ಹಾಗಿ ನಕ್ಕುಬಿಡಬಹುದು. ಯಾರೋ ಅಂಗಿ ಹರ್ಕೊಂಡಿದ್ದು, ಇನ್ಯಾರೋ ಬೆಂಚ್ ಮೇಲೆ ಹತ್ತಿದ್ದು ಇತ್ಯಾದಿಗಳನ್ನು ಮತ್ತೆ ಮತ್ತೆ ಟಿವಿ ಚಾನೆಲ್ಲುಗಳು ರಂಜನೀಯ ಕಾಮೆಂಟ್ರಿಗಳ ಜೊತೆಗೆ ತೋರಿಸುತ್ತಲೇ ಇವೆ. ಅದನ್ನು ಬೋಂಡಾ ತಿನ್ನುತ್ತಾ ನೋಡುವ ನಮ್ಮಂತವರಿಗೆ ಈ ರೀತಿಯ so-called “ಅಸಭ್ಯ” ವರ್ತನೆಯೇ ಮಹಾಪರಾಧ ಮತ್ತು ತಮಾಶೆ ಎರಡೂ ಆಗಿ ಏಕಕಾಲಕ್ಕೆ ಕಂಡು, ಇದಕ್ಕಿಂತ ದೊಡ್ಡ ರಾಜಕೀಯ  ಕ್ರೈಂಗಳೆಲ್ಲಾ ಮರೆತೇ ಹೋಗತ್ತಾ ಅಂತಲೂ ಅನ್ನಿಸುತ್ತದೆ

ಪೂರ್ಣ ಓದಿಗೆ- ಬಾಗೇಶ್ರೀ

ನಿಮ್ಮ ಟಿಪ್ಪಣಿ ಬರೆಯಿರಿ