ಜೋಗಿ ಬರೆದ ಕವಿತೆ: ಚಂದ್ರ

ನೋಡ
ನೋಡುತ್ತಿದ್ದಂತೆ ಇರುಳಾಗಿದೆ.
ಚಂದ್ರ ಸಪ್ಪೆಮೋರೆ
ಹಾಕಿಕೊಂಡು ಕಾಣಿಸಿಕೊಂಡ.
ಅವನ ಸುಳಿವೇ ಇಲ್ಲ.
ಸೌಗಂಧಿಕಾದ ಪರಿಮಳ
ತಣ್ಣನೆಯ ಗಾಳಿ, ಪಟಪಟಿಸುವ ರೆಕ್ಕೆ,
ಮಿಟುಕಿಸದೇ ದಿಟ್ಟಿಸುವ ಕಣ್ಣು
ಅವನು ಬರದ ಹಾದಿ.
ಬೆಳದಿಂಗಳೂ ಕಂಬನಿಯನ್ನು
ಒಣಗಿಸುತ್ತದೆ ಎಂದು
ದೇವರಾಣೆಗೂ ಗೊತ್ತಿರಲಿಲ್ಲ

6 Comments (+add yours?)

  1. ಆನಂದ ಕೋಡಿಂಬಳ
    Feb 08, 2010 @ 22:24:06

    ಕವನ ಹೃದ್ಯವಾಗಿದೆ. ಆಶಯವನ್ನು ಬಹಳ ಸಹಜವಾಗಿ ಹಿಡಿದಿಡುವ ಮೂಲಕ ಮತ್ತೆ ಮತ್ತೆ ಓದಬೇಕೆನಿಸುವಂತಿದೆ.

    Reply

  2. Ravindra B.C
    Feb 08, 2010 @ 22:18:16

    kavithe hagu chitra yadva tadva ishtavaitu.

    Reply

  3. Gargas Manjappa
    Feb 08, 2010 @ 13:20:12

    kambani amavasyeyalli aagiruthiddhare?

    Reply

  4. Santhosh Ananthapura
    Feb 08, 2010 @ 12:01:15

    ” ಬೆಳದಿಂಗಳೂ ಕಂಬನಿಯನ್ನು
    ಒಣಗಿಸುತ್ತದೆ ಎಂದು
    ದೇವರಾಣೆಗೂ ಗೊತ್ತಿರಲಿಲ್ಲ ”
    Beautiful…. :)

    Reply

  5. ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ )
    Feb 08, 2010 @ 11:10:28

    ವಾಹ್!!
    ಚೆನ್ನಾಗಿದೆ.ಪ್ರೇಮಿಗಳಿಗೆ ಕೆಲವೊಮ್ಮೆ
    ಬಿಸಿಲೂ ಬೆಳದಿಂಗಳಾದಂತೆ
    “ಬೆಳದಿಂಗಳೂ ಕಂಬನಿಯನ್ನು ಒಣಗಿಸುತ್ತದೆ”
    ಸುಂದರ…

    Reply

  6. sughosh s. nigale
    Feb 08, 2010 @ 11:08:57

    ಬ್ಯೂಟಿಫುಲ್ ಜೋಗಿ ಸರ್….

    Reply

Leave a Reply

Your email address will not be published. Required fields are marked *

*

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>