ಒಂದು ಸುಂದರ ಕುವೆಂಪು ಪುಸ್ತಕ

Posted on November 11, 2009. Filed under: 1 |

ಕುವೆಂಪು   ಸಂ: ಕೆ.ಸಿ.ಶಿವಾರೆಡ್ಡಿ

ಪ್ರ: ವಿಹಾ ಪ್ರಕಾಶನ, “ತಪೋನಂದನ” ಕುಪ್ಪಳ್ಳಿ, ಹಿರೇಕೂಡಿಗೆ ಪೋಸ್ಟ್ 577126, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಬೆಲೆ: 50 ರೂ.

2185145168_7862faaa51_m

*

ಕುವೆಂಪು ಮನೆ, ಆ ಪರಿಸರದ ಫೋಟೋಗಳು, ಅಪರೂಪದ ಕುವೆಂಪು ಫೋಟೋಗಳು ಕಾಗೂ ಕವಿಮನೆ, ಕವಿಶೈಲಗಳ ವರ್ಣನೆಯೊಂದಿಗೆ ಈ “ಕರತಲ” ಪುಸ್ತಕ ಶುರುವಾಗುತ್ತದೆ. ಕುವೆಂಪು ಕುಳಿತು ಪದ್ಯ ಬರೆದ ಸ್ಥಳಗಳು ಕುವೆಂಪು ಹುಟ್ಟಿದ ಹಿರೇಕೂಡಿಗೆ, ನವಿಲು ಕಲ್ಲು, ನವಿಲು ಕಲ್ಲಿನ ಸೂರ್ಯೋದಯದ ಫೋಟೋದ ಪಕ್ಕದಲ್ಲೇ ಕುವೆಂಪು ಬರೆದ “ನವಿಲು ಕಲ್ಲಿನಲ್ಲಿ ಸೂರ್ಯೋದಯ” ಪದ್ಯ, ಸಿಬ್ಬಲು ಗುಡ್ಡ ಅದೆಲ್ಲದರ ನಡುವೆ ಕುವೆಂಪು ಹಾಗೂ ಅವರ ಪರಿಸರ ಕುರಿತ ಪರಿಚಯಾತ್ಮಕ ಬರಹಗಳು ಈ ಪುಸ್ತಕದ ಮೊದಲ ೩೨ ವರ್ಣಪುಟಗಳಲ್ಲಿವೆ.

ಅಲ್ಲಿಂದಾಚೆಗೆ, ಕಿ.ರಂ.ನಾಗರಾಜರ ಸಲಹೆಗಳನ್ನು ಪಡೆದು, ಅದರ ಜೊತೆಗೆ ತಾವೇ ಸಂಪಾದಿಸಿರುವ ಸಾವಿರಾರು ಪುಟಗಳ ಕುವೆಂಪು ಸಾಹಿತ್ಯದಿಂದ ಶಿವಾರೆಡ್ಡಿ ಹೆಕ್ಕಿತೆಗೆದ ಸಾಲುಗಳು, ಪದ್ಯಗಳು, ವಿಮರ್ಶೆ, ವಿಚಾರಗಳ ಸುಮಾರು ೨೦೦ಕ್ಕೂ ಹೆಚ್ಚು ಕುವೆಂಪು ನುಡಿಗಳು ಇಲ್ಲಿವೆ. ಪುಸ್ತಕದ ಕೊನೆಯ ಭಾಗದಲ್ಲಿ ವಿಶ್ವಮಾನವ ಸಂದೇಶ, ಮಂತ್ರ ಮಾಂಗಲ್ಯ, ಕುವೆಂಪು ವಂಶವೃಕ್ಷ, ಕುವೆಂಪು ಜೀವನದ ಮುಖ್ಯ ವರ್ಷಗಳು, ಕುವೆಂಪು ಅವರ ಎಲ್ಲ ಕೃತಿಗಳ ವಿವರಗಳಿವೆ. ಕೊನೆಗೆ ನಾಡಗೀತೆ. ಎಲ್ಲ ಕನ್ನಡಿಗರ ಕೈ ಹಿಡಿಯಲೇ ಬೇಕಾದ ಈ ೧೧೨ ಪುಟದ ಪುಸ್ತಕದ ಬೆಲೆ ರೂ.೫೦ ಮಾತ್ರ.

ನೀವು ೬೦ ರೂ. ಎಂ.ಒ ಅಥವಾ ಡಿ.ಡಿಯನ್ನು ವಿಹಾ ಪುಸ್ತಕ, ತಪೋನಂದನ, ಕುಪ್ಪಳ್ಳಿ, ತೀರ್ಥಹಳ್ಳಿ ತಾಲೂಕು, ಹಿರೇಕೂಡಿಗೆ ಪೋಸ್ಟ್-೫೭೭೧೨೬, ಶಿವಮೊಗ್ಗ ಇಲ್ಲಿಗೆ ಕಳಿಸಿದರೆ ಸಾಕು, ಕೊರಿಯರ್ ಮೂಲಕ ನಿಮ್ಮ ಮನೆಗೆ ಈ ಪುಸ್ತಕ ತಲುಪಲಿದೆ

Make a Comment

Make a Comment: ( None so far )

blockquote and a tags work here.

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    November 2009
    M T W T F S S
    « Oct   Dec »
     1
    2345678
    9101112131415
    16171819202122
    23242526272829
    30  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...