Archive for July 29th, 2009
ಜೋಗಿ ಬರೆದ ಮತ್ತೊಂದು ಕವಿತೆ: ಆಷಾಢದ ಗಾಳಿಗೆ…
ಹೊರಗೆ ಬೀಸುತ್ತಿರುವುದು
ಆಷಾಢದ ಗಾಳಿಯೇ?
ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.
ಸಿಂಹಾಸನ ಉರುಳಿದಾಗ
ಶ್ರಾವಣ ಎಂದೂ
ದೇವಾಲಯ ನಡುಗಿದಾಗ
ಮಾರ್ಗಶಿರ ಎಂದೂ
ಕವಿತೆಯನ್ನೂ ಎಂದೂ ಓದದ
ಶ್ರೀಮಂತನಿಗೆ ಹೊಟ್ಟೆನೋವು ಬಂದಾಗ
ಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.
ಮೊನ್ನೆ ಮಳೆಗಾಲದಲ್ಲಿ
ನಮ್ಮೂರ ಗುಡಿಯ
ಗರುಡಗಂಭಕ್ಕೆ ಸಿಡಿಲು ಬಡಿಯಿತು.
ಒಣ ಮರದ ಕಂಬ ಅಲ್ಲಾಡಲಿಲ್ಲ.
ದೇವರುಗಳ ರಾಜ್ಯದಲ್ಲಿ
ತಿರುಕರೇ ಎಲ್ಲಾ.
ಇದ್ದವರೂ ಬೇಡುವರು, ಇಲ್ಲದವರೂ.
ಇದ್ದವರಿಗೆ ದೇವರು ನೀಡುವರು.
ಇಲ್ಲದವರು ನಾಳೆಗಾಗಿ ಕಾಯುವರು.
ಭತ್ತವೊಂದು ಬಿತ್ತವಾಗಿ
ಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿ
ಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವ
ಪವಾಡಕ್ಕೆ ನಾವು ಕಾಯುತ್ತಾ ಕೂತೆವು.
ದೇವರ ಮುಂದಿಟ್ಟ ನೈವೇದ್ಯಕ್ಕೆ
ಒಂದು ದಳ ಶ್ರೀತುಲಸಿ
ಬಿಂದು ಗಂಗೋದಕ ಸಾಕು
ಪರಮಾತ್ಮನ ಮುಟ್ಟುವುದಕ್ಕೆ.
ಹೊರಗಡೆ ಬೀಸುತ್ತಿರುವುದು
ಆಷಾಢದ ಗಾಳಿಯೇ.
ಎಂದೂ ಕವಿತೆಯನ್ನೇ ಓದದ
ಶ್ರೀಮಂತರು ಸುಖವಾಗಿದ್ದಾರೆ.
ಕವಿತೆಯೆಂದರೆ ಏನೆಂದು ಅರಿಯದ
ಬಡವನೂ [...]
ಇಂಗ್ಲಿಷಿನಲ್ಲಿ mass frenzy ಅಂತಾರಲ್ಲ…
ಕರಿ, ಬಿಳಿ
-ಎಂ ಎಸ್ ಪ್ರಭಾಕರ್ (ಕಾಮರೂಪಿ)
ಮೈಕೆಲ್ ಜಾಕ್ಸನ್ ತೀರಿಕೊಂಡ ಅಂತ ಬೆಳಿಗ್ಗೆ ರೇಡಿಯೋಲಿ ಸುದ್ದಿ ಕೇಳಿದಾಗ ಒಂದು ರೀತಿ ನನಗಿಂತ ಸಣ್ಣವರು ತೀರಿಕೊಂಡಾಗ ಸಹಜವಾಗೇ ಆಗುವ, ಈ ಸಣ್ಣವಯಸ್ಸಿನಲ್ಲಿ ಹೋಗಬಾರದಾಗಿತ್ತು ಅನ್ನಿಸಿಕೊಳ್ಳುವ, ಸಂತಾಪ ಆಯಿತು.
ಆದರೆ ಇಷ್ಟು ಹೇಳಿ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ತೀರಿಕೊಂಡ ವ್ಯಕ್ತಿ ಒಬ್ಬ ವಿಶ್ವಪ್ರಸಿದ್ಧ ವ್ಯಕ್ತಿ. ಲಕ್ಷಾಂತರ, ಏಕೆ ಕೋಟ್ಯಾಂತರ ಮಂದಿ, ಅದರಲ್ಲೂ ಯುವಕ ಯುವತಿಯರಸಮಾಜ, ಅವನನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿತ್ತು. ಅವನ ಹಾಡುಗಾರಿಕೆ, ಅವನ ಜೀವನ ಶೈಲಿ, ಇವೆಲ್ಲವೂ ಅವುಗಳ ವೈಶಿಷ್ಟ್ಯತೆಯಿಂದ ಪೃಥಿವಿಯ ಎಲ್ಲ [...]
ಯಂತ್ರಗಳನ್ನು ಕಳಚೋಣ ಬನ್ನಿ
ಒಂಟಿದನಿ ಪ್ರಕಾಶನ ಪ್ರಕಟಿಸಿರುವ ಪ್ರಸನ್ನ ಅವರ ‘ಯಂತ್ರಗಳನ್ನು ಕಳಚೋಣ ಬನ್ನಿ’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಭಾರತ ಯಾತ್ರಾ ಕೇಂದ್ರ ಹಾಗೂ ಮೇಫ್ಲವರ್ ಮೀಡಿಯಾ ಹೌಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂ ಎಸ್ ಸತ್ಯು, ಸುರೇಂದ್ರ ಮೋಹನ್, ಕೆ ಮರುಳಸಿದ್ಧಪ್ಪ ಭಾಗವಹಿಸಿದ್ದರು. ಸಮಾರಂಭದಲ್ಲಿ ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಅವರನ್ನು ಗೌರವಿಸಲಾಯಿತು.
ಚಿತ್ರಗಳು: ಮನೋಜ್ ಕುಮಾರ್


