Archive for July 22nd, 2009
ಸತೀಶ್ ಚಪ್ಪರಿಕೆ ಕಂಡ ಥೇಮ್ಸ್ ತವಕ
‘ಸಂಡೆ ಇಂಡಿಯನ್’ ಸಮೂಹದ ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ‘ಥೇಮ್ಸ್ ತಟದ ತವಕ ತಲ್ಲಣ’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಪ್ರೊ ಕೆ ಎಸ್ ನಿಸಾರ್ ಅಹ್ಮದ್, ಕುಂ. ವೀರಭದ್ರಪ್ಪ, ಪಿ ಶೇಷಾದ್ರಿ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿದ್ದರು.
ಅಂಕಿತ ಪ್ರಕಾಶನ ಈ ಪುಸ್ತಕವನ್ನು ಬಿಡುಗಡೆ ಮಾಡಿದೆ. ಡಿ ಸಿ ನಾಗೇಶ್ ಕಂಡಂತೆ ಪುಸ್ತಕ ಬಿಡುಗಡೆಯ ನೋಟ ಇಲ್ಲಿದೆ-
ಅಹಾ ನಂGay ಮದುವೆಯಂತೆ!
-ರವಿ ಹೆಗಡೆ
ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ
ಭಾಗ – 2
ಚಿರಂಜೀವಿ ವೆಡ್ಸ್ ಚಿರಂಜೀವಿ
ಮದುವೆ ಹಾGay ಸುಮ್ಮನೆ!
ನಿಮಗೆ ಸಲಿಂಗ ವಿವಾಹ ಗೊತ್ತಿರಬಹುದು. ಆದರೆ, ‘ಸಿವಿಲ್ ಯೂನಿಯನ್’ ಅಂದರೆ ಗೊತ್ತೇ? ಗಂಡು-ಗಂಡನ್ನು, ಹೆಣ್ಣು-ಹೆಣ್ಣನ್ನು ಮದುವೆಯಾದಾಗ ಅಮೆರಿಕ ಮತ್ತಿತರ ಕೆಲ ದೇಶಗಳಲ್ಲಿ ಸಿಗುವ ಹೊಸ ವೈವಾಹಿಕ ಮಾನ್ಯತೆ ಇದು. ಅಂದಹಾಗೆ, ಅಮೆರಿಕದಲ್ಲಿ ಮೊನ್ನೆ ಮೊನ್ನೆ ಚುನಾವಣೆ [...]
Read Full Post | Make a Comment ( 2 so far )






