Archive for July 20th, 2009
ಎ ಆರ್ ಮಣಿಕಾಂತ್ ಬರೆಯುತ್ತಾರೆ: ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ..
ಚಿತ್ರ: ಬಯಸದೇ ಬಂದ ಭಾಗ್ಯ.
ಗೀತೆರಚನೆ: ಆರ್.ಎನ್. ಜಯಗೋಪಾಲ್.
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ.
ಸಂಗೀತ: ರಾಜನ್-ನಾಗೇಂದ್ರ
ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ
ಮನವು ಅರಳಿ ಹೊಸತನ ತರುತಿದೆ
ನನ್ನಲ್ಲಿ ಹೋಯ್ ನಿನ್ನಲ್ಲಿ ||ಪ||
ಮುಗಿಲಿನಾ ಆಟಕೆ ಮಿಂಚಿನಾ ಓಟಕೆ
ಗಗನ ಹೆದರಿ ನಡುಗಿದೆ ಗುಡುಗಿದೆ
ನನ್ನಂತೆ ಹೋಯ್ ನಿನ್ನಂತೆ ||ಅ.ಪ||
ಗಾಳಿಯೂ ಬೀಸಿದೆ ಕಿವಿಯಲೀ ಹಾಡಿದೆ
ಈ ಹೆಣ್ಣು ಚೆನ್ನ ಗುಣದಲ್ಲಿ ಚಿನ್ನ
ಬಿಡಬೇಡವೆಂದಿದೆ
ಮಾತಿಗೆ ಸೋಲದೆ ಆತುರ ತೋರದೆ
ನಿನ್ನಿಂದ ಇಂದು ದೂರಾಗು ಎಂದು
ಬಿರುಗಾಳಿ ನೂಕಿದೆ ||1||
ನೋಟದಾ ಮಿಂಚಿಗೆ ಮಾತಿನಾ ಗುಡುಗಿಗೆ
ನಾನಂದು ಹೆದರಿ ಮೈಯೆಲ್ಲ ಬೆವರಿ
ಊರಾಚೆ ಓಡಿದೆ
ಹೆಣ್ಣಿಗೆ ಹೆದರುವಾ ಗಂಡಿನಾ ಶೌರ್ಯವಾ
ನಾನಂದು [...]
ನಿಸರ್ಗ ಮಾಡಿದ ಎಡವಟ್ಟು!
ಸಲಿಂಗಕಾಮ; ಔದಾಸೀನ್ಯವೇ ಲೇಸು
ನಮ್ಮ ದೇಶದ ಜನಸಂಖ್ಯೆ ನೂರುಕೋಟಿಗೂ ಹೆಚ್ಚು. ಇದರಲ್ಲಿ ಸಲಿಂಗಕಾಮಿಗಳ ಸಂಖ್ಯೆ ಇಪ್ಪತೈದು ಲಕ್ಷಗಳು ಎಂದು ಅಂದಾಜಿಸಲಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತುಕೊಂಡು ಲೈಂಗಿಕತೆಯನ್ನು ಹೊರತುಪಡಿಸಿ ಸಹಜ ಬದುಕನ್ನು ಬದುಕುತ್ತಿರುವ ಇವರನ್ನು ಬೆಟ್ಟು ಮಾಡಿ ತೋರಿಸುವುದು ಕಷ್ಟ. ನಮ್ಮ ನಡುವೆಯೇ ಇದ್ದು ನಮಗೆ ಅರಿವಿಲ್ಲದಂತೆ ಸಲಿಂಗಕಾಮಿಗಳಾಗಿ ಅವರು ಬದುಕುತ್ತಿರುತ್ತಾರೆ. ಒಬ್ಬ ವ್ಯಕ್ತಿಗೆ ತನಗೆ ವಿರುದ್ಧಲಿಂಗಿಯಲ್ಲಿ ಆಕರ್ಷಣೆಯಿಲ್ಲ ಬದಲಾಗಿ ಸ್ವಲಿಂಗಿಯಲ್ಲಿ ಅನುರಕ್ತನಾಗುತ್ತಿದ್ದೇನೆ ಎಂದು ಅನ್ನಿಸಿದರೆ ಅದರಲ್ಲಿ ಆಕೆಯ ಅಥವಾ ಆತನದೇನು ತಪ್ಪಿದೆ? ಅದು ನಿಸರ್ಗ ಮಾಡಿದ ಎಡವಟ್ಟು!
ಸಂಪೂರ್ಣ ಓದಿಗೆ: [...]
ಇದು ನೀವು ನೋಡಲೇಬೇಕು ಎನಿಸಿತು
ಇದು National Institute of Design (NID) -ಅಹಮದಾಬಾದ್, ವಿದ್ಯಾರ್ಥಿಗಳು ರೂಪಿಸಿದ ಅನಿಮೇಶನ್ ಸಿನೆಮಾ. ತಮ್ಮ ಅಭ್ಯಾಸದ ಅಂಗವಾಗಿ ವಿದ್ಯಾರ್ಥಿಗಳು ಇಂತಹ ನೂರಾರು ಚಿತ್ರಗಳನ್ನು ತಯಾರಿಸುತ್ತಾರೆ.
more about “ಇದು ನೀವು ನೋಡಲೇಬೇಕು ಎನಿಸಿತು “, posted with vodpod
Read Full Post | Make a Comment ( 3 so far )ನಾನು ಇನ್ನೂ ಮೀಡಿಯಾ ಸ್ಟೂಡೆಂಟ್
ಪೇಪರ್ ಬದಲಾಗಿವೆ, ಟಿ ವಿ ಬದಲಾಗಿವೆ, ರೇಡಿಯೋ ಬದಲಾಗಿವೆ. ಏನು ಬದಲಾಗಿವೆ, ಯಾಕೆ ಬದಲಾಗಿವೆ ಅನ್ನೋದೇ ಗೊತ್ತಾಗದೆ ತಬ್ಬಿಬ್ಬಾಗಿದ್ದೇವೆ.
ನಾನು ಬೆಂಗಳೂರು ಯೂನಿವರ್ಸಿಟೀನಲ್ಲಿ ಜರ್ನಲಿಸಂ ಓದುವಾಗ ಕನ್ನಡ ಪೇಪರ್ ನಲ್ಲಿ ಕೆಲಸ ಮಾಡೋದು ಹೇಗೆ ಅಂತ ಕಲಿಸಲಿಲ್ಲ. ಅಮೇರಿಕಾ, ಇಂಗ್ಲೆಂಡ್ ಪೇಪರ್ ಹೇಗಿರುತ್ತೆ ಅಂತ ಕಲಿಸಿಬಿಟ್ಟರು. ಇನ್ನು ಮೀಡಿಯಾ ಅಂದ್ರೇನು? ಅದನ್ನ ಹೇಗೆ ನೋಡ್ಬೇಕು? ಹೇಗೆ ವಿಮರ್ಶಿಸಬೇಕು ಅನ್ನೋದನ್ನಾದ್ರೂ ಅವ್ರು ಹೇಗೆ ಹೇಳಿಕೊಡ್ತಾರೆ? .
ಹಾಗಾಗೀನೆ ಈ ಕಾಲಂ- ಮೀಡಿಯಾ ಮಿರ್ಚಿ. ಇದು ನಿಮ್ಮ ಜೊತೆ ಸೇರಿ ನಾನೂ ಕಲಿಯುವ ಪ್ರಯತ್ನ. ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ. [...]






